Sadananda Gowda Profile picture
ಕನ್ನಡಿಗ, Former MP (Lok Sabha), Former CM of Karnataka, Former Union Minister of India. Instagram: https://t.co/s9EaIekdSH

Sep 20, 2020, 5 tweets

#JaiKisan
ದೇಶದ ಪರಮೋಚ್ಛ ಶಾಸನಸಭೆ ಸಂಸತ್ತು ಇಂದು ಅಂಗೀಕರಿಸಿರುವ ಕೃಷಿ ಮಸೂದೆಯು (The Farmers (Empowerment and Protection) Agreement on Price Assurance and Farm Services Bill, 2020) ರೈತರು ತಮ್ಮ ಉತ್ಪನ್ನಗಳಿಗೆ ಉತ್ತಮ ಬೆಲೆ ಪಡೆದುಕೋಳ್ಳಲು ಇನ್ನಷ್ಟು ಮುಕ್ತ ಅವಕಾಶಗಳನ್ನು ಕಲ್ಪಿಸುತ್ತದೆ. @DDChandanaNews

#JaiKisan
ಹೊಸ ಕೃಷಿ ಮಸೂದೆಯು ರೈತರನ್ನು ಹಲವು ನಿರ್ಭಂದಗಳಿಂದ ಮುಕ್ತವಾಗಿಸಲಿದೆ. ಹೆಚ್ಚಿನ ಬೆಲೆ ಸಿಗುವುದಾದರೆ ತಮ್ಮ ಹೊಲದಲ್ಲೇ ಬೆಳೆಯನ್ನು ಮಾರಾಟಮಾಡಬಹುದು. ನೇರವಾಗಿ ತಮ್ಮ ಉತ್ಪನ್ನಗಳನ್ನು ಸಂಸ್ಕರಣಾ ಘಟಕಕ್ಕೂ ಮಾರಾಟಮಾಡಬಹುದು. ಅಥವಾ ಸಾಗಣೆ ಮುಂತಾದ ನಿರ್ಬಂಧವಿಲ್ಲದೆ ಹೊರರಾಜ್ಯಗಳಲ್ಲಿಯೂ ಮಾರಾಟ ಮಾಡಬಹುದು @DDChandanaNews DDc

ನಾಗರಿಕ ತಿದ್ದುಪಡಿ ಕಾಯ್ದೆಯ ಬಗ್ಗೆ ದೇಶವಿರೋಧಿ ಶಕ್ತಿಗಳು ಯಾವರೀತಿ ತಪ್ಪು ಮಾಹಿತಿ ನೀಡಿ ಸಮುದಾಯವೊಂದನ್ನು ಎತ್ತಿಕಟ್ಟಲು ಪ್ರಯತ್ನಿಸಿದರೋ ಅದೇರೀತಿ ಈ ಮಸೂದೆಯ ಬಗ್ಗೆ ಕೆಲ ಪಟ್ಟಭದ್ರ ಹಿತಾಸಕ್ತಿರು ತಪ್ಪು ಮಾಹಿತಿ ನೀಡಿ ಮುಗ್ದರೈತರನ್ನು ಎತ್ತಿಕಟ್ಟಲು ಪ್ರಯತ್ನಿಸುತ್ತಿದ್ದಾರೆ.
@Vijaykarnataka @prajavani @kprabhanews

#JaiKisan
ಕೆಲವರು ಅಪಪ್ರಚಾರ ಮಾಡುತ್ತಿರುವಂತೆ ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆ ಸ್ಥಗಿತಗೊಳಿಸುತ್ತಿಲ್ಲ. ಅದು ಮುಂದುವರಿಯಲಿದೆ. ಮುಂಗಾರು ಮತ್ತು ಹಿಂಗಾರು ಬಿತ್ತನೆಗೆ ಮುಂಚೆಯೇ ಬೆಂಬಲ ಬೆಲೆ ಘೋಷಣೆಯಾಗುತ್ತದೆ. ಬೆಲೆ ಕುಸಿದಾಗ ಸರ್ಕಾರದ ಖರೀದಿ ವ್ಯವಸ್ಥೆಯೂ ಮುಂದುವರಿಯುತ್ತದೆ.
@DDChandanaNews

#JaiKisan
ಈಗಿನ ಎಪಿಎಂಸಿ ಮಾರುಕಟ್ಟೆಗಳು, ಇ-ನ್ಯಾಮ್‌ ಸೇರಿದಂತೆ ಈಗಿರುವ ಎಲ್ಲ ರೀತಿಯ ಮಾರುಕಟ್ಟೆ ವ್ಯವಸ್ಥೆಗಳು ಯಥಾಪ್ರಕಾರ ಮುಂದುವರಿಯಲಿವೆ. ಇನ್ನು ಖರೀದಿದಾರರು ರೈತರಿಂದ ಬೆಳೆ ಖರೀದಿ ಒಪ್ಪಂದ ಮಾಡಿಕೊಳ್ಳಲು ಅವಕಾಶವಿದೆಯೇ ಹೊರತು ಭೂಮಿಯನ್ನು ಖರೀದಿ ಮಾಡಲು, ಲೀಸ್‌ ಪಡೆಯಲು ಅಥವಾ ಒತ್ತೆ ಇಟ್ಟುಕೊಳ್ಳಲು ಅವಕಾಶವಿಲ್ಲ.
@PIB_India

Share this Scrolly Tale with your friends.

A Scrolly Tale is a new way to read Twitter threads with a more visually immersive experience.
Discover more beautiful Scrolly Tales like this.

Keep scrolling