👌 ಒಬ್ಬ ಜೇಬುಗಳ್ಳನ ಕಥೆ👌

ಬಸ್ಸಿನಿಂದ ಇಳಿದು ಜೇಬಿನೊಳಗೆ ಕೈ
ಹಾಕಿದೆ
ನಾನು ಅವಕ್ಕಾದೆ
ಜೇಬು ಹರಿದಿತ್ತು
ಅಂದ ಹಾಗೆ
ಜೇಬಿನಲ್ಲಿ ಏನಿತ್ತು ?
ಒಟ್ಟು 90 ರೂಪಾಯಿಗಳು
ಮತ್ತೆ ಒಂದು ಪತ್ರ
ಅದು ನಾನು
ತಾಯಿಗೆ ಬರೆದದ್ದು
ಏನೆಂದರೆ ........
ನನ್ನ ಕೆಲಸ ಹೋಗಿದೆ
ಈಗ ಹಣ ಕಳುಹಿಸಲಾರೆ
ಮೂರು ದಿನಗಳಿಂದ ಆ ಪೋಷ್ಟ್ ಕಾರ್ಡ್
ಜೇಬಿನಲ್ಲಿಯೇ ಇತ್ತು
ಫೋಷ್ಟ್ ಮಾಡಲು ಮನಸ್ಸೇ
ಬರುತ್ತಿರಲಿಲ್ಲ...

90 ರೂಪಾಯಿಗಳು ಕಳೆದು ಹೋಗಿತ್ತು ಅದರೊಂದಿಗೆ
ಆ ಪೋಸ್ಟ್ ಕಾರ್ಡ್ ಕೂಡಾ ಅಂದಹಾಗೆ 90 ರೂಪಾಯಿಗಳು ಏನುಬಹಳ ದೊಡ್ಡ ಮೊತ್ತವಾಗಿರಲಿಲ್ಲ
ಆದರೆ ಯಾರ ಕೆಲಸ ಹೋಗಿತ್ತೋ
ಅವರಿಗೆ 90 ರೂಪಾಯಿಗಳು
ಒಂಬೈನೂರಕ್ಕಿಂತ ಕಡಿಮೆ ಏನಲ್ಲ
ಸ್ವಲ್ಪ ದಿನಗಳು ಕಳೆದಿತ್ತು
ತಾಯಿಯವರಿಂದ ಪತ್ರ ಬಂತು
ಓದುವ ಸಂಯಮ ನಶಿಸಿತು
ಖಂಡಿತ ಹಣ ಕಳುಹಿಸಲು ಬರೆದಿರಬೇಕು ...
ಆದರೆ,
ಪತ್ರ ಓದಿ
ನಾನು ಮೂಕ ವಿಸ್ಮಿತನಾದೆ
ತಾಯಿಯವರು ಬರೆದಿದ್ದರು...
ಮಗ,
ನಿನ್ನ
1000/- ರೂಪಾಯಿಗಳ
ಮನಿ ಆರ್ಡರ್ ಸಿಕ್ಕಿದೆ
ನೀನು ಎಷ್ಟೊಂದು ಒಳ್ಳೆಯವನು
ಹಣ ಕಳುಹಿಸುವ ವಿಷಯದಲ್ಲಿ
ಅಜಾಗ್ರತೆ ಮಾಡುವುದಿಲ್ಲ.
ನಾನು ಅದೇ ಆಲೋಚನೆಯಲ್ಲಿದ್ದೆ..

ಕಡೆಗೂ ನನ್ನ ತಾಯಿಗೆ ಮನಿ ಆರ್ಡರ್ ಯಾರು ಮಾಡಿರಬಹುದು?
ಸ್ವಲ್ಪ ದಿನಗಳ ತರುವಾಯ
ಇನ್ನೊಂದು ಪತ್ರ ಬಂತು..
ಕೆಲವೊಂದು ವಾಕ್ಯಗಳಿದ್ದವು
ಕಾಗೆ ಕಾಲಿನ ಲಿಪಿ
ಬಹಳ ಶ್ರಮವಹಿಸಿ ಪತ್ರ ಓದಿದೆ
ಬರೆದಿತ್ತು .. ಸಹೋದರ
90 ರೂಪಾಯಿಗಳು ನಿನ್ನದು
ಮತ್ತೆ 910 ರೂಪಾಯಿಗಳು ನನ್ನ ವತಿಯಿಂದ ಒಟ್ಟು ಮಾಡಿ ನಾನು
ನಿನ್ನ ತಾಯಿಯವರಿಗೆ ಮನಿ ಆರ್ಡರ್ ಕಳುಹಿಸಿದೆ ಚಿಂತಿಸಬೇಡ
"ತಾಯಿ" ಎಲ್ಲರಿಗೂ ಒಂದೇ ಅಲ್ಲವೇನು ?
ಅವಳು ಏಕೆ ಉಪವಾಸ ಇರಬೇಕು. ಯಾವ ತಾಯಿಯೂ ಹಸಿವಿನಿಂದ ಇರಬಾರದು..

ಇಂತಿ ನಿನ್ನ
#ಜೇಬುಕಳ್ಳ

(ಬರೆದವ:- ಅನಾಮಿಕ ಕವಿ.)

• • •

Missing some Tweet in this thread? You can try to force a refresh
 

Keep Current with Nagaraju_KR 🇮🇳

Nagaraju_KR 🇮🇳 Profile picture

Stay in touch and get notified when new unrolls are available from this author!

Read all threads

This Thread may be Removed Anytime!

PDF

Twitter may remove this content at anytime! Save it as PDF for later use!

Try unrolling a thread yourself!

how to unroll video
  1. Follow @ThreadReaderApp to mention us!

  2. From a Twitter thread mention us with a keyword "unroll"
@threadreaderapp unroll

Practice here first or read more on our help page!

More from @nagaraju_kr

21 Feb
Friends

Today Tata Motors has declared prices for its Electric Car Nexon EV.

It starts at 13.99 Lakhs.

On one charge of 30 KWH (units) it can go over 300 km. Which means 10 km on one unit. Which comes to 70 paise per km.

Electric cars are 5 times more efficient than Petrol
or Diesel cars.

8 years / 1,60,000 km warranty on Battery.

Subsidy of @ 3L for business buyers in Gujarat.

Income tax waiver of @1.5 L for individual buyers/depreciation

Additional state subsidy of 1L in Maharashtra. Road tax and RTO fee waiver in Maharashtra.
Install 6 kW of Solar and you get free power for full charge, i.e., 300 km of free and clean fuel every Sunny Day!

No gears, no smoke, almost no noise, less maintenance !

Great acceleration and speed too.

Anyone considering buying a new car should check it out
Read 4 tweets
26 Dec 20
ಪತ್ನಿಯನ್ನು ಟೀಕಿಸುವ ಪತಿ ಇದನ್ನು ಓದಬೇಕು ಪತಿಗೆ ಪತ್ನಿ ಹೇಗೆ ಪ್ರೇರಣೆ ಮಾಡ್ತಾರೆ 👇ಓದಿ

ಆ ಕಾಲದಲ್ಲಿ ಸಂಜೆ ಹೆಂಡತಿ ಜತೆ ವಾಕಿಂಗ್ ಹೋಗುವುದೂ ಒಂದು ಸಂಪ್ರದಾಯವಾಗಿತ್ತು. ಬೀChi ಕೂಡ ವಾಕಿಂಗ್‌ಗೆ ಹೊರಟಿದ್ದರು. ಹಾಗೆ ಹೋಗುತ್ತಿರುವಾಗ ಮಾರ್ಗ ಮಧ್ಯದಲ್ಲಿ ಕಂಡ ಹುಬ್ಬಳ್ಳಿಯ ಕೊಪ್ಪಿಕರ್ ರಸ್ತೆಯಲ್ಲಿರುವ ‘ಸಾಹಿತ್ಯ ಭಂಡಾರ’ದತ್ತ ಕೈತೋರಿ
“ಇದೇ ನನ್ನ ಆಫೀಸು, ಈ ಪುಸ್ತಕದಂಗಡಿಯಲ್ಲಿಯೇ ನಾನು ಹೆಚ್ಚು ಕಾಲ ಕಳೆಯುತ್ತೇನೆ” ಎಂದು ಹೆಂಡತಿಗೆ ಹೇಳುತ್ತಾರೆ.
ಸರಕಾರಿ ಗುಮಾಸ್ತರಾಗಿದ್ದ ಬೀಚಿಯವರು ಸಂಜೆ ಕಳೆಯುತ್ತಿದ್ದುದೇ ಸಾಹಿತ್ಯ ಭಂಡಾರದಲ್ಲಿ. ಬೀಚಿಯವರ ಮಾತು ಕೇಳಿಸಿಕೊಂಡ ಅವರ ಪತ್ನಿ “ಅಲ್ಲಿ ಯಾವ ಪುಸ್ತಕಗಳಿವೆ? ತೆಲುಗು ಪುಸ್ತಕಗಳಿವೆಯೇ?” ಎಂದು ಕೇಳುತ್ತಾರೆ. “ಇದು ಹುಬ್ಬಳ್ಳಿ”
ಎಂದು ನಗುತ್ತಾ ಹೇಳಿದ ಬೀಚಿ, “ಸುಡುಗಾಡು ಕನ್ನಡ ಪುಸ್ತಕ ಮಾರತಾರ” ಎಂದರು. ಇಂಗ್ಲಿಷ್ ಸಾಹಿತ್ಯದಿಂದ ಬಹುವಾಗಿ ಪ್ರಭಾವಿತರಾಗಿದ್ದ ಅವರು, ಕನ್ನಡ ಪುಸ್ತಕಗಳನ್ನು ಕಣ್ಣೆತ್ತಿಯೂ ನೋಡಿದವರಲ್ಲ.
ಅಂದು ಬೀಚಿಯವರು ‘ಸಾಹಿತ್ಯ ಭಂಡಾರ’ದ ಬಗ್ಗೆ ಹೇಳಿದ್ದನ್ನು ನೆನಪಿಟ್ಟುಕೊಂಡಿದ್ದ ಅವರ ಹೆಂಡತಿ, “ಮಧ್ಯಾಹ್ನ ಕಳೆಯುವುದೇ ಕಷ್ಟವಾಗುತ್ತಿದೆ.
Read 13 tweets
25 Dec 20
#ಶ್ರೀಮಂತ_ದೇಶದ_ಬಡವನಕಥೆ

ಒಂದು ಊರಿನಲ್ಲಿ ಒಬ್ಬ ಬಡವನಿದ್ದ. ಅವನ ಬಳಿ ಅರ್ಧ ಎಕರೆ ಜಮೀನು ಇತ್ತು. ಅವನಿಗೆ ಎರಡು ಗಂಡುಮಕ್ಕಳು + ಒಬ್ಬಳು ಮಗಳು ಇದ್ದರು.

ಅವನ ಬಳಿ ಬಿ ಪಿ ಎಲ್ ಕಾರ್ಡ ಇದ್ದ ಕಾರಣ ಅವನ ಮಕ್ಕಳಿಗೆ ಉಚಿತ ಶಿಕ್ಷಣ ದೊರೆಯಿತು.

ಮಗಳಿಗೆ ಭಾಗ್ಯಲಕ್ಷ್ಮೀ ಬಾಂಡ್ ದೊರೆಯಿತು.
ಗಂಡು ಮಕ್ಕಳಿಬ್ಬರೂ ಚೆನ್ನಾಗಿ ಓದಿ ಸರಕಾರಿ ನೌಕರಿ
ಪಡೆದರು. ಆದರೂ ಬಡವನ ‌ಬಿಪಿಎಲ್ ಹಾಗೇ ಉಳಿಯಿತು.

ಹಿರಿಯ ಮಗನಿಗೆ ಸರಕಾರಿ ನೌಕರಿ ಇರುವ ಸೊಸೆಯನ್ನೇ ತರಲಾಯಿತು.ಮಗ ತನ್ನ ಪಡಿತರ ಚೀಟಿ ಬೇರೆ ಮಾಡಿಕೊಂಡ.

ಬಡವನ ಬಿ ಪಿ ಎಲ್ ಹಾಗೇ ಉಳಿಯಿತು.
ಮಗ ಸೊಸೆ ಮನೆಗೊಂದು ಕಾರು ಖರೀದಿಸಿ ತಂದರು. ಮಗನ ಹೊಸಕಾರಿನಲ್ಲಿ ಬಡವ, ಅವನ ಹೆಂಡತಿ ಹಾಗೂ ಬಡವನ ವೃದ್ಧ ವಿಧವೆಯೂ ಆದ ತಾಯಿ ಸಂತೋಷದಿಂದ ಸುತ್ತಾಡಿದರು.
ಬಡವನ ಬಿ ಪಿ ಎಲ್ ಕಾರ್ಡ ಹಾಗೇ ಮುಂದುವರೆಯಿತು.

ಬಡವನ ಎರಡನೇ ಮಗನಿಗೆ ಮದುವೆಯಾಯಿತು.ಆಗರ್ಭ ಶ್ರೀಮಂತ ಮನೆಯ, ಸರ್ಕಾರಿ ನೌಕರಿ ಇರುವ ಹೆಣ್ಣನ್ನು ಆತ ಮದುವೆಯಾದ. ಒಂದು ವರ್ಷದ ಒಳಗಡೆ ಆತ ತನ್ನ ರೇಷನ್ ಕಾರ್ಡ ಬೇರೆಮಾಡಿಕೊಂಡ.
ಬಡವನ ಬಿ ಪಿ ಎಲ್ ಕಾರ್ಡ ಹಾಗೇ ಮುಂದುವರೆಯಿತು.

ಬಡವ ತನ್ನ ಹಳೆಯ ಮನೆಯನ್ನು ಮರು ನಿರ್ಮಿಸಲು ನಿರ್ಧರಿಸಿದ.
Read 7 tweets
22 Jan 20
ಒಬ್ಬ ಮೌಲ್ವಿ ಜೊತೆ ನನ್ನ ಮಾತುಕತೆ.

ನಾನು -ಮೌಲ್ವಿ ಸಾಬ್ರೆ, ನಿಮ್ಮ ಪ್ರಕಾರ ಜನ್ನತ್ಗೆ (ಸ್ವರ್ಗಕ್ಕೆ) ಯಾರು ಹೋಗ್ತಾರೆ ?

ಮೌಲ್ವಿ - ಮುಸಲ್ಮಾನರು ಮಾತ್ರ.

ನಾನು - ಮಸಲ್ಮಾನರಲ್ಲಿ ಯಾರು? ಸುನ್ನಿ ಪಂಗಡದವರ ಅಥವ ಶಿಯಾ ಪಂಗಡದವರ?

ಮೌಲ್ವಿ - ಬೆಷಕ್ (ನಿಶ್ಚಿತವಾಗಿಯೂ) ಸುನ್ನಿ ಪಂಗಡದವರು.
ನಾನು - ಸುನ್ನಿಯಲ್ಲಿ ಯಾವ ಜಾತಿಯವರು? ಮುಕ್ಕಲಿದ್ ಜಾತಿಯವರ ಅಥವ ಗೆರ್-ಮುಕ್ಕಲಿದ್ ಜಾತಿಯವರ?

ಮೌಲ್ವಿ - ಮುಕ್ಕಲಿದ್ ಮಾತ್ರ

ನಾನು - ಮೌಲ್ವಿ ಸಾಬ್ರೆ, ಮುಕ್ಕಲಿದ್ ನಲ್ಲೂ ನಾಲ್ಕು ಉಪಜಾತಿಗಳಿವೆಯಲ್ಲ, ಅವುಗಳಲ್ಲಿ ಯಾವುದು?

ಮೌಲ್ವಿ - ಹನ್ನಫಿಗಳು.

ನಾನು - ಸರಿ, ಆದರೆ ಹನ್ನಫಿಯಲ್ಲೂ ದೇವಬಂದಿ ಮತ್ತು ಬರೆಲ್ವಿ ಎಂಬ ಉಪ ಜಾತಿಗಳಿವೆಯಲ್ಲ,
ಅವರಲ್ಲಿ ಯಾರು ನಿಮ್ಮ ಜನ್ನತ್ ಗೆ ಹೋಗೂದು?

ಮೌಲ್ವಿ - ದೇವಬಂದಿ.

ನಾನು - ಸರಿ, ಆದರೆ ದೇವಬಂದಿಯಲ್ಲಿಯೂ ಸಹ ಹಯಾತಿ ಮಮಾತಿ ಎಂಬ ಎರಡು ಉಪ ಜಾತಿಗಳಿವೆಯಲ್ಲ, ಅವರಲ್ಲಿ ಯಾರು?

ಇಷ್ಟು ಕೇಳಿದ ನಂತರ ಆ ಮೌಲ್ವಿ ತನ್ನ ಪಾರ್ಶ್ವಭಾಗ ಕೆರೆದುಕೊಳ್ಳುತ್ತ ಮಂಗ ಮಾಯವಾಗಿ ಹೋಗಿದ್ದ.
ಇದುವರೆಗೂ ಆತನ ಸುಳಿವೇ ಇಲ್ಲ.
Read 4 tweets

Did Thread Reader help you today?

Support us! We are indie developers!


This site is made by just two indie developers on a laptop doing marketing, support and development! Read more about the story.

Become a Premium Member ($3/month or $30/year) and get exclusive features!

Become Premium

Too expensive? Make a small donation by buying us coffee ($5) or help with server cost ($10)

Donate via Paypal Become our Patreon

Thank you for your support!

Follow Us on Twitter!