2017 ರಿಂದ ನನ್ನ ಹೋರಾಟದ ಜೀವನ ಮೊದಲಾಯಿತು..
ನಾನು ಹೋರಾಡಿದ ಹೋರಾಟಗಳು ಇಂತಿವೆ..
ಕಾಮೆಡ್-ಕೆ ಪಿಜಿ ವಿರುದ್ಧದ ಹೋರಾಟ
ಸೈಂಟ್ ಜಾನ್ಸ್ ಪ್ರತ್ಯೇಕ ಪ್ರವೇಶ ಪರೀಕ್ಷೆಯ ಹೋರಾಟ
ಕನ್ನಡಿಗರ ಸೀಟು ಕನ್ನಡಿಗರಿಗೆ ಸಿಗಬೇಕು ಎಂದು ಹೋರಾಟ
ಜೆಎನ್ಎಂಸಿ ಪ್ರತ್ಯೇಕ ಸೀಟು ಹಂಚಿಕೆ ವಿರುದ್ಧದ ಹೋರಾಟ
ನೀಟ್ ಪಿಜಿ ಅವ್ಯವಹಾರದ ವಿರುದ್ಧ ಹೋರಾಟ
ಇವೆಲ್ಲವನ್ನೂ ನ್ಯಾಯಾಲಯದಲ್ಲಿ ಹೋರಾಡಿದ್ದೇನೆ.
ಇನ್ನು ಭಾಗವಹಿಸಿರುವಂತಹ ಹೋರಾಟ:
ಭ್ರಷ್ಟಾಚಾರದ ವಿರುದ್ಧ ಅಣ್ಣಾ ಹಜಾರೆಯ ಹೋರಾಟ ಕಾಲೇಜಿನಲ್ಲಿ ಮಾಡಿದ್ದು
ಅತ್ಯಾಚಾರದ ವಿರುದ್ಧ ಹೋರಾಟ
ಬೆಂಗಳೂರು ಟೌನ್ ಹಾಲ್ ಮುಂದೆ ಸಿಎಎ ವಿರುದ್ಧ ಹೋರಾಟ
ಶಾಹೀನ್ ಬಾಗ್ ನಲ್ಲಿ ನಡೆದ ಹೋರಾಟ
ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದಲ್ಲಿ ನಡೆದ ಹೋರಾಟ
ಉನ್ನಾವ್ ಅತ್ಯಾಚಾರದ ವಿರುದ್ಧ ನಡೆದ ಹೋರಾಟ..
ಮೂರು ವರ್ಷಗಳ ಹೋರಾಟ ಜೀವನ ಹೀಗಿದೆ.
ಕೆಲವೊಂದರಲ್ಲಿ ದೊಡ್ಡ ಸೋಲೂ ಉಂಟಾಗಿದೆ.
ದೆಹಲಿಯ ನ್ಯಾಯಾಲಯದ ಮುಂದೆ ಕುಳಿತು ಅತ್ತಿದ್ದು ತುಂಬಾ ಸಲ ಇದೆ.
ನನ್ನ ಬಳಿ ಮೊಕದ್ದಮೆ ಹೂಡುವಷ್ಟು ಹಣ ಯಾವಾಗಲೂ ಇರಲಿಲ್ಲ. ಜನರ ಬಳಿ ಹಣ ಸಂಗ್ರಹಿಸಿ, ವಕೀಲರಿಗೆ ವಿನಂತಿಸಿ ಹೋರಾಡಿದ್ದೇನೆ.
ನಾನು ಮಾಡಿರುವ ಹೋರಾಟದಿಂದ ನನಗೆ ಬಂದಿದ್ದು ಏನೂ ಇಲ್ಲ. ಸೀಟಾಗಾಲಿ ನೋಟಾಗಲಿ ಏನೂ ಬಯಸಲಿಲ್ಲ ಪಡೆಯಲೂ ಇಲ್ಲ.
ಅಲ್ಲಿ ಇಲ್ಲಿ ಕೆಲವು ಪತ್ರಿಕೆಗಳು ಸಣ್ಣ ಕಾಲಮಿನಲ್ಲಿ ಪ್ರಕಟಿಸಿದ್ದು ಬಿಟ್ಟರೆ ದೊಡ್ಡ ಪ್ರಮಾಣದ ಪ್ರಚಾರವಾಗಲಿ ಅಥವಾ ಮನೆಯಲ್ಲಿ ಹೆಮ್ಮೆಯ ಮಗನಾದ ಎಂಬ ಬಿರುದು ನನಗೆ ಸಿಕ್ಕಿಲ್ಲ.
ಹೋರಾಡುವ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ
ಎಂದೇ ಹೋರಾಡಿದ್ದೇನೆ.
ಕೆಲವು ಹೋರಾಟಗಾರರು ಚಳುವಳಿ ತಮ್ಮದೇ ಬಳುವಳಿ ಎಂದು ತಿಳಿದುಕೊಳ್ಳುತ್ತಾರೆ.
ಹಾಗಾಗಬಾರದು ಮನುಷ್ಯನ ಹೋರಾಟದಿಂದ ನಿಸ್ವಾರ್ಥ, ಸೃಜನಶೀಲತೆ, ಸೌಜನ್ಯ ಹಾಗೂ ವಿಶಾಲ ಹೃದಯ ಬೆಳೆಸಿಕೊಳ್ಳಬೇಕು.
ಆಗ ಮಾತ್ರ ಜಗತ್ತು ಸುಂದರವಾಗಿ ಕಾಣಲು ಸಾಧ್ಯ.
ನಿಮ್ಮ ಜೊತೆ ಹಂಚಿಕೊಳ್ಳಬೇಕು ಅನ್ನಿಸಿತು ಹಾಗೆ ಹಂಚಿಕೊಂಡೆ.
ನಿಮ್ಮ ತಾಳ್ಮೆಗೆ ಹಾಗೂ ಪ್ರೀತಿಗೆ ಧನ್ಯವಾದಗಳು 🙏🙏🙏
ಜೈ ಭುವನೇಶ್ವರಿ ದೇವಿ 🙏🙏🙏
Share this Scrolly Tale with your friends.
A Scrolly Tale is a new way to read Twitter threads with a more visually immersive experience.
Discover more beautiful Scrolly Tales like this.
