ಸುನಿಲ್🌱 Profile picture
Aug 15, 2022 195 tweets 22 min read
ಸದ್ಯದ ಓದು

ಸಮಗ್ರ ಆಧುನಿಕ ಮೈಸೂರು ಚರಿತ್ರೆ 📖

( ಕ್ರಿ. ಶ. ೧೭೯೯ ರಿಂದ ೧೯೫೬ ರವರೆಗೆ )

✍️ ಎಂ. ಕೃಷ್ಣಯ್ಯ ಅವ್ರು 🙏

#ಕನ್ನಡ 💛❤️ #ಕರುನಾಡು #ಮೈಸೂರು ಮೈಸೂರಿನ ಪ್ರಾಚೀನತೆ ಮತ್ತು ಯದುವಂಶದ ಸ್ಥಾಪನೆ :

ಅನಾದಿ ಕಾಲದಿಂದಲೂ ಮೈಸೂರು ಎಂಬ ಹೆಸರು ರೂಢಿಯಲ್ಲಿದ್ದಂತೆ ಕಾಣಿಸುತ್ತದೆ. ಆದರೆ ಯಾವಾಗ ಈ ಹೆಸರು ಈ ಸೀಮೆಗೆ ಪ್ರಾಪ್ತವಾಯಿತೆಂದು ಹೇಳಲು ಸಾಧ್ಯವಾಗುತ್ತಿಲ್ಲ.
Oct 29, 2020 181 tweets 27 min read
ಬೇಂದ್ರೆ ಅಜ್ಜ ೪ ನೇ ತರಗತಿಯಲ್ಲಿರುವಾಗ ಕನ್ನಡ ಕುಲಪುರೋಹಿತರಾದ ಆಲೂರು ವೆಂಕಟರಾಯರು ಅವ್ರಿಗೆ ಶಿಕ್ಷಕರಾಗಿದ್ರಂತೆ.

ಎಷ್ಟು ಚಂದ.😍🙏 ಬೇಂದ್ರೆ ಅಜ್ಜನ ಕಾಲದ ಮನರಂಜನೆ ಹೇಗಿತ್ತು..?

ಅಜ್ಜ ಹೀಗ್ ಬರೀತಾರೆ...

೧.
ಶಂಕರಾಚಾರ್ಯರ
ಸೌಂದರ್ಯ ಲಹರಿ
ಗಂಗಾ ಲಹರಿ
ಭಾಮಿನಿ ವಿಲಾಸ
ಗೀತಾ ಗೋವಿಂದಗಳನ್ನ ಕೇಳೋದು.

೨.
ಊರಳಗಿನ ವಿಠೋಬ ದೇವರ ಗುಡಿ,
ದತ್ತಾತ್ರೇಯ ಗುಡಿಯ ಕೀರ್ತನ
ಪುರಾಣ ಪ್ರವಚನಗಳು.

೩.
ಶಿರಹಟ್ಟಿ ನಾಟಕ ಕಂಪನಿ ಪ್ರಯೋಗಗಳು
ಮರಾಠಿ ನಾಟಕದ ಪ್ರಭಾವ.
Oct 1, 2020 11 tweets 3 min read
ಶ್ರೀರಾಮಚಂದ್ರ ಪ್ರಭುವಿನ ವಂಶವೃಕ್ಷ

ಮಾಹಿತಿ ಸಂಗ್ರಹ: ಶರತ್ ವಿಶ್ವಕರ್ಮ ಅವ್ರು
ಕೃಪೆ: ಶಿವರಾಜ ಅವ್ರು

• ಬ್ರಹ್ಮನ ಮಗ ಮರೀಚಿ
• ಮರೀಚಿಯ ಮಗ ಕಾಶ್ಯಪ
• ಕಾಶ್ಯಪರ ಮಗ ಸೂರ್ಯ
• ಸೂರ್ಯನ ಮಗ ಮನು
• ಮನುವಿನ ಮಗ ಇಕ್ಷ್ವಾಕು
• ಇಕ್ಷ್ವಾಕುವಿನ ಮಗ ಕುಕ್ಷಿ
• ಕುಕ್ಷಿಯ ಮಗ ವಿಕುಕ್ಷಿ
• ವಿಕುಕ್ಷಿಯ ಮಗ ಬಾಣ
• ಬಾಣನ ಮಗ ಅನರಣ್ಯ
1/n
• ಅನರಣ್ಯನ ಮಗ ಪೃಥು
• ಪೃಥುವಿನ ಮಗ ತ್ರಿಶಂಕು
• ತ್ರಿಶಂಕುವಿನ ಮಗ ದುಂಧುಮಾರ.(ಯುವನಾಶ್ವ)
• ದುಂಧುಮಾರುವಿನ ಮಗ ಮಾಂಧಾತ
• ಮಾಂಧಾತುವಿನ ಮಗ ಸುಸಂಧಿ
• ಸುಸಂಧಿಯ ಮಗ ಧೃವಸಂಧಿ
• ಧೃವಸಂಧಿಯ ಮಗ ಭರತ
• ಭರತನ ಮಗ ಅಶೀತಿ
• అಶೀತಿಯ ಮಗ ಸಗರ
• ಸಗರನ ಮಗ ಅಸಮಂಜಸ*
• ಅಸಮಂಜಸನ ಮಗ ಅಂಶುಮಂತ
• ಅಂಶುಮಂತನ ಮಗ ದಿಲೀಪ
2/n
Sep 19, 2020 29 tweets 14 min read
ಸಧ್ಯದ ಓದು - ನೃಪತುಂಗ
ಲೇಖಕ : ತರಾಸು ಅವ್ರು ( ತಳಕು ರಾಮಸ್ವಾಮಯ್ಯ ಸುಬ್ಬರಾಯ ಅವ್ರು ) 🙏

"ರಾಷ್ಟ್ರಕೂಟ ಚಕ್ರವರ್ತಿ ಅಮೋಘವರ್ಷ ನೃಪತುಂಗ.
ಕಾವೇರಿಯಿಂದ ಗೋದಾವರಿ ಪರ್ಯಂತದ ನಾಡನ್ನು ಸುಮಾರು ಅರವತ್ತು ವರ್ಷ ಧರ್ಮದಿಂದ ಪಾಲಿಸಿ, ದೇಶ ವಿದೇಶಗಳಲ್ಲೂ ಪ್ರಸಿದ್ಧನಾಗಿದ್ದ ದೊರೆ."
#ನೃಪತುಂಗ #ತರಾಸು ImageImage "ಸುಖವಾಗಲಿ ದುಃಖವಾಗಲಿ ಒಂಟಿಯಾಗಿ ಬರುವುದಿಲ್ಲ, ಇಲ್ಲದಾಗ ಇಲ್ಲ, ಬರುವಾಗ ಹಿಂಡುಹಿಂಡಾಗಿ ಹುಣ್ಣಿಮೆಯ ಮಧ್ಯರಾತ್ರಿ ಏರಿ ಏರಿ ಬರುವ ಕಡಲ ಅಲೆಗಳಂತೆ ಬರುತ್ತವೆ."
#ನೃಪತುಂಗ #ತರಾಸು
Jul 12, 2020 4 tweets 1 min read
✍️ ನಾಗಾರ್ಜುನ್ ಶರ್ಮ & ಕಿನ್ನಲ್ ರಾಜ್ ಅವ್ರು 🤗

ಮರಳಿ ಮನಸಾಗಿದೆ
ಸಾಗಿದೆ ನಿನ್ನಾ ಹೃದಯಕೆ
ಪಯಣ ಶುರುವಾಗಿದೆ
ಕೋರಿದೆ ಪ್ರೀತಿ ಕಾಣಿಕೆ

ಮತ್ತೆ ಮತ್ತೆ ಮನಸು ಶರಣಾದ ಹಾಗಿದೆ
ಕಿರು ಬೆರಳು ಬಯಸಿದೆ ಸಲುಗೆ
ಇರಬೇಕು ಜೊತೆಯಾಗಿ ನಿನ್ನಲಿ......ನಾ 🎶🎶🎶 ಮಿಂಚುತ್ತಿದೆ ಮಿಂಚುತ್ತಿದೆ
ನಿನ್ನಿಂದ ಕನಸೆಲ್ಲಾ ಹೆಚ್ಚುತ್ತಿದೆ
ಮಿಂಚುತ್ತಿದೆ.....ಇದು ಮಿಂಚುತ್ತಿದೆ
ಹೃದಯಕೆ ಬಿರುಸಾಗಿ ಬಂತು ಕಣೆ

ಮರಳಿ ಮನಸ್ಸಾಗಿದೆ
ಸಾಗಿದೆ ನಿನ್ನಾ ಹೃದಯಕೆ
ಪಯಣ ಶುರುವಾಗಿದೆ
ಕೋರಿದೆ ಪ್ರೀತಿ ಕಾಣಿಕೆ...🎶🎶🎶
Jul 12, 2020 4 tweets 1 min read
#ಕಾಯ್ಕಿಣಿ_ಸಾಲುಗಳು

ಅರೆರೆ ಶುರುವಾಯಿತು ಹೇಗೆ
ಪದವೇ ಸಿಗದಾಯಿತು ಹೇಗೆ
ಹೃದಯ ಕಳುವಾಯಿತು ಹೇಗೆ
ಒಂದೂ ಮಾತು ಆಡದೆ

ಮೊದಲೇ ಬೆಳಗಾಯಿತು ಹೇಗೆ
ಕನಸೇ ಎದುರಾಯಿತು ಹೇಗೆ
ಋತುವೇ ಬದಲಾಯಿತು ಹೇಗೆ
ಹಿಂದೆ ಮುಂದೆ ನೋಡದೆ..🎶 ಕಣ್ಣಲ್ಲೇ ನೂರು ಮಾತು
ಆಡುತ ಮುಂದೆ ಕೂತು
ಜೀವದಲಿ ಛಾಪು ಹೀಗೆ ಬೀರಿಲ್ಲ ಇನ್ಯಾರು

ಆಗಿದೆ ಜೀವ ಹೂವು
ಆದರೂ ಏನೋ ನೋವು
ಭಾವಗಳ ಕಾಟ ಹೀಗೆ ನೀಡಿಲ್ಲ ಇನ್ಯಾರು..🎶🎶

#ಕಾಯ್ಕಿಣಿ_ಸಾಲುಗಳು