ಆಕೆ ಬಂದ ಹುಡುಗನ ಮುಂದೆ ಒಂದು ಪ್ರದರ್ಶನ ವಸ್ತು ಎಂಬತೆ ಮೇಕಪ್ ಮಾಡಿ ಟ್ರೇಯಲ್ಲಿ ಟೀಯನ್ನು ಇಟ್ಟು ವೈಯ್ಯಾರದಿಂದ ಆತನ ಮುಂದೆ ಟೀಯನ್ನು ಚಾಚಿದಳು....
ಆತ ಟೀಯನ್ನು ತೆಗೆದು ರುಚಿಸುತ್ತಾ ಆಕೆಯನ್ನೊಮ್ಮೆ ಓರೆ ನೋಟ ನೋಡಿದ...
೧/೮
" ಟೀಯಲ್ಲಿನ ಸಕ್ಕರೆಯ ಹಾಗೆ ಹುಡುಗಿ ತುಂಬಾ ಸ್ವೀಟಾಗಿದ್ದಾಳೆ " ಆತ ಮನದಲ್ಲೇ ಅಂದುಕೊಂಡ.
ಆಕೆಯೂ ಆತನನ್ನೊಮ್ಮೆ ಅಡಿಯಿಂದ ಮುಡಿಯವರೆಗೂ ನೋಡಿದಳು.
" ಆತನ ನೋಟ ನೋಡಿದರೆ , ಚಪಲ ಚೆನ್ನಿಗರಾಯನ ತರಹ ಇದ್ದಾನೆ " ಆಕೆ ಮನದಲ್ಲಿ ಅಂದುಕೊಂಡಳು
ಆತ ಹೇಳಿದ - ಹುಡುಗಿಯ ಜೊತೆ ಮಾತನಾಡಬೇಕಿತ್ತು.
೨/೮
ಹುಡುಗಿಯ ಅಪ್ಪ - ಅದಕ್ಕೇನಂತೆ ಆಚೆ ಬದಿಯ ಕೋಣೆಯಲ್ಲಿ ಕುಳಿತು ಮಾತಾಡಬಹುದು.
ಅವರಿಬ್ಬರನ್ನೂ ಆಚೆ ಬದಿಯ ಕೋಣೆಗೆ ಕಳುಹಿಸಿ, ಇತ್ತ ಹಿರಿಯರು ತಮ್ಮ , ಮನೆ ಮನೆತನದ ಬಗ್ಗೆ ಎಲ್ಲಾ ಮಾತನಾಡುತ್ತಿದ್ದರು.
ಅತ್ತ ಆತ ಸ್ವಲ್ಪ ನಾಚಿಕೆಯಿಂದಲೇ ಆ ಕೋಣೆಯ ಕಿಟಕಿಯ ಸರಳುಗಳನ್ನಿಡಿದು ಹೊರಗಡೆ ನೋಡುತ್ತಾ ನಿಂತ.
೩/೮
ಆತನ ಪಕ್ಕದಲ್ಲಿ ಆಕೆ ಕೂಡಾ ತಲೆ ತಗ್ಗಿಸಿ ನಿಂತಳು.
ಆತ ಆಕೆಯತ್ರ ಹೆಸರನ್ನು ಕೇಳಿದ...
ಆಕೆಯ ವಿದ್ಯಾಭ್ಯಾಸದ ಕುರಿತು ಕೇಳಿದ...
ಆಕೆಯ ವಯಸನ್ನು ಕೇಳಿದ...
ಆಕೆಯ ಇಷ್ಟಗಳನ್ನು ಕೇಳಿದ...
ಕೊನೆಗೆ ನೀನು ಕನ್ಯೆಯಾ ಅಂತ ಕೇಳಿದ. ಜೊತೆಗೆ ಇಂದಿನ ಕಾಲವಲ್ಲವಾ... ಆದ್ದರಿಂದ ಕೇಳದಿದ್ದರೆ ಒಂದುವೇಳೆ... "
೪/೮
ಆತ ಮಾತನ್ನು ಮುಗಿಸುವುದಕ್ಕೆ ಮುಂಚೆನೆ ಆಕೆ ಗಾಜಿನ ಬಳೆಗಳನ್ನು ಹಾಕಿದ್ದ ಕೈಗಳಿಂದ ಪಟೀರ್ ಅಂತ ಒಂದೇ ಹೊಡೆತವಾಗಿತ್ತು ಆತನ ಕೆನ್ನೆಗೆ... ಹೊಡೆತದ ರಭಸಕ್ಕೆ ಆಕೆಯ ಕೈಯಲ್ಲಿನ ಐದು ಬಳೆಗಳಲ್ಲಿ ನಾಲ್ಕೂ ಬಳೆಗಳು ಪುಡಿಪುಡಿಯಾಗಿ ಕೆಳಕ್ಕೆ ಬಿತ್ತು...
ನಂತರ ಹೇಳಿದಳು - " ಇಂದಿನ ಕಾಲವಲ್ಲವೇ... ನಾನು ಹೆಣ್ಣಲ್ಲವೇ...
೫/೮
ಹೀಗೆ ಮುಖನೋಡಿ ಕೆನ್ನೆ ರಸಾಯನವನ್ನು ಕೊಡುವುದರಿಂದಲೇ ಈ ಕ್ಷಣದವರೆಗೂ ಕನ್ಯೆಯಾಗಿದ್ದೇನೆ.
ಅಷ್ಟರಲ್ಲಿ ಹೊಡೆತದ ಆಘಾತದಿಂದ ಎಚ್ಚೆತ್ತುಕೊಂಡು ಒಮ್ಮೆ ಆತ ನಡುಗಿದ... ನಂತರ ಸುತ್ತಲೂ ನೋಡಿದ..... ಅಬ್ಬಾ... ಯಾರೂ ನೋಡಿಲ್ಲ... ಗಡ್ಡ ಇರುವ ಕಾರಣ ಬೆರಳಚ್ಚು ಕಾಣಿಸುವುದೂ ಇಲ್ಲ... ಆತನಿಗೆ ತುಸು ಸಮಾಧಾನವಾಯಿತು...
೬/೮
ಆತ ಎಷ್ಟರಮಟ್ಟಿಗೆ ಹೃದಯಶುದ್ಧಿಯಿರುವ ಕುವರನಾಗಿದ್ದಾನೆ ಅಂತ ಅರ್ಥ ಮಾಡಿಕೊಳ್ಳೋದಕ್ಕೆ ದೊಡ್ಡ ವಿದ್ಯಾಭ್ಯಾಸದ ಅಗತ್ಯವೇನೂ ಇಲ್ಲ...
ಹಲವು ಕೆಟ್ಟ ಸ್ತ್ರೀಯರ ಸಂಘವನ್ನು ಮಾಡಿದವನಿಗೆ ಮಾತ್ರ ಇಂತಹ ಒಂದು ಜಾಗದಲ್ಲಿ, ಇಂತಹ ಒಂದು ಪ್ರಶ್ನೆಯನ್ನು ಕೇಳೋದಕ್ಕೆ ಮನಸು ಬರತ್ತೆ....
೭/೮
ಬಿಸಿನೀರಲ್ಲಿ ಬಿದ್ದ ಬೆಕ್ಕು ತಣ್ಣೀರನ್ನು ಕಂಡಾಗಲೂ ಒಮ್ಮೆ ಸಂಶಯಿಸುತ್ತದೆ...
ಏನೂ ಹೇಳದೆ, ಆತ ಕೆನ್ನೆಯನ್ನು ಸವರುತ್ತಾ ಹೊರ ನಡೆದ... ಆತನ ಹಿಂದೆ ಆಕೆಯೂ ನಡೆದಳು...
ಆತ ಮೊದಲು ಕುಡಿದ ಸಿಹಿಯಾದ ಟೀಗೆ ಈವಾಗ ಏನೋ ಒಂದು ಕಹಿಯಾದ ಸ್ವಾದ ಅಂತ ಆತನಿಗೆ ಅನಿಸಿತು...😌
೮/೮ #source
• • •
Missing some Tweet in this thread? You can try to
force a refresh
ಕುಂಕುಮ ಲೇಪಿತ ಹನುಮ...
ಹನುಮಂತನ ಮುಗ್ಧ ಭಕ್ತಿಗೆ ಮತ್ತು ಶ್ರೀ ರಾಮಚಂದ್ರನ ಮೇಲಿರುವ ಅಪಾರವಾದ ಪ್ರೀತಿಗೆ ಸಾಕ್ಷಿಯಾಗುವಂತೆ, ಒಂದು ಸಿಂಧೂರದ ಕಥೆ
ಬರುತ್ತದೆ.ಪ್ರತಿದಿನ ಸೀತಾ ಮಾತೆ ಅವಳ ಕೂದಲಿನ ಭಾಗದಲ್ಲಿ ಕೆಂಪು ಕುಂಕುಮವನ್ನು ಧರಿಸುತ್ತಿದ್ದಳು ಇದನ್ನು ಹನುಮಂತ ಗಮನಿಸುತ್ತಲೆ, ಇದ್ದನು.
೧/೧೧
'ಹೀಗೆ ಒಂದು ಮಂಗಳವಾರದ ದಿನ ಕೂತುಹಲ ತಡೆಯಲಾಗದೆ , ಹನುಮಂತ ಸೀತಾ ಮಾತೆಯನ್ನು ಕುರಿತು ಮಾತೆ ಪ್ರತಿದಿನ ನೀವು ಈ ಕುಂಕುಮ ಧರಿಸುವ ಉದ್ದೇಶವೆನು?
ಎಂದು ಕೇಳಲು ಆಗ ಸೀತಾ ಮಾತೆ ನನ್ನ ಪತಿ, "ಶ್ರೀ ರಾಮಚಂದ್ರನ ಆಯಸ್ಸು ವೃಧ್ಧಿಯಾಗಲು, ಅವರು ಸುಖ ಸಂತೋಷದಿಂದ ದೀರ್ಘಕಾಲ ನೆಮ್ಮದಿಯಿಂದ ಬದುಕಲು,
೨/೧೧
ಹಾಗೂ ನನ್ನ ಮುತ್ತೈದೆ ತನದ ಸಂಕೇತವಾಗಿ, ನಾನು ಪ್ರತಿದಿನ ನನ್ನ ಕೂದಲಿನ ಬೈತಲೆಯ ಭಾಗಕ್ಕೆ, ಸಿಂಧೂರ ಧರಿಸುವುದಾಗಿ, ಹೇಳುತ್ತಾಳೆ.
ಸೀತೆಯ ಮಾತನ್ನು ಕೇಳಿ, ಹನುಮಂತ ಕ್ಷಣಕಾಲ ಯೋಚಿಸಿ, ಸೀತಾಮಾತೆಯು ರಾಮನನ್ನು ತುಂಬಾ ಪ್ರೀತಿಸುತ್ತಾಳೆ.
೩/೧೧
ಕೆಲವು ವೈದಿಕ (ಶಾಸ್ತ್ರೋಕ್ತ ) ಭಾರತೀಯ ಅತ್ಯಮೂಲ್ಯ ಆರೋಗ್ಯ ಸಲಹೆಗಳು ಮತ್ತು ಸಂಸ್ಕೃತದಲ್ಲಿನ ಉಲ್ಲೇಖಗಳು...
*1 ಅಜೀರಣೀ ಭೋಜನಂ ವಿಷಮ್*
ಮೊದಲು ತಿಂದ ಆಹಾರ ಜೀರ್ಣವಾಗದೆ ಇರುವಾಗ, ಮುಂದಿನ ಆಹಾರ ತಿಂದಲ್ಲಿ, ಅದು ವಿಷದಂತೆ ಪರಿಣಾಮ ಬೀರುತ್ತದೆ.
*2 ಅರ್ಧೋಗಹರಿ ನಿದ್ರಾ*
ಸರಿಯಾದ ನಿದ್ರೆ ಅರ್ಧದಷ್ಟು ರೋಗಗಳನ್ನು ಗುಣಪಡಿಸುತ್ತದೆ.
1/10
*3. ಮುದ್ಗಧಾಲಿ ಗಾಧವ್ಯಾಲಿ*
ಎಲ್ಲಾ ದ್ವಿದಳ ಧಾನ್ಯಗಳಲ್ಲಿ, ಹೆಸರು ಬೇಳೆ ಉತ್ತಮವಾಗಿದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇತರ ದ್ವಿದಳ ಧಾನ್ಯಗಳು ಒಂದು ಅಥವಾ ಇನ್ನೊಂದು ಅಡ್ಡ ಪರಿಣಾಮಗಳನ್ನು ಹೊಂದಿವೆ.
*4. ಬಗ್ನಾಸ್ತಿ ಸಂಧಾನಕರೋ ರಸೋನಹ*
ಬೆಳ್ಳುಳ್ಳಿ ಮುರಿದ ಮೂಳೆಗಳನ್ನು ಸಹ ಸೇರಿಸುತ್ತದೆ...
2/10
*5 ಅತಿ ಸರ್ವತ್ರ ವರ್ಜಯೇತ್*
ಅತಿಯಾಗಿ ಸೇವಿಸುವ ಯಾವುದಾದರೂ, ಅದು ರುಚಿಯಾಗಿದ್ದರೂ, ಆರೋಗ್ಯಕ್ಕೆ ಒಳ್ಳೆಯದಲ್ಲ. ಮಿತವಾಗಿರಲಿ...
*6. ನಾಸ್ತಿಮೂಲಂ ಅನೌಷಧಂ*
ಯಾವುದೇ ಔಷಧೀಯ ಪ್ರಯೋಜನವಿಲ್ಲದ ಯಾವುದೇ ತರಕಾರಿ ಇಲ್ಲ...
*7 ನಾ ವೈದ್ಯಃ ಪ್ರಭುರಾಯುಷ*
ಯಾವ ವೈದ್ಯರೂ ನಮ್ಮ ದೀರ್ಘಾಯುಷ್ಯದ ಅಧಿಪತಿ ಅಲ್ಲ. ವೈದ್ಯರಿಗೂ ಮಿತಿಗಳಿವೆ...
3/10
*ರಷ್ಯಾ-ಉಕ್ರೇನ್ ಯುದ್ಧದಿಂದ ನಾವುಗಳು ಅರಿಯಬೇಕಾದ್ದೇನು?*🤔
*ನನ್ನ ದೊಡ್ಡ ಸಂಬಳ.*
*ನನ್ನ 4 BHK ಮನೆ, ಜಮೀನು, ನನ್ನ ಕಾರು, ನನ್ನ ವ್ಯಾಪಾರ, ನನ್ನ 50 ಎಕರೆ ಜಮೀನು, ನನ್ನ ತೋಟದ ಮನೆ ಇತ್ಯಾದಿ.... ನನ್ನ ದೇಶ ಎಲ್ಲಿಯವರೆಗೆ... ಸುರಕ್ಷಿತವಾಗಿದೆಯೋ, ಅಲ್ಲಿಯವರೆಗೆ ಇದೆಲ್ಲವೂ ಸುರಕ್ಷಿತ.
ಇಲ್ಲದಿದ್ದರೆ ಎಲ್ಲವೂ ಹೊಗೆಯಾಡಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ.*
*ಇಂದು ರಷ್ಯಾ- ಉಕ್ರೇನ್ ಯುದ್ಧದಲ್ಲಿ, 20 ಲಕ್ಷಕ್ಕೂ ಹೆಚ್ಚು ಉಕ್ರೇನಿಯನ್ನರು ಎಲ್ಲವನ್ನೂ ಬಿಟ್ಟು ಬೇರೆ ದೇಶದಲ್ಲಿ ಆಶ್ರಯ ಪಡೆಯುತ್ತಿದ್ದಾರೆ.*
*ಅವರು ಅದೃಷ್ಟವಂತರು. ಏಕೆಂದರೆ ಅವರಿಗೆ ಆಶ್ರಯ ನೀಡಿದ ನೆರೆಹೊರೆ ದೇಶಗಳು ಒಳ್ಳೆಯ ದೇಶಗಳು.*
*ನಮ್ಮ ಪರಿಸ್ಥಿತಿ ಏನಾಗುತ್ತದೆ...?*
*ನಾವು ಎಲ್ಲಿಗೆ ಹೋಗಬಹುದು?? ಎಂದು*
*ನಾವುಗಳು..ಎಂದಾದರೂ ಯೋಚಿಸಿದ್ದೀವಾ.??!!!*
*ಒಂದು ಕಡೆ ಪಾಕಿಸ್ತಾನ, ಇನ್ನೊಂದು ಕಡೆ ಬಾಂಗ್ಲಾದೇಶ, ಕೆಳಗೆ ಹಿಂದೂ ಮಹಾಸಾಗರ, ಮೇಲೆ ಚೀನಾ, ದೇಶದೊಳಗೆ ಲೆಕ್ಕವಿಲ್ಲದಷ್ಟು... ದೇಶದ್ರೋಹಿಗಳು...!*
ಯಶೋದಮ್ಮನಿಗೆ ರಾತ್ರಿಯಿಡೀ ನಿದ್ದೆ ಬರಲಿಲ್ಲ.ಮಗ ಅಂದ ಮಾತು ಕೇಳಿ ಸಿಡಿಲು ಬಡಿದಂತಾಗಿತ್ತು.ಪಾಪ! ನಿದ್ದೆಯಾದರೂ ಹೇಗೆ ಬಂದೀತು?
ಅಲ್ಲಿ,ಇಲ್ಲಿ ಕೆಲವು ಸುದ್ದಿ ಕೇಳಿದ್ದಿತ್ತು,ಮಕ್ಕಳು ತಂದೆ ,ತಾಯಿಯನ್ನ ವೃದ್ಧಾಶ್ರಮಕ್ಕೆ ಸೇರಿಸುವುದನ್ನು.! ಆದರೆ ತನಗೂ ಒಂದೊಮ್ಮೆ ಅದೇ ದುರ್ಗತಿ ಬಂದೀತೆಂದು ಕನಸಲ್ಲೂ ಎಣಿಸಿರಲಿಲ್ಲ.
1/10
ಮಗ ಒಳ್ಳೆಯವನೇ,ಪಾಪ! ಎಲ್ಲಾ ಸೊಸೆಯದ್ದೇ ಕಾರುಬಾರು! ಇಲ್ಲಿ ತನಕ ತೋರಿಸುತ್ತಿದ್ದ ಪ್ರೀತಿ ಎಲ್ಲಾ ಬರೇ ನಾಟಕವೇ..?ರಾತ್ರಿ ಊಟದ ಸಮಯದಲ್ಲಿ ಮಗನಂದಿದ್ದ," ಅಮ್ಮಾ,ನಾಳೆ ಬೆಳಿಗ್ಗೆ ಸ್ವಲ್ಪ ಬೇಗ ರೆಡಿಯಾಗು.ವೃದ್ಧಾಶ್ರಮಕ್ಕೆ ಹೋಗಬೇಕು.ಎಲ್ಲಾ ಏರ್ಪಾಡು ಮಾಡಿಸಿದ್ದೇನೆ.ಬೇಗ ಬರೋದಕ್ಕೆ ಹೇಳಿದ್ದಾರೆ."
2/10
ಆಮೇಲೆ ಯಶೋದಮ್ಮನಿಗೆ ಗಂಟಲಲ್ಲಿ ಅನ್ನ ಇಳಿಯಲಿಲ್ಲ.
ರಾತ್ರಿ ಒಂದು ಯುಗದಂತೆ ಕಳೆದಿತ್ತು.
ಬೆಳಿಗ್ಗೆ ಸೊಸೆ ಗಡಿಬಿಡಿಯಿಂದ ಓಡಾಡುತ್ತಿದ್ದಳು.ಅತ್ತೆ ಬಳಿಗೆ ಬಂದು ಹೇಳಿದಳು," ನೀವು ಬೇಗ ರೆಡಿಯಾಗಿ ಅತ್ತೆ, ನಾನು ಪ್ಯಾಕ್ ಮಾಡಿ ರೆಡಿಯಾಗ್ತೀನಿ."
ಯಶೋದಮ್ಮನಿಗೆ ಜೋರಾಗಿ ಅತ್ತುಬಿಡಬೇಕೆನಿಸಿತು.
3/10
ಒಂದು ಊರಲ್ಲಿ ಒಬ್ಬ ರಾಜ ಇರುತ್ತಾನೆ.ಅವನು ನಿಷ್ಠಾವಂತ,ಬುದ್ಧಿವಂತ ಹಾಗು ಜನರ ಕಷ್ಟಗಳಿಗೆ ಸಹಾಯ ಮಾಡುವವನಾಗಿರುತ್ತಾನೆ.
ಒಂದು ಯುದ್ಧದಲ್ಲಿ ತನ್ನ ಒಂದು ಕಣ್ಣು ,ಒಂದು ಕಾಲು ಕಳೆದುಕೊಂಡಿರುತ್ತಾನೆ.
ಒಂದು ದಿನ ರಾಜ ಅರಮನೆಯಲ್ಲಿ ಹೋಗ್ತಾ ಇರುವಾಗ ತನ್ನ ತಂದೆ,ತಾತ,ಮುತ್ತಾತರ ಚಿತ್ರಪಟಗಳನ್ನು ಕಂಡು ಎಷ್ಟು ಸುಂದರವಾಗಿವೆ ಈ ಚಿತ್ರಪಟಗಳು,
1/7
ನಾಳೆ ನನ್ನ ಮಗ ನಿನ್ನ ಚಿತ್ರಪಟ ಎಲ್ಲಿ ಎಂದು ಕೇಳಿದರೆ ಏನು ಹೇಳಬೇಕು ಎಂದು ಯೋಚಿಸುತ್ತಾನೆ.
ಮರುದಿನ ಅರಮನೆಗೆ ಎಲ್ಲಾ ಚಿತ್ರ ಕಲಾವಿದರನ್ನು ಕರೆದು ಯಾರು ನನ್ನ ಚಿತ್ರಪಟವನ್ನು ಸುಂದರವಾಗಿ ಬಿಡಿಸುತ್ತಾರೋ ಅವರಿಗೆ ಬಹುಮಾನಗಳೊಂದಿಗೆ ಸತ್ಕರಿಸುತ್ತೆವೆ ಎಂದು ಆದೇಶನೀಡುತ್ತಾನೆ.
2/7
ಆಗ ಕಣ್ಣು,ಕಾಲು ಇಲ್ಲದ ರಾಜನ ಚಿತ್ರಪಟ ಹೇಗೆ ಸುಂದರವಾಗಿ ಬಿಡಿಸುವುದು,ಒಂದು ವೇಳೆ ಬಿಡಿಸಿದ ಚಿತ್ರಪಟ ರಾಜನಿಗೆ ಇಷ್ಟವಾಗದೆ ಕೋಪಬಂದರೆ ಅವರ
ಶಿಕ್ಷೆಗೆ ಗುರಿಯಾಗಬೇಕು ಎಂದು ಯಾವ ಕಲಾವಿದನು ನಾನು ಬಿಡಿಸುತ್ತೇನೆ ಎಂದು ಮುಂದೆ ಬರುವುದಿಲ್ಲ.ಆದರೆ ಕೊನೆಗೆ ಒಬ್ಬ ಕಲಾವಿದ ನಾನು ರಾಜನ ಚಿತ್ರಪಟ ಬಿಡಿಸುತ್ತೇನೆ ಎಂದು ಮುಂದೆ ಬರುತ್ತಾನೆ.
3/7