My intro to traditional Kannada poetry was through #Kumaravyasa, thanks to my mother being a gamaki.

The art by B P Bairi showing the poet writing #GaduginaBharata, was the inspiration for me to write his story, in the same chandas he used #Bhamini #Shatpadi. #KaviJayanti
#ಕುಮಾರವ್ಯಾಸನ ಮೇಲೆ ಈ ಹತ್ತು ಪದ್ಯಗಳನ್ನು ಬರೆಯಲಾಗಿದ್ದು ನನ್ನ ಅದೃಷ್ಟವೆಂದೇ ನನ್ನೆಣಿಕೆ. ಹಿಂದಿನಿಂದಲೂ ಕುಮಾರವ್ಯಾಸನ ಪದ್ಯಗಳನ್ನೋದಿ, ಆದರ ಧಾಟಿಯ ಪರಿಚಯ ಇತ್ತಾದರೂ ಆರು ವರ್ಷಗಳ ಹಿಂದೆ ಪದ್ಯಪಾನ ಜಾಲತಾಣದಲ್ಲಿ ಕಲಿತ ಕೆಲವು ಪಾಠಗಳಿಂದ, ಇದೇ #ಕವಿಜಯಂತಿ ಯಂದು ಬರೆದಿದ್ದೆ. , ಮತ್ತೊಮ್ಮೆ ಹಂಚಿಕೊಳ್ಳುತ್ತಿದ್ದೇನೆ. #KumaraVyasa
ಸಾಸಿರದಲಿವನೊಬ್ಬ ಕವಿವರ
ಲೇಸು ರೂಪಕದರಸ ಕುವರ
ವ್ಯಾಸನಿಗೆ ನಮಿಸುವೆನು ಮೊದಲಲಿ ಬಳಿಕ ಶಾರದೆಗೆ
ಮಾಸ ವರ್ಷಗಳೆಷ್ಟೊ ಸಂದರು
ಮಾಸದಿಹುದಾ ಕವಿಯ ನೆನಪಿದು
ಹಾಸುಹೊಕ್ಕಾಗುಳಿದ ನಮ್ಮಯ ಮನಸಿನಂಗಳದಿ || ೧||

#Kumaravyasa #Kavijayanti #ಕುಮಾರವ್ಯಾಸ #ಕವಿಜಯಂತಿ
ತಿಳಿದು ಪೇಳಲು ಕೃಷ್ಣ ಕಥೆಯ-
ನ್ನಳವೆಯನ್ಯಗೆ? ಗಾಳು ಕವಿಗಳು
ಗಳಹಿದರೆ ಸುಮ್ಮನೆಯೆ ವ್ಯರ್ಥದೆ ಬೀಳು ಮಾತಿನಲಿ?
ಸುಳಿವಿರದ ಕಬ್ಬಗಳನೋದಿದ
ಬಳಿಕವೋದಲು ನಾರಣಪ್ಪನ
ಹೊಳೆವುದೈ ಸಲೆ ಸುಕವಿಕಾವ್ಯದ ಹಿತವು ಮನಸಿನಲಿ! ||೨||

#Kumaravyasa #Kavijayanti #ಕುಮಾರವ್ಯಾಸ #ಕವಿಜಯಂತಿ
ವೀರ ನಾರಾಯಣನ ಸನ್ನಿಧಿ
ಯಾರ ಭಾಗ್ಯಕೆ ಸಿಗುವುದುಂಟೋ!
ಬೇರದಾರೋ ದೇವನಿಹನೇ ಸರಿಯಗಟ್ಟಲಿಕೆ?
ಧೀರ ಬಿಟ್ಟಿಗರಾಯ ಕೆತ್ತಿಸಿ
ಪೂರಯಿಸಿದನು ತನ್ನ ಹರಕೆಯ
ಸಾರುತಲಿ ಜಗದೊಡೆಯ ನಾರಾಯಣನೆ ಮೊದಲೆಂದು! ||೩||

#Kumaravyasa #Kavijayanti #ಕುಮಾರವ್ಯಾಸ #ಕವಿಜಯಂತಿ
ಕತ್ತಲೆಯು ಕಳೆಯುತಿರೆ ಮೂಡಲ
ಹೊತ್ತು ಮೂಡಿರೆ ಕೋಳಿ ಕೂಗಿರ-
ಲಿತ್ತ ಬಂದನು ನಾರಣಪ್ಪನು ನಾರಯಣ ಗುಡಿಗೆ
ಸುತ್ತಿ ಗುಡಿಯನು ಹತ್ತು ಸಲ ಮ-
ತ್ತತ್ತ ಪುಷ್ಕರದೊಳಗೆ ತಾ ಮೀ -
ಯುತ್ತಲೆದ್ದನು ಮಡಿಯನುಟ್ಟನು ಹರಿಯ ನೆನೆಯುತಲಿ ||೪||

#Kumaravyasa #Kavijayanti #ಕುಮಾರವ್ಯಾಸ #ಕವಿಜಯಂತಿ
ಮುದ್ದು ಕೋಗಿಲೆಯೊಂದು ಹಾಡುತ-
ಲಿದ್ದುದದು ಮಾಮರದಿ ಗುಡಿಯೊಳ-
ಗಿದ್ದ ದೇವಗೆ ಸುಪ್ರಭಾತವ ನಲಿದು ಕೋರುತಲಿ
ಒದ್ದೆಯುಟ್ಟವ ದೇಗುಲದ ಮುಂ-
ದಿದ್ದ ಮಂಟಪದೊಳಗೆ ಹೊಕ್ಕನು
ಸದ್ದು ಬೇರೊಂದಿಲ್ಲ ಸುತ್ತಣ ಜನರು ನಿದ್ರೆಯಲಿ ||೫||

#Kumaravyasa #Kavijayanti #ಕುಮಾರವ್ಯಾಸ #ಕವಿಜಯಂತಿ
ಒರಗಿ ಕುಳಿತನು ಕಂಬವೊಂದಕೆ
ಕರದಿ ಪಿಡಿದೋಲೆಗರಿ ಕಟ್ಟನು
ಬರೆದನೈ ಹಾಡುತ್ತ ಭಾರತ ಕಥಾಮಂಜರಿಯ
ಹರಿದುದಲ್ಲೇ ಕಾವ್ಯಸುಧೆ ಸರ-
ಸರನೆ ಷಟ್ಪದಿಗಳನು ಸರಸದ-
ಲರಿವೆಯಲಿ ಪಸೆಯಿರ್ಪವರೆಗೂ ಕುಳಿತು ಬರೆದಿರ್ದ ||೬||

#Kumaravyasa #Kavijayanti #ಕುಮಾರವ್ಯಾಸ #ಕವಿಜಯಂತಿ
ಹಲಗೆ ಬಳಪವ ಪಿಡಿಯದೇ ಬಲು
ಸುಲಭದಲ್ಲಿಯೆ ಕಥೆಯ ಪೇಳ್ದನು
ಕಲುಷವಿಲ್ಲದ ತಿರುಳುಗನ್ನಡನಾಡ ನುಡಿಯಲ್ಲಿ
ಬಲು ತುರುಸಿನಲೆ ಹಬ್ಬಿತೊಸಗೆಯು
ಚೆಲುವು ಕಬ್ಬವನೊರೆವ ಕವಿಯನು
ನಿಲುಕಿ ನೋಡಲು ನಿತ್ಯ ಪುರಜನ ಸಾಲುಗಟ್ಟಿದರು ||೭||

#Kumaravyasa #Kavijayanti #ಕುಮಾರವ್ಯಾಸ #ಕವಿಜಯಂತಿ
ಮತ್ತೆ ವಾರವು ಮಾಸಗಳು ಕಳೆ
ದಿತ್ತು ಕವಿವರ ಬರೆದು ಮುಗಿಸಲು
ಹತ್ತು ಪರ್ವಗಳಲ್ಲಿ ಭಾರತ ಕಾಳಗದ ಕಥೆಯ
ಚಿತ್ತಜನ ಪಿತ ಕೃಷ್ಣ ಕಥೆಯಿ-
ನ್ನುತ್ತಮರು ಪರಿಕಿಸಲು ಮೆರೆವುದು
ಮತ್ತೆ ಉಳಿದಿರ್ದೆಂಟು ಪರ್ವದ ಗೊಡವೆ ಬೇಡೆಂದ ||೮||

#Kumaravyasa #Kavijayanti #ಕುಮಾರವ್ಯಾಸ #ಕವಿಜಯಂತಿ
ಮುನ್ನವೋದಿದ್ದವರೆ ಅರಿತಾ-
ರಿನ್ನಿವನ ಭಾರತದ ಸೊಗ ಬಲು
ಚೆನ್ನವೈ ನವರಸಗಳನು ಸವಿವಂಥ ಲೋಗರಿಗೆ
ಇನ್ನು ಭಾರತವೆಂದು ಪೇಳಲು
ಕನ್ನಡಕೆ ಮಿಗಿಲಾಯ್ತು ಕಾವ್ಯವಿ-
ದುನ್ನತವು ಕವಿಕುವರ ವ್ಯಾಸನ ಕಥಾ ಮಂಜರಿಯು ||೯||

#Kumaravyasa #Kavijayanti #ಕುಮಾರವ್ಯಾಸ #ಕವಿಜಯಂತಿ
ಚಂದವಿದು ಕರ್ನಾಟಭಾಷೆಯ
ಲೊಂದು ರತುನವು ಶಂಕೆ ಬೇಡೈ!
ಸುಂದರವು ಮನಸೂರೆಗೊಳ್ವುದು ರಸಿಕ ಬೃಂದವನು
ಸಂದರೇನೈನೂರು ವರುಷಗ-
ಳಿಂದ ಜನಮನದಲ್ಲಿ ನಿಂತಿಹು-
ದೆಂದಿಗೂ ನಿಲ್ಲುವುದು ಕುವರವ್ಯಾಸ ಭಾರತವು ||೧೦||

#Kumaravyasa #Kavijayanti #ಕುಮಾರವ್ಯಾಸ #ಕವಿಜಯಂತಿ
ಗದುಗಿನ ನಾರಣಪ್ಪ ಕವಿ ಸುಮಾರು ೧೪೩೦ರಲ್ಲಿ, ಕನ್ನಡದಲ್ಲಿ ವ್ಯಾಸಭಾರತದ ಮೊದಲ ಹತ್ತು ಪರ್ವಗಳನ್ನು ಭಾಮಿನೀ ಷಟ್ಪದಿಯಲ್ಲಿ ಅನುವಾದಿಸಿದ. ಅವನ ಮೊದಲೂ ಪಂಪರನ್ನಾದಿಗಳು ಮಹಾಭಾರತದ ಕಥೆಯನ್ನು ಕನ್ನಡಕ್ಕೆ ತಂದಿದ್ದರೂ ಕೂಡ, ನಾರಣಪ್ಪನ "ಕರ್ಣಾಟ ಭಾರತ ಕಥಾಮಂಜರಿ"ಯೇ ಕನ್ನಡದಲ್ಲಿ ಎಲ್ಲ ಭಾರತ ಕಥೆಗಳಲ್ಲೂ ಹೆಚ್ಚು ಜನಪ್ರಿಯ #Kumaravyasa #Bharata
ಇದೇಕಾರಣಕ್ಕೆ ನಾರಣಪ್ಪನಿಗೆ ಕುಮಾರವ್ಯಾಸನೆಂಬ ಹೆಸರು. ಆತ ರೂಪಾಲಂಕಾರ ವನ್ನು ಬಳಸುವುದರಲ್ಲಿ ಎತ್ತಿದ ಕೈ. ಅದಕ್ಕೇ ಅವನಿಗೆ "ರೂಪಕ ಸಾಮ್ರಾಜ್ಯ ಚಕ್ರವರ್ತಿ" ಎಂಬ ಬಿರುದೇ ಇದೆ. ಕೃಷ್ಣನ ಭಕ್ತನಾದ ಕುಮಾರವ್ಯಾಸನಿಗೆ ಮಹಾಭಾರತವು ಕೃಷ್ಣನ ಕಥೆಯೇ ಸರಿ. "ತಿಳಿಯ ಹೇಳುವೆ ಕೃಷ್ಣ ಕಥೆಯನು ಇಳೆಯ ಜಾಣರು ಮೆಚ್ಚುವಂತಿರೆ..." ಎಂದು ಅವನನ್ನುತ್ತಾನೆ.
ಕೋಳಿವಾಡ ಗ್ರಾಮದ ನಾರಣಪ್ಪ, ಗದುಗಿನ ವೀರನಾರಾಯಣನ ಗುಡಿಯಲ್ಲಿ ಕುಳಿತು ತನ್ನ ಭಾರತಕಾವ್ಯವನ್ನು ಬರೆದನೆಂಬುದು ನಂಬಿಕೆ. ಹೊಯ್ಸಳರ ಅರಸ ಬಿಟ್ಟಿಗ (ವಿಷ್ಣುವರ್ಧನ) ಸುಮಾರು ಕ್ರಿ.ಶ. ೧೧೨೦ ರ ವೇಳೆಯಲ್ಲಿ, ತಾನು ಗಂಗರ ಮೇಲೆ ಯುದ್ಧದಲ್ಲಿ ಗೆದ್ದ ನೆನಪಿಗಾಗಿ ಕಟ್ಟಿಸಿದ ಐದು ದೇವಾಲಯಗಳಲ್ಲಿ ಈ ವೀರನಾರಾಯಣನ ದೇವಾಲಯವೂ ಒಂದು. #ಕುಮಾರವ್ಯಾಸ
ನಾರಣಪ್ಪ ಪ್ರತಿದಿನ ಗದುಗಿನ ವೀರನಾರಾಯಣ ದೇವಾಲಯದ ಪುಷ್ಕರಿಣಿಯಲ್ಲಿ ಮುಳುಗೆದ್ದು, ಒದ್ದೆ ಬಟ್ಟೆಯುಟ್ಟು, ಆ ಬಟ್ಟೆ ಒಣಗುವವರೆಗೆ ಮಾತ್ರ ದೇವಾಲಯದ ಕಂಬವೊಂದಕ್ಕೊರಗಿ , ತನ್ನ ಕಾವ್ಯ ರಚಿಸಿದನೆಂದು ಪ್ರತೀತಿ. ಇದನ್ನೇ ಈಗ ಕುಮಾರವ್ಯಾಸ ಕಂಬ ಎನ್ನಲಾಗುತ್ತೆ. #Kumarvyasa #Bharata #Kannada
ಕುಮಾರವ್ಯಾಸನೇ ತನ್ನ ಬಗ್ಗೆ ಹೇಳಿಕೊಳ್ಳುವಾದ "ಹಲಗೆ ಬಳಪವ ಹಿಡಿಯದೊಂದಗ್ಗಳಿಕೆ ಪದವಿಟ್ಟಳುಪದೊಂದಗ್ಗಳಿಕೆ" ಎಂದು ಹೇಳಿಕೊಂಡಿದ್ದಾನೆ. ಅಷ್ಟು ನಂಬಿಕೆ ಅವನಿಗೆ ತನ್ನ ಸಾಮರ್ಥ್ಯದ ಮೇಲೆ! ಇವನು ತನ್ನ ಕಾವ್ಯಕ್ಕೆ ಬಳಸಿದ್ದೂ ಗದಗು ಲಕ್ಷ್ಮೇಶ್ವರಗಳ ತಿರುಳ್ಗನ್ನಡವನ್ನೇ. #Kumarvyasa #Bharata #Kannada
ಕುಮಾರವ್ಯಾಸನು ಆದಿಪರ್ವದಿಂದ ಗದಾಪರ್ವ - ಒಟ್ಟು ಹತ್ತು ಪರ್ವಗಳನ್ನು ಮಾತ್ರ ಬರೆದಿದ್ದಾನೆ. ನಂತರ ಕೃಷ್ಣ ದೇವರಾಯನ ಆಸ್ಥಾನದಲ್ಲಿದ್ದ ತಿಮ್ಮಣ್ಣಕವಿಯು ಕುಮಾರವ್ಯಾಸನು ಕೈ ಹಾಕದ ಕಡೆಯ ಎಂಟು ಪರ್ವಗಳನ್ನು ಕನ್ನಡಕ್ಕೆ ತಂದಿದ್ದಾನೆ. #Kumarvyasa #Bharata #Kannada
Kumaravyasa is said to have written his work while sitting at a pillar at the #Veeranarayana temple in #Gadag.

🙏🙏🙏
Missing some Tweet in this thread?
You can try to force a refresh.

Like this thread? Get email updates or save it to PDF!

Subscribe to ಹಂಸಾನಂದಿ हंसानन्दि Hamsanandi
Profile picture

Get real-time email alerts when new unrolls (>4 tweets) are available from this author!

This content may be removed anytime!

Twitter may remove this content at anytime, convert it as a PDF, save and print for later use!

Try unrolling a thread yourself!

how to unroll video

1) Follow Thread Reader App on Twitter so you can easily mention us!

2) Go to a Twitter thread (series of Tweets by the same owner) and mention us with a keyword "unroll" @threadreaderapp unroll

You can practice here first or read more on our help page!

Follow Us on Twitter!

Did Thread Reader help you today?

Support us! We are indie developers!


This site is made by just three indie developers on a laptop doing marketing, support and development! Read more about the story.

Become a Premium Member ($3.00/month or $30.00/year) and get exclusive features!

Become Premium

Too expensive? Make a small donation by buying us coffee ($5) or help with server cost ($10)

Donate via Paypal Become our Patreon

Thank you for your support!