ಸಿಂಧೂ ಸರಸ್ವತಿ ಸಂಸ್ಕೃತಿಯ ನಗರಗಳಲ್ಲಿ, ಮತ್ತು ಮಧ್ಯಪೂರ್ವ ದೇಶಗಳಲ್ಲಿ ನಡೆದ ಉತ್ಖನನ ಗಳಲ್ಲಿ ದೊರೆತ ಆಧಾರಗಳಿಂದ ೪೦೦೦ ವರ್ಷಗಳ ಹಿಂದೆಯೇ ಈ ಎರಡೂ ಭಾಗಗಳ ನಡುವೆ ವ್ಯಾಪಾರ ವ್ಯವಹಾರಗಳಿದ್ದದ್ದು ತಿಳಿದು ಬಂದಿದೆ.

#ಸರಣಿ #thread #trade in #AmaruShataka #ಪಯಣಿಗನನಲ್ಲೆ #ಅಮರುಕ #Amaruka
ಇದೇ ರೀತಿ, ಸುಮಾರು ೧೮೦೦ ವರ್ಷಗಳ ಹಿಂದಿನ ಒಂದು ಗ್ರೀಕ್ ನಾಟಕದದಲ್ಲೇ ಕನ್ನಡ ಅಥವಾ ಕನ್ನಡದಂತಹ ಭಾಷೆಯ ಕೆಲವು ಪದಗಳು ಕಂಡು ಬಂದಿರುವುದನ್ನು ನೋಡಿ, ವಿದ್ವಾಂಸರು ಭಾರತದ ಪಶ್ಚಿಮ ಕರಾವಳಿಗೂ, ಗ್ರೀಸ್, ರೋಮ್ ಮೊದಲಾದ ರಾಷ್ಟ್ರಗಳ ನಡುವೆಯೂ ವ್ಯಾಪಾರ ಸಂಬಂಧಗಳು ಇದ್ದಿರಬೇಕೆಂದು ಊಹಿಸಿದ್ದಾರೆ.

#ಸರಣಿ #thread #trade in #AmaruShataka
ಸಿಂಧೂ ನಾಗರಿಕತೆಯ ಸಮಯದಲ್ಲಿ ವ್ಯಾಪಾರದ ಕುರುಹುಗಳನ್ನು ಸಾಹಿತ್ಯದ ಆಕಾರಗಳಲ್ಲಿ ಹುಡುಕಲಾಗಲಾರದಾದರೂ, ಸುಮಾರು ೨೩೦೦ ವರ್ಷಗಳ ಹಿಂದಿನ ಕೌಟಿಲ್ಯನ ಅರ್ಥಶಾಸ್ತ್ರದಲ್ಲಿವ್ಯಾಪಾರಗಳು, ಸುಂಕ, ಊರಿನಲ್ಲಿ ಎಂತಹ ಸ್ಥಳದಲ್ಲಿ ಮಾರುಕಟ್ಟೆ ಇರಬೇಕು ಮೊದಲಾದ ವಿಷಯಗಳ ಬಗ್ಗೆ ಪ್ರಸ್ತಾಪವಿದೆ.
#Arthashastra #Trade #Kautilya #Chanayka #History
೨೦೦-೩೦೦ ವರ್ಷ ನಂತರದ, ಸಾಮಾನ್ಯ ಶಕ ಮೊದಲನೇ ಶತಮಾನದಲ್ಲಿ ಬರೆದದ್ದೆಂದು ಗಣಿಸುವ ಹಾಲ ಮಹಾರಾಜನ ಗಾಹಾ ಸತ್ತಸಯಿ ಯಲ್ಲಿ ( ಮಹಾರಾಷ್ಟ್ರೀ ಪ್ರಾಕೃತದಲ್ಲಿ ಬರೆದ ೭೦೦ ಪದ್ಯಗಳ ಸಂಕಲನ) , ವ್ಯಾಪಾರಕ್ಕೆಂದು ದೂರ ದೇಶಕ್ಕೆ ಹೋಗುವ ವ್ಯಾಪಾರಿಗಳು, ಮತ್ತು ಅವರ ಅಗಲಿಕೆಯಲ್ಲಿ ಕೊರಗುವ ಅವರ ಹೆಂಡಿರ ವಿಷಯವು ಹಲವಾರು ಪದ್ಯಗಳಲ್ಲಿ ಪ್ರಸ್ತಾಪವಾಗಿವೆ.
ಇಲ್ಲಿ ಬರುವ ಹಲ ಹೆಂಗೆಳೆಯರು ಓದು ಬರಹ ಬಾರದವರು. ಲೆಕ್ಕಾಚಾರ ಗೊತ್ತಿಲ್ಲದವರು. ಊರ ಮುಖಂಡನ ಮಗಳಿಂದ ಹಿಡಿದು, ಬಹಳ ಬಡ ಹೆಣ್ಣುಗಳ ಪ್ರಸ್ತಾಪವನ್ನೂ ಗಾಹಾಸತ್ತಸಯಿಯಲ್ಲಿ ನೋಡಬಹುದು.

#GahaSattasayi #trade #history #life
ಮಳೆಮೋಡಗಳು ಕಂಡಾಗ, ಇನ್ನು ಮೂರೋ ನಾಲ್ಕೋ ತಿಂಗಳು ತನ್ನ ಪ್ರಿಯನು ಊರಿಗೆ ಮರಳಲಾರ ಎಂದು ಕೊರಗುವ ತಿಳುವಳಿಕೆ ಇರುವಾಕೆ, ಮಳೆ ನೀರಿಂದ ಗೋಡೆ ತೋಯುವಾಗ, ಅದರಲ್ಲಿ ತನ್ನ ಗಂಡ ಊರಿಗೆ ಹೋಗಿ ಎಷ್ಟು ದಿನವಾಗಿದೆ ಎಂದು ದಿನಕ್ಕೊಂದು ಇದ್ದಲಿನ ಗೆರೆ ಹಾಕಿದ್ದು ಎಲ್ಲಿ ಅಳಿಸಿ ಹೋದೀತೋ ಎಂಬ ಅಂಜಿಕೆಗೆ ಗೋಡೆಗೆ ಆತುಕೊಂಡು ನಿಲ್ಲುವ ಮುಗ್ಧೆ
#Sattasayi
ಹೀಗೆ ಹಲಬಗೆಯ ಪಾತ್ರಗಳು ಗಾಹಾ ಸತ್ತ ಸಯಿಯಲ್ಲಿ ಕಂಡು ಹೋಗುತ್ತವೆ.

ಇದೇ ಭಾವನೆಯನ್ನೇ ತೋರುವ ಪದ್ಯಗಳನ್ನು ೮ ನೇ ಶತಮಾನದ ಅಮರುಕ ಶತಕದಲ್ಲಿಯೂ ಕಾಣಬಹುದು. ಗಾಹಾಸತ್ತಸಯಿಯ ಹೆಣ್ಣುಗಳು ಹೆಚ್ಚಾಗಿ ಹಳ್ಳಿಯವರಾಗಿದ್ದರೆ, ಅಮರುಕನ ಪದ್ಯಗಳಲ್ಲಿ ಕಂಡು ಬರುವ ನಾಯಕಿಯರು , ಬಹುಶಃ ಪಟ್ಟಣಗಳಲ್ಲಿದ್ದು, (ಮುಂದುವರೆಯುತ್ತದೆ)

#ಗಾಹಾಸತ್ತಸಯಿ #ಅಮರುಕ
ಸ್ವಲ್ಪ ಹೆಚ್ಚು ಸ್ಥಿತಿವಂತರಾಗಿರುವ ಕುಟುಂಬಗಳಿಂದ ಬಂದಂತೆ ತೋರುತ್ತಾರೆ. ಬಡವರೇ ಇರಲಿ ಸಿರಿವಂತರೇ ಇರಲಿ, ಪ್ರೀತಿ ಪ್ರೀತಿಯೇ, ವಿರಹ ವಿರಹವೇ ಅಲ್ಲವೇ? ಪತಿಯು ಊರಿಗೆ ತೆರಳಿದ್ದು ವ್ಯಾಪಾರಕ್ಕೇ ಎಂದು ನೇರವಾಗಿ ಹೇಳಿರದಿದ್ದರೂ , ಅದನ್ನು ಊಹಿಸಲು ಅವಕಾಶವಿದೆ.

#GahaSattasayi #trade #history #life #ಅಮರುಕ #ಅಮರುಶತಕ #ಗಾಹಾ
ಒಂದು ಪದ್ಯದಲ್ಲಂತೂ ವ್ಯಾಪಾರಿಗಳು ಊರಿಂದೂರಿಗೆ ಹೋಗುವಾಗ ಅವರು ಸೇರಿಕೊಳ್ಳುತ್ತಿದ್ದ ‘ಸಾರ್ಥ’ ದ ಬಗ್ಗೆಯೂ ಪ್ರಸ್ತಾಪ ಇರುವುದರಿಂದ ಈ
“ಪಯಣಿಗರ ನಲ್ಲೆ” ಯರೂ ವ್ಯಾಪಾರಿ ಕುಟುಂಬಗಳಿಗೆ ಸೇರಿದವರೆಂದು ತಿಳಿದುಕೊಳ್ಳಲು ಅಡ್ಡಿಯೇನಿಲ್ಲ.

#GahaSattasayi #trade #history #life #ಅಮರುಕ #ಅಮರುಶತಕ #ಗಾಹಾಸತ್ತಸಯಿ #Amaruka
ಈ ಅಮರುಕ ಶತಕದಿಂದ ಆಯ್ದ ಕೆಲವು ಪದ್ಯಗಳನ್ನೂ, ಅವುಗಳ ಅನುವಾದಗಳನ್ನೂ ಈ ಸರಣಿಯಲ್ಲಿ ಸಾಲಾಗಿ ಬರೆಯುತ್ತಿದ್ದೇನೆ, ಆಸಕ್ತರಿಗೋಸ್ಕರ.

(ಮುಂದುವರೆಯುವುದು)

#ಗಾಹಾಸತ್ತಸಯಿ #ಅಮರುಶತಕ #history #trade #India #Samskrta #Prakrta #literature
ಅಮರುಕಶತಕದ ಪದ್ಯಗಳೆಲ್ಲ ಮುಕ್ತಕಗಳು. ಅಂದರೆ, ಒಂದು ಪದ್ಯಕ್ಕೂ ಮತ್ತೊಂದಕ್ಕೂ ಯಾವುದೇ ಸಂಬಂಧವಿಲ್ಲ. ಆದರೂ, ಇದರಲ್ಲಿರುವ "ಪಯಣಿಗರ ಪತ್ನಿಯರ" ಬಗ್ಗೆ ಇರುವ ಪದ್ಯಗಳನ್ನು ಒಗ್ಗೂಡಿಸಲು ಈ ಸಾಲು. ಹಾಗಾಗಿ ಪದ್ಯಗಳ ನಡುವೆ ಇರುವ ವ್ಯಾಖ್ಯಾನ ನನ್ನದೇ ಹೊರತು, ಮೂಲದ್ದಲ್ಲ! #ಅಮರುಶತಕ #history #India #Trade #life #Saartha #Caravan
ಅಂತಹ ಒಂದು ಸಂದರ್ಭ ಇಲ್ಲಿ. ಒಬ್ಬಾತ ಪ್ರಯಾಣಕ್ಕೆ ಹೊರಟಿದ್ದಾನೆ. ಅವನ ಹೆಂಡತಿಯೋ ಮುಗ್ಧೆ. ಬಹುಶಃ ಹೊಸದಾಗಿ ಮದುವೆಯಾದವಳೇ ಇರಬಹುದೋ ಏನೋ. ಪ್ರಯಾಣಕ್ಕೆ ಹೊರಟವನನ್ನು ನೀನು ಬರುವುದು ಗಂಟೆ ಹೊಡೆಯುವ ಹೊತ್ತಿಗೋ, ಇಲ್ಲ ನಡುಹಗಲಿಗೋ, ಅಥವಾ ತುಸು ತಡವಾಗಿಯೋ, ಅಂತೂ ಸಂಜೆಯ ಒಳಗೇ ಬಂದೇ ಬರುತ್ತೀ ತಾನೇ ಎಂದು ಅವಳ ಪ್ರಶ್ನೆ.

#ಅಮರುಕಶತಕ #life
ಆದರೆ, ಆತ ವ್ಯಾಪಾರಕ್ಕೆ ಹೋಗುತ್ತಿರುವ ದೇಶವನ್ನು ತಲುಪುವುದಕ್ಕೇ ನೂರುದಿನಗಳ ಮೇಲೆ ಆಗುವಾಗ, ಅವನು ಅವಳಿಗೆ ಹೇಗೆ ತಾನೇ ಸಮಾಧಾನವನ್ನು ಹೇಳಿಯಾನು?

प्रहरविरतौ मध्ये वाह्नस्ततोऽपि परेऽतथा
किमुत सकले जाते वाह्निप्रिय त्वमिषैह्यसि
इति दिनशतप्राप्यं देशं प्रियस्य यियासतो
हरति गमनं बालालापैः सबाष्पगलज्जलैः
ಈ ಪದ್ಯದ, ನನ್ನ ಕನ್ನಡ ಪದ್ಯಾನುವಾದ ಇಲ್ಲಿದೆ:

ಗಂಟೆಹೊಡೆಯುವ ಮುನ್ನವೋ ನಡುಹಗಲಲೋ ತುಸುಬಳಿಕವೋ
ಅಲ್ಲದಿರಲಿಳಿಹೊತ್ತಿಗಲ್ಲವೆ ಇನಿಯ ನೀ ಬರುವುದೆನುತ
ನೂರು ದಿನಗಳ ದೂರ ಪಯಣಕೆ ಹೊರಟುನಿಂತಿಹ ನಲ್ಲನ
ಗಮನ ತಪ್ಪಿಸುತಿಹಳು ಹುಡುಗಿಯು ಬಿಕ್ಕುತಲಿ ಕಂಬನಿಯಲಿ

#ಅಮರುಕಶತಕ #ವ್ಯಾಪಾರ #India #trade #history #AmarukaShataka
ಅಂತೂ ಹೇಗೋ ತಾನು ಊರಿಗೆ ಹೊರಡಲೇ ಬೇಕೆಂದು ಅವನು ಆಕೆಗೆ ಒಪ್ಪಿಸಿರಬೇಕು. ಆದರೆ ನಂತರ ಆಗಿದ್ದೇನು? ಆ ಕ್ಷಣದಲ್ಲಿ ಕಣ್ಣು ಮುಚ್ಚಿದ ಅವಳಿಗೆ, ಅವನನ್ನು ಬಿಟ್ಟ ವಿರಹದ ಬೇಗುದಿ ಅಲ್ಲೇ ತಟ್ಟಿದೆ!

कान्ते कथञ्चित्गदितप्रयाणे
क्षणं विनम्रा विरहार्दिताङ्गी
ततस्तमालोक्य कदाऽगतोऽसी
त्यालिङ्ग्य मुग्धा मुदमाससाद

#ಅಮರುಶತಕ
ಕಣ್ಣು ಬಿಟ್ಟೊಡನೆಯೇ, ಗಂಡ ಅಲ್ಲೇ ಇದ್ದುದನ್ನು ನೋಡಿ, ಅವನು ಊರಿಗೆ ಹೋಗಿ , ಮರಳಿ ಬಂದಾಯಿದೆಂದು ಬಹಳ ಸಂತೋಷಗೊಂಡು, ನೀನು ಯಾವಾಗ ಮರಳಿದೆಯೆಂದು ಅವನನ್ನೇ ಕೇಳುತ್ತಾಳೆ ! ಅವನಿಂದ ದೂರವಿರುವುದು ಅವಳಿಗೆ ಎಷ್ಟು ಕಷ್ಟ ಎಂಬುದು ಇಲ್ಲೇ ತಿಳಿಯುತ್ತದೆ!

ಪದ್ಯದ ನನ್ನ ಕನ್ನಡ ಪದ್ಯಾನುವಾದ ಈ ಮುಂದೆ ಇದೆ.

#ಅಮರುಶತಕ #history #India #trade
ಇನಿಯನೂರಿಗೆ ಹೊರಡುವೆನೆನೆ ತ-
ರುಣಿಯು ಮೊಗವನು ನೆಟ್ಟು ಕೆಳಗಡೆ
ಮಣಿಯೆ ವಿರಹದುರಿಯಲಿ ಬೆಂದಳು ಮುಗುದೆಯಾಕ್ಷಣವೆ
ಚಣದ ನಂತರ ನೋಡೆ ನಲ್ಲನು
ಕಾಣಲಾತನ ನೋಡಿಯಚ್ಚರಿ
ಯೆನಿಸಿ ಹರುಷದಿ ತಬ್ಬಿ ನುಡಿದಳು ಬಂದುದೆಂದೆಂದು!

ತಾನಿನ್ನೂ ಹೊರಟಿಲ್ಲವೆಂದೂ,ಇನ್ನು ಹೊರಡಲೇಬೇಕೆಂದೂ, ಊರಿಗೆ ಹೋದವರು ಬಂದೇಬರುವರು ಅಲ್ಲವೇ ಎಂದೂ, ತಿಳಿಸುವ ಭಾರ ಇವನಿಗೆ!
याताः किं न मिलन्ति सुन्दरि पुनश्चिन्ता त्वया मत्कृते
नो कार्या नितरां कृशामि कथयत्येवं सबाष्पे मयि।
लज्जामन्थरतारकेण निपतद्धाराश्रुणा चक्षुषा
दृष्ट्वा मां हसितेन भाविमरणोत्साहस्तया सूचितः

ಈತ ಸಮಾಧಾನಪಡಿಸಬಹುದು.ಕೇಳುವುದು ಅವಳಿಗೆ ಬಿಟ್ಟದ್ದು!ಅವಳು ನಕ್ಕಳಂತೆ, ಆದರೆ ಬದುಕುವಾಸೆಯೇ ಅವಳಲ್ಲಿಲ್ಲ!
ಪಯಣ ಹೋದರೆ ಮತ್ತೆ ಬಾರದೆ ಇರುವುದುಂಟೇ ಸುಂದರಿ?
ಎನ್ನ ಸಲುವಿಗೆ ಚಿಂತೆಯೇತಕೆ? ಏತಕೀಪರಿ ಸೊರಗಿಹೆ?
ಒದ್ದೆಗಣ್ಣಲಿ ನಾನು ಕೇಳಲು ನಾಚಿ ತುಂಬಿದ ಕಣ್ಗಳ
ನೀರ ತಡೆದಳು! ನೋಡಿ ನಕ್ಕಳು! ತೋರಿ ಸಾವಿಗೆ ಕಾತರ!

ಅವಳು ನಕ್ಕಿದ್ದರಲ್ಲಿ, ಪ್ರಾಣವೇ ಹೋಗಿಬಿಡುವುದೇನೋ ಎಂಬ ದುಃಖ ಅವನಿಗೆ ಕಂಡಿತು. ಆದರೇನಂತೆ? ಜೀವನ ವ್ಯಾಪಾರ ನಡೆಯಬೇಕಲ್ಲ! ಅವನು ಹೊರಟ.
ಗಂಡನನ್ನು ಬಿಟ್ಟಿರುವ ವಿರಹ ಅವಳಿಗೆಷ್ಟಿದೆಯೋ, ಇವನಿಗೂ ಇದ್ದೇ ಇದೆ. ನೂರಾರು ಯೋಜನಗಳ ದಾರಿಯನ್ನು ದಾಟಿದರೂ, ಹೊಳೆ ತೊರೆ ಕಾಡುಗಳನ್ನು ದಾಟಿದ್ದರೂ, ಊರಿನ ದಿಕ್ಕಿಗೆ ನೋಡಿದಾಗ, ಅವಳ ಮೊಗವೇ ಅವನಿಗೆ ಕಾಣುತ್ತಿರುತ್ತದೇನೋ! ಹಾಗೆಂದೇ ಅವನು ಆ ಕಡೆಗೇ ಬಗ್ಗಿ ಬಗ್ಗಿ ನೋಡುತ್ತಿರುತ್ತಾನಂತೆ!

#ಅಮರುಕಶತಕ #ವ್ಯಾಪಾರ #India #trade #history
देशैरन्तरिता शतैश्चसरिताम् उर्वीभृतां काननैर्
यत्नेनापि न याति लोचनपथं कान्तेति जानन्नपि
उद्ग्रीवश् चरणार्धरुद्धवसुधः कृत्वाश्रुपूर्णां दृशं ताम्
आशां पथिकस् तथापि किमपि ध्यायंश्चिरं वीक्षते

ಈ ಪದ್ಯದ ಕನ್ನಡ ಅನುವಾದ ಮುಂದೆ ಇದೆ

#ಅಮರುಕಶತಕ #ಅಮರುಶತಕ #ಅಮರು #history #India #trade
ದೂರದೇಶದಿ ಕಾಡುಮಲೆಹೊಳೆನೂರು ದಾಟಿಹ ಹಾದಿಗ
ತನ್ನ ದಿಟ್ಟಿಗೆ ನಲ್ಲೆ ನಿಲುಕಳು ಎಂಬುದನು ತಾನರಿತರೂ
ಕೊರಳ ನಿಲುಕಿಸಿ ಮೆಟ್ಟುಗಾಲಲಿ ನೀರು ತುಂಬಿದ ಕಣ್ಣಲಿ
ಏನನೋ ನೆನೆಯುತ್ತಲಾಕಡೆಯಲ್ಲೆ ನೋಡುತಲಿರುವನು!

(More to follow about trade in 8th century India, and how it would effect common folk, as seen in #AmaruShataka)
ಅವನ ನೂರು ದಿನಗಳ ಪ್ರಯಾಣದಲ್ಲಿ, ಈ ವ್ಯಾಪಾರಿ ಪ್ರತಿ ರಾತ್ರಿಯೂ ಒಂದಲ್ಲ ಒಂದು ಹಳ್ಳಿಯಲ್ಲಿ ತಂಗಬೇಕು. ಹೀಗೊಮ್ಮೆ ಎಲ್ಲೋ ತಂಗಿದ್ದಾಗ, ತನ್ನ ಪ್ರಿಯೆಯಿಂದ ದೂರವಾಗಿರುವ ದುಃಖವನ್ನೇ ಹಾಡಾಗಿ ಹಾಡುತ್ತಿದ್ದನಂತೆ. ಆ ಹಾಡಿಗೆ, ಮೋಡಗಳೇ ದುಃಖಪೂರಿತರಾಗಿ, ಅವನ ವಿರಹಕ್ಕೆ ಕಣ್ಣೀರು ಸುರಿಸುವಂತೆ ಮಳೆಸುರಿದಿದವಂತೆ.

#ಅಮರುಶತಕ #history #trade
रात्रौ वारिभरालसाम्बुदरवोद्विग्नेन जाताश्रुणा
पान्थेनात्मवियोगदुःखपिशुनं गीतं तथोत्कण्ठया ।
आस्तां जीवितहारिणः प्रवसनालापस्य संकीर्तनं
मानस्यापि जलाञ्जलिः सरभसं लोकेन दत्तो यथा ॥

ಈ ಮೇಲಿನ ಸಂದರ್ಭವನ್ನು ವಿವರಿಸುವ ಪದ್ಯ ಇದು, ಇದರ ಕನ್ನಡ ಅನುವಾದ ಹೀಗಿದೆ.

#ಅಮರುಶತಕ #amarushataka #history
ರಾತ್ರಿ ಹೊತ್ತಿನಲಿ ಮೋಡಮೊರೆವಾಗ ತಳಮಳಿಸಿ ಕಣ್ಣಲಿ
ನೀರ ಸುರಿಸುತ್ತ ತನ್ನ ವಿರಹವನೆ ಹಾಡುತಿರೆ ಹಾದಿಗ
ನೋವ ತುಂಬಿರುವ ಜೀವ ಹಿಂಡುತಿಹ ದನಿಯ ಕೇಳಿ ಲೋಕ
ಪಯಣವಿರಲಿ ಬಿಂಕಕ್ಕು ಕೂಡ ತರ್ಪಣವ ಕೊಟ್ಟಿತಲ್ಲ!

ಇವನ ಈ ದುಃಖವನ್ನು ಆ ರಾತ್ರಿಗೆ ಇವನಿಗೆ ಆಸರೆ ಕೊಟ್ಟ ಹಳ್ಳಿಗರು ಮಾಡಿದ್ದೇನು?

#ಅಮರುಶತಕ #trade #history #Amaruka #life
*ಇವನ ಈ ದುಃಖವನ್ನು ಆ ರಾತ್ರಿ ಕೇಳಿದ, ಇವನಿಗೆ ಆಸರೆ ಕೊಟ್ಟವರು ಮಾಡಿದ್ದೇನು" ಎಂದು ಓದಿ:
धीरं वारिधरस्य वारि किरतः श्रुत्वा निशीथे ध्वनिं
दीर्घोच्छ्वासमुदश्रुणा विरहिणीं बालां चिरं ध्यायता ।
अध्वन्येन विमुक्तकण्ठमखिलां रात्रिं तथा क्रन्दितं
ग्रामीणैर्व्रजतो जनस्य वसतिर्ग्रामे निषिद्धा यथा ॥
ಮೇಲಿನ ಪದ್ಯದ ನನ್ನ ಕನ್ನಡ ಅನುವಾದ ಇಲ್ಲಿದೆ:

ಇರುಳಿನಲಿ ಸುರಿವಮಳೆ ಕಾರ್ಮುಗಿಲ ಗುಡುಗುಗಳ ಕೇಳಿ ಕಂಗೆಟ್ಟಾತನು
ಊರಿನಲ್ಲೊಬ್ಬಳೇ ನಿಟ್ಟುಸಿರಿನಲಿ ನವೆಯುತಿರುವ ಹುಡುಗಿಯನೆ ನೆನೆದು
ಪಯಣಿಗನು ರಾತ್ರಿಯಿಡಿ ಬಿರಿದ ಕೊರಲಲ್ಲಿ ತಾ ಗೋಳಾಡುತಿರುವ ದನಿಯ
ಕೇಳಿ ಹಳ್ಳಿಗರಂದೆ ಮುಡಿವು ಮಾಡಿದರೆಡೆಯ ಕೊಡೆವೆಂದು ಪಯಣಿಗರಿಗೆ

#ಅಮರುಶತಕ #trade
ರಾತ್ರಿ ಇಡೀ ಇವನು ವಿರಹದಲ್ಲಿ ಹಾಡುವುದನ್ನು , ಆ ಗೋಳಿನ ನೋವನ್ನು ಕೇಳಿದ ಹಳ್ಳಿಗರು, ಇನ್ನು ಮುಂದೆ ಇಂಥ ವ್ಯಾಪಾರಿಗಳಿಗೆ ರಾತ್ರಿ ತಂಗಲು ಅವಕಾಶ ಕೊಡುವುದೇ ಬೇಡ ಎಂದು ನಿರ್ಧಾರ ಮಾಡಿಬಿಟ್ಟರಂತೆ! ಹೇಗಿದ್ದಿರಬಹುದು ನೋಡಿ ಇವನ ವಿರಹದ ತೀವ್ರತೆ! #Amarushataka #trade #history #ಅಮರುಶತಕ #ಪದ್ಯ #India (ಮುಂದುವರೆಯುವುದು)
ಇವನು ಹೀಗಿದ್ದರೆ, ಅವಳಿನ್ನೂ ಕೋಮಲೆ! ಮಳೆ ಹೀಗೆ ಸುರಿದಿರಲು, ಅವಳಿಗೆ ಏನಾಯ್ತೋ!

श्रुत्वा तन्व्या निशीथे नवघनरसितं विश्लथाङ्कं पतित्वा
शय्यायां भूमिपृष्ठे करतलधृतया दुःखितालीजनेन ।
सोत्कण्ठं मुक्तकण्ठं कठिनकुचतटाघातशीर्णाश्रुबिन्दु
स्मृत्वा स्मृत्वा प्रियस्य स्खलितमृदुवचो रुद्यते पान्थबध्वा
ರಾತ್ರಿಯಲಿ ಗುಡುಗೊಂದು ಮೊರೆಯೆ ಸೊರಗಿಹ ಬೆಡಗಿ
ಬೆಚ್ಚಿಬಿದ್ದಿರಲೊಡನೆ ಮೂರ್ಛೆಯಲ್ಲೆ
ಹಾಸಿಗೆಯ ಬಳಿ ಕುಳಿತ ಗೆಳತಿಯರು ಕೊರಗುತ್ತ
ಕೈಗೆ ಮೊಗವಿತ್ತಿರಲು ದುಃಖದಲ್ಲೆ

ಜೋರಾಗಿ ಅಳುತಿರಲು ಸುರಿಸುತಿಹ ಕಣ್ಣೀರು
ಹರಿದು ಹೋಗಿರಲವಳ ಎದೆಯ ಮೇಲೆ
ನೆನೆಯುತ್ತ ನೆನೆಯುತ್ತಲಿನಿಯನಾ ಮೆದುಮಾತ
ಗೋಳಾಡುತಿಹಳು ಪಯಣಿಗನ ನಲ್ಲೆ

#ಅಮರುಶತಕ #trade
ಇಲ್ಲಿ ನೋಡಿ, ಅವಳು ಒಬ್ಬಳೇ ಇಲ್ಲ. ಅವಳ ದುಃಖದಲ್ಲಿ, ವಿರಹದಲ್ಲಿ, ಅವಳ ಸಖಿಯರೂ ಕೂಡ ಪಾಲ್ಗೊಂಡಿದ್ದಾರೆ! ಅವಳು ತನ್ನ ಪ್ರಿಯನನ್ನು ನೆನೆನೆನೆದು , ಗುಡುಗಿನ ಸದ್ದಿಗೆ ಬೆದರಿ, ಮೂರ್ಛೆಯೇ ಹೋದಳಂತೆ. ಅವಳ ಗೋಳಂತೂ ಹೇಳತೀರದಾಗಿದೆ.

#ಅಮರುಶತಕ #history #trade #India
ಪ್ರಯಾಣ ಮುಂದುವರೆದಿದೆ. ಬಹುಶಃ ಅವನ ಜೊತೆಯಿದ್ದ ಇನ್ನೊಬ್ಬ ವ್ಯಾಪಾರಿಯೊಡನೆ, ಪತ್ನಿಯ ನೆನಪು ಮಾಡಿಕೊಳ್ಳುತ್ತಾ ಅವನು ಆಡಿದ ಮಾತು ಹೀಗೆ:

नभसि जलदलक्ष्मीं सम्भृतां वीक्ष्य दृष्ट्या
प्रवससि यदि कान्तेत्यर्धमुक्त्वा कथञ्चित् ।
मम पटमवलम्ब्य प्रोल्लिखन्ती धरित्रीं
तदनुकृतवती सा यत्र वाचो निवृत्ताः ॥
(ಮೇಲಿನ ಪದ್ಯದ, ನನ್ನ ಕನ್ನಡ ಅನುವಾದ ಈ ಕೆಳಗೆ)

ಆಗಸದಿ ಮಳೆ ಮೋಡ ಮೊರೆದಿರೆ ಕಣ್ಣು ತುಂಬಿಸಿ ಕೋಮಲೆ
"ನಲ್ಲ ಪಯಣಕೆ ನೀನು ಹೋದರೆ" ಎನಲು ಮಾತೇ ಕಟ್ಟಿರೆ
ನನ್ನ ಬಟ್ಟೆಯ ಹಿಡಿದದೆಂತೋ ನೆಲವ ಕೆರೆಯುತ ಸುಮ್ಮನೆ
ನಿಂತು ಬಿಟ್ಟುದ ಮಾತಿನಲಿ ನಾನಿಂದು ಹೇಳಲು ಸಾಧ್ಯವೆ?

#ಅಮರುಶತಕ #ಅಮರುಕ #trade #India #History #AmaruShatakam
ತಾನು ಹೊರಟಾಗ ಹೆಂಡತಿಯೊಡನೆ ನಡೆದ ಸಂಭಾಷಣೆಯನ್ನು, ಈಗ ತನ್ನ ಸಹಪ್ರಯಾಣಿಕನಿಗೆ ವಿವರಿಸಿದ್ದು ಹೀಗಿರಬಹುದು!

कान्ते कत्यपि वासराणि गमय त्वं मीलयित्वा दृशौ
स्वस्ति स्वस्ति निमीलयामि नयने यावन्न शून्या दिशः ।
आयाता वयमागमिष्यति सुहृद्वर्गस्य भाग्योदयैः
सन्देशो वद कस्तवाभिलषितस्तीर्थेषु तोयाञ्जलिः
ಇವನು ಹೊರಟು ಹಲವಾರು ತಿಂಗಳೇ ಆಗಿಹೋಗಿದೆಯೋನೋ! ಇನ್ನು ಅವನ ಹೆಂಡತಿಯ ಸ್ಥಿತಿ ಹೇಗಿದೆಯೋ, ನೋಡಿ - ಸೊರಗಿ ಹೋದ ಅವಳ ಕೈಗಳಿಂದ ಬಳೆಗಳು ಜಾರಿ ಹೋಗುವಷ್ಟು ಅವಳು ಒಣಗಿ ಹೋದಳು. ಅವಳ ಸ್ಥಿತಿಯನ್ನು ಕವಿ #ಅಮರುಕ ವಿವರಿಸುವುದು ಈ ಮುಂದಿನ ಪದ್ಯದಿಂದ.

#ಅಮರುಶತಕ #history #India #trade
प्रस्थानं वलयैः कृतं प्रियसखैरस्रैरजस्रं गतं
धृत्या न क्षणमासितं व्यवसितं चित्तेन गन्तुं पुरः ।
गन्तुं निश्चितचेतसि प्रियतमे सर्वे समं प्रस्थिता
गन्तव्ये सति जीवितप्रियसुहृत्सार्थः किमुत्यज्यते ॥

ಈ ಪದ್ಯದ ಕನ್ನಡ ಅನುವಾದ ಕೆಳಗಿದೆ. #ಅಮರುಕ #Amaruka
#ಅಮರುಶತಕ #history #India #trade
ತೊಟ್ಟ ಬಳೆಗಳು ಕೈಯ ತೊರೆದಿವೆ ಕಣ್ಣ ನೀರದು ಸುರಿದಿದೆ
ಧೈರ್ಯ ಚಣದಲೆ ಮಾಯವಾಗಿದೆ ಮನಸು ದೂರಕೆ ಓಡಿದೆ
ಗಟ್ಟಿ ಮನದಲೆ ನಲ್ಲ ತೆರಳಿರೆ ಜೊತೆಯಲೇ ಇವರೆಲ್ಲರೂ
ಹೊರಟು ಹೋದರೆ ಜೀವ ಸಾರ್ಥವ ತೊರೆದು ಉಳಿದಿಹೆಯೇತಕೆ?

ಸಾರ್ಥ (caravan) ನೂರಾರು ವ್ಯಾಪಾರಿಗಳು ದೇಶದಿಂದ ದೇಶಕ್ಕೆ ಪ್ರಯಾಣ ಹೋಗುವ ಗುಂಪಿಗೆ ಸಾರ್ಥ ಎಂದು ಹೆಸರು #ಅಮರುಕ #trade
ಇಲ್ಲಿ ಆಕೆ, ತನ್ನ ಕೈಯಿಂದ ಜಾರಿ ಹೋದ ಬಳೆಗಳನ್ನು, ಕಣ್ಣಿಂದ ಸುರಿದ ನೀರನ್ನು, ಮಾಯವಾದ ಧೈರ್ಯವನ್ನು, ತನ್ನತನವನ್ನೇ ಕಳೆದುಕೊಂಡ ಮನಸ್ಸನ್ನು, ತನ್ನ ಪ್ರಿಯನು ಹೋದ ಸಾರ್ಥದೊಡನೆಯೇ ಹೊರಟು ಹೋದರು ಎಂದು ಸಮೀಕರಿಸುತ್ತಿದ್ದಾಳೆ. ತನ್ನ ಜೀವವನ್ನು, ನೀನಾದರೂ ಏಕಿದ್ದೀಯೆ? ನೀನೂ ಸಾರ್ಥದೊಡನೆಯೇ ಹೊರಟು ಹೋಗಬೇಕಿತ್ತು ಎಂದು, ತಾನು ಬದುಕುವುದೇ -
ಕಷ್ಟವಾಗಿದೆ ಎಂಬುದನ್ನು ಸೂಚಿಸುವಂತೆ ಹೇಳುತ್ತಿದ್ದಾಳೆ.

ನನಗೆ ಕಂಡಂತೆ, ವ್ಯಾಪಾರೀ ಸಂಬಂಧವಾದ ಸಾರ್ಥ ದ ಪ್ರಯುಕ್ತಿ #ಅಮರುಕ ಶತಕದಲ್ಲಿ ಬರುವುದು ಇದೊಂದೇ ಪದ್ಯದಲ್ಲಿ.

#ಅಮರುಶತಕ #ಅಮರುಕ #India #trade #history (ಮುಂದುವರೆಯುವುದು)
ಬಹುಶಃ ಅವನು ತಲುಪಬೇಕಾದೆಡೆಗೆ ತಲುಪಿದ್ದಾನೆ. ವ್ಯಾಪಾರವನ್ನು ಮುಗಿಸಿದ್ದಾನೆ. ಊರಿನೆಡೆಗೆ ಮರಳುತ್ತಿದ್ದಾನೆ. ಒಂದು ಹಳ್ಳಿಯಲ್ಲಿ ತಂಗಲು ಹೊರಟಿದ್ದಾನೆ. ಆದರೆ ಅವನಿಗೆ ಅಲ್ಲಿ ರಾತ್ರಿ ಮಲಗಲು ಎಡೆ ಸಿಕ್ಕಿತೇ? ಇಲ್ಲವೇ?

#ಅಮರುಶತಕ #ಅನುವಾದ #history #trade #India #AmaruShatakam
ग्रामेऽस्मिन् पथिकाय पान्थ वसतिर्नैवाधुना दीयते
पश्‍यात्रैव विवाहमण्डपतले पान्थः प्रसुप्‍तो युवा ।
तेनोत्थाय खलेन गर्जति घने स्मृत्वा प्रियां तत्कृतं
येनाद्यापि करङ्कदण्डपतनाशङ्की जनस्तिष्ठति ॥

ಆ ಹಳ್ಳಿಗರೆಂದರಂತೆ - ನಿನಗಿಲ್ಲಿ ರಾತ್ರಿ ತಂಗಲು ಎಡೆಯಿಲ್ಲ! ಏಕೆ ಗೊತ್ತೇ? .. #ಅಮರುಕ #history
ಇಲ್ಲಿ ನೀಡೆವು ಹಾದಿಗನೆ ವಸತಿಯನು ತಂಗಲು ಇರುಳಲಿ
ಒಮ್ಮೆ ಹಳ್ಳಿಯ ಮದುವೆ ಮಂಟಪದಲ್ಲಿ ಹರೆಯದ ಪಯಣಿಗ
ನಿದ್ದೆ ಮಾಡಿರೆ ಮೋಡ ಗುಡುಗಿರೆ ಬೆಚ್ಚಿ ನಲ್ಲೆಯ ನೆನೆದವ
ಚಪ್ಪರವೆ ಕುಸಿವಂತೆ ಮಾಡಿದುದಿಂದು ಜನರಿಗೆ ನೆನಪಿದೆ

ನಿನ್ನಂಥ ಯುವಕನೊಬ್ಬ ಮದುವೆ ಮಂಟಪದಲ್ಲಿ ರಾತ್ರಿ ತಂಗಿದ್ದು, ಅವನ ಗೋಳಿಗೆ, ಚಪ್ಪರವೇ ಕುಸಿದು ಹೋಗಿ, ಮದುವೆಯೇ ನಿಂತಿತ್ತು!
ಆ ಕಾರಣಕ್ಕೆ ನಿನ್ನಂತಹ, ಹೆಂಡತಿಯನ್ನು ದೂರದೂರಿನಲ್ಲಿ ಬಿಟ್ಟು ಬಂದಿರುವ ಯುವಕರಿಗೆ, ನಾವಿಲ್ಲಿ ತಂಗಲು ಅವಕಾಶ ಕೊಡಲಾರೆವು ಎಂದರಂತೆ ಹಳ್ಳಿಗರು.. ಪಾಪ, ಇವನೇನು ಮಾಡಿದನೋ? ಊರಿಗೆ ಕಡೆಗೆ ನಿಧಾನವಾಗಿ ಹೆಜ್ಜೆ ಹಾಕಿರಬೇಕು.

#ಅಮರುಕ #ಅಮರುಶತಕ #trade #India #history
ಅಂತೂ ಅವನು ಮರಳುವ ದಿನ ಸಮೀಪಿಸಿದೆ. ಮಡದಿ ಇಂದು ಬರುವನು ನಾಳೆ ಬರುವನು ಎಂದು ಕಾದಿಹಳು!

आदृष्टिप्रसरात्प्रियस्य पदवीमुद्वीक्ष्य निर्विण्णया
विच्छिन्नेषु पथिष्वहःपरिणतौ ध्वान्ते समुत्सर्पति ।
दत्तैकं सशुचा गृहं प्रति पदं पान्थस्त्रियास्मिन्क्षणे
मा भूदागत इत्यमन्दवलितग्रीवं पुनर्वीक्षितम् ॥
ಕಣ್ಣು ತೋರುವವರೆಗು ನಲ್ಲನಾ ಹಾದಿಯನೆ ಕಾಯ್ದು ಬೇಸತ್ತಾಗಲೆ
ದಾರಿಗರ ಸಪ್ಪಳವು ನಿಲ್ಲುತಿರೆ ಹೊರಗೆಲ್ಲ ಹಬ್ಬುತಿರೆ ಕಗ್ಗತ್ತಲೆ
ಹೆಣ್ಣಿವಳು ಮನೆಯೆಡೆಗೆ ತಿರುಗುತ್ತ ಹಾಕಿರಲು ಹೆಜ್ಜೆಯೊಂದನ್ನಾಕಡೆ
ಕೂಡಲೆಯೆ ಬಂದನೇನೋಯೆನುತ ಕತ್ತನ್ನು ಮೆಲ್ಲ ಹೊರಳಿಸಿ ನೋಳ್ಪಳೆ

ದಿನವೆಲ್ಲ ಊರ ಬಾಗಿಲಲ್ಲೇ ಕಾದಿದ್ದಾಳೇನೋ.. ಸಂಜೆಯಾಗಿದೆ. ಇನ್ನು ಮನೆಗೆ +
ತೆರಳಬೇಕೆಂದು ಹೋಗುತ್ತಿರುವಾಗ, ಸದ್ದಾಯಿತಂತೆ, ಕೂಡಲೆ ಇವನು ಬಂದೇ ಬಿಟ್ಟನೋ ಏನೋ ಎಂಬ ಆಸೆಯಿಂದ ತಿರುಗಿ ನೋಡಿದಳವಳು.. ಆದರೆ ..

#ಅಮರುಕಶತಕ #India #trade #history
ತನ್ನ ಹಾದಿ ಕಾಯುವ ನಲ್ಲೆಯು ಏನು ಮಾಡುತ್ತಿರಬಹುದೆಂಬ ಯೋಚನೆ ಆತನಿಗೆ.. ಇನ್ನು ಕೆಲವೇ ದಿನಗಳ ದಾರಿ:

तप्तेमहाविरहवह्निशिखावलीभिः
आपाण्डुरस्तनतटे हृदये प्रियायाः
मन्मार्गवीक्षणनिवेषितदीनदृष्टेः
नूनं छमच्छमिति बाष्पकणाः पतन्ति

ಇದರ ಅನುವಾದ ಈ ಮುಂದಿರುವಂತಿದೆ #ಅಮರುಶತಕ #trade #history #India
ನಾ ಬರುವ ದಾರಿಯನೆ ಕಾಯುತಿರೆ ಕೊರಗಿನಲಿ
ಅಗಲಿಕೆಯ ಉರಿನಾಲಗೆಯೊಳು ಬೆಂದು
ಮನದಿನಿಯೆ ದಳದಳನೆ ಸುರಿಸುತಿಹ ಕಣ್ಣೀರು
ಬಿಳಿಚಿದೊಡಲೆದೆಯಲ್ಲಿ ಸುರಿವುದಯ್ಯೋ!

ಅಂತೂ ಅವಳನ್ನುನೆನೆಯುತ್ತ ನೆನೆಯುತ್ತ ಒಮ್ಮೆ ಊರಿಗೆ ಸೇರಿದ್ದಾನೆ. ಇಬ್ಬರಿಗೂ ಸಂಭ್ರಮವೋ ಸಂಭ್ರಮ. ಆದರೆ ಮನೆಯಲ್ಲಿರುವ ಜನದಿಂದ ಏಕಾಂತ ದೊರೆಯದೇ ಹೋಗಿದೆ.
आयाते दयिते मनोरथशतैर्नीत्वा कथंचिद्दिनं
वैदग्ध्यापगमाज्जडे परिजने दीर्घां कथां कुर्वति ।
दष्टास्मीत्यभिधाय सत्वरपदं व्याधूय चीनांशुकं
तन्वङ्ग्या रतिकातरेण मनसा नीतः प्रदीपः शमम् ||

ನೂರಾರು ದಿನಗಳ ನಂತರ ಮನೆಗೆ ಗಂಡ ಬಂದರೂ, ಅವಳು ಇಡೀ ದಿನವನ್ನು ಅವಳು ಹೀಗೆ ನಿರೀಕ್ಷೆಯಲ್ಲೇ ಕಳೆಯಬೇಕಾಯಿತು #ಅಮರುಕ
ಸಂಜೆಯಾದರೂ, ಸಖಿಯರ ಹರಟೆ ನಿಲ್ಲದೇ ಹೋಗಿರಲು ಜಾಣೆ ಮಾಡಿದ್ದೇನು?

ಊರಿನಿಂದಲಿಯಿನಿಯ ಮರಳಿಬಂದಿರುವಂದು ನೂರಾಸೆಗಳಲಿ ದಿನವ
-ನ್ನೆಂತೊ ಕಳೆಯುತ ಸಂಜೆ ಕೋಣೆಯನು ಸೇರಿದರೆ ಗೆಳತಿಯರ ಹರಟೆನಿಲದೇ
ಹೋಗಿರಲು ತವಕದಲಿ ಏನೊ ಕಚ್ಚಿತುಯೆನುತ ರೇಸಿಮೆಯ ಮೇಲುಡುಗೆಯ
ಎಸೆದಳೀ ಬೆಡಗಿ ನಲ್ಲನ ಸೇರುವಾಸೆಯಲಿ ದೀಪವನು ನಂದಿಸುತಲಿ!

****

#ಅಮರುಕ #history
ಇಲ್ಲಿಗೆ ಈ ಸರಣಿ ಮುಗಿಯಿತು. ಈ ಪದ್ಯಗಳ ಸಾಲು, ಅವುಗಳ ಅನುವಾದ ಮತ್ತೆ ನನ್ನ ಕಲ್ಪನೆಯ ಕಥೆ, ಓದುವವರಿಗೆ ಹಿಡಿಸುವುದೆಂದುಕೊಂಡಿದ್ದೇನೆ! ಹಿಡಿಸಿದರೆ, ಹಂಚಿಕೊಳ್ಳಿ :)

End of this thread on a fictional couple from #AmaruShataka - If you enjoyed reading the thread, do share!
Missing some Tweet in this thread?
You can try to force a refresh.

Like this thread? Get email updates or save it to PDF!

Subscribe to ಹಂಸಾನಂದಿ Hamsanandi
Profile picture

Get real-time email alerts when new unrolls are available from this author!

This content may be removed anytime!

Twitter may remove this content at anytime, convert it as a PDF, save and print for later use!

Try unrolling a thread yourself!

how to unroll video

1) Follow Thread Reader App on Twitter so you can easily mention us!

2) Go to a Twitter thread (series of Tweets by the same owner) and mention us with a keyword "unroll" @threadreaderapp unroll

You can practice here first or read more on our help page!

Did Thread Reader help you today?

Support us! We are indie developers!


This site is made by just three indie developers on a laptop doing marketing, support and development! Read more about the story.

Become a Premium Member and get exclusive features!

Premium member ($30.00/year)

Too expensive? Make a small donation by buying us coffee ($5) or help with server cost ($10)

Donate via Paypal Become our Patreon

Thank you for your support!