Sadananda Gowda Profile picture
ಕನ್ನಡಿಗ, Former MP (Lok Sabha), Former CM of Karnataka, Former Union Minister of India. Instagram: https://t.co/s9EaIekdSH

Mar 29, 2020, 5 tweets

#IndiaFightsCorona
#MigrantLabours
ಕೊರೊನಾ ದಿಗ್ಬಂಧನದ ಹಿನ್ನೆಲೆಯಲ್ಲಿ ನಗರಗಳಲ್ಲಿರುವ ವಲಸೆ ಕಾರ್ಮಿಕರು ದೊಡ್ಡ ಸಂಖ್ಯೆಯಲ್ಲಿ ತಮ್ಮ ಊರುಗಳಿಗೆ ವಾಪಸಾಗುತ್ತಿರುವುದರಿಂದ ಉಂಟಾಗಿರುವ ಸಮಸ್ಯೆಗಳನ್ನು ನಿವಾರಿಸಲು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಇನ್ನಷ್ಟು ನಿರ್ದೇಶನಗಳನ್ನು ನೀಡಿದೆ.

@PMOIndia
@narendramodi @AmitShah @rajnathsingh
ಊರುಗಳಿಗೆ ಹಿಂತಿರುಗಿ ಬರುತ್ತಿರುವವರು ಕೊರೋನಾ ಸೋಂಕಿತರೇ ಎಂಬುದನ್ನು ತಪಾಸಣೆ ನಡೆಸಬೇಕು ಮತ್ತು ಕನಿಷ್ಠ ೧೪ ದಿನಗಳ ಕಾಲ ಅವರನ್ನೆಲ್ಲ ಪ್ರತ್ಯೇಕವಾಗಿಟ್ಟು ನಿಗಾವಹಿಸಬೇಕು.
#MigrationPandemic

ದಿಗ್ಬಂಧನದಿಂದ ತಾವಿದ್ದಲ್ಲೇ ತ್ರಿಶಂಕು ಸ್ಥಿತಿಗೊಳಗಾಗಿರುವ ಬಡವರಿಗೆ, ವಲಸೆ ಕಾರ್ಮಿಕರಿಗೆ ಊಟ-ವಸತಿ ಸೌಲಭ್ಯ ಕಲ್ಪಿಸಿಕೊಡುವುದು ಆಯಾ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಜವಾಬ್ದಾರಿ.
@BJP4India

ಬಾಡಿಗೆ ಮನೆಯಲ್ಲಿರುವ ವಲಸಿಗರಿಗೆ ಮಾಲಿಕರಿಂದ ಯಾವುದೇ ಕಿರುಕುಳವಾಗದಂತೆ ನೋಡಿಕೊಳ್ಳುಬೇಕು. ತೊಂದರೆ ಕೊಡುವುದು ಶಿಕ್ಷಾರ್ಹ ಅಪರಾಧ.
#MigrantsOnRoad
@BJP4Karnataka

ದಿಗ್ಬಂಧನದ ಅವಧಿಯಲ್ಲಿ ಕೈಗಾರಿಕೆ, ಅಂಗಡಿ-ಮುಂಗಟ್ಟುಗಳು, ವಾಣಿಜ್ಯ ಮಳಿಗೆಗಳು ಹಾಗೂ ಎಲ್ಲ ತರಹದ ಸಂಘ-ಸಂಸ್ಥೆಗಳ ಮಾಲಿಕರು ತಮ್ಮ ನೌಕರರಿಗೆ ಸಮಯಕ್ಕೆ ಸರಿಯಾಗಿ ಪೂರ್ಣ ವೇತನವನ್ನು ನಿಡುವುದು ಖಡ್ಡಾಯ ಎಂದು ಗೃಹ ಇಲಾಖೆಯ ಆದೇಶದಲ್ಲಿ ತಿಳಿಸಲಾಗಿದೆ.
@CMofKarnataka
@BSYBJP

Share this Scrolly Tale with your friends.

A Scrolly Tale is a new way to read Twitter threads with a more visually immersive experience.
Discover more beautiful Scrolly Tales like this.

Keep scrolling