ಇಂಜಿನಿಯರ್, ದಿವಾನರಾಗಿ ಸರ್ ಎಮ್ ವಿಶ್ವೇಶ್ವರಯ್ಯ ಅವರು ಕಟ್ಟಿದ ಅಣೆಕಟ್ಟುಗಳು, ಕಾರ್ಖಾನೆಗಳು,ನೀರಾವರಿ ಯೋಜನೆಗಳು,ಅವರ ಮುಂದಾಳತ್ವದಲ್ಲಿ ಸ್ಥಾಪಿತವಾದ ಮೈಸೂರು ವಿಶ್ವವಿದ್ಯಾಲಯ,ಕನ್ನಡ ಸಾಹಿತ್ಯ ಪರಿಷತ್ತು..ಇವೆಲ್ಲದರ ಬಗ್ಗೆ ನೆನಪಿಸುತ್ತಿರುತ್ತೇವೆ. ರಾಜಕೀಯ,ಆಡಳಿತ ಸುಧಾರಣೆಯ ವಿಚಾರದಲ್ಲಿ ಅವರ ನಿಲುವು, ಕೆಲಸಗಳ ಬಗ್ಗೆ..👇
1881 ರಲ್ಲಿ ದಿವಾನ್ ರಂಗಾಚಾರ್ಲು ಅವರು ಪ್ರಜಾಪ್ರತಿನಿಧಿ ಸಭೆ ಸ್ಥಾಪಿಸಿದ್ದರೂ ಎಲ್ಲರೂ ಸರ್ಕಾರದಿಂದ ನೇಮಿತರಾಗಿದ್ದರು. ಮುಂದೆ ಪ್ರಜಾಪ್ರಭುತ್ವ ಪದ್ಧತಿಯಲ್ಲಿ ವಿಶ್ವಾಸ ತಾಳಿದ್ದ ಪ್ರಗತಿಪರರಾದ
ವಿಶ್ವೇಶ್ವರಯ್ಯನವರು ಪ್ರತಿನಿಧಿಗಳಿಗೆ
ಹೆಚ್ಚು ಅಧಿಕಾರ ಕೊಡಲು ಆಡಳಿತದಲ್ಲಿ ಪಾಲ್ಗೊಳ್ಳುವಂತೆ ಮಾಡಲು ಬಯಸಿದರು.
ನಿಮಗೇನು ಬೇಕು,ಎಷ್ಟು ಅಧಿಕಾರ ಬೇಕು ಎಂದು ಚರ್ಚಿಸಿ ಸಭೆಯ ಸಂಖ್ಯಾಬಲ ಪ್ರತಿನಿಧಿಗಳನ್ನು ಆರಿಸುವ ಅಧಿಕಾರವ್ಯಾಪ್ತಿ ಹೊಣೆ ವಹಿಸಿಕೊಡುವ ದಿಟ್ಟ ಹೆಜ್ಜೆ ಇಟ್ಟರು.ಆದಾಯ ವೆಚ್ಚದ ವಿಮರ್ಶೆ ನಡೆಸುವ ಅಧಿಕಾರ ಸಭೆಗೆ ದೊರೆಯಿತು.ಬಹುತೇಕ ಸದಸ್ಯರಿಗೆ ಇಂಗ್ಲಿಷ್ ಗೊತ್ತಿರಲಿಲ್ಲ ಆದ್ದರಿಂದ ಪ್ರತಿಗಳು ಕನ್ನಡದಲ್ಲಿ ಮುದ್ರಿತ ವಾಗುವಂತೆ ಮಾಡಿದರು.
1881 ರಲ್ಲಿ ಮೈಸೂರು ಅರಸರ ಕೈಯಲ್ಲಿ ಆಡಳಿತ ಇದ್ದಿದ್ದರೂ ಅದು ಗೌರವಯುತವಾದ ಒಪ್ಪಂದ ವಾಗಿರಲಿಲ್ಲ ಹಾಗಾಗಿ ಮೈಸೂರು ಅರಸರಿಗೆ ಇನ್ನು ಹೆಚ್ಚು ಸ್ವತಂತ್ರ ಅಧಿಕಾರವುಳ್ಳ ಒಡಂಬಡಿಕೆ ಮಾಡಿಕೊಳ್ಳುವ ತುಡಿತವಿತ್ತು. 1913ರಲ್ಲಿ ಬ್ರಿಟಿಷ್ ಉಪಕಾರ್ಯದರ್ಶಿ ಮ್ಯಾಂಟಿಗೋ ಮೈಸೂರಿಗೆ ಬಂದಾಗ ವಿಶ್ವೇಶ್ವರಯ್ಯನವರು ತಮ್ಮ ರಾಜತಾಂತ್ರಿಕ ಕ್ಷಮತೆಯಿಂದ ,
ಬುದ್ಧಿಮತ್ತೆಯಿಂದ ಒಪ್ಪಿಸಿ ಮೈಸೂರು ರಾಜರೊಂದಿಗೆ ಬ್ರಿಟಿಷ್ ಕಂಪನಿಯ ಗೌರವಯುತ ಒಪ್ಪಂದ ಏರ್ಪಟ್ಟಿತು. ಮುಂದೆ ಮಹಾರಾಜರು 1913ರಲ್ಲಿ " ವೈಸರಾಯರು ಮನವೊಲಿಸುವಂತೆ ತಾವು ಮಾಡಿದ ಪ್ರಯತ್ನದ ಹಿನ್ನೆಲೆಯೇ ನಮ್ಮ ಯಶಸ್ಸಿಗೆ ಮುಖ್ಯ ಕಾರಣ. ನೀವು ನನಗೂ ಮತ್ತು ನನ್ನ ರಾಜ್ಯಕ್ಕೂ ಮಾಡಿರುವ ಮಹದುಪಕಾರ ಎಂದಿಗೂ ನಾ ಮರೆಯಲಾರೆ" ಎನ್ನುತ್ತಾರೆ.
1978 ರಲ್ಲಿ ನಡೆದ ಬೆಂಗಳೂರು ಗಲಭೆಯ ವಿಚಾರಣಾ ಸಮಿತಿ ಅಧ್ಯಕ್ಷರಾಗಿದ್ದ ವಿಶ್ವೇಶ್ವರಯ್ಯನವರು "ರಾಜಕೀಯ ಅತೃಪ್ತಿಯ ನಿವಾರಣೋಪಾಯ" ಎಂಬ ವರದಿಯಲ್ಲಿ ಈ ಸಲಹೆಯನ್ನು ಮುಂದಿಡುತ್ತಾರೆ- ಜನರನ್ನು ಸಾಂತ್ವನಗೊಳಿಸಲು ಅವರನ್ನು ತೃಪ್ತರಾಗಿರಿಸಲು ಜನರು ವ್ಯಾಪಾರೋದ್ಯಮದಲ್ಲಿ ತುಂಬಾ ಆಸಕ್ತರಾಗಿ ಆಸ್ತಿಪಾಸ್ತಿ ಮಾಡಿಕೊಳ್ಳುವುದರಲ್ಲಿ ತಲ್ಲೀನರಾಗಿ,
ರಾಜಕೀಯ ವಿಷಯಗಳನ್ನು ಮರೆಯುವಂತೆ ಮಾಡುವುದು ಒಂದು ಮಾರ್ಗ. ಇನ್ನೊಂದು ಮಾರ್ಗವೆಂದರೆ ಜನ ರಾಜ್ಯಾಡಳಿತದಲ್ಲಿ ಹೆಚ್ಚುಹೆಚ್ಚಾಗಿ ಪಾತ್ರ ವಹಿಸುವಂತೆ ಪ್ರಭು ತನ್ನ ಅಧಿಕಾರವನ್ನು ಜನರಿಗೆ ವಹಿಸಿಕೊಟ್ಟು ಅವರನ್ನೇ ಹೊಣೆಯಾಗಿ ಮಾಡುವುದು ಪಕ್ಷಾಡಳಿತ ಪದ್ಧತಿ ಜಾರಿಗೆ ತರುವುದು ಶ್ರೇಯಸ್ಕರವಾದ ಮತ್ತೊಂದು ಮಾರ್ಗ.
ಮೈಸೂರು ಸಿವಿಲ್ ಸರ್ವಿಸ್ ಪರೀಕ್ಷೆಯನ್ನು ಇಂಡಿಯನ್ ಸಿವಿಲ್ ಸರ್ವಿಸ್ ಪದ್ಧತಿಗೆ ಅನುಗುಣವಾಗಿಸಿ, ಸಮರ್ಥರು ನೀತಿವಂತರು ತರುಣರನ್ನು ಈ ಪರೀಕ್ಷೆಗಳ ಮೂಲಕ ಉನ್ನತ ಅಧಿಕಾರ ಸ್ಥಾನಗಳಿಗೆ ನೇಮಿಸುವುದು ಅವರವರ ಬಯಕೆಯಾಗಿತ್ತು. ಜಾತಿ ಭೇದ ಎಣಿಸದೆ ಕೇವಲ ಸಾಮರ್ಥ್ಯ ಮತ್ತು ಗುಣಾವಗುಣಗಳನ್ನು ಅವಲಂಬಿಸಿ ನೇಮಿಸಲು ಅಪೇಕ್ಷಿಸುತ್ತಿದ್ದರು.
ಪತ್ರಿಕಾ ಸ್ವಾತಂತ್ರ್ಯದ ಬಹುದೊಡ್ಡ ಪ್ರತಿಪಾದಕರಾಗಿದ್ದ ವಿಶ್ವೇಶ್ವರಯ್ಯನವರು ಡಿ.ವಿ. ಗುಂಡಪ್ಪನವರನ್ನು ಬೆಂಬಲಿಸಿದ್ದು ಹಾಗೂ ಗುಂಡಪ್ಪನವರ ' ಕರ್ನಾಟಕ 'ಎನ್ನುವ ಇಂಗ್ಲಿಷ್ ವಾರಪತ್ರಿಕೆಗೆ ಬೆಂಬಲವಾಗಿದ್ದಿದ್ದು ತೋರಿ ಬರುತ್ತದೆ.
1917 ರಲ್ಲಿ ನಡೆದ ರಷ್ಯಾ ಕ್ರಾಂತಿಯ ನಂತರ ಗುಂಡಪ್ಪನವರು ದಂಗೆ ವರದಿಗಳನ್ನು ದಬ್ಬಾಳಿಕೆಯ ವಿರುದ್ಧ ಜನರ ಹೋರಾಟವನ್ನು ಪ್ರಕಟಿಸುತ್ತಿದ್ದರು. ಇದು ಮೈಸೂರಿನ ಕೆಲವು ದರ್ಬಾರಿ ಗಳಿಗೆ ರೆಸಿಡೆಂಟರಿಗೆ ಅಪ್ರಿಯವಾಗಿದ್ದು ಹಾಗಾಗಿ ರೆಸಿಡೆಂಟರು ದಿವಾನರಿಗೆ ಪತ್ರ ಬರೆದರು.
ಎಲ್ಲ ವರದಿಯನ್ನು ರೆಸಿಡೆಂಟರಿಗೆ ಒಪ್ಪಿಸುತ್ತಿದ್ದ ಬ್ರಿಟಿಷ್ ಗೂಡಾಚಾರಿಯನ್ನು ಬರಮಾಡಿಕೊಂಡು ವಿಶ್ವೇಶ್ವರಯ್ಯನವರು ದರ್ಬಾರಿನಿಂದ ಸಂಬಳ ಪಡೆಯುತ್ತಾ ಉಪ್ಪು ಉಂಡವರ ಮನೆಗೆ ದ್ರೋಹ ಮಾಡುವ ಇಬ್ಬಗೆಯ ನಡತೆ ಸರಿಯಲ್ಲವೆಂದು ಎಚ್ಚರಿಕೆ ನೀಡಿದರು. ಪತ್ರಿಕೋದ್ಯಮದ ಸ್ವಾತಂತ್ರ್ಯ ಪ್ರಜಾಪ್ರಭುತ್ವಕ್ಕೆ ಆಧಾರಸ್ತಂಭ ಎಂದು ನಂಬಿದ್ದರು.
ಮತ್ತೊಮ್ಮೆ ಡಿ ವಿ ಗುಂಡಪ್ಪನವರು ತಮ್ಮ ಪತ್ರಿಕೆಯಲ್ಲಿ ಬ್ರಿಟಿಷ್ ಅಧಿಕಾರಿಗಳ ದರ್ಪದ ಬಗ್ಗೆ ಬರೆದಾಗ ರೆಸಿಡೆಂಟರು ಪತ್ರಿಕೆಯ ಮೇಲೆ ಕ್ರಮ ತೆಗೆದುಕೊಳ್ಳಬೇಕೆಂದು ಉದ್ರೇಕದಿಂದ ಪತ್ರ ಬರೆದರು. ಆಗ ವಿಶ್ವೇಶ್ವರಯ್ಯನವರು ಹಾಗೆ ಕ್ರಮ ತೆಗೆದುಕೊಳ್ಳದೆ ಗುಂಡಪ್ಪ ನವರನ್ನು ಕರೆದು ವಿಚಾರ ವಿನಿಮಯ ನಡೆಸಿದರು ಹಾಗೂ ಅಲ್ಲಿಗೆ ತಣಿಸಿದರು.
ಕೆಲ ವರ್ಷಗಳ ಹಿಂದೆ ಬೆಂಗಳೂರಿನ ರಸ್ತೆಯಲ್ಲಿ ಇದನ್ನು ಕಂಡಾಗ, ಮತ್ತೊಮ್ಮೆ ಮಂಡ್ಯದ ರಿಕ್ಷಾ ಚಾಲಕರು ರಿಕ್ಷಾದಲ್ಲಿ ದೇವರ ಫೋಟೋದ ಪಕ್ಕ ವಿಶ್ವೇಶ್ವರಯ್ಯ ನವರ ಫೋಟೋ ಗೆ ನಮಸ್ಕರಿಸುತ್ತಿದ್ದಾಗ ಅನ್ನಿಸಿದ್ದುಂಟು..ಪ್ರಾಯಶಃ ನಿಜವಾಗಿಯೂ ಸತ್ತು ಬದುಕುವುದು ಎಂದರೆ ಇದೇ ಏನೋ. #HappyEngineersDay
1928*. Sorry.
• • •
Missing some Tweet in this thread? You can try to
force a refresh
ಬಸವಣ್ಣನವರ ಬಗ್ಗೆ ನಾವೆಲ್ಲರೂ ಪುಸ್ತಕಗಳನ್ನು, ಅಂಕಣಗಳನ್ನು ಓದಿರುತ್ತೇವೆ. ರಂಜಾನ್ ದರ್ಗಾ ಅವರು ಬರೆದ ಬಸವಣ್ಣ ಮತ್ತು ಅಂಬೇಡ್ಕರ್ ಎಂಬ ಪುಸ್ತಕದಲ್ಲಿ ಬಸವಣ್ಣನವರ ಕೆಲ ವಿಚಾರಗಳನ್ನು, ಕೆಲಸಗಳನ್ನು ಇವತ್ತಿನ ಪ್ರಜಾಪ್ರಭುತ್ವದ ಆಶಯಗಳೊಂದಿಗೆ ಸಮೀಕರಿಸಿ ಬರೆದ ಒಂದು ಅಧ್ಯಾಯ ಸಿಗುತ್ತದೆ. ಅದರಲ್ಲಿನ ಕೆಲ ಪ್ರಮುಖ ಅಂಶಗಳು ಹೀಗಿವೆ.
"ದೇಶದ ಮೊದಲ ಏಕದೇವೋಪಾಸನಾ ಧರ್ಮ"
ಬಹುದೇವೋಪಾಸನೆಯ ಸನಾತನ ಧರ್ಮ, ತೀರ್ಥಂಕರರ ಜೈನ ಧರ್ಮ ಆಜ್ನೇಯವಾದಿ ಬೌದ್ಧ ಧರ್ಮ ಮತ್ತು ಆದಿವಾಸಿಗಳ ವಿವಿಧ ಸಂಪ್ರದಾಯಗಳು ಭಾರತದಲ್ಲಿ ಸಹಸ್ರಾರು ವರ್ಷಗಳಿಂದ ವಿವಿಧ ಜೀವನವಿಧಾನ ಗಳಿಂದ ಕೂಡಿದ ಸಮಾಜಗಳನ್ನು ಸೃಷ್ಟಿಸಿದ್ದರೂ ಏಕದೇವೋಪಾಸನೆಯ ಧರ್ಮದ ಸ್ಥಾಪನೆಯಾಗಿರಲಿಲ್ಲ.
ಭಾರತದ ಮೊದಲ ಏಕದೇವೋಪಾಸನೆಯ ಧರ್ಮವಾದ ಲಿಂಗವಂತ ಧರ್ಮ ಕನ್ನಡ ನಾಡಿನಲ್ಲಿ 12ನೇ ಶತಮಾನದಲ್ಲಿ ಜನ್ಮತಾಳಿತು. ಕನ್ನಡವನ್ನು ಧರ್ಮದ, ದರ್ಶನದ, ಶಾಸ್ತ್ರದ, ಕಾಯಕಜೀವಿಗಳ ಸಾಹಿತ್ಯದ ಮತ್ತು ಚಳವಳಿಯ ಭಾಷೆಯಾಗಿ ರೂಪಿಸಿದ ಕೀರ್ತಿ 12ನೇ ಶತಮಾನದ ಶರಣ ಸಂಕುಲಕ್ಕೆ ಸಲ್ಲುತ್ತದೆ.
ಕನ್ನಡಿಗರೆಲ್ಲೂ ಓದಬೇಕಾದ, ಓದಿದವರು ಪುನಃ ಪುನಃ ಓದಬೇಕಾದ ಕನ್ನಡದ ಹೊತ್ತಿಗೆಗಳಲ್ಲಿ #ಹೊಸವಿಚಾರಗಳು ಅಗ್ರಮಾನ್ಯ ವಾದುದು. ಹೆಚ್ಚಿನ ಲೇಖನಗಳು ಇವತ್ತಿನ ಕಾಲಘಟ್ಟಕ್ಕೆ ಇನ್ನೂ ಸಮಯೋಚಿತ ಎಂದೆನಿಸುತ್ತದೆ. ಇವತ್ತು ನೆನಪಾದ ಕೆಲವು.
(ವಿ.ಸೂ: ಎಲ್ಲ ಕರ್ನಾಟಕಪರ ಮನಸ್ಸುಗಳು ಈ ಪುಸ್ತಕ ಓದಿದರೆ ಒಳ್ಳೆಯದು. ಉಡುಗೊರೆಯಾಗಿಯೂ ಕೊಡಿ)
ಇವತ್ತಿನ ಕರ್ನಾಟಕದ ಭೂಭಾಗದಲ್ಲಿ ನಡೆದ ಅಥವಾ ಕನ್ನಡಿಗರು ವಿದೇಶಿ ಆಡಳಿತದ ವಿರುದ್ಧ ಮಾಡಿದ ಸಶಸ್ತ್ರ ಬಂಡಾಯ ಹೋರಾಟಗಳಲ್ಲಿ ಹೆಚ್ಚಾಗಿ ಸಂಗೊಳ್ಳಿ ರಾಯಣ್ಣ, ಕಿತ್ತೂರು ಚೆನ್ನಮ್ಮ, ರಾಣಿ ಅಬ್ಬಕ್ಕ ರವರ ಹೆಸರು ಕೇಳುತ್ತಿರುತ್ತೇವೆ. ಈ ಟ್ವೀಟ್ ಸರಣಿ ಹೆಚ್ಚಾಗಿ ಕೇಳಿರದ ನೆಲದ ಕೆಲ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ.. #HappyIndependenceDay
#ದೊಂಡಿಯಾವಾಘ್
ಚನ್ನಗಿರಿಯಲ್ಲಿ ಹುಟ್ಟಿದ್ದ ದೊಂಡಿಯಾವಾಘ್, ಹೈದರಾಲಿಯ / ಟಿಪ್ಪುವಿನ ಆಡಳಿತದಲ್ಲಿ ಅಶ್ವಾರೋಹಿಯಾಗಿ ದುಡಿದು ಟಿಪ್ಪುವಿನ ಪತನದ ನಂತರ ತನ್ನದೇ ತುಕಡಿಯನ್ನು ಕಟ್ಟಿಕೊಂಡು ಹತ್ತಾರು ನೆಲೆಗಳಲ್ಲಿ ತನ್ನ ಪ್ರಾಬಲ್ಯವನ್ನು ಮೆರೆಸಿಕೊಂಡಿದ್ದವನಾಗಿದ್ದ. #KarnatakaFreedomFighters
ಶಿವಮೊಗ್ಗ,ಹೊನ್ನಾಳಿ, ಶಿಕಾರಿಪುರ,ಕುಣಿಗಲ್,ಶಿರಹಟ್ಟಿ,ಸವಣೂರು ಗಳಲ್ಲಿ ಹತೋಟಿಯನ್ನು ಹೊಂದಿದ್ದ ಪ್ರತಿಬಾರಿಯೂ ಬ್ರಿಟಿಶರಿಗೆ ಚಳ್ಳೆಹಣ್ಣು ತಿನ್ನಿಸಿ ಒಂದೇ ಅವರ ಸೈನ್ಯವನ್ನು ಸೋಲಿಸುತ್ತಿದ್ದ ಅಥವಾ ಚಾಣಾಕ್ಶತನದಿಂದ ತಪ್ಪಿಸಿಕೊಳ್ಳುತ್ತಿದ್ದ.
ಇತ್ತೀಚಿಗೆ ಮರು ಪರಿಶ್ಕರಿಸಿ ಬಂದ ರಾಜಭಾಶಾ ಆಯೋಗದ ವರದಿಯಲ್ಲಿ 2020-21 ನೇ ಸಾಲಿನಲ್ಲಿ ಭಾರತದಾದ್ಯಂತ ರಾಜಭಾಶೆ - ಹಿಂದಿಯನ್ನು ನಾಗರೀಕ ಆಡಳಿತದಲ್ಲಿ ಹೇಗೆ ಇನ್ನಶ್ಟು ಪ್ರಚುರ ಪಡಿಸಬೇಕು; ಹಿಂದಿ ಬಳಕೆಯನ್ನು ಹೇಗೆ ತೀವ್ರಗೊಳಿಸಬೇಕು ಎಂಬುದರ ಬಗ್ಗೆ ಉಲ್ಲೇಖಿಸಿರುವ ಕೆಲವು ಅಂಶಗಳು ಹೀಗಿವೆ:
1. ಮೊದಲನೆಯದಾಗಿ, ರಾಜಭಾಶಾ ಆಯೋಗದಲ್ಲಿರುವ ಈ ಹಿಂದೆ ಇರುವ ರಾಜ್ಯಗಳ ವರ್ಗೀಕರಣ ಮುಂದುವರಿಯಲಿದೆ. ಅದರ ಪ್ರಕಾರ ಪಟ್ಟಿಗಳು(A,B & C) ಹೀಗಿವೆ: