ಇತ್ತೀಚೆಗೆ #WhatsApp ನಲ್ಲಿ ಅಪರಿಚಿತ/ಅನಾಮಧೇಯ ಸಂಖ್ಯೆಗಳಿಂದ ವಿಡಿಯೋ ಕರೆಗಳು ಬರುತ್ತಿದ್ದು, ಕರೆ ಸ್ವೀಕರಿಸಿದಾಗ ಬ್ಲಾಂಕ್ ಸ್ಕ್ರೀನ್ ಬರುತ್ತದೆ ಅಥವಾ ಎದುರಿನ ಕರೆಯಲ್ಲಿ ನಗ್ನ ಯುವತಿ ಇರುವುದು ಕಾಣಿಸುತ್ತದೆ. ಕೆಲ ಸೆಕೆಂಡ್ ಗಳ ನಂತರ ಕರೆ ಕಟ್ ಮಾಡಲಾಗುತ್ತದೆ. (1/n)
ಆ ಕರೆಯನ್ನು ಸ್ಕ್ರೀನ್ ರೆಕಾರ್ಡ್ ಮಾಡಿಕೊಂಡು ನಂತರ ಎದುರಿನ ಕರೆಯನ್ನು ಅಶ್ಲೀಲವಾಗಿ ಎಡಿಟ್ ಮಾಡಿ , ಕೆಲ ಸಮಯದ ನಂತರ ಎಡಿಟ್ ಮಾಡಲಾದ ವಿಡಿಯೋಗಳನ್ನು ನಿಮಗೆ ಕಳುಹಿಸಿ ಅಂತಹ ಅಶ್ಲೀಲ ಕರೆಯಲ್ಲಿ ನೀವು ಭಾಗಿಯಾರುವಂತೆ ಬಿಂಬಿಸಲಾಗುತ್ತದೆ. ನಂತರ ಇಂತಿಷ್ಟು ಹಣವನ್ನು ನೀಡಿದರೆ ಮಾತ್ರ ವಿಡಿಯೋ ಡಿಲೀಟ್ ಮಾಡುವುದಾಗಿ ತಿಳಿಸುತ್ತಾರೆ. (2/n)
ಒಂದುವೇಳೆ ಹಣ ನೀಡದಿದ್ದಲ್ಲಿ ಅವುಗಳನ್ನು ನಿಮ್ಮ ಕುಟುಂಬದವರಿಗೆ, ಸ್ನೇಹಿತರಿಗೆ ಕಳುಹಿಸುವುದಾಗಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುವುದಾಗಿ ಬೆದರಿಕೆ ಹಾಕಿ ಅವರು ಕೇಳಿದ ಮೊತ್ತವನ್ನು ನೀಡುವಂತೆ ಬ್ಲಾಕ್ ಮೇಲ್ ಮಾಡುತ್ತಾರೆ. (3/n)
ಮೊದಲು ಸಣ್ಣ ಮೊತ್ತದ ಹಣವನ್ನು ಪಡೆಯುವ ವಂಚಕರು ನಂತರ ಹಂತ ಹಂತವಾಗಿ ಹೆಚ್ಚೆಚ್ಚು ಹಣವನ್ನು ಹಾಕುವಂತೆ ಬೇಡಿಕೆ ಇಡುತ್ತಾರೆ. ಈ ರೀತಿ ನಿಮ್ಮಿಂದ ಹಣ ಕೀಳುವ ಇಂತಹ ಸೈಬರ್ ಅಪರಾಧದ ಪ್ರಕರಣಗಳು ಹೆಚ್ಚು ವರದಿಯಾಗುತ್ತಿವೆ. (4/n)
ಮರ್ಯಾದೆಗೆ/ಘನತೆಗೆ ಅಂಜಿ ದೂರು ನೀಡುವುದಿಲ್ಲ ಎಂದು ವಂಚಕರು ಅರಿತು ಈ ರೀತಿಯ ಅಪರಾಧಿಕ ಕೃತ್ಯಗಳನ್ನು ಎಸಗುತ್ತಿರುವ ಕಂಡುಬರುತ್ತಿವೆ. ಫೇಸ್ ಬುಕ್ ನಲ್ಲೂ ಸಹ ಸುಂದರವಾದ ಹುಡುಗ/ಹುಡುಗಿಯರ ಭಾವಚಿತ್ರವುಳ್ಳ ನಕಲಿ ಖಾತೆಗಳನ್ನು ಸೃಷ್ಟಿಸಿ ಫ್ರೆಂಡ್ಸ್ ರಿಕ್ವೆಸ್ಟ್ ಕಳಿಸುತ್ತಾರೆ. (5/n)
ರಿಕ್ವೆಸ್ಟ್ accept ಮಾಡಿಕೊಂಡ ನಂತರ ಚಾಟ್ ಮಾಡುತ್ತ ವಿಡಿಯೋ ಕರೆ ಮಾಡಿ ಮೇಲೆ ತಿಳಿಸಿದ ರೀತಿಯಲ್ಲಿ ವಂಚನೆ ಎಸಗುತ್ತಾರೆ. ಆದ್ದರಿಂದ ಸಾರ್ವಜನಿಕರು ಯಾವುದೇ ಅನಾಮಧೇಯ ವಿಡಿಯೋ ಕರೆಗಳನ್ನು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಅಪರಿಚಿತ ವ್ಯಕ್ತಿಗಳ ಹೆಸರಿನಲ್ಲಿ ಫ್ರೆಂಡ್ಸ್ ರಿಕ್ವೆಸ್ಟ್ ಸ್ವೀಕರಿಸುವ ಮುನ್ನ (6/n)
ಎಚ್ಚರಿಕೆಯಿಂದ ಇರಲು ತಿಳಿಸಲಾಗಿದೆ. ಇಂತಹ ಯಾವುದೇ ಘಟನೆಗಳು ಸಂಭವಿಸಿದರೆ ತಕ್ಷಣ ಹತ್ತಿರದ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿ. ಈ ಮಾಹಿತಿಯನ್ನು ನಿಮ್ಮವರಿಗೂ ಮತ್ತು ನಿಮ್ಮ ಸ್ನೇಹಿತ ವರ್ಗದವರಿಗೂ ತಿಳಿಸಿ ಜಾಗೃತೆ ಮೂಡಿಸಲು ಕೋರಿಕೆ. @DgpKarnataka #scams#videocall#Beware#CybersecurityNews
(7/7)
• • •
Missing some Tweet in this thread? You can try to
force a refresh