, 17 tweets, 6 min read
My Authors
Read all threads
ಇವತ್ತಿನ ಕರ್ನಾಟಕದ ಭೂಭಾಗದಲ್ಲಿ ನಡೆದ ಅಥವಾ ಕನ್ನಡಿಗರು ವಿದೇಶಿ ಆಡಳಿತದ ವಿರುದ್ಧ ಮಾಡಿದ ಸಶಸ್ತ್ರ ಬಂಡಾಯ ಹೋರಾಟಗಳಲ್ಲಿ ಹೆಚ್ಚಾಗಿ ಸಂಗೊಳ್ಳಿ ರಾಯಣ್ಣ, ಕಿತ್ತೂರು ಚೆನ್ನಮ್ಮ, ರಾಣಿ ಅಬ್ಬಕ್ಕ ರವರ ಹೆಸರು ಕೇಳುತ್ತಿರುತ್ತೇವೆ. ಈ ಟ್ವೀಟ್ ಸರಣಿ ಹೆಚ್ಚಾಗಿ ಕೇಳಿರದ ನೆಲದ ಕೆಲ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ.. #HappyIndependenceDay
#ದೊಂಡಿಯಾವಾಘ್
ಚನ್ನಗಿರಿಯಲ್ಲಿ ಹುಟ್ಟಿದ್ದ ದೊಂಡಿಯಾವಾಘ್, ಹೈದರಾಲಿಯ / ಟಿಪ್ಪುವಿನ ಆಡಳಿತದಲ್ಲಿ ಅಶ್ವಾರೋಹಿಯಾಗಿ ದುಡಿದು ಟಿಪ್ಪುವಿನ ಪತನದ ನಂತರ ತನ್ನದೇ ತುಕಡಿಯನ್ನು ಕಟ್ಟಿಕೊಂಡು ಹತ್ತಾರು ನೆಲೆಗಳಲ್ಲಿ ತನ್ನ ಪ್ರಾಬಲ್ಯವನ್ನು ಮೆರೆಸಿಕೊಂಡಿದ್ದವನಾಗಿದ್ದ.
#KarnatakaFreedomFighters Image
ಶಿವಮೊಗ್ಗ,ಹೊನ್ನಾಳಿ, ಶಿಕಾರಿಪುರ,ಕುಣಿಗಲ್,ಶಿರಹಟ್ಟಿ,ಸವಣೂರು ಗಳಲ್ಲಿ ಹತೋಟಿಯನ್ನು ಹೊಂದಿದ್ದ ಪ್ರತಿಬಾರಿಯೂ ಬ್ರಿಟಿಶರಿಗೆ ಚಳ್ಳೆಹಣ್ಣು ತಿನ್ನಿಸಿ ಒಂದೇ ಅವರ ಸೈನ್ಯವನ್ನು ಸೋಲಿಸುತ್ತಿದ್ದ ಅಥವಾ ಚಾಣಾಕ್ಶತನದಿಂದ ತಪ್ಪಿಸಿಕೊಳ್ಳುತ್ತಿದ್ದ.

#KarnatakaFreedomFighters
ಮಲಬಾರಿನ ಕೇರಳವರ್ಮ, ಪೆರಿಂತುರೈ,ದಿಂಡಿಗಲ್ ನ ರಾಜರುಗಳ ಬೆಂಬಲ ಪಡೆದಿದ್ದ ದೊಂಡಿಯಾವಾಘ್ ಒಂದು ಹಂತದಲ್ಲಿ 30000 ಸಾವಿರ ಅಶ್ವಾರೋಹಿಯವರು ಸೇರೊ 80000 ಸಾವಿರದಶ್ಟು ಬಲಶಾಲಿಗಳನ್ನು ಹೊಂದಿದ್ದ ಸೈನ್ಯಬಲವನ್ನು ಹೊಂದಿದ್ದನು.
#KarnatakaFreedomFighters
ಎರಡು ಬಾರಿ ಮರಾಠ ಪೇಶ್ವೆ ರಾಜ ದೊಂಡಿಯಾಪಂತ್ ದೋಖಲೆ ಮುಗಿಬಿದ್ದಿದ್ದು ದೊಂಡಿಯಾವಾಘ್ ಗೆ ಪ್ರಾಬಲ್ಯವನ್ನು ಉತ್ತರಕ್ಕೆ ವಿಸ್ತರಿಸಿಕೊಳ್ಳಲು ತಡೆಉಂಟುಮಾಡಿತು.
#KarnatakaFreedomFighters
1857-ಪ್ರಥಮ ಸಿಪಾಯಿದಂಗೆಗಿಂತ 57 ವರ್ಶ ಮುಂಚೆ ಕೃಷ್ಣನದಿಯ ತೀರದ ಕೋನಗಲ್ ನಲ್ಲಿ ನಡೆದ ಪರಾಕ್ರಮ ಯುದ್ದದಲ್ಲಿ ನಿಜಾಮರು, ಮರಾಠರು ಮತ್ತು ವೆಲ್ಲೆಸ್ಲಿಯ ಮೂರು ದಿಕ್ಕಿನ ದಾಳಿಗೆ ಸಿಕ್ಕಿ ಯುದ್ದಭೂಮಿಯಲ್ಲೇ ಗುಂಡೇಟಿಗೆ ಬಲಿಯಾದನು.
#KarnatakaFreedomFighters
ಎಡ್ವರ್ಡ್ ಕ್ಲೈವ್ ಎಂಬ ಬ್ರಿಟಿಷ್ ಅಧಿಕಾರಿ ದೊಂಡಿಯಾವಾಘ್ ನನ್ನು ; "ಅವನ ಪ್ರತಿರೋಧವು ಎಷ್ಟೊಂದು ಬಲಶಾಲಿಯಾಗಿ ವರ್ತಿಸಿತು ಹಾಗೂ ಎಷ್ಟೊಂದು ಕಾರ್ಯಕ್ಶಮವಾಗಿ ಅವನು ಅದನ್ನು ಸಂಘಟಿಸಿದ್ದನೆಂದರೆ ತೀರಾಸಾಮಾನ್ಯ ಅವ್ಯವಸ್ಥಿತ ಬಂಡೇ ಆಗಿದ್ದ ಅದು ಒಂದು ವಿದೇಶಿ ಯುದ್ಧದ ಮಟ್ಟಕೇರಿತು" ಎಂದು ಉಲ್ಲೇಖಿಸಿದ್ದಾನೆ.
#KarnatakaFreedomFighters
#ಮುಂಡರಗಿಭೀಮರಾಯ
ದೊರೆಯೂ,ಮಂತ್ರಿಯೂ ಅಲ್ಲದ ಮುಂಡರಗಿ ಭೀಮರಾಯನ ಕತೆ ಒಬ್ಬ ಸಾಮಾನ್ಯ ಮನುಶ್ಯ ಸ್ವಾಭಿಮಾನದ ಕಿಚ್ಚಿನಿಂದ ಬ್ರಿಟಿಷರು ಸಾಮಾನ್ಯ ಜನತೆಯನ್ನು ಶೋಷಿಸುತ್ತಿದ್ದುದನ್ನು ಕಂಡು ಹೋರಾಡಿದ ಕತೆ.ಬಳ್ಳಾರಿ,ಹೆಮ್ಮಿಗೆ,ಹೂವಿನ ಹಡಗಲಿ, ತೋರಗಲ್ ನಲ್ಲೆಲ್ಲಾ ಓಡಾಡಿ ಸ್ಥಳೀಯ ಆಡಳಿತಗಾರರನ್ನು ಒಟ್ಟೂಗೂಡಿಸಿ ಸಂಘಟಿತವಾದ ಬಂಡಾಯ ಎಬ್ಬಿಸಿದ್ದನು. Image
1858 ರಲ್ಲಿ ಲಿಂಗಸಗೂರಿನಿಂದ,ಹೈದರಾಬಾದ್ ನಿಂದ ಬ್ರಿಟಿಶರು ಸೈನ್ಯವನ್ನು ತರಿಸಿ ಕೊಪ್ಪಳದ ಕೋಟೆಯನ್ನು ಆವರಿಸಿ ಮೂರು ಗಂಟೆಯೊಳಗೆ ಶರಣಾಗಬೇಕೆಂದು ಆಜ್ನೆ ಕೊಟ್ಟಾಗ ಅದಕ್ಕೆ ಹೆದರದೆ ಕೆಂಚನಗೌಡ ಮತ್ತು ಮುಂಡರಗಿ ಭೀಮನಾಯಕ,ಇಬ್ಬರು ಗುಂಡೇಟಿಗೆ ಬಲಿಯಾದರು. ಇಂದಿಗೂ ಲಾವಣಿಗಳಲ್ಲಿ ಭೀಮರಾಯರ ಹೆಸರು ಹಾಡಲ್ಪಡುತ್ತಿದೆ.
#KarnatakaFreedomFighters
#ಸುರಪುರದವೆಂಕಟ್ಟಪ್ಪನಾಯಕ
ಇವತ್ತಿನ ಯಾದಗಿರಿ ಜಿಲ್ಲೆಯಲ್ಲಿ ಬರುವ ಸುರಪುರದ ವೆಂಕಟ್ಟಪ್ಪನಾಯಕ, ನಾಯಕರ ವಂಶಾಡಳಿತದಲ್ಲಿ ಬಂದ ನಾಯಕರುಗಳಲ್ಲಿ ಓರ್ವ ವಿದ್ಯಾವಂತ, ಸ್ವಾಭಿಮಾನಿ ರಾಜನಾಗಿದ್ದನು.
#KarnatakaFreedomFighters
ಬ್ರಿಟಿಶ್ ಅಧಿಕಾರಿ ಟೇಲರ್ ಇಂದ ಸಾಕಷ್ಟು ಕಲಿತಿದ್ದ ಸ್ವತಂತ್ರ ಆಡಳಿತಾವಧಿಯಲ್ಲಿ ಸೈನ್ಯದಲ್ಲಿ ಅರಬರನ್ನು, ರೋಹಿಲ್ಲರು ಸೇರಿಸಿ ಬ್ರಿಟಿಶರ ಅಣತಿಯಂತೆ ಆಡಳಿತ ನಡೆಸಲು ಧಿಕ್ಕರಿಸಿ ತನ್ನದೇ ತಂತ್ರಗಳಿಂದ ಅಧಿಕಾರ ವ್ಯಾಪ್ತಿಯನ್ನು ವಿಸ್ತರಿಸಲು ಯತ್ನಿಸಿದಾಗ ಬ್ರಿಟಿಶರು ಸುರಪುರವನ್ನು ಪರಾಕ್ರಮ ಯುದ್ಧದ ಬಳಿಕ ವಶಪಡಿಸಿಕೊಂಡರು.
ವೆಂಕಟಪ್ಪನಾಯಕ ಹೈದರಾಬಾದಿಗೆ ಪಲಾಯನಗೊಂಡರೂ ಅಲ್ಲಿನ ನಿಜಾಮರು ಬ್ರಿಟಿಶರಿಗೆ ಒಪ್ಪಿಸುತ್ತಾರೆ. ಹೀಗೆ ಸೆರೆಯಾದ ವೆಂಕಟಪ್ಪನಾಯಕ ಕೊನೆಗೆ ಬ್ರಿಟಿಶರ ಕೈಯಲ್ಲಿ ಸಾಯಲು ಇಚ್ಚಿಸದೇ ತನ್ನನ್ನೆ ಸಾಯಿಸಿಕೊಂಡ ಎಂದು ಇತಿಹಾಸ ಹೇಳುತ್ತದೆ. #KarnatakaFreedomFighters
#ಹಲಗಲಿಯಬೇಡರು.

ಇವತ್ತಿನ ಮುದೋಳಿನ ಹಲಗಲಿಯ ಹೋರಾಟಗಾರರು ಅಸಾಮಾನ್ಯ ವೀರರು. 1857ರಲ್ಲಿ ಬ್ರಿಟಿಶರು ನಿಶ್ಯಸ್ತ್ರೀಕರಣ ಕಾಯ್ದೆಯನ್ನು ಜಾರಿಗೆ ತಂದಾಗ, ಎಲ್ಲಾ ಆಯುಧವನ್ನು ಒಪ್ಪಿಸಿ ಸರ್ಕಾರದಿಂದ ಲೈಸನ್ಸ್ ಪಡೆಯಬೇಕಾಗಿತ್ತು. #KarnatakaFreedomFighters Image
ತಮ್ಮ ಕುಲಸಂಪ್ರದಾಯಕ್ಕೆ ವಿರುದ್ದವಾದ ಈ ಆಜ್ನೆಗೆ ತಿರುಗಿಬಿದ್ದ ಬೇಡ ಸಮುದಾಯ ಮುಧೋಳಿನ ಕಾರಭಾರಿ, ವಿಧ ವಿಧವಾಗಿ ಬೇರೆ ಬೇರೆಯವರ ಮುಖೇನ ಪ್ರಯತ್ನಿಸಿದರೂ ಜಗ್ಗಲಿಲ್ಲ. 1857ರಲ್ಲಿ ಬ್ರಿಟಿಷ್ ಸೇನೆ ಹಲಗಲಿಯನ್ನು ಸುತ್ತುವರಿದರೂ ರಾತ್ರಿಯೀಡಿ ವೀರಾವೇಶದಿಂದ ಹೋರಾಡಿದರು. #KarnatakaFreedomFighters
ಕೊನೆಗೆ ಬಾಗಲಕೋಟೆಯಿಂದ ಸ್ಸೈನ್ಯ ತರಿಸಿ ಮನೆಗಳಿಗೆ ಬೆಂಕಿ ಕೊಟ್ಟು 290 ಬೇಡರನ್ನು ಸೆರೆ ಹಿಡಿದು ಒಂದಿಶ್ಟು ಜನರನ್ನು ಸಂತೆಯ ದಿನ ಜನರೆದುರು ಗಲ್ಲಿಗೇರಿಸಿದರು. ಒಂದು ಸಮುದಾಯ ಬ್ರಿಟಿಶರ ವಿರುದ್ಧ ಅಷ್ಟೊಂದು ವೀರೋಚಿತವಾಗಿ ಹೋರಾಡಿದ ಉದಾಹರಣೆ ಕಮ್ಮಿ. #KarnatakaFreedomFighters
Referred this book for all these tweets. Image
ಇವರುಗಳಲ್ಲದೇ, ಅಮರಸುಳ್ಯ, ಸ್ವಾಮಿ ಅಪರಾಂಪರ, ಕಲ್ಯಾಣಸ್ವಾಮಿ, ಕೊಪ್ಪಳದ ವೀರಪ್ಪ, ಐಗೂರಿನ ವೆಂಕಟಾದ್ರಿ ನಾಯಕ ಅಲ್ಲದೇ ಸಿಂದಗಿ, ಬೀದರ್ ,ನರಗುಂದ, ಕಿತ್ತೂರು ಬಂಡಾಯಗಳು ಕೂಡ ಐತಿಹಾಸಿಕವಾಗಿ ಪ್ರಾಮುಖ್ಯತೆ ಹೊಂದಿವೆ.
Missing some Tweet in this thread? You can try to force a refresh.

Keep Current with Kiran

Profile picture

Stay in touch and get notified when new unrolls are available from this author!

Read all threads

This Thread may be Removed Anytime!

Twitter may remove this content at anytime, convert it as a PDF, save and print for later use!

Try unrolling a thread yourself!

how to unroll video

1) Follow Thread Reader App on Twitter so you can easily mention us!

2) Go to a Twitter thread (series of Tweets by the same owner) and mention us with a keyword "unroll" @threadreaderapp unroll

You can practice here first or read more on our help page!

Follow Us on Twitter!

Did Thread Reader help you today?

Support us! We are indie developers!


This site is made by just two indie developers on a laptop doing marketing, support and development! Read more about the story.

Become a Premium Member ($3.00/month or $30.00/year) and get exclusive features!

Become Premium

Too expensive? Make a small donation by buying us coffee ($5) or help with server cost ($10)

Donate via Paypal Become our Patreon

Thank you for your support!