, 30 tweets, 6 min read Read on Twitter
Now that Twitter has 280 character limit, and today being #PurandaraDasa #Aradhane, reposting my story of Purandara Dasa in verse form!

In here, there are no miracles happening in #Purandara's life, but the transformation very real.Story runs in 25 verses in mallikAmAla meter
I must tell that Prof SKR opines that Purandaradasa was more likely from a place called #Kshemapura in Karnataka, & not PurandaraGada in MH.

I trust people like #SKR more than anyone. So my #Purandara dasa story, begins in #Kshemapura, a town in the Malnad region of #Karnataka
ಕ್ಷೇಮಪುರದಲಿ^^ ಇದ್ದನೊಬ್ಬನು ಶ್ರೀನಿವಾಸನ ನಾಮದಿ
ಹೇಮದಾಭರಣಗಳ ಮಾಡುತ ಮಾರಿ ಗಳಿಸುತ ನೆಮ್ಮದಿ
ನಾಮಮಾತ್ರಕು ದಾನವೆಂಬುದನಾತ ಸ್ವಲ್ಪವು ನೀಡದೆ
ನೇಮದಿಂದಲಿ ದುಡ್ಡುಮಾಡುವ ದಾರಿಯೊಂದನೆ ಕಂಡನು || ೧||
ಶ್ರೀನಿವಾಸನು ಸತ್ಯದಲಿ ಬೇರೆಲ್ಲ ವಿಷಯದಿ ಯೋಗ್ಯನು ||
ಗಾನವಿದ್ಯೆಯ ಪದ್ಧತಿಯಲಿ ಸಮಾನರಾರನು ಕಾಣೆನು
ಸಾನುರಾಗದಿ ಚಿಣ್ಣರಿಗೆ ಸಂಗೀತವಿದ್ಯೆಯ ಪೇಳ್ವನು
ಕಾನುಮಲೆಯ ಕ್ಷೇಮಪುರದಲ್ಲವನೆ ಬಲುಸಿರಿವಂತನು ||೨||
ಶ್ರೀನಿವಾಸನ ಮಡದಿ ಸರಸತಿ ಸಾಧ್ವಿಯಾಕೆಯು ನಿಚ್ಚದಿ
ಮಾನಿನಿಯು ತಾನೆಂದು ಗಂಡನ ಮಾತ ಮೀರಲು ಹೋಗಳು
ತಾನು ಮಾಡಿದ ಭಾಗ್ಯ ತನ್ನಯ ಗಂಡ ಮಕ್ಕಳ ಕಾವುದು
ಏನೊ ಎಂತೋ ದೈವ ನೀಡಿದುದಲ್ಲೆ ಶಾಂತಿಯ ಕಾಂಬಳು ||೩||
ಒಂದು ಶ್ರಾವಣ ತಂಪು ಹಗಲಲಿ ಶ್ರೀನಿವಾಸನ ಮಳಿಗೆಗೆ
ಬಂದು ನಿಂತನು ವೃದ್ಧ ಬ್ರಾಹ್ಮಣನೊಬ್ಬ ಬೇಡುತ ಹಣವನು
ಕಂದ ಮೊಮ್ಮೊಗನಿಹನು ಮನೆಯಲಿ ಮಾಡಬೇಕಿದೆ ಮುಂಜಿಯ
ಒಂದು ಹೊನ್ನನು ಕೊಟ್ಟರಾಯಿತು ಧನ್ಯನಾಗುವೆ ಎಂದನು ||೪||
ಎಂದು ದಾನವ ಮಾಡದಂತಹ ಶ್ರೀನಿವಾಸನು ಯೋಚಿಸಿ
ಇಂದು ಈತನ ಸಾಗಿಹಾಕಿದರಾಯಿತೆನ್ನುತ ಭಾವಿಸಿ
ಮುಂದೆ ಬಾಗಿಲಿನಿಂದ ಆಚೆಯೆ ವೃದ್ಧನಾತನ ಕಳುಹಿಸಿ
ಬಂದು ನೋಡೆಲೆ ವಾರವಾಗಲಿ ಆಗ ಕೊಡಬಹುದೆಂದನು ||೫||
ಹೀಗೆ ವಾರವು ಮತ್ತೆ ವಾರವು ತಿಂಗಳುಗಳೇ ಸಂದವು
ಯೋಗಿಯಂದದಿ ಮುದುಕ ಹಾರುವ ಬೇಸರಿಲ್ಲದೆ ಬರುವನು
ಬಾಗಿ ನಿಲ್ಲುವ ಮತ್ತೆ ಬೇಡುತ ಒಂದು ಹೊನ್ನಿನ ಕಾಸನು
ರೇಗು ಹತ್ತಿದ ಶ್ರೀನಿವಾಸನು ಕಿಲುಬು ನಾಣ್ಯವ ಕೊಟ್ಟನು ||೬||
ಕೆಟ್ಟ ನಾಣ್ಯವ ಕೊಟ್ಟರೂ ಅವ ಕೈಯ ಮುಗಿಯುತ ಹೊರಟನು
ಕೆಟ್ಟು ಹೋಗಿರೆ ಹಣೆಯ ಬರಹವು ಹೊಣೆಯು ಯಾರದಕೆಂದನು
ಪಟ್ಟು ಬಿಡದಿರುವುದೊಳಿತೆಂದವ ಮನದಿ ಯೋಚನೆ ಮಾಡುತ
ನೆಟ್ಟ ನೇರದಿ ಹೋಗಿ ಸರಸತಿ ಮನೆಯ ಬಾಗಿಲ ಬಡಿದನು ||೭||
ತಂದೆಯಂತಿಹ ಮುದುಕ ಹೇಳಿದ ಕಥೆಯ ಸರಸತಿ ಕೇಳಿ ತಾ
ನೊಂದು ನವೆಯುತ ಏನ ತಾನೇ ಮಾಡಬಲ್ಲೇನೆಂದಿರೆ
ತಂದೆ ತಾಯಿಯು ಕೊಟ್ಟ ಮುತ್ತಿನ ನತ್ತು ನೆನಪಿಗೆ ಬಂದಿತು
ಚೆಂದವಾಗಿರುವೊಡವೆಯೊಂದಿದೆ ಕೊಳ್ಳಿರೀಗಲೆ ಎಂದಳು ||೮||
ತರುಣಿ ಕೊಟ್ಟಿಹ ಹೊಳೆವ ಮೂಗುತಿ ನೋಡಿ ಹಿಗ್ಗಿದ ಬ್ರಾಹ್ಮಣ
ಸಿರಿನಿವಾಸನ ಬಳಿಗೆ ವೇಗದಿ ಧಾವಿಸುತ್ತಲೆ ಹೋದನು
ಇರುಳ ದೀಪದ ಸೊಬಗಿನಾಮುತ್ತಿಹುದು ನನ್ನಲಿ ನೋಡಿರಿ
ಸರಿಯ ಬೆಲೆಯನು ನೀವೆ ಕಟ್ಟಿರಿ ಹಣವ ನೀಡಿರಿ ಎಂದನು ||೯||
ಹೊಳೆವ ಮೂಗುತಿ ಸೊಬಗ ನೋಡುತ ಶಂಕೆಗೊಂಡನು ನಾಯಕ
ಬೆಳಕಿನಾ ಖನಿಯಿದನು ಕಂಡಿಹೆ ಮೊದಲೆ ತಾನೆಂದೆನಿಸಲು
ಹೊಳೆಯಿತವನಿಗೆ ಮಡದಿ ಸರಸತಿ ಹಾಕಿಕೊಳ್ಳುವ ಮೂಗುತಿ
ಸೆಳೆದು ತಂದಿಹನೇನೊ ಎನ್ನುವ ಭಯವು ಕಾಡಿತು ಮನಸಲಿ ||೧೦||
ಮಡದಿ ಸರಸತಿ ಏನು ಮಾಡಿದಳೆಂದು ಅರಿಯುವ ಕಾರಣ
ಒಡನೆ ಹೊರಟನು ಬೇಗ ಮನೆಕಡೆ ಸತಿಯ ಕಾಣುವೆನೆನ್ನುತ
ಕೊಡುವೆ ಹಣವನು ಹೊರಗೆ ಕುಳ್ಳಿರು ಬೇಗ ಮರಳುವೆ ಎನ್ನುತ
ಹಿಡಿದ ನತ್ತನು ಪೆಟ್ಟಿಗೆಯಲೇ ಇಟ್ಟು ಬೀಗವ ಹಾಕಿದ || ೧೧||
ಮಳಿಗೆಯೊಳಗಡೆ ಕೋಣೆಯಲಿ ಕುಳಿತಿದ್ದ ಬಾಲಕ ಮಧ್ವಪ**
ಕುಳಿತು ಚಿತ್ರವ ಬಿಡಿಸುತಿದ್ದವ ಅಪ್ಪ ಹೋದುದ ಕಂಡನು
ಒಳಗಿನಿಂದ ಹೊರಗೆ ಬಂದು ನೋಡಿ ಮುಚ್ಚಿದ ಪೆಟ್ಟಿಗೆ
ಒಳಗೆ ನೋಡುವೆನೆಂದು ಬೀಗವ ತೆರೆಯೆ ಮೂಗುತಿ ಕಂಡಿತು ||೧೨||
ಅರರೆ ಅಮ್ಮನ ಹೊಳೆವ ಮೂಗುತಿ ಇಲ್ಲಿಗೇತಕೆ ಬಂದಿತು?
ಮುರಿದು ಹೋದುದೆ? ಸರಿಗೆ ಕಡಿದುದೆ? ಇಲ್ಲ ಬಣ್ಣವು ಕೆಟ್ಟುದೆ?
ಇರುವ ವಿಷಯವದೇನೋ ತಿಳಿಯದು ಮುದುಕನೇನಿದ ತಂದನು?
ಸರಿಯಿದನ್ನು ನೋಡಿ ತಂದೆಯದೇಕೆ ಮನೆಕಡೆ ನಡೆದನು? ||೧೩||
ಅತ್ತ ನಾಯಕ ಮನೆಗೆ ಹೋಗಿ ಬಳಿಗೆ ಮಡದಿಯ ಕರೆಯುತ
ಮುತ್ತು ಮೂಗುತಿ ಕಾಣದೆಲ್ಲಿಗೆ ಹೋಯಿತೆನ್ನುತ ಕೇಳಲು
ಎತ್ತಿ ಇಟ್ಟಿಹೆ ತಂದು ತೋರುವೆನೆಂದು ನುಡಿದೊಳಹೋದಳು;
ಇತ್ತ ಕಡೆಯಲಿ ಬಾಲಕನು ತಾ ಮನೆಕಡೆಗೆ ಭಯದಿಂದೋಡಿದ ||೧೪ ||
ನುಡಿದೆ ಹುಸಿಯನು ಗಂಡನಲಿ ನಾನೆಂತು ಮೂಗುತಿ ತೋರಲಿ?
ಬಿಡದೆ ನಿನ್ನಯ ಪಾದವೆಂದಿಗು ನಂಬಿದವಳನು ಪಾಲಿಸೋ
ಕಡುಪರೀಕ್ಷೆಯ ಸಮಯ ಬಂದಿದೆ ನೀನೆ ದಾರಿಯ ತೋರ್ವುದು
ಎಡದ ಹೂವಲಿ ಪ್ರಾಣ ನೀಗುವೆ ಬಲದಿ ಕೊಟ್ಟರೆ ಬಾಳುವೆ ||೧೫||
ಹೀಗೆ ನೆನೆಯುತ ಸರಸತಿಯು ತಾ ಹೂವನಿಟ್ಟಳು ವಿಠಲಗೆ
ಬೇಗ ಬಾರೆನ್ನುತಲಿ ಹೊರಗಡೆ ಪತಿಯು ಕೂಗುತಲಿದ್ದಿರೆ
ಆಗಬಾರದುದೇನೊ ನಡೆಯುವ ಭಯವು ಹೆಚ್ಚುತ ಹೋಗುತ
ಹೇಗೊ ದಾರಿಯ ಓಡಿ ಮುಗಿಸಿದ ಹುಡುಗ ಮನೆಬಳಿ ಬಂದನು ||೧೬||
ಹೊರಗಡೆಯಲೇ ಅಪ್ಪ ನಿಂತಿಹ ಮುಖದಲೇನೋ ಕೋಪವು
ಮರುಳುಗೆಟ್ಟನೊ? ಕನಸ ಕಂಡನೊ? ಏಕೆ ಈಪರಿ ನೋಟವು?
ಇರಲಿ ಮೊದಲಿಗೆ ತಾಯ ಕಾಣುವೆ ಮತ್ತೆ ಮೂಗುತಿ ನೀಡುವೆ
ಸರಸರನೆ ಹೀಗೆನಿಸಿ ಮಧ್ವಪ ಮನೆಯ ಪಕ್ಕದಿ ಓಡಿದ ||೧೭||
ಮುಚ್ಚಿರುವಕಂಗಳನು ಸರಸತಿ ಕೈಯ ಮುಗಿದೇ ತೆರೆಯಲು
ನಿಚ್ಚದಲಿ ಬಿದ್ದಿತ್ತು ಎಡಗಡೆಯಿಂದಲೊಂದು ಕುಸುಮವು
ಅಚ್ಚಕೆಂಪನೆ ಹೂವು ಬಿದ್ದುದ ನೋಡಿ ಕಸಿವಿಸಿಗೊಳ್ಳುತ
ಪಚ್ಚೆವಜ್ರದ ಕಿವಿಯ ಓಲೆಯ ತೆಗೆದು ಪುಡಿಪುಡಿಗೈದಳು ||೧೮||
ಹಿಂದುಗಡೆಯಲಿ ಓಡುವಾಗಲೆ ಕಿಟಕಿಯಲ್ಲೇ ಕಂಡಿತು
ಮಂಗಳದ ಕುರುಹಲ್ಲ ತಾಯಿಯ ಕಣ್ಣ ತುಂಬಿದ ಹನಿಗಳು
ನುಂಗಹೊರಟಿಹಳೇನೊ ಕಾಣದು ಬಾಲಕನು ಭಯಗೊಳ್ಳುತ
ಮುಂದಕೇನೂ ತೋರದೇ ಅವ ನತ್ತು ಕಿಟಕಿಯೊಳೆಸೆದನು ||೧೯||
ಕಣ್ಣ ಮುಚ್ಚಿ ವಿಷವ ಸೇವಿಸ ಹೊರಟ ಸರಸತಿ ಬೆಚ್ಚುತ
ಕಣ್ಣ ಬಿಟ್ಟಳು ಏನೋ ಬಿದ್ದಿರಲಾಗ ಕೈಯಲಿ ಒಮ್ಮೆಗೆ
ಕಣ್ಣನೇ ತಾ ನಂಬಲಾರಳು ಕೈಯಲಿರುವುದು ಮೂಗುತಿ
ಬಣ್ಣಗೆಟ್ಟಿಹ ಅವಳ ಮೊಗದಲಿ ಮತ್ತೆ ಮರಳಿತು ಜೀವವು ||೨೦||
ಏನು ಯೋಚಿಸದೇನೆ ಸರಸತಿ ಹೋಗಿ ಹೊರಗಡೆ ಗಂಡಗೆ
ತಾನು ಕೈಯಲಿ ಹಿಡಿದ ಮೂಗುತಿ ಮಾತನಾಡದೆ ಕೊಟ್ಟಳು
ಏನಿಹುದವಳೆಡಗೈಲಿ ಬಟ್ಟಲು ಕಿವಿಯ ವಜ್ರವು ಕಾಣದೇ
ತಾನೆ ವಿಷಯವ ಅರಿತು ಬಟ್ಟಲ ವಿಷವ ನೆಲದಲಿ ಚೆಲ್ಲಿದ ||೨೧||
ನಡೆದ ನಾಯಕ ಭರದಿ ತನ್ನಯ ಮಳಿಗೆಯಲಿರುವನ ಕಾಣಲು
ಅಡಗಿ ಹೋಗಿತ್ತವನ ಮನದಲಿ ಬೀಡು ಬಿಟ್ಟಿಹ ಕೃಪಣತೆ
ಉಡುಗಿ ಹೋಗುವುದಿತ್ತು ಒಂದೂ ತಪ್ಪುಮಾಡದ ಜೀವವು!
ಮಡದಿಗಿಂತಲು ಮಿಗಿಲು ಆಪುದೆ ಬರಿಯ ಧನಕನಕಾದಿಯು? ||೨೨||
ಶ್ರೀನಿವಾಸನು ಕಾಣಲಿಲ್ಲವು ಅಂಗಡಿಯಲಾ ಮುದುಕನ
ಏನುಮಾಡಲು ಬೇಕು ಎಂಬುದನಾಗ ಮನದಲಿ ಯೋಚಿಸಿ
ತಾನೆ ಕೂಡಲೆ ಮಾಡಿಬಿಟ್ಟನು ಮುಡಿವನೊಂದನು ಹಿರಿದನು
ದಾನ ಮಾಡುವೆ ದಾಸನಾಗುವೆ ವಿಜಯನಗರವ ಸೇರುವೆ ||೨೩||
ಮನೆಗೆ ಮರಳಿದ ಶ್ರೀನಿವಾಸನು ಮುಡಿವ ಮಡದಿಗೆ ಹೇಳಿದ
ತನಗೆ ಭಾಗ್ಯವದಾಯಿತೆನ್ನುತ ಸರಸತಿಯು ಮರು ನುಡಿದಳು
ಜನವ ಕರೆಯುತ ಸಕಲ ಸಿರಿಯನು ಅಲ್ಲೆ ದಾನವ ಮಾಡುತ
ಮನೆಮಠಗಳನು ತೊರೆದು ಹೆಂಡತಿ ಮಕ್ಕಳೊಟ್ಟಿಗೆ ಹೊರಟರು ||೨೪||
ಹೋದ ದಿನಗಳ ಮರೆತು ಬಿಟ್ಟರು ಮತ್ತೆ ದಂಡಿಗೆ~~ ಹಿಡಿದರು
ವೇದ ವೇದ್ಯನ ಭಾವ ಗಮ್ಯನ ನಾಮ ಸಾಸಿರ ನುಡಿಯುತ
ಆದರದಿ ದಾಸನೆನಿಸಿದನವ ತಳೆದು ಹೆಸರು ಪುರಂದರ
ಆದುದೆಲ್ಲಾ ಒಳಿತೆಯೆನ್ನುತ ಪಾಡಿ ರಾಮಕ್ರಿಯೆಯಲಿ*** || ೨೫||
^^: ಕ್ಷೇಮಪುರ, ಪುರಂದರಪುರವೆಂಬ ಹೆಸರಿದ್ದ ಶಿವಮೊಗ್ಗ ಜಿಲ್ಲೆಯ ಗೇರುಸೊಪ್ಪೆ. ಪುರಂದರದಾಸ (ಶ್ರೀನಿವಾಸನಾಯಕ) ಇಲ್ಲಿಂದಲೇ ಬಂದಿದ್ದಿರಬೇಕೆಂಬುದು ಬಹುಶ್ರುತ ವಿದ್ವಾಂಸರ ಅಭಿಪ್ರಾಯ

**: ಮಧ್ವಪ, ಪುರಂದರದಾಸರ ಮಗ; ಹಂಪೆಯ ಒಂದು ಶಾಸನದಲ್ಲಿ ಇವನ ಹೆಸರು ಕಂಡುಬರುತ್ತದೆ

~~: ದಂಡಿಗೆ - ತಂಬೂರಿ (ಅಥವಾ ಬೇರಾವುದಾದರೂ ತಂತೀವಾದ್ಯದ ದಂಡ)
***: ರಾಮಕ್ರಿಯೆ ಎಂಬುದೊಂದು ಪೂರ್ವಪ್ರಸಿದ್ಧ ರಾಗ. ಇದಕ್ಕೆ ಈಗ ಕಾಮವರ್ಧಿನಿ, ಪಂತುವರಾಳಿ ಎಂಬ ಹೆಸರುಗಳಿವೆ. ಪುರಂದರ ದಾಸರ 'ಆದದ್ದೆಲ್ಲ ಒಳಿತೇ ಆಯಿತು ಎಂಬ ಆತ್ಮಕಥನಾತ್ಮಕವಾದ ಪದವನ್ನು ಈ ರಾಗದಲ್ಲೇ ಹಾಡುವ ಸಂಪ್ರದಾಯವಿದೆ. #ಪುರಂದರದಾಸ #ಆರಾಧನೆ
ನನಗೆ ಬರೆಯುವಲ್ಲಿ ಅತೀ ತೃಪ್ತಿಯನ್ನೂ ಸಂತೋಷವನ್ನೂ ಕೊಟ್ಟ ಒಂದು ಬರಹವೆಂದರೆ ಈ ಪುರಂದರರಿಪ್ಪತ್ತೈದು. ನನಗೆ ಆದಷ್ಟೇ ಸಂತಸ ಓದುವ ನಿಮಗೂ ಆಗುವುದು ಎಂದು ನನ್ನ ಆಶಯ.

This is one of my writings that gave me immense happiness writing.

#Purandaradasa #Aradhane

पुरन्दरगुरुं वन्दे दासश्रेष्ठं दयानिधिं 🙏😂
Missing some Tweet in this thread?
You can try to force a refresh.

Like this thread? Get email updates or save it to PDF!

Subscribe to ಹಂಸಾನಂದಿ
Profile picture

Get real-time email alerts when new unrolls are available from this author!

This content may be removed anytime!

Twitter may remove this content at anytime, convert it as a PDF, save and print for later use!

Try unrolling a thread yourself!

how to unroll video

1) Follow Thread Reader App on Twitter so you can easily mention us!

2) Go to a Twitter thread (series of Tweets by the same owner) and mention us with a keyword "unroll" @threadreaderapp unroll

You can practice here first or read more on our help page!

Follow Us on Twitter!

Did Thread Reader help you today?

Support us! We are indie developers!


This site is made by just three indie developers on a laptop doing marketing, support and development! Read more about the story.

Become a Premium Member ($3.00/month or $30.00/year) and get exclusive features!

Become Premium

Too expensive? Make a small donation by buying us coffee ($5) or help with server cost ($10)

Donate via Paypal Become our Patreon

Thank you for your support!