#ಶ್ರೀಮಂತ_ದೇಶದ_ಬಡವನಕಥೆ

ಒಂದು ಊರಿನಲ್ಲಿ ಒಬ್ಬ ಬಡವನಿದ್ದ. ಅವನ ಬಳಿ ಅರ್ಧ ಎಕರೆ ಜಮೀನು ಇತ್ತು. ಅವನಿಗೆ ಎರಡು ಗಂಡುಮಕ್ಕಳು + ಒಬ್ಬಳು ಮಗಳು ಇದ್ದರು.

ಅವನ ಬಳಿ ಬಿ ಪಿ ಎಲ್ ಕಾರ್ಡ ಇದ್ದ ಕಾರಣ ಅವನ ಮಕ್ಕಳಿಗೆ ಉಚಿತ ಶಿಕ್ಷಣ ದೊರೆಯಿತು.

ಮಗಳಿಗೆ ಭಾಗ್ಯಲಕ್ಷ್ಮೀ ಬಾಂಡ್ ದೊರೆಯಿತು.
ಗಂಡು ಮಕ್ಕಳಿಬ್ಬರೂ ಚೆನ್ನಾಗಿ ಓದಿ ಸರಕಾರಿ ನೌಕರಿ
ಪಡೆದರು. ಆದರೂ ಬಡವನ ‌ಬಿಪಿಎಲ್ ಹಾಗೇ ಉಳಿಯಿತು.

ಹಿರಿಯ ಮಗನಿಗೆ ಸರಕಾರಿ ನೌಕರಿ ಇರುವ ಸೊಸೆಯನ್ನೇ ತರಲಾಯಿತು.ಮಗ ತನ್ನ ಪಡಿತರ ಚೀಟಿ ಬೇರೆ ಮಾಡಿಕೊಂಡ.

ಬಡವನ ಬಿ ಪಿ ಎಲ್ ಹಾಗೇ ಉಳಿಯಿತು.
ಮಗ ಸೊಸೆ ಮನೆಗೊಂದು ಕಾರು ಖರೀದಿಸಿ ತಂದರು. ಮಗನ ಹೊಸಕಾರಿನಲ್ಲಿ ಬಡವ, ಅವನ ಹೆಂಡತಿ ಹಾಗೂ ಬಡವನ ವೃದ್ಧ ವಿಧವೆಯೂ ಆದ ತಾಯಿ ಸಂತೋಷದಿಂದ ಸುತ್ತಾಡಿದರು.
ಬಡವನ ಬಿ ಪಿ ಎಲ್ ಕಾರ್ಡ ಹಾಗೇ ಮುಂದುವರೆಯಿತು.

ಬಡವನ ಎರಡನೇ ಮಗನಿಗೆ ಮದುವೆಯಾಯಿತು.ಆಗರ್ಭ ಶ್ರೀಮಂತ ಮನೆಯ, ಸರ್ಕಾರಿ ನೌಕರಿ ಇರುವ ಹೆಣ್ಣನ್ನು ಆತ ಮದುವೆಯಾದ. ಒಂದು ವರ್ಷದ ಒಳಗಡೆ ಆತ ತನ್ನ ರೇಷನ್ ಕಾರ್ಡ ಬೇರೆಮಾಡಿಕೊಂಡ.
ಬಡವನ ಬಿ ಪಿ ಎಲ್ ಕಾರ್ಡ ಹಾಗೇ ಮುಂದುವರೆಯಿತು.

ಬಡವ ತನ್ನ ಹಳೆಯ ಮನೆಯನ್ನು ಮರು ನಿರ್ಮಿಸಲು ನಿರ್ಧರಿಸಿದ.
ಉಚಿತವಾಗಿ ಮಾಡಿಸಿದ.

ಬಡವ ಸಹಕಾರಿ ಸಂಘದಲ್ಲಿ ಸಾಲಮಾಡಿದ್ದ. ಸರ್ಕಾರದ ಸಾಲಮನ್ನಾ ಯೋಜನೆಯಡಿ ಸಂಪೂರ್ಣ ಹೊರೆಕಡಿಮೆ ಮಾಡಿಸಿಕೊಂಡ.

ಸರಕಾರದ ಕಿಸಾನ್ ಸಮ್ಮಾನ್ ಯೋಜನೆ ಅಡಿ ಆತನ ಖಾತೆ ವರ್ಷಕ್ಕೆ ಆರುಸಾವಿರ ಹಣ ಸಂದಾಯ ಆಗತೊಡಗಿತು ಆತನಿಗೆ ಅಪಾರ ಖುಷಿ ಆಯಿತು.

ಇಷ್ಟರ ನಡುವೆ ಬಡವನ ದೇಶದಲ್ಲಿ ಕೊರಾನಾ ಖಾಯಿಲೆ ಕಾಣಿಸಿಕೊಂಡಿತು. ಸರಕಾರ ಸಂಪೂರ್ಣ
ಲಾಕ್ ಡೌನ್ ಘೋಷಿಸಿತು. ಬಡವನ ಮಗ ಸೊಸೆಯಂದಿರು ಮನೆಯಲ್ಲಿಯೇ ರಜೆ ಅನುಭವಿಸಿದರು. ಒಂದು ದಿನ ಸರಕಾರ ಕೊರಾನಾ ಸಂಕಷ್ಟದ ಅಡಿ ಬಡವರಿಗೆ ಸವಲತ್ತುಗಳನ್ನು ಘೋಷಿಸಿತು.

ಬಡವನ ಖಾತೆಗೆ ಎರಡು ಸಾವಿರ ಹಣ ಬಂತು. ಆತನ ವಿಧವೆತಾಯಿಯ ಖಾತೆಗೂ ಹಣ ಬಂತು.
ಬಡವನ ಹೆಂಡತಿ ಉಜ್ವಲ ಯೋಜನೆಯಡಿ ಅನಿಲಸೌಲಭ್ಯ ಹೊಂದಿರುವ ಕಾರಣ ಮೂರು ಗ್ಯಾಸ್ ಸಿಲಿಂಡರ್ ಉಚಿತವಾಗಿ
ದೊರೆಯಿತು. ಬಡವನ ಮಗ ಒಂದು ಸಿಲಿಂಡರ್ ಗ್ಯಾಸ್ ತನ್ನ ಕಾರಿಗೂ ತುಂಬಿಸಿಕೊಂಡ.

ಬಡವ ಹಾಗೂ ಬಡವನ ಹೆಂಡತಿ ಜನಧನ್ ಖಾತೆ ಮಾಡಿಸಿದ್ದರಿಂದ ಅವರ ಖಾತೆಗ ಸರಕಾರದ ಸಹಾಯಧನ ಜಮಾ ಆಯಿತು.
ಆತನ ಹೆಂಡತಿಯ ಸ್ವಸಹಾಯ ಸಂಘಕ್ಕೆ ಆ ವರ್ಷ ಇಪ್ಪತ್ತು ಲಕ್ಷ ಸಾಲ ದೊರೆಯಿತು. ಅವಳು ಅದರ ಸಂಪೂರ್ಣ ಪ್ರಯೋಜನ ಪಡೆದುಕೊಂಡಳು.

ಆಹಾರ ಭದ್ರತಾ ಯೋಜನೆಯಡಿ ಸರ್ಕಾರ
ಬಡವನಿಗೆ ಉಚಿತವಾಗಿ ಅಕ್ಕಿ, ಬೇಳೆ, ಸಕ್ಕರೆಯನ್ನು ನೀಡಿತು.

ಬಡವನ ಸಂಸಾರ ಕೊರಾನಾ ಸಂಕಷ್ಟದದಲ್ಲೂ ಸುಖವಾಗಿ ಬಾಳಿತು.

ಬಡವನ ಬಿಪಿಎಲ್ ಕಾರ್ಡ ಎಲ್ಲವನ್ನೂ ಮೂಕವಾಗಿ ನೋಡುತ್ತಾ ವಿಷಾದ ವ್ಯಕ್ತಪಡಿಸುತ್ತಿತ್ತು.

ಲೇಖಕರು : ಚಿದಾನಂದ ಭಂಡಾರಿ ಕಾಗಾಲ.
ಶಿಕ್ಷಕರು ಹಾಗೂ ಕರ್ನಾಟಕ ರಾಜ್ಯ ಕೊಂಕಣಿ ಸಾಹಿತ್ಯ ಅಕಾಡಮಿ ಸದಸ್ಯರು.

• • •

Missing some Tweet in this thread? You can try to force a refresh
 

Keep Current with ದೇಶಭಕ್ತ Nagaraju_KR 🇮🇳

ದೇಶಭಕ್ತ Nagaraju_KR 🇮🇳 Profile picture

Stay in touch and get notified when new unrolls are available from this author!

Read all threads

This Thread may be Removed Anytime!

PDF

Twitter may remove this content at anytime! Save it as PDF for later use!

Try unrolling a thread yourself!

how to unroll video
  1. Follow @ThreadReaderApp to mention us!

  2. From a Twitter thread mention us with a keyword "unroll"
@threadreaderapp unroll

Practice here first or read more on our help page!

More from @nagaraju_kr

26 Dec
ಪತ್ನಿಯನ್ನು ಟೀಕಿಸುವ ಪತಿ ಇದನ್ನು ಓದಬೇಕು ಪತಿಗೆ ಪತ್ನಿ ಹೇಗೆ ಪ್ರೇರಣೆ ಮಾಡ್ತಾರೆ 👇ಓದಿ

ಆ ಕಾಲದಲ್ಲಿ ಸಂಜೆ ಹೆಂಡತಿ ಜತೆ ವಾಕಿಂಗ್ ಹೋಗುವುದೂ ಒಂದು ಸಂಪ್ರದಾಯವಾಗಿತ್ತು. ಬೀChi ಕೂಡ ವಾಕಿಂಗ್‌ಗೆ ಹೊರಟಿದ್ದರು. ಹಾಗೆ ಹೋಗುತ್ತಿರುವಾಗ ಮಾರ್ಗ ಮಧ್ಯದಲ್ಲಿ ಕಂಡ ಹುಬ್ಬಳ್ಳಿಯ ಕೊಪ್ಪಿಕರ್ ರಸ್ತೆಯಲ್ಲಿರುವ ‘ಸಾಹಿತ್ಯ ಭಂಡಾರ’ದತ್ತ ಕೈತೋರಿ
“ಇದೇ ನನ್ನ ಆಫೀಸು, ಈ ಪುಸ್ತಕದಂಗಡಿಯಲ್ಲಿಯೇ ನಾನು ಹೆಚ್ಚು ಕಾಲ ಕಳೆಯುತ್ತೇನೆ” ಎಂದು ಹೆಂಡತಿಗೆ ಹೇಳುತ್ತಾರೆ.
ಸರಕಾರಿ ಗುಮಾಸ್ತರಾಗಿದ್ದ ಬೀಚಿಯವರು ಸಂಜೆ ಕಳೆಯುತ್ತಿದ್ದುದೇ ಸಾಹಿತ್ಯ ಭಂಡಾರದಲ್ಲಿ. ಬೀಚಿಯವರ ಮಾತು ಕೇಳಿಸಿಕೊಂಡ ಅವರ ಪತ್ನಿ “ಅಲ್ಲಿ ಯಾವ ಪುಸ್ತಕಗಳಿವೆ? ತೆಲುಗು ಪುಸ್ತಕಗಳಿವೆಯೇ?” ಎಂದು ಕೇಳುತ್ತಾರೆ. “ಇದು ಹುಬ್ಬಳ್ಳಿ”
ಎಂದು ನಗುತ್ತಾ ಹೇಳಿದ ಬೀಚಿ, “ಸುಡುಗಾಡು ಕನ್ನಡ ಪುಸ್ತಕ ಮಾರತಾರ” ಎಂದರು. ಇಂಗ್ಲಿಷ್ ಸಾಹಿತ್ಯದಿಂದ ಬಹುವಾಗಿ ಪ್ರಭಾವಿತರಾಗಿದ್ದ ಅವರು, ಕನ್ನಡ ಪುಸ್ತಕಗಳನ್ನು ಕಣ್ಣೆತ್ತಿಯೂ ನೋಡಿದವರಲ್ಲ.
ಅಂದು ಬೀಚಿಯವರು ‘ಸಾಹಿತ್ಯ ಭಂಡಾರ’ದ ಬಗ್ಗೆ ಹೇಳಿದ್ದನ್ನು ನೆನಪಿಟ್ಟುಕೊಂಡಿದ್ದ ಅವರ ಹೆಂಡತಿ, “ಮಧ್ಯಾಹ್ನ ಕಳೆಯುವುದೇ ಕಷ್ಟವಾಗುತ್ತಿದೆ.
Read 13 tweets
22 Jan
ಒಬ್ಬ ಮೌಲ್ವಿ ಜೊತೆ ನನ್ನ ಮಾತುಕತೆ.

ನಾನು -ಮೌಲ್ವಿ ಸಾಬ್ರೆ, ನಿಮ್ಮ ಪ್ರಕಾರ ಜನ್ನತ್ಗೆ (ಸ್ವರ್ಗಕ್ಕೆ) ಯಾರು ಹೋಗ್ತಾರೆ ?

ಮೌಲ್ವಿ - ಮುಸಲ್ಮಾನರು ಮಾತ್ರ.

ನಾನು - ಮಸಲ್ಮಾನರಲ್ಲಿ ಯಾರು? ಸುನ್ನಿ ಪಂಗಡದವರ ಅಥವ ಶಿಯಾ ಪಂಗಡದವರ?

ಮೌಲ್ವಿ - ಬೆಷಕ್ (ನಿಶ್ಚಿತವಾಗಿಯೂ) ಸುನ್ನಿ ಪಂಗಡದವರು.
ನಾನು - ಸುನ್ನಿಯಲ್ಲಿ ಯಾವ ಜಾತಿಯವರು? ಮುಕ್ಕಲಿದ್ ಜಾತಿಯವರ ಅಥವ ಗೆರ್-ಮುಕ್ಕಲಿದ್ ಜಾತಿಯವರ?

ಮೌಲ್ವಿ - ಮುಕ್ಕಲಿದ್ ಮಾತ್ರ

ನಾನು - ಮೌಲ್ವಿ ಸಾಬ್ರೆ, ಮುಕ್ಕಲಿದ್ ನಲ್ಲೂ ನಾಲ್ಕು ಉಪಜಾತಿಗಳಿವೆಯಲ್ಲ, ಅವುಗಳಲ್ಲಿ ಯಾವುದು?

ಮೌಲ್ವಿ - ಹನ್ನಫಿಗಳು.

ನಾನು - ಸರಿ, ಆದರೆ ಹನ್ನಫಿಯಲ್ಲೂ ದೇವಬಂದಿ ಮತ್ತು ಬರೆಲ್ವಿ ಎಂಬ ಉಪ ಜಾತಿಗಳಿವೆಯಲ್ಲ,
ಅವರಲ್ಲಿ ಯಾರು ನಿಮ್ಮ ಜನ್ನತ್ ಗೆ ಹೋಗೂದು?

ಮೌಲ್ವಿ - ದೇವಬಂದಿ.

ನಾನು - ಸರಿ, ಆದರೆ ದೇವಬಂದಿಯಲ್ಲಿಯೂ ಸಹ ಹಯಾತಿ ಮಮಾತಿ ಎಂಬ ಎರಡು ಉಪ ಜಾತಿಗಳಿವೆಯಲ್ಲ, ಅವರಲ್ಲಿ ಯಾರು?

ಇಷ್ಟು ಕೇಳಿದ ನಂತರ ಆ ಮೌಲ್ವಿ ತನ್ನ ಪಾರ್ಶ್ವಭಾಗ ಕೆರೆದುಕೊಳ್ಳುತ್ತ ಮಂಗ ಮಾಯವಾಗಿ ಹೋಗಿದ್ದ.
ಇದುವರೆಗೂ ಆತನ ಸುಳಿವೇ ಇಲ್ಲ.
Read 4 tweets

Did Thread Reader help you today?

Support us! We are indie developers!


This site is made by just two indie developers on a laptop doing marketing, support and development! Read more about the story.

Become a Premium Member ($3/month or $30/year) and get exclusive features!

Become Premium

Too expensive? Make a small donation by buying us coffee ($5) or help with server cost ($10)

Donate via Paypal Become our Patreon

Thank you for your support!

Follow Us on Twitter!