ಅರುಣ್ ಜಾವಗಲ್ | Arun Javgal Profile picture
Oct 1, 2022 5 tweets 1 min read
ಭಾರತ ಐಕ್ಯತಾ ಯಾತ್ರೆ ಸಮಯದಲ್ಲಿ @RahulGandhi ರವರು ಸಾರ್ವಜನಿಕರೊಂದಿಗೆ ಸಂವಾದ ನಡೆಸುತ್ತಾರೆ, ಹಾಗಾಗಿ ನನಗೂ ಬರಲು ಕರೆ ಬಂದಿತ್ತು. ಒಕ್ಕೂಟ ವ್ಯವಸ್ತೆ,ಹಿಂದಿ ಹೇರಿಕೆ, 2026 ರ delimitation ಬಗ್ಗೆ ಕಾಂಗ್ರೆಸ್ ನ ನಿಲುವನ್ನು ತಿಳಿದುಕೊಳ್ಳಲು ಒಂದಿಷ್ಟು ತಯಾರಿ ಮಾಡಿಕೊಂಡು ಇಂದು ನಂಜನಗೂಡಿನ ಹತ್ತಿರದಲ್ಲಿ ನಡೆದ ಸಭೆಗೆ ಹೋಗಿದ್ದೆನು ಸಭೆಗೆ ಮೊದಲು ಕಾಂಗ್ರೆಸ್ ನ ಶಶಿಕಾಂತ್ ಸೆಂತಿಲ್ ರವರು ಯಾವ ವಿಚಾರವಾಗಿ ಮಾತನಾಡುತ್ತೇವೆ ಎನ್ನುವುದನ್ನು ಸಭೆಯಲ್ಲಿ ಭಾಗವಹಿಸಿದ್ದ ಸುಮಾರು 10-15 ಜನರಿಂದ ತಿಳಿದುಕೊಂಡರು.

ನಾನು ಒಕ್ಕೂಟ ವ್ಯವಸ್ತೆ, ಹಿಂದಿ ಹೇರಿಕೆ, 2026 ರ delimitation ಬಗ್ಗೆ ಮಾತನಾಡುವುದಾಗಿ ತಿಳಿಸಿದೆ..
Sep 12, 2022 6 tweets 3 min read
@vijeta_at 345 ರಲ್ಲಿ, ಒಂದು ರಾಜ್ಯದ ಆಡಳಿತ ಭಾಷೆಯನ್ನಾಗಿ ಆಯ್ಕೆ ಮಾಡುವ ಸ್ವಾತಂತ್ರ ರಾಜ್ಯ ಸರಕಾರಕ್ಕಿದೆ. ಒಂದು ರಾಜ್ಯದಲ್ಲಿ ಬಳಕೆಯಲ್ಲಿರುವ ಭಾಷೆಯನ್ನು ಆಡಳಿತಭಾಷೆಯನ್ನಾಗಿ ಮಾಡಿಕೊಳ್ಳಬಹುದು ಆದರೆ ಹಿಂದಿ ಭಾಷೆ ರಾಜ್ಯದಲ್ಲಿ ಬಳಕೆಯಲ್ಲಿ ಇರಲೇಬೇಕು ಎನ್ನುವ condition ಇಲ್ಲ. ಹಿಂದಿ ಬಳಕೆಯಲ್ಲಿ ಇಲ್ಲ ಅಂದ್ರೂ ರಾಜ್ಯದ ಆಡಳಿತಭಾಷೆಯಾಗಬಹುದು @vijeta_at Article 348ರ ಪ್ರಕಾರ ಹೈಕೋರ್ಟಿನ ಭಾಷೆ ಇಂಗ್ಲೀಶ್

348(2) ರ ಪ್ರಕಾರ ಇತರೆ ಭಾಷೆಗಳಿಗೆ ಅವಕಾಶ ನೀಡಬಹುದು

ಈ ಆಧಾರದ ಮೇಲೆ ‌ಉಪ್ರ/ಬಿಹಾರ/ರಾಜಸ್ತಾನ/ಮಪ್ರ ದ ಹೈಕೋರ್ಟ್ ಗೆ ಹಿಂದಿ ಬಳಸಲು ಅವಕಾಶ ನೀಡಲಾಗಿದೆ

2014ರಲ್ಲಿ ಕರ್ನಾಟಕ ಸರಕಾರ ಕನ್ನಡಕ್ಕೆ ಅವಕಾಶ ನೀಡಲು ಒತ್ತಾಯಿಸಿದೆ. ಇನ್ನೂ ಅವಕಾಶ ನೀಡಿಲ್ಲ
Sep 12, 2022 6 tweets 3 min read
@vijeta_at ಹಿಂದಿ ಹೇರಿಕೆ ಎಂದರೇನು?

ಹಿಂದಿ ಹೇರಿಕೆಯನ್ನು ಎರಡು ಭಾಗವಾಗಿ ನೋಡಬಹುದು

1. ಹಿಂದಿ ಭಾಷೆಗೆ ಹೆಚ್ಚುಗಾರಿಕೆ
2. ಕಡ್ಡಾಯ ಹಿಂದಿ @vijeta_at ಹಿಂದಿ ಭಾಷೆಗೆ ಹೆಚ್ಚುಗಾರಿಕೆ ಎಂದರೇನು?

ಸಂವಿಧಾನದ 343-351 ರಲ್ಲಿ ಭಾರತ ಒಕ್ಕೂಟದ ಭಾಷಾ ನೀತಿಯ ಬಗ್ಗೆ ಹೇಳಲಾಗಿದೆ, ಬಹುತೇಕ ಈ article ನಲ್ಲಿ ಹಿಂದಿ ಭಾಷೆಗೆ ಹೆಚ್ಚುಗಾರಿಕೆ ನೀಡಲಾಗಿದೆ.
Apr 29, 2022 19 tweets 5 min read
@IamAnitaBhat ರವರೇ, ಹಿಂದಿ ಹೇರಿಕೆ ಅಂದ್ರೆನು ಎನ್ನುವುದಕ್ಕೆ ಈ ಟ್ವೀಟ್ ಗಳನ್ನು ಓದಿ, ಹಿಂದಿ ಹೇರಿಕೆ ವಿರೋಧಿಸಿ, ಸಮಾನ ಭಾಷಾ ನೀತಿ ಬೇಕು ಎಂದು ನಡೆಸುತ್ತಿರುವ ಅಭಿಯಾನದಲ್ಲಿ ಕಳೆದ 16+ ವರ್ಷದಿಂದ ತೊಡಗಿಸಿಕೊಂಡಿದ್ದೇನೆ. ಒಂದಿಷ್ಟು ಮಾಹಿತಿಯನ್ನು ಟ್ವೀಟ್ ಮಾಡುತ್ತೇನೆ. ಸಂವಿಧಾನದ Article 343 ರ ಪ್ರಕಾರ ಹಿಂದಿ 'ರಾಜಭಾಷೆ' ಹಿಂದಿಯಲ್ಲೇ ಭಾರತ ಒಕ್ಕೂಟ ಸರಕಾರದ ಎಲ್ಲಾ ಆಡಳಿತ ನಡೆಯಬೇಕು. ಇಂಗ್ಲೀಶ್ ಹಿಂದಿಯೊಂದಿಗೆ ಇರುತ್ತದೆಯಷ್ಟೆ. ಹೀಗೆ ಹಿಂದಿಯೊಂದನ್ನ ಮಾತ್ರ ರಾಜಭಾಷೆ/ಆಡಳಿತ ಭಾಷೆ ಮಾಡುವುದರಿಂದ ಆಗುವ/ಆಗುತ್ತಿರುವ ತೊಂದರೆಗಳು-
Apr 28, 2022 7 tweets 2 min read
ಕನ್ನಡಿಗರಿಗೆ ಎಲ್ಲಾ ಮನರಂಜನೆ ಕನ್ನಡದಲ್ಲೇ ಸಿಗಬೇಕು ಎನ್ನುವ ಆಶಯದಲ್ಲಿ ಡಬ್ಬಿಂಗ್ ಬೇಕು ಅಭಿಯಾನದ ಪ್ರಾರಂಬವಾಯಿತು CCI ಕೋರ್ಟು ಮೆಟ್ಟಿಲು ಏರಿ ಕೇಸು ಗೆದ್ದಿದ್ದರೂ, ಯಾವುದೇ ಡಬ್ಬಿಂಗ್ ಸಿನೆಮಾ ನಿರ್ಮಾಣವಾಗಲೇ ಇಲ್ಲ , ಒಂದಿಷ್ಟು ಗೆಳೆಯರು ಕಷ್ಟ ಪಟ್ಟು ದುಡಿದ ದುಡ್ಡಲ್ಲಿ ಡಬ್ಬಿಂಗ್ ಸಿನೆಮಾಗಳನ್ನು ನಿರ್ಮಾಣ ಮಾಡಿ ಬಿಡುಗಡೆ ಮಾಡಿದರು... ಡಬ್ಬಿಂಗ್ ಸಿನೆಮಾಗಳನ್ನು ಒಂದರ ಹಿಂದೆ ಒಂದಾಗಿ ಬಿಡುಗಡೆ ಮಾಡಿದರೂ ಕನ್ನಡ ವಿರೋಧಿಗಳು ಡಬ್ಬಿಂಗ್ ಚಿತ್ರ ತಡೆಯಲು ಪ್ರಯತ್ನ ನಡೆಸುತ್ತಲೇ ಇದ್ದರು. ಈ ಸಮಯದಲ್ಲಿ ಸೈರಾ ನರಸಿಂಹ ರೆಡ್ಡಿ ಮತ್ತು ದಬಾಂಗ್ ಸಿನೆಮಾಗಳು ಕನ್ನಡಕ್ಕೆ ಡಬ್ ಆಗಿದ್ದು ಪ್ರಮುಖ ಘಟ್ಟ.
Jun 3, 2021 7 tweets 1 min read
ಗೆಳೆಯರೊಬ್ಬರು ನನ್ನ ಪೋಸ್ಟ್ ಗೆ ಮಾಡಿದ್ದ ಕಮೆಂಟ್ ಇದು, ಪ್ರತಿಯೊಬ್ಬ ಕನ್ನಡಿಗರೂ ಓದಲೇಬೇಕು.

ನಿಮ್ಮ ಭಾಷೆ ಸರಿ ಇಲ್ಲ, ಕೆಟ್ಟ ಭಾಷೆ ಎಂಬಂತಹ ವಿಚಾರಗಳು ಭಾವನಾತ್ಮಕವಾಗಿ ಕನ್ನಡಿಗರನ್ನು ಬಹು ಬೇಗ ಸೆಳೆಯುತ್ತವೆ. ಇದಕ್ಕೆ ಪೂರಕವೆಂಬಂತೆ ಪ್ರಮುಖವಾಗಿ ಟ್ರೋಲ್ ಪೇಜ್ ಗಳು ಈ ಬಗ್ಗೆ ಗಮನ ಸೆಳೆಯುತ್ತವೆ. ಮತ್ತು ಭಾರೀ ಟ್ರೆಂಡ್ ಆಗುತ್ತದೆ ಗೂಗಲ್ ನ ಒಂದು ಪೇಜ್ ಅಲ್ಲಿ ಬಂದಿರುವ ವಿಚಾರಕ್ಕೆ ಲಕ್ಷಾಂತರ ಜನ ರಿಪೋರ್ಟ್ ಮಾಡುತ್ತಾರೆ. ಮತ್ತು ಗೂಗಲ್ ಅದನ್ನು ತೆಗೆದುಹಾಕುತ್ತದೆ. ಆದ್ರೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಕೇಂದ್ರ ಸರ್ಕಾರದ ಪರೀಕ್ಷೆಗಳಲ್ಲಿ ಕನ್ನಡ(ಇತರೆ ಪ್ರಾದೇಶಿಕ ಭಾಷೆಗಳೂ ಸೇರಿದಂತೆ) ಭಾಷೆ ಇಲ್ಲವೇ ಇಲ್ಲ. ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ನೀಡುತ್ತಲೇ ಇಲ್ಲ
Jun 3, 2021 7 tweets 1 min read
ವೆಬ್ ಸೈಟ್ ಗಳನ್ನು ರೂಪಿಸಿದಾಗ, ಪ್ರತೀ ಪುಟದಲ್ಲೂ search engine ಹುಡುಕಲು ಸಹಕಾರಿಯಾಗುವಂತೆ ಒಂದಿಷ್ಟು ಪದಗಳನ್ನು(keywords) ಹಾಕಲಾಗುತ್ತೆ. ಈ ಪದಗಳ ಮೂಲಕ search engin ನ algorithms ಗಳು ಜನರು ಹುಡುಕುವ ಪದವನ್ನು match ಮಾಡಿ search result ತೋರಿಸುತ್ತವೆ. ಗೂಗಲ್, ಬಿಂಗ್ ತರಹದ ಕಂಪನಿಗಳು Search engine ಗೆ ಬೇಕಾದ algorithmಗಳನ್ನು ರೂಪಿಸಿದ ಮೇಲೆ, ಆ search engin ಗಳು website scan ಮಾಡಿ ಪದಗಳನ್ನು ಮತ್ತು web page ಗಳನ್ನು ತನ್ನ database ನಲ್ಲಿ ಇಟ್ಟುಕೊಂಡಿರುತ್ತದೆ, ಈ ಕೆಲಸ automatic ಆಗಿ ನಡೆಯೊ ಕೆಲಸ.
Jan 18, 2021 28 tweets 8 min read
ಭಾರತ ಒಕ್ಕೂಟದ ಸಂವಿಧಾನದಲ್ಲಿ ಹೇಗೆ ಹಿಂದಿಗೆ ಹೆಚ್ಚುಗಾರಿಕೆ ನೀಡಲಾಗಿದೆ, ಇದರಿಂದ ಹೇಗೆ ಹಿಂದಿಯೇತರ ನಾಗರೀಕರಿಗೆ ಅನ್ಯಾಯವಾಗುತ್ತಿದೆ, ಅನ್ಯಾಯ ನಿಲ್ಲಲು, ಯಾವ ರೀತಿಯಲ್ಲಿ ಸಂವಿಧಾನದ ತಿದ್ದುಪಡಿಯಾಗಬೇಕು ಎನ್ನುವ ವಿಚಾರಗಳನ್ನು ತಿಳಿಸಲು ಈ ಸರಣಿ ಟ್ವೀಟ್ ಬರೆಯಿತ್ತಿದ್ದೇನೆ. ಓದಿ ಹಂಚಿಕೊಳ್ಳಿ ಸಂವಿಧಾನದ ಆರ್ಟಿಕಲ್ 343 -351 ರಲ್ಲಿ ಭಾಷೆಗಳ ಬಗ್ಗೆ ಪ್ರಸ್ತಾಪವಿದೆ ಈ ಆರ್ಟಿಕಲ್ ಗಳನ್ನು ಒಂದೊಂದಾಗಿ ಬಿಡಿಸಿ ನೋಡೋಣ, ಹೇಗೆ ಹಿಂದಿಗೆ ಹೆಚ್ಚುಗಾರಿಕೆ ನೀಡಲಾಗು‌ತ್ತಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳೋಣ
Jul 17, 2020 8 tweets 2 min read
ಹಿಂದಿ ಬರದಿರುವ ಕಾರಣಕ್ಕೆ ರಷ್ಯಾದಲ್ಲಿದ್ದ ‌Indian Embassy ಕನ್ನಡಿಗರನ್ನು ಕೆಟ್ಟದಾಗಿ ನಡೆಸಿಕೊಂಡ ಬಗ್ಗೆ ವರದಿಯಾಗಿದ್ದನ್ನು ನೋಡಿರುವಿರಿ. ಇದು ಯಾವುದೋ ಚಿಕ್ಕ ವಿಚಾರವಲ್ಲ ಅಥವಾ ಯಾವುದೋ ಒಬ್ಬ ಅಧಿಕಾರಿ ಮಾಡಿದ ಕೆಲಸವಲ್ಲ ಹಿಂದಿ ಹರಡುವಲ್ಲಿ Indian Embassyಗಳ ಪಾತ್ರ ಬಹಳ ದೊಡ್ಡದಿದೆ, ಹೇಗೆ ಅಂತೀರಾ? ಇಲ್ಲಿ ನೋಡಿ👇 ಭಾರತ ಸರಕಾರದ ವಿದೇಶಾಂಗ ಸಚಿವಾಲಯದ ಅಡಿಯಲ್ಲಿರುವ Indian Embassy ಕಚೇರಿಗಳು ಬಹುತೇಕ ಎಲ್ಲಾ ದೇಶದಲ್ಲೂ ಇವೆ. ಈ ‌Embassy ಗಳು ಹಿಂದಿ ಪ್ರಚಾರ ಸಭೆಯ ಅಂಗವೇ ಎನ್ನುವ ಅನುಮಾನ ಮೂಡುವ ಮಟ್ಟಿಗೆ ಜಗತ್ತಿನಾಧ್ಯಂತ ಭಾರತ=ಹಿಂದಿ ಎನ್ನುವ ಸುಳ್ಳನ್ನು ಹಬ್ಬಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.
Apr 3, 2020 4 tweets 2 min read
Ok, ಜೀವನದಲ್ಲಿ ತಮಾಷೆಯಿರಬೇಕು, ಜೀವನವೇ ತಮಾಷೆಯಾಗಬಾರದು.

ವಿಚಾರಕ್ಕೆ ಬರೋಣ,

#‌PMCaresFunds ಗೆ ಈಗಾಗಲೇ 7314 ಕೋಟಿಗೂ ಹೆಚ್ಚು ಹಣ ಬಂದಿದೆ,

ಕರೋನ ವಿಚಾರವಾಗಿ ಭಾರತಕ್ಕೆ World Bank ನಿಂದ 1 ಬಿಲಿಯನ್ ‌ಡಾಲರ್(7612 ಕೋಟಿ) emergency Financing(ಸಾಲ ಇರಬಹುದು) approve ಮಾಡಲಾಗಿದೆ. ImageImageImage ಈ ಹಣವನ್ನು ಏನು ಮಾಡಲಾಗುತ್ತೆ, ಯಾವ ಯಾವ ರೀತಿಯಲ್ಲಿ ಈ ದುಡ್ಡನ್ನು ಕರೋನಾ ತಡೆಯಲು ಉಪಯೋಗಿಸಲಾಗುತ್ತೆ?

ಹಣಕಾಸಿನ ಮುಗ‌್ಗಟ್ಟಿನಲ್ಲಿರೋ ಕರ್ನಾಟಕ ಸರಕಾರಕ್ಕೆ ಕರೋನ ತಡೆಯಲು ಬೇಕಾಗಿರುವ ಅವಶ್ಯಕಗಳನ್ನು ಕೊಳ್ಳಲು ಕೇಂದ್ರ ಸರಕಾರ ನೆರವಾಗುತ್ತಾ? ನೆರವಾಗುತ್ತೆ ಅಂದ್ರೆ ಯಾವಾಗ ನೆರವಾಗುತ್ತೆ?
Sep 23, 2019 18 tweets 8 min read
Staff Selection Commission ನಿಂದ C&D ಗುಂಪಿನ Stenographer ಹುದ್ದೆಗೆ Notice 2 ದಿನದ ಹಿಂದೆ ಬಿಡುಗಡೆಯಾಗಿದೆ

👉18-10-2019 ಅರ್ಜಿ ಹಾಕಲು ಕೊನೆದಿನ
👉ವಿದ್ಯಾರ್ಹತೆ- 12 ನೇ ತರಗತಿ
👉ಪರೀಕ್ಷೆ-ಹಿಂದಿ/ಇಂಗ್ಲೀಶ್ ಮಾತ್ರ

ಕೇಂದ್ರ ಸರಕಾರದ ಉದ್ಯೋಗಗಳು ಕನ್ನಡಿಗರಿಗೆ ಬೇಡವೇ?
@siddaramaiah @CMofKarnataka @hd_kumaraswamy 12 ನೇ ತರಗತಿ ಓದಿರುವ ಕನ್ನಡದ ಯುವಕ ಹಿಂದಿ ಮತ್ತು ಇಂಗ್ಲೀಶ್ ನಲ್ಲಿ ಪರೀಕ್ಷೆ ಬರೆದು ಉದ್ಯೋಗ ಪಡೆದುಕೊಳ್ಳಬೇಕು.. ಕನ್ನಡಿಗರ ಸ್ಥಿತಿ ಹೇಗಿದೆ ನೋಡಿ
Sep 19, 2019 6 tweets 2 min read
Money spent on Advertisements of central govts
this data is of 2005- 2010

Shocking!!

rajbhasha.gov.in/sites/default/…

#StopHindiImposition
#StopHindiImperialism Expenditure on Ads through electronic media
Ads in Hindi
HRD =70%
Railways = 100%
May 20, 2019 7 tweets 8 min read
@KannadaGrahaka team did a research to find how many Websites of Indian govt are available in Kannada. we found that more than 98% of websites owned by Union govt are not in Kannada. just 3 out of 155 Union Govt websites are in Kannada
More than 90% mobile apps are not in Kannada @asaravanan21 @SandeepDadarMNS @mnsadhikrut @karave_KRV @CMofKarnataka @GargaC @Kanagalogy @deepab18 @PoojaPrasanna4 @GCC_MP @sharathmsharma @kdabengaluru @siddaramaiah @BSYBJP @hd_kumaraswamy