ಉರ್ದು ಮೂಲದ ಈ ಕವಿತೆ ನಿಮಗಾಗಿ ಅರ್ಪಣೆ..
ನೀನು ರಾತ್ರಿ ಬರಿ ನಾವು ಚಂದಿರ ಗೀಚುವೆವು
ನೀನು ಜೈಲಿಗೆ ನೂಕು, ನಾವು ಗೋಡೆಗಳ ಮೇಲೆ ಬರೆಯುವೆವು
ನೀನು ಎಫ್ಐಆರ್ ಹಾಕು ನಾವು ಸದಾ ಸಿದ್ಧ ಎಂದು ಬರೆಯುವೆವು
ನೀನು ನಮಗೆ ಕೊಲೆ ಮಾಡು , ದೆವ್ವಗಳಾಗಿ ನಮ್ಮ ಕೊಲೆಗಳ ಒಂದೊಂದು ಸಾಕ್ಷಿ
ಬರೆಯುವೆವು
ನೀನು ನ್ಯಾಯಾಲಯದಲ್ಲಿ ಕುಳಿತು ಒಳ್ಳೆಯ ಜೋಕುಗಳನು ಬರಿ,
ನಾವು ರಸ್ತೆಯಲಿ, ಗೋಡೆಯಲಿ ನ್ಯಾಯ ಬರೆಯುವೆವು
ಕಿವುಡ ಸಹ ಕೇಳುವ ಹಾಗೆ ಗಟ್ಟಿಯಾಗಿ ಮಾತನಾಡುವೆವು
ಕುರುಡನೂ ಸಹ ಓದುವಷ್ಟು ಸ್ಪಷ್ಟವಾಗಿ ಬರೆಯುವೆವು
ನೀನು ಕರಿ ಕಮಲ ಬರಿ, ನಾವು ಕೆಂಗುಲಾಬಿ ಬಿಡಿಸುವೆವು
ನೀನು ಭೂಮಿ ಮೇಲೆ ದೌರ್ಜನ್ಯ ಬರಿ
ನಾವು ಆಗಸದಲಿ ಕ್ರಾಂತಿ ಬರೆಯುವೆವು
ಎಲ್ಲ ನೆನಪಿಡಲಾಗುವುದು ಒಂದೂ ಬಿಡದೇ ನೆನಪಿಡಲಾಗುವುದು
ನಿನ್ನ ದುಬಾರಿ ಇಂಕಿನಿಂದ ಸುಳ್ಳಿನ ಕಂತೆ ಬರೆಯುವಿ ಎಂದು ತಿಳಿದಿದೆ,
ಆದರೆ ನಮ್ಮ ಅಗ್ಗದ ರಕ್ತದಿಂದಾರೂ ಸರಿ ಸತ್ಯ ಖಂಡಿತ ಬರೆದೇ ಬರೆಯಲಾಗುವುದು.
ಎಲ್ಲ ನೆನಪಿಡಲಾಗುವುದು ಒಂದೂ ಬಿಡದೇ ನೆನಪಿಡಲಾಗುವುದು
ಜೊತೆಗೆ ನಿನ್ನ ಲಾಠಿ ಹಾಗೂ ಗುಂಡಿನಿಂದ,
ತೀರಿರುವ ನನ್ನ ಪ್ರತಿ ಗೆಳೆಯರ ನೆನಪಿನಲಿ,
ಹೃದಯ ಮುರಿದಿಟ್ಟು ಕೊಳ್ಳಲಾಗುವುದು.
ಎಲ್ಲ ನೆನಪಿಡಲಾಗುವುದು ಒಂದೂ ಬಿಡದೇ ನೆನಪಿಡಲಾಗುವುದು
ನಿನ್ನ ದುಬಾರಿ ಇಂಕಿನಿಂದ ಸುಳ್ಳಿನ ಕಂತೆ ಬರೆಯುವಿ ಎಂದು ತಿಳಿದಿದೆ,
ಆದರೆ ನಮ್ಮ ಅಗ್ಗದ ರಕ್ತದಿಂದಾರೂ ಸರಿ ಸತ್ಯ ಖಂಡಿತ ಬರೆದೇ ಬರೆಯಲಾಗುವುದು.
ಎಲ್ಲ ನೆನಪಿಡಲಾಗುವುದು ಒಂದೂ ಬಿಡದೇ ನೆನಪಿಡಲಾಗುವುದು
ಜೊತೆಗೆ ಮೊಬೈಲು, ಫೋನು, ಇಂಟರ್ನೆಟ್ ಹಾಡಹಗಲೇ ಬಂದು ಮಾಡಿಸಿ,
ಥರಗುಟ್ಟುವ ಚಳಿಯಲಿ ಇಡೀ ನಗರವನ್ನು ಕಣ್ಮುಚ್ಚಿಸಿದಾಗ,
ಸುತ್ತಿಗೆ ತೆಗೆದುಕೊಂಡು ನನ್ನ ಮನೆಯಲಿ ನುಗ್ಗಿದಾಗ,
ನನ್ನ ತಲೆ, ಬೆನ್ನಿನ ಜೊತೆಗೆ ನನ್ನ ಇಡೀ ಜೀವನ ಮುರಿದಾಗ,
ನನ್ನ ಕರುಳಿನ ಕುಡಿಯು ತುಂಡಾದಾಗ,
ನನ್ನ ಕರುಳಿನ ಕುಡಿಯನು ನಡುರಸ್ತೆಯಲಿ ಸಾಯಿಸಿದಾಗ,
ಯಾವುದೇ ಭಾವನೆಯಿಲ್ಲದ ಗುಂಪಿನಲಿ ನಿಂತು ನಕ್ಕಾಗ,
ನಿನ್ನ ಕುಹಕದ ನಗು ನೆನಪಿಡಲಾಗುವುದು,
ಎಲ್ಲ ನೆನಪಿಡಲಾಗುವುದು ಒಂದೂ ಬಿಡದೇ ನೆನಪಿಡಲಾಗುವುದು.
ಮತ್ತೆ ಹಗಲಲಿ ಸಿಹಿ ಸಿಹಿ ಮಾತು ಮುಂದೆ ಆಡಿ,
ಎಲ್ಲ ಸರಿ ಇದೆ ಎಂದು ತಡವರಿಸಿ ಮಾತನಾಡಿ,
ರಾತ್ರಿ ಆಗುತ್ತಲೇ ಹಕ್ಕು ಕೇಳುವ ಜನರ ಮೇಲೆ ಲಾಠಿ ಹೊಡೆಸಿ, ಗುಂಡು ಹೊಡೆಸಿ,
ನಮ್ಮ ಮೇಲೆ ದಾಳಿ ನಡೆಸಿ,
ನಾವೇ ದಾಳಿಕೋರರು ಎಂದು ಹೇಳುವಾಗ,
ಎಲ್ಲ ನೆನಪಿಡಲಾಗುವುದು, ಒಂದೂ ಬಿಡದೇ ನೆನಪಿಡಲಾಗುವುದು.
ನನ್ನ ಮೂಳೆಗಳ ಮೇಲೆ ಬರೆಯುವೆ,
ಈ ಎಲ್ಲ ಘಟನೆಗಳನು,
ನನ್ನ ಮೂಳೆಗಳ ಮೇಲೆ ಬರೆಯುವೆ,
ಈ ಎಲ್ಲ ಘಟನೆಗಳನು,
ನೀನು ನಾನು ನಾನಾರೆಂದು ಕೇಳುವ ದಾಖಲೆಗಳನು,
ನನ್ನ ಇರುವಿಕೆಯ ಸಾಕ್ಷಿ ಖಂಡಿತ ನೀಡಲಾಗುವುದು,
ಈ ಹೋರಾಟ ಕೊನೆಯ ಉಸಿರಿನ ವರೆಗೂ ಹೋರಾಡಲಾಗುವುದು,
ಎಲ್ಲ ನೆನಪಿಡಲಾಗುವುದು ಒಂದೂ ಬಿಡದೇ ನೆನಪಿಡಲಾಗುವುದು
ಹೇಗೆ ಹೇಗೆ ನನ್ನ ದೇಶ ಮುರಿಯಲು ನೀನು ಸಂಚು ಮಾಡಿದೆ,
ಇದನ್ನೂ ನೆನಪಿಡಲಾಗುವುದು,
ಹೇಗೆ ಹೇಗೆ ದೇಶ ಜೋಡಿಸಲು ನಾವು ಆಸೆಪಟ್ಟ ಕನಸನ್ನೂ ಸಹ ನೆನಪಿಡಲಾಗುವುದು,
ಇದನ್ನೂ ನೆನಪಿಡಲಾಗುವುದು,
ಆಗಾಗ ನೆನಪಾಗುವಾಗ, ಜಗದಲಿ ಹೇಡಿಗಳ ಯುಗದಲಿ ನಿನ್ನ ಪ್ರತಿ ಕೆಲಸ ನೆನಪಿಡಲಾಗುವುದು.
ಜಗದಲಿ ಜೀವಿಸುವ ಬಗ್ಗೆ ಮತ್ತೆ ಯಾವಾಗಲೋ ನೆನಪಾದಾಗ,
ನಮ್ಮ ಹೆಸರುಗಳನು ನೆನಪಿಡಲಾಗುವುದು,
ಈ ಕೆಲವು ಜನರು ಕಬ್ಬಿಣದ ಸುತ್ತಿಗೆಯಲಿ ಹೊಡೆದಾಗಲೂ ಬಾಗಲಿಲ್ಲ,
ಸರಕಾರದ ಎರಡು ಕವಡೆ ಕಾಸಿನ ಬೆಲೆಗೆ ,
ನೀನು ಹೇಗೆ ನಿನ್ನನು ಮಾರಿಕೊಂಡಿದ್ದೆ,
ಆದರೆ ನಾವು ಕರುಳು ತುಂಡಾದರೂ ಆತ್ಮಸಾಕ್ಷಿ ಮಾರಲಿಲ್ಲ ಎಂದು,
ಒಂದೂ ಬಿಡದೇ ನೆನಪಿಡಲಾಗುವುದು.
ಕೆಲವರಿದ್ದರು ಚಂಡಮಾರುತಗಳು ಬಂದು ಹೋಗುವ ತನಕ,
ಅಲುಗಾಡದೆ ನಿಂತಿದ್ದರು,
ಕೆಲವರಿದ್ದರು ಅವರ ಸಾವಿನ ಸುದ್ದಿ ಕೇಳಿದ ನಂತರ ಸಹ ಬದುಕಿದ್ದರು ಎಂದು,
ಒಂದೂ ಬಿಡದೆ ಎಲ್ಲ ನೆನಪಿಡಲಾಗುವುದು
ಕಣ್ಣುಗಳು ರೆಪ್ಪೆಯನು ಸಹ ಬಡಿಯುವುದು ಮರೆಯಬಹುದು,
ಭೂಮಿ ತನ್ನ ಸುತ್ತ ತಿರುಗುವುದು ಸಹ ಮರೆಯಬಹುದು,
ಕಡಿದ ನಮ್ಮ ಸ್ವಾತಂತ್ರ್ಯದ ರೆಕ್ಕೆಯ ಕೂಗನು,
ಕೂಗಿ ಕೂಗಿ ಗಂಟಲು ಹರಿದ ಪ್ರತಿ ಧನಿಯನೂ ಸಹ,
ಒಂದೂ ಬಿಡದೆ ಎಲ್ಲ ನೆನಪಿಡಲಾಗುವುದು.
ನೀನು ರಾತ್ರಿ ಬರಿ ನಾವು ಚಂದಿರ ಗೀಚುವೆವು,
ನೀನು ಜೈಲಿಗೆ ನೂಕು, ನಾವು ಜೈಲಿನ ಗೋಡೆಗಳ ಮೇಲೆ ಬರೆಯುವೆವು,
ನೀನು ಎಫೈಆರ್ ಹಾಕು ನಾವು ಸದಾ ಸಿದ್ಧ ಎಂದು ಬರೆಯುವೆವು.
ನೀನು ಕೊಲೆಮಾಡಿದಾಗ ನಾವು ದೆವ್ವಗಳಾಗಿ ಬರೆಯುವೆವು,
ನಿನ್ನ ಪಾತಕದ ಪ್ರತಿ ಸಾಕ್ಷಿ ಒಂದು ಬಿಡದೇ ಬರೆಯುವೆವು,
ಜೊತೆಯಲಿ ನೀನು ಕೋರ್ಟಿನಲಿ ಕುಳಿತು
ಒಳ್ಳೆಯ ಜೋಕುಗಳನು ಬರಿ,
ನಾವು ರಸ್ತೆಯಲಿ ಗೋಡೆಯಲಿ ನ್ಯಾಯ ಎಂದು ಬರೆಯುವೆವು,
ಕಿವುಡನಿಗೂ ಸಹ ಕೇಳಿಸಬೇಕು ಹಾಗೆ ಮಾತನಾಡುವೆವು,
ಕುರುಡನೂ ಸಹ ಓದುವಷ್ಟು ಸ್ಪಷ್ಟವಾಗಿ ಬರೆಯುವೆವು,
ಎಲ್ಲ ನೆನಪಿಡಲಾಗುವುದು ಒಂದೂ ಬಿಡದೇ ಎಲ್ಲ ನೆನಪಿಡಲಾಗುವುದು.
ಮತ್ತು ನೀನು ಕರಿ ಕಮಲ ಬರಿ, ನಾವು ಕೆಂಗುಲಾಬಿ ಬಿಡಿಸುವೆವು,
ನೀನು ಭೂಮಿ ಮೇಲೆ ದೌರ್ಜನ್ಯ ಬರೆದಾಗ
ಆಗಸದಲಿ ಕ್ರಾಂತಿ ಎಂದು ಬರೆಯಲಾಗುವುದು,
ಎಲ್ಲ ನೆನಪಿಡಲಾಗುವುದು ಒಂದೂ ಬಿಡದೇ ನೆನಪಿಡಲಾಗುವುದು
ಏಕೆಂದರೆ ನಿನ್ನ ಹೆಸರಿನ ಮೇಲೆ, ತಲೆತಗ್ಗಿಸುವ ಸಂದೇಶ ಕಳಿಸಲು,
ಏಕೆಂದರೆ ಮಾರಿರುವ ನಿನ್ನ ಆತ್ಮ ಸಾಕ್ಷಿಯ ಮೇಲೆ ಕರಿ ಮಸಿ ಬಳಿಯಲು,
ನಿನ್ನ ಹೆಸರು ನಿನ್ನ ಇರುವಿಕೆಯನು ನೆನಪಿಡಲಾಗುವುದು,
ಒಂದೂ ಬಿಡದೆ ಎಲ್ಲ ನೆನಪಿಡಲಾಗುವುದು.
-ಆಮೀರ್ ಆಝೀಝ್
(ಮೂಲ: ಸಬ್ ಯಾದ್ ರಖಾ ಜಾಯೇಗಾ ಉರ್ದು)
ಅನುವಾದ: ಈ ಬಡಪಾಯಿಯದ್ದು
@AamirAzizJmi 🙏
Share this Scrolly Tale with your friends.
A Scrolly Tale is a new way to read Twitter threads with a more visually immersive experience.
Discover more beautiful Scrolly Tales like this.
