Discover and read the best of Twitter Threads about #ವಂದೇಮಾತರಂ

Most recents (10)

ಇಂದು #ಕಯ್ಯಾರಕಿಞ್ಞಣ್ಣರೈ ಅವರ ಜನ್ಮದಿನದ ಸಲುವಾಗಿ ಓಲಾಟಗಾರರು ಅವರಿಗೆ ಶುಭ ಕೋರಿದ ಸಂಧರ್ಭದಲ್ಲಿ ಅವರಿಗಾಗಿ ಕಿಞ್ಞಣ್ಣ ರೈಗಳ #ಐಕ್ಯಗಾನ

ಐಕ್ಯವೊಂದೇ ಮಂತ್ರ,
ಐಕ್ಯದಿಂದೆ ಸ್ವತಂತ್ರ,
ಐಕ್ಯಗಾನದಿ ರಾಷ್ಟ್ರ ತೇಲುತಿರಲಿ!

‘ಭಾರತದಿ ಮಮ ಜನ್ಮ
ಸ್ವಾತಂತ್ರ್ಯವೇ ಧರ್ಮ’
ಒಕ್ಕೊರಲಿನುದ್ಘೋಷ ಕೇಳುತಿರಲಿ!

1
ಹೊಲೆಯರೇ ಬ್ರಾಹ್ಮಣರೆ,
ಮುಸ್ಲಿಮರೆ ಕ್ರಿಶ್ಚನರೆ,
ಎಲ್ಲರೂ ನಮ್ಮವರೆ ಎದೆಯರಳಲಿ!

‘ರಾಷ್ಟ್ರವೊಂದೇ ಜೀವ’
ಎಂದು ಸಾರಿರಿ, ಯಾವ
ರಕ್ಕಸರು ಇದಿರಿಲ್ಲ ನಾವ್ ಕಡುಗಲಿ!

ಅರೆಹೊಟ್ಟೆಯುಂಡ ನಾವ್,
ಬರಿ ಚಿಂದಿ ತೊಟ್ಟ ನಾವ್,
ಸುಲಿಗೆಗೊಳಗಾದ ನಾವ್ ಎಲ್ಲರೊಂದೇ!

ಆಳು ಹೋಳಾಗಿರಲು,
ಬಾಳು ಗೋಳಾಗಿರಲು,
ಮೇಳು ಕೀಳೇನುಂಟು? ಎಲ್ಲರೊಂದೇ!

2
ಭಾರತಿಯ ಬಸುರಿಂದ
ಜಾರಿ ಬಿದ್ದೆವೆ? ಬಂದ
ಭೂರಿ ಬವಣೆಗಳನ್ನು ನೆನೆಯಿರೊಮ್ಮೆ!

ನೆನೆನೆನೆದು ದಿನದಿನವು,
ದುಡಿದುಡಿದು ಜನಜನವು,
ಭಾರತದ ಸ್ವಾತಂತ್ರ್ಯ ಮೆರೆಸಿ, ಹೆಮ್ಮೆ!

ಅಜ್ಞಾನ ಪಂಕದಲಿ
ಅದ್ದಿರುವ ಜನರಲ್ಲಿ
ಮತಭೇದ ಬರಲುಂಟೆ? ಎಲ್ಲರೊಂದೇ!

ಪಕ್ಷವೇ? ಪಂಥವೇ?
ಜಾತಿಯೇ? ನೀತಿಯೇ?
ಮೌಢ್ಯ ಮುರಿಯುವ ಬನ್ನಿ; ಎಲ್ಲರೊಂದೇ!

3
Read 9 tweets
#ಕರುನಾಡಿನಹುಲಿ
#ಮೈಲಾರಮಹಾದೇವಪ್ಪ
#ಜಯಂತಿ

ಗಾಂಧಿಯನ್ನು ಮತ್ತು ಆತನ ಅಹಿಂಸಾ ಮಾರ್ಗವನ್ನು ನಂಬಿ ಬಂದವರು ಅದೆಷ್ಟು ಲಕ್ಷವೋ...

ಬ್ರಿಟಿಷರಿಂದ ಗಾಂಧಿ ಮತ್ತು ಆತನ ಹತ್ತಿರದ ಸಂಗಡಿಗರಿಗೆ ಕೂದಲು ಕೂಡ ಸೊಂಕದಿದ್ದರೂ ಗಾಂಧಿಯೇ ದೇವರು ಎಂದು ನಂಬಿದ್ದ ಎಷ್ಟೋ ಅಮಾಯಕ ಜೀವಗಳು ದೇಶಕ್ಕಾಗಿ ಪ್ರಾಣವನ್ನೇ ತೆತ್ತರು.

ಗಾಂಧಿಯ ಪ್ರಸಿದ್ಧ ImageImage
ದಂಡಿ ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿದ ಕರ್ನಾಟಕದ ಏಕೈಕ ಪ್ರತಿನಿಧಿ, ಆಗ ಹತ್ತೊಂಬತ್ತರ ಹರೆಯದ ಮೈಲಾರ ಮಹದೇವ.

ಒಬ್ಬ ಪ್ರೌಢಶಾಲಾ ವಿದ್ಯಾರ್ಥಿಯನ್ನು ಕೇಳಿ,
ಕರ್ನಾಟಕದಿಂದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಹೋರಾಡಿದ ಕನ್ನಡದವರು ಎಷ್ಟೆಂದು, ಅವರಿಗೆ ಟಿಪ್ಪು ಬಿಟ್ಟರೆ ಬೇರೆ ಹೆಸರು ಹೇಳಲು ತಡಕಾಡುತ್ತಾರೆ...
ಇದನ್ನು ವಿಪರ್ಯಾಸ ಎನ್ನದೆ
ಬೇರೇನು ಕರೆಯಬೇಕು?

ಸ್ವಾತಂತ್ರ ಚಳವಳಿಯಲ್ಲಿ ಕರ್ನಾಟಕದಿಂದ ಗಾಂಧಿ ಯುಗದಲ್ಲಿ ಬಲಿದಾನ ಮಾಡಿದ ವೀರಯೋಧರಲ್ಲಿ ಮಹಾದೇವ ಕೂಡ ಒಬ್ಬರು.

ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭೂಗತರಾಗಿ ಮಹಾದೇವ ಮಾಡಿದ ಸಾಹಸ, ಪಟ್ಟ ಕಷ್ಟ- ಕೋಟಲೆ, ತೋರಿದ ಧಾಡಸಿತನ ಅಸಾಧಾರಣ.

ಮಾಡು ಇಲ್ಲವೆ ಮಡಿ ಎಂಬ ಗಾಂಧಿಯ ಕರೆಯಂತೆ ಮಾಡಿ ಮಡಿದ ಧೀರ, ಎದೆಗಾರ.
Read 12 tweets
ಇವರು ಯಾರು ಎಂದರೆ, ವರ್ಣಿಸಲು ನಿಮಿಷಗಳೇ ಬೇಕಾಗುತ್ತೆ.

ಹಿರಿಯ ಸಾಹಿತಿ, ಬಹುಭಾಷಾ ವಿದ್ವಾಂಸ, ಸ್ವಾತಂತ್ರ್ಯ ಹೋರಾಟಗಾರ, ಕರ್ನಾಟಕ ಏಕೀಕರಣ ಚಳುವಳಿಯ ಮುಂಚೂಣಿಯ ನಾಯಕ, ಕಾಸರಗೋಡು ವಿಲೀನೀಕರಣ ಕ್ರಿಯಾಸಮಿತಿಯ ಪ್ರಧಾನ ಸಂಚಾಲಕ..

ವೃತ್ತಿಯಲ್ಲಿ ಅಧ್ಯಾಪಕ, ಪ್ರವೃತ್ತಿಯಲ್ಲಿ ಸಂಪಾದಕ ದೇಶಕ್ಕಾಗಿ, ಕನ್ನಡಕ್ಕಾಗಿ, ಕರ್ನಾಟಕಕ್ಕಾಗಿ ImageImageImage
ನಿರಂತರವಾಗಿ ದುಡಿದ
ಶತಾಯುಷಿ ನಾಡೋಜ ಡಾ.ಕಯ್ಯಾರ ಕಿಞ್ಞಣ್ಣ ರೈರವರು.

ಅವರು ಐಕ್ಯಗಾನದ ಕವಿ ಎಂದೇ ಪ್ರಖ್ಯಾತರು. ‘ಐಕ್ಯವೊಂದೆ ಮಂತ್ರ/ ಐಕ್ಯದಿಂದೆ ಸ್ವತಂತ್ರ/ ಐಕ್ಯಗಾನದಿ ರಾಷ್ಟ್ರ ತೇಲುತಿರಲಿ..’ ಎಂದು ಹಾಡಿದ ಕವಿ ಕಯ್ಯಾರರು ಅದೇ ಹೊತ್ತಿಗೆ, ‘ಬೆಂಕಿ ಬಿದ್ದಿದೆ ಮನೆಗೆ ಓ ಬೇಗ ಬನ್ನಿ’ ಎಂದು ಗಡಿನಾಡಿನ ಕನ್ನಡಿಗರನ್ನು ಎಚ್ಚರಿಸಿದ್ದರು.
1915ರ ಜೂ. 8ರಂದು ಪೆರಡಾಲದಲ್ಲಿ ಜನಿಸಿದ ಕಯ್ಯಾರರು ಸಂಸ್ಕೃತ ಮತ್ತು ಕನ್ನಡ ಭಾಷೆಗಳಲ್ಲಿ ವಿದ್ವಾನ್ ಪದವಿ ಪಡೆದ ಬಳಿಕ ಬಿ.ಎ.ಪದವಿಯನ್ನು ಪಡೆದು ಅಧ್ಯಾಪಕ ತರಬೇತಿಯನ್ನು ಪೂರೈಸಿದರು.

ಆನಂತರ ಎಂ.ಎ. ಸ್ನಾತಕೋತ್ತರ ಪದವೀಧರರೂ ಆದ ಕಯ್ಯಾರರು ಪೆರಡಾಲದ ನವಜೀವನ ಹೈಸ್ಕೂಲ್‌ನಲ್ಲಿ ಕನ್ನಡ ಪಂಡಿತರಾಗಿ ಬಹುಕಾಲ ಸೇವೆ ಸಲ್ಲಿಸಿದರು.
Read 10 tweets
#ಮಾಸ್ತಿಕನ್ನಡದಆಸ್ತಿ

20ನೆಯ ಶತಮಾನದ ಆರಂಭದ ಕಾಲ, ಕನ್ನಡ ಭಾಷೆಗೆ ಹೇಳಿಕೊಳ್ಳುವಂಥ ಪ್ರೋತ್ಸಾಹವಿರಲಿಲ್ಲ. ಭಾಷೆಯ ಬೆಳವಣಿಗೆಯ ದೃಷ್ಟಿಯಿಂದ ಸಾಹಿತ್ಯದಲ್ಲಿ ಗಮನಾರ್ಹ ಕೆಲಸವಾಗಬೇಕಾಗಿದ್ದ ಕಾಲದಲ್ಲಿ ಇವರು ಸಾಹಿತ್ಯ ರಚನೆಯ ಕೆಲಸವನ್ನು ಕೈಗೊಂಡರು.

ಕಥೆ ಹೇಳುವುದೇ ಒಂದು ಪುಣ್ಯದ ಕೆಲಸ ಎಂದು ಭಾವಿಸಿದ್ದ ಇವರು ರಚಿಸಿದ ಕೃತಿಗಳ ಸಂಖ್ಯೆ 123 ImageImageImage
ತಮ್ಮ ಜೀವಿತಾವಧಿಯ ಕೊನೆಯ ಘಳಿಗೆಯ ತನಕ ಐಯಂಗಾರರು ಹಿಡಿದ ಲೇಖನಿಯನ್ನು ಬಿಡದೆ ತಮ್ಮ 95ನೆಯ ಹುಟ್ಟಿದ ಹಬ್ಬದ ದಿನದಂದೇ ಅಸಂಖ್ಯಾತ ಅಭಿಮಾನಿ ಬಳಗವನ್ನು ತ್ಯಜಿಸಿ ಸರಸ್ವತಿ ಮಡಿಲನ್ನು ಸೇರಿದರು.

ಅಪರೂಪದಲ್ಲಿ ಅಪರೂಪದ ಜೀವನ ನಡೆಸಿದ ಮಾಸ್ತಿ, ತಮ್ಮ ಮರಣ ಕೂಡ ಹೀಗೆಯೇ ಆಗಬೇಕು ಎಂದು ನಿರ್ಧರಿಸಿದ್ದರೇನೋ?

ಮಾಸ್ತಿ ಕನ್ನಡಿಗರಿಗೆ ಒಂದು ಆದರ್ಶ,
ಎಂಥ ಕಷ್ಟ ಕಾಲದಲ್ಲೂ ಅವರು ಜೀವನವನ್ನೆದುರಿಸಿದರು. ಸಾಹಿತ್ಯ ರಚಿಸಿದಂತೆಯೇ ಸಾಹಿತ್ಯ ಪೋಷಕರಾದರು.
ಜಿ ಪಿ ರಾಜರತ್ನಂ, ದ ರಾ ಬೇಂದ್ರೆಯಂತಹವರಿಗೆ ಅವರು ಆದರ್ಶರಾಗಿದ್ದರು.

“ಕನ್ನಡದ ಆಸ್ತಿ” ಎಂದೇ ಪರಿಗಣಿತರಾದ ಶ್ರೀನಿವಾಸ ಕಾವ್ಯನಾಮದ ಮಾಸ್ತಿ ಅವರು ಕೋಲಾರದ ಮಾಲೂರಿನ ಮಾಸ್ತಿ ಗ್ರಾಮದಲ್ಲಿ ರಾಮಸ್ವಾಮಿ ಅಯ್ಯಂಗಾರ್ – ತಿರುಮಲ್ಲಮ್ಮ ರವರಿಗೆ
Read 15 tweets
ನೀನಾರಿಗಾದೆಯೋ ಎಲೆ ಮಾನವಾ, ಹರಿ ಹರೀ ಗೋವು ನಾನು.

ಇಟ್ಟರೆ ಸಗಣಿಯಾದೆ ತಟ್ಟಿದರೆ ಕುರುಳಾದೆ
ಸುಟ್ಟರೇ ನೊಸಲಿಗೆ ವಿಭೂತಿಯಾದೆ
ತಟ್ಟದೇ ಹಾಕಿದರೆ ಮೇಲುಗೊಬ್ಬರವಾದೆ
ನೀನಾರಿಗಾದೆಯೋ ಎಲೆ ಮಾನವಾ, ಹರಿ ಹರೀ ಗೋವು ನಾನು.

ಹಾಲಾದೆ ಕರೆದರೆ ಮೊಸರಾದೆ ಹೆತ್ತರೆ
ಮೇಲೆ ಕೆನೆಗಡೆದರೆ ಬೆಣ್ಣೆಯಾದೆ
ಮೇಲಾದೆ ತುಪ್ಪವೂ ನಾನಾದೆ ಕಾಸಿದರೆ
ನೀನಾರಿಗಾದೆಯೋ
ಎಲೆ ಮಾನವಾ

ಉಳುವೆ ನಾ ಭೂಮಿಯನು ಹೊರವೆ ನಾ ಹೇರನ್ನು
ತುಳಿದು ಕಡ್ಡಿಯ ವಿಂಗಡಿಸುವೆ
ಕಳಪೆಯಾಗಿಹ ನೆಲವ ನಗುವ ತೋಪನು ಮಾಳ್ಪೆ
ನೀನಾರಿಗಾದೆಯೋ ಎಲೆ ಮಾನವಾ

ಹಾಯೆ ಹರಿಗೋಲಾದೆ ರಾಯಭೇರಿಗೆಯಾದೆ
ರಾಯರಾ ಕಾಲಿಗೆ ಮುಳ್ಳೊತ್ತುವಾದೆ
ಆಯವರಿತು ಹೊಡೆಯೆ ಮಧುರಗಾನಕ್ಕಾದೆ
ನೀನಾರಿಗಾದೆಯೋ ಎಲೆ ಮಾನವಾ

ಹಾದಿ ಬೀದಿಯಲಿರುವ ಕಸದ ಹುಲ್ಲನು ಹುಡುಕಿ
ಮೇದು ಮನೆಗೈದಿ ನಾನಮೃತವೀವೆ
ಅದನುಂಡು ನನಗೆರಡ ಬಗೆವ ಮಾನವ ಹೇಳು
ನೀನಾರಿಗಾದೆಯೋ ಎಲೆ ಮಾನವಾ..

ಈ ಪದ್ಯವನ್ನು ಯಾರೂ ಮರೆತಿರಲಾರರು. ನಾವು ಹಿರಿಯರನ್ನು ನೆನೆಯುವಾಗ ಅವರು ಉಳಿಸಿಹೋದ ಮುದಭಾವಗಳಿಂದ ನೆನೆಯಬೇಕು. ಮೇಲಿನ ಪದ್ಯ ನೀಡಿದವರು ಎಸ್. ಜಿ. ನರಸಿಂಹಾಚಾರ್ಯರು. ಇಂದು ಅವರ ಪುಣ್ಯಸ್ಮರಣೆ.

ಎಸ್. ಜಿ. ನರಸಿಂಹಾಚಾರ್ ಕನ್ನಡ, ಸಂಸ್ಕೃತ,
Read 12 tweets
ಗದಗ ಎಂದರೆ, ತಕ್ಷಣವೇ ಕರ್ನಾಟ ಭರತ ಕಥಾಮಂಜರಿ ಲೇಖಕ ಕುಮಾರ ವ್ಯಾಸ ಎಂದು ಪ್ರಸಿದ್ಧರಾದ ನಾರಾಯಣಪ್ಪನ ಹೆಸರನ್ನು ಮನಸ್ಸಿಗೆ ತರುತ್ತದೆ. ನಾಡು ಕಂಡಂತಹ ಶ್ರೇಷ್ಠ ಕವಿ, ಬರಹಗಾರ, ಸಾಹಿತಿ, ನಾಟಕ ಹಾಗೂ ಹೋರಾಟಗಾರ.ಶ್ರೀ.ಹುಯಿಲಗೋಳ ನಾರಾಯಣ ರಾವ್ ಕೂಡ ಜನಿಸಿದ್ದು ಈ ಪವಿತ್ರ ಭೂಮಿಯಲ್ಲಿಯೇ.

ವಿಪರ್ಯಾಸ ಏನೆಂದರೆ ಈ ಮಹಾನುಭಾವನ ಜೀವನ ಚರಿತ್ರೆ
ಎಷ್ಟು ಹುಡುಕಿದರೂ ಸಿಗುತ್ತಿಲ್ಲ.
ಸ್ಮಾರಕವಾಗಬೇಕಿದ್ದ ಅವರ ಮನೆ ಇಂದು ಪಾಳು ಬಿದ್ದ ಸ್ಥಿತಿಯಲ್ಲಿದೆ.

ನಾರಾಯಣರಾಯರು ಜನಿಸಿದ್ದು 1884 ಅಕ್ಟೋಬರ್ 4ರಂದು. ತಂದೆ-ತಾಯಿ ಕೃಷ್ಣರಾವ್ ಮತ್ತು ಬಹಿಣಕ್ಕ. ಬಾಲ್ಯದ ಶಿಕ್ಷಣವನ್ನು ಗದಗ, ಗೋಕಾಕ ಹಾಗು ಧಾರವಾಡಗಳಲ್ಲಿ ಪೂರೈಸಿದರು. 1902ರಲ್ಲಿ ಧಾರವಾಡದಲ್ಲಿ ಮೆಟ್ರಿಕ್ ಪರೀಕ್ಷೆಯನ್ನು ಮುಗಿಸಿ
ಉಚ್ಚ ಶಿಕ್ಷಣಕ್ಕಾಗಿ ಪುಣೆಯ ಫರ್ಗ್ಯೂಸನ್ ಕಾಲೇಜನ್ನು ಸೇರಿದರು. 1907ರಲ್ಲಿ ಪದವಿಯನ್ನು ಪಡೆದ ಬಳಿಕ ಧಾರವಾಡದ ವಿಕ್ಟೋರಿಯಾ ಪ್ರೌಢಶಾಲೆಯಲ್ಲಿ ಶಿಕ್ಷಕರಾದರು. ಕೆಲಕಾಲದ ನಂತರ ಶಿಕ್ಷಕ ವೃತ್ತಿಯನ್ನು ತ್ಯಜಿಸಿ, ಮುಂಬೈಗೆ ತೆರಳಿ, ಕಾನೂನು ಪದವಿಯನ್ನು ಪಡೆದು 1911ರಲ್ಲಿ ವಕೀಲಿ ವೃತ್ತಿಯನ್ನು ಆರಂಭಿಸಿದರು. ನಾರಾಯಣರಾಯರು ಮೂಲತಃ ನಾಟಕಕಾರರು.
Read 7 tweets
#ಕರುನಾಡಿನಹುಲಿ
#ಮೈಲಾರಮಹಾದೇವಪ್ಪ

ಗಾಂಧಿಯ ಪ್ರಸಿದ್ಧ ದಾಂಡಿ ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿದ ಕರ್ನಾಟಕದ ಏಕೈಕ ಪ್ರತಿನಿಧಿ, ಆಗ ಹತ್ತೊಂಬತ್ತರ ಹರೆಯದ ಮೈಲಾರ ಮಹದೇವ.

ಒಬ್ಬ ಪ್ರೌಢಶಾಲಾ ವಿದ್ಯಾರ್ಥಿಯನ್ನು ಕೇಳಿ,
ಕರ್ನಾಟಕದಿಂದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಹೋರಾಡಿದ ಕನ್ನಡದವರು ಎಷ್ಟೆಂದು, ಅವರಿಗೆ ಟಿಪ್ಪು ಬಿಟ್ಟರೆ ಬೇರೆ
ಹೆಸರು ಹೇಳಲು ತದಕಾಡುತ್ತಾರೆ...
ಇದನ್ನು ವಿಪರ್ಯಾಸ ಎನ್ನದೆ ಬೇರೇನು ಕರೆಯಬೇಕು?

ಸ್ವಾತಂತ್ರ ಚಳವಳಿಯಲ್ಲಿ ಕರ್ನಾಟಕದಿಂದ ಗಾಂಧಿ ಯುಗದಲ್ಲಿ ಬಲಿದಾನ ಮಾಡಿದ ವೀರಯೋಧರಲ್ಲಿ ಅಗ್ರಗಣ್ಯರು ಮೈಲಾರ ಮಹಾದೇವ ಕೂಡ ಒಬ್ಬರು. ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭೂಗತರಾಗಿ ಏಳು ತಿಂಗಳಿಗೂ ದೀರ್ಘಕಾಲ ಮಹಾದೇವ ಮಾಡಿದ ಸಾಹಸ, ಪಟ್ಟ ಕಷ್ಟ- ಕೋಟಲೆ, ತೋರಿದ
ಧಾಡಸಿತನ ಅಸಾಧಾರಣ. ಮಾಡು ಇಲ್ಲವೆ ಮಡಿ ಎಂಬ ಗಾಂಧೀಜಿಯ ಕರೆಯಂತೆ ಮಾಡಿ ಮಡಿದ ಧೀರ. ಎದೆಗಾರ.

ಒಂದು ಅನುಕೂಲವಂತ ರೈತ ಕುಟುಂಬದಲ್ಲಿ ಮೋಟೆಬೆನ್ನೂರು ಎಂಬ ಹಳ್ಳಿಯಲ್ಲಿ 1911ರ ಜೂನ್ 8ರಂದು ಮಹಾದೇವಪ್ಪ ಹುಟ್ಟಿದರು. ತಂದೆ ಮಾರ್ತಾಂಡಪ್ಪ, ತಾಯಿ ಬಸಮ್ಮ

ಗಳಗನಾಥರ ಕಾದಂಬರಿ, ಸದ್ಬೋಧ ಚಂದ್ರಿಕೆ ಪತ್ರಿಕೆ ಹಾಗೂ ಇತರ ದೇಶಭಕ್ತಿ ಪರ ಸಾಹಿತ್ಯ
Read 12 tweets
ಅಪರೂಪದಲ್ಲಿ ಅಪರೂಪ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಜೀವನ.

ಹುಟ್ಟು ಸಾವು ಎರಡೂ ಒಂದೇ ದಿನಾಂಕ ಈ ಜ್ಞಾನಪೀಠ ವಿಜೇತನದು.
ಈ ಅಪರೂಪದ "ಕನ್ನಡದ ಆಸ್ತಿ" ಯ ಬಗ್ಗೆ ಮತ್ತಷ್ಟು ತಿಳಿಯೋಣ ಬನ್ನಿ.
"ಸಣ್ಣ ಕಥೆಗಳ ಬ್ರಹ್ಮ" ಎಂದೇ ಪರಿಗಣಿತರಾದ, "ಶ್ರೀನಿವಾಸ" ಕಾವ್ಯನಾಮದ ಮಾಸ್ತಿ ಅವರು ಕೋಲಾರದ ಮಾಲೂರಿನ ಮಾಸ್ತಿ ಗ್ರಾಮದಲ್ಲಿ
ರಾಮಸ್ವಾಮಿ ಅಯ್ಯಂಗಾರ್ – ತಿರುಮಲ್ಲಮ್ಮ ದಂಪತಿಗಳಿಗೆ 08-06-1891ರಲ್ಲಿ ಜನಿಸಿದರು. ಪ್ರೌಢವಿದ್ಯಾಭ್ಯಾಸವನ್ನು ಮೈಸೂರಿನ ವೆಸ್ಲಿಯನ್ ಹೈಸ್ಕೂಲಿನಲ್ಲೂ, ಎಫ್.ಎ. ಅನ್ನು ಮಹಾರಾಜ ಕಾಲೇಜಿನಲ್ಲೂ ಮುಗಿಸಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ ಮುಗಿಸಿ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಎಂಎ ಪದವಿಯನ್ನು 1914ರಲ್ಲಿ ಪಡೆದರು.
ತಮ್ಮ ವಿದ್ಯಾಭ್ಯಾಸ ಕಾಲದಲ್ಲಿ ಮಾಸ್ತಿ ಯಾವ ಪರೀಕ್ಷೆಯಲ್ಲೂ ಪ್ರಥಮ ಸ್ಥಾನ ವನ್ನು ಬೇರೆಯವರಿಗೆ ಬಿಟ್ಟುಕೊಡಲಿಲ್ಲ.
ಮದ್ರಾಸಿನಲ್ಲಿ ಇಂಗ್ಲೀಷ್ ಎಂ.ಎ ಮಾಡಿಕೊಂಡು ಚಿನ್ನದಪದಕ ಗಳಿಸಿದ ಮಾಸ್ತಿ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಸುಮಾರು ಒಂದೂವರೆ ತಿಂಗಳು ಉಪಾಧ್ಯಾಯರಾಗಿದ್ದು ಬೆಂಗಳೂರಿಗೆ ಬಂದು ಸಿವಿಲ್ ಪರೀಕ್ಷೆಗೆ ಕುಳಿತು ಅಲ್ಲಿಯೂ ಪ್ರಥಮರಾಗಿ
Read 17 tweets
ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣಿನ ಸ್ಥಿತಿ, ವಿಧವಾವಿವಾಹ, ಬಾಲ್ಯವಿವಾಹ, ವಿಧವೆಯ ಗೋಳು, ಜಾತಿ ಪದ್ದತಿ ಹೀಗೆ ಸಮಾಜದಲ್ಲಿನ ಸಮಸ್ಯೆಗಳನ್ನು ತಮ್ಮ ಕಾದಂಬರಿಗಳ ಮೂಲಕ ಬೆಳಕು ಚೆಲ್ಲಿದ್ದ ಕನ್ನಡ ಹೆಸರಾಂತ ಲೇಖಕಿ ಎಂ.ಕೆ. ಇಂದಿರಾ ಅವರ ಜನ್ಮದಿನವಿಂದು.
ಎಂ.ಕೆ.ಇಂದಿರಾ 1917 ರಲ್ಲಿ ಮಲೆನಾಡಿನ ತೀರ್ಥಹಳ್ಳಿಯಲ್ಲಿ ಜನಿಸಿದರು. ಕೇವಲ ಎರಡನೇ
ತರಗತಿವರೆಗೆ ಮಾತ್ರ ಶಾಲಾ ಶಿಕ್ಷಣವನ್ನು ಮುಗಿಸಿದ ನಂತರ ತಮ್ಮ 12ನೇ ವಯಸ್ಸಿನಲ್ಲಿ ಅವರು ಮದುವೆಯಾದರು. ತದಂತರ ಇಂದಿರಾರವರು ತುಂಗಭದ್ರ ಇವರ ಮೊದಲ ಕೃತಿಯನ್ನು ರಚಿಸಿದರು. ಇದಾದನಂತರ ಅವರು ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕಥೆ, ಕಾದಂಬರಿ, ಪ್ರಹಸನ, ಹರಟೆ,ವ್ಯಕ್ತಿಚಿತ್ರ ಇತ್ಯಾದಿಯಾಗಿ 60 ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.
ಇವರ ಸದಾನಂದ, ಫಣಿಯಮ್ಮ ಕಾದಂಬರಿಗಳಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ಅಲ್ಲದೆ ಇವರ ಅನೇಕ ಕಾದಂಬರಿಗಳು ತೆಲುಗು , ಮಲೆಯಾಳಂ ಹಾಗೂ ಇಂಗ್ಲಿಷ್ ಭಾಷೆಗಳಿಗೆ ಅನುವಾದಗೊಂಡಿವೆ.
ಗೆಜ್ಜೆ ಪೂಜೆ` ಚಿತ್ರದ ಚಿತ್ರಕಥೆಗಾಗಿ ನಿರ್ದೇಶಕ ಎಸ್.ಆರ್.ಪುಟ್ಟಣ್ಣ ಕಣಗಾಲ್ ಅವರಿಗೆ ಅತ್ಯುತ್ತಮ ಚಿತ್ರಕಥೆಗಾರ ಪ್ರಶಸ್ತಿ ಪ್ರಕಟವಾದಾಗ ಮೂಲ
Read 15 tweets
#ಮಯೂರ ಎಂದಾಗ ನೆನಪಿಗೆ ಬರುವುದು, ನಟ ಸಾರ್ವಭೌಮ ರಾಜ್ಕುಮಾರ್ ಅವರು, ತೆರೆಯ ಮೇಲೆ ಬಂದ ಮಯೂರದ ಮೂಲ ಒಂದು ಕಾದಂಬರಿ. ಆ ಕಾದಂಬರಿ ಬರೆದವರೇ
ಮಯೂರಕ್ಕೆ ಕಥೆ ಚಿತ್ರಕಥೆ ಬರೆದದ್ದು, ಅವರೇ #ದೇವುಡು.

ದೇವುಡು ನರಸಿಂಹ ಶಾಸ್ತ್ರಿ ಎಂಬ ಮಹಾನ್ ವ್ಯಕ್ತಿಯ ಪರಿಚಯ ನನಗಾಗಿದ್ದು ಪ್ರೌಢ ಶಾಲೆ ವಿದ್ಯಾರ್ಥಿಯಾಗಿದ್ದಾಗ.
ಅಂತರ್ ಶಾಲಾ ಮಟ್ಟದ
ಸ್ಪರ್ಧೆಯಲ್ಲಿ ಮೊದಲನೇ ಪ್ರಶಸ್ತಿ ಗೆದ್ದ ನನಗೆ ದಕ್ಕಿದ್ದು ಈ ಮಹನೀಯರ 3 ಪುಸ್ತಕಗಳು.
ಭಾರತದ ಮಹಾಪುರುಷರು, ಮಹಾ ಬ್ರಾಹ್ಮಣ, ಮಹಾ ಕ್ಷತ್ರಿಯ.

ದೇವುಡು ಅವರು 1895 ಡಿಸೆಂಬರ 30 ರಂದು ವೇದ ಶಾಸ್ತ್ರಪಾರಂಗತ ಕುಟುಂಬದಲ್ಲಿ ಜನಿಸಿದರು. ತಾಯಿ ಸುಬ್ಬಮ್ಮ; ತಂದೆ ಕೃಷ್ಣಶಾಸ್ತ್ರೀ. ದೇವುಡು 5 ವರ್ಷದ ಬಾಲಕರಿದ್ದಾಗ ಇವರ ತಂದೆ ತೀರಿಕೊಂಡರು.
ತಮ್ಮ ೫ನೆಯ ವಯಸ್ಸಿಗಾಗಲೆ ಸಂಸ್ಕೃತದ ಅಮರಕೋಶ, ಶಬ್ದ ಮತ್ತು ರಘುವಂಶಗಳನ್ನು ಕಲಿತುಕೊಂಡ ದೇವುಡು ಅವರ ಪ್ರಾಥಮಿಕ, ಮಾಧ್ಯಮಿಕ ಹಾಗು ಕಾಲೇಜು ಶಿಕ್ಷಣವೆಲ್ಲ ಮೈಸೂರಿನಲ್ಲಿಯೆ ನಡೆಯಿತು. 1917ರಿಂದ 1922ರವರೆಗೆ ಇವರು ಮೈಸೂರಿನ ಮಹಾರಾಜಾ ಕಾಲೇಜು ಹಾಗು ಮೈಸೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯಾಗಿದ್ದರು. ಎಮ್.ಎ.ದಲ್ಲಿ ಸಂಸ್ಕೃತ ಮತ್ತು
Read 17 tweets

Related hashtags

Did Thread Reader help you today?

Support us! We are indie developers!


This site is made by just two indie developers on a laptop doing marketing, support and development! Read more about the story.

Become a Premium Member ($3.00/month or $30.00/year) and get exclusive features!

Become Premium

Too expensive? Make a small donation by buying us coffee ($5) or help with server cost ($10)

Donate via Paypal Become our Patreon

Thank you for your support!