, 8 tweets, 5 min read Read on Twitter
#SamasyaPooranam #ಸಮಸ್ಯಾಪೂರಣ #OldPost #ಹಳೇಸರಕು

ಸಮಸ್ಯಾಪೂರಣ ಅನ್ನುವುದೊಂದು ಪದ್ಯರಚನೆಯ ಪ್ರಕಾರ. ಸಾಮಾನ್ಯವಾಗಿ ಅರ್ಥವಿರದ, (ಅಥವಾ ವಿಪರೀತಾರ್ಥವುಳ್ಳ) ಕೊಟ್ಟ ಸಾಲನ್ನು ಬಳಸಿ, ಛಂದಸ್ಸಿಗೆ ತಕ್ಕಂತೆ ಪದ್ಯ ಬರೆಯಬೇಕಾದ್ದು ಇಲ್ಲಿನ ಕೆಲಸ.

ಉದಾ: ಈ ಸಾಲು

ತಂಗಿಯಾದಳು ಜಾನಕಿಯು ಪಾಂಚಾಲ ನಂದನೆಗೆ!

ಸೀತೆ, ದ್ರೌಪದಿಯ ತಂಗಿಯೇ?
ನನ್ನ #ಸಮಸ್ಯಾಪೂರಣ:

ಅಂಗಿತೊಟ್ಟಿರೆ ಸಿಂಗದಾ ಮರಿ
ಮಂಗವಿಕ್ಕಿರೆ ರಂಗವಲ್ಲಿಯ
ಸಂಗತಿಯು ಕೇಳ್ವುದಕೆ ಸೈ ದಿಟದಲ್ಲಿ ನಡೆಯುವುದೆ?
ಪುಂಗಿ ಬಾರಿಸಿ ಕರಿಯ ಪಳಗಿಸೆ
ಹೊಂಗೆಮರದಲ್ಲಿಂಗು ಬೆಳೆದಿರೆ
ತಂಗಿಯಾದಳು ಜಾನಕಿಯು ಪಾಂಚಾಲ ನಂದನೆಗೆ!

#ಭಾಮಿನಿ #ಷಟ್ಪದಿ (ಎಲ್ಲವೂ ನಡೆಯದ ವಿಷಯಗಳಿದ್ದರೆ, ಸೀತೆಯೂ ದ್ರೌಪದಿಯ ತಂಗಿಯಾದಾಳು ಎಂಬ ಅರ್ಥ)
ಕಾಡಿನ ಸಿಂಹದ ಮರಿ ಬಟ್ಟೆ ತೊಟ್ಟಿದೆಯೆಂದರೆ, ಮರದ ಮೇಲಿನ ಮಂಗ ರಂಗೋಲಿ ಹಾಕಿತು ಎಂದರೆ, ಇದು ತಮಾಷೆಯೆಂದು ಕೇಳಬಹುದಷ್ಟೇ! ನಿಜದಲ್ಲಿ ನಡೆಯುವುದೇನು? ಹಾವನ್ನು ಪುಂಗಿ ಊದಿ ತಲೆಆಡಿಸುವಂತೆ ಮಾಡಬಹುದೇ ಹೊರತು ಆನೆಯನ್ನು ಮಾಡಬಹುದೇ? ಹೊಂಗೆಯ ಮರದಲ್ಲಿ ಇಂಗು ಬಿಡುತ್ತದೆ ಎಂದರೆ (ಇಂಗು ಒಂದು ಸಸ್ಯದ ಬೇರಿಂದ ಬರುವುದು), ಸೀತೆಯೂ ದ್ರೌಪದಿಯ ತಂಗಿ😂
Here is one more #SamasyaPoorana in #Bhamini #Shatpadi

ಸರವ ಕಾಲಿಗೆ ತೊಡಿಸಿ ಪೋದನು ಒಲವಿನಲಿ ದುರುಳ

(Literally: The wicked one, tied my hands with a chain, will all his love) 😂

The solution follows:
ಧರಣಿ ತೊಯ್ದಿರೆ ಮಳೆಯ ರಭಸಕೆ
ಹರಿದಿರಲು ಕೆನ್ನೀರ ಧಾರೆ ಕೆ-
ಸರನು ತುಂಬಿರೆ ಹಾದಿ ಬೀದಿಗೆ ಹೆಜ್ಜೆಯಿಡದಂತೆ
ಹೊರಡಲಾರದೆ ಮಾರುಕಟ್ಟೆಗೆ
ತರುಣಿ ಬೈದಳು ಮಳೆಗೆ "ಕಡು ಬೇ
ಸರವ ಕಾಲಿಗೆ ತೊಡಿಸಿ ಪೋದನು, ಒಲವಿನಲಿ, ದುರುಳ!"

#ಸಮಸ್ಯಾಪೂರಣ #ಭಾಮಿನಿ #ಷಟ್ಪದಿ
For a #SamasyaPoorana, it's common to have multiple ಪೂರಣs. In an ashtavadhana, there're at least 2-because along with the avadhAni, the person who asks the question would have his own solution anyway. For the same line ಸರವ ಕಾಲಿಗೆ ತೊಡಿಸಿ ಪೋದನು, ಒಲವಿನಲಿ, ದುರುಳ, I wrote another too.
ಸುರರ ನಂದನದಿಂದ ಪಾರಿಜ
ತರುವ ಭಾಮೆಯು ತಂದು ಬೆಳಸಿರೆ
ತಿರೆಯನಿನ್ನೂ ತನ್ನ ಮನೆಯೆಂದೆನುತ ಕಾಣದೆಯೇ
ಕೊರಗಿ ತುಸುವೇ ಗಾಳಿಯಲಿ ಹೂ-
ಸುರಿಸಿ ನುಡಿವುದು "ತಂಬೆಲರು ಪೂ
ಸರವ ಕಾಲಿಗೆ ತೊಡಿಸಿ ಪೋದನು, ಒಲವಿನಲಿ ದುರುಳ!"
ಪಾರಿಜಾತವನ್ನು ನಂದನದಿಂದ ಕೃಷ್ಣ ಸತ್ಯಭಾಮೆಗೆಂದು ತಂದುಕೊಟ್ಟಿದ್ದೇನೋ ನಿಜ - ಆದರದಿನ್ನೂ ಭೂಮಿಗೆ ಹೊಂದಿಕೊಳ್ಳಲೇ ಇಲ್ಲ. ಅದಕ್ಕೇ ತುಸುವೇ ಗಾಳಿಗೇ, ಹೂಗಳನ್ನುದುರಿಸಿ, ಒಳ್ಳೇ ಮಾತಿನಲ್ಲೇ ತಂಗಾಳಿಯನ್ನು ನಿಂದಿಸುತ್ತದೆ ಎಂಬ ಭಾವ.

#Bhamini #Shatapdi #SamasyaPoorna
Missing some Tweet in this thread?
You can try to force a refresh.

Like this thread? Get email updates or save it to PDF!

Subscribe to ಹಂಸಾನಂದಿ
Profile picture

Get real-time email alerts when new unrolls are available from this author!

This content may be removed anytime!

Twitter may remove this content at anytime, convert it as a PDF, save and print for later use!

Try unrolling a thread yourself!

how to unroll video

1) Follow Thread Reader App on Twitter so you can easily mention us!

2) Go to a Twitter thread (series of Tweets by the same owner) and mention us with a keyword "unroll" @threadreaderapp unroll

You can practice here first or read more on our help page!

Follow Us on Twitter!

Did Thread Reader help you today?

Support us! We are indie developers!


This site is made by just three indie developers on a laptop doing marketing, support and development! Read more about the story.

Become a Premium Member ($3.00/month or $30.00/year) and get exclusive features!

Become Premium

Too expensive? Make a small donation by buying us coffee ($5) or help with server cost ($10)

Donate via Paypal Become our Patreon

Thank you for your support!