1. ಸುಭದ್ರ ಯೋಜನೆ
ಬ್ರಾಹ್ಮಣ ಸಮುದಾಯದ ಅನಾಥ/ನಿರಾಶ್ರಿತ ಅಂಗವಿಕಲ, ವಿಧವೆ ಮಹಿಳೆಯರು , ಹಿರಿಯ ನಾಗರೀಕರಿಗೆ ಮಾಸಿಕ ಪಿಂಚಣಿ.
2. ಸೌಖ್ಯ ಯೋಜನೆ
ನಿರಾಶ್ರಿತರಾದ ಬ್ರಾಹ್ಮಣ ವಿಧವೆ ಹಾಗೂ ಹಿರಿಯ ನಾಗರೀಕರಿಗೆ ಆಶ್ರಯ ಕಲ್ಪಿಸಲು ವೃದ್ಧಾಶ್ರಮಗಳ ಸ್ಥಾಪನೆ/ವೃದ್ಧಾಶ್ರಮ ವೆಚ್ಚ ಮರುಪಾವತಿ ಹಾಗೂ ವೈದ್ಯಕೀಯ ವೆಚ್ಚ ಮರುಪಾವತಿ ಮಾಡುವುದು.
ಅರ್ಹ ಬ್ರಾಹ್ಮಣರಿಗೆ ಉಚಿತ ವೈದ್ಯಕೀಯ ತಪಾಸಣೆ ಆಯೋಜಿಸುವುದು.
3. ಕಲ್ಯಾಣ ಯೋಜನೆ:
ಬ್ರಾಹ್ಮಣರಿಗಾಗಿ ಸಾಮೂಹಿಕ ವಿವಾಹ/ಉಪನಯನಗಳನ್ನುಆಯೋಜಿಸುವುದು.
ಬಿಪಿಎಲ್ ಬ್ರಾಹ್ಮಣ ಕುಟುಂಬದ ಕೃಷಿಕರನ್ನು/ ಅಡಿಗೆಯವರನ್ನು/ ಪುರೋಹಿತರನ್ನು ಮದುವೆಯಾಗುವ ವಧುವಿನ ಹೆಸರಲ್ಲಿ ಮೂರು ಲಕ್ಷ ರೂಪಾಯಿ ಮೊತ್ತದ ವಿತ್ತಬಾಂಡ್ ವಿತರಿಸುವುದು
4. ಚೈತನ್ಯ ಉತ್ಸವ ಯೋಜನೆ:
ಬ್ರಾಹ್ಮಣ ಸಮುದಾಯದ ಯುವ ಪೀಳಿಗೆಯ ಯುವ ಸಂಘಟನೆ ಹಾಗೂ ಅಭಿವೃದ್ಧಿಗಾಗಿ ಉತ್ಸವಗಳನ್ನು ಆಯೋಜಿಸುವುದು.
ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಬ್ರಾಹ್ಮಣ ಯುವಕ-ಯುವತಿಯರಿಗೆ ಪ್ರೋತ್ಸಾಹ ಹಾಗೂ ಸಹಾಯಧನ ಪಾವತಿ.
5. ಕಿರುಸಾಲ ಯೋಜನೆ:
ಸಣ್ಣ ಪುಟ್ಟ ಗೃಹ ಉದ್ಯಮ ಮಾಡುತ್ತಿರುವ ಬ್ರಾಹ್ಮಣ ಸಮುದಾಯಕ್ಕೆ ನೆರವು ನೀಡುವ ಉದ್ದೇಶದಿಂದ ಕಿರು ಸಾಲ ಯೋಜನೆಯನ್ನು ಮಂಡಳಿ ಜಾರಿಗೆ ತಂದಿದೆ. 50 ಸಾವಿರ ರೂ. ಸಾಲ ನೀಡಲಿದ್ದು, ಈ ಸಾಲಕ್ಕೆ ಮಂಡಳಿಯ ವತಿಯಿಂದ 10 ಸಾವಿರ ಸಹಾಯಧನ ನೀಡಲಾಗುವುದು.
6. ಸಾಂದೀಪನಿ ಶಿಷ್ಯವೇತನ ಯೋಜನೆ:
ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ಕೋರ್ಸ್ ಗಳನ್ನು ಕಲಿಯುತ್ತಿರುವ ಅರ್ಹ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಗಳನ್ನು ಪಾವತಿ ಮಾಡುವುದು.
ಭಾರತದಲ್ಲಿ ಹಾಗೂ ಹೊರ ದೇಶಗಳಲ್ಲಿ ಉನ್ನತ ಶಿಕ್ಷಣ ಪಡೆಯಲಿಚ್ಛಿಸುವ ಅರ್ಹ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಅತೀ ಕಡಿಮೆ ಬಡ್ಡಿಯಲ್ಲಿ ಸಾಲ
7. ಆಚಾರ್ಯತ್ರಯ ವೇದ ಶಿಷ್ಯವೇತನ ಯೋಜನೆ :
ಬ್ರಾಹ್ಮಣ ಸಮುದಾಯದ ವೇದ ವಿದ್ಯಾರ್ಥಿಗಳಿಗೆ/ಆಗಮ ವಿದ್ಯಾರ್ಥಿಗಳಿಗೆ /ಆಗಮಿಕರಿಗೆ ಮತ್ತು ಸಂಸ್ಕೃತ ವಿದ್ಯಾರ್ಥಿಗಳಿಗೆ/ವಿದ್ವಾಂಸರಿಗೆ ಶಿಷ್ಯ ವೇತನ ನೀಡುವುದು.
8. ವಿಶ್ವಾಮಿತ್ರ ಪ್ರತಿಭಾ ಪುರಸ್ಕಾರ ಯೋಜನೆ :
ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ಕ್ಷೇತ್ರಗಳ ಬ್ರಾಹ್ಮಣ ಸಾಧಕರಿಗೆ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸುವುದು.
9. ಚಾಣಕ್ಯ ಆಡಳಿತ ತರಬೇತಿ ಯೋಜನೆ :
ಐ.ಎ.ಎಸ್, ಐ.ಪಿ.ಎಸ್, ಐ.ಎಫ್.ಎಸ್, ಐ.ಆರ್.ಎಸ್, ಕೆ.ಎ.ಎಸ್, ಇತ್ಯಾದಿ ಪರೀಕ್ಷೆಗಳ ಪ್ರಾಥಮಿಕ ಹಂತದ ಪರೀಕ್ಷೆ ಉತ್ತೀರ್ಣರಾದ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಮುಖ್ಯ ಪರೀಕ್ಷೆಗಾಗಿ ಉಚಿತ ತರಬೇತಿ ನೀಡುವುದು.
10. ಸನ್ನಿಧಿ ಯೋಜನೆ :
ಅರ್ಹ ಪ್ರಿ ಮೆಟ್ರಿಕ್ ಮತ್ತು ಪೋಸ್ಟ್ ಮೆಟ್ರಿಕ್ ಬ್ರಾಹ್ಮಣ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಪ್ರತ್ಯೇಕ & ಉಚಿತ ಹಾಸ್ಟಲ್ ನಿರ್ಮಾಣ/ ಹಾಸ್ಟೆಲ್ ಸೌಲಭ್ಯ ಕಲ್ಪಿಸುವುದು / ಹಾಸ್ಟಲ್ ಶುಲ್ಕವನ್ನು ಮರು ಪಾವತಿಸುವುದು.
ಬ್ರಾಹ್ಮಣ ಉದ್ಯೋಗಸ್ಥ ಮಹಿಳೆಯರಿಗೆ ಹಾಸ್ಟಲ್ ಗಳ ನಿರ್ಮಾಣ
11. ಸರ್ ಎಂ. ವಿಶ್ವೇಶ್ವರಯ್ಯ ಕೌಶಲ್ಯಾಭಿವೃದ್ಧಿ ಯೋಜನೆ:
ಬ್ರಾಹ್ಮಣರಿಗೆ ಉದ್ಯೋಗ/ಸ್ವಯಂ ಉದ್ಯೋಗ/ಕೌಶಲ್ಯಾಭಿವೃದ್ಧಿಗಾಗಿ ಉದ್ಯೋಗಮೇಳಗಳನ್ನು ಆಯೋಜಿಸುವುದು, ತರಬೇತಿ ಕೇಂದ್ರಗಳನ್ನು ತೆರೆಯುವುದು. ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಚಾರ್ಟೆಡ್ ಅಕೌಂಟೇನ್ಸಿ, ಕಂಪನಿ ಸೆಕ್ರೇಟರಿ ಇನ್ನಿತರ ವೃತ್ತಿಪರ ಪರೀಕ್ಷೆಗಳಿಗೆ ಉಚಿತ ಶಿಕ್ಷಣ / ತರಬೇತಿ.
12. ಬ್ರಾಹ್ಮಣ ಮಹಿಳೆಯರಿಗೆ ಕರಕುಶಲ ವಸ್ತುಗಳ ತಯಾರಿಕೆಗಾಗಿ/ಗುಡಿ ಕೈಗಾರಿಕೆಗಾಗಿ ತರಬೇತಿ, ಸಹಾಯಧನ ಪಾವತಿ ಹಾಗೂ ಮಾರುಕಟ್ಟೆ ನಿರ್ಮಾಣ
13. ಬ್ರಾಹ್ಮಣ ಸ್ವಸಹಾಯ ಸಂಘಗಳ ಸ್ಥಾಪನೆ ಹಣಕಾಸಿನ ನೆರವು
14. ಪುರುಷೋತ್ತಮ ಯೋಜನೆ:
ಸ್ವಯಂ ಉದ್ಯೋಗಕ್ಕೆ ಪ್ರೇರಣೆ ಹಾಗೂ ಸಹಾಯ. ಸ್ವಯಂ ಉದ್ಯೋಗ / ನವೋದ್ಯಮ (Start-ups) ಪ್ರಾರಂಭಿಸಲು ಇಚ್ಛಿಸುವ ಅರ್ಹ ಬ್ರಾಹ್ಮಣ ಉದ್ಯಮಿಗಳಿಗೆ ಆರಂಭಿಕ ಸಹಾಯ ಧನ ನೀಡುವುದು.
ಬ್ರಾಹ್ಮಣರಿಗಾಗಿ ಸಂಶೋಧನೆ ಮತ್ತು ತರಬೇತಿ ಕೇಂದ್ರಗಳನ್ನು ಸ್ಥಾಪಿಸುವುದು.
ಬ್ರಾಹ್ಮಣರಿಗಾಗಿ ಔದ್ಯಮಿಕ ಪೂರ್ವಪಾಲನಾ ಕೇಂದ್ರ
ಇದಾದ ಮೇಲೆ 3% ಜನರಿಗೆ 10% EWS ಮೀಸಲಾತಿ.
ಈಗ ಹೇಳಿ ಯಾರು ಬಿಟ್ಟಿ ಜೀವನ ನಡೆಸುತ್ತಾ ಇರೋದು? ಇವೆಲ್ಲಕ್ಕೆ TAX ಕಟ್ಟುತ್ತಾ ಇರೋದು ಯಾರು? #JustAsking
• • •
Missing some Tweet in this thread? You can try to
force a refresh