ಸಧ್ಯದ ಓದು - ನೃಪತುಂಗ
ಲೇಖಕ : ತರಾಸು ಅವ್ರು ( ತಳಕು ರಾಮಸ್ವಾಮಯ್ಯ ಸುಬ್ಬರಾಯ ಅವ್ರು ) 🙏
"ರಾಷ್ಟ್ರಕೂಟ ಚಕ್ರವರ್ತಿ ಅಮೋಘವರ್ಷ ನೃಪತುಂಗ.
ಕಾವೇರಿಯಿಂದ ಗೋದಾವರಿ ಪರ್ಯಂತದ ನಾಡನ್ನು ಸುಮಾರು ಅರವತ್ತು ವರ್ಷ ಧರ್ಮದಿಂದ ಪಾಲಿಸಿ, ದೇಶ ವಿದೇಶಗಳಲ್ಲೂ ಪ್ರಸಿದ್ಧನಾಗಿದ್ದ ದೊರೆ."
#ನೃಪತುಂಗ #ತರಾಸು
"ಸುಖವಾಗಲಿ ದುಃಖವಾಗಲಿ ಒಂಟಿಯಾಗಿ ಬರುವುದಿಲ್ಲ, ಇಲ್ಲದಾಗ ಇಲ್ಲ, ಬರುವಾಗ ಹಿಂಡುಹಿಂಡಾಗಿ ಹುಣ್ಣಿಮೆಯ ಮಧ್ಯರಾತ್ರಿ ಏರಿ ಏರಿ ಬರುವ ಕಡಲ ಅಲೆಗಳಂತೆ ಬರುತ್ತವೆ."
#ನೃಪತುಂಗ #ತರಾಸು
ತಾವಾಗಿ ಯಾರೂ ಯುದ್ಧಕ್ಕೆ ರಕ್ತಪಾತಕ್ಕೆ ಹಾತೊರೆಯಬಾರದು.ಅಂಥ ಅಧರ್ಮ ಯುದ್ಧ ಇಹಪರರ ವೈರಿ.ಆದರೆ ಪ್ರಜಾ ಪಾಲನೆಗೆ ಅಗತ್ಯವಾದ ಯುದ್ಧಕ್ಕೆ ಹಿಂಜರಿಯುವ ಅರಸನನ್ನು ರಾಜ್ಯಲಕ್ಷ್ಮಿ ಹೇಸಿ ದೂರವಾಗುತ್ತಾಳೆ.ನಿಗ್ರಹಯೋಗ್ಯನಾದ ಶತ್ರುವನ್ನಾಗಲಿ,ದುಷ್ಟ ಪುತ್ರನನ್ನಾಗಲಿ ಸಮಾನವಾಗಿ ನಿಗ್ರಹಿಸಿ,ಪ್ರಜಾ ಪರಿಪಾಲನೆ ಮಾಡುವ ದೊರೆಯೇ ಸಮಂಜಸನು. #ನೃಪತುಂಗ
"ಅರಸೊತ್ತಿಗೆ ನಿತ್ಯ ಸುಖಾಸಮಾರಾಧನೆಯ ಸುಪ್ಪತ್ತಿಗೆಯಲ್ಲ. ಪ್ರಜೆಗಳ ವೀರಭಟರ ತ್ಯಾಗದ ಹಾಲಿನಿಂದ ಬೆಳೆದ ರಾಜಶರೀರ ಅವರ ಸೇವೆಗೆ ಮೀಸಲಾಗಬೇಕು."
#ನೃಪತುಂಗ #ತರಾಸು_ಅವ್ರು 🙏
"ಪ್ರಜಾಪ್ರೇಮ ಸಿಂಹಾಸನಕ್ಕೆ ವಜ್ರಕೋಟೆ. ಸಾಮ್ರಾಟರಿಂದ ಸಿಂಹಾಸನಗಳು ಉಳಿಯಿವುದಿಲ್ಲ,ಬೆಳೆಯುವುದಿಲ್ಲ.ಪ್ರಜೆಗಳ ಪ್ರೇಮಪೂರ್ಣ ನಿಷ್ಠೆಯೇ ಸಿಂಹಾಸನದ ರಕ್ಷಾ ದೇವತೆ."
#ನೃಪತುಂಗ #ತರಾಸು_ಅವ್ರು 🙏
"ನಿಂತಲ್ಲಿ ನಿಲ್ಲದೆ ಸಾಗಿದ, ಕೆಣಕಿದ ಜೇನುಪೆಡೆಯಂಥ ಕನ್ನಡ ಸೇನೆ , ವೆಂಗಿವಳ್ಳಿಯ ಬಯಲಲ್ಲಿ ಚಾಲುಕ್ಯ ಸೇನೆಯ ಮೇಲೆ ಎರಗಿತು, ಹಾವಿನ ಮೇಲೆ ಎರಗುವ ಗರುಡನಂತೆ.
#ನೃಪತುಂಗ #ತರಾಸು_ಅವ್ರು
"ರಾಷ್ಟ್ರಕೂಟ ಸೇನೆಯ ಸಿಡಿಲಾಘಾತದಿದಿರು ಚಾಲುಕ್ಯ ಸೇನೆ ತತ್ತರಿಸಿ ಸತ್ತ ದೊರೆ ಕಲಿವಿಷ್ಣುವರ್ಧನನನ್ನು ಸಮರಭೂಮಿಯಲ್ಲಿ ಬಿಟ್ಟು ಸಾಮಂತ ಪದವಿ ಸ್ವೀಕಾರ ಮಾಡಿ ಪಲಾಯನ ಮಾಡಿತು. ಮುಗಿಲಿನಂತೆ ಕವಿದು ಬಂದದು ಇಬ್ಬನಿಯಂತೆ ಕರಗಿ ಹೋಯಿತು."
#ನೃಪತುಂಗ #ತರಾಸು_ಅವ್ರು
"ಬರುವುದೆಲ್ಲಾ ನಾವು ಅನುಭವಿಸಬೇಕೆಂದು ಬರುತ್ತವೆಯೇ ಹೊರತು , ಮನೋವ್ಯಥೆ ಮಾಡಿಕೊಂಡು ಕೊರಗುವುದಕ್ಕಲ್ಲ. ಸುಖ ದುಃಖಗಳು ಅಭ್ಯಾಗತರಂತೆ. ಒಬ್ಬರು ಬಂದರೆಂದು ಹಿಗ್ಗೇಕೆ, ಮತ್ತೊಬ್ಬರು ಬಂದರೆಂದು ಕೊರಗೇಕೆ.? ಬರುವುದು ಬರಲಿ ನಮ್ಮ ಕರ್ತವ್ಯ ನಾವು ಮಾಡಬೇಕು."
#ನೃಪತುಂಗ #ತರಾಸು
ಲಕ್ಷ್ಮವ್ವ - "ಕಾಪಾಡುವ ದೈವವೇ ಕಾಡುವ ಪಿಡುಗಾದಾಗ ಏನು ಮಾಡುವುದು ?"
ನೃಪತುಂಗ - "ಕಾಡುವ ಪಿಡುಗು ದೈವದ ಅವತಾರವೇ ಎಂದು ನಂಬಿ ನಿಲ್ಲುವುದು."
#ನೃಪತುಂಗ #ತರಾಸು
"ಹೂವಿನ ಗಿಡದ ಮೇಲೆ ಪ್ರೀತಿ ಇರಬೇಕು ನಿಜ. ಹಾಗೆಂದು ಹೆಚ್ಚಾಗಿ ನೀರು, ಗೊಬ್ಬರ ಹಾಕಿದರೆ ಗಿಡ ಉಳಿದೀತೆ..? ಮಕ್ಕಳೂ ಗಿಡದ ಹಾಗೆ, ಕಾಪಾಡುವಾಗ ಮಮತೆ ಬೇಕು , ಪ್ರೀತಿಸುವಾಗ ಸಂಯಮ ಬೇಕು."
#ನೃಪತುಂಗ #ತರಾಸು
"ಇಹವನ್ನು ಮರೆತು ಪರಕ್ಕೆ ಎಳೆಸುವುದು ಮುಗಿಲಿಗೆ ಏಣಿ ಹಾಕಲು ಯತ್ನಿಸಿದಂತೆ"
"ತನ್ನ ಪಾಲಿಗೆ ಬಂದ ಕರ್ತವ್ಯವನ್ನು ಕುಶಲತೆಯಿಂದ ತನ್ಮಯತೆಯಿಂದ ಮಾಡುವುದೇ ಯೋಗ."
#ನೃಪತುಂಗ #ತರಾಸು
"ಮೃತರಾದವರ ಬಗ್ಗೆ ನಮಗೆ ಪ್ರೇಮವಿದ್ದರೆ ಕಂಬನಿಗರೆಯುತ್ತ ಕುಳಿತುಕೊಳ್ಳುವುದೇ ಆ ಪ್ರೇಮಕ್ಕೆ ಸಾಕ್ಷಿಯಲ್ಲ,ಪರಲೋಕದಲ್ಲಿರುವ ಅವರ ಆತ್ಮಕ್ಕೆ ತೃಪ್ತಿಯಾಗುವಂತೆ ಬದುಕಿರುವ ನಾವು ಬದುಕಬೇಕು.ಶೋಕದಿಂದ ಹತಾಶರಾಗಿ ಕುಳಿತರೆ ಅವರ ಆತ್ಮಕ್ಕೂ ಅತೃಪ್ತಿ , ನಮ್ಮ ಆತ್ಮಕ್ಕೂ ಕೇಡು."
#ನೃಪತುಂಗ #ತರಾಸು
"ಶಿಷ್ಯನಿಗೆ ಗುರುವಿನಲ್ಲಿ ಗೌರವವಿಲ್ಲವಾದಲ್ಲಿ ವಿದ್ಯೆ ವಿಕಾಸವಾಗುವುದಿಲ್ಲ."
"ನಮಗೆ ಅಪಮಾನ, ಅಗೌರವ ಇತರರಿಂದ ಆಗುವುದಿಲ್ಲ, ನಮ್ಮ ನಡತೆಯೇ ನಮಗೆ ಮಾನಾಪಮಾನವನ್ನುಂಟುಮಾಡುವುದು."
"ಗಾಳಿ ನೀರನ್ನು ಕಲಕಿದಂತೆ, ಬೆಟ್ಟವನ್ನು ಕಲಕಲು ಸಾಧ್ಯವೇ..?"
#ನೃಪತುಂಗ #ತರಾಸು
"ಚಕ್ರವರ್ತಿ ವೈಯಕ್ತಿಕವಾಗಿ ಯಾವ ಧರ್ಮದಲ್ಲೇ ಶ್ರದ್ದೆ ತೋರಿದರೂ, ಚಕ್ರವರ್ತಿಯಾಗಿ ಆ ಬಗೆಯ ಬೇಧ ಮಾಡಿದರೆ ಅಂತ ಅರಸನಿಗೆ ವಿನಾಶ ತಪ್ಪದು. ಚಕ್ರವರ್ತಿಯಾಗಿ ಪಾಲಿಸಬೇಕಾದದ್ದು ಪ್ರಜಾ ಧರ್ಮವೊಂದೇ "
#ನೃಪತುಂಗ #ತರಾಸು
"ಸುಖ ದುಃಖಗಳ ನಿತ್ಯ ಆಘಾತಕ್ಕೆ ಬೆದರಿ ಬದುಕಿನಿಂದಾಚೆಗೆ ಓಡುವ ಹೇಡಿತನ ಸನ್ಯಾಸವಲ್ಲ, ಅವ್ಯಕ್ತವಾಗಿರುವ ಆತ್ಮವನ್ನು ಸಾಕ್ಷಾತ್ಕಾರಮಾಡಿಕೊಳ್ಳುವ ಸಾಹಸವೇ ಸನ್ಯಾಸ."
"ತಾನು ಉರಿದರೂ ಲೋಕಕ್ಕೆ ಬೆಳಕು ನೀಡುವ ಬತ್ತಿ ನಿಜವಾದ ಸನ್ಯಾಸಿ."
"ಸನ್ಯಾಸಿಗೆ ಸ್ವಸುಖ ವಿಸ್ಮೃತಿ , ಪರಹಿತ ಚಿಂತೆಯೇ ಕರ್ತವ್ಯ."
#ನೃಪತುಂಗ #ತರಾಸು
"ಅಜ್ಞಾನದಂತೆಯೇ ಅತಿಜ್ಞಾನವೂ ಅಪಾಯಕಾರಿ"
"ಗ್ರಹಗಳು ತರುವ ಫಲವನ್ನು ತರಲಿ.
ಏನು ಬಂದರೂ ಕದಲದ ಚಿತ್ತ ಶಾಂತಿಯೊಂದಿರಲಿ."
#ನೃಪತುಂಗ #ತರಾಸು
"ಸ್ನೇಹಿತರ, ಆಪ್ತರ ಹೆಣಗಳನ್ನ ತುಳಿದುಕೊಂಡೇ ಕತ್ತಿ ಹಿರಿದು ಮುಂದೆ ನುಗ್ಗುವ ಸೈನಿಕನಂತೆ, ಚಕ್ರವರ್ತಿ ತನ್ನದೆನ್ನುವುದು ಉರಿದುಬೀಳುತ್ತಿದ್ದರೂ ಲೆಕ್ಕಿಸದೆ ಪ್ರಜಾಹಿತ ಚಿಂತನೆ ಮಾಡಬೇಕು."
#ನೃಪತುಂಗ #ತರಾಸು
"ಪ್ರಕೃತಿಯ ಸಂತಾನ ಜನ, ಆಕೆಯ ನಿಯಮಕ್ಕೆ ವಿರುದ್ಧವಾಗಿ ನಡೆದಾಗ ಪ್ರಕೃತಿ ಮರಣದಂಡನೆ ವಿಧಿಸುತ್ತದೆ. ಆ ಶಿಕ್ಷೆ ಕ್ಷಾಮವಾಗಿ ರೋಗರುಜಿನಗಳಾಗಿ ಕಾರ್ಯಗತವಾಗುತ್ತದೆ."
#ನೃಪತುಂಗ #ತರಾಸು
"ಜಗತ್ತಿನಲ್ಲಿ ಜನಿಸಿದ ಜನ ಸ್ನೇಹ ಶಾಂತಿಗಳಿಂದ ಹೂ ಬಳ್ಳಿಗಳಂತೆ ನಗುತ್ತಾ ಬದುಕಬೇಕೆಂಬುದು ಪ್ರಕೃತಿಯ ಬಯಕೆ, ಅದಕ್ಕೆ ವಿರುದ್ಧವಾಗಿ ಮಾನವನೇ ಮಾನವನ ವೈರಿಯಾಗಿ ರಕ್ತಪಾತಕ್ಕಿಳಿದಾಗ, ಸ್ವಾರ್ಥಕ್ಕಾಗಿ ಕೊಲೆ ಯುದ್ಧಗಳಾಗಿ ಭೂದೇವಿಗೆ ರಕ್ತಸ್ನಾನದ ಕಳಂಕವಾದಾಗ, ಲಲಿತೆಯಾದ ಪ್ರಕೃತಿ ದುರ್ಗೆಯಾಗುತ್ತಾಳೆ."
#ನೃಪತುಂಗ #ತರಾಸು
"ಕೋಟ್ಯಾಂತರ ಚಕ್ರವರ್ತಿಗಳು ಹುಟ್ಟಿ ಸಾಯುವ ಈ ಜಗತ್ತಿನಲ್ಲಿ ಉಳಿಯುವುದು ಅವರಾರ ಹೆಸರೂ ಅಲ್ಲ, ಉದಾತ್ತ ಜೀವನ ನಡೆಸಿದ ಧನ್ಯರ ಹೆಸರೊಂದೇ ಉಳಿಯುವುದು."
#ನೃಪತುಂಗ #ತರಾಸು
'ಚಕ್ರವರ್ತಿ' ಅನ್ನೋ ಪದಕ್ಕೆ ಕಲಶವಿಟ್ಟಂತೆ ರಾಜ್ಯಭಾರ ಮಾಡಿ, ವೈರಿಗಳ ವಿರುದ್ಧ ಛಲದಿಂದ ಹೋರಾಡಿ ಮೆರೆದಾಡಿದ ಹಲವು ಮಹನೀಯರುಗಳ ಪಟ್ಟಿಯಲ್ಲಿ ನಮ್ಮ ಕನ್ನಡದ💛❤️ದೊರೆಗಳು ಇದ್ದಾರೆ🙏.ನಮ್ಮವರ, ನಮ್ಮ ನಾಡಿನ ಇತಿಹಾಸ ತಿಳಿದಾಗ ರೋಮಾಂಚನ ಆಗತ್ತೆ, ಹೆಮ್ಮೆ ಅನ್ಸುತ್ತೆ.😍
ಧನ್ಯವಾದಗಳು #ತರಾಸು ಅವ್ರೇ.🙏🤗🤗
#ನೃಪತುಂಗ 🙏 🙌
Share this Scrolly Tale with your friends.
A Scrolly Tale is a new way to read Twitter threads with a more visually immersive experience.
Discover more beautiful Scrolly Tales like this.
