ಧರ್ಮ ಸಂವರ್ಧನಿ Profile picture
Sanatani🚩

Dec 26, 2021, 31 tweets

ಜೈ ಶ್ರೀ ರಾಮ 🙏🚩
1/n
ವಾಲ್ಮೀಕಿ ಮಹರ್ಷಿಗಳ ಶ್ರೀಮದ್ ರಾಮಾಯಣದಲ್ಲಿ ಒಟ್ಟು7 ಕಾಂಡಗಳು ಮತ್ತು 24000 ಶ್ಲೋಕಗಳಿವೆ. ವಿಶೇಷ ಎಂದರೆ ಒಂದು ಅಮೂಲ್ಯ ರತ್ನ ಅಡಗಿದೆ.
"ಅದೇ ಗಾಯತ್ರಿ ರಾಮಾಯಣ".

2/n
ಗಾಯತ್ರಿ ಮಂತ್ರ :
||ತತ್ಸವಿತುರ್ವರೇಣ್ಯಂ |
ಭರ್ಗೋದೇವಸ್ಯ ಧೀಮಹಿ|
ಧಿಯೋ ಯೋನಃ ಪ್ರಚೋದಯಾತ್||
ಇಲ್ಲಿ ಒಟ್ಟು 24 ಬೀಜಾಕ್ಷರಗಳಿವೆ.

3/n
ರಾಮಾಯಣದ ಪ್ರತೀ 1000th ಶ್ಲೋಕದ ಮೊದಲ ಶಬ್ದ ಒಂದೊಂದು ಬೀಜಾಕ್ಷರಕ್ಕೆ ಬರುವಂತೆ ಮಹರ್ಷಿಗಳು ಕಾವ್ಯ ರಚನೆ ಮಾಡಿದ್ದಾರೆ.
ಒಟ್ಟು 24 ಅಕ್ಷರ = 24000 ಶ್ಲೋಕಗಳು.
"Mathematical genius"

4/n
ಒಂದು ಬಾರಿ ಗಾಯತ್ರಿ ರಾಮಾಯಣ ಪಠಣ ಮಾಡಿದರೆ ಒಂದು ರಾಮಾಯಣ, ವೇದಗಳು, ವೇದಾಂತ ಪಠಣ ಮಾಡಿದ ಪುಣ್ಯ ಹಾಗೂ ಜ್ಞಾನ ವೃದ್ಧಿ.

ಗಾಯತ್ರಿ ಮಹಾ ಮಂತ್ರಕ್ಕೆ ಇರುವ ಶಕ್ತಿಯನ್ನು ಜಗತ್ತಿಗೆ ಸಾರಲು ಅದನ್ನು ಶ್ರೀಮದ್ ರಾಮಾಯಣದಲ್ಲಿ ಅಡಗಿಸಿಟ್ಟರು.

5/n
ಈ 24 ಶ್ಲೋಕಗಳನ್ನು ಓದುಗರಿಗೆ ಪರಿಚಯಿಸುವ ಮಹತ್ ಆಸೆಯಿಂದ ಪ್ರತಿ ಶ್ಲೋಕ, ಅರ್ಥ ಮತ್ತು ಚಿತ್ರ ಪ್ರಸ್ತುತ ಪಡಿಸುತ್ತೇನೆ.
ಕೊಂಚ ಸಮಯ ಬಿಡುವು ಮಾಡಿಕೊಂಡು ಈ 24 ಶ್ಲೋಕಗಳನ್ನು ಒಮ್ಮೆ ಪಠಣ ಮಾಡಿ. ಈಡಿ ರಾಮಾಯಣ ಪಠಣ ಮಾಡುವುದು ಬಲು ಕಠಿಣ.
ಇದೊಂದು ಸುಲಭ ಮಾರ್ಗ. 🙏

6/n
||ತಪಃ ಸ್ವಾಧ್ಯಾಯನಿರತಂ ತಪಸ್ವೀ ವಾಗ್ವಿದಾಂ ವರಮ್ ।
ನಾರದಂ ಪರಿಪಪ್ರಚ್ಛ ವಾಲ್ಮೀಕಿರ್ಮುನಿಪುಂಗವಮ್ ॥ ೧

ವಾಲ್ಮೀಕಿ ಮಹರ್ಷಿಗಳಿಗೆ ಉಪದೇಶ ನೀಡುತ್ತಿರುವ ನಾರದ ಮಹರ್ಷಿಗಳು.
"ತ"

7/n
ಸ ಹತ್ವಾ ರಾಕ್ಷಸಾನ್ ಸರ್ವಾನ್ ಯಜ್ಞಘ್ನಾನ್ ರಘುನಂದನಃ ।
ಋಷಿಭಿಃ ಪೂಜಿತಃ ಸಮ್ಯಗ್ಯಥೇಂದ್ರೋ ವಿಜಯೀ ಪುರಾ ॥ ೨

ವಿಶ್ವಾಮಿತ್ರ ಮಹರ್ಷಿಗಳ ಯಜ್ಞ ಸಂರಕ್ಷಣೆ

"ಸ"

8/n
ವಿಶ್ವಾಮಿತ್ರಸ್ತು ಧರ್ಮಾತ್ಮಾ ಶ್ರುತ್ವಾ ಜನಕಭಾಷಿತಮ್ ।
ವತ್ಸ ರಾಮ ಧನುಃ ಪಶ್ಯ ಇತಿ ರಾಘವಮಬ್ರವೀತ್ ॥ ೩

ವಿಶ್ವಾಮಿತ್ರ ಮಹರ್ಷಿಗಳ ಆಜ್ಞೆಯ ಮೇರೆಗೆ ಶಿವ ಧನಸ್ಸನ್ನು ಹೆದೆಯೇರಿಸಿದ್ದು

"ವಿ"

9/n
ತುಷ್ಟಾವಾಸ್ಯ ತದಾ ವಂಶಂ ಪ್ರವಿಷ್ಯ ಚ ವಿಶಾಂಪತೇಃ ।
ಶಯನೀಯಮ್ ನರೇಂದ್ರಸ್ಯ ತದಾಸಾದ್ಯ ವ್ಯತಿಷ್ಠತ ॥ ೪

ಶ್ರೀ ರಾಮನಿಗೆ ವನವಾಸಕ್ಕೆ ಹೊರಡಲು ಆಜ್ಞೆ

"ತು"

10/n
ವನವಾಸಂ ಹಿ ಸಂಖ್ಯಾಯ ವಾಸಾಂಸ್ಯಾಭರಣಾನಿ ಚ ।
ಭರ್ತಾರಮನುಗಚ್ಛಂತ್ಯೈ ಸೀತಾಯೈ ಶ್ವಶುರೋ ದಧೌ ॥ ೫

ಸೀತ ಯಾವುದೇ ಕಾರಣಕ್ಕೂ ನಾರ್ಮಾಡಿ ತೊಡಬಾರದು ಎಂದು ದಶರಥ ಮಹಾರಾಜಾ ಅಜ್ಞಾಪಿಸಿ, ಸೀತೆಗೆ ಬಗೆ ಬಗೆಯ ಉಡುಗೆಗಳನ್ನು ಕೊಡುವುದು.

"ವ"

11/n
ರಾಜಾ ಸತ್ಯಂ ಚ ಧರ್ಮಂ ಚ ರಾಜಾ ಕುಲವತಾಂ ಕುಲಮ್ ।
ರಾಜಾ ಮಾತಾ ಪಿತಾ ಚೈವ ರಾಜಾ ಹಿತಕರೋ ನೃಣಾಮ್ ॥ ೬

ಶ್ರೀ ರಾಮನನ್ನು ಆಗಲಿ ಇರಲಾರದೆ ದಶರಥ ಮರಣ ಹೊಂದುವುದು.

"ರ್"

12/n
ನಿರೀಕ್ಷ್ಯ ಸ ಮುಹೂರ್ತಂ ತು ದದರ್ಶ ಭರತೋ ಗುರುಮ್ ।
ಉಟಜೇ ರಾಮಮಾಸೀನಂ ಜಟಾಮಂಡಲಧಾರಿಣಮ್ ॥ ೭

ಚಿತ್ರಕೂಟ ಪಾರ್ವತದ ತಪ್ಪಲಿನಲ್ಲಿ ಶ್ರೀ ರಾಮ ಮತ್ತು ಭಾರತನ ಸಮಾಗಮ.

"ನಿ"

13/n
ಯದಿ ಬುದ್ಧಿಃ ಕೃತಾ ದ್ರಷ್ಟುಂ ಅಗಸ್ತ್ಯಂ ತಂ ಮಹಾಮುನಿಮ್ ।
ಅದ್ಯೈವ ಗಮನೇ ಬುದ್ಧಿಂ ರೋಚಯಸ್ವ ಮಹಾಯಶಾಃ ॥ ೮

ಸುತೀಕ್ಷಣ ಮಹರ್ಷಿಗಳು ಶ್ರೀ ರಾಮನಿಗೆ ಅಗಸ್ತ್ಯ ಮಹರ್ಷಿಗಳನ್ನು ಭೇಟಿಯಾಗಲು ಅನುಮೋದಿಸಿದ್ದು.

"ಯ"

14/n
ಭರತಸ್ಯಾರ್ಯಪುತ್ರಸ್ಯ ಶ್ವಶ್ರೂಣಾಂ ಮಮ ಚ ಪ್ರಭೋ ।
ಮೃಗರೂಪಮಿದಂ ವ್ಯಕ್ತಂ ವಿಸ್ಮಯಂ ಜನಯಿಷ್ಯತಿ ॥ ೯

ಸೀತಾ ಮಾತೇ ಮಾಯಮೃಗ ಬಯಸಿದ್ದು.

"ಭ"

15/n
ಗಚ್ಛ ಶೀಘ್ರಮಿತೋ ರಾಮ ಸುಗ್ರೀವಂ ತಂ ಮಹಾಬಲಮ್ ।
ವಯಸ್ಯಂ ತಂ ಕುರು ಕ್ಷಿಪ್ರಮಿತೋ ಗತ್ವಾಽದ್ಯ ರಾಘವ ॥ ೧೦

ಸುಗ್ರೀವನೊಡನೆ ಸ್ನೇಹ ಬೆಳೆಸಿ ಸೀತಾನ್ವೇಷಣೆಗೆ ಸಹಾಯ ಕೇಳುವಂತೆ ಶಬರಿಯ ಸಲಹೆ.
"ಗ"

16/n
ದೇಶಕಾಲೌ ಪ್ರತೀಕ್ಷಸ್ವ ಕ್ಷಮಮಾಣಃ ಪ್ರಿಯಾಪ್ರಿಯೇ ।
ಸುಖದುಃಖಸಹಃ ಕಾಲೇ ಸುಗ್ರೀವ ವಶಗೋ ಭವ ॥ ೧೧

ಶ್ರೀ ರಾಮನ ಬಣದಿಂದ ತೀವ್ರ ಗಾಯಗೊಂಡ ವಾಲಿಗೆ ಜ್ಞಾನೋದಯವಾಗಿ ತನ್ನ ಮಗ ಅಂಗದನಿಗೆ ಉಪದೇಶ ನೀಡುತ್ತಾನೆ. ಸದಾ ಶ್ರೀ ರಾಮನ ಸೇವೆ ಮತ್ತು ಸುಗ್ರೀವನಿಗೆ ನಿಷ್ಠೆ.

"ದೇ"

17/n
ವಂದ್ಯಾಸ್ತೇ ತು ತಪಸ್ಸಿದ್ಧಾಃ ತಾಪಸಾ ವೀತಕಲ್ಮಷಾಃ ।
ಪ್ರಷ್ಟವ್ಯಾಶ್ಚಾಪಿ ಸೀತಾಯಾಃ ಪ್ರವೃತ್ತಿಂ ವಿನಯಾನ್ವಿತೈಃ ॥ ೧೨

4 ದಿಕ್ಕುಗಳಲ್ಲೂ ಸೀತಾನ್ವೇಷಣೆಗೆ ಹೋರಟ ಕಪಿ ಸೈನ್ಯ.
"ವ"

18/n
ಸ ನಿರ್ಜಿತ್ಯ ಪುರೀಂ ಶ್ರೇಷ್ಠಾಂ ಲಂಕಾಂ ತಾಂ ಕಾಮರೂಪಿಣೀಮ್ ।
ವಿಕ್ರಮೇಣ ಮಹತೇಜಾಃ ಹನುಮಾನ್ಮಾರುತಾತ್ಮಜಃ ॥ ೧೩

ಹನುಮಾನ್ ಸಮುದ್ರ ದಾಟಿ ಲಂಕೆ ತಲುಪಿದ್ದು.

"ಸ"

19/n
ಧನ್ಯಾ ದೇವಾಃ ಸ ಗಂಧರ್ವಾಃ ಸಿದ್ಧಾಶ್ಚ ಪರಮರ್ಷಯಃ ।
ಮಮ ಪಶ್ಯನ್ತಿ ಯೇ ನಾಥಂ ರಾಮಂ ರಾಜೀವಲೋಚನಮ್ ॥ ೧೪

ಶ್ರೀ ರಾಮನನ್ನು ತನ್ನ ಬಳಿ ಕಳುಹಿಸುವಂತೆ ಸೀತಾ ಮಾತೇ ದೇವ, ಗಂಧರ್ವ, ಕಿನ್ನರ ಎಲ್ಲರಲ್ಲೂ ಬೇಡಿಕೆ ಇಡುತ್ತಿರುವುದು.

"ಧ"

20/n
ಮಂಗಳಾಭಿಮುಖೀ ತಸ್ಯ ಸಾ ತದಾಸೀನ್ಮಹಾಕಪೇಃ ।
ಉಪತಸ್ಥೇ ವಿಶಾಲಾಕ್ಷೀ ಪ್ರಯತಾ ಹವ್ಯವಾಹನಮ್ ॥ ೧೫

ಆಂಜನೇಯನ ಬಲಕ್ಕೆ ಬೆಂಕಿ ಬಿದ್ದ ಸುದ್ದಿ ತಿಳಿದ ಸೀತಾ, ಅಗ್ನಿ ದೇವರಲ್ಲಿ ಪ್ರಾರ್ಥನೆ ಮಾಡುತ್ತಾಳೆ ಹನುಮಂತನಿಗೆ ಯಾವುದೇ ಹಾನಿ ಆಗದೆಯಿರಲಿ ಎಂದು.
"ಮ"

21/n
ಹಿತಂ ಮಹಾರ್ಥಂ ಮೃದು ಹೇತು ಸಂಹಿತಂ
ವ್ಯತೀತಕಾಲಾಯತಿ ಸಂಪ್ರತಿಕ್ಷಮಮ್ ।
ನಿಶಮ್ಯ ತದ್ವಾಕ್ಯಮುಪಸ್ಥಿತಜ್ವರಃ
ಪ್ರಸಂಗವಾನುತ್ತರಮೇತದಬ್ರವೀತ್ ॥ ೧೬

ವಿಭಿಷಣ ಸಭಾ ತ್ಯಾಗ.
"ಹಿ"

22/n
ಧರ್ಮಾತ್ಮಾ ರಕ್ಷಸಾಂ ಶ್ರೇಷ್ಠಃ ಸಂಪ್ರಾಪ್ತೋಽಯಂ ವಿಭೀಷಣಃ ।
ಲಂಕೈಶ್ವರ್ಯಮ್ ಧ್ರುವಂ ಶ್ರೀಮಾನಯಂ ಪ್ರಾಪ್ನೋತ್ಯಕಂಟಕಮ್ ॥ ೧೭

ವಿಭಿಷಣ ಶರಣಾಗತಿ ಶ್ರೀ ರಾಮನಲ್ಲಿ.

"ಧ"

23/n
ಯೋ ವಜ್ರಪಾತಾಶನಿ ಸನ್ನಿಪಾತಾನ್
ನ ಚಕ್ಷುಭೇ ನಾಪಿ ಚಚಾಲ ರಾಜಾ ।
ಸ ರಾಮಬಾಣಾಭಿಹತೋ ಭೃಶಾರ್ತಃ
ಚಚಾಲ ಚಾಪಂ ಚ ಮುಮೋಚ ವೀರಃ ॥ ೧೮

ರಾವಣನ ಮೇಲೆ ವಜ್ರಯುಧ ಪ್ರಯೋಗ ಮಾಡಿದ ಶ್ರೀ ರಾಮ.

"ಯೋ"

24/n
ಯಸ್ಯ ವಿಕ್ರಮಮಾಸಾದ್ಯ ರಾಕ್ಷಸಾ ನಿಧನಂ ಗತಾಃ ।
ತಂ ಮನ್ಯೇ ರಾಘವಂ ವೀರಂ ನಾರಾಯಣಮನಾಮಯಮ್ ॥ ೧೯

ಕುಂಭಕರ್ಣನ ವಧೆ ಮಾಡಿದ ಶ್ರೀ ರಾಮ.
"ಯ"

25/n
ನ ತೇ ದದರ್ಶಿರೇ ರಾಮಂ ದಹಂತಮರಿವಾಹಿನೀಮ್ ।
ಮೋಹಿತಾಃ ಪರಮಾಸ್ತ್ರೇಣ ಗಾಂಧರ್ವೇಣ ಮಾಹಾತ್ಮನಾ ॥ ೨೦

ಸಮರ ವೀರ ಶ್ರೀ ರಾಮನ ರೌದ್ರಾವತಾರ.

"ನ"

26/n
ಪ್ರಣಮ್ಯ ದೇವತಾಭ್ಯಶ್ಚ ಬ್ರಾಹ್ಮಣೇಭ್ಯಶ್ಚ ಮೈಥಿಲೀ ।
ಬದ್ಧಾಂಜಲಿಪುಟಾ ಚೇದಮುವಾಚಾಗ್ನಿ ಸಮೀಪತಃ ॥ ೨೧

ಸೀತಾ ಮಾತೆಯ ಅಗ್ನಿ ಪ್ರವೇಶ.

"ಪ್ರ"

27/n
ಚಲನಾತ್ಪರ್ವತೇಂದ್ರಸ್ಯ ಗಣಾ ದೇವಾಶ್ಚ ಕಂಪಿತಾಃ ।
ಚಚಾಲ ಪಾರ್ವತೀ ಚಾಪಿ ತದಾಶ್ಲಿಷ್ಟಾ ಮಹೇಶ್ವರಮ್ ॥ ೨೨

ಉತ್ತರ ಕಂಡದಲ್ಲ ಬರುವ ರಾವಣನ ಶಿವ ಭಕ್ತಿ.
"ಚ"

28/n
ದಾರಾಃ ಪುತ್ರಾಃ ಪುರಂ ರಾಷ್ಟ್ರಂ ಭೋಗಾಚ್ಛಾದನಭೋಜನಮ್ ।
ಸರ್ವಮೇವಾವಿಭಕ್ತಂ ನೋ ಭವಿಷ್ಯತಿ ಹರೀಶ್ವರ ॥ ೨೩

ರಾವಣ ಮತ್ತು ವಾಲಿ ಸ್ನೇಹಿತರಾಗಿ ಒಟ್ಟಿಗೆ ದುಷ್ಟ ಕಾರ್ಯಗಳನ್ನು ಮಾಡುವುದಾಗಿ ಒಪ್ಪಂದ ಮಾಡಿಕೊಂಡಿದ್ದು.
"ದ"

29/n
ಯಾಮೇವ ರಾತ್ರಿಂ ಶತ್ರುಘ್ನಃ ಪರ್ಣಶಾಲಾಂ ಸಮಾವಿಶತ್ ।
ತಾಮೇವ ರಾತ್ರಿಂ ಸೀತಾಽಪಿ ಪ್ರಸೂತಾ ದಾರಕದ್ವಯಮ್ ॥ ೨೪

ಲವ ಕುಶರ ಜನನ.
"ಯಾ"

30/n
ಇದಂ ರಾಮಾಯಣಂ ಕೃತ್ಸ್ನಂ ಗಾಯತ್ರೀಬೀಜಸಂಯುತಮ್ ।
ತ್ರಿಸಂಧ್ಯಂ ಯಃ ಪಠೇನ್ನಿತ್ಯಂ ಸರ್ವಪಾಪೈಃ ಪ್ರಮುಚ್ಯತೇ ॥

ಇತಿ ಶ್ರೀ ಗಾಯತ್ರೀ ರಾಮಾಯಣಮ್ ಸಮ್ಪೂರ್ಣಮ್ ॥

31/n
ಶ್ರೀ ರಾಮ ನಾಮವೆಂಬ ಖಡ್ಗ ಹೃದಯದಲ್ಲಿ ಇರುವಾಗ ಇನ್ನೇಕೆ ಭಯ.
ಸದಾ ಶ್ರೀ ರಾಮ ದಾಸಿ.
ಜೈ ಶ್ರೀ ರಾಮ 🙏🚩🚩

Share this Scrolly Tale with your friends.

A Scrolly Tale is a new way to read Twitter threads with a more visually immersive experience.
Discover more beautiful Scrolly Tales like this.

Keep scrolling