ಬಸ್ಸಿನಿಂದ ಇಳಿದು ಜೇಬಿನೊಳಗೆ ಕೈ
ಹಾಕಿದೆ
ನಾನು ಅವಕ್ಕಾದೆ
ಜೇಬು ಹರಿದಿತ್ತು
ಅಂದ ಹಾಗೆ
ಜೇಬಿನಲ್ಲಿ ಏನಿತ್ತು ?
ಒಟ್ಟು 90 ರೂಪಾಯಿಗಳು
ಮತ್ತೆ ಒಂದು ಪತ್ರ
ಅದು ನಾನು
ತಾಯಿಗೆ ಬರೆದದ್ದು
ಏನೆಂದರೆ ........
ನನ್ನ ಕೆಲಸ ಹೋಗಿದೆ
ಈಗ ಹಣ ಕಳುಹಿಸಲಾರೆ
ಮೂರು ದಿನಗಳಿಂದ ಆ ಪೋಷ್ಟ್ ಕಾರ್ಡ್
ಜೇಬಿನಲ್ಲಿಯೇ ಇತ್ತು
ಫೋಷ್ಟ್ ಮಾಡಲು ಮನಸ್ಸೇ
ಬರುತ್ತಿರಲಿಲ್ಲ...
90 ರೂಪಾಯಿಗಳು ಕಳೆದು ಹೋಗಿತ್ತು ಅದರೊಂದಿಗೆ
ಆ ಪೋಸ್ಟ್ ಕಾರ್ಡ್ ಕೂಡಾ ಅಂದಹಾಗೆ 90 ರೂಪಾಯಿಗಳು ಏನುಬಹಳ ದೊಡ್ಡ ಮೊತ್ತವಾಗಿರಲಿಲ್ಲ
ಆದರೆ ಯಾರ ಕೆಲಸ ಹೋಗಿತ್ತೋ
ಅವರಿಗೆ 90 ರೂಪಾಯಿಗಳು
ಒಂಬೈನೂರಕ್ಕಿಂತ ಕಡಿಮೆ ಏನಲ್ಲ
ಸ್ವಲ್ಪ ದಿನಗಳು ಕಳೆದಿತ್ತು
ತಾಯಿಯವರಿಂದ ಪತ್ರ ಬಂತು
ಓದುವ ಸಂಯಮ ನಶಿಸಿತು
ಖಂಡಿತ ಹಣ ಕಳುಹಿಸಲು ಬರೆದಿರಬೇಕು ...
ಆದರೆ,
ಪತ್ರ ಓದಿ
ನಾನು ಮೂಕ ವಿಸ್ಮಿತನಾದೆ
ತಾಯಿಯವರು ಬರೆದಿದ್ದರು...
ಮಗ,
ನಿನ್ನ
1000/- ರೂಪಾಯಿಗಳ
ಮನಿ ಆರ್ಡರ್ ಸಿಕ್ಕಿದೆ
ನೀನು ಎಷ್ಟೊಂದು ಒಳ್ಳೆಯವನು
ಹಣ ಕಳುಹಿಸುವ ವಿಷಯದಲ್ಲಿ
ಅಜಾಗ್ರತೆ ಮಾಡುವುದಿಲ್ಲ.
ನಾನು ಅದೇ ಆಲೋಚನೆಯಲ್ಲಿದ್ದೆ..
ಪತ್ನಿಯನ್ನು ಟೀಕಿಸುವ ಪತಿ ಇದನ್ನು ಓದಬೇಕು ಪತಿಗೆ ಪತ್ನಿ ಹೇಗೆ ಪ್ರೇರಣೆ ಮಾಡ್ತಾರೆ 👇ಓದಿ
ಆ ಕಾಲದಲ್ಲಿ ಸಂಜೆ ಹೆಂಡತಿ ಜತೆ ವಾಕಿಂಗ್ ಹೋಗುವುದೂ ಒಂದು ಸಂಪ್ರದಾಯವಾಗಿತ್ತು. ಬೀChi ಕೂಡ ವಾಕಿಂಗ್ಗೆ ಹೊರಟಿದ್ದರು. ಹಾಗೆ ಹೋಗುತ್ತಿರುವಾಗ ಮಾರ್ಗ ಮಧ್ಯದಲ್ಲಿ ಕಂಡ ಹುಬ್ಬಳ್ಳಿಯ ಕೊಪ್ಪಿಕರ್ ರಸ್ತೆಯಲ್ಲಿರುವ ‘ಸಾಹಿತ್ಯ ಭಂಡಾರ’ದತ್ತ ಕೈತೋರಿ
“ಇದೇ ನನ್ನ ಆಫೀಸು, ಈ ಪುಸ್ತಕದಂಗಡಿಯಲ್ಲಿಯೇ ನಾನು ಹೆಚ್ಚು ಕಾಲ ಕಳೆಯುತ್ತೇನೆ” ಎಂದು ಹೆಂಡತಿಗೆ ಹೇಳುತ್ತಾರೆ.
ಸರಕಾರಿ ಗುಮಾಸ್ತರಾಗಿದ್ದ ಬೀಚಿಯವರು ಸಂಜೆ ಕಳೆಯುತ್ತಿದ್ದುದೇ ಸಾಹಿತ್ಯ ಭಂಡಾರದಲ್ಲಿ. ಬೀಚಿಯವರ ಮಾತು ಕೇಳಿಸಿಕೊಂಡ ಅವರ ಪತ್ನಿ “ಅಲ್ಲಿ ಯಾವ ಪುಸ್ತಕಗಳಿವೆ? ತೆಲುಗು ಪುಸ್ತಕಗಳಿವೆಯೇ?” ಎಂದು ಕೇಳುತ್ತಾರೆ. “ಇದು ಹುಬ್ಬಳ್ಳಿ”
ಎಂದು ನಗುತ್ತಾ ಹೇಳಿದ ಬೀಚಿ, “ಸುಡುಗಾಡು ಕನ್ನಡ ಪುಸ್ತಕ ಮಾರತಾರ” ಎಂದರು. ಇಂಗ್ಲಿಷ್ ಸಾಹಿತ್ಯದಿಂದ ಬಹುವಾಗಿ ಪ್ರಭಾವಿತರಾಗಿದ್ದ ಅವರು, ಕನ್ನಡ ಪುಸ್ತಕಗಳನ್ನು ಕಣ್ಣೆತ್ತಿಯೂ ನೋಡಿದವರಲ್ಲ.
ಅಂದು ಬೀಚಿಯವರು ‘ಸಾಹಿತ್ಯ ಭಂಡಾರ’ದ ಬಗ್ಗೆ ಹೇಳಿದ್ದನ್ನು ನೆನಪಿಟ್ಟುಕೊಂಡಿದ್ದ ಅವರ ಹೆಂಡತಿ, “ಮಧ್ಯಾಹ್ನ ಕಳೆಯುವುದೇ ಕಷ್ಟವಾಗುತ್ತಿದೆ.
ಒಂದು ಊರಿನಲ್ಲಿ ಒಬ್ಬ ಬಡವನಿದ್ದ. ಅವನ ಬಳಿ ಅರ್ಧ ಎಕರೆ ಜಮೀನು ಇತ್ತು. ಅವನಿಗೆ ಎರಡು ಗಂಡುಮಕ್ಕಳು + ಒಬ್ಬಳು ಮಗಳು ಇದ್ದರು.
ಅವನ ಬಳಿ ಬಿ ಪಿ ಎಲ್ ಕಾರ್ಡ ಇದ್ದ ಕಾರಣ ಅವನ ಮಕ್ಕಳಿಗೆ ಉಚಿತ ಶಿಕ್ಷಣ ದೊರೆಯಿತು.
ಮಗಳಿಗೆ ಭಾಗ್ಯಲಕ್ಷ್ಮೀ ಬಾಂಡ್ ದೊರೆಯಿತು.
ಗಂಡು ಮಕ್ಕಳಿಬ್ಬರೂ ಚೆನ್ನಾಗಿ ಓದಿ ಸರಕಾರಿ ನೌಕರಿ
ಪಡೆದರು. ಆದರೂ ಬಡವನ ಬಿಪಿಎಲ್ ಹಾಗೇ ಉಳಿಯಿತು.
ಹಿರಿಯ ಮಗನಿಗೆ ಸರಕಾರಿ ನೌಕರಿ ಇರುವ ಸೊಸೆಯನ್ನೇ ತರಲಾಯಿತು.ಮಗ ತನ್ನ ಪಡಿತರ ಚೀಟಿ ಬೇರೆ ಮಾಡಿಕೊಂಡ.
ಬಡವನ ಬಿ ಪಿ ಎಲ್ ಹಾಗೇ ಉಳಿಯಿತು.
ಮಗ ಸೊಸೆ ಮನೆಗೊಂದು ಕಾರು ಖರೀದಿಸಿ ತಂದರು. ಮಗನ ಹೊಸಕಾರಿನಲ್ಲಿ ಬಡವ, ಅವನ ಹೆಂಡತಿ ಹಾಗೂ ಬಡವನ ವೃದ್ಧ ವಿಧವೆಯೂ ಆದ ತಾಯಿ ಸಂತೋಷದಿಂದ ಸುತ್ತಾಡಿದರು.
ಬಡವನ ಬಿ ಪಿ ಎಲ್ ಕಾರ್ಡ ಹಾಗೇ ಮುಂದುವರೆಯಿತು.
ಬಡವನ ಎರಡನೇ ಮಗನಿಗೆ ಮದುವೆಯಾಯಿತು.ಆಗರ್ಭ ಶ್ರೀಮಂತ ಮನೆಯ, ಸರ್ಕಾರಿ ನೌಕರಿ ಇರುವ ಹೆಣ್ಣನ್ನು ಆತ ಮದುವೆಯಾದ. ಒಂದು ವರ್ಷದ ಒಳಗಡೆ ಆತ ತನ್ನ ರೇಷನ್ ಕಾರ್ಡ ಬೇರೆಮಾಡಿಕೊಂಡ.
ಬಡವನ ಬಿ ಪಿ ಎಲ್ ಕಾರ್ಡ ಹಾಗೇ ಮುಂದುವರೆಯಿತು.