1. ಕರ್ನಾಟಕದಲ್ಲಿ ಸುಮಾರು 820 ಶಿಲಾಯುಗದ ನೆಲೆಗಳು ದೊರೆತಿವೆ, ಅದರಲ್ಲಿ 600 ಸಮಾಧಿಗಳು ಮತ್ತು 220 ವಾಸದ ನೆಲೆಗಳು.
#StoneAgeKarnataka
2. ರಾಯಚೂರಿನ ಲಿಂಗಸೂಗೂರಿನಲ್ಲಿ ಸಿಕ್ಕ ಒಂದು ಶಿಲಾಯುಗದ ಕಲ್ಲಿನ ಕೊಡಲಿ ಕರ್ನಾಟಕದಲ್ಲಿನ ಶಿಲಾಯುಗದ ಮೊದಲ ಅರಕೆ(1842),ಇದನ್ನು ಪತ್ತೆಹಚ್ಚಿದವರು ಕ್ಯಾ.ಮೀಡೋಸ್ ಟೇಲರ್.
3. ರಾಬರ್ಟ್ ಬ್ರೂಸ್ ಪೂಟ್(1834-1912) ಅವರು ಬಳ್ಳಾರಿ ಜಿಲ್ಲೆಯಲ್ಲಿ ಹಲವಾರು ಶಿಲಾಯುಗದ ತಾಣಗಳನ್ನು ಪತ್ತೆಹಚ್ಚುತ್ತಾರೆ, ಅದರಲ್ಲಿ ಮುಖ್ಯವಾದದ್ದು ಸಂಗನಕಲ್ಲು ತಾಣ.
4. ರಾಬರ್ಟ್ ಕೊಲ್ ಅವರು 1869 ರಲ್ಲಿ ಕೊಡಗಿನಲ್ಲಿ ಹಲವಾರು ಶಿಲಾಯುಗದ ಕುರುಹುಗಳನ್ನು ಪತ್ತೆಹಚ್ಚುತ್ತಾರೆ.
thehindu.com/2005/01/10/sto…
#NeolithicKarnataka
5. ಕರ್ನಾಟಕದಲ್ಲಿ ಕಂಚಿನಯುಗದ(BronzeAge) ಬದಲು ಶಿಲಾಯುಗವೇ ಮುಂದುವರೆಯುತ್ತದೆ(~3200-1200BCE) & ಸುಮಾರು 1200 BCE ಹೊತ್ತಿನಲ್ಲಿ ಕಬ್ಬಿಣದಯುಗ ಶುರುವಾಗುತ್ತದೆ.
6. ರಾಬರ್ಟ್ ಬ್ರೂಸ್ ಪೂಟ್ ಅವರು ಹುಣಸಿಗಿಯ ಹಳೆ ಶಿಲಾಯುಗ ತಾಣದ ಬಗ್ಗೆ ಮೊದಲ ಸುಳಿವನ್ನು 1863ರಲ್ಲಿ ನೀಡಿರುತ್ತಾರೆ.
#PaleolithicKarnataka
7. ಹುಣಸಗಿ-ಬೈಚಬಾಳ ತಾಣವು ಸುಮಾರು 500SqKmರಷ್ಟು ದೊಡ್ದದಾದ ಹಳೆ-ಶಿಲಾಯುಗದ ತಾಣ,ಇದರ ವ್ಯಾಪ್ತಿಯಲ್ಲಿರುವ ಇಸಾಂಪುರ ಸುಮಾರು 1.27Million ವರುಶಗಳಶ್ಟು ಹಳೆಯದಾದ ತಾಣ.
8. 1974ರಲ್ಲಿ ಹುಣಸಗಿ-ಬೈಚಬಾಳ ಹಳೆ-ಶಿಲಾಯುಗ ತಾಣದಲ್ಲಿ ಕೆ.ಪದ್ದಯ್ಯ & ವಾಷಿಂಗ್ಟನ್ ಸ್ಮಿತ್ಸನ್ ಯೂನಿವರ್ಸಿಟಿಯ ಜೊತೆಗೂಡಿ ಹಲವಾರು ಕುರುಹುಗಳನ್ನು ಕಂಡುಹಿಡಿಯಲಾಯಿತು.
9. ಇಸಾಂಪುರದಲ್ಲಿ #HomoErectus ಮಾನವನ 1.27MillionYrs ಹಳೆಯದಾದ 2ಹಲ್ಲಿನ ದವಡೆಗಳು ಸಿಕ್ಕಿರುತ್ತವೆ,ESR (ElectronSpinResonance)ನೆರವಿನಿಂದ ಕಂಡುಹಿಡಿಯಲಾಯಿತು Image
10. ತೆಂಕಣ ಏಶ್ಯಾದಲ್ಲಿ ಕೆಮ್ಮಣ್ಣಿನ(Ocher) ಬಳಕೆಯ ಮೊದಲ ಕುರುಹು ಹುಣಸಗಿ&ಎಡಿಯಾಪುರದಲ್ಲಿ ಸಿಕ್ಕಿರುತ್ತದೆ,ಇದರ ಹೊತ್ತು 350,000BCE !
books.google.co.in/books?id=cYoHO…
11. ಹುಣಸಗಿ-ಬೈಚಿಬಾಳ ಶಿಲಾಯುಗದ(Middle-UpperPaleolithic)ತಾಣದಲ್ಲಿ ಬಳಸಿರುವ ಕಲ್ಲಿನ ಸಲಕರಣೆಗಳು(350K-174K BCE)ಚೂಪುಕಲ್ಬಳಕೆ(Acheulean)ಬಗೆಗೆ ಸೇರಿದ್ದಾಗಿದೆ Image
12. ಕಿಬ್ಬನಹಳ್ಳಿಯಲ್ಲಿ ದೊರೆತ ಒಂದು ಕೈಕೊಡಲಿಯು ಪ್ರಾನ್ಸಿನಲ್ಲಿ ಹಳೆಶಿಲಾಯುಗದ ಆಚೀಲಿಯನ್ ಕಲ್ಬಳಕೆಯನ್ನು(Acheulean Culture)ಹೋಲುತ್ತದೆ.
#PaleolithicKarnataka
13. ನಡುಶಿಲಾಯುಗದ(Mesolithic~10,000-~3,000 BCE) ಕುರುಹುಗಳು ಉಡುಪಿ ಜಿಲ್ಲೆಯ ಮಾಸಿಕೆರೆ, ಆವರ್ಸೆ, ಗಾವಳಿ, ಗುಡ್ಡೆಟ್ಟು, ಕೊಳನಕಲ್ಲು, ನಂಚೂರುಗಳಲ್ಲಿ ಸಿಕ್ಕಿವೆ.
14. ಉಡುಪಿ ಜಿಲ್ಲೆಯ ಗಾವಳಿಯಲ್ಲಿ ನಡುಶಿಲಾಯುಗದ(Mesolithic~10K-3K BCE)ಮೂರ್ಬದಿ ಆಕೃತಿಯ(Triangle)ಡಾಲರೈಟ್ (ಉರಿಗಲ್ಲು/Dolerite)ಕಲ್ಲಿನ ಸಲಕರಣೆಗಳು ಸಿಕ್ಕಿವೆ.
15.ಕರ್ನಾಟಕದ ಶಿಲಾಯುಗ-ಕಬ್ಬಿಣಯುಗದ(#StoneAgeKarnataka-#IronAgeKarnataka,1.2M BP-300 BCE)ಕುರುಹುಗಳು ಹೆಚ್ಚಾಗಿ ಬಡಗಣ & ಮೂಡಣ-ಕರ್ನಾಟಕದಲ್ಲಿ ಕಂಡುಬರುತ್ತವೆ
16.ಚಿತ್ರದುರ್ಗದ ಪುರ್ಲಹಳ್ಳಿಯಲ್ಲಿ ನಡುಶಿಲಾಯುಗಕ್ಕೆ(#Mesolithic,10,000-3,000BCE) ಸೇರಿದ ಹಲವಾರು ಬೆಣಚು ಕಿರುಗಲ್ಲಿನ(#Microlith)ಸಲಕರಣೆಗಳು ಸಿಕ್ಕಿರುತ್ತವೆ. Image
17.ಜಾಲಹಳ್ಳಿಯಲ್ಲಿ ನಡುಶಿಲಾಯುಗಕ್ಕೆ(#Mesolithic,~10K-3KBCE)ಸೇರಿದ ಬಿಳಿ ಹರಳುಗಲ್ಲಿನಿಂದ(Milky Quartz)ಮಾಡಿದ ಕಿರುಗಲ್ಲಿನ(#Microliths)ಸಲಕರಣೆಗಳು ಸಿಕ್ಕಿವೆ
18. ಕರ್ನಾಟಕದಲ್ಲಿ ನಡುಶಿಲಾಯುಗದ (#Mesolithic Era, ~10,000-3000 BCE) ಇತರ ತಾಣಗಳೆಂದರೆ ಬೆಳಗಾವಿ ಜಿಲ್ಲೆಯ ಸಪ್ತಸಾಗರ, ವಿಜಯಪುರ ಜಿಲ್ಲೆಯ ಸಾಲವಾಡಗಿ,etc.
19. ತೆಂಕಣ ಭಾರತದ ಹಳ್ಳಿ ಬದುಕಿನ ಮೊದಲ ಕುರುಹು ಸಿಕ್ಕಿರುವುದು ಬಳ್ಳಾರಿಯ #ಸಂಗನಕಲ್ಲು ಎಂಬಲ್ಲಿ,ಇದರ ಹೊತ್ತು ~3000 BCE,ಇದು ಹೊಸಶಿಲಾಯುಗಕ್ಕೆ(#Neolithic)ಸೇರಿದೆ.
20.ಸಂಗನಕಲ್ಲಿನಬಗ್ಗೆ ಮೊದಲು ಅರಕೆ ಮಾಡಿದವರು ಮೈಸೂರ್ ಜಿಯೋಲಾಜಿಕಲ್ ಡಿಪಾರ್ಟ್ಮೆಂಟ್ ನ ಬ್ರಿಟಿಶ್ ಪಳೆಯುಳಿಕೆಯರಿಗ ಬ್ರೂಸ್ ಪೂಟ್(1860)&ನಂತರದಲ್ಲಿ ವಿಲಿಯಮ್ ಪ್ರೇಸರ್
21.#ಸಂಗನಕಲ್ಲು(3,000-1,500BCE)ಇಡೀ ತೆಂಕಣ ಭಾರತದಲ್ಲೇ ಹೆಚ್ಚು ಹೊಸಶಿಲಾಯುಗದ ಕಲ್ಲಿನ ಸಲಕರಣೆಗಳನ್ನು(StoneTools)ಮಾಡುವ ತಾಣವಾಗಿತ್ತು
deccanherald.com/content/28818/…
22. ಸಂಗನಕಲ್ಲಿನಲ್ಲಿ (~3,000-1,500 BCE) ಹೊಸಶಿಲಾಯುಗದ (#Neolithic Era) ಪಳೆಯುಳಿಕೆಗಳು ಸಿಕ್ಕಿರುವ ತಾಣವು ಸುಮಾರು 1,000 ಎಕರೆಗಳಷ್ಟು ಹರಡಿಕೊಂಡಿದೆ.
23.ಸಂಗನಕಲ್ಲಿನಲ್ಲಿ ಹಸು,ಆಡು ಸಾಕಾಣೆ,ರಾಗಿ&ಇತರ ಬೆಳೆಗಳ ಕುರುಹುಗಳು ಕಂಡುಬಂದಿವೆ,ಇದು ಹೊಸಶಿಲಾಯುಗದಿಂದ ಕಬ್ಬಿಣದಯುಗದವರೆಗೂ(~3000-1200-300 BCE)ಮುಂದುವರೆಯುತ್ತದೆ
24.ಸಂಗನಕಲ್ಲು ತಾಣದಲ್ಲಿ ಹೊಸಶಿಲಾಯುಗದ(~3000BCE)ನುಣುಪಾದ ಕಲ್ಲಿನ ಕೊಡಲಿಗಳು&ಬಂಡೆಗಳನ್ನು ಕೆತ್ತಿ ಅಲ್ಲಿ ಬೇಳೆಕಾಳುಗಳನ್ನು ಅರೆಯುವಂತ ಕಲ್ಲಿನೇರ್ಪಾಡುಗಳು ಸಿಕ್ಕಿವೆ Image
25.ಬಳ್ಳಾರಿಯ ಕುಪ್ಪಗಲ್ಲಿನಲ್ಲಿ ಹೊಸಶಿಲಾಯುಗ-ಕಬ್ಬಿಣಯುಗದ ಹೊತ್ತಿನ(~-3000-300BCE) ನೂರಾರು ಕಲ್ಲಿನ ಮೇಲೆ ಕೊರೆದು ಬಿಡಿಸಿದ(#Petroglyphs)ಚಿತ್ರಗಳು ಕಂಡುಬಂದಿವೆ. Image
26.ಕುಪ್ಪಗಲ್ಲಿನಲ್ಲಿ ಕಂಡುಬಂದ ಹೊಸಶಿಲಾಯುಗ-ಕಬ್ಬಿಣಯುಗಕ್ಕೆ (#StoneAge-#IronAge) ಸೇರಿದ ಬಂಡೆಯಮೇಲೆ ಕೆತ್ತಿದ ಚಿತ್ರಗಳ (#Petroglyphs) ಹೊತ್ತುಪಟ್ಟಿ ಹೀಗಿದೆ. Image
27. ಕುಪ್ಪಗಲ್ಲು-ಸಂಗನಕಲ್ಲಿನ ನಡುವಿನ #ಹಿರೇಗುಡ್ಡ'ದಲ್ಲಿ ಕಲ್ಲು-ಕೊಡಲಿ/ಸಲಕರಣೆಗಳನ್ನು ಮಾಡುವ ಹಲವಾರು ಕುರುಹುಗಳು (1700-1250 BCE) ದೊಡ್ಡಮಟ್ಟದಲ್ಲಿ ಕಂಡುಬಂದಿವೆ. Image
28.ಕುಪ್ಪಗಲ್ಲಿನಲ್ಲಿ(~3000BCE)ಹೊಸಶಿಲಾಯುಗದ ಸುಮಾರು 40 ಮಂದಿ ಇರುವ ಸಾಲು & ಆನೆ,ಹುಲಿ,ನವಿಲು,ಕೊಕ್ಕರೆ,ಎತ್ತಿನ ಚಿತ್ರಗಳು ಕಂಡುಬಂದಿವೆ
karnatakatravel.blogspot.in/2013/12/prehis… Image
29.ಕುಪ್ಪಗಲ್ಲಿನ ಹೊಸಶಿಲಾಯುಗ(#Neolithic)ತಾಣದಲ್ಲಿ ಪಳೆಯುಳಿಕೆಯರಿಗ ಎಪ್.ಪೆವೆಟ್ ಅವರು 1892ರಲ್ಲಿ ಕಲೆಹಾಕಿದ ಕಲ್ಲಿನಮೇಲೆ ಬಿಡಿಸಿದ ಚಿತ್ರಗಳ(#Petroglyphs)ಮಾದರಿ Image
30.ಬಾದಾಮಿಯ ಹತ್ತಿರದ ಶಿಡ್ಲಪಡಿ ಗುಹೆಗಳಲ್ಲಿ ಶಿಲಾಯುಗದ(#Neolithic) ಮಂದಿ ನೆಲೆನಿಂತ ಹಲವಾರು ಕುರುಹುಗಳು & ಮಡಕೆಯ ಬಳಕೆ,ಕಲ್ಲಿನ ಆಯುಧಗಳು(1700 BC) ಕಂಡುಬಂದಿವೆ. Image
31.1856ರಲ್ಲಿ ಮೊಗ್ಲಿಂಗ್ ಅವರು(Moegling) ವಿರಾಜಪೇಟೆ ತಾಲೂಕಿನಲ್ಲಿ ಹಲವಾರು ದೊಡ್ಡಕಲ್ಲಿನ(#Megaliths)ನೆಲೆಗಳನ್ನು ಅರಕೆಮಾಡುತ್ತಾರೆ.
mangalorean.com/megalithic-bur…
32.ಸೋಮವಾರಪೇಟೆ-ಅರಶಿನಗುಪ್ಪೆ&ಹೆಗ್ಗಡೆಹಳ್ಳಿಯಲ್ಲಿ ದೊಡ್ಡಕಲ್ಲುಗಾಲದ(Megalithic,1200-600BCE)ಹಲವಾರು ಮಡಕೆ ಕುರುಹುಗಳುಸಿಕ್ಕಿರುತ್ತವೆ
google.co.in/amp/m.prajavan… Image
33.ಕರ್ನಲ್ ಮೆಕೆಂಜಿಯವರು ಹಾಸನಜಿಲ್ಲೆಯಲ್ಲಿ ಶಿಲಾಯುಗದ ಕಲ್ಲುಸುತ್ತಗಳು(#CairnsCircle) & ನಿಲುವುಗಲ್ಲುಗಳ(#Menhirs) ಕುರುಹುಗಳನ್ನು 1873ರಲ್ಲಿ ಅರಕೆಮಾಡುತ್ತಾರೆ.
34. ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಯ ಕೆಲವು ಶಿಲಾಯುಗದ (#StoneAge) ತಾಣಗಳು, ಈ ತಾಣಗಳು ದೊಡ್ಡಕಲ್ಲುಗಾಲದ ತಾಣಗಳಾಗಿವೆ (#Megalithic Sites) ಕೂಡ. Image
35. ಕರ್ನಾಟಕದಲ್ಲಿ ಶಿಲಾಯುಗದ ತಾಣಗಳು ನೂರಾರಿವೆ,ಉದಾಹರಣೆಗೆ ನ್ಯಾಮತಿ,ಸುರಹೊನ್ನೆ,ಸಾಸಿವೆಹಳ್ಳಿ,ಚಿಕ್ಕಬಸೂರು,ಸಾಲಬಾಳು,ನಿಸ್ಕಲ್,ಗೆದ್ಲಹಳ್ಳಿ,ಕಟ್ಟೇಪುರ,ಕುಡತಿನಿ,Etc
36.ಬೂದಿಗುಡ್ಡೆಗಳನ್ನು (#Ashmounds) ಹಾಕುವ ಶಿಲಾಯುಗದ ಸಂಸ್ಕೃತಿ ಕರ್ನಾಟಕ ಪ್ರದೇಶದಲ್ಲಿ ಕಾಣಿಸಿಕೊಂಡವು (2500 BCE), ನಂತರದಲ್ಲಿ ತಮಿಳುನಾಡಿನಲ್ಲಿ ಮುಂದುವರೆಯಿತು. Image
37. ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ಶಿಲಾಯುಗದ ಹೊಂಡದ ನೆಲೆಯ (#PitDwelling) ಕುರುಹು ಸಿಕ್ಕಿದೆ, ಇದರ ಹೊತ್ತು ಸುಮಾರು 1600-1500 BCE !
thehindu.com/2005/12/09/sto… Image
38.ಉಡುಪಿ ಜೋಗಿಬೆಟ್ಟಿನಲ್ಲಿ ಹೊಸಶಿಲಾಯುಗದ 3 ಕಲ್ಲಿನ ಕೊಡಲಿಗಳು& ಜಿಲ್ಲೆಯಲ್ಲಿ 25ಕ್ಕೂ ಹೆಚ್ಚು ಶಿಲಾಯುಗದಗೋರಿಗಳನ್ನು ಪತ್ತೆಹಚ್ಚಲಾಗಿದೆ
docs.google.com/file/d/0B5Gbas… Image
39.ಬಳ್ಳಾರಿ ಜಿಲ್ಲೆಯ ಬೆಳಗಲ್ ಒಂದು ಶಿಲಾಯುಗದ ಮಂದಿಯನೆಲೆಯಾಗಿದ್ದು,ಇಲ್ಲಿ ಹಲವಾರು ಕಲ್ಲಿನ ಸಲಕರಣೆಗಳು&ಮಡಕೆಚೂರುಗಳ ಸುಳಿವಿಗಳುಸಿಕ್ಕಿವೆ
shodhganga.inflibnet.ac.in/bitstream/1060…
40. ತಲಕಾಡಿನಲ್ಲಿ ಶಿಲಾಯುಗದ (#Neolithic) ಕಲ್ಲಿನ ಕೊಡಲಿಗಳು ಕಂಡುಬಂದಿವೆ,ಇಲ್ಲಿ ಬೂದುಬಣ್ಣದ ಮಡಕೆ ಚೂರುಗಳೂ(#Pottery) ಕೂಡ ಕಂಡುಬಂದಿವೆ(ResearchYr:1994-1996)
41.ಪಳೆಯುಳಿಕೆಯರಿಗ ಕೆ.ಪದ್ದಯ್ಯರ 1965-6ರ ಶೊರಾಪುರದ ದೋಅಬ್ ನ ಅರಕೆಯಲ್ಲಿ ಶಿಲಾಯುಗದ 11 ಬೂದಿದಿಬ್ಬಗಳು(Ashmound) & 8 ನೆಲೆಗಳು,ಮಡಕೆಚೂರುಗಳ ಕುರುಹುಗಳು ಸಿಕ್ಕಿವೆ
42.ಶಿಲಾಯುಗದ ಹೊತ್ತಿನಲ್ಲಿ ಕೈ/ಗಾಲಿ ಬಳಸಿ ಮಡಕೆ ಮಾಡುತ್ತಿದ್ದರು(Hand/Wheel made #Pottery), ಕರ್ನಾಟಕದ ಹಲತಾಣಗಳಲ್ಲಿ ಸಿಕ್ಕ ಕುರುಹುಗಳಲ್ಲಿ ಮಡಕೆಯ ಮಾಡಿದ ಬಗೆ
👇 Image
43.ಪಿಕ್ಲಿಹಾಳದಲ್ಲಿ (~2700 BCE) ಚಿತ್ರಗಳಿಂದ ಅಲಂಕರಿಸಿದ ಕಂದುಬಣ್ಣದ ಮಡಕೆಗಳು,ಕರಿಗಲ್ಲಿನ ಮಡಕೆಗಳು,ಹರಳುಗಲ್ಲು ಸಲಕರಣೆಗಳು,ಕಲ್ಲಿನಚಿತ್ರಗಳು,ಸಮಾಧಿಗಳು ದೊರೆತಿದೆ. Image
44.ಪಿಕ್ಲಿಹಾಳ & ಮಸ್ಕಿ ಶಿಲಾಯುಗದ ತಾಣದಲ್ಲಿ ಕಲ್ಲುಕೊಡಲಿ,ಬಾಚಿ,ಉಳಿ,ಉಂಗುರ ಕಲ್ಲುಗಳು ಸಿಕ್ಕಿವೆ,ಇವುಗಳನ್ನು ಮಾಡಲು ಡೈರ್,ಡಾಲರೈಟ್ ಕಲ್ಲುಗಳನ್ನು ಬಳಸಲಾಗುತ್ತಿತ್ತು.
45.ಪಿಕ್ಲಿಹಾಳ & ಮಸ್ಕಿ ತಾಮ್ರಯುಗದ(#Chalcolithic,1300-800 BCE) ನೆಲೆಗಳಾಗಿವೆ ಕೂಡ,ಇಲ್ಲಿ ಸಿಕ್ಕಿರುವ ಕುರುಹುಗಳ ಹೊತ್ತನ್ನು #Carbon14 ಬಳಸಿ ಕಂಡುಹಿಡಿಯಲಾಗಿದೆ
46.ಪಿಕ್ಲಿಹಾಳದಲ್ಲಿ ದೊಡ್ಡಕಲ್ಲುಗಾಲದ (#Megalithic) ನೆಲೆಗಳಿವೆ, ಮಸ್ಕಿಯಲ್ಲಿ ದೊಡ್ಡಕಲ್ಲುಗಾಲದ ಮಡಕೆ,ಮಣಿಗಳು & 5 ರೀತಿಯ ಕಲ್ಗೋರಿಗಳು (#Dolmen) ಕಂಡುಬರುತ್ತವೆ.
47. ಮಸ್ಕಿ ಶಿಲಾಯುಗತಾಣದಲ್ಲಿ ಗೂಳಿ,ಸಾರಂಗ,ಆನೆ,ಹುಲಿ,ಮಂದಿಯ ಚಿತ್ರಗಳಿವೆ,ಇವುಗಳು ಆ ಹೊತ್ತಿನ ಮಂದಿಯ ಮಂದಿಯ ಬಗ್ಗೆ ಬೆಳಕು ಚೆಲ್ಲುತ್ತವೆ.
prajavani.net/news/article/2…
48.ಮಸ್ಕಿಯಲ್ಲಿ(~3000 BCE) ನಸುಗೆಂಪು,ಕೆಂಪು ಬಣ್ಣ,ಬೂದು ಬಣ್ಣ,ಕಪ್ಪುಬಣ್ಣದ ಮಡಕೆಗಳು ಕಂಡುಬಂದಿವೆ,ಈ ಕುರುಹುಗಳು ನಡುಗಾಲದವರೆಗೂ(MedievalPeriod)ಮುಂದುವರೆಯುತ್ತದೆ Image
49.ಮಸ್ಕಿಯಲ್ಲಿ ಮಂದಿ ನೆಲೆನಿಂತ 3 ಹಂತದ ಕುರುಹುಗಳು
ಹೊಸಕಲ್ಲುಗಾಲ(Neolithic3000-1200BCE)
ಕಬ್ಬಿಣಗಾಲ(IronAge1200-300BCE)
ನಡುಹೊತ್ತು(Medieval500-1600CE)
50.ಮಸ್ಕಿಯಲ್ಲಿ ಕಲ್ಲುಗಾಲ-ಕಬ್ಬಿಣಗಾಲದ ಕುಲುಮೆಗಳು (Smelting Furnaces), ಅದಿರಿನ ಕಿಟ್ಟ (Ore/Metal Slag) & ಹರಳುಗಲ್ಲುಗಳ (Carnelian) ಕುರುಹುಗಳು ದೊರೆತಿವೆ.
51.ಚಿತ್ರದುರ್ಗದ ಬ್ರಹ್ಮಗಿರಿ ಹೊಸಕಲ್ಲುಗಾಲದ(Neolithic)ತಾಣವನ್ನು ಮೊದಲು ಅಗೆತದ ಅರಕೆ ಮಾಡಿದವರು ಪಳೆಯುಳಿಕೆಯರಿಗ M.H ಕೃಷ್ಣ (1940),ನಂತರದಲ್ಲಿ ಮಾರ್ಟಿಮರ್ ವೀಲರ್
52.ಬ್ರಹ್ಮಗಿರಿಯ ನೆಲೆಯ ಮೂರು ಬಗೆಗಳು
1ಹೊಸಕಲ್ಲುಗಾಲ-ತಾಮ್ರಗಾಲ(#Neolithic-#Chalcolithic)
2ದೊಡ್ಡಕಲ್ಲುಗಾಲ(#Megalithic)
3ಹಿಂದಣಹಿನ್ನಡವಳಿ(#EralyHistoric)
53.ಬ್ರಹ್ಮಗಿರಿಯಲ್ಲಿ ಹೊಸಕಲ್ಲುಗಾಲದಿಂದ-ಹೊಸ ಹೊತ್ತಿನವರೆಗೆ (#Neolithic-#MedievalPeriod,2700 BCE-500 CE) ಮಂದಿ ನೆಲೆ ನಿಂತ ಎಲ್ಲಾ ಕುರುಹುಗಳು ಕಾಣಸಿಗುತ್ತವೆ
54.ಬ್ರಹ್ಮಗಿರಿಯ ನೆಲೆಯಲ್ಲಿ ಸಿಕ್ಕಿರುವ ಕುರುಹುಗಳು (#Neolithic-#IronAge-#MedievalPeriod ~2700 BCE - ~1200 CE). Image

• • •

Missing some Tweet in this thread? You can try to force a refresh
 

Keep Current with ನಮ್ HISTORY❄

ನಮ್ HISTORY❄ Profile picture

Stay in touch and get notified when new unrolls are available from this author!

Read all threads

This Thread may be Removed Anytime!

PDF

Twitter may remove this content at anytime! Save it as PDF for later use!

Try unrolling a thread yourself!

how to unroll video
  1. Follow @ThreadReaderApp to mention us!

  2. From a Twitter thread mention us with a keyword "unroll"
@threadreaderapp unroll

Practice here first or read more on our help page!

Did Thread Reader help you today?

Support us! We are indie developers!


This site is made by just two indie developers on a laptop doing marketing, support and development! Read more about the story.

Become a Premium Member ($3/month or $30/year) and get exclusive features!

Become Premium

Too expensive? Make a small donation by buying us coffee ($5) or help with server cost ($10)

Donate via Paypal Become our Patreon

Thank you for your support!

Follow Us on Twitter!