ಪತ್ನಿಯನ್ನು ಟೀಕಿಸುವ ಪತಿ ಇದನ್ನು ಓದಬೇಕು ಪತಿಗೆ ಪತ್ನಿ ಹೇಗೆ ಪ್ರೇರಣೆ ಮಾಡ್ತಾರೆ 👇ಓದಿ

ಆ ಕಾಲದಲ್ಲಿ ಸಂಜೆ ಹೆಂಡತಿ ಜತೆ ವಾಕಿಂಗ್ ಹೋಗುವುದೂ ಒಂದು ಸಂಪ್ರದಾಯವಾಗಿತ್ತು. ಬೀChi ಕೂಡ ವಾಕಿಂಗ್‌ಗೆ ಹೊರಟಿದ್ದರು. ಹಾಗೆ ಹೋಗುತ್ತಿರುವಾಗ ಮಾರ್ಗ ಮಧ್ಯದಲ್ಲಿ ಕಂಡ ಹುಬ್ಬಳ್ಳಿಯ ಕೊಪ್ಪಿಕರ್ ರಸ್ತೆಯಲ್ಲಿರುವ ‘ಸಾಹಿತ್ಯ ಭಂಡಾರ’ದತ್ತ ಕೈತೋರಿ
“ಇದೇ ನನ್ನ ಆಫೀಸು, ಈ ಪುಸ್ತಕದಂಗಡಿಯಲ್ಲಿಯೇ ನಾನು ಹೆಚ್ಚು ಕಾಲ ಕಳೆಯುತ್ತೇನೆ” ಎಂದು ಹೆಂಡತಿಗೆ ಹೇಳುತ್ತಾರೆ.
ಸರಕಾರಿ ಗುಮಾಸ್ತರಾಗಿದ್ದ ಬೀಚಿಯವರು ಸಂಜೆ ಕಳೆಯುತ್ತಿದ್ದುದೇ ಸಾಹಿತ್ಯ ಭಂಡಾರದಲ್ಲಿ. ಬೀಚಿಯವರ ಮಾತು ಕೇಳಿಸಿಕೊಂಡ ಅವರ ಪತ್ನಿ “ಅಲ್ಲಿ ಯಾವ ಪುಸ್ತಕಗಳಿವೆ? ತೆಲುಗು ಪುಸ್ತಕಗಳಿವೆಯೇ?” ಎಂದು ಕೇಳುತ್ತಾರೆ. “ಇದು ಹುಬ್ಬಳ್ಳಿ”
ಎಂದು ನಗುತ್ತಾ ಹೇಳಿದ ಬೀಚಿ, “ಸುಡುಗಾಡು ಕನ್ನಡ ಪುಸ್ತಕ ಮಾರತಾರ” ಎಂದರು. ಇಂಗ್ಲಿಷ್ ಸಾಹಿತ್ಯದಿಂದ ಬಹುವಾಗಿ ಪ್ರಭಾವಿತರಾಗಿದ್ದ ಅವರು, ಕನ್ನಡ ಪುಸ್ತಕಗಳನ್ನು ಕಣ್ಣೆತ್ತಿಯೂ ನೋಡಿದವರಲ್ಲ.
ಅಂದು ಬೀಚಿಯವರು ‘ಸಾಹಿತ್ಯ ಭಂಡಾರ’ದ ಬಗ್ಗೆ ಹೇಳಿದ್ದನ್ನು ನೆನಪಿಟ್ಟುಕೊಂಡಿದ್ದ ಅವರ ಹೆಂಡತಿ, “ಮಧ್ಯಾಹ್ನ ಕಳೆಯುವುದೇ ಕಷ್ಟವಾಗುತ್ತಿದೆ.
ಯಾವುದಾದರೂ ಕನ್ನಡ ಪುಸ್ತಕ ತಂದುಕೊಡಿ” ಎಂದು ಒಂದು ದಿನ ಗಂಡನನ್ನು ಕೇಳಿದರು. ಎಂದಿನಂತೆ ಮರುದಿನ ಸಂಜೆ ಸಾಹಿತ್ಯ ಭಂಡಾರಕ್ಕೆ ಬಂದ ಬೀಚಿ, “ಯಾವುದಾದರೂ ಕನ್ನಡದ ಕಥೆ ಪುಸ್ತಕ ಕೊಡಿ. ನನ್ನ ಹೆಂಡತಿ ಪೀಡಿಸುತ್ತಿದ್ದಾಳೆ. ಓದಿಯಾದ ಮೇಲೆ ತಂದುಕೊಡುತ್ತೇನೆ” ಎಂದು ಸಾಹಿತ್ಯ ಭಂಡಾರ ಸ್ಥಾಪಕರೂ ಹಾಗೂ ಮಾಲೀಕರೂ ಆಗಿದ್ದ ಗೋವಿಂದರಾಯರನ್ನು ಕೇಳಿದರು.
ಸೌಜನ್ಯಕ್ಕೆ ಹೆಸರಾಗಿದ್ದ ಗೋವಿಂದರಾಯರು ನಗು ನಗುತ್ತಲೇ ಕಪಾಟದಿಂದ ಪುಸ್ತಕವೊಂದನ್ನು ಹೊರತೆಗೆದು ಕವರ್‌ಗೆ ಹಾಕಿಕೊಟ್ಟರು. ಬೀಚಿ ಯವರು ಅದನ್ನು ಬಿಡಿಸಿಯೂ ನೋಡಲಿಲ್ಲ. “ಅಂಚೆ ಜವಾನನ ಕೆಲಸ ಮಾಡಿದೆ” ಎಂದು ಅವರೇ ತಮ್ಮ ‘ಭಯಾಗ್ರಫಿ”ಯಲ್ಲಿ ಹೇಳಿಕೊಂಡಿದ್ದಾರೆ. ಹೆಂಡತಿಗೆ ಪುಸ್ತಕ ತಂದುಕೊಟ್ಟು, ತಲೆನೋವು ತಪ್ಪಿತು ಎಂದು ಸುಮ್ಮನಾದರು. ಆದರೆ
ಮರುದಿನ ಮಧ್ಯಾಹ್ನ ಊಟಕ್ಕೆಂದು ಕಚೇರಿಯಿಂದ ಮನೆಗೆ ಹೋದರೆ ಪುಸ್ತಕವನ್ನು ಕೈಯಲ್ಲಿ ಹಿಡಿದುಕೊಂಡಿದ್ದ ಅವರ ಪತ್ನಿ ಬಿಕ್ಕಳಿಸಿ ಅಳುತ್ತಿದ್ದಾರೆ! ಆಶ್ಚರ್ಯಚಕಿತರಾದ ಬೀಚಿ, “ಕನ್ನಡ ಓದಲಿಕ್ಕೆ ಬರುತ್ತಿಲ್ಲ ಅಂತ ಅಳುತ್ತಿದ್ದೀಯೇನು?” ಎಂದು ಕೇಳಿದರು. ಬಳ್ಳಾರಿ ಜಿಲ್ಲೆಯಲ್ಲಿ ಹುಟ್ಟಿ, ಬೆಳೆದಿದ್ದ ಆಕೆಗೆ ಕನ್ನಡ ಓದುವುದಕ್ಕೆ ಕಷ್ಟವಾಗುತ್ತಿದೆ
ಎಂಬುದು ಬೀಚಿಯವರ ಊಹೆಯಾಗಿತ್ತು. ಆದರೆ “ಕನ್ನಡ ಮತ್ತು ತೆಲುಗು ಲಿಪಿಗಳಲ್ಲಿ ಯಾವ ಮಹಾಭೇದವಿದೆ? ಒಂದರ ಲಿಪಿಯನ್ನು ತಿಳಿದವರು ಎರಡನ್ನೂ ಓದಬಹುದು” ಎಂದು ಕಣ್ಣೊರೆಸಿಕೊಳ್ಳುತ್ತಾ ಹೇಳಿದ ಆಕೆ, “ಪುಸ್ತಕ ಬಹಳ ಚೆನ್ನಾಗಿದೆ. ಇದನ್ನೊಮ್ಮೆ ನೀವೂ ಓದಬೇಕು” ಎಂದರು! ಇದ್ಯಾವ ಗ್ರಹಚಾರ ಎಂದುಕೊಂಡ ಬೀಚಿ, “ನೀನಂತೂ ಓದಿ ಮುಗಿಸು” ಎಂದು ಊಟಕ್ಕೆ ಅಣಿ
ಯಾದರು. ಇತ್ತ ಪುಸ್ತಕವನ್ನು ಓದಿ ಮುಗಿಸಿದ ಕೂಡಲೇ ಕಾಟ ಶುರುವಿಟ್ಟುಕೊಂಡರು ಪತ್ನಿ. ‘ಒಮ್ಮೆ ನೀವೂ ಓದಿ’ ಎಂದು ಗಂಡನ ದುಂಬಾಲು ಬಿದ್ದರು. ಮದುವೆಯಾದವನು ಎಂತಹ ತ್ಯಾಗಗಳಿಗೂ ಸಿದ್ಧನಾಗಬೇಕು” ಎಂದುಕೊಂಡ ಬೀಚಿ, ಪತ್ನಿಯ ಮಾತಿಗೆ ತಲೆಯಾಡಿಸಿದರು.
ಮರುದಿನ ರೈಲು ಪ್ರಯಾಣವಿತ್ತು.
ಆದರೆ ರೈಲಿನಲ್ಲಿ ಕನ್ನಡ ಪುಸ್ತಕ ಓದಿದರೆ ಮಾನ ಉಳಿಯುವುದಿಲ್ಲ.
ಕನ್ನಡ ಪುಸ್ತಕ ಓದುತ್ತಿರುವುದನ್ನು ನೋಡಿ, ಯಾರಾದರೂ ಬೀಡಿ ಕೇಳಿದರೆ ಏನು ಗತಿ? ಎಂದುಕೊಂಡ ಬೀಚಿ, ‘ಇಲಸ್ಟ್ರೇಟೆಡ್ ವೀಕ್ಲಿ’ ಮ್ಯಾಗಝಿನ್‌ನೊಳಗೆ ಪುಸ್ತಕವನ್ನಿಟ್ಟುಕೊಂಡು ಓದಲಾರಂಭಿಸಿದರು. ಆರಂಭ ಮಾಡಿದ್ದಷ್ಟೇ ಗೊತ್ತು, ಕಣ್ಣುಗಳು ಅದೆಷ್ಟು ಬಾರಿ ಜಿನುಗಿದ್ದವೋ ಗೊತ್ತಿಲ್ಲ! ‘ಕನ್ನಡದಲ್ಲೂ ಒಳ್ಳೆಯ ಬರಹಗಾರರಿದ್ದಾರೆ ಎಂಬುದು ಅರಿವಾಯಿತು. ಆ
ಶುಭಮುಹೂರ್ತದಲ್ಲಿ ಕನ್ನಡದಲ್ಲಿ ದೀಕ್ಷೆ ಸ್ವೀಕರಿಸಿದೆ’ ಎನ್ನುತ್ತಾರೆ ಬೀಚಿ.
ರೈಲಿನಲ್ಲಿ ಅವರು ಓದಿದ್ದು ಅನಕೃ ಅವರ ‘ಸಂಧ್ಯಾರಾಗ”!
ಆ ಘಟನೆ ಬೀಚಿಯವರ ಮೇಲೆ ಎಷ್ಟು ಪ್ರಭಾವ ಬೀರಿತೆಂದರೆ ಅನಕೃ ಅವರ ಪರಿಚಯ ಬಯಸಿ ಹೊರಟರು. ಕನ್ನಡ ಸಾರಸ್ವತ ಲೋಕಕ್ಕೆ ಕಾಲಿಟ್ಟರು, ಅವರನ್ನು ಪತ್ರಿಕೋದ್ಯಮವೂ ಆಕರ್ಷಿಸದೇ ಬಿಡಲಿಲ್ಲ. ಆ ಕಾಲದಲ್ಲಿ
ಪಾಟೀಲ ಪುಟ್ಟಪ್ಪನವರ “ವಿಶಾಲ ಕರ್ನಾಟಕ” ಉತ್ತರ ಕರ್ನಾಟಕದ ಒಂದು ಜನಪ್ರಿಯ ಪತ್ರಿಕೆಯಾಗಿತ್ತು. ಹೊಸ ಪ್ರತಿಭೆಗಳಿಗಾಗಿ ತಡಕಾಡುತ್ತಿದ್ದ ಪಾಟೀಲ ಪುಟ್ಟಪ್ಪನವರಿಗೆ ಕಂಡಿದ್ದು ಬೀಚಿ. ಅವರ ಒತ್ತಾಯಕ್ಕೆ ಮಣಿದ ಬೀಚಿಯವರು ಒಂದು ಅಂಕಣ ಶುರುಮಾಡಿದ್ದರು. “ಕೆನೆ ಮೊಸರು” ಎಂಬ ಹೆಸರಿನ ಅಂಕಣದಲ್ಲಿ ಸಕಾಲಿಕ ವಿಷಯ ಗಳ ಬಗ್ಗೆ ಬರೆಯುತ್ತಿದ್ದ ಬೀಚಿ,
ಲೇಖನದ ಕೊನೆಯಲ್ಲಿ ಒಂದು ಜೋಕು ಬರೆಯುತ್ತಿದ್ದರು. ಆ ಜೋಕು ಎಷ್ಟು ಜನಪ್ರಿಯತೆ ಪಡೆಯಿತೆಂದರೆ ಒಮ್ಮೆ ಬೀಚಿಯವರು ಏಕಾಏಕಿ ಅಂಕಣ ಬರೆಯುವುದನ್ನು ನಿಲ್ಲಿಸಿದಾಗ, ಓದುಗರ ಪತ್ರಗಳು ಕಚೇರಿಗೆ ದಾಳಿಯಿಟ್ಟವು. ಸಂಪಾದಕರಾಗಿದ್ದ ಪಾಪು, ‘ಕೆನೆ ಮೊಸರು’ ಹೆಸರಿನಡಿ ಬೀಚಿಯವರ ಫೋಟೋ ಹಾಕಿ, “ಹುಡುಕಿ ಕೊಡಿ” ಎಂದು ಪ್ರಕಟಿಸಿ ಬಿಟ್ಟರು! ಕಚೇರಿಗೆ ಓಡಿಬಂದ
ಬೀಚಿ, ಇನ್ನು ಮುಂದೆ ತಪ್ಪದೆ ಅಂಕಣ ಬರೆಯುವುದಾಗಿ ವಾಗ್ದಾನ ಮಾಡಿದರು. ಅವರು ಲೇಖನದ ಕೊನೆಯಲ್ಲಿ ಬರೆಯುತ್ತಿದ್ದ ಜೋಕುಗಳ ಸಂಗ್ರಹವೇ “ತಿಂಮನ ತಲೆ”. ೧೯೫೦ರಲ್ಲಿ ಮೊದಲ ಮುದ್ರಣ ಕಂಡು ಮೂವತ್ತಕ್ಕೂ ಹೆಚ್ಚು ಮರುಮುದ್ರಣಗಳನ್ನು ಕಂಡಿದೆ. ಅಷ್ಟೇ ಅಲ್ಲ, ಇಂದಿಗೂ ಕನ್ನಡ ಸಾರಸ್ವತ ಲೋಕದಲ್ಲಿ ಅಂತಹ ಅದ್ಭುತ ಜೋಕುಗಳನ್ನು ಕಾಣಲು ಸಾಧ್ಯವಿಲ್ಲ

• • •

Missing some Tweet in this thread? You can try to force a refresh
 

Keep Current with ದೇಶಭಕ್ತ Nagaraju_KR 🇮🇳

ದೇಶಭಕ್ತ Nagaraju_KR 🇮🇳 Profile picture

Stay in touch and get notified when new unrolls are available from this author!

Read all threads

This Thread may be Removed Anytime!

PDF

Twitter may remove this content at anytime! Save it as PDF for later use!

Try unrolling a thread yourself!

how to unroll video
  1. Follow @ThreadReaderApp to mention us!

  2. From a Twitter thread mention us with a keyword "unroll"
@threadreaderapp unroll

Practice here first or read more on our help page!

More from @nagaraju_kr

25 Dec
#ಶ್ರೀಮಂತ_ದೇಶದ_ಬಡವನಕಥೆ

ಒಂದು ಊರಿನಲ್ಲಿ ಒಬ್ಬ ಬಡವನಿದ್ದ. ಅವನ ಬಳಿ ಅರ್ಧ ಎಕರೆ ಜಮೀನು ಇತ್ತು. ಅವನಿಗೆ ಎರಡು ಗಂಡುಮಕ್ಕಳು + ಒಬ್ಬಳು ಮಗಳು ಇದ್ದರು.

ಅವನ ಬಳಿ ಬಿ ಪಿ ಎಲ್ ಕಾರ್ಡ ಇದ್ದ ಕಾರಣ ಅವನ ಮಕ್ಕಳಿಗೆ ಉಚಿತ ಶಿಕ್ಷಣ ದೊರೆಯಿತು.

ಮಗಳಿಗೆ ಭಾಗ್ಯಲಕ್ಷ್ಮೀ ಬಾಂಡ್ ದೊರೆಯಿತು.
ಗಂಡು ಮಕ್ಕಳಿಬ್ಬರೂ ಚೆನ್ನಾಗಿ ಓದಿ ಸರಕಾರಿ ನೌಕರಿ
ಪಡೆದರು. ಆದರೂ ಬಡವನ ‌ಬಿಪಿಎಲ್ ಹಾಗೇ ಉಳಿಯಿತು.

ಹಿರಿಯ ಮಗನಿಗೆ ಸರಕಾರಿ ನೌಕರಿ ಇರುವ ಸೊಸೆಯನ್ನೇ ತರಲಾಯಿತು.ಮಗ ತನ್ನ ಪಡಿತರ ಚೀಟಿ ಬೇರೆ ಮಾಡಿಕೊಂಡ.

ಬಡವನ ಬಿ ಪಿ ಎಲ್ ಹಾಗೇ ಉಳಿಯಿತು.
ಮಗ ಸೊಸೆ ಮನೆಗೊಂದು ಕಾರು ಖರೀದಿಸಿ ತಂದರು. ಮಗನ ಹೊಸಕಾರಿನಲ್ಲಿ ಬಡವ, ಅವನ ಹೆಂಡತಿ ಹಾಗೂ ಬಡವನ ವೃದ್ಧ ವಿಧವೆಯೂ ಆದ ತಾಯಿ ಸಂತೋಷದಿಂದ ಸುತ್ತಾಡಿದರು.
ಬಡವನ ಬಿ ಪಿ ಎಲ್ ಕಾರ್ಡ ಹಾಗೇ ಮುಂದುವರೆಯಿತು.

ಬಡವನ ಎರಡನೇ ಮಗನಿಗೆ ಮದುವೆಯಾಯಿತು.ಆಗರ್ಭ ಶ್ರೀಮಂತ ಮನೆಯ, ಸರ್ಕಾರಿ ನೌಕರಿ ಇರುವ ಹೆಣ್ಣನ್ನು ಆತ ಮದುವೆಯಾದ. ಒಂದು ವರ್ಷದ ಒಳಗಡೆ ಆತ ತನ್ನ ರೇಷನ್ ಕಾರ್ಡ ಬೇರೆಮಾಡಿಕೊಂಡ.
ಬಡವನ ಬಿ ಪಿ ಎಲ್ ಕಾರ್ಡ ಹಾಗೇ ಮುಂದುವರೆಯಿತು.

ಬಡವ ತನ್ನ ಹಳೆಯ ಮನೆಯನ್ನು ಮರು ನಿರ್ಮಿಸಲು ನಿರ್ಧರಿಸಿದ.
Read 7 tweets
22 Jan
ಒಬ್ಬ ಮೌಲ್ವಿ ಜೊತೆ ನನ್ನ ಮಾತುಕತೆ.

ನಾನು -ಮೌಲ್ವಿ ಸಾಬ್ರೆ, ನಿಮ್ಮ ಪ್ರಕಾರ ಜನ್ನತ್ಗೆ (ಸ್ವರ್ಗಕ್ಕೆ) ಯಾರು ಹೋಗ್ತಾರೆ ?

ಮೌಲ್ವಿ - ಮುಸಲ್ಮಾನರು ಮಾತ್ರ.

ನಾನು - ಮಸಲ್ಮಾನರಲ್ಲಿ ಯಾರು? ಸುನ್ನಿ ಪಂಗಡದವರ ಅಥವ ಶಿಯಾ ಪಂಗಡದವರ?

ಮೌಲ್ವಿ - ಬೆಷಕ್ (ನಿಶ್ಚಿತವಾಗಿಯೂ) ಸುನ್ನಿ ಪಂಗಡದವರು.
ನಾನು - ಸುನ್ನಿಯಲ್ಲಿ ಯಾವ ಜಾತಿಯವರು? ಮುಕ್ಕಲಿದ್ ಜಾತಿಯವರ ಅಥವ ಗೆರ್-ಮುಕ್ಕಲಿದ್ ಜಾತಿಯವರ?

ಮೌಲ್ವಿ - ಮುಕ್ಕಲಿದ್ ಮಾತ್ರ

ನಾನು - ಮೌಲ್ವಿ ಸಾಬ್ರೆ, ಮುಕ್ಕಲಿದ್ ನಲ್ಲೂ ನಾಲ್ಕು ಉಪಜಾತಿಗಳಿವೆಯಲ್ಲ, ಅವುಗಳಲ್ಲಿ ಯಾವುದು?

ಮೌಲ್ವಿ - ಹನ್ನಫಿಗಳು.

ನಾನು - ಸರಿ, ಆದರೆ ಹನ್ನಫಿಯಲ್ಲೂ ದೇವಬಂದಿ ಮತ್ತು ಬರೆಲ್ವಿ ಎಂಬ ಉಪ ಜಾತಿಗಳಿವೆಯಲ್ಲ,
ಅವರಲ್ಲಿ ಯಾರು ನಿಮ್ಮ ಜನ್ನತ್ ಗೆ ಹೋಗೂದು?

ಮೌಲ್ವಿ - ದೇವಬಂದಿ.

ನಾನು - ಸರಿ, ಆದರೆ ದೇವಬಂದಿಯಲ್ಲಿಯೂ ಸಹ ಹಯಾತಿ ಮಮಾತಿ ಎಂಬ ಎರಡು ಉಪ ಜಾತಿಗಳಿವೆಯಲ್ಲ, ಅವರಲ್ಲಿ ಯಾರು?

ಇಷ್ಟು ಕೇಳಿದ ನಂತರ ಆ ಮೌಲ್ವಿ ತನ್ನ ಪಾರ್ಶ್ವಭಾಗ ಕೆರೆದುಕೊಳ್ಳುತ್ತ ಮಂಗ ಮಾಯವಾಗಿ ಹೋಗಿದ್ದ.
ಇದುವರೆಗೂ ಆತನ ಸುಳಿವೇ ಇಲ್ಲ.
Read 4 tweets

Did Thread Reader help you today?

Support us! We are indie developers!


This site is made by just two indie developers on a laptop doing marketing, support and development! Read more about the story.

Become a Premium Member ($3/month or $30/year) and get exclusive features!

Become Premium

Too expensive? Make a small donation by buying us coffee ($5) or help with server cost ($10)

Donate via Paypal Become our Patreon

Thank you for your support!

Follow Us on Twitter!