Naraprasanna Vittala Dasa (ನರಪ್ರಸನ್ನವಿಠ್ಠಲನದಾಸ ) Profile picture
Staunch Madhwa, ಕನ್ನಡಿಗ, ದಾಸ ಸಾಹಿತ್ಯದಲ್ಲಿ ಆಸಕ್ತಿ

Aug 26, 2019, 8 tweets

#PrassannaSrinivasaDasaru #VishnuSahasraNama
Sri Prassana Srinvisa Dasaru has written stotra bashya in kannada on Vishnu Sahasra nama in padya roopa.

I will try to reproduce it here on twitter. God willing, I will try to post at least 10 names a day.

#PrassannaSrinivasaDasaru #VishnuSahasraNama
ಕಲ್ಯಾಣತಮ ರೂಪ ಅನಘ ಸುಗುಣಾರ್ಣವನೆ
ಮಾಲಕ್ಷ್ಮೀಪತಿ ಬ್ರಹ್ಮ ವಿಶ್ವಾಖ್ಯ ವಿಷ್ಣು ವಶಟ್ಕಾರ|
ಶೀಲ ಜೀವೋತ್ತಮ ವರವಾಯು ಬ್ರಹ್ಮಧಾಮನ ಹೃತ್
ಕೀಲಾಲಜಾಂತಸ್ಥ ಪರಮಾತ್ಮ ಕೇಶವ ನಮಸ್ತೆ ||ಪ||

#PrassannaSrinivasaDasaru #VishnuSahasraNama

1. ಶ್ರೀ ವಿಶ್ವಾಯ ನಮಃ
ವರ ವಾಯ್ವಂತರ್ಯಾಮಿ ವಿಶ್ವ ನಮೋ ನಮೋ ನಿನಗೆ
ಚರಾಚರ ಸರ್ವ ಒಳಹೊರ ವ್ಯಾಪ್ತ ನೀ ಸರ್ವೇಶ |
ಪ್ರಕೃತಿ ನಿಯಾಮಕ ಜಗಜ್ಜನ್ಮಾದಿಗಳಕರ್ತ
ಗರುಡವಾಹನ ಪರಮಪೂರ್ಣ ಸ್ವತಂತ್ರಶ್ರೀಶ ||

#PrassannaSrinivasaDasaru #VishnuSahasraNama
2. ಶ್ರೀ ವಿಷ್ಣವೇ ನಮಃ
ವಿಶೇಷದಿ ಚೇಷ್ಟೆಗಳ ಮಾಡಿಸುವವನು ನೀನು
ಅಸಮ ಬಲಾದಿರೂಪ ವಿಷ್ಣು ನಾಮಸ್ತುಭ್ಯಂ |
ದೇಶಕಾಲ ವಸ್ತು ಸರ್ವ ವ್ಯಾಪಿಸಿದೆ ತ್ರಿವಿಕ್ರಮ
ಸುಶುಭರೂಪದಿ ಪಾದಕ್ರಮಣ ಮಾಡಿದಿ ವಿಷ್ಣೋ ||

#PrassannaSrinivasaDasaru #VishnuSahasraNama

3. ಶ್ರೀ ವಷಟ್ಕಾರಾಯ ನಮಃ

ಜೀವ ಸ್ವರೂಪ ಗುಣ ದ್ಯುಚಿತ್ ಸುಖೋಜಸ್ ಸಹ ಬಲ
ದಿವ್ಯಾಪರೋಕ್ಷ ಪ್ರದಾತ ವಷಟ್ಕಾರ ನಮೋ ಎಂಬೆ |
ಸರ್ವಸ್ಯವಶಿ ಮಹಾ ಐಶ್ವರ್ಯಾ ಜ್ಞಾನ ಯಶಸ್ ವೀರ್ಯ
ಶ್ರೀವೈರಾಗ್ಯ ಗುಣಕ್ರಿಯಾ ಪೂರ್ಣನಾಗಿ ಉಳ್ಳವನೇ ||

#PrassannaSrinivasaDasaru #VishnuSahasraNama

4. ಶ್ರೀ ಭೂತಭವ್ಯಭವತ್ಪ್ರಭವೇ ನಮಃ

ಭೂತಭವ್ಯ ಭವತ್ಕಾಲ ಜನಕ್ಕೆ ಒಳ್ಳೆ, ಐಶ್ವರ್ಯ
ಪ್ರದ "ಭೂತಭವ್ಯಭವತ್ಪ್ರಭವೇ" ನಮೋ ನಮಸ್ತೆ |
ಹಿಂದಿನ ಮುಂದಿನ ಈಗಿನ ಈ ಮೂರು ಕಾಲದಲ್ಲೂ
ಎಂದಿಗೂ ಪ್ರಭು ನೀನು ಮಂಗಲಪ್ರದನು ಶ್ರೀಪತಿಯು ||

#PrassannaSrinivasaDasaru #VishnuSahasraNama

5. ಶ್ರೀ ಭೂತಕೃತೇ ನಮಃ

ರುದ್ರನ್ನ ಸೃಷ್ಟಿಸಿದಿ "ಭೂತಕೃತ" ನಮೋ ನಮೋ ಎಂಬೆ
ಕ್ಷುದ್ರ ಭೂತಾದಿಗಳುಪದ್ರವ ಕಳೆದು ಪೊರೆವಿ |
ಮೋದಮಯ ನೀ ಸ್ವತಂತ್ರ ಸರ್ವಪ್ರಾಣಿಗಳಸ್ರಷ್ಟಾ
"ಯತೋವಾ ಇಮಾನಿ" ಇಂಥಾ ಶ್ರುತಿ ಹೊಗಳುತಿವೆಯೂ ||

#PrassannaSrinivasaDasaru #VishnuSahasraNama

6. ಶ್ರೀ ಭೂತಭೃತೇ ನಮಃ

ಪ್ರಾಣಿ ಎಲ್ಲರ ಪೋಷಕ "ಭೂತಭೃತ" ನಮೋ ನಿನಗೇ
ನಿನ್ನಾಧೀನವು ಸರ್ವ ಚರಾಚರ ಜಗತ್ತು ಸ್ವಾಮಿ |
ನೀನೀವೆ ಸರ್ವ ಆಧಾರಣಾಗಿರುತಿಹಿ ಶ್ರೀಪತೇ
ಆಮ್ನಾಯ ಸ್ಮೃತಿ ಸಿದ್ಧವು ಬೀಭರ್ತ್ಯವ್ಯಯ - ಈಶ್ವರ ||

Share this Scrolly Tale with your friends.

A Scrolly Tale is a new way to read Twitter threads with a more visually immersive experience.
Discover more beautiful Scrolly Tales like this.

Keep scrolling