Discover and read the best of Twitter Threads about #ಸಮಸ್ಯಾಪೂರಣ

Most recents (1)

#SamasyaPooranam #ಸಮಸ್ಯಾಪೂರಣ #OldPost #ಹಳೇಸರಕು

ಸಮಸ್ಯಾಪೂರಣ ಅನ್ನುವುದೊಂದು ಪದ್ಯರಚನೆಯ ಪ್ರಕಾರ. ಸಾಮಾನ್ಯವಾಗಿ ಅರ್ಥವಿರದ, (ಅಥವಾ ವಿಪರೀತಾರ್ಥವುಳ್ಳ) ಕೊಟ್ಟ ಸಾಲನ್ನು ಬಳಸಿ, ಛಂದಸ್ಸಿಗೆ ತಕ್ಕಂತೆ ಪದ್ಯ ಬರೆಯಬೇಕಾದ್ದು ಇಲ್ಲಿನ ಕೆಲಸ.

ಉದಾ: ಈ ಸಾಲು

ತಂಗಿಯಾದಳು ಜಾನಕಿಯು ಪಾಂಚಾಲ ನಂದನೆಗೆ!

ಸೀತೆ, ದ್ರೌಪದಿಯ ತಂಗಿಯೇ?
ನನ್ನ #ಸಮಸ್ಯಾಪೂರಣ:

ಅಂಗಿತೊಟ್ಟಿರೆ ಸಿಂಗದಾ ಮರಿ
ಮಂಗವಿಕ್ಕಿರೆ ರಂಗವಲ್ಲಿಯ
ಸಂಗತಿಯು ಕೇಳ್ವುದಕೆ ಸೈ ದಿಟದಲ್ಲಿ ನಡೆಯುವುದೆ?
ಪುಂಗಿ ಬಾರಿಸಿ ಕರಿಯ ಪಳಗಿಸೆ
ಹೊಂಗೆಮರದಲ್ಲಿಂಗು ಬೆಳೆದಿರೆ
ತಂಗಿಯಾದಳು ಜಾನಕಿಯು ಪಾಂಚಾಲ ನಂದನೆಗೆ!

#ಭಾಮಿನಿ #ಷಟ್ಪದಿ (ಎಲ್ಲವೂ ನಡೆಯದ ವಿಷಯಗಳಿದ್ದರೆ, ಸೀತೆಯೂ ದ್ರೌಪದಿಯ ತಂಗಿಯಾದಾಳು ಎಂಬ ಅರ್ಥ)
ಕಾಡಿನ ಸಿಂಹದ ಮರಿ ಬಟ್ಟೆ ತೊಟ್ಟಿದೆಯೆಂದರೆ, ಮರದ ಮೇಲಿನ ಮಂಗ ರಂಗೋಲಿ ಹಾಕಿತು ಎಂದರೆ, ಇದು ತಮಾಷೆಯೆಂದು ಕೇಳಬಹುದಷ್ಟೇ! ನಿಜದಲ್ಲಿ ನಡೆಯುವುದೇನು? ಹಾವನ್ನು ಪುಂಗಿ ಊದಿ ತಲೆಆಡಿಸುವಂತೆ ಮಾಡಬಹುದೇ ಹೊರತು ಆನೆಯನ್ನು ಮಾಡಬಹುದೇ? ಹೊಂಗೆಯ ಮರದಲ್ಲಿ ಇಂಗು ಬಿಡುತ್ತದೆ ಎಂದರೆ (ಇಂಗು ಒಂದು ಸಸ್ಯದ ಬೇರಿಂದ ಬರುವುದು), ಸೀತೆಯೂ ದ್ರೌಪದಿಯ ತಂಗಿ😂
Read 8 tweets

Related hashtags

Did Thread Reader help you today?

Support us! We are indie developers!


This site is made by just three indie developers on a laptop doing marketing, support and development! Read more about the story.

Become a Premium Member ($3.00/month or $30.00/year) and get exclusive features!

Become Premium

Too expensive? Make a small donation by buying us coffee ($5) or help with server cost ($10)

Donate via Paypal Become our Patreon

Thank you for your support!