ಕೆಲವು ವೈದಿಕ (ಶಾಸ್ತ್ರೋಕ್ತ ) ಭಾರತೀಯ ಅತ್ಯಮೂಲ್ಯ ಆರೋಗ್ಯ ಸಲಹೆಗಳು ಮತ್ತು ಸಂಸ್ಕೃತದಲ್ಲಿನ ಉಲ್ಲೇಖಗಳು...
*1 ಅಜೀರಣೀ ಭೋಜನಂ ವಿಷಮ್*
ಮೊದಲು ತಿಂದ ಆಹಾರ ಜೀರ್ಣವಾಗದೆ ಇರುವಾಗ, ಮುಂದಿನ ಆಹಾರ ತಿಂದಲ್ಲಿ, ಅದು ವಿಷದಂತೆ ಪರಿಣಾಮ ಬೀರುತ್ತದೆ.
*2 ಅರ್ಧೋಗಹರಿ ನಿದ್ರಾ*
ಸರಿಯಾದ ನಿದ್ರೆ ಅರ್ಧದಷ್ಟು ರೋಗಗಳನ್ನು ಗುಣಪಡಿಸುತ್ತದೆ.
1/10
*3. ಮುದ್ಗಧಾಲಿ ಗಾಧವ್ಯಾಲಿ*
ಎಲ್ಲಾ ದ್ವಿದಳ ಧಾನ್ಯಗಳಲ್ಲಿ, ಹೆಸರು ಬೇಳೆ ಉತ್ತಮವಾಗಿದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇತರ ದ್ವಿದಳ ಧಾನ್ಯಗಳು ಒಂದು ಅಥವಾ ಇನ್ನೊಂದು ಅಡ್ಡ ಪರಿಣಾಮಗಳನ್ನು ಹೊಂದಿವೆ.
*4. ಬಗ್ನಾಸ್ತಿ ಸಂಧಾನಕರೋ ರಸೋನಹ*
ಬೆಳ್ಳುಳ್ಳಿ ಮುರಿದ ಮೂಳೆಗಳನ್ನು ಸಹ ಸೇರಿಸುತ್ತದೆ...
2/10
*5 ಅತಿ ಸರ್ವತ್ರ ವರ್ಜಯೇತ್*
ಅತಿಯಾಗಿ ಸೇವಿಸುವ ಯಾವುದಾದರೂ, ಅದು ರುಚಿಯಾಗಿದ್ದರೂ, ಆರೋಗ್ಯಕ್ಕೆ ಒಳ್ಳೆಯದಲ್ಲ. ಮಿತವಾಗಿರಲಿ...
*6. ನಾಸ್ತಿಮೂಲಂ ಅನೌಷಧಂ*
ಯಾವುದೇ ಔಷಧೀಯ ಪ್ರಯೋಜನವಿಲ್ಲದ ಯಾವುದೇ ತರಕಾರಿ ಇಲ್ಲ...
*7 ನಾ ವೈದ್ಯಃ ಪ್ರಭುರಾಯುಷ*
ಯಾವ ವೈದ್ಯರೂ ನಮ್ಮ ದೀರ್ಘಾಯುಷ್ಯದ ಅಧಿಪತಿ ಅಲ್ಲ. ವೈದ್ಯರಿಗೂ ಮಿತಿಗಳಿವೆ...
3/10
*ರಷ್ಯಾ-ಉಕ್ರೇನ್ ಯುದ್ಧದಿಂದ ನಾವುಗಳು ಅರಿಯಬೇಕಾದ್ದೇನು?*🤔
*ನನ್ನ ದೊಡ್ಡ ಸಂಬಳ.*
*ನನ್ನ 4 BHK ಮನೆ, ಜಮೀನು, ನನ್ನ ಕಾರು, ನನ್ನ ವ್ಯಾಪಾರ, ನನ್ನ 50 ಎಕರೆ ಜಮೀನು, ನನ್ನ ತೋಟದ ಮನೆ ಇತ್ಯಾದಿ.... ನನ್ನ ದೇಶ ಎಲ್ಲಿಯವರೆಗೆ... ಸುರಕ್ಷಿತವಾಗಿದೆಯೋ, ಅಲ್ಲಿಯವರೆಗೆ ಇದೆಲ್ಲವೂ ಸುರಕ್ಷಿತ.
ಇಲ್ಲದಿದ್ದರೆ ಎಲ್ಲವೂ ಹೊಗೆಯಾಡಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ.*
*ಇಂದು ರಷ್ಯಾ- ಉಕ್ರೇನ್ ಯುದ್ಧದಲ್ಲಿ, 20 ಲಕ್ಷಕ್ಕೂ ಹೆಚ್ಚು ಉಕ್ರೇನಿಯನ್ನರು ಎಲ್ಲವನ್ನೂ ಬಿಟ್ಟು ಬೇರೆ ದೇಶದಲ್ಲಿ ಆಶ್ರಯ ಪಡೆಯುತ್ತಿದ್ದಾರೆ.*
*ಅವರು ಅದೃಷ್ಟವಂತರು. ಏಕೆಂದರೆ ಅವರಿಗೆ ಆಶ್ರಯ ನೀಡಿದ ನೆರೆಹೊರೆ ದೇಶಗಳು ಒಳ್ಳೆಯ ದೇಶಗಳು.*
*ನಮ್ಮ ಪರಿಸ್ಥಿತಿ ಏನಾಗುತ್ತದೆ...?*
*ನಾವು ಎಲ್ಲಿಗೆ ಹೋಗಬಹುದು?? ಎಂದು*
*ನಾವುಗಳು..ಎಂದಾದರೂ ಯೋಚಿಸಿದ್ದೀವಾ.??!!!*
*ಒಂದು ಕಡೆ ಪಾಕಿಸ್ತಾನ, ಇನ್ನೊಂದು ಕಡೆ ಬಾಂಗ್ಲಾದೇಶ, ಕೆಳಗೆ ಹಿಂದೂ ಮಹಾಸಾಗರ, ಮೇಲೆ ಚೀನಾ, ದೇಶದೊಳಗೆ ಲೆಕ್ಕವಿಲ್ಲದಷ್ಟು... ದೇಶದ್ರೋಹಿಗಳು...!*
ಯಶೋದಮ್ಮನಿಗೆ ರಾತ್ರಿಯಿಡೀ ನಿದ್ದೆ ಬರಲಿಲ್ಲ.ಮಗ ಅಂದ ಮಾತು ಕೇಳಿ ಸಿಡಿಲು ಬಡಿದಂತಾಗಿತ್ತು.ಪಾಪ! ನಿದ್ದೆಯಾದರೂ ಹೇಗೆ ಬಂದೀತು?
ಅಲ್ಲಿ,ಇಲ್ಲಿ ಕೆಲವು ಸುದ್ದಿ ಕೇಳಿದ್ದಿತ್ತು,ಮಕ್ಕಳು ತಂದೆ ,ತಾಯಿಯನ್ನ ವೃದ್ಧಾಶ್ರಮಕ್ಕೆ ಸೇರಿಸುವುದನ್ನು.! ಆದರೆ ತನಗೂ ಒಂದೊಮ್ಮೆ ಅದೇ ದುರ್ಗತಿ ಬಂದೀತೆಂದು ಕನಸಲ್ಲೂ ಎಣಿಸಿರಲಿಲ್ಲ.
1/10
ಮಗ ಒಳ್ಳೆಯವನೇ,ಪಾಪ! ಎಲ್ಲಾ ಸೊಸೆಯದ್ದೇ ಕಾರುಬಾರು! ಇಲ್ಲಿ ತನಕ ತೋರಿಸುತ್ತಿದ್ದ ಪ್ರೀತಿ ಎಲ್ಲಾ ಬರೇ ನಾಟಕವೇ..?ರಾತ್ರಿ ಊಟದ ಸಮಯದಲ್ಲಿ ಮಗನಂದಿದ್ದ," ಅಮ್ಮಾ,ನಾಳೆ ಬೆಳಿಗ್ಗೆ ಸ್ವಲ್ಪ ಬೇಗ ರೆಡಿಯಾಗು.ವೃದ್ಧಾಶ್ರಮಕ್ಕೆ ಹೋಗಬೇಕು.ಎಲ್ಲಾ ಏರ್ಪಾಡು ಮಾಡಿಸಿದ್ದೇನೆ.ಬೇಗ ಬರೋದಕ್ಕೆ ಹೇಳಿದ್ದಾರೆ."
2/10
ಆಮೇಲೆ ಯಶೋದಮ್ಮನಿಗೆ ಗಂಟಲಲ್ಲಿ ಅನ್ನ ಇಳಿಯಲಿಲ್ಲ.
ರಾತ್ರಿ ಒಂದು ಯುಗದಂತೆ ಕಳೆದಿತ್ತು.
ಬೆಳಿಗ್ಗೆ ಸೊಸೆ ಗಡಿಬಿಡಿಯಿಂದ ಓಡಾಡುತ್ತಿದ್ದಳು.ಅತ್ತೆ ಬಳಿಗೆ ಬಂದು ಹೇಳಿದಳು," ನೀವು ಬೇಗ ರೆಡಿಯಾಗಿ ಅತ್ತೆ, ನಾನು ಪ್ಯಾಕ್ ಮಾಡಿ ರೆಡಿಯಾಗ್ತೀನಿ."
ಯಶೋದಮ್ಮನಿಗೆ ಜೋರಾಗಿ ಅತ್ತುಬಿಡಬೇಕೆನಿಸಿತು.
3/10
ಒಂದು ಊರಲ್ಲಿ ಒಬ್ಬ ರಾಜ ಇರುತ್ತಾನೆ.ಅವನು ನಿಷ್ಠಾವಂತ,ಬುದ್ಧಿವಂತ ಹಾಗು ಜನರ ಕಷ್ಟಗಳಿಗೆ ಸಹಾಯ ಮಾಡುವವನಾಗಿರುತ್ತಾನೆ.
ಒಂದು ಯುದ್ಧದಲ್ಲಿ ತನ್ನ ಒಂದು ಕಣ್ಣು ,ಒಂದು ಕಾಲು ಕಳೆದುಕೊಂಡಿರುತ್ತಾನೆ.
ಒಂದು ದಿನ ರಾಜ ಅರಮನೆಯಲ್ಲಿ ಹೋಗ್ತಾ ಇರುವಾಗ ತನ್ನ ತಂದೆ,ತಾತ,ಮುತ್ತಾತರ ಚಿತ್ರಪಟಗಳನ್ನು ಕಂಡು ಎಷ್ಟು ಸುಂದರವಾಗಿವೆ ಈ ಚಿತ್ರಪಟಗಳು,
1/7
ನಾಳೆ ನನ್ನ ಮಗ ನಿನ್ನ ಚಿತ್ರಪಟ ಎಲ್ಲಿ ಎಂದು ಕೇಳಿದರೆ ಏನು ಹೇಳಬೇಕು ಎಂದು ಯೋಚಿಸುತ್ತಾನೆ.
ಮರುದಿನ ಅರಮನೆಗೆ ಎಲ್ಲಾ ಚಿತ್ರ ಕಲಾವಿದರನ್ನು ಕರೆದು ಯಾರು ನನ್ನ ಚಿತ್ರಪಟವನ್ನು ಸುಂದರವಾಗಿ ಬಿಡಿಸುತ್ತಾರೋ ಅವರಿಗೆ ಬಹುಮಾನಗಳೊಂದಿಗೆ ಸತ್ಕರಿಸುತ್ತೆವೆ ಎಂದು ಆದೇಶನೀಡುತ್ತಾನೆ.
2/7
ಆಗ ಕಣ್ಣು,ಕಾಲು ಇಲ್ಲದ ರಾಜನ ಚಿತ್ರಪಟ ಹೇಗೆ ಸುಂದರವಾಗಿ ಬಿಡಿಸುವುದು,ಒಂದು ವೇಳೆ ಬಿಡಿಸಿದ ಚಿತ್ರಪಟ ರಾಜನಿಗೆ ಇಷ್ಟವಾಗದೆ ಕೋಪಬಂದರೆ ಅವರ
ಶಿಕ್ಷೆಗೆ ಗುರಿಯಾಗಬೇಕು ಎಂದು ಯಾವ ಕಲಾವಿದನು ನಾನು ಬಿಡಿಸುತ್ತೇನೆ ಎಂದು ಮುಂದೆ ಬರುವುದಿಲ್ಲ.ಆದರೆ ಕೊನೆಗೆ ಒಬ್ಬ ಕಲಾವಿದ ನಾನು ರಾಜನ ಚಿತ್ರಪಟ ಬಿಡಿಸುತ್ತೇನೆ ಎಂದು ಮುಂದೆ ಬರುತ್ತಾನೆ.
3/7
ಪಾಪದ ಫಲ ಯಾರಿಗೆ?
ಒಬ್ಬ ರಾಜನಿದ್ದ . ಆತ ಪ್ರತಿ ದಿನವೂ ಬ್ರಾಹ್ಮಣರಿಗೆ ಶ್ರದ್ಧೆಯಿಂದ ಅನ್ನಸಂತರ್ಪಣೆ ನಡೆಸುತ್ತಿದ್ದ .
ಒಂದು ದಿನ, ಬಯಲು ಪ್ರದೇಶವೊಂದರಲ್ಲಿ , ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು . ಮೇಲೆ ಆಕಾಶದಲ್ಲಿ ಗಿಡುಗವೊಂದು, ಸತ್ತ ಹಾವನ್ನು, ಎತ್ತಿಕೊಂಡು ಹೋಗುತ್ತಿತ್ತು. ಆ ಸತ್ತ ಹಾವಿನ ಬಾಯಿಯಿಂದ ಒಂದು ಬಿಂದು ವಿಷ ,
ರಾಜ ಹಂಚುತ್ತಿದ್ದ ಆಹಾರದ ಮೇಲೆ ಬಿದ್ದಿತು. ಹೀಗಾದದ್ದು ಯಾರಿಗೂ ಗೊತ್ತಾಗಲಿಲ್ಲ .ರಾಜ ಆಹಾರ ಹಂಚುವುದನ್ನು ಮುಂದುವರಿಸಿದ .
ರಾಜನಿಂದ ವಿಷದ ಆಹಾರವನ್ನು ಪಡೆದ ಒಬ್ಬ ಬ್ರಾಹ್ಮಣ ಸತ್ತು ಹೋದ. ರಾಜ ಈ ಘಟನೆಯಿಂದ ತುಂಬಾ ನೊಂದುಕೊಂಡ.
ಈಗ, ಕರ್ಮಫಲದ ಹಂಚಿಕೆ ಮಾಡುವ ಚಿತ್ರಗುಪ್ತನಿಗೆ ಒಂದು ಸಂಧಿಗ್ಧವುಂಟಾಯಿತು.
ಈ ಘಟನೆಯಲ್ಲಿ ಬ್ರಾಹ್ಮಣನ ಸಾವಿನ ಪಾಪದ ಫಲವನ್ನು , ಯಾರ ಲೆಕ್ಕಕ್ಕೆ ಬರೆಯುವುದೆಂದು , ಅವನಿಗೆ ತಿಳಿಯಲಿಲ್ಲ . ಅದು ಗಿಡುಗನ ತಪ್ಪಲ್ಲ. ಯಾಕೆಂದರೆ ಅದು ತನ್ನ ಆಹಾರವನ್ನು ತೆಗೆದುಕೊಂಡು ಹೋಗುತ್ತಿತ್ತು .ಸತ್ತ ಹಾವಿನ ತಪ್ಪಂತೂ ಖಂಡಿತಾ ಅಲ್ಲ . ರಾಜನ ತಪ್ಪೂ ಆಗಿರಲು ಸಾಧ್ಯವಿಲ್ಲ . ರಾಜನಿಗೆ ಆಹಾರದ ಮೇಲೆ ವಿಷ ಬಿದ್ದಿದ್ದು ಗೊತ್ತೇ ಇರಲಿಲ್ಲ
ಯಾವುದೇ ಕೆಟ್ಟ ಚಟಗಳು ನಮ್ಮನ್ನ ಅಂಟಿಕೊಂಡಿರುವುದಿಲ್ಲ. ನಾವೇ ಕೆಟ್ಟ ಚಟಗಳಿಗೆ ಅಂಟಿಕೊಂಡಿರುತ್ತೆವೆ.ಅವುಗಳನ್ನು ಬಿಡುವ ದೃಢನಿರ್ಧಾರ ಮಾಡಿದರೆ ಯಾವುದು ಅಸಾಧ್ಯವಲ್ಲ ಎಂದು ನಿರೂಪಿಸುವ ಪುಟ್ಟ ಕಥೆ....😊
ಒಂದೂರಲ್ಲಿ ಒಬ್ಬ ಗಂಡ ಹೆಂಡತಿ ತುಂಬಾ ಪ್ರೀತಿಯಿಂದ ಸಂಸಾರ ನಡೆಸುತ್ತಿರುತ್ತಾರೆ.
1/8
ಕೆಲವು ತಿಂಗಳುಗಳ ನಂತರ ಗಂಡ ಸ್ನೇಹಿತರೊಡನೆ ಸೇರಿ ಕುಡಿಯುವ ಅಭ್ಯಾಸ ಕಲಿತ.ದಿನವೂ ಕುಡಿದು ರಾತ್ರಿ ತಡವಾಗಿ ಬರುವುದನ್ನು ಕಂಡು,ಹೆಂಡತಿಗೆ ಗಂಡನ ಆರೋಗ್ಯ ಏನಾಗುವುದೋ ಎಂದು ಭಯವಾಗ ತೊಡಗಿತು.ಪತ್ನಿ ತನ್ನ ಪತಿಗೆ ಎಷ್ಟೇ ಹೇಳಿದರೂ ಕೇಳುತ್ತಿರಲಿಲ್ಲ.ಪತಿಯು ಪತ್ನಿಯ ಬೇಸರ ಕಂಡು, ನಾನು ಏನು ಮಾಡಲಿ?
2/8
ನಾನು ಕುಡಿಯುವ ಅಭ್ಯಾಸ ಬಿಡಲು ತಯಾರಿದ್ದರೂ ಅದು ನನ್ನನ್ನು ಬಿಡಲು ತಯಾರಿಲ್ಲ,ನನ್ನನ್ನು ಗಟ್ಟಿಯಾಗಿ ಅಂಟಿಕೊಂಡಿದೆ ಎಂದು ಪತಿ ಪತ್ನಿಗೆ ಹೇಳಿದನು.ಇದನ್ನು ಕೇಳಿ ಪತ್ನಿ ಪತಿಯನ್ನು ಒಬ್ಬ ಸನ್ಯಾಸಿಯ ಬಳಿ ಕರೆದು ಕೊಂಡು ನಡೆದದ್ದನ್ನು ವಿವರಿಸಿ ಪರಿಹಾರ ಹೇಳಿ ಸ್ವಾಮಿ ಎಂದು ಕೇಳಿದಳು.ಇದನ್ನು ಕೇಳಿದ ಸನ್ಯಾಸಿಯು ನಾಳೆ ಬರಲು ಹೇಳಿದ.
3/8
ಸೌತಡ್ಕ ಮಹಾಗಣಪತಿ 🙏🚩
ಇದೊಂದು ಪವಿತ್ರ ಧಾರ್ಮಿಕ ಸ್ಥಳದ ಜೊತೆಗೆ ಪ್ರವಾಸಿತಾಣವೂ ಆಗಿದೆ.ಗೋಪಾಲಕರಿಗೆ ಕಾಡಿನಲ್ಲಿ ಒಂದು ಕಲ್ಲಿನ ಗಣಪತಿ ವಿಗ್ರಹ ಸಿಗುತ್ತದೆ. ಆ ಗಣಪತಿಯನ್ನು ಗೋಪಾಲಕರು ಒಂದು ಸ್ಥಳದಲ್ಲಿ ಕಟ್ಟೆಯ ಮೇಲೆ ಪ್ರತಿಷ್ಠಾಪಿಸುತ್ತಾರೆ. ಆ ಸ್ಥಳವೇ ಇಂದು ಸೌತಡ್ಕ ಕ್ಷೇತ್ರ ಎಂದೆನಿಸಿದೆ.
ಗೋಪಾಲಕರು ಸೌತೆಕಾಯಿಯನ್ನು ಸಮರ್ಪಿಸಿದ್ದರಿಂದ ಸೌತಡ್ಕ ಎನ್ನುವ ಹೆಸರು ಬಂದಿತು. ಇಂದಿಗೂ ಕೆಲವರು ಇಲ್ಲಿನ ಗಣೇಶನಿಗೆ ಸೌತೆಕಾಯಿಯನ್ನು ಅರ್ಪಿಸುವ ಆಚರಣೆಯನ್ನು ಕಾಣಬಹುದು.
ಈ ದೇವಸ್ಥಾನದ ವಿಶೇಷತೆ ಎಂದರೆ ಇತರ ದೇವಸ್ಥಾನಗಳಂತೆ ಈ ದೇವಸ್ಥಾನಕ್ಕೆ ಯಾವುದೇ ಕಟ್ಟಡವಿಲ್ಲ, ಗರ್ಭಗುಡಿಯಿಲ್ಲ, ಗೋಪುರವಿಲ್ಲ. ಬದಲಾಗಿ ಇದೊಂದು ಬಯಲು ಗಣಪತಿ.
ತೆರೆದ ಸ್ಥಳದಲ್ಲಿರುವ ಗಣಪತಿ.
ಹರಕೆ ಹೊತ್ತು ಈ ಸ್ಥಳಕ್ಕೆ ಬಂದು ಗಣಪನಲ್ಲಿ ಪ್ರಾರ್ಥಿಸಿದರೆ ೨ ತಿಂಗಳೊಳಗಾಗಿ ಅವರ ಬೇಡಿಕೆ ಈಡೇರುತ್ತದಂತೆ. ಅದರ ಮರುದಿನವೇ ಈ ಕ್ಷೇತ್ರಕ್ಕೆ ಬಂದು ಗಂಟೆ ಕಟ್ಟುತ್ತಾರೆ. ಹಾಗಾಗಿ ಇಲ್ಲಿ ಸಾವಿರಾರು ಗಂಟೆಗಳನ್ನು ಕಾಣಬಹುದು.
ಸಂಕಷ್ಟಿ ದಿನ ಹಾಗೂ ಚೌತಿ ಸಂದರ್ಭದಲ್ಲಿ ಸಾವಿರಾರು ಭಕ್ತರು ಇಲ್ಲಿಗೆ ಬರುತ್ತಾರೆ.