Discover and read the best of Twitter Threads about #ಜಯಂತಿ

Most recents (3)

ಗೀತಪ್ರಿಯ ಅವರ ನಿಜವಾದ ಹೆಸರು ಲಕ್ಷ್ಮಣರಾವ್ ಮೋಹಿತೆ.
ಪುತಿನ ಅವರಿಂದ ಪ್ರಭಾವಿತರಾಗಿ ಕನ್ನಡ ಕಲಿತರು.

ಗೀತಪ್ರಿಯ ಅವರು 40 ಚಿತ್ರಗಳನ್ನು ನಿರ್ದೇಶಿಸುವುದರ ಜೊತೆಗೆ 250 ಚಿತ್ರಗಳಿಗೆ ಗೀತರಚನೆಕಾರರಾಗಿಯೂ ಹೆಸರು ಮಾಡಿದ್ದರು.

#ಜಯಂತಿ

ಚಿತ್ರ: ಒಂದೇ ಬಳ್ಳಿಯ ಹೂಗಳು.
ಸಾಹಿತ್ಯ: ಗೀತಪ್ರಿಯ
ಸಂಗೀತ: ಸತ್ಯಂ.
ಗಾಯನ: ಮಹಮ್ಮದ್ ರಫಿ. Image
ನೀನೆಲ್ಲಿ ನಡೆವೆ ದೂರ ಎಲ್ಲೆಲ್ಲೂ ಲೋಕವೇ
ಈ ಲೋಕವೆಲ್ಲ ಘೋರ, ಎಲ್ಲೆಲ್ಲೂ ಶೋಕವೇ

ನೀನೆಲ್ಲಿ ನಡೆವೆ ದೂರ ಎಲ್ಲೆಲ್ಲೂ ಲೋಕವೇ
ಈ ಲೋಕವೆಲ್ಲ ಘೋರ, ಎಲ್ಲೆಲ್ಲೂ ಶೋಕವೇ

ನಗುವಾಗ ಎಲ್ಲ ನೆಂಟರು, ಅಳುವಾಗ ಯಾರೂ ಇಲ್ಲ
ನಗುವಾಗ ಎಲ್ಲ ನೆಂಟರು, ಅಳುವಾಗ ಯಾರೂ ಇಲ್ಲ
ಮುಳ್ಳಲ್ಲಿ ನಿನ್ನ ನಡೆಸಿ ನಲಿವಾ ನಗುವೆ ವಿಕಾರ
ನೀನೆಲ್ಲಿ ನಡೆವೆ ದೂರ
ನೆರಳನ್ನು ನೀಡುವಂತಹ ಮರವನ್ನೇ ಕಡಿವರಲ್ಲ
ನೆರಳನ್ನು ನೀಡುವಂತಹ ಮರವನ್ನೇ ಕಡಿವರಲ್ಲ
ನಿಸ್ವಾರ್ಥ ಜೀವಿಗಳಿಗೆ ಜಗದೇ ಕಹಿಯೇ ಅಪಾರ
ನೀನೆಲ್ಲಿ ನಡೆವೆ ದೂರ

ಅಪಕಾರವನ್ನೇ ಕಾಣುವೆ, ಉಪಕಾರವನ್ನು ಕಾಣೆ
ಅಪಕಾರವನ್ನೇ ಕಾಣುವೆ, ಉಪಕಾರವನ್ನು ಕಾಣೆ
ಅನುರಾಗವಿಲ್ಲಿ ಇಲ್ಲವೆ? ಮನದೆ ಇದುವೇ ವಿಚಾರ
Read 4 tweets
#ಕರುನಾಡಿನಹುಲಿ
#ಮೈಲಾರಮಹಾದೇವಪ್ಪ
#ಜಯಂತಿ

ಗಾಂಧಿಯನ್ನು ಮತ್ತು ಆತನ ಅಹಿಂಸಾ ಮಾರ್ಗವನ್ನು ನಂಬಿ ಬಂದವರು ಅದೆಷ್ಟು ಲಕ್ಷವೋ...

ಬ್ರಿಟಿಷರಿಂದ ಗಾಂಧಿ ಮತ್ತು ಆತನ ಹತ್ತಿರದ ಸಂಗಡಿಗರಿಗೆ ಕೂದಲು ಕೂಡ ಸೊಂಕದಿದ್ದರೂ ಗಾಂಧಿಯೇ ದೇವರು ಎಂದು ನಂಬಿದ್ದ ಎಷ್ಟೋ ಅಮಾಯಕ ಜೀವಗಳು ದೇಶಕ್ಕಾಗಿ ಪ್ರಾಣವನ್ನೇ ತೆತ್ತರು.

ಗಾಂಧಿಯ ಪ್ರಸಿದ್ಧ ImageImage
ದಂಡಿ ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿದ ಕರ್ನಾಟಕದ ಏಕೈಕ ಪ್ರತಿನಿಧಿ, ಆಗ ಹತ್ತೊಂಬತ್ತರ ಹರೆಯದ ಮೈಲಾರ ಮಹದೇವ.

ಒಬ್ಬ ಪ್ರೌಢಶಾಲಾ ವಿದ್ಯಾರ್ಥಿಯನ್ನು ಕೇಳಿ,
ಕರ್ನಾಟಕದಿಂದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಹೋರಾಡಿದ ಕನ್ನಡದವರು ಎಷ್ಟೆಂದು, ಅವರಿಗೆ ಟಿಪ್ಪು ಬಿಟ್ಟರೆ ಬೇರೆ ಹೆಸರು ಹೇಳಲು ತಡಕಾಡುತ್ತಾರೆ...
ಇದನ್ನು ವಿಪರ್ಯಾಸ ಎನ್ನದೆ
ಬೇರೇನು ಕರೆಯಬೇಕು?

ಸ್ವಾತಂತ್ರ ಚಳವಳಿಯಲ್ಲಿ ಕರ್ನಾಟಕದಿಂದ ಗಾಂಧಿ ಯುಗದಲ್ಲಿ ಬಲಿದಾನ ಮಾಡಿದ ವೀರಯೋಧರಲ್ಲಿ ಮಹಾದೇವ ಕೂಡ ಒಬ್ಬರು.

ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭೂಗತರಾಗಿ ಮಹಾದೇವ ಮಾಡಿದ ಸಾಹಸ, ಪಟ್ಟ ಕಷ್ಟ- ಕೋಟಲೆ, ತೋರಿದ ಧಾಡಸಿತನ ಅಸಾಧಾರಣ.

ಮಾಡು ಇಲ್ಲವೆ ಮಡಿ ಎಂಬ ಗಾಂಧಿಯ ಕರೆಯಂತೆ ಮಾಡಿ ಮಡಿದ ಧೀರ, ಎದೆಗಾರ.
Read 12 tweets
#ಮಾಸ್ತಿಕನ್ನಡದಆಸ್ತಿ

20ನೆಯ ಶತಮಾನದ ಆರಂಭದ ಕಾಲ, ಕನ್ನಡ ಭಾಷೆಗೆ ಹೇಳಿಕೊಳ್ಳುವಂಥ ಪ್ರೋತ್ಸಾಹವಿರಲಿಲ್ಲ. ಭಾಷೆಯ ಬೆಳವಣಿಗೆಯ ದೃಷ್ಟಿಯಿಂದ ಸಾಹಿತ್ಯದಲ್ಲಿ ಗಮನಾರ್ಹ ಕೆಲಸವಾಗಬೇಕಾಗಿದ್ದ ಕಾಲದಲ್ಲಿ ಇವರು ಸಾಹಿತ್ಯ ರಚನೆಯ ಕೆಲಸವನ್ನು ಕೈಗೊಂಡರು.

ಕಥೆ ಹೇಳುವುದೇ ಒಂದು ಪುಣ್ಯದ ಕೆಲಸ ಎಂದು ಭಾವಿಸಿದ್ದ ಇವರು ರಚಿಸಿದ ಕೃತಿಗಳ ಸಂಖ್ಯೆ 123 ImageImageImage
ತಮ್ಮ ಜೀವಿತಾವಧಿಯ ಕೊನೆಯ ಘಳಿಗೆಯ ತನಕ ಐಯಂಗಾರರು ಹಿಡಿದ ಲೇಖನಿಯನ್ನು ಬಿಡದೆ ತಮ್ಮ 95ನೆಯ ಹುಟ್ಟಿದ ಹಬ್ಬದ ದಿನದಂದೇ ಅಸಂಖ್ಯಾತ ಅಭಿಮಾನಿ ಬಳಗವನ್ನು ತ್ಯಜಿಸಿ ಸರಸ್ವತಿ ಮಡಿಲನ್ನು ಸೇರಿದರು.

ಅಪರೂಪದಲ್ಲಿ ಅಪರೂಪದ ಜೀವನ ನಡೆಸಿದ ಮಾಸ್ತಿ, ತಮ್ಮ ಮರಣ ಕೂಡ ಹೀಗೆಯೇ ಆಗಬೇಕು ಎಂದು ನಿರ್ಧರಿಸಿದ್ದರೇನೋ?

ಮಾಸ್ತಿ ಕನ್ನಡಿಗರಿಗೆ ಒಂದು ಆದರ್ಶ,
ಎಂಥ ಕಷ್ಟ ಕಾಲದಲ್ಲೂ ಅವರು ಜೀವನವನ್ನೆದುರಿಸಿದರು. ಸಾಹಿತ್ಯ ರಚಿಸಿದಂತೆಯೇ ಸಾಹಿತ್ಯ ಪೋಷಕರಾದರು.
ಜಿ ಪಿ ರಾಜರತ್ನಂ, ದ ರಾ ಬೇಂದ್ರೆಯಂತಹವರಿಗೆ ಅವರು ಆದರ್ಶರಾಗಿದ್ದರು.

“ಕನ್ನಡದ ಆಸ್ತಿ” ಎಂದೇ ಪರಿಗಣಿತರಾದ ಶ್ರೀನಿವಾಸ ಕಾವ್ಯನಾಮದ ಮಾಸ್ತಿ ಅವರು ಕೋಲಾರದ ಮಾಲೂರಿನ ಮಾಸ್ತಿ ಗ್ರಾಮದಲ್ಲಿ ರಾಮಸ್ವಾಮಿ ಅಯ್ಯಂಗಾರ್ – ತಿರುಮಲ್ಲಮ್ಮ ರವರಿಗೆ
Read 15 tweets

Related hashtags

Did Thread Reader help you today?

Support us! We are indie developers!


This site is made by just two indie developers on a laptop doing marketing, support and development! Read more about the story.

Become a Premium Member ($3.00/month or $30.00/year) and get exclusive features!

Become Premium

Too expensive? Make a small donation by buying us coffee ($5) or help with server cost ($10)

Donate via Paypal Become our Patreon

Thank you for your support!