#ತ್ಯಾಗ
ಅಮ್ಮಾ... ಯಾಕೋ ತುಂಬಾ ಬೆವರುತ್ತಾ ಇದೆ.. ನಾನು ಇವತ್ತು ತಣ್ಣೀರಲ್ಲಿ ಸ್ನಾನ ಮಾಡ್ತೀನಿ.. ನನ್ನ ಪಾಲಿನ ಬಿಸಿ ನೀರು ನೀನು ತಗೋ ಎಂದಳು ಸ್ಮಿತ. ತಾನು ತಣ್ಣೀರಲ್ಲಿ ಬೇಗ ಸ್ನಾನ ಮುಗಿಸಿ ಶಾಲೆಗೆ ಹೋದಳು. ಮಗಳ ಪಾಲಿನ ಬಿಸಿನೀರಲ್ಲಿ ಗೀತ ಸ್ನಾನ ಮುಗಿಸಿದಳು
1/4
ಮರುದಿವಸ ಪುನಃ, ಅಮ್ಮಾ, ನಾನು ನಿನ್ನೆ ತಣ್ಣೀರಲ್ಲಿ ಸ್ನಾನ ಮಾಡಿದೆನಲ್ಲ.. ತುಂಬಾ ಫ್ರೆಶ್ ಅನ್ನಿಸಿತ್ತು.. ಇನ್ಮೇಲೆ ತಣ್ಣೀರಲ್ಲಿಯೇ ಸ್ನಾನ ಮಾಡ್ತೀನಿ.. ಅತ್ತೆಗೆ ಹೇಳಬೇಡ. ನನ್ನ ಪಾಲಿನ ಬಿಸಿ ನೀರು ನೀನು ತಗೋ ಎಂದಳು ಸ್ಮಿತ. ಯಾಕಮ್ಮ.. ದಿನಾ ತಣ್ಣೀರಲ್ಲಿ ಸ್ನಾನ ಮಾಡಿದರೆ ನಿಂಗೆ ನೆಗೆಡಿಯಾಗಲ್ವೇ? ಎಂದು ತಾಯಿ ಕೇಳಿದಾಗ ಇಲ್ಲಮ್ಮ ..
2/4
ಇಷ್ಟು ದಿನದಿಂದ ನೀನು ಮಾಡುತ್ತ ಇದ್ದಿಯಲ್ಲ... ಏನಾಗಿದೆ ನಿನಗೆ? ನಂಗೂ ಏನು ಆಗಲ್ಲ ಬಿಡು!! ಎಂದು ಅಮ್ಮನ ಬಾಯಿಮುಚ್ಚಿಸಿದಳು..
ತನ್ನ ತಂದೆಯ ದೇಹಾಂತದ ನಂತರ ತಾನು ಹಾಗೂ ತಾಯಿ ಸೋದರ ಮಾವನ ಆಶ್ರಯದಲ್ಲಿ ಇದ್ದೆವು. ಮಾವನ ಹೆಂಡತಿ ಅತ್ತೆ ಎಲ್ಲದರಲ್ಲೂ ಹಿಡಿತ ಮಾಡುತ್ತಿದ್ದಳು.
3/4
ಚಳಿಗಾಲದಲ್ಲಿ ಬಿಸಿ ನೀರು ಕೂಡ ಮಕ್ಕಳಿಗೆ ಮಾತ್ರ ಕೊಟ್ಟು ಗೀತಳಿಗೆ ತಣ್ಣೀರಲ್ಲಿ ಸ್ನಾನ ಮಾಡ್ಕೋ ಎನ್ನುತ್ತಿದ್ದಳು!!
ತನ್ನ ತಾಯಿ ತಣ್ಣೀರಲ್ಲಿ ಸ್ನಾನ ಮಾಡಿ ಚಳಿಯಿಂದ ನಡುಗುತ್ತಿರುವುದನ್ನು ಗಮನಿಸಿದ ಮಗಳು ಸ್ಮಿತ ಈ ಉಪಾಯವನ್ನು ಮಾಡಿ ತಾಯಿಗೆ ಬಿಸಿನೀರು ಸ್ನಾನಕ್ಕೆ ಸಿಗುವಂತೆ ನೋಡಿಕೊಂಡಳು!!
4/4
• • •
Missing some Tweet in this thread? You can try to
force a refresh
ವೈರಿ ಶಿಭಿರದೊಳಗಿನ ಭಾರತದ ಕಣ್ಣು ಕಿವಿಗಳಿವರು...🙏
ಅವರ ನಿಸ್ವಾರ್ಥ ಸಾಹಸಕ್ಕೊಂದು ಸೆಲ್ಯೂಟ್ 🫡🙏
ದಿಲ್ಲಿಯ ಪ್ರಗತಿ ವಿಹಾರ ದಲ್ಲಿ ದೇಶದ ಭದ್ರತೆಗೆ ಸಂಬಂಧಿಸಿದ ಹತ್ತಾರು ಕಟ್ಟಡ ಕಚೇರಿಗಳಿವೆ, ರಾಷ್ಟ್ರೀಯ ಗುಪ್ತಚರ ವಿಭಾಗ, ಇಂಡೋ ಟಿಬೇಟಿಯನ್ ಬಾರ್ಡರ್ ಫೋರ್ಸ್, ಸಿಬಿಐ ಹೀಗೆ ಬಹುತೇಕ ಸಂಸ್ಥೆಗಳ ಬೋರ್ಡ್ ನಿಮಗೆ ಕಾಣಸಿಗುತ್ತದೆ.
೧/೨೯
ಆದರೆ ಅದೊಂದು ಬಹು ಮಹಡಿ ಕಟ್ಟಡ ಮಾತ್ರ ಯಾವುದೇ ಬೋರ್ಡು ಹಾಕಿಕೊಳ್ಳದೇ ಅನಾಮದೇಯವಾಗಿ ನಿಂತಿದೆ. ಹಾಗಂತ ಒಳಗೇನಿದೆ ನೋಡೋಣ ಎಂದು ನಾವು ನೀವು ಹೋಗುವಂತೆಯೂ ಇಲ್ಲ. ಸಾರ್ವಜನಿಕರಿಗೆ ಅಲ್ಲಿ ಪ್ರವೇಶ ನಿಷಿದ್ಧ. ಅದು ರಿಸರ್ಚ್ ಆ್ಯಂಡ್ ಅನಾಲಿಸಿಸ್ ವಿಂಗ್ ಎಂಬ ಸಂಸ್ಥೆಯ ಕಚೇರಿ, ಜನರು ಆ ಸಂಸ್ಥೆಯನ್ನು ರಾ ಎಂದು ಸಂಬೋಧಿಸುತ್ತಾರೆ.
೨/೨೯
ಇದು ಜಾಗತಿಕ ಮಟ್ಟದಲ್ಲಿ ಭಾರತದ ಪರವಾಗಿ ಗುಪ್ತ ರೀತಿಯಲ್ಲಿ ಕೆಲಸ ಮಾಡುತ್ತದೆ.ಭಾರತದ ವಿರುದ್ಧ ಶತ್ರುಗಳು ಮಾಡುವ ಸಂಚನ್ನು ಭೇದಿಸುತ್ತದೆ. ದೇಶಕ್ಕೆ ಒದಗಬಹುದಾದ ಅಪಾಯಗಳ ಸೂಚನೆ ನೀಡುತ್ತದೆ. ಒಟ್ಟಾರೆಯಾಗಿ ಕತ್ತಲಲ್ಲಿ ಅವಿತುಕೊಂಡೇ ರಹಸ್ಯರೀತಿಯಲ್ಲಿ ಭಾರತದ ರಖವಾಲಿ ಮಾಡುತ್ತದೆ. ಇದರ ಏಜೆಂಟರು ಜಗತ್ತಿನಾದ್ಯಂತ ಹರಡಿಕೊಂಡಿದ್ದಾರೆ.
೩/೨೯
ಮನೆಯಲ್ಲಿ ಇದ್ದ ಹಳೆಕಾಲದ ಗೋಡೆ ಗಡಿಯಾರ ನೋಡಿದ 24ವರ್ಷದ ಮಗ ಒಂದು ದಿನ....ತನ್ನ ತಂದೆಗೆ ಹೇಳಿದ.....ಅಪ್ಪ ಈ ಹಳೆ ಕಾಲದ ಗಡಿಯಾರ ಗುಜರಿಗೆ ಮಾರಿ ಬಿಡಿ.....ಇವೆಲ್ಲ ಯಾರು ಇಟ್ಕೋಳ್ತಾರೆ ಈ ಕಾಲದಲ್ಲಿ ಎಂದ....
ತಂದೆ ತನ್ನ ಮಗನಿಗೆ ಉತ್ತರವಾಗಿ ಹೀಗೆ ಹೇಳಿದರು: "ಇದು ನಿನ್ನ ಅಜ್ಜ ನನಗೆ ನೀಡಿದ
೧/೫
ಗೋಡೆಗಡಿಯಾರ...ನಿನ್ನ ಅಜ್ಜನಿಗೆ ಅವರ ಅಪ್ಪ ನೀಡಿದ ಗೋಡೆ ಗಡಿಯಾರ ಇದು.... ಮತ್ತು.. ಇದಕ್ಕೆ 250 ವರ್ಷ ಆಗಿದೆ ಅಷ್ಟು ಹಳೆಯದು, ಆದರೆ... ನಾನು ಇದನ್ನು ನಿನಗೆ ಮಾರಲು ಅನುಮತಿ ಕೊಡುವ ಮೊದಲು .....ಗಡಿಯಾರವನ್ನು ಸಿಟಿಯಲ್ಲಿರುವ ದೊಡ್ಡ ಗಡಿಯಾರ ಅಂಗಡಿಗೆ ಹೋಗಿ ತೋರಿಸಿ, ಅವರತ್ರ 'ನಾನು ಅದನ್ನು ಮಾರಲು ಬಂದಿರುವೆ ಎಂದು ಹೇಳು' ,
೨/೫
ಅದರ ರೇಟ್ ಎಷ್ಟು ಕೊಡುವಿರೆಂದು ಕೇಳು "
ಮಗನು ಅಂಗಡಿಗೆ ಹೋಗಿ ವಿಚಾರಿಸಿ ಬಂದು....ತನ್ನ ತಂದೆಯ ಬಳಿಗೆ ಬಂದು, "ಗಡಿಯಾರ ತಯಾರಕನು ಹಳೆಯದಾಗಿರುವ ಕಾರಣ ಈ ಗೋಡೆ ಗಡಿಯಾರಕ್ಕೆ 500₹ ಕೊಡಬಲ್ಲೆ ಅದಕ್ಕಿಂತ ಹೆಚ್ಚು ಆಗೋಲ್ಲ ಎಂದು ಹೇಳಿದ ಅಪ್ಪ"
ನಂತರ ತಂದೆ ಹೇಳಿದ....
" ಸರಿ ಮ್ಯೂಸಿಯಂಗೆ ಹೋಗಿ ಆ ಗಡಿಯಾರ ತೋರಿಸು " ಎಂದು ಹೇಳಿದನು...
೩/೫
ನವದಂಪತಿಗಳು ಒಂದು ದಿನ ಒಂದು ಪಾರ್ಕಿನಲ್ಲಿ ಕೂತು ಮಾತನಾಡುತ್ತಿದ್ದರು .
ಒಮ್ಮಿಂದೊಮ್ಮೆಲೆ ಬೀದಿನಾಯಿಯೊಂದು ಜೋರಾಗಿ ಬೊಗಳುತ್ತಾ ಅವರ ಹತ್ತಿರ ಬಂತು. ಅದು ಖಂಡಿತ ಕಚ್ಚುತ್ತದೆ ಅಂತ ಅರಿತ ಆತ ತನ್ನ ಪ್ರೀತಿಯ ಪತ್ನಿಯನ್ನು ಮೇಲಕ್ಕೆ ಎತ್ತಿದ.
ಆತ ಮನಸಲ್ಲಿಯೇ ಹೇಳಿದ ಕಚ್ಚುವುದಾದರೆ ನನ್ನನ್ನು ಕಚ್ಚಲಿ.
೧/೫
ಆದರೆ ನನ್ನ ಪ್ರೀತಿಯ ಪತ್ನಿಯನ್ನು ಕಚ್ಚಲು ಬಿಡಲಾರೆ ಅಂತ ಆಕೆಯನ್ನು ಇನ್ನೂ ಮೇಲಕ್ಕೆ ಎತ್ತಿ ಹಿಡಿದ.
ನಾಯಿ ಬಂದು ಆತನ ಕಾಲ ಬಳಿ ಬಂದು ನಿಂತು ಎರಡುಬಾರಿ ಬೊಗಳಿತು. ಆತ ಮನಸಲ್ಲೇ ಹೇಳಿದ ನಾನು ಈಕೆಯ ಹತ್ತಿರ ಇರುವಾಗ ನೀನಲ್ಲ ನಿನ್ನ ಅಪ್ಪ ಬಂದರೂ ಆಕೆಯನ್ನು ಏನೂ ಮಾಡಲು ಬಿಡಲಾರೆ ಅಂತ ಆ ನಾಯಿಯ ಕಣ್ಣುಗಳನ್ನು ದಿಟ್ಟಿಸಿ ನೋಡಿದ...
೨/೫
ಆತನಿಗೆ ಆಕೆಯ ಮೇಲಿರುವ ಪ್ರೀತಿಯ ತೀವ್ರತೆಯನ್ನು ಅರಿತ ನಾಯಿಯು ಅಲ್ಲಿಂದ ಹೊರಟು ಹೋಯಿತು.
ಆತ ಆಕೆಯನ್ನು ಕೆಳಗೆ ನಿಲ್ಲಿಸಿದ. ಆತ ಭಾವಿಸಿದ ಆಕೆಯನ್ನು ನಾಯಿಯಿಂದ ಕಾಪಾಡಿದ್ದಕ್ಕೆ ಆಕೆ ಒಂದು ಸಿಹಿಮುತ್ತನ್ನು ಕೊಟ್ಟು ತನ್ನನ್ನು ಬಾಯ್ತುಂಬ ಹೊಗಳಬಹುದೆಂದು.
೩/೫
ನೀವು 200 ಕೆಂಪು ಇರುವೆ ಮತ್ತು 200 ಕಪ್ಪು ಇರುವೆಗಳನ್ನು ಒಂದೇ ಗಾಜಿನ ಬಾಟಲಿಯಲ್ಲಿ ಶಾಂತವಾಗಿ ಹಾಕಿ...ಬಾಟಲ್ ಒಳಗೆ ಸ್ವಲ್ಪ ಸಕ್ಕರೆ ಹಾಕಿ... ಏನೂ ಆಗುವುದಿಲ್ಲ..ಎಲ್ಲ ಇರುವೆಗಳು ಸಕ್ಕರೆಯನ್ನು ಹಂಚಿಕೊಂಡು ತಿನ್ನುವವು........ಆದ್ರೆ ಅವೆರಡೂ ಇರುವೆಗಳ ಗುಂಪಿನಲ್ಲಿ ವೈರತ್ವ
ಬರಿಸಬೇಕು ಅಂತ ಇದ್ರೆ....ನೀವು ಅದೇ ಸಮಯದಲ್ಲಿ ಬಾಟಲ್ ಅನ್ನು ಅಲ್ಲಾಡಿಸಿದರೆ ಸಾಕು......ಆ ಇರುವೆಗಳು ಪರಸ್ಪರ ಒಂದಾನೊಂದು ಕೊಲ್ಲಲು ಪ್ರಾರಂಭಿಸುತ್ತವೆ..... ಕರಿ ಇರುವೆಗಳನ್ನು ತಮ್ಮ ಶತ್ರುಗಳೆಂದು ಕೆಂಪು ಬಣ್ಣದ ಇರುವೆಗಳು ಭಾವಿಸುತ್ತವೇ....ಮತ್ತು..... ಕರಿ ಇರುವೆಗಳು ಕೆಂಪು ಬಣ್ಣದ ಇರುವೆಗಳನ್ನು ತಮ್ಮ ಶತ್ರು ಎಂದು ನಂಬುತ್ತವೇ.
ಆದರೆ
ಅವೆರಡರ ನಿಜವಾದ ಶತ್ರು ಬಾಟಲ್ ಅನ್ನು ಅಲ್ಲಾಡಿಸಿದ ವ್ಯಕ್ತಿ..... ನಮ್ಮ ಸಮಾಜವೂ ಹಾಗೆಯೇ. ನಾವು ನಮ್ಮ ನಮ್ಮೊಳಗೆ ಜಗಳವಾಡುವ ಮೊದಲು, ನಾವು ನಮ್ಮನ್ನು ಕೇಳಿಕೊಳ್ಳಬೇಕು: ಯಾರು ಬಾಟಲ್ ಅಲ್ಲಾಡಿಸಿದವ?(ಫಿಟಿಂಗ್ ಇಟ್ಟವ)....ಅನ್ನೋದನ್ನ ಅರ್ಥಮಾಡಿಕೊಳ್ಳಬೇಕು.........
ಅಡುಗೆ ಮನೆಯಿಂದ ಸೆರಗನ್ನು ಗಟ್ಟಿಯಾಗಿ ಹಿಡಿದು ಸರ ಸರ ಹೊರನಡೆದ ಮನೆ ಕೆಲಸದ ನಿರ್ಮಲಳನ್ನು ಆ ಮನೆಗೆ ಹೊಸದಾಗಿ ಬಂದಿದ್ದ ಸೊಸೆ ಅನುಮಾನದಿಂದ ನೋಡುತ್ತಾಳೆ.
ಮಾರನೆಯ ದಿನವೂ ಮನೆಕೆಲಸದವಳು ಎಲ್ಲಾ ಕೆಲಸ ಮುಗಿಸಿ ಹೋಗುವಾಗ ಸೆರಗನ್ನು ಗಟ್ಟಿ ಹಿಡಿದು ಸರ ಸರ ಹೋಗುತ್ತಾಳೆ.
೧/೨೬
ಮತ್ತೆ ಆ ಮನೆಯ ಎರಡನೆ ಸೊಸೆ ಸಾನ್ವಿಗೆ ಅನುಮಾನ ಬಂದು ಅತ್ತೆಗೆ ಹೇಳುತ್ತಾಳೆ. ಮನೆಕೆಲಸದವಳು ಬಹುಷಃ ದಿನಾ ಏನನ್ನೋ ಕದ್ದು ಹೋಗುತ್ತಿದ್ದಾಳೆ ಅತ್ತೆ ವಿಚಾರಿಸಿ ಅನ್ನುತ್ತಾಳೆ.ಆಗ ಅತ್ತೆ, "ಸಾನ್ವಿ, ನಿರ್ಮಲ ಆತರಹದವಳಲ್ಲ ಪಾಪ ಅವಳ ಗಂಡ ಗಾರೆ ಕೆಲಸಕ್ಕೆ ಹೋದಾಗ ಬಿದ್ದು ಸೊಂಟ ಮುರಿದಿದೆ.
೨/೨೬
ಇಬ್ಬರು ಮಕ್ಕಳಂತೆ ಅವಳಿಗೆ, ಅದಕ್ಕೆ ಕೆಲಸಕ್ಕೆ ಬರುತ್ತಿದ್ದಾಳೆ. ಎರಡು ವರ್ಷದಿಂದ ನಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಳೆ. ಯಾವ ವಸ್ತುವೂ ಇದುವರೆಗೂ ಕಳುವಾಗಿಲ್ಲ" ಅಂದಾಗ ಸಾನ್ವಿ, "ಇಲ್ಲ ಅತ್ತೆ, ನಾನೇ ನೋಡಿದೆ. ಸೆರಗಿನಲ್ಲಿ ಏನೋ ಹಿಡಿದಿದ್ದಳು" ಅನ್ನುವಳು .
ಅತ್ತೆಗೆ ಅನುಮಾನ ಬಾರದೇ ಇದ್ದರೂ ಸೊಸೆ ಮಾತಿಗೆ ಹೂಂ ಅನ್ನುವಳು.
೩/೨೬