@IamAnitaBhat ರವರೇ, ಹಿಂದಿ ಹೇರಿಕೆ ಅಂದ್ರೆನು ಎನ್ನುವುದಕ್ಕೆ ಈ ಟ್ವೀಟ್ ಗಳನ್ನು ಓದಿ, ಹಿಂದಿ ಹೇರಿಕೆ ವಿರೋಧಿಸಿ, ಸಮಾನ ಭಾಷಾ ನೀತಿ ಬೇಕು ಎಂದು ನಡೆಸುತ್ತಿರುವ ಅಭಿಯಾನದಲ್ಲಿ ಕಳೆದ 16+ ವರ್ಷದಿಂದ ತೊಡಗಿಸಿಕೊಂಡಿದ್ದೇನೆ. ಒಂದಿಷ್ಟು ಮಾಹಿತಿಯನ್ನು ಟ್ವೀಟ್ ಮಾಡುತ್ತೇನೆ.
ಸಂವಿಧಾನದ Article 343 ರ ಪ್ರಕಾರ ಹಿಂದಿ 'ರಾಜಭಾಷೆ' ಹಿಂದಿಯಲ್ಲೇ ಭಾರತ ಒಕ್ಕೂಟ ಸರಕಾರದ ಎಲ್ಲಾ ಆಡಳಿತ ನಡೆಯಬೇಕು. ಇಂಗ್ಲೀಶ್ ಹಿಂದಿಯೊಂದಿಗೆ ಇರುತ್ತದೆಯಷ್ಟೆ. ಹೀಗೆ ಹಿಂದಿಯೊಂದನ್ನ ಮಾತ್ರ ರಾಜಭಾಷೆ/ಆಡಳಿತ ಭಾಷೆ ಮಾಡುವುದರಿಂದ ಆಗುವ/ಆಗುತ್ತಿರುವ ತೊಂದರೆಗಳು-
1. ಭಾರತ ಸರಕಾರ ಸುಮಾರು 150 ಅಂಶಗಳ ಮೇಲೆ ಕಾನೂನು ರೂಪಿಸುತ್ತದೆ(Union list+concurrent list) ಈ ಎಲ್ಲಾ 150 ಅಂಶಗಳಿಗೆ ಸಂಬಂಧಿಸಿದ ಕಾಯಿದೆ/ಕಾನೂನುಗಳು/ನಾಗರೀಕ ಸೇವೆಗಳು ಹಿಂದಿಯಲ್ಲಿ ಮತ್ತು ಇಂಗ್ಲೀಶ್ ನಲ್ಲಿ ಮಾತ್ರ ಇರಲಿದೆ. ದಿನಕಳೆದಂತೆ ಹಿಂದಿಯಲ್ಲಿ ಮಾತ್ರ ಇರಬೇಕು ಎನ್ನುವಂತೆ ನಿಯಮ ಮಾಡಬಹುದು.
ಹೀಗೆ ಕಾಯಿದೆ/ಕಾನೂನುಗಳು/ಕಾನೂನು ಕರಡು ಪ್ರತಿಗಳು ಹಿಂದಿಯೇತರ ಭಾಷೆಯಲ್ಲಿ ಇಲ್ಲದಿರುವುದರಿಂದ ಹಿಂದಿಯೇತರ ಜನರು policy making ನಿಂದ ದೂರ ಉಳಿಯಲಿದ್ದಾರೆ. ಕಾಯಿದೆ/ಕಾನೂನುಗಳು ಜನರ ಭಾಷೆಯಲ್ಲಿ ಇಲ್ಲದಿದ್ದರೆ ಜನರು ಕಾಯಿದೆ/ಕಾನೂನುಗಳನ್ನು ಅರ್ಥಮಾಡಿಕೊಳ್ಳದಿದ್ದರೆ ಆಡಳಿತದಲ್ಲಿ ಪಾರದರ್ಶಕತೆ ತರುವುದು ಅಸಾಧ್ಯ.
ಜನರಿಗೆ ನಾಗರೀಕ ಸೇವೆಗಳು ತಮ್ಮ ಭಾಷೆಯಲ್ಲಿ ಸಿಗದಿದ್ದರೆ, ಜನರು ಸರಕಾರದ ಯೋಜನೆಗಳನ್ನು ಸಮರ್ಪಕವಾಗಿ ಪಡೆದುಕೊಳ್ಳುವುದು ಕಷ್ಟವಾಗಲಿದೆ. ಇದಕ್ಕೆ ಪರಿಹಾರ ತಂತ್ರಜ್ಞಾನ ಬಳಸಿ ಹೆಚ್ಚು ಹೆಚ್ಚು ಭಾಷೆಗಳನ್ನು ಆಡಳಿತ ಭಾಷೆಯನ್ನಾಗಿ ಮಾಡಿಕೊಳ್ಳಬೇಕು.
ಸಿಂಗಪುರ, ಸ್ವಿಡ್ಚರ್ಲಾಂಡ್ ತರಹದ ಮುಂದುವರೆದ ಚಿಕ್ಕ ಚಿಕ್ಕ ದೇಶಗಳು ಸಹ ಪರಿಣಾಮಕಾರಿ/ಪಾರದರ್ಶಕ ಆಡಳಿತಕ್ಕಾಗಿ 4-5 ಆಡಳಿತ ಭಾಷೆಗಳನ್ನು ಹೊಂದಿವೆ
1950 ರ ಕಾಲಗಟ್ಟಕ್ಕೆ ತಕ್ಕಂತೆ ಹಿಂದಿಯನ್ನು ಮಾತ್ರ ಆಡಳಿತ ಭಾಷೆಯನ್ನಾಗಿ ಸಂವಿಧಾನದಲ್ಲಿ ಘೋಷಿಸಲಾಗಿತ್ತು, ಆದರೆ ಇಂದು ತಂತ್ರಜ್ಞಾನ ಮುಂದುವರೆದಿದೆ.. ಹೆಚ್ಚು ಹೆಚ್ಚು ಭಾಷೆಯಲ್ಲಿ ಆಡಳಿತ ನಡೆಸಲು ಮತ್ತು ನಾಗರೀಕ ಸೇವೆ ಒದಗಿಸಲು ಬೇಕಾದ ತಂತ್ರಜ್ಞಾನ ಇಂದು ಇದೆ..
ಕನ್ನಡದಲ್ಲಿ OCR, Text to speech ನ ತಂತ್ರಜ್ಞಾನವಿದ್ದು, Natural language processing ಕಡೆಗೆ ಸಂಶೋಧನೆಗಳು/developmentಗಳು ನಡೆಯುತ್ತಿದೆ.
ದೂರದ ಗೂಗಲ್ ಸಂಸ್ತೆಗೆ ಕನ್ನಡದಲ್ಲಿ ಎಲ್ಲಾ ಸೇವೆ ಕೊಡಲು ಸಾಧ್ಯವಾಗುತ್ತೆ ಅನ್ನೋದಾದರೆ ಭಾರತ ಸರಕಾರಕ್ಕೆ ಏಕೆ ಸಾಧ್ಯವಿಲ್ಲ?
ಕನ್ನಡ 2000 ವರ್ಷದ ಹಿಂದೆಯೇ ಆಡಳಿತ ಭಾಷೆಯಾಗಿತ್ತು. ಇಂದು ಕೆಲ ಕನ್ನಡಿಗರು ಕನ್ನಡದ ಮೇಲೆ ಕೀಳರಿಮೆ ಬೆಳೆಸಿಕೊಂಡು just ಒಂದು ಪ್ರಾದೇಶಿಕಭಾಷೆ ಎಂದು ಕರೆಸಿಕೊಳ್ಳುತ್ತಿದೆ.
343 ರಲ್ಲಿ ಹಿಂದಿಯನ್ನು ಮಾತ್ರ ಆಡಳಿತ ಭಾಷೆ ಎಂದು ಕರೆದಿರುವುದರಿಂದ ಆಗುತ್ತಿರುವ ತೊಂದರೆಗಳು 1. ಭಾರತ ಸರಕಾರ ನಡೆಸುವ ಬಹುತೇಕ ಉದ್ಯೋಗ ಪರೀಕ್ಷೆಗಳು ಹಿಂದಿ/ಇಂಗ್ಲೀಶ್ ನಲ್ಲ ಮಾತ್ರ ಇರುತ್ತದೆ. ಹಿಂದಿ ಭಾಷಿಕರಿಗೆ ಹಿಂದಿಯಲ್ಲಿ ಪರೀಕ್ಷೆ ಬರೆಯಲು ಅವಕಾಶವಿರುವುದು ಸರಿಯಾದ ನಡೆ. ಕನ್ನಡಿಗರಿಗೂ ಕನ್ನಡದಲ್ಲಿ ಪರೀಕ‌್ಷೆ ಬರೆಯಲು ಅವಕಾಶ ಬೇಡವೇ?
Article 343 ರಿಂದ ಆಗುತ್ತಿರುವ ತೊಂದರೆಗಳು ಕೆಲವೇ ಕೆಲವು ಉದಾಹರಣೆಗಳು-
ಇನ್ನು article 344 ಪ್ರಕಾರ ಇಂಗ್ಲೀಶ್ ಬಳಕೆ ಕಡಿಮೆ ಮಾಡಬೇಕು. ಇದಕ್ಕಾಗಿ ಹಿಂದಿ ಬಳಕೆ ಜಾಸ್ತಿ ಮಾಡಬೇಕು.
ಇಂಗ್ಲೀಶ್ ಬಳಕೆ ಕಡಿಮೆ ಮಾಡಲು ಹಿಂದಿಯೊಂದನ್ನೇ ಏಕೆ ಜಾಸ್ತಿ ಬಳಕೆ ಮಾಡಬೇಕು? ಹಿಂದಿಯ ಜೊತೆಗೆ ಕನ್ನಡ, ತಮಿಳು, ತೆಲುಗು ಭಾಷೆಗಳ ಬಳಕೆ ಹೆಚ್ಚಾದರೆ ಇಂಗ್ಲೀಶ್ ನ ಬಳಕೆ ಕಡಿಮೆ ಮಾಡಲು ಸಾಧ್ಯ? ಬರಿ
ಹಿಂದಿಯಿಂದ ಇಂಗ್ಲೀಶ್ ಬಳಕೆ ಕಡಿಮೆ.ಮಾಡಲು ಸಾಧ್ಯವೇ? ಹಿಂದಿ ರಾಜ್ಯಗಳಲ್ಲಿ ಹಿಂದಿ ಮಾಧ್ಯಮ ಶಾಲೆಗಳು ದೊಡ್ಡ ಮಟ್ಟದಲ್ಲಿ ಇಂಗ್ಲೀಶ್ ಮಾಧ್ಯಮಗಳಾಗುತ್ತಿವೆ. ಹಿಂದಿಯವರಿಗೇ ಬೇಡವಾಗ ಹಿಂದಿಯನ್ನು ನಾವು ಎತ್ತಾಡಬೇಕಿದೆ.
ಕನ್ನಡಿಗರು ಹಿಂದಿ ಭಾಷೆಯನ್ನು ಅಡಳಿತ ಭಾಷೆ ಮಾಡಬೇಡಿ ಅಂತ ಹೇಳ್ತಿಲ್ಲ. ಹಿಂದಿ ಭಾಷೆಯೂ ಆಡಳಿತ ಭಾಷೆಯಾಗಿರಬೇಕು, ಜೊತೆಗೆ ಹಿಂದಿಯೇತರ ಭಾಷೆಗಳೂ ಆಡಳಿತಭಾಷೆಯಾಗಬೇಕು. ಪರಭಾಷೆಗಳ ಬಗ್ಗೆ ಕೆಲ ಹಿಂದಿ ಭಾಷಿಕರಿಗೆ ಇರುವ ದ್ವೇಷ ಹೇಗಿದೆ ನೋಡಿ
Article 351 ರಲ್ಲಿ it shall be the duty of the union to promote the spread of Hindi language ಎನ್ನಲಾಗಿದೆ. ಭಾರತ ಸರಕಾರ ಕೇವಲ ಹಿಂದಿ ಭಾಷಿಕರನ್ನು ಮಾತ್ರ represent ಮಾಡ್ತಿಲ್ಲಾ. ಭಾರತ ಸರಕಾರ ಎಲ್ಲಾ ನಾಗರೀಕರಿಂದ ತೆರಿಗೆ ಸಂಗ್ರಹಿಸುತ್ತೆ. ಎಲ್ಲಾ ನಾಗರೀಕರನ್ನು, ಎಲ್ಲಾ ನಾಗರೀಕರ ಭಾಷೆಯನ್ನೂ ಸಮಾನವಾಗಿ ಕಾಣಬೇಕು
Article 351 ರಲ್ಲಿ duty ಅಂತ ಹೇಳಿರೋದ್ರಿಂದ ಹಿಂದಿಯೇತರ ನಾಡಿನಲ್ಲಿ ಭಾರತ ಸರಕಾರ ಹಿಂದಿ ಹರಡುತ್ತಲೇ ಇರುತ್ತದೆ. ಕೋಟ್ಯಾಂತರ ರೂಪಾಯಿ ಖರ್ಚು ಮಾಡುತ್ತೇ ಕೂಡ. ಇದು ತಿದ್ದುಪಡಿಯಾಗಿ it shall be the duty of the union to promote the spread of the Indian languages ಅಂತ ಆಗಬೇಕು.
@IamAnitaBhat
ಸಮಾನತೆ/equality ಯನ್ನು ಎತ್ತಿಹಿಡಿಯಬೇಕಾದ ಭಾರತ ಸಂವಿಧಾನದ article 14 ನಲ್ಲಿ ಭಾಷೆಯ ಅಂಶವನ್ನು ಯಾಕೆ ಕೈಬಿಡಲಾಗಿದೆ, ಕಾರಣವೇನಿರಬಹುದು?
@IamAnitaBhat
ಸಿನೆಮಾ ವಿಚಾರಕ್ಕೆ ಬರೋಣ, ಹಿಂದಿ ಸಿನೆಮಾ ಕಲಾವಿದರಿಗೆ ಸಿಗುವ ಪ್ರಶಸ್ತಿ ಪುರಸ್ಕಾರಗಳು ಹಿಂದಿಯೇತರ ಸಿನೆಮಾಗಳಿಗೆ ಏಕೆ ಸಿಗೋಲ್ಲಾ? ಹಿಂದಿ ಸಿನೆಮಾಗಳನ್ನು ಭಾರತೀಯ ಸಿನೆಮಾ ಎಂದೂ ಹಿಂದಿಯೇತರ ಸಿನೆಮಾಗಳನ್ನು ಪ್ರಾದೇಶಿಕ ಸಿನೆಮಾ ಎನ್ನುವುದನ್ನು ತಾವು ಒಪ್ಪುತ್ತೀರಾ?
ಕನ್ನಡಿಗರಿಗೆ ಎಲ್ಲಾ ಮನರಂಜನೆ ಕನ್ನಡದಲ್ಲೇ ಸಿಗಬೇಕು ಎನ್ನುವ ಆಶಯದಲ್ಲಿ ಡಬ್ಬಿಂಗ್ ಬೇಕು ಅಭಿಯಾನದ ಪ್ರಾರಂಬವಾಯಿತು CCI ಕೋರ್ಟು ಮೆಟ್ಟಿಲು ಏರಿ ಕೇಸು ಗೆದ್ದಿದ್ದರೂ, ಯಾವುದೇ ಡಬ್ಬಿಂಗ್ ಸಿನೆಮಾ ನಿರ್ಮಾಣವಾಗಲೇ ಇಲ್ಲ , ಒಂದಿಷ್ಟು ಗೆಳೆಯರು ಕಷ್ಟ ಪಟ್ಟು ದುಡಿದ ದುಡ್ಡಲ್ಲಿ ಡಬ್ಬಿಂಗ್ ಸಿನೆಮಾಗಳನ್ನು ನಿರ್ಮಾಣ ಮಾಡಿ ಬಿಡುಗಡೆ ಮಾಡಿದರು...
ಡಬ್ಬಿಂಗ್ ಸಿನೆಮಾಗಳನ್ನು ಒಂದರ ಹಿಂದೆ ಒಂದಾಗಿ ಬಿಡುಗಡೆ ಮಾಡಿದರೂ ಕನ್ನಡ ವಿರೋಧಿಗಳು ಡಬ್ಬಿಂಗ್ ಚಿತ್ರ ತಡೆಯಲು ಪ್ರಯತ್ನ ನಡೆಸುತ್ತಲೇ ಇದ್ದರು. ಈ ಸಮಯದಲ್ಲಿ ಸೈರಾ ನರಸಿಂಹ ರೆಡ್ಡಿ ಮತ್ತು ದಬಾಂಗ್ ಸಿನೆಮಾಗಳು ಕನ್ನಡಕ್ಕೆ ಡಬ್ ಆಗಿದ್ದು ಪ್ರಮುಖ ಘಟ್ಟ.
@KicchaSudeep ರವರು ಈ ಚಿತ್ರದಲ್ಲಿ ನಟಿಸಿದ್ದಲ್ಲದೇ, ತಾವೇ ತಮ್ಮ ಪಾತ್ರಕ್ಕೆ ಕನ್ನಡದಲ್ಲೂ ಡಬ್ ಮಾಡಿದರು. ಕನ್ನಡಿಗರ ಆಯ್ಕೆ ಸ್ವಾತಂತ್ರ, ಕನ್ನಡಪರವಾಗ ಡಬ್ಬಿಂಗ್ ಬೇಕು ಹೋರಾಟಕ್ಕೆ ಒಂದಿಷ್ಟು ವೇಗ, ಶಕ್ತಿಯನ್ನು ಕೊಡಲು ಸುದೀಪ್ ರವರ ನಡೆಗಳು ಸಹಕಾರಿಯಾದವು..
ಗೆಳೆಯರೊಬ್ಬರು ನನ್ನ ಪೋಸ್ಟ್ ಗೆ ಮಾಡಿದ್ದ ಕಮೆಂಟ್ ಇದು, ಪ್ರತಿಯೊಬ್ಬ ಕನ್ನಡಿಗರೂ ಓದಲೇಬೇಕು.
ನಿಮ್ಮ ಭಾಷೆ ಸರಿ ಇಲ್ಲ, ಕೆಟ್ಟ ಭಾಷೆ ಎಂಬಂತಹ ವಿಚಾರಗಳು ಭಾವನಾತ್ಮಕವಾಗಿ ಕನ್ನಡಿಗರನ್ನು ಬಹು ಬೇಗ ಸೆಳೆಯುತ್ತವೆ. ಇದಕ್ಕೆ ಪೂರಕವೆಂಬಂತೆ ಪ್ರಮುಖವಾಗಿ ಟ್ರೋಲ್ ಪೇಜ್ ಗಳು ಈ ಬಗ್ಗೆ ಗಮನ ಸೆಳೆಯುತ್ತವೆ. ಮತ್ತು ಭಾರೀ ಟ್ರೆಂಡ್ ಆಗುತ್ತದೆ
ಗೂಗಲ್ ನ ಒಂದು ಪೇಜ್ ಅಲ್ಲಿ ಬಂದಿರುವ ವಿಚಾರಕ್ಕೆ ಲಕ್ಷಾಂತರ ಜನ ರಿಪೋರ್ಟ್ ಮಾಡುತ್ತಾರೆ. ಮತ್ತು ಗೂಗಲ್ ಅದನ್ನು ತೆಗೆದುಹಾಕುತ್ತದೆ. ಆದ್ರೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಕೇಂದ್ರ ಸರ್ಕಾರದ ಪರೀಕ್ಷೆಗಳಲ್ಲಿ ಕನ್ನಡ(ಇತರೆ ಪ್ರಾದೇಶಿಕ ಭಾಷೆಗಳೂ ಸೇರಿದಂತೆ) ಭಾಷೆ ಇಲ್ಲವೇ ಇಲ್ಲ. ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ನೀಡುತ್ತಲೇ ಇಲ್ಲ
. ಅಥವಾ ಆಯಾ ರಾಜ್ಯದಲ್ಲಿನ ನೇಮಕಾತಿಯಲ್ಲಿ ಆಯಾ ರಾಜ್ಯದ ಅಭ್ಯರ್ಥಿಗಳಿಗೆ ನೇಮಕಾತಿ ನೀಡುತ್ತಿಲ್ಲ. ಒಂದನೇ ತರಗತಿಯಿಂದ ಪದವಿ, ಸ್ನಾತಕೋತ್ತರ ಪದವಿಯವರೆಗೆ ಕನ್ನಡ ಮಾಧ್ಯಮದಲ್ಲಿ ಓದಿ ಉತ್ತಮ ಅಂಕ ಪಡೆದು ಬುದ್ಧಿವಂತ ಎನಿಸಿಕೊಂಡರೂ ಆತ ತನ್ನ ಭಾಷೆಯಲ್ಲಿ ಕೇಂದ್ರ ಸರ್ಕಾರದ ಪರೀಕ್ಷೆ ಬರೆಯಲಾರ,
ವೆಬ್ ಸೈಟ್ ಗಳನ್ನು ರೂಪಿಸಿದಾಗ, ಪ್ರತೀ ಪುಟದಲ್ಲೂ search engine ಹುಡುಕಲು ಸಹಕಾರಿಯಾಗುವಂತೆ ಒಂದಿಷ್ಟು ಪದಗಳನ್ನು(keywords) ಹಾಕಲಾಗುತ್ತೆ. ಈ ಪದಗಳ ಮೂಲಕ search engin ನ algorithms ಗಳು ಜನರು ಹುಡುಕುವ ಪದವನ್ನು match ಮಾಡಿ search result ತೋರಿಸುತ್ತವೆ.
ಗೂಗಲ್, ಬಿಂಗ್ ತರಹದ ಕಂಪನಿಗಳು Search engine ಗೆ ಬೇಕಾದ algorithmಗಳನ್ನು ರೂಪಿಸಿದ ಮೇಲೆ, ಆ search engin ಗಳು website scan ಮಾಡಿ ಪದಗಳನ್ನು ಮತ್ತು web page ಗಳನ್ನು ತನ್ನ database ನಲ್ಲಿ ಇಟ್ಟುಕೊಂಡಿರುತ್ತದೆ, ಈ ಕೆಲಸ automatic ಆಗಿ ನಡೆಯೊ ಕೆಲಸ.
ಇನ್ನು ವಿಚಾರಕ್ಕೆ ಬರೋಣ, ಯಾರೋ ಈ search engine ಹೇಗೆ ಕೆಲಸ ಮಾಡುತ್ತದೆ ಎನ್ನುವುದು ಚೆನ್ನಾಗಿ ತಿಳಿದಿರೋ ವ್ಯಕ್ತಿ, ಕುಚೇಷ್ಟೆ ಮಾಡಲೆಂದು ಕನ್ನಡದ ಬಗ್ಗೆ ಒಂದಿಷ್ಟು ಕೆಟ್ಟದಾಗಿ ಬರೆದಿದ್ದಾನೆ ಮತ್ತು ಗೂಗಲ್ ನಲ್ಲಿ ಕಾಣಿಸಲು ಆಗುವಂತೆ ಒಂದಿಷ್ಟು keyword ಗಳನ್ನು ಹಾಕಿದ್ದಾನೆ.
ಭಾರತ ಒಕ್ಕೂಟದ ಸಂವಿಧಾನದಲ್ಲಿ ಹೇಗೆ ಹಿಂದಿಗೆ ಹೆಚ್ಚುಗಾರಿಕೆ ನೀಡಲಾಗಿದೆ, ಇದರಿಂದ ಹೇಗೆ ಹಿಂದಿಯೇತರ ನಾಗರೀಕರಿಗೆ ಅನ್ಯಾಯವಾಗುತ್ತಿದೆ, ಅನ್ಯಾಯ ನಿಲ್ಲಲು, ಯಾವ ರೀತಿಯಲ್ಲಿ ಸಂವಿಧಾನದ ತಿದ್ದುಪಡಿಯಾಗಬೇಕು ಎನ್ನುವ ವಿಚಾರಗಳನ್ನು ತಿಳಿಸಲು ಈ ಸರಣಿ ಟ್ವೀಟ್ ಬರೆಯಿತ್ತಿದ್ದೇನೆ. ಓದಿ ಹಂಚಿಕೊಳ್ಳಿ
ಸಂವಿಧಾನದ ಆರ್ಟಿಕಲ್ 343 -351 ರಲ್ಲಿ ಭಾಷೆಗಳ ಬಗ್ಗೆ ಪ್ರಸ್ತಾಪವಿದೆ ಈ ಆರ್ಟಿಕಲ್ ಗಳನ್ನು ಒಂದೊಂದಾಗಿ ಬಿಡಿಸಿ ನೋಡೋಣ, ಹೇಗೆ ಹಿಂದಿಗೆ ಹೆಚ್ಚುಗಾರಿಕೆ ನೀಡಲಾಗುತ್ತಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳೋಣ
ಸಂವಿಧಾನದ 343(1)ರಲ್ಲಿ ಹಿಂದಿಯೊಂದನ್ನು ಮಾತ್ರ ಆಡಳಿತ ಭಾಷೆಯನ್ನಾಗಿ ಮಾಡಲಾಗಿದೆ ಮತ್ತು ಇಂಗ್ಲೀಶ್ ನಲ್ಲಿರುತ್ತದೆ. ಭಾರತ ಸರಕಾರದ ಎಲ್ಲಾ ಆಡಳಿತವೂ ಹಿಂದಿಯಲ್ಲಿ ನಡೆಯಬೇಕು(ಜೊತೆಗೆ ಇಂಗ್ಲೀಶ್ ಇರುತ್ತೆ)..
ಹಿಂದಿ ಬರದಿರುವ ಕಾರಣಕ್ಕೆ ರಷ್ಯಾದಲ್ಲಿದ್ದ Indian Embassy ಕನ್ನಡಿಗರನ್ನು ಕೆಟ್ಟದಾಗಿ ನಡೆಸಿಕೊಂಡ ಬಗ್ಗೆ ವರದಿಯಾಗಿದ್ದನ್ನು ನೋಡಿರುವಿರಿ. ಇದು ಯಾವುದೋ ಚಿಕ್ಕ ವಿಚಾರವಲ್ಲ ಅಥವಾ ಯಾವುದೋ ಒಬ್ಬ ಅಧಿಕಾರಿ ಮಾಡಿದ ಕೆಲಸವಲ್ಲ ಹಿಂದಿ ಹರಡುವಲ್ಲಿ Indian Embassyಗಳ ಪಾತ್ರ ಬಹಳ ದೊಡ್ಡದಿದೆ, ಹೇಗೆ ಅಂತೀರಾ? ಇಲ್ಲಿ ನೋಡಿ👇
ಭಾರತ ಸರಕಾರದ ವಿದೇಶಾಂಗ ಸಚಿವಾಲಯದ ಅಡಿಯಲ್ಲಿರುವ Indian Embassy ಕಚೇರಿಗಳು ಬಹುತೇಕ ಎಲ್ಲಾ ದೇಶದಲ್ಲೂ ಇವೆ. ಈ Embassy ಗಳು ಹಿಂದಿ ಪ್ರಚಾರ ಸಭೆಯ ಅಂಗವೇ ಎನ್ನುವ ಅನುಮಾನ ಮೂಡುವ ಮಟ್ಟಿಗೆ ಜಗತ್ತಿನಾಧ್ಯಂತ ಭಾರತ=ಹಿಂದಿ ಎನ್ನುವ ಸುಳ್ಳನ್ನು ಹಬ್ಬಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.
1.ಹಾಗೇ ಗೂಗಲ್ ತೆರೆದು, Hindi Diwas In Indian Embassy ಅಂತ ಹುಡುಕಿ, ಬಹುತೇಕ ಎಲ್ಲಾ ಹೊರದೇಶದ Indian Embassyಯಲ್ಲೂ ಪ್ರತಿ ವರ್ಷ ಜೋರಾಗಿ, ಹಿಂದಿ ದಿವಸ್ ನಡೆಸುತ್ತಾರೆ, ಈ ಮೂಲಕ ಹಿಂದಿ=ಭಾರತ/ 'ಹಿಂದಿಯೇ' ಭಾರತದ ಭಾಷೆಯಲ್ಲೆಲ್ಲಾ ಶ್ರೇಷ್ಟ ಎನ್ನುವ ಅಂಶವನ್ನು ಹರಡುವುದೇ ಆಗಿದೆ, ಸಾಧ್ಯವಾದರೆ ಗೂಗಲ್ ನಲ್ಲಿ ಸಿಗುವ ವರದಿ ನೋಡಿ