Chakravarty Sulibele Profile picture
Columnist| writer| YuvaBrigade| Natural Farmer| NamoBrigade| TeamModi| Nationalist ಕನ್ನಡಿಗ| Follower of Sri Ramakrishna and disciple of Svami Ranganathanand ji

Sep 27, 2020, 7 tweets

ಕನ್ನಡ ಕಲ್ಪವೃಕ್ಷ ಅಂದುಕೊಂಡದ್ದಕ್ಕಿಂತಲೂ ಭರ್ಜರಿ ಆಯ್ತು. ನಾವು ಆಹ್ವಾನಿಸಿದ ಲೇಖಕ ಮತ್ತು ಪ್ರಕಾಶಕರಲ್ಲಿ ಮುಕ್ಕಾಲು ಪಾಲು ಜನ ಬಂದು ಕೂಡಿಕೊಂಡಿದ್ದರು.

#ಸ್ವರಾಜ್ಯಕ್ಕೆ_ಮುಕ್ಕಾಲ್ನೂರು
#ಕನ್ನಡ_ಕಲ್ಪವೃಕ್ಷ
#ಯುವಾಬ್ರಿಗೇಡ್
#ಸೋದರಿ_ನಿವೇದಿತಾ_ಪ್ರತಿಷ್ಠಾನ

1. ಉದ್ಘಾಟನೆ ಮಾಡಿ ಮಾತನಾಡಿದ ವಿಜಯ ಕರ್ನಾಟಕದ ಮುಖ್ಯಸ್ಥರಾದ ಶ್ರೀ ಹರಿಪ್ರಕಾಶ್ ಕೋಣೆಮನೆಯವರು ಓದನ್ನು ವಿಸ್ತಾರಗೊಳಿಸುವ ಕುರಿತಂತೆ ವಿಶೇಷ ಚರ್ಚೆ ಮಾಡಿದರು. ಅವರ ಕಲ್ಪನೆಯ ಗ್ರಂಥಾಲಯ ಹಬ್ಬವನ್ನು ಯುವಾಬ್ರಿಗೇಡ್ ಬರುವ ದಿನಗಳಲ್ಲಿ ನನಸಾಗಿಸಲಿದೆ.

2. ಭಾರತೀಯ ವಿಚಾರಧಾರೆಗಳಿಗೆ ಸೂಕ್ತ ಪ್ರಕಾಶಕರು ಬೇಕೆಂಬ ಕಲ್ಪನೆಯಿಂದಲೇ ಹುಟ್ಟಿಕೊಂಡ ದೆಹಲಿ ಮೂಲದ ಗರುಡ ಪ್ರಕಾಶನದ ಮುಖ್ಯಸ್ಥರಾದ ಸಂಕ್ರಾಂತ್ ಸನು ಅಮೇರಿಕಾದಿಂದ webinar ನ ಮೂಲಕ ಸಂಬೋಧಿಸಿದರು. ಲೇಖಕನಿಂದ ಓದುಗನನ್ನು ತಲುಪುವವರೆಗಿನ ಭಿನ್ನ ಭಿನ್ನ ಸ್ತರವನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದರು.

3. Dharma dispatch ನ ಸಂದೀಪ್ ಬಾಲಕೃಷ್ಣ ಭಾರತೀಯ ಚಿಂತನೆಯನ್ನು ಮೂಲೆ ಗುಂಪಾಗಿಸುವಲ್ಲಿ ಎಡಪಂಥೀಯರು ನಡೆಸಿದ ವ್ಯವಸ್ಥಿತ ಷಡ್ಯಂತ್ರವನ್ನು ಮನಮುಟ್ಟುವಂತೆ ವಿವರಿಸಿದರು.

4. ಎಲ್ಲರ ಮನಮುಟ್ಟಿದ್ದು ಶ್ರೀಯುತ ಎಸ್.ಆರ್ ರಾಮಸ್ವಾಮಿಗಳ ಸಾನ್ನಿಧ್ಯ. ನಿಜಕ್ಕೂ ಲೇಖಕನೊಬ್ಬನಿಗೆ ಅವರ ಮಾತು ದಿಕ್ಕು ತೋರಿಸುವಂತಿತ್ತು. 'ಭೌತಿಕತೆ ಮತ್ತು ಭೌತಾತೀತಗಳ ನಡುವೆ ಲೇಖಕ ಸೇತುವೆಯಾಗಿರುತ್ತಾನೆ' ಎಂಬ ಅವರ ಮಾತು ಮನತಟ್ಟುವಂತಿತ್ತು.

5. ಎಂದಿನಂತೆ ಪ್ರಕಾಶ್ ಬೆಳವಾಡಿಯವರು ತಂತ್ರಜ್ಞಾನವನ್ನು ಬಳಸಿ ಹೇಗೆ ಬರವಣಿಗೆಯ ಕ್ಷೇತ್ರವನ್ನು ಶ್ರೀಮಂತಗೊಳಿಸಬಹುದೆಂದು ವಿವರಿಸಿದರು. ಆಯೋಜಕರಿಗೆ ಸಾಕಷ್ಟು ಕೆಲಸವನ್ನೂ ಹೇಳಿ ಮುಂದಿನ ದಿನಗಳ ದಿಕ್ಕನ್ನು ನಿಶ್ಚಯಿಸುವಂತೆ ಮಾಡಿದರು.

ಈ ನಡುವೆಯೇ ಪ್ರಕಾಶಕರ ಸಮಸ್ಯೆಗಳನ್ನು, ಓದುಗನನ್ನು ಮುಟ್ಟುವಲ್ಲಿ ಆಗುತ್ತಿರುವ ತೊಂದರೆಗಳನ್ನು ಪಟ್ಟಿ ಮಾಡಿ, ಸಂಬಂಧಪಟ್ಟ ಮಂತ್ರಿಗಳಿಗೆ ಅದನ್ನು ತಲುಪಿಸುವುದೆಂದು ನಿಶ್ಚಯಿಸಲಾಯ್ತು. ಬರಲಿರುವ ದಿನಗಳಲ್ಲಿ ಕನ್ನಡದ ಕಂಪನ್ನು ರಾಷ್ಟ್ರಮಟ್ಟಕ್ಕೆ ಮುಟ್ಟಿಸಲು ತರಬಹುದಾಗಿರುವ ಭಿನ್ನ ಭಿನ್ನ ಸಾಹಿತ್ಯಗಳ ಪಟ್ಟಿಯನ್ನೂ ಮಾಡಲಾಯ್ತು.

Share this Scrolly Tale with your friends.

A Scrolly Tale is a new way to read Twitter threads with a more visually immersive experience.
Discover more beautiful Scrolly Tales like this.

Keep scrolling