#atmanirbharbharat
@PMOIndia @narendramodi ಅವರು ಪ್ರಕಟಿಸಿದ 20 ಲಕ್ಷ ಕೋಟಿ ರೂಪಾಯಿ ಮೊತ್ತದ ಸ್ವಾವಲಂಬಿ ಭಾರತ ಯೊಜನೆಯ ವಿವರಗಳನ್ನ ಹಣಕಾಸು ಸಚಿವೆ @nsitharaman ಅವರು ನೀಡಿದ್ದಾರೆ. ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ 3 ಲಕ್ಷ ಕೋಟಿ ರೂಪಾಯಿ ಸಾಲ ನೀಡಲಾಗುತ್ತಿದೆ. ಇದಕ್ಕೆ ಯಾವುದೇ ಗ್ಯಾರಂಟಿ ನೀಡಬೇಕಾಗಿಲ್ಲ.
ಇದರಿಂದ 45 ಲಕ್ಷ ಸಣ್ಣ ಕಂಪನಿಗಳಿಗೆ ಅನುಕೂಲವಾಗಲಿದೆ. ಅಕ್ಟೋಬರ್ 31ರವರೆಗೆ ಸಣ್ಣ ಕೈಗಾರಿಕೆಗಳು ಈ ಸಾಲ ಸೌಲಭ್ಯ ಪಡೆಯಬಹುದು. ಒಂದು ವರ್ಷದವರಗೆ ಇಎಂಐ ತುಂಬಬೇಕಾಗಿಲ್ಲ. ಎರಡನೇ ವರ್ಷದಿಂದ ಸಾಲಮರುಪಾವತಿ ಆರಂಭವಾಗುತ್ತದೆ. ಸಾಲತೀರಿಸಲು ನಾಲ್ಕು ವರ್ಷ ಕಾಲಾವಕಾಶವಿದೆ.
@Anurag_Office
#atmanirbharbharat
ಕೇಂದ್ರ ಸರಕಾರವು ಟಿಡಿಎಸ್/ ಟಿಸಿಎಸ್‌ಗಳಲ್ಲಿ (ಆದಾಯ ಮೂಲದಲ್ಲಿಯೇ ತೆರಿಗೆ ಸಂಗ್ರಹ) ಶೇ.25ರಷ್ಟು ಕಡಿತ ಮಾಡಿದೆ. ಇದರಿಂದ ತೆರಿಗೆದಾರರಿಗೆ 50 ಸಾವಿರ ಕೋಟಿ ರೂಪಾಯಿ ಉಳಿತಾಯ ಆಗಲಿದೆ. 2021ರ ಮಾರ್ಚ್‌ವರೆಗೆ ಈ ವಿನಾಯಿತಿ ಮುಂದುವರಿಯುತ್ತದೆ. @narendramodi @PMOIndia @BJP4India
@nsitharaman @BJP4India
#AtmaNirbharBharatAbhiyan
ಕೊರೊನಾ ಮತ್ತು ಲಾಕ್‌ಡೌನ್ ಪರಿಣಾಮವಾಗಿ ಸಂಕಷ್ಟಕ್ಕೆ ಸಿಲುಕಿರುವ ದೇಶದ ವಿದ್ಯುತ್ ಸರಬರಾಜು ಕಂಪನಿಗಳ ಪುನಶ್ಚೇತನಕ್ಕಾಗಿ 90 ಸಾವಿರ ಕೋಟಿ ರೂಪಾಯಿ ನೆರವು ಘೋಷಿಸಲಾಗಿದೆ. ಇದರಿಂದ ದೇಶದ ಒಟ್ಟಾರೆ ವಿದ್ಯುತ್ ಸರಬರಾಜು ವ್ಯವಸ್ಥೆಯು ಬಲಗೊಳ್ಳಲಿದೆ @narendramodi @nsitharaman
@CMofKarnataka
#AtmaNirbharBharatAbhiyan
ಇನ್ನುಮುಂದೆ 200 ಕೋಟಿ ರೂಪಾಯಿ ಮೌಲ್ಯದವರೆಗಿನ ಕೆಲಸ (ಸೇವೆ) ಅಥವಾ ಸರಂಜಾಮುಗಳಿಗಾಗಿ ಜಾಗತಿಕ ಟೆಂಡರ್ ಕರೆಯಲಾಗುವುದಿಲ್ಲ. ಸ್ವದೇಶಿ ಕಂಪನಿಗಳು, ಗುತ್ತಿಗೆದಾರರು, ಸರಬರಾಜುದಾರರನ್ನು ಉತ್ತೇಜಿಸಲು ಈ ಕ್ರಮಕೈಗೊಳ್ಳಲಾಗಿದೆ.
#ಸ್ವಾವಲಂಬಿ_ಭಾರತ್_ಶ್ರೇಷ್ಠ_ಭಾರತ್
ಸಾಲ ತೀರಿಸಲಾಗದೆ ಅನುತ್ಪದಕಗೊಂಡಿರುವ ಸುಮಾರು 2 ಲಕ್ಷ ಅತಿಸಣ್ಣ, ಸಣ್ಣ, ಮಧ್ಯಮ ಗಾತ್ರದ ಕೈಗಾರಕೆಗಳ ಪುನಶ್ಚೇತನಕ್ಕಾಗಿ ಕೇಂದ್ರವು 20 ಸಾವಿರ ಕೋಟಿ ರೂಪಾಯಿ ನೆರವು ಘೋಷಿಸಿದೆ.
ಹಾಗೆಯೇ ಈ ಕೈಗಾರಿಗಳಿಗೆ ಇಕ್ವಿಟಿ ಧನಸಹಾಯಕ್ಕಾಗಿ 10 ಸಾವಿರ ಕೋಟಿ ಆರಂಭಿಕ ನಿಧಿಯೊಂದಿಗೆ 50 ಸಾವಿರ ಕೋಟಿ ರೂಪಾಯಿ 'ಫಂಡ್ ಆಫ್ ಫಂಡ್' ಸ್ಥಾಪಿಸಿದೆ.
#AtmaNirbharBharatAbhiyan
ಉದ್ಯೋಗಿಗಳ ಭವಿಷ್ಯ ನಿಧಿಗೆ ಉದ್ಯೋಗದಾತರು ಹಾಗೂ ಉದ್ಯೋಗಿಗಳು ನೀಡಬೇಕಾದ ವಂತಿಗೆಯನ್ನು ಇನ್ನೂ ಮೂರು ತಿಂಗಳವರೆಗೆ ಅಂದರೆ ಆಗಸ್ಟ್ ತನಕ ಕೇಂದ್ರ ಸರ್ಕಾರವೇ ತುಂಬಲಿದೆ. ಇದರಿಂದ 72.22 ಲಕ್ಷ ನೌಕರರು ಸುಮಾರು 2500 ಕೋಟಿ ರೂಪಾಯಿ ಲಾಭ ಪಡೆಯಲಿದ್ದಾರೆ.
@narendramodi
@nsitharaman @Anurag_Office
Share this Scrolly Tale with your friends.
A Scrolly Tale is a new way to read Twitter threads with a more visually immersive experience.
Discover more beautiful Scrolly Tales like this.
