Discover and read the best of Twitter Threads about #ಕನ್ನಡಹಾಡು

Most recents (24)

ಚಿತ್ರ: ಚಂದನದ ಗೂಂಬೆ
ಸಂಗೀತ: ರಾಜನ್ ನಾಗೇಂದ್ರ
ಸಾಹಿತ್ಯ:ಚಿ.ಉದಯಶಂಕರ್
ಗಾಯಕರು: ಎಸ್ ಪಿ ಬಾಲಸುಬ್ರಮಣ್ಯಂ

ಆಕಾಶದಿಂದ ಧರೆಗಿಳಿದ ರಂಭೆ, ಆಕಾಶದಿಂದ ಧರೆಗಿಳಿದ ರಂಭೆ,
ಇವಳೇ ಇವಳೇ ಚಂದನದ ಗೂಂಬೆ,ಇವಳೇ ಇವಳೇ ಚಂದನದ ಗೂಂಬೆ,
ಚೆಲುವಾದ ಗೂಂಬೆ,ಚಂದನದ ಗೂಂಬೆ,

ಬಂಗಾರದಿಂದ ಬೊಂಬೆಯನು ಮಾಡಿದ
ಚಂದಿರನ ಕಾಂತಿಯ ತನುವಲ್ಲಿ ತುಂಬಿದ,
ತಾವರೆಯ ಅಂದ ಕಣ್ಣಲ್ಲಿ ತಂದ
ಈ ಸಂಜೆ ಕೆಂಪನು ಕೆನ್ನೆಯಲಿ ತುಂಬಿದ,
ಆ ದೇವರೇ ಕಾಣಿಕೆ ನೀಡಿದಾ,ನನ್ನಾ ಜೊತೆ ಮಾಡಿದ...ಆಹಾ........

ಆಕಾಶದಿಂದ ಧರೆಗಿಳಿದ ರಂಭೆ, ಆಕಾಶದಿಂದ ಧರೆಗಿಳಿದ ರಂಭೆ,
ಇವಳೇ ಇವಳೇ ಚಂದನದ ಗೂಂಬೆ,ಇವಳೇ ಇವಳೇ ಚಂದನದ ಗೂಂಬೆ,
ಚೆಲುವಾದ ಗೂಂಬೆ,ಚಂದನದ ಗೂಂಬೆ,

ನಡೆವಾಗ ನಿನ್ನಾ, ಮೈ ಮಾಟವೇನು,
ಆ ಹೆಜ್ಜೆ ನಾದಕೆ ಮೈ ಮರೆತು ಹೋದೆನು
ಕಣ್ಣಲ್ಲೇ ನೂರು ಹೊಂಗನಸು ಕಂಡೆನು
ಆ ಕನಸಿನಲ್ಲಿ ನಾ ಕರಗಿ ಹೋದೆನು,
ಆ ಹೂನಗೆ ಕಂಡೆನು,ಸೋತೆನು,
ನಿನ್ನಾ ಸೆರೆಯಾದೆನು...ಆಹಾ........

ಆಕಾಶದಿಂದ ಧರೆಗಿಳಿದ ರಂಭೆ, ಆಕಾಶದಿಂದ ಧರೆಗಿಳಿದ ರಂಭೆ,
ಇವಳೇ ಇವಳೇ ಚಂದನದ ಗೂಂಬೆ,ಇವಳೇ ಇವಳೇ ಚಂದನದ ಗೂಂಬೆ,
ಚೆಲುವಾದ ಗೂಂಬೆ
Read 4 tweets
ಚಿತ್ರ: ನ್ಯಾಯವೇ ದೇವರು
ಗಾಯಕರು: ಪಿ.ಬಿ. ಶ್ರೀನಿವಾಸ್
ರಚನೆ: ಚಿ.ಉದಯಶಂಕರ್
ಸಂಗೀತ: ರಾಜನ್ ನಾಗೇಂದ್ರ

ಆಕಾಶವೇ ಬೀಳಲಿ ಮೇಲೆ ನಾನೆಂದು ನಿನ್ನವನು
ಭೂಮಿಯೇ ಬಾಯ್ ಬಿಡಲಿ ಇಲ್ಲೇ ನಾನಿನ್ನ ಕೈ ಬಿಡೆನು
ನೀನಿರುವುದೇ ನನಗಾಗಿ ಈ ಜೀವ ನಿನಗಾಗಿ
ನೀನಿರುವುದೇ ನನಗಾಗಿ ಈ ಜೀವ ನಿನಗಾಗಿ ಆಕಾಶವೇ ಬೀಳಲಿ ಮೇಲೆ ನಾನೆಂದು ನಿನ್ನವನು
ಹೆದರಿಕೆಯ ನೋಟವೇಕೆ ಒಡನಾಡಿ ನಾನಿರುವೆ
ಹೊಸ ಬಾಳಿನ ಹಾದಿಯಲ್ಲಿ ಜೊತೆಗೂಡಿ ನಾ ಬರುವೆ
ಕಲ್ಲಿರಲಿ ಮುಳ್ಳೇ ಇರಲಿ ನಾ ಮೊದಲು ಮುನ್ನಡೆವೆ
ನೀನಡಿಯ ಇಡುವೆಡೆಯೇ ಒಲವಿನ ಹೂಹಾಸುವೆ
ಈ ಮಾತಿಗೆ ಮನವೇ ಸಾಕ್ಷಿ ಈ ಭಾಷೆಗೆ ದೇವರೇ ಸಾಕ್ಷಿ
ಇನ್ನಾದರೂ ನನ್ನ ನಂಬಿ ನಗೆಯ ಚೆಲ್ಲು ಚೆಲುವೆ

ಆಕಾಶವೇ ಬೀಳಲಿ ಮೇಲೆ ನಾನೆಂದು ನಿನ್ನವನು
ಭೂಮಿಯೇ ಬಾಯ್ ಬಿಡಲಿ ಇಲ್ಲೇ ನಾನಿನ್ನ ಕೈ ಬಿಡೆನು

ಹಸೆಮಣೆಯು ನಮಗೆ ಇಂದು ನಾವು ನಿಂತ ತಾಣವು
ತೂಗಾಡುವ ಹಸಿರೆಲೆಯೇ ಶುಭ ಕೋರುವ ತೋರಣವು
ಹಕ್ಕಿಗಳ ಚಿಲಿಪಿಲಿ ಗಾನ ಮಂಗಳಕರ ನಾದವು
ಈ ನದಿಯ ಕಲರವವೇ ಮಂತ್ರಗಳ ಘೋಷವು
ಸಪ್ತಪದಿ ಈ ನಡೆಯಾಯ್ತು ಸಂಜೆರಂಗು ಆರತಿಯಾಯ್ತು
ಇನ್ನ್ನೀಗ ಎರಡೂ ಜೀವ ಬೆರೆತು ಸ್ವರ್ಗವಾಯ್ತು
Read 4 tweets
ಚಿತ್ರ: ಹೊಂಬಿಸಿಲು
ಸಂಗೀತ: ರಾಜನ್ ನಾಗೇಂದ್ರ
ರಚನೆ: ಗೀತಪ್ರಿಯ
ಗಾಯನ: ಎಸ್ ಪಿ ಬಾಲಸುಬ್ರಹ್ಮಣ್ಯಂ

ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು
ನೆಲವ ಬಿಟ್ಟು ನೀರ ಮೇಲೆ ಬಂಡಿ ಹೋಗದು
ನಿನ್ನ ಬಿಟ್ಟು ನನ್ನ ನನ್ನ ಬಿಟ್ಟು ನಿನ್ನ
ಜೀವನಾ ಸಾಗದು ಜೀವನಾ ಸಾಗದು

ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು

ಸೂರ್ಯ ಬರದೆ ಕಮಲವೆಂದು ಅರಳದು
ಚಂದ್ರನಿರದೆ ತಾರೆ ಎಂದು ನಲಿಯದು

ಸೂರ್ಯ ಬರದೆ ಕಮಲವೆಂದು ಅರಳದು
ಚಂದ್ರನಿರದೆ ತಾರೆ ಎಂದು ನಲಿಯದು

ಒಲವು ಮೂಡದಿರಲು ಮನವು ಅರಳದು
ಮನವು ಅರಳದಿರಲು ಗೆಲುವು ಕಾಣದು
ಮನವು ಅರಳದಿರಲು ಗೆಲುವು ಕಾಣದು

ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು
ನೆಲವ ಬಿಟ್ಟು ನೀರ ಮೇಲೆ ಬಂಡಿ ಹೋಗದು
ನಿನ್ನ ಬಿಟ್ಟು ನನ್ನ ನನ್ನ ಬಿಟ್ಟು ನಿನ್ನ
ಜೀವನಾ ಸಾಗದು ಜೀವನಾ ಸಾಗದು

ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು

ಲೋಕದಲ್ಲಿ ಗಂಡು ಹೆಣ್ಣಿಗಾಸರೆ
ಆದರಿಲ್ಲಿ ನಾನು ನಿನ್ನ ಕೈಸೆರೆ

ಲೋಕದಲ್ಲಿ ಗಂಡು ಹೆಣ್ಣಿಗಾಸರೆ
ಆದರಿಲ್ಲಿ ನಾನು ನಿನ್ನ ಕೈಸೆರೆ

ಕೂಡಿ ನಲಿವ ಆಸೆ ಮನದಿ ಆಗಿದೆ
ಹಿತವು ಎಲ್ಲಿ ನಾವು ಬೇರೆ ಆದರೆ
ಹಿತವು ಎಲ್ಲಿ ನಾವು ಬೇರೆ ಆದರೆ

ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು
Read 4 tweets
ಗೀತಪ್ರಿಯ ಅವರ ನಿಜವಾದ ಹೆಸರು ಲಕ್ಷ್ಮಣರಾವ್ ಮೋಹಿತೆ.
ಪುತಿನ ಅವರಿಂದ ಪ್ರಭಾವಿತರಾಗಿ ಕನ್ನಡ ಕಲಿತರು.

ಗೀತಪ್ರಿಯ ಅವರು 40 ಚಿತ್ರಗಳನ್ನು ನಿರ್ದೇಶಿಸುವುದರ ಜೊತೆಗೆ 250 ಚಿತ್ರಗಳಿಗೆ ಗೀತರಚನೆಕಾರರಾಗಿಯೂ ಹೆಸರು ಮಾಡಿದ್ದರು.

#ಜಯಂತಿ

ಚಿತ್ರ: ಒಂದೇ ಬಳ್ಳಿಯ ಹೂಗಳು.
ಸಾಹಿತ್ಯ: ಗೀತಪ್ರಿಯ
ಸಂಗೀತ: ಸತ್ಯಂ.
ಗಾಯನ: ಮಹಮ್ಮದ್ ರಫಿ. Image
ನೀನೆಲ್ಲಿ ನಡೆವೆ ದೂರ ಎಲ್ಲೆಲ್ಲೂ ಲೋಕವೇ
ಈ ಲೋಕವೆಲ್ಲ ಘೋರ, ಎಲ್ಲೆಲ್ಲೂ ಶೋಕವೇ

ನೀನೆಲ್ಲಿ ನಡೆವೆ ದೂರ ಎಲ್ಲೆಲ್ಲೂ ಲೋಕವೇ
ಈ ಲೋಕವೆಲ್ಲ ಘೋರ, ಎಲ್ಲೆಲ್ಲೂ ಶೋಕವೇ

ನಗುವಾಗ ಎಲ್ಲ ನೆಂಟರು, ಅಳುವಾಗ ಯಾರೂ ಇಲ್ಲ
ನಗುವಾಗ ಎಲ್ಲ ನೆಂಟರು, ಅಳುವಾಗ ಯಾರೂ ಇಲ್ಲ
ಮುಳ್ಳಲ್ಲಿ ನಿನ್ನ ನಡೆಸಿ ನಲಿವಾ ನಗುವೆ ವಿಕಾರ
ನೀನೆಲ್ಲಿ ನಡೆವೆ ದೂರ
ನೆರಳನ್ನು ನೀಡುವಂತಹ ಮರವನ್ನೇ ಕಡಿವರಲ್ಲ
ನೆರಳನ್ನು ನೀಡುವಂತಹ ಮರವನ್ನೇ ಕಡಿವರಲ್ಲ
ನಿಸ್ವಾರ್ಥ ಜೀವಿಗಳಿಗೆ ಜಗದೇ ಕಹಿಯೇ ಅಪಾರ
ನೀನೆಲ್ಲಿ ನಡೆವೆ ದೂರ

ಅಪಕಾರವನ್ನೇ ಕಾಣುವೆ, ಉಪಕಾರವನ್ನು ಕಾಣೆ
ಅಪಕಾರವನ್ನೇ ಕಾಣುವೆ, ಉಪಕಾರವನ್ನು ಕಾಣೆ
ಅನುರಾಗವಿಲ್ಲಿ ಇಲ್ಲವೆ? ಮನದೆ ಇದುವೇ ವಿಚಾರ
Read 4 tweets
ಚಿತ್ರ: ಬಯಲುದಾರಿ
ಗಾಯಕರು: ಎಸ್. ಪಿ. ಬಾಲಸುಬ್ರಮಣ್ಯಂ, ವಾಣಿ ಜಯರಾಮ್
ಸಾಹಿತ್ಯ: ಚಿ ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ

ಕನಸಲೂ ನೀನೇ ಮನಸಲೂ ನೀನೇ
ಕನಸಲೂ ನೀನೇ ಮನಸಲೂ ನೀನೇ
ನನ್ನಾಣೆ ನಿನ್ನಾಣೆ
ನನ್ನಾಣೆ ನಿನ್ನಾಣೆ
ಒಲಿದ ನಿನ್ನ ಬಿಡೆನು ಚಿನ್ನ
ಇನ್ನು ಎಂದೆಂದಿಗೂ
ನಿನ್ನನೆಂದೆಂದಿಗೂ

ಕನಸಲೂ ನೀನೇ
ಮನಸಲೂ ನೀನೇ
ನನ್ನಾಣೆ ನಿನ್ನಾಣೆ
ನನ್ನಾಣೆ ನಿನ್ನಾಣೆ

ಮೌನವೂ ಚೆನ್ನ ಮಾತಲೂ ಚೆನ್ನ
ನಗುವಾಗ ನೀನಿನ್ನೂ ಚೆನ್ನ
ನೋಡಲು ಚೆನ್ನ ಕಾಡಲು ಚೆನ್ನ
ನಿನಗಿಂತ ಯಾರಿಲ್ಲ ಚೆನ್ನ

ಸ್ನೇಹಕೆ ಸೋತೆ ಮೋಹಕೆ ಸೋತೆ
ಕಂಡಂದೆ ನಾ ಸೋತು ಹೋದೆ
ಮಾತಿಗೆ ಸೋತೆ ಪ್ರೀತಿಗೆ ಸೋತೆ
ಸೋಲಲ್ಲು ಗೆಲುವನ್ನೇ ಕಂಡೆ
ಸೋಲಲ್ಲು ಗೆಲುವನ್ನೇ ಕಂಡೆ

ಕನಸಲೂ ನೀನೇ ಮನಸಲೂ ನೀನೇ
ನನ್ನಾಣೆ ನಿನ್ನಾಣೆ
ನನ್ನಾಣೆ ನಿನ್ನಾಣೆ
ಒಲಿದ ನಿನ್ನ ಬಿಡೆನು ಚಿನ್ನ
ಇನ್ನು ಎಂದೆಂದಿಗೂ
ನಿನ್ನನೆಂದೆಂದಿಗೂ

ಕನಸಲೂ ನೀನೇ
ಮನಸಲೂ ನೀನೇ
ನನ್ನಾಣೆ ನಿನ್ನಾಣೆ
ನನ್ನಾಣೆ ನಿನ್ನಾಣೆ

ದೇವರೇ ಬಂದು ಬೇಡಿಕೊ ಎಂದು
ಕಣ್ಮುಂದೆ ನಿಂತಾಗ ನಾನು
ಬೇಡೆನು ಏನೂ ನೀನಿರುವಾಗ
ಹೊಸ ಆಸೆ ನನಗೇಕೆ ಇನ್ನು

ಸೂರ್ಯನ ಆಣೆ ಚಂದ್ರನ ಆಣೆ
ಎದೆಯಲ್ಲಿ ನೀ ನಿಂತೆ ಜಾಣೆ
Read 4 tweets
ಚಿತ್ರ: ಬಂಗಾರದ ಮನುಷ್ಯ
ಗಾಯಕ: ಪಿ. ಬಿ. ಶ್ರೀನಿವಾಸ್
ರಚನೆ: ಹುಣಸೂರು ಕೃಷ್ಣಮೂರ್ತಿ
ಸಂಗೀತ: ಜಿ ಕೆ ವೆಂಕಟೇಶ್

ನಗುನಗುತಾ ನಲಿ ನಲಿ, ಎಲ್ಲಾ ದೇವನ ಕಲೆ ಎಂದೇ ನೀ ತಿಳಿ, ಅದರಿಂದಾ ನೀ ಕಲಿ
ನಗುನಗುತಾ ನಲಿ ನಲಿ. ಏನೇ ಆಗಲಿ

ಜಗವಿದು ಜಾಣ ಚೆಲುವಿನ ತಾಣ
ಎಲ್ಲೆಲ್ಲೂ ರಸದೌತಣ ನಿನಗೆಲ್ಲೆಲ್ಲೂ ರಸದೌತಣ
ಲತೆಗಳು ಕುಣಿದಾಗ, ಹೂಗಳು ಬಿರಿದಾಗ
ನಗುನಗುತಾ ನಲಿ ನಲಿ. ಏನೇ ಆಗಲಿ

ತಾಯಿ ಓಡಲಿನ ಕುಡಿಯಾಗಿ ಜೀವನ
ತಾಯಿ ಓಡಲಿನ ಕುಡಿಯಾಗಿ ಜೀವನ
ಮೂಡಿ ಬಂದು ಚೇತನ, ಕಾಣಲೆಂದು ಅನುದಿನ
ಮೂಡಿ ಬಂದು ಚೇತನ, ಕಾಣಲೆಂದು ಅನುದಿನ
ಅವಳೆದೆ ಅನುರಾಗ ಕುಡಿಯುತ ಬೆಳೆದಾಗ

ನಗುನಗುತಾ ನಲಿ ನಲಿ. ಏನೇ ಆಗಲಿ

ಗೆಳೆಯರ ಜೊತೆಯಲಿ ಕುಣಿಕುಣಿದು, ಬೆಳೆಯುವ ಸೊಗಸಿನ ಕಾಲವಿದು
ಗೆಳೆಯರ ಜೊತೆಯಲಿ ಕುಣಿಕುಣಿದು, ಬೆಳೆಯುವ ಸೊಗಸಿನ ಕಾಲವಿದು
ಮುಂದೇ ಯವ್ವನ, ಮದುವೇ ಬಂಧನ .....
ಎಲ್ಲೆಲ್ಲೂ ಹೊಸ ಜೀವನ.. ಅಹ, ಎಲ್ಲೆಲ್ಲೂ ಹೊಸ ಜೀವನ
ಜೊತೆಯದು ದೊರೆತಾಗ ಜೊತೆಯದು ದೊರೆತಾಗ
ಮೈಮನ ಬೆರೆತಾಗ

ನಗುನಗುತಾ ನಲಿ ನಲಿ ಏನೇ ಆಗಲಿ

ಏರುಪೇರಿನ ಗತಿಯಲ್ಲಿ ಜೀವನ
ಏರುಪೇರಿನ ಗತಿಯಲ್ಲಿ ಜೀವನ
ಸಾಗಿಮಾಗಿ ಹಿರಿತನ, ತಂದಿತಯ್ಯ ಮುದಿತನ
Read 4 tweets
ಚಿತ್ರ: ಗಿರಿಕನ್ಯೆ
ರಚನೆ: ಚಿ. ಉದಯಶಂಕರ್
ಸಂಗೀತ: ರಾಜನ್ ನಾಗೇಂದ್ರ
ಗಾಯಕ: ಡಾ. ರಾಜಕುಮಾರ್

ಏನೆಂದು ನಾ ಹೇಳಲೀ, ಮಾನವನಾಸೆಗೆ ಕೊನೆಯಲ್ಲಿ
ಕಾಣೋದೆಲ್ಲಾ ಬೇಕು ಎಂಬ ಹಠದಲ್ಲಿ, ಒಳ್ಳೇದೆಲ್ಲಾ ಬೇಕು ಎಂಬ ಛಲದಲ್ಲಿ
ಯಾರನ್ನೂ ಪ್ರೀತಿಸನು ಮನದಲ್ಲಿ, ಏನೊಂದೂ ಬಾಳಿಸನು ಜಗದಲ್ಲಿ
ಏನೆಂದು ನಾ ಹೇಳಲೀ, ಮಾನವನಾಸೆಗೆ ಕೊನೆಯಲ್ಲಿ
ಜೇನುಗಳೆಲ್ಲ ಅಲೆಯುತ ಹಾರಿ, ಕಾಡೆಲ್ಲಾ ಕಾಡೆಲ್ಲಾ ಕಾಡೆಲ್ಲಾ
ಹನಿ ಹನಿ ಜೇನು ಸೇರಿಸಲೇನು ಬೇಕು ಎಂದಾಗ ತನದೆನ್ನುವ

ಕೆಸರಿನ ಹೂವು ವಿಷಾದ ಹಾವು, ಭಯವಿಲ್ಲ ಭಯವಿಲ್ಲ ಭಯವಿಲ್ಲ
ಚೆಲುವಿನದೆಲ್ಲಾ, ರುಚಿಸುವುದೆಲ್ಲಾ ಕಂಡು ಬಂದಾಗ ಬೇಕೆನ್ನುವಾ

ಏನೆಂದು ನಾ ಹೇಳಲೀ ಮಾನವನಾಸೆಗೆ ಕೊನೆಯಲ್ಲಿ

ಪ್ರಾಣಿಗಳೇನು ಗಿಡಮರವೇನು, ಬಿಡಲಾರ ಬಿಡಲಾರ ಬಿಡಲಾರ
ಬಳಸುವನೆಲ್ಲಾ, ಉಳಿಸುವುದಿಲ್ಲಾ ತನ್ನ ಹಿತಕಾಗೆ ಹೋರಾಡುವ
ನುಡಿಯುವುದೊಂದು ನೆಡೆಯುವುದೊಂದು, ಎಂದೆಂದು ಎಂದೆಂದು ಎಂದೆಂದು
ಪಡೆಯುವುದೊಂದು ಕೊಡುವುದು ಒಂದು, ಸ್ವಾರ್ಥಿ ತಾನಾಗೆ ಮೆರೆದಾಡುವ

ಏನೆಂದು ನಾ ಹೇಳಲೀ, ಮಾನವನಾಸೆಗೆ ಕೊನೆಯಲ್ಲಿ
ಕಾಣೋದೆಲ್ಲಾ ಬೇಕು ಎಂಬ ಹಠದಲ್ಲಿ, ಒಳ್ಳೇದೆಲ್ಲಾ ಬೇಕು ಎಂಬ ಛಲದಲ್ಲಿ
ಯಾರನ್ನೂ ಪ್ರೀತಿಸನು ಮನದಲ್ಲಿ,
Read 4 tweets
ಚಿತ್ರ: ಬಹದ್ದೂರ್ ಗಂಡು
ರಚನೆ: ಚಿ. ಉದಯಶಂಕರ್
ಸಂಗೀತ: ಎಂ. ರಂಗರಾವ್
ಗಾಯಕ/ನಟ: ಡಾ. ರಾಜಕುಮಾರ್

ಹಾಡುವಾ ಧನಿಯೆಲ್ಲಿ ಶ್ರುತಿ ಸೇರಬೇಕು
ನೋಡುವಾ ನೋಟದಲಿ ಹಿತ ಕಾಣಬೇಕು
ಆಡುವ ಮಾತಿನಲಿ ಪ್ರೀತಿಯಿರಬೇಕು

ಮುತ್ತಿನಂತ ಮಾತೊಂದು ಗೊತ್ತೇನಮ್ಮ, ನಿನಗೆ ಗೊತ್ತೇನಮ್ಮ
ನಾವು ಕಾಲಕ್ಕೆ ತಕ್ಕಂತೆ ನೆಡೆಯಬೇಕು, ಎಂದು ತಾಳಕ್ಕೆ ತಕ್ಕಂತೆ ಕುಣಿಯಬೇಕು
ಮುತ್ತಿನಂತ ಮಾತೊಂದು ಗೊತ್ತೇನಮ್ಮ, ನಿನಗೆ ಗೊತ್ತೇನಮ್ಮ
ನಾವು ಕಾಲಕ್ಕೆ ತಕ್ಕಂತೆ ನೆಡೆಯಬೇಕು, ಎಂದು ತಾಳಕ್ಕೆ ತಕ್ಕಂತೆ ಕುಣಿಯಬೇಕು

ಸಿರಿತನವೆಂದು ಶಾಶ್ವತವಲ್ಲ, ಬಡಜನರೆಂದು ಪ್ರಾಣಿಗಳಲ್ಲ
ದೇವರ ಆಟ ಬಲ್ಲವರಿಲ್ಲ ಬಾಳಿನ ಮರ್ಮ ತಿಳಿದವರಿಲ್ಲ
ನೆನ್ನೆ ತನಕ ಹಾಯಾಗಿ ಸುಪ್ಪತ್ತಿಗೆ, ಪಾಪ
ಇಂದು ಮಣ್ಣೆ ಗತಿಯಾಯಿತು ಈ ಮಯ್ಯಿಗೆ
ನೆನ್ನೆ ತನಕ ಹಾಯಾಗಿ ಸುಪ್ಪತ್ತಿಗೆ
ಇಂದು ಮಣ್ಣೆ ಗತಿಯಾಯಿತು ಈ ಮಯ್ಯಿಗೆ
ಎಂದು ಆಳಾಗ ಬಲ್ಲವನೆ ಅರಸಾಗುವ, ಒಳ್ಳೆ ಅರಸಾಗುವ

ಮುತ್ತಿನಂತ ಮಾತೊಂದು ಗೊತ್ತೇನಮ್ಮ, ನಿನಗೆ ಗೊತ್ತೇನಮ್ಮ
ನಾವು ಕಾಲಕ್ಕೆ ತಕ್ಕಂತೆ ನೆಡೆಯಬೇಕು, ಎಂದು ತಾಳಕ್ಕೆ ತಕ್ಕಂತೆ ಕುಣಿಯಬೇಕು

ಕಪ್ಪನೆ ಮೋಡ ಕರಗಲೆಬೇಕು, ಆಗಸದಿಂದಾ ಇಳಿಯಲೆಬೇಕು
Read 6 tweets
ಚಿತ್ರ: ಭಾಗ್ಯವಂತರು
ರಚನೆ: ಚಿ. ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯಕ: ಡಾ. ರಾಜಕುಮಾರ್

ನಿನ್ನ ನನ್ನ ಮನವು ಸೇರಿತು, ನನ್ನ ನಿನ್ನ ಹೃದಯಾ ಹಾಡಿತು
ನಿನ್ನ ನನ್ನ ಮನವು ಸೇರಿತು, ನನ್ನ ನಿನ್ನ ಹೃದಯಾ ಹಾಡಿತು
ರಾಗವು ಒಂದೆ ಭಾವವು ಒಂದೆ, ಜೀವ ಒಂದಾಯಿತು ಬಾಳು ಹಗುರಾಯಿತು

ನಿನ್ನ ನನ್ನ ಮನವು ಸೇರಿತು, ನನ್ನ ನಿನ್ನ ಹೃದಯಾ ಹಾಡಿತು
ಏಕಾಂಗೀಯಾಗಿರಲು ಕೈ ಹಿಡಿದೆ ಜೊತೆಯಾದೆ
ತಾಯಂತೆ ಬಳಿ ಬಂದೆ ಆದರಿಸಿ ಪ್ರೀತಿಸಿದೆ
ಬಾಳಲಿ ಸುಖ ನೀಡಿದೆ, ನನ್ನೀ ಬದುಕಿಗೆ ಶ್ರುತಿಯಾದೆ
ನನ್ನೀ ಮನೆಯ ಬೆಳಕಾದೆ

ನಿನ್ನ ನನ್ನ ಮನವು ಸೇರಿತು, ನನ್ನ ನಿನ್ನ ಹೃದಯಾ ಹಾಡಿತು

ಎಂದೂ ಜೊತೆಯಲೆ ಬರುವೆ, ನಿನ್ನ ನೆರಳಿನ ಹಾಗೆ ಇರುವೆ
ಕೊರಗದಿರು ಮರುಗದಿರು ಹಾಯಾಗಿ ನೀನಿರು
ಎಂದೂ ಜೊತೆಯಲೆ ಬರುವೆ,
ನಿನ್ನ ಉಸಿರಲಿ ಉಸಿರಾಗಿರುವೆ
ನೋವುಗಳು ನನಗಿರಲಿ ಆನಂದ ನಿನಗಾಗಲಿ
ನಗುವಿನ ಹೂಗಳ ಮೇಲೆ ನೆಡುಯುವ ಭಾಗ್ಯ ನಿನಗಿರಲಿ
ನೋಡುವ ಭಾಗ್ಯ ನನಗಿರಲಿ

ನಿನ್ನ ನನ್ನ ಮನವು ಸೇರಿತು, ನನ್ನ ನಿನ್ನ ಹೃದಯಾ ಹಾಡಿತು
ರಾಗವು ಒಂದೆ ಭಾವವು ಒಂದೆ, ಜೀವ ಒಂದಾಯಿತು ಬಾಳು ಹಗುರಾಯಿತು
ನಿನ್ನ ನನ್ನ ಮನವು ಸೇರಿತು, ನನ್ನ ನಿನ್ನ ಹೃದಯಾ ಹಾಡಿತು

#ಕನ್ನಡಹಾಡು
Read 4 tweets
ಚಿತ್ರ: ಸ್ವಯಂವರ
ರಚನೆ: ಆರ್. ಏನ್. ಜಯಗೋಪಾಲ್
ಸಂಗೀತ: ರಾಜನ್-ನಾಗೇಂದ್ರ
ಗಾಯಕ: ಪಿ. ಬಿ. ಶ್ರೀನಿವಾಸ್, ಪಿ. ಸುಶೀಲ

ನಿನ್ನ ಕಣ್ಣ ಕನ್ನಡಿಯಲ್ಲಿ, ಕಂಡೆ ನನ್ನ ರೂಪ
ನಿನ್ನ ಕಣ್ಣ ಕನ್ನಡಿಯಲ್ಲಿ, ಕಂಡೆ ನನ್ನ ರೂಪ
ಕಣ್ಣ ಮಿಂಚು ನೋಟದಲ್ಲಿ, ಕಂಡೆ ಪ್ರೇಮ ದೀಪ

ನಿನ್ನ ತುಂಟ ಹೂ ನಗೆಯಲ್ಲಿ, ಏನೊ ಏನೊ ಭಾವ
ನಿನ್ನ ತುಂಟ ಹೂ ನಗೆಯಲ್ಲಿ, ಏನೊ ಏನೊ ಭಾವ
ನಗೆಯು ತಂದ ಮೋಡಿಯಲ್ಲಿ, ನಲಿಯುತೆನ್ನ ಜೀವ

ಬಾನ ಹಕ್ಕಿ ಹಾಡೋ ವೇಳೆ, ಉದಯರವಿಯು ಮೂಡುವ ವೇಳೆ
ನೀನು ಬರುವ ಹಾದಿಯಲ್ಲಿ ಹೃದಯ ಹಾಸಿ ನಿಲ್ಲುವೆ

ಮರದ ನೆರಳ ತಂಪಿನಲ್ಲಿ, ನಿನ್ನ ಮಡಿಲ ಹಾಸಿಗೆಯಲ್ಲಿ
ತಲೆಯು ಇಟ್ಟು ಮಲಗಿರುವಾಗ ಸ್ವರ್ಗ ಅಲ್ಲೆ ಕಾಣುವೆ
ನನ್ನ ಮನವ ಆಳಬಂದ ನನ್ನವನೆ ಚೆನ್ನಿಗನೆ
ನಿನ್ನ ಕಣ್ಣ ಕನ್ನಡಿಯಲ್ಲಿ, ಕಂಡೆ ನನ್ನ ರೂಪ
ಕಣ್ಣ ಮಿಂಚು ನೋಟದಲ್ಲಿ, ಕಂಡೆ ಪ್ರೇಮ ದೀಪ
ನಿನ್ನ ಕಣ್ಣ ಕನ್ನಡಿಯಲ್ಲಿ

ಹಸಿರು ಎಲೆಯ ಸೀರೆ ಧರಿಸಿ, ಹೂವ ತಿಲಕ ಹಣೆಯಲಿ ಇರಿಸಿ
ಹಸಿರು ಎಲೆಯ ಸೀರೆ ಧರಿಸಿ, ಹೂವ ತಿಲಕ ಹಣೆಯಲಿ ಇರಿಸಿ
ಒಲಿದು ಬಂದ ವನದೇವತೆಯೋ, ಸೊಗಸು ಏನ ಹೇಳಲಿ

ಹೂವ ಸಂಗ ಕೂಡಿ ಆಡಿ ಕಂಪು ಕದ್ದು ಮೆಲ್ಲನೆ ಓಡಿ
Read 4 tweets
ಚಿತ್ರ: ನಾ ನಿನ್ನ ಮರೆಯಲಾರೆ
ರಚನೆ: ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯಕರು: ಡಾ. ರಾಜಕುಮಾರ್, ಎಸ್. ಜಾನಕಿ

ಎಲ್ಲೆಲ್ಲಿ ನೋಡಲಿ, ನಿನ್ನನ್ನೇ ಕಾಣುವೆ
ಕಣ್ಣಲ್ಲಿ ತುಂಬಿರುವೆ, ಮನದಲಿ ಮನೆಮಾಡಿ ಆಡುವೆ

ಎಲ್ಲೆಲ್ಲಿ ನೋಡಲಿ, ನಿನ್ನನ್ನೇ ಕಾಣುವೆ
ಕಣ್ಣಲ್ಲಿ ತುಂಬಿರುವೆ, ಮನದಲಿ ಮನೆಮಾಡಿ ಆಡುವೆ

ಎಲ್ಲೆಲ್ಲಿ ನೋಡಲಿ,
ನಿನ್ನನ್ನೇ ಕಾಣುವೆ

ಆ ಕೆಂಪು ತಾವರೆ, ಆ ನೀರಿಗಾದರೆ
ಈ ಹೊನ್ನ ತಾವರೆ, ನನ್ನಾಸೆಯ ಸೆರೆ

ಮಿಂಚೆಂಬ ಬಳ್ಳಿಗೆ, ಸ್ನೇಹದ ಆಸರೆ
ಈ ಹೆಣ್ಣ ಬಾಳಿಗೆ, ನಿನ್ನ ತೋಳಿನಾಸರೆ

ಓ...ಯುಗಗಳು ಜಾರಿ ಉರುಳಿದರೇನು
ನಾನೇ ನೀನು ನೀನೆ ನಾನು
ಆದ ಮೇಲೆ ಬೇರೆ ಏನಿದೆ

ಎಲ್ಲೆಲ್ಲಿ ನೋಡಲಿ
ನಿನ್ನನ್ನೇ ಕಾಣುವೆ
ಕಣ್ಣಲ್ಲಿ ತುಂಬಿರುವೆ, ಮನದಲಿ ಮನೆಮಾಡಿ
ಆಡುವೆ
ಎಲ್ಲೆಲ್ಲಿ ನೋಡಲಿ, ನಿನ್ನನ್ನೇ ಕಾಣುವೆ

ರವಿಯನ್ನು ಕಾಣದೆ, ಹಗಲೆಂದು ಆಗದು
ನಿನ್ನನ್ನು ನೋಡದೆ, ಈ ಪ್ರಾಣ ನಿಲ್ಲದು

ಕಡಲನ್ನು ಸೇರದ, ನದಿಯಲ್ಲಿ ಕಾಣುವೆ
ನಿನ್ನನ್ನು ಸೇರದೆ, ನಾ ಹೇಗೆ ಬಾಳುವೆ

ಓ..... ವಿರಹದ ನೋವ ಮರೆಯಲಿ ಜೀವ
ಹೂವು ಗಂಧ ಸೇರಿದಂತೆ
ಪ್ರೇಮದಿಂದ ನಿನ್ನ ಸೇರುವೆ

ಎಲ್ಲೆಲ್ಲಿ ನೋಡಲಿ
ನಿನ್ನನ್ನೇ ಕಾಣುವೆ
Read 4 tweets
ಚಿತ್ರ: ಒಲವು ಗೆಲುವು
ರಚನೆ: ಚಿ. ಉದಯಶಂಕರ್
ಸಂಗೀತ: ಜಿ. ಕೆ. ವೆಂಕಟೇಶ್
ಗಾಯಕ: ಡಾ. ರಾಜಕುಮಾರ್, ಎಸ್. ಜಾನಕಿ

ಸಂಗೀತವೆ
ನೀ ನುಡಿಯುವ ಮಾತೆಲ್ಲ
ಸಲ್ಲಾಪವೆ
ನೀ ಎಲ್ಲಿರೆ ಅಲ್ಲೆಲ್ಲ

ಸಂಗೀತವೆ
ನೀ ನುಡಿಯುವ ಮಾತೆಲ್ಲ
ಸಲ್ಲಾಪವೆ
ನೀ ಎಲ್ಲಿರೆ ಅಲ್ಲೆಲ್ಲ

ಸಂತೋಷವೆ
ನಿ ಜೊತೆಯಿರೆ ಬಾಳೆಲ್ಲ
ಸರಸದಲ್ಲಿ ಸಮನಾರಿಲ್ಲ
ಸ್ನೇಹದಲೆ ಗೆಲ್ಲುವೆಯಲ್ಲ

ಮೌನದಲೆ ಹೇಳಿದೆಯಲ್ಲ ನೋಟದಲೆ ಹಾಡಿದೆಯೆಲ್ಲ
ಸಂಗೀತವೇ .....

ಮನಸನು ಅರಿಯುವ ಚತುರನಾದರು ಏತಕೆ ನಿಲ್ಲುವೆ ನೀ ದೂರದಿ
ಅರಳಿದ ಒಲವಿನ ಸುಮವು ನಗುತಿರೆ ನೋಡುತ ನಿಂತೆನು ಉಲ್ಲಾಸದಿ
ಪ್ರೇಮದಲಿ ನಿನ್ನ ಸೇರಲು, ಹೃದಯದಲಿ ಹರುಷ ತುಂಬಲು ಹಾಯಾಗಿದೆ
ಹಾಯಾಗಿದೆ

ಸಂಗೀತವೆ
ನೀ ನುಡಿಯುವ ಮಾತೆಲ್ಲ
ಸಲ್ಲಾಪವೆ
ನೀ ಎಲ್ಲಿರೆ ಅಲ್ಲೆಲ್ಲ

ಸಂತೋಷವೆ
ಚೆಲುವೆಯ ಛಲದಲಿ ಪಡೆದ ಒಲವನು ಮೋಹದ ಮೋಡಿಗೆ ನಾ ಸೋತೆನು
ಸೋಲುವ ನೆಪದಲಿ ಗೆಲುವೆ ಹೊಂದಿದೆ ನೊಂದೆನು ಸೇರಲು ನಾ ನಿನ್ನನು
ಮಾತಿನಲಿ ಮುದ್ದು ಅರಗಿಣಿ, ಅಂದದಲಿ ಮುತ್ತಿನ ಮಣಿ ಬಾ ಇಲ್ಲಿಗೆ
ಬಾ ಇಲ್ಲಿಗೆ
Read 4 tweets
ಅಂಬಿಕಾತನಯದತ್ತನ ನೆನೆಯುತ

#ಬೇಂದ್ರೆಸಾಹಿತ್ಯ
ಚಿತ್ರ : ಅರಿಶಿಣ ಕುಂಕುಮ
ಸಂಗೀತ : ವಿಜಯಭಾಸ್ಕರ್
ಗಾಯನ : ಪಿ ಬಿ ಶ್ರೀನಿವಾಸ್

ಇಳಿದು ಬಾ ತಾಯಿ ಇಳಿದು ಬಾ
ಇಳಿದು ಬಾ ತಾಯಿ ಇಳಿದು ಬಾ

ಹರನ ಜಡೆಯಿಂದ ಹರಿಯ ಅಡಿಯಿಂದ ಋಷಿಯ ತೊಡೆಯಿಂದ ನುಸುಳಿ ಬಾ
ದೇವದೇವರನು ತಣಿಸಿ ಬಾ ದಿಗ್ ದಿಗಂತದಲಿ
ಹನಿಸಿ ಬಾ
ಚರಾಚರಗಳಿಗೆ ಉಣಿಸಿ ಬಾ,
ಇಳಿದು ಬಾ ತಾಯಿ ಇಳಿದು ಬಾ

ನಿನಗೆ ಪೂಡಮಾಡುವೆ ನಿನ್ನ ನುಡುತಡುವೆ ಏಕೆ ತಡೆತಡೆವಿ ಸುರಿದು ಬಾ
ಸ್ವರ್ಗ ತೊರೆದು ಬಾ ಬಯಲ ಜರೆದು ಬಾ ನೆಲದಿ ಹರಿದು ಬಾ
ಬಾರೆ ಬಾ ತಾಯಿ ಇಳಿದು ಬಾ, ಇಳಿದು ಬಾ ತಾಯಿ ಇಳಿದು ಬಾ

ದಯೆಯಿರದ ದೀನ ಹರೆಯಳಿದ ಹೀನ, ನೀರಿರದ ಮೀನ ಕರೆಕರೆವ ಬಾ
ಕರು ಕಂಡ ಕರುಳೆ ಮನ ಉಂಡ ಮರುಳೆ, ಉದ್ದಂಡ ಅರುಳೆ ಸುಳಿ ಸುಳಿದು ಬಾ
ಶಿವ ಶುಭ್ರ ಕರುಣೆ ಅತಿ ಕಿಂಚದರುಣೆ, ವಾತ್ಸಲ್ಯ ವರಣೆ ಇಳಿ ಇಳಿದು ಬಾ

ಸುರ ಸ್ವಪ್ನವಿದ್ದ ಪ್ರತಿಬಿಂಬ ಬಿದ್ದ ಉದ್ಬುದ್ಧ ಶುದ್ಧ ನೀರೆ
ಎಚ್ಚೆತ್ತು ಎದ್ದ ಆಕಾಶದುದ್ದ ಧರೆಗಿಳಿಯಲಿದ್ದ ಧೀರೆ
ಸಿರಿವಾರಿಜಾತ ವರಪಾರಿಜಾತ ತಾರ ಕುಸುಮದಿಂದೆ
ವೃಂದಾರ ವಂದ್ಯೆ ಮಂದಾರ ಗಂಧೆ ನೀನೇ ತಾಯಿ ತಂದೆ
ರಸಪೂರಜನ್ಯೆ ನೀನಲ್ಲ ಅನ್ಯೆ ಸಚ್ಚಿದಾನಂದ ಕನ್ಯೆ
Read 5 tweets
ಚಿತ್ರ: ಕಸ್ತೂರಿ ನಿವಾಸ
ರಚನೆ: ಆರ್. ಏನ್. ಜಯಗೋಪಾಲ್
ಸಂಗೀತ: ಜಿ. ಕೆ. ವೆಂಕಟೇಶ್
ಗಾಯಕ: ಪಿ. ಬಿ. ಶ್ರೀನಿವಾಸ್, ಎಸ್.ಜಾನಕಿ

ನೀ ಬಂದು ನಿಂತಾಗ, ನಿಂತು ನೀ ನಕ್ಕಾಗ
ನಕ್ಕು ನೀ ಸೆಳೆದಾಗ ಸೋತೇ ನಾನಾಗ

ವಾಸಂತಿ ನಲಿದಾಗ
ವಾಸಂತಿ ನಲಿದಾಗ
ಹಸಿರುಟ್ಟು ನಗುವಾಗ
ವನದೇವಿ ಅಡಿ ಮೇಲೆ ಅಡಿ ಇಟ್ಟು ಬರುವಾಗ
ಮುಗಿಲೊಂದು ಕರೆದಾಗ,
ನವಿಲೊಂದು ಬೆರೆದಾಗ
ಒಡಲಲ್ಲಿ ಹೊಸದೊಂದು ನವಜೀವ ಬಂದಾಗ
ಕೈ ಕೈ ಸೋತಾಗ ಮನವೆರೆಡು ಬೆರೆತಾಗ
ನುಡಿದಂತ ಹೊಸ ರಾಗ ಅದುವೇ ಅನುರಾಗ
ಬಾರಾ ಬಾರಾ ಬಾರಾ
ನೀ ಬಂದು ನಿಂತಾಗ, ನಿಂತು ನೀ ನಕ್ಕಾಗ
ನಕ್ಕು ನೀ ಸೆಳೆದಾಗ ಸೋತೇ ನಾನಾಗ

ಜೇನಂತ ಮಾತಲ್ಲಿ
ಜೇನಂತ ಮಾತಲ್ಲಿ
ಕುಡಿಗಣ್ಣ ಸಂಚಲ್ಲಿ
ನಗುವೆಂಬ ಹೂಚೆಲ್ಲಿ ನಿಂತೆ ನೀ ಮನದಲ್ಲಿ
ಎದುರಾದೆ ಹಗಲಲ್ಲಿ ಮರೆಯಾದೆ ಇರುಳಲ್ಲಿ
ನೀ ತಂದ ನೋವಿಗೆ ಕೊನೆಯಲ್ಲಿ ಮೊದಲೆಲ್ಲಿ
ಬಲು ದೂರ ನೀ ಹೋಗೆ ನಾ ತಾಳೆ ಈ ಬೇಗೆ
ಬಾ ಬಾರೆ ಚೆಲುವೆ ಬಾರೆ ಒಲವೆ
ಬಾರಾ ಬಾರಾ ಬಾರಾ

ಬಾಳೆಂಬ ಪಥದಲ್ಲಿ
ಬಾಳೆಂಬ ಪಥದಲ್ಲಿ
ಒಲವೆಂಬ ರಥದಲ್ಲಿ
ಕನಸೆಲ್ಲ ನನಸಾಗಿ
ನನಸೆಲ್ಲ ಸೊಗಸಾಗಿ
ಯುಗ ಒಂದು ದಿನವಾಗಿ
ದಿನವೊಂದು ಕ್ಷಣವಾಗಿ
ನಮ್ಮಾಸೆ ಹೂವಾಗಿ
Read 4 tweets
ಚಿತ್ರ : ಪ್ರೇಮದ ಕಾಣಿಕೆ
ರಚನೆ : ವಿಜಯ ನರಸಿಂಹ
ಸಂಗೀತ : ಉಪೇಂದ್ರ ಕುಮಾರ್
ಗಾಯನ: ಡಾ. ರಾಜಕುಮಾರ್, ವಾಣಿ ಜಯರಾಮ್

ನಾ ಬಿಡಲಾರೆ ಎಂದು ನಿನ್ನ, ನೀನಾದೆ ನನ್ನೀ ಪ್ರಾಣ
ದೂರಾಗಿ ಹೋದರೆ ನೀನು, ನಾನೆಂದು ಬಾಳೆನು
ನಾ ಬಿಡಲಾರೆ ಎಂದು ನಿನ್ನ, ನೀನಾದೆ ನನ್ನೀ ಪ್ರಾಣ
ದೂರಾಗಿ ಹೋದರೆ ನೀನು, ನಾನೆಂದು ಬಾಳೆನು

ಓ.. ನಾ ಸೂರ್ಯಕಾಂತಿಯಂತೆ ನೀ
ಸೂರ್ಯದೇವನಂತೆ, ನಾ ನಿನ್ನ ಬಾಳ ಜೋಡಿ ನೀನೆ ನನ್ನ ಜೀವನಾಡಿ

ಬಿಡಲಾರೆ ಎಂದು ನಿನ್ನ

ನಾನೇ ರಾಗ ನೀನೆ ಭಾವ ಎಂದೆಂದೂ
ನಾನೇ ದೇಹ ನೀನೆ ಪ್ರಾಣ ಇನ್ನೆಂದೂ
ನಾನೇ ಕಣ್ಣು ನೀನೆ ನೋಟ ಎಂದೆಂದೂ
ನಾನೇ ಜ್ಯೋತಿ ನೀನೆ ಕಾಂತಿ ಎಂದೆಂದೂ
ಬಾಳೆಂಬ ದೋಣಿ ಏರಿ, ಸಂತೋಷ ಎಲ್ಲೆ ಮೀರಿ
ಇಲ್ಲಿಂದ ದೂರ ಸಾಗಿ ಪ್ರೇಮಲೋಕ ಸೇರುವ

ಬಿಡಲಾರೆ ಎಂದು ನಿನ್ನ,
ನೀನಾದೆ ನನ್ನೀ ಪ್ರಾಣ
ದೂರಾಗಿ ಹೋದರೆ ನೀನು, ನಾನೆಂದು ಬಾಳೆನು

ಆಹಾ ಮೈ ಮಾಟವು ಈ ಸವಿ ನೋಟವು
ಜೀವ ಕವಲಾಡಿ ಮೈ ತುಂಬೊ ಈ ಅಂದವು
ಬಂತು ಇಂತ ಅಂದ ಚಂದ ನಿನ್ನ ಪ್ರೇಮದಿಂದ
ನಾಳೆ ನಮ್ಮ ಲಾಲಿ ಹಾಡು ಕೇಳೊ ಕಂದ ಚಂದ
ಇನ್ನು ನೀ ತಂದ ಸುಖಕ್ಕಿಂತ ಬೇರೆ ಭಾಗ್ಯ ಕಾಣೆನಲ್ಲ

ಬಿಡಲಾರೆ ಎಂದು ನಿನ್ನ

ನಂದ ದೀಪ ತಂದೆ ನೀನು ತಾಯಾಗಿ
ಕಂದ ಬಂದ ಕಾಂತಿ
Read 5 tweets
ಚಿತ್ರ: ಗಿರಿಕನ್ಯೆ
ರಚನೆ: ಚಿ. ಉದಯಶಂಕರ್
ಸಂಗೀತ: ರಾಜನ್ ನಾಗೇಂದ್ರ
ಗಾಯನ: ಡಾ. ರಾಜಕುಮಾರ್, ಎಸ್. ಜಾನಕಿ, ಎಸ್. ಪಿ. ಬಾಲಸುಬ್ರಮಣಿಯಂ

ಕೂಡಿ ಬಾಳೋಣ ಇನ್ನೆಂದು ಸೇರಿ ದುಡಿಯೋಣ
ದುಡಿಮೆಯೆ ಬಡತನ ಅಳಿಸಲು ಸಾಧನ
ಕೂಡಿ ಬಾಳೋಣ ಇನ್ನೆಂದು ಸೇರಿ ದುಡಿಯೋಣ

ಎಂದೂ ನಾವು ಒಂದೆಂದು ಕೂಗಿ ಹೇಳುವ
ಸ್ನೇಹ ನಮ್ಮ ಬಲವೆಂದು ಎಲ್ಲಾ ಹಾಡುವ
ಎಂದೂ ನಾವು
ಒಂದೆಂದು ಕೂಗಿ ಹೇಳುವ
ಸ್ನೇಹ ನಮ್ಮ ಬಲವೆಂದು ಎಲ್ಲ ಹಾಡುವ
ಕೂಡಿ ಬಾಳೋಣ ಇನ್ನೆಂದು ಸೇರಿ ದುಡಿಯೋಣ
ಕೂಡಿ ಬಾಳೋಣ ಇನ್ನೆಂದು ಸೇರಿ ದುಡಿಯೋಣ

ರೋಷವು ಎಂದು ಶಾಂತಿಯನ್ನು ನೀಡುವುದಿಲ್ಲ
ದ್ವೇಷವು ಎಂದು ಸುಖವನ್ನು ಕೊಡುವುದೆ ಇಲ್ಲ
ವಿರಸ ವಿಷವು ಸುಳ್ಳಲ್ಲ

ಪ್ರೇಮದಿ ನೀನು ಎಲ್ಲಾ ಗೆಲ್ಲುವೆ
ಸರಸದಿ ಹರುಷವ ನೀ ಪಡೆವೆ
ಸರಸದಿ ಹರುಷವ ನೀ ಪಡೆವೆ
ಕೂಡಿ ಬಾಳೋಣ ಇನ್ನೆಂದು ಸೇರಿ ದುಡಿಯೋಣ
ಕೂಡಿ ಬಾಳೋಣ ಇನ್ನೆಂದು ಸೇರಿ ದುಡಿಯೋಣ

ನೆಲವ ನಂಬಿ ಬಾಳೋರು ನಾವುಗಳೆಲ್ಲ
ಮಳೆಯ ನಂಬಿ ಬದುಕೋದು ಇಲ್ಲಿ ಎಲ್ಲ
ಹಸಿರೇ ಉಸಿರು ನಮಗೆಲ್ಲ

ಮೆರೆವ ಜನರ ಭೂತಾಯಿ ಮೆಚ್ಚುವುದಿಲ್ಲ
ದುಡಿವ ಜನರ ಈ ತಾಯಿ ಮರೆಯುವುದಿಲ್ಲ
ಮಣ್ಣೇ ಹೊನ್ನು ನಮಗೆಲ್ಲ

ದುಡಿಮೆಗೆ ಫಲವ ಕಂಡೇಕಾಣುವೆ
ಬೆವರಿಗೆ ಬೆಲೆಯನು ನೀ ಪಡೆವೆ
Read 4 tweets
ಚಿತ್ರ: ದೂರದ ಬೆಟ್ಟ
ರಚನೆ: ಹುಣಸೂರು ಕೃಷ್ಣಮೂರ್ತಿ
ಸಂಗೀತ: ಜಿ. ಕೆ. ವೆಂಕಟೇಶ್
ಗಾಯಕರು: ಪಿ. ಬಿ. ಶ್ರೀನಿವಾಸ್, ಪಿ. ಸುಶೀಲ

ಪ್ರೀತಿನೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳ್ವೆಗೆ
ಪ್ರೀತಿನೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳ್ವೆಗೆ

ಹಸಿವಿನಲ್ಲೂ ಹಬ್ಬಾನೇ, ದಿನವು ನಿತ್ಯವು ಗಾದಿನೇ, ನನ್ನ ನಿನ್ನ ಪಾಲಿಗೆ

ಪ್ರೀತಿನೇ ಆ
ದ್ಯಾವ್ರು ತಂದ ಆಸ್ತಿ ನಮ್ಮ ಬಾಳ್ವೆಗೆ
ಹಸಿವಿನಲ್ಲೂ ಹಬ್ಬಾನೇ, ದಿನವು ನಿತ್ಯವು ಗಾದಿನೇ, ನನ್ನ ನಿಮ್ಮ ಪಾಲಿಗೆ
ಪ್ರೀತಿನೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳ್ವೆಗೆ

ನೀ ಪಕ್ಕ ಇದ್ರೆ ಹಿಂಗೆ ಬೆಟ್ಟಾನ್ ಎತ್ತೀನ್ ಬೆಳ್ನಾಗೆ
ನೀ ಪಕ್ಕ ಇದ್ರೆ ಹಿಂಗೆ ಬೆಟ್ಟಾನ್ ಎತ್ತೀನ್ ಬೆಳ್ನಾಗೆ
ಏಸೇ ಕಷ್ಟ ಬಂದ್ರು ನಮಗೇ, ಗೌರ
ಏಸೇ ಕಷ್ಟ ಬಂದ್ರು ನಮಗೇ
ಮೀಸೆ ಬುಡ್ತೀನ್ ಸುಂಗೇ

ಪ್ರೀತಿನೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳ್ವೆಗೆ

ಈ ಜೀವ ನಿಮ್ಮದೇನೆ, ನಿಮ್ಮ ಪೂಜೆ ಹೂವು ನಾನೇ
ಈ ಜೀವ ನಿಮ್ಮದೇನೆ, ನಿಮ್ಮ ಪೂಜೆ ಹೂವು ನಾನೇ
ಈ ನಿಮ್ಮ ಪಾದದಾಣೇ....
ಈ ನಿಮ್ಮ ಪಾದದಾಣೆ, ನಿಮಗಿಂತ ದ್ಯಾವ್ರೆ ಕಾಣೇ

ಪ್ರೀತಿನೇ ಆ ದ್ಯಾವ್ರು ತಂದ
ಆಸ್ತಿ ನಮ್ಮ ಬಾಳ್ವೆಗೆ
ಹಸಿವಿನಲ್ಲೂ ಹಬ್ಬಾನೇ
Read 4 tweets
ಚಿತ್ರ: ನಾಗರ ಹಾವು
ಸಂಗೀತ: ವಿಜಯಭಾಸ್ಕರ್
ಗಾಯನ: ಪಿ.ಸುಶೀಲ
ಸಾಹಿತ್ಯ: ಆರ್ ಎನ್ ಜಯಗೋಪಾಲ್

ಕರ್ಪೂರದ ಗೊಂಬೆ ನಾನು
ಮಿಂಚಂತೆ ಬಳಿ ಬಂದೆ ನೀನು
ಕರ್ಪೂರದ ಗೊಂಬೆ ನಾನು
ಮಿಂಚಂತೆ ಬಳಿ ಬಂದೆ ನೀನು

ನಿನ್ನ ಪ್ರೇಮ ಜ್ವಾಲೆ
ಸೋಕಿ ನನ್ನ ಮೇಲೆ
ಕರಗಿ ಕರಗಿ ನೀರಾದೆ ನಾನು

ಕರ್ಪೂರದ ಗೊಂಬೆ ನಾನು
ಮಿಂಚಂತೆ ಬಳಿ ಬಂದೆ ನೀನು
ಹೂವಲಿ ಬೆರೆತ ಗಂಧದ ರೀತಿ
ಶ್ರುತಿಯಲಿ ಕಲೆತ ನಾದದ ರೀತಿ
ಹೂವಲಿ ಬೆರೆತ ಗಂಧದ ರೀತಿ
ಶ್ರುತಿಯಲಿ ಕಲೆತ ನಾದದ ರೀತಿ
ದೇಹದಿ ಪ್ರಾಣವು ಕಲೆತಿಹ ರೀತಿ
ದೇಹದಿ ಪ್ರಾಣವು ಕಲೆತಿಹ ರೀತಿ

ನಿನ್ನಲೇ ಬೆರೆತೆ ನನ್ನನೇ ಮರೆತೆ

ಕರ್ಪೂರದ ಗೊಂಬೆ ನಾನು
ಮಿಂಚಂತೆ ಬಳಿ ಬಂದೆ ನೀನು

ದೇವನ ಸೇರಿದ ಹೂವದು ಧನ್ಯ
ಪೂಜೆಯ ಮಾಡಿದ ಕೈಗಳೆ ಧನ್ಯ
ದೇವನ ಸೇರಿದ ಹೂವದು ಧನ್ಯ
ಪೂಜೆಯ ಮಾಡಿದ ಕೈಗಳೆ ಧನ್ಯ
ಒಲವನು ಅರಿತ ಹೃದಯವೇ ಧನ್ಯ
ಒಲವನು ಅರಿತ ಹೃದಯವೇ ಧನ್ಯ

ನಿನ್ನನಾ ಪಡೆದೆ ಧನ್ಯ ನಾ ನಿಜದಿ

ಕರ್ಪೂರದ ಗೊಂಬೆ ನಾನು
ಮಿಂಚಂತೆ ಬಳಿ ಬಂದೆ ನೀನು

ನಿನ್ನ ಪ್ರೇಮ ಜ್ವಾಲೆ
ಸೋಕಿ ನನ್ನ ಮೇಲೆ
ಕರಗಿ ಕರಗಿ ನೀರಾದೆ ನಾನು

ಕರ್ಪೂರದ ಗೊಂಬೆ ನಾನು
ಮಿಂಚಂತೆ ಬಳಿ ಬಂದೆ ನೀನು

#ಕನ್ನಡಹಾಡು
Read 4 tweets
ಚಿತ್ರ: ಬಂಗಾರದ ಮನುಷ್ಯ
ರಚನೆ: ಆರ್. ಏನ್. ಜಯಗೋಪಾಲ್
ಸಂಗೀತ: ಜಿ. ಕೆ. ವೆಂಕಟೇಶ್
ಗಾಯಕ: ಪಿ. ಬಿ. ಶ್ರೀನಿವಾಸ್

ಆಗದು ಎಂದು, ಕೈಲಾಗದು ಎಂದು
ಆಗದು ಎಂದು, ಕೈಲಾಗದು ಎಂದು
ಕೈಕಟ್ಟಿ ಕುಳಿತರೆ ಸಾಗದು ಕೆಲಸವೂ ಮುಂದೆ
ಮನಸ್ಸೊಂದ್ದಿದ್ದರೆ ಮಾರ್ಗವು ಉಂಟು
ಕೆಚ್ಚೆದೆ ಇರಬೇಕೆಂದು ಕೆಚ್ಚೆದೆ ಇರಬೇಕೆಂದೆಂದು

ಆಗದು ಎಂದು, ಕೈಲಾಗದು ಎಂದು
ಕೈಕಟ್ಟಿ ಕುಳಿತರೆ ಸಾಗದು ಕೆಲಸವೂ ಮುಂದೆ

ಕೆತ್ತಲಾಗದು ಕಗ್ಗಲ್ಲೆಂದು ಎದೆ ಗುಂದಿದ್ದರೆ ಶಿಲ್ಪಿ ಕೆತ್ತಲಾಗದು ಕಗ್ಗಲ್ಲೆಂದು ಎದೆ ಗುಂದಿದ್ದರೆ ಶಿಲ್ಪಿ
ಆಗುತಿತ್ತೇ ಕಲೆಗಳ ಬೀಡು ಗೊಮ್ಮಟೇಶನ ನೆಲೆ ನಾಡು
ಬೇಲೂರು ಹಳೇಬೀಡು ಬೇಲೂರು ಹಳೇಬೀಡು

ಆಗದು ಎಂದು, ಕೈಲಾಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವೂ ಮುಂದೆ

ಕಾವೇರಿಯನು ಹರಿಯಲು
ಬಿಟ್ಟು ವಿಶ್ವೇಶ್ವರಯ್ಯ ಶ್ರಮ ಪಡದಿದ್ದರೆ
ಕಾವೇರಿಯನು ಹರಿಯಲು ಬಿಟ್ಟು ವಿಶ್ವೇಶ್ವರಯ್ಯ ಶ್ರಮ ಪಡದಿದ್ದರೆ
ಕನ್ನಂಬಾಡಿಯ ಕಟ್ಟದಿದ್ದರೆ

ಬಂಗಾರ ಬೆಳೆವ ಹೊನ್ನಾಡು
ಬಂಗಾರ ಬೆಳೆವ ಹೊನ್ನಾಡು
ಆಗುತ್ತಿತ್ತೆ ಈ ನಾಡು, ಕನ್ನಡ ಸಿರಿನಾಡು
ನಮ್ಮ ಕನ್ನಡ ಸಿರಿನಾಡು

ಆಗದು ಎಂದು, ಕೈಲಾಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವೂ ಮುಂದೆ
Read 5 tweets
ಚಿತ್ರ: ಬಂಗಾರದ ಮನುಷ್ಯ
ಗಾಯಕರು: ಪಿ.ಬಿ.ಶ್ರೀನಿವಾಸ್
ಮತ್ತು ಪಿ.ಸುಶೀಲಾ
ಸಂಗೀತ: ಜಿ.ಕೆ.ವೆಂಕಟೇಶ್
ಸಾಹಿತ್ಯ: ಚಿ.ಉದಯಶಂಕರ್

ಐಲೆಸ ಐಸಾ ಓ ಹೋ
ಸಾಗಲಿ ಐಸಾ ಓ ಹೋ
ತೇಲಲಿ ಐಸಾ ಓ ಹೋ
ಸಾಗಲಿ ಐಸಾ ಓ ಹೋ

ಆಹಾ ಮೈಸೂರು ಮಲ್ಲಿಗೆ
ದುಂಡು ಮಲ್ಲಿಗೆ
ನನ್ನಾ ಒಲವಿನ ಸಿರಿಯಾಗಿ
ಅರಳುತ ಚೆಲುವಾಗಿ
ಮನಸಲಿ ನೀನೆ ತುಂಬಿರುವೆ
ಮನಸಲಿ ನೀನೆ ತುಂಬಿರುವೆ
ಅಲೆ ಅಲೆ ನಲಿಯುತಿದೆ
ಹನಿ ಹನಿ ಚಿಮ್ಮುತಿದೆ
ಅಲೆ ಅಲೆ ನಲಿಯುತಿದೆ
ಹನಿ ಹನಿ ಚಿಮ್ಮುತಿದೆ

ಮುಗಿಲಕಡೆ ಚಪಮ್ ಚಪಮ್
ನಾರಿ ಸುಂದಾರಿ ನೋಡೇ
ವೈಯ್ಯಾರಿ ವೈಯ್ಯಾರಿ

ಓ ಹೋ ಚೆಲುವಾಂತ ಚೆನ್ನಿಗ
ನನ್ನ ಚೆನ್ನಿಗ ...
ನಿನ್ನಾ ಸೊಗಸಿಗೆ ಬೆರಗಾದೆ
ಮಾತಿಗೆ ಮರುಳಾದೆ
ನನ್ನಲಿ ನೀನೆ ತುಂಬಿರುವೆ

ಬಾಳೆಂಬ ಕಡಲಲ್ಲಿ ನಾನು
ಕಂಡೆ ಬಂಗಾರದ ಹೆಣ್ಣು ನೀನು
ಬಾಳೆಂಬ ಕಡಲಲ್ಲಿ ನಾನು
ಕಂಡೆ ಬಂಗಾರದ ಹೆಣ್ಣು ನೀನು

ಕಣ್ಣಿಂದ ಬಲೆ ಬೀಸಿ ಸೆಳೆದೇ ..
ಸೆರೆಯಾಗಿ ಮನಸೋತು ನಡೆದೇ

ಜೊತೆಗಾರ ನೀನಾದೆ ನನಗೆ ..
ಆಹಾ ಜೊತೆಗಾರ ನೀನಾದೆ ನನಗೆ
ಬಾ ಗೆಳೆಯ ಆಹಾ ನನ್ನಿನಿಯ
ಚೆನ್ನ ಇನ್ನು ಎಂದು ಮುಂದೆ ನಿನ್ನದೇ ಹೃದಯಾ

ಓ ಹೋ ಚೆಲುವಾಂತ ಚೆನ್ನಿಗ
ನನ್ನ ಚೆನ್ನಿಗ
ನಿನ್ನಾ ಸೊಗಸಿಗೆ ಬೆರಗಾದೆ
ಮಾತಿಗೆ ಮರುಳಾದೆ
Read 5 tweets
ಚಿತ್ರ: ಬಿಳಿ ಹೆಂಡ್ತಿ
ಗಾಯಕರು: ವಾಣಿಜಯರಾಂ
ಸಂಗೀತ: ವಿಜಯಭಾಸ್ಕರ್
ಸಾಹಿತ್ಯ: ವಿಜಯನಾರಸಿಂಹ

ದೇವರೆ ನುಡಿದ ಮೊದಲ ನುಡಿ
ಆ ದೇವರೆ ನುಡಿದ ಮೊದಲ ನುಡಿ
ಪ್ರೇಮ ಪ್ರೇಮ ಪ್ರೇಮವೆಂಬ ಹೊನ್ನುಡಿ

ಆ ದೇವರೆ ನುಡಿದ ಮೊದಲ ನುಡಿ
ಪ್ರೇಮ ಪ್ರೇಮ ಪ್ರೇಮವೆಂಬ ಹೊನ್ನುಡಿ

ಪ್ರೇಮದ ನುಡಿಯೇ ಜೀವದ ನಾಡಿ
ಪ್ರೇಮದ ನಡೆಯೇ ಮಂತ್ರದ ಮೋಡಿ
ಪ್ರೇಮದ ನುಡಿಯೇ
ಜೀವದ ನಾಡಿ
ಪ್ರೇಮದ ನಡೆಯೇ ಮಂತ್ರದ ಮೋಡಿ
ಪ್ರೇಮಕೆ ಸೋತಿದೆ ವಿಶ್ವವೆ ಅದರಡಿ
ಪ್ರೇಮಕೆ ಸೋತಿದೆ ವಿಶ್ವವೆ ಅದರಡಿ
ಪ್ರೇಮಾ ಪ್ರೇಮಾ
ಪ್ರೇಮ ಒಂದೇ ಹೊನ್ನುಡಿ
ಆ ದೇವರೆ ನುಡಿದ ಮೊದಲ ನುಡಿ
ಪ್ರೇಮ ಪ್ರೇಮ ಪ್ರೇಮವೆಂಬ ಹೊನ್ನುಡಿ

ಪ್ರೇಮದ ನಂದಾದೀಪದ ಜ್ಯೋತಿ
ಪ್ರೇಮದ ಯಾನಕೆ ನೀಡಿದೆ ಕಾಂತಿ
ಪ್ರೇಮದ ನಂದಾದೀಪದ ಜ್ಯೋತಿ
ಪ್ರೇಮದ ಯಾನಕೆ ನೀಡಿದೆ ಕಾಂತಿ
ಪ್ರೇಮದ ಕ್ರಾಂತಿ ವಿಶ್ವಕೆ ಶಾಂತಿ
ಪ್ರೇಮದ ಕ್ರಾಂತಿ ವಿಶ್ವಕೆ ಶಾಂತಿ
ಪ್ರೇಮಾ ಪ್ರೇಮಾ
ಪ್ರೇಮ ಒಂದೇ ಹೊನ್ನುಡಿ

ಆ ದೇವರೆ ನುಡಿದ ಮೊದಲ ನುಡಿ
ಪ್ರೇಮ ಪ್ರೇಮ
ಪ್ರೇಮವೆಂಬ ಹೊನ್ನುಡಿ

ಪ್ರೇಮದ ನಗೆಯೇ ನಿತ್ಯ ವಸಂತ
ಪ್ರೇಮದ ಪ್ರಭೆಯ ರವಿಯೆ ಅನಂತ
ಪ್ರೇಮದ ನಗೆಯೇ ನಿತ್ಯ ವಸಂತ
ಪ್ರೇಮದ ಪ್ರಭೆಯ ರವಿಯೆ ಅನಂತ
ಪ್ರೇಮದ ಎಲ್ಲೆಯೆ ದಿವ್ಯ ದಿಗಂತ
Read 4 tweets
ನೀನಾರಿಗಾದೆಯೋ ಎಲೆ ಮಾನವಾ, ಹರಿ ಹರೀ ಗೋವು ನಾನು.

ಇಟ್ಟರೆ ಸಗಣಿಯಾದೆ ತಟ್ಟಿದರೆ ಕುರುಳಾದೆ
ಸುಟ್ಟರೇ ನೊಸಲಿಗೆ ವಿಭೂತಿಯಾದೆ
ತಟ್ಟದೇ ಹಾಕಿದರೆ ಮೇಲುಗೊಬ್ಬರವಾದೆ
ನೀನಾರಿಗಾದೆಯೋ ಎಲೆ ಮಾನವಾ, ಹರಿ ಹರೀ ಗೋವು ನಾನು.

ಹಾಲಾದೆ ಕರೆದರೆ ಮೊಸರಾದೆ ಹೆತ್ತರೆ
ಮೇಲೆ ಕೆನೆಗಡೆದರೆ ಬೆಣ್ಣೆಯಾದೆ
ಮೇಲಾದೆ ತುಪ್ಪವೂ ನಾನಾದೆ ಕಾಸಿದರೆ
ನೀನಾರಿಗಾದೆಯೋ
ಎಲೆ ಮಾನವಾ

ಉಳುವೆ ನಾ ಭೂಮಿಯನು ಹೊರವೆ ನಾ ಹೇರನ್ನು
ತುಳಿದು ಕಡ್ಡಿಯ ವಿಂಗಡಿಸುವೆ
ಕಳಪೆಯಾಗಿಹ ನೆಲವ ನಗುವ ತೋಪನು ಮಾಳ್ಪೆ
ನೀನಾರಿಗಾದೆಯೋ ಎಲೆ ಮಾನವಾ

ಹಾಯೆ ಹರಿಗೋಲಾದೆ ರಾಯಭೇರಿಗೆಯಾದೆ
ರಾಯರಾ ಕಾಲಿಗೆ ಮುಳ್ಳೊತ್ತುವಾದೆ
ಆಯವರಿತು ಹೊಡೆಯೆ ಮಧುರಗಾನಕ್ಕಾದೆ
ನೀನಾರಿಗಾದೆಯೋ ಎಲೆ ಮಾನವಾ

ಹಾದಿ ಬೀದಿಯಲಿರುವ ಕಸದ ಹುಲ್ಲನು ಹುಡುಕಿ
ಮೇದು ಮನೆಗೈದಿ ನಾನಮೃತವೀವೆ
ಅದನುಂಡು ನನಗೆರಡ ಬಗೆವ ಮಾನವ ಹೇಳು
ನೀನಾರಿಗಾದೆಯೋ ಎಲೆ ಮಾನವಾ..

ಈ ಪದ್ಯವನ್ನು ಯಾರೂ ಮರೆತಿರಲಾರರು. ನಾವು ಹಿರಿಯರನ್ನು ನೆನೆಯುವಾಗ ಅವರು ಉಳಿಸಿಹೋದ ಮುದಭಾವಗಳಿಂದ ನೆನೆಯಬೇಕು. ಮೇಲಿನ ಪದ್ಯ ನೀಡಿದವರು ಎಸ್. ಜಿ. ನರಸಿಂಹಾಚಾರ್ಯರು. ಇಂದು ಅವರ ಪುಣ್ಯಸ್ಮರಣೆ.

ಎಸ್. ಜಿ. ನರಸಿಂಹಾಚಾರ್ ಕನ್ನಡ, ಸಂಸ್ಕೃತ,
Read 12 tweets
ಚಲನಚಿತ್ರ: ಶುಭಮಂಗಳ
ರಚನೆ: ವಿಜಯನಾರಸಿಂಹ
ಸಂಗೀತ: ವಿಜಯ ಭಾಸ್ಕರ್‌
ಗಾಯನ:ಆರ್.‌ ಎನ್.‌ ಸುದರ್ಶನ್‌‌

ಹೂವೊಂದು, ಬಳಿಬಂದು, ತಾಕಿತು ಎನ್ನೆದೆಯ
ಏನೆಂದು, ಕೇಳಲು, ಹೇಳಿತು, ಜೇನಂಥ ಸಿಹಿನುಡಿಯ, ಜೇನಂಥ ಸಿಹಿನುಡಿಯ

ಹೂವೊಂದು, ಬಳಿಬಂದು, ತಾಕಿತು ಎನ್ನೆದೆಯ
ಏನೆಂದು, ಕೇಳಲು, ಹೇಳಿತು, ಜೇನಂಥ ಸಿಹಿನುಡಿಯ, ಜೇನಂಥ ಸಿಹಿನುಡಿಯ
ಕಾವೇರಿ ಸೀಮೆಯ ಕನ್ಯೆಯು ನಾನು
ಬೇಲೂರು ಬಾಲೆಯ ಪ್ರತಿನಿಧಿ ನಾನು
ತುಂಗೆಯ, ಭದ್ರೆಯ, ತುಂಗೆಯ ಭದ್ರೆಯ ತೌರಿನ ಹೂ ನಾನು, ತೌರಿನ ಹೂ ನಾನು

ಹೂವೊಂದು, ಬಳಿಬಂದು, ತಾಕಿತು ಎನ್ನೆದೆಯ
ಏನೆಂದು, ಕೇಳಲು, ಹೇಳಿತು, ಜೇನಂಥ ಸಿಹಿನುಡಿಯ, ಜೇನಂಥ ಸಿಹಿನುಡಿಯ

ಸೂರ್ಯನ ಕಾಂತಿಯ ಸುಂದರಿ ನಾನು
ತಿಂಗಳ ಬೆಳಕಿನ ತಂಗಿಯು ನಾನು
ಪ್ರೇಮದ, ಕಾವ್ಯಕೆ,
ಪ್ರೇಮದ ಕಾವ್ಯಕೆ ಪೂಜೆಯ ಹೂ ನಾನು, ಪೂಜೆಯ ಹೂ ನಾನು

ಹೂವೊಂದು, ಬಳಿಬಂದು, ತಾಕಿತು ಎನ್ನೆದೆಯ
ಏನೆಂದು, ಕೇಳಲು, ಹೇಳಿತು, ಜೇನಂಥ ಸಿಹಿನುಡಿಯ, ಜೇನಂಥ ಸಿಹಿನುಡಿಯ

ಅರಿಶಿನ ಕುಂಕುಮ ಶೋಭಿತೆ ನಾನು
ವಧುವಿನ ಶೃಂಗಾರ ಭೂಷಿತೆ ನಾನು
ಮಂಗಳ, ಸೂತ್ರವ, ಮಂಗಳ ಸೂತ್ರವ ಬೇಡುವ ಹೂ ನಾನು, ಬೇಡುವ ಹೂ ನಾನು

ಹೂವೊಂದು, ಬಳಿಬಂದು, ತಾಕಿತು ಎನ್ನೆದೆಯ
Read 4 tweets
ಚಿತ್ರ: ಮಿಸ್ ಲೀಲಾವತಿ
ಸಾಹಿತ್ಯ : ರಾಷ್ಟ್ರಕವಿ "ಕುವೆಂಪು"
ಸಂಗೀತ: ಅರ್. ಸುದರ್ಶನ್
ಗಾಯಕರು: ಎಸ್. ಜಾನಕಿ, ರಾಮಚಂದ್ರ ರಾವ್.

ದೋಣಿ ಸಾಗಲಿ ಮುಂದೆ ಹೋಗಲಿ
ದೂರ ತೀರವ ಸೇರಲಿ
ಬೀಸು ಗಾಳಿಗೆ ಬೀಳುತೇಳುವ
ತೆರೆಯ ಮೇಗಡೆ ಹಾರಲಿ
ದೋಣಿ ಸಾಗಲಿ ಮುಂದೆ ಹೋಗಲಿ.....

ಹೊನ್ನಗಿಂಡಿಯ ಹಿಡಿದು ಕೈಯೊಳು,
ಹೇಮವಾರಿಯ ಚಿಮುಕಿಸೆ..
ಹೊನ್ನಗಿಂಡಿಯ ಹಿಡಿದು ಕೈಯೊಳು,
ಹೇಮವಾರಿಯ ಚಿಮುಕಿಸೆ..

ಮೇಘಮಾಲೆಗೆ ಬಣ್ಣವೀಯುತ,
ಯಕ್ಷಲೋಕವ ವಿರಚಿಸೆ..
ನೋಡಿ ಮೂಡಣದಾ ದಿಗಂತದಿ,
ಮೂಡುವೆಣ್ಣಿನ ಮೈಸಿರಿ....
ರಂಜಿಸುತ್ತಿದೆ ಚೆಲುವೆಯಾಕೆಗೆ,
ಸುಪ್ರಭಾತವ ಬಯಸಿರಿ....

ದೋಣಿ ಸಾಗಲಿ ಮುಂದೆ ಹೋಗಲಿ...

ಕೆರೆಯ ಅಂಚಿನ ಮೇಲೆ ಮಿಂಚಿನ,
ಹನಿಗಳಂದದಿ ಹಿಮಮಣಿ....
ಕೆರೆಯ ಅಂಚಿನ ಮೇಲೆ ಮಿಂಚಿನ,
ಹನಿಗಳಂದದಿ ಹಿಮಮಣಿ....
ಮಿಂಚುತೀರ್ಪುವು ಮೂಡುತೈತರೆ,
ಬಾಲಕೋಮಲ ದಿನಮಣಿ....
ಹಸಿರು ಜೋಳದ ಹೊಲದ ಗಾಳಿಯು,
ತೀಡಿ ತಣ್ಣಗೆ ಬರುತಿದೆ....
ಹುದುಗಿ ಹಾಡುವ ಮತ್ತ ಕೋಕಿಲ,
ಮಧುರ ವಾಣಿಯ ತರುತಿದೆ....

ದೋಣಿ ಸಾಗಲಿ ಮುಂದೆ ಹೋಗಲಿ...

ದೂರ ಬೆಟ್ಟದ ಮೇಲೆ ತೇಲುವ,
ಬಿಳಿಯ ಮೋಡವ ನೋಡಿರಿ...
ದೂರ ಬೆಟ್ಟದ ಮೇಲೆ ತೇಲುವ,
ಬಿಳಿಯ ಮೋಡವ ನೋಡಿರಿ...
Read 4 tweets

Related hashtags

Did Thread Reader help you today?

Support us! We are indie developers!


This site is made by just two indie developers on a laptop doing marketing, support and development! Read more about the story.

Become a Premium Member ($3.00/month or $30.00/year) and get exclusive features!

Become Premium

Too expensive? Make a small donation by buying us coffee ($5) or help with server cost ($10)

Donate via Paypal Become our Patreon

Thank you for your support!