Kiran Kodlady | ಕಿರಣ್ ಕೊಡ್ಲಾಡಿ Profile picture
Kannadiga. Believe in TRUE Federalism, not in disguise of unitary. One Day, want to see Indian languages offering knowledge and job on its merit !
May 14, 2021 28 tweets 4 min read
ಬಸವಣ್ಣನವರ ಬಗ್ಗೆ ನಾವೆಲ್ಲರೂ ಪುಸ್ತಕಗಳನ್ನು, ಅಂಕಣಗಳನ್ನು ಓದಿರುತ್ತೇವೆ. ರಂಜಾನ್ ದರ್ಗಾ ಅವರು ಬರೆದ ಬಸವಣ್ಣ ಮತ್ತು ಅಂಬೇಡ್ಕರ್ ಎಂಬ ಪುಸ್ತಕದಲ್ಲಿ ಬಸವಣ್ಣನವರ ಕೆಲ ವಿಚಾರಗಳನ್ನು, ಕೆಲಸಗಳನ್ನು ಇವತ್ತಿನ ಪ್ರಜಾಪ್ರಭುತ್ವದ ಆಶಯಗಳೊಂದಿಗೆ ಸಮೀಕರಿಸಿ ಬರೆದ ಒಂದು ಅಧ್ಯಾಯ ಸಿಗುತ್ತದೆ. ಅದರಲ್ಲಿನ ಕೆಲ ಪ್ರಮುಖ ಅಂಶಗಳು ಹೀಗಿವೆ. "ದೇಶದ ಮೊದಲ ಏಕದೇವೋಪಾಸನಾ ಧರ್ಮ"
ಬಹುದೇವೋಪಾಸನೆಯ ಸನಾತನ ಧರ್ಮ, ತೀರ್ಥಂಕರರ ಜೈನ ಧರ್ಮ ಆಜ್ನೇಯವಾದಿ ಬೌದ್ಧ ಧರ್ಮ ಮತ್ತು ಆದಿವಾಸಿಗಳ ವಿವಿಧ ಸಂಪ್ರದಾಯಗಳು ಭಾರತದಲ್ಲಿ ಸಹಸ್ರಾರು ವರ್ಷಗಳಿಂದ ವಿವಿಧ ಜೀವನವಿಧಾನ ಗಳಿಂದ ಕೂಡಿದ ಸಮಾಜಗಳನ್ನು ಸೃಷ್ಟಿಸಿದ್ದರೂ ಏಕದೇವೋಪಾಸನೆಯ ಧರ್ಮದ ಸ್ಥಾಪನೆಯಾಗಿರಲಿಲ್ಲ.
Sep 15, 2020 14 tweets 2 min read
ಇಂಜಿನಿಯರ್, ದಿವಾನರಾಗಿ ಸರ್ ಎಮ್ ವಿಶ್ವೇಶ್ವರಯ್ಯ ಅವರು ಕಟ್ಟಿದ ಅಣೆಕಟ್ಟುಗಳು, ಕಾರ್ಖಾನೆಗಳು,ನೀರಾವರಿ ಯೋಜನೆಗಳು,ಅವರ ಮುಂದಾಳತ್ವದಲ್ಲಿ ಸ್ಥಾಪಿತವಾದ ಮೈಸೂರು ವಿಶ್ವವಿದ್ಯಾಲಯ,ಕನ್ನಡ ಸಾಹಿತ್ಯ ಪರಿಷತ್ತು..ಇವೆಲ್ಲದರ ಬಗ್ಗೆ ನೆನಪಿಸುತ್ತಿರುತ್ತೇವೆ. ರಾಜಕೀಯ,ಆಡಳಿತ ಸುಧಾರಣೆಯ ವಿಚಾರದಲ್ಲಿ ಅವರ ನಿಲುವು, ಕೆಲಸಗಳ ಬಗ್ಗೆ..👇 1881 ರಲ್ಲಿ ದಿವಾನ್ ರಂಗಾಚಾರ್ಲು ಅವರು ಪ್ರಜಾಪ್ರತಿನಿಧಿ ಸಭೆ ಸ್ಥಾಪಿಸಿದ್ದರೂ ಎಲ್ಲರೂ ಸರ್ಕಾರದಿಂದ ‌ನೇಮಿತರಾಗಿದ್ದರು. ಮುಂದೆ ಪ್ರಜಾಪ್ರಭುತ್ವ ಪದ್ಧತಿಯಲ್ಲಿ ವಿಶ್ವಾಸ ತಾಳಿದ್ದ ಪ್ರಗತಿಪರರಾದ
ವಿಶ್ವೇಶ್ವರಯ್ಯನವರು ಪ್ರತಿನಿಧಿಗಳಿಗೆ
ಹೆಚ್ಚು ಅಧಿಕಾರ ಕೊಡಲು ಆಡಳಿತದಲ್ಲಿ ಪಾಲ್ಗೊಳ್ಳುವಂತೆ ಮಾಡಲು ಬಯಸಿದರು.
Sep 8, 2020 7 tweets 2 min read
ಕನ್ನಡಿಗರೆಲ್ಲೂ ಓದಬೇಕಾದ, ಓದಿದವರು ಪುನಃ ಪುನಃ ಓದಬೇಕಾದ ಕನ್ನಡದ ಹೊತ್ತಿಗೆಗಳಲ್ಲಿ #ಹೊಸವಿಚಾರಗಳು ಅಗ್ರಮಾನ್ಯ ವಾದುದು. ಹೆಚ್ಚಿನ ಲೇಖನಗಳು ಇವತ್ತಿನ ಕಾಲಘಟ್ಟಕ್ಕೆ ಇನ್ನೂ ಸಮಯೋಚಿತ ಎಂದೆನಿಸುತ್ತದೆ. ಇವತ್ತು ನೆನಪಾದ ಕೆಲವು.
(ವಿ.ಸೂ: ಎಲ್ಲ ಕರ್ನಾಟಕಪರ ಮನಸ್ಸುಗಳು ಈ ಪುಸ್ತಕ ಓದಿದರೆ ಒಳ್ಳೆಯದು. ಉಡುಗೊರೆಯಾಗಿಯೂ ಕೊಡಿ) ಪ್ರಾದೇಶಿಕ ಪಕ್ಕದ ಕುರಿತು
Aug 15, 2020 17 tweets 6 min read
ಇವತ್ತಿನ ಕರ್ನಾಟಕದ ಭೂಭಾಗದಲ್ಲಿ ನಡೆದ ಅಥವಾ ಕನ್ನಡಿಗರು ವಿದೇಶಿ ಆಡಳಿತದ ವಿರುದ್ಧ ಮಾಡಿದ ಸಶಸ್ತ್ರ ಬಂಡಾಯ ಹೋರಾಟಗಳಲ್ಲಿ ಹೆಚ್ಚಾಗಿ ಸಂಗೊಳ್ಳಿ ರಾಯಣ್ಣ, ಕಿತ್ತೂರು ಚೆನ್ನಮ್ಮ, ರಾಣಿ ಅಬ್ಬಕ್ಕ ರವರ ಹೆಸರು ಕೇಳುತ್ತಿರುತ್ತೇವೆ. ಈ ಟ್ವೀಟ್ ಸರಣಿ ಹೆಚ್ಚಾಗಿ ಕೇಳಿರದ ನೆಲದ ಕೆಲ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ.. #HappyIndependenceDay #ದೊಂಡಿಯಾವಾಘ್
ಚನ್ನಗಿರಿಯಲ್ಲಿ ಹುಟ್ಟಿದ್ದ ದೊಂಡಿಯಾವಾಘ್, ಹೈದರಾಲಿಯ / ಟಿಪ್ಪುವಿನ ಆಡಳಿತದಲ್ಲಿ ಅಶ್ವಾರೋಹಿಯಾಗಿ ದುಡಿದು ಟಿಪ್ಪುವಿನ ಪತನದ ನಂತರ ತನ್ನದೇ ತುಕಡಿಯನ್ನು ಕಟ್ಟಿಕೊಂಡು ಹತ್ತಾರು ನೆಲೆಗಳಲ್ಲಿ ತನ್ನ ಪ್ರಾಬಲ್ಯವನ್ನು ಮೆರೆಸಿಕೊಂಡಿದ್ದವನಾಗಿದ್ದ.
#KarnatakaFreedomFighters Image
May 30, 2020 15 tweets 2 min read
ಇತ್ತೀಚಿಗೆ ಮರು ಪರಿಶ್ಕರಿಸಿ ಬಂದ ರಾಜಭಾಶಾ ಆಯೋಗದ ವರದಿಯಲ್ಲಿ 2020-21 ನೇ ಸಾಲಿನಲ್ಲಿ ಭಾರತದಾದ್ಯಂತ ರಾಜಭಾಶೆ - ಹಿಂದಿಯನ್ನು ನಾಗರೀಕ ಆಡಳಿತದಲ್ಲಿ ಹೇಗೆ ಇನ್ನಶ್ಟು ಪ್ರಚುರ ಪಡಿಸಬೇಕು; ಹಿಂದಿ ಬಳಕೆಯನ್ನು ಹೇಗೆ ತೀವ್ರಗೊಳಿಸಬೇಕು ಎಂಬುದರ ಬಗ್ಗೆ ಉಲ್ಲೇಖಿಸಿರುವ ಕೆಲವು ಅಂಶಗಳು ಹೀಗಿವೆ: 1. ಮೊದಲನೆಯದಾಗಿ, ರಾಜಭಾಶಾ ಆಯೋಗದಲ್ಲಿರುವ ಈ ಹಿಂದೆ ಇರುವ ರಾಜ್ಯಗಳ ವರ್ಗೀಕರಣ ಮುಂದುವರಿಯಲಿದೆ. ಅದರ ಪ್ರಕಾರ ಪಟ್ಟಿಗಳು(A,B & C) ಹೀಗಿವೆ:

A- ಬಿಹಾರ, ಚತ್ತಿಸ್ಗಡ್, ಹಿಮಾಚಲ ಪ್ರದೇಶ, ಜಾರ್ಕಂಡ್, ಮಧ್ಯಪ್ರದೇಶ, ರಾಜಸ್ತಾನ, ಉತ್ತರಪ್ರದೇಶ, ಉತ್ತರಾಕಂಡ್, ದೆಹಲಿ, ಅಂಡಮಾನ್ ನಿಕೋಬಾರ್ ದ್ವೀಪಗಳು.