Writer, ಬರಹಗಾರ, ಕನ್ನಡ ಪರ ಚಿಂತನೆ.
My Facebook Profile:
https://t.co/z74beAH0eL…
Mar 28 • 4 tweets • 1 min read
೧/೪
ಭಾರತೀಯ ಜನತಾ ಪಕ್ಷದವರು ಭಾರತೀಯ ಎಂದರೆ ಅದು ಕನ್ನಡವಿರೋಧಿ ಅಂದುಕೊಂಡಿರುವ ಹಾಗಿದೆ. ಹಿಂದೆ ನಮ್ಮ ಮೆಟ್ರೋ ಹಿಂದೀ ಬೇಡ ಚಳವಳಿಯ ಕಾಲದಿಂದ ಹತ್ತನೇ ತರಗತಿ ಅಂಕಪಟ್ಟಿಯಿಂದ ಹಿಂದೀ ಕೈಬಿಡುವವರೆಗಿನ ಎಲ್ಲಾ ಕನ್ನಡ ಪರ ನಿಲುವನ್ನು ವಿರೋಧಿಸುತ್ತಲೇ ಬಂದಿದ್ದಾರೆ. ಸದಾ ಇವರ ಸಿದ್ಧಾಂತವೇ ಕನ್ನಡ ವಿರೋಧಿ ಎನ್ನುವಂತೆ ನಡೆದುಕೊಳ್ಳುತ್ತಾರೆ..
೨/೪
ತಿರುವಳ್ಳುವರ್ ಪ್ರತಿಮೆ ಸ್ಥಾಪನೆ ವಿರೋಧ, ಮೆಟ್ರೋಲಿ ಹಿಂದೀ ಬೇಡ ವಿರೋಧ, ತ್ರಿಭಾಷಾ ನೀತಿ ಸಾಕು ಎಂದರೆ ವಿರೋಧ.. ನಂದಿನಿ ಹಾಲು ಅಮೂಲ್ ಹಾಲು ಗಲಾಟೆಯಲ್ಲಿ ವಿರೋಧ.. ಕನ್ನಡ ಬಾವುಟಕ್ಕೆ ವಿರೋಧ..
ಬಹುಶಃ ಇವರಿಗೆ ಕನ್ನಡಪರ ಅನ್ನೋದು ದೇಶದ್ರೋಹ ಎನ್ನುವ ಪಾಠ ಆಗಿದೆ ಅನ್ನಿಸುತ್ತೆ.
ಅರೆರೆ.. ಇವರು ಕನ್ನಡಪರವಾಗಿ ಏನೂ ಮಾಡಿಲ್ವಾ ಅನ್ನಬೇಡಿ.
Sep 26, 2025 • 19 tweets • 2 min read
೧/ ೧೯
ಕರವೇಯ ಕಲಿಗಳು ನಿನ್ನೆ ಯಾವ ಉಪಸಮಿತಿಯ ಸಭೆಯನ್ನು ಪ್ರತಿಭಟಿಸಿದರೋ, ಆ ಸಮಿತಿಯ ಒಂಬತ್ತನೇ ವರದಿ(೨೦೧೧)ಯ ೧೫ನೇ ಅಧ್ಯಾಯದಲ್ಲಿ ನೀಡಿರುವ ಸಲಹೆಗಳನ್ನು ನೋಡಿ:
೯. ಕರ್ನಾಟಕದಲ್ಲಿ (ಸಿ ರಾಜ್ಯಗಳ) ಅಧಿಕಾರಿಗಳಿಗೆ ಮೊದಲು ಹಿಂದೀ ತರಬೇತಿ ನೀಡಬೇಕು.
೧೧. ಕಚೇರಿಯ ಅತ್ಯಂತ ಹಿರಿಯ ಅಧಿಕಾರಿಗೆ ಹಿಂದೀ ಬಳಕೆಯ ಮೇಲ್ವಿಚಾರಣೆಯ ಹೊಣೆ ಇರಬೇಕು.
೨/ ೧೯
೧೨. ತಡಮಾಡದೆ ಎಲ್ಲಾ ಕಚೇರಿಗಳಲ್ಲಿ ಹಿಂದೀ ಅಧಿಕಾರಿ ಹುದ್ದೆಯನ್ನು ತುಂಬಬೇಕು
೧೫. ಪ್ರತಿ ನೌಕರನಿಗೆ ಹಿಂದೀ ಬಳಕೆಗೆ ಗುರಿ ನೀಡಬೇಕು ಮತ್ತು ಎಷ್ಟು ಬಳಸಿದ್ದಾರೆ ಎಂದು ಅಳೆಯಬೇಕು. ಅದನ್ನು ನೌಕರರ ವಾರ್ಷಿಕ ಗುಪ್ತ ವರದಿಯಲ್ಲಿ ಸೇರಿಸಬೇಕು.
May 29, 2023 • 8 tweets • 1 min read
೧/ ೮
ನಿನ್ನೆ ಬನವಾಸಿ ಬಳಗದ ವತಿಯಿಂದ ಮಾತುಕತೆ ಕಾರ್ಯಕ್ರಮ ನಡೆಸಿದೆವು. "ಕರ್ನಾಟಕದ ಕಲಿಕೆ ಏರ್ಪಾಟು ಮತ್ತು ಸವಾಲುಗಳು" ಎನ್ನುವ ವಿಷಯ ಕುರಿತು ಮಾತಾಡಿದೆವು.. ಕೆಲವರಂತೂ ಈ ಕಾರ್ಯಕ್ರಮಕ್ಕಾಗಿ ದೂರದ ಊರುಗಳಿಂದ ಬಂದಿದ್ದರು.. ಬಂದಿದ್ದ ಎಲ್ಲಾರಿಗೂ ಧನ್ಯವಾದಗಳು.. ಕಾರ್ಯಕ್ರಮದ ಸಾರವನ್ನು ಹಂಚಿಕೊಳ್ಳಲು ಬಯಸುತ್ತೇನೆ.
೨/೮
ಕರ್ನಾಟಕದ ಕಲಿಕೆಯ ಏರ್ಪಾಟು ೧೯೭೭ರ ತನಕ ತಕ್ಕಮಟ್ಟಿಗೆ ಸ್ವತಂತ್ರವಾಗಿ ಇತ್ತು. ಭಾರತ ಸರ್ಕಾರದ ಮೂಗುತೂರಿಸುವಿಕೆ ೧೯೬೮, ೧೯೮೫, ೨೦೨೦ರ ರಾಷ್ಟ್ರೀಯ ಶಿಕ್ಷಣ ನೀತಿಗಳ ಮೂಲಕ ನಡೆದಿದೆ.. ನಮ್ಮ ನಾಡಿನ ಏರ್ಪಾಟು ಎದುರಿಸುತ್ತಾ ಇರುವ ಇಂದಿನ ಸವಾಲುಗಳಿಗೆ ಭಾರತ ಸರ್ಕಾರವೇ ಕಾರಣವಾಗಿರುವುದು ಸತ್ಯ.
Jan 22, 2022 • 12 tweets • 2 min read
1/n ಕನ್ನಡಕ್ಕೆ ದೇಣಿಗೆ ಬೇಕು ಅಂದ್ರೆ ಕೇಳಿ, ಕನ್ನಡ ವಿವಿಗೆ ಅನುದಾನ ಬೇಕು ಅಂದ್ರೆ ಕೇಳಿ.. ಕನ್ನಡಕ್ಕೆ ಬಿಕ್ಷೆ ಬೇಕು ಅಂದ್ರೆ ಕೇಳಿ.. ಸಂಸ್ಕೃತ ವಿವಿ ಯಾಕೆ ವಿರೋಧ ಮಾಡ್ತೀರಾ.. ಅನ್ನುವ ಮಾತು ಕೇಳುತ್ತಾ ಇದೆ.
ಹೌದಲ್ವಾ ಅಂತಾ ಮೇಲ್ನೋಟಕ್ಕೆ ಅನ್ನಿಸುವ ಸಾದು ಸಜ್ಜನರ ಮಾತುಗಳಂತೆ ಕೇಳುವ ಇವುಗಳ ಹಿಂದಿನ ಕುಟಿಲತೆ ನಮ್ಮವರಿಗೆ ತಿಳಿಯಬೇಕು.
2/n ಕರ್ನಾಟಕದ ಸರ್ಕಾರ ಕನ್ನಡ ನಾಡಿನ, ಕನ್ನಡ ಜನರ ಸರ್ಕಾರ. ಇದರ ಮೊದಲ ಆದ್ಯತೆ ಕನ್ನಡಕ್ಕೆ ಇರಬೇಕು. ನಂತರ ಕನ್ನಡ ನೆಲದ ನುಡಿಗಳು.. ನಂತರ ಕನ್ನಡದ ಬೆಳವಣಿಗೆಗೆ ಅನುಕೂಲ ಆಗುವ ನುಡಿಗಳನ್ನು ಪೊರೆಯುವ ಕೆಲಸ..
Jan 17, 2022 • 14 tweets • 2 min read
1/n ಪ್ರತಾಪ್ ಸಿಂಹ ಅವರು..
ಹುಟ್ಟು, ನಾಮಕರಣ, ಉಪನಯನ, ಮದುವೆ, ಪೂಜೆ, ತಿಥಿ ಎಲ್ಲದರಲ್ಲೂ ಸಂಸ್ಕೃತ ಮಂತ್ರಗಳಿವೆ. ಹಾಗಾಗಿ ಕನ್ನಡ ಮತ್ತು ಸಂಸ್ಕೃತವನ್ನು ಬೇರೆ ಮಾಡಬೇಡಿ ಅಂದಿದ್ದಾರೆ.
ನಾರಾಯಣ ಗೌಡರು ತಮ್ಮ ಹೆಸರಿಂದ ಸಂಸ್ಕೃತ ಬಿಡಲು ಆಗುತ್ತಾ, ಎಲ್ಲಾ ಭಾಷೆಗಳಲ್ಲೂ ಸಂಸ್ಕೃತ ಪದಗಳಿವೆ ಹಾಗಾಗಿ ಅದು ಎಲ್ಲಾ ಭಾಷೆಗಳ ತಾಯಿ ಎಂದಿದ್ದಾರೆ.
2/n ಟಿಪ್ಪು ಜಯಂತಿ ಯಾಕೆ ವಿರೋಧಿಸಲಿಲ್ಲ.. ಉರ್ದು ವಿವಿ ಯಾಕೆ ವಿರೋಧಿಸಲಿಲ್ಲ, ಬರೀ ಮೋದಿ ದ್ವೇಷ ಅಂತೆಲ್ಲಾ ಅಂದಿದ್ದಾರೆ!
ಇವರಿಗೆ ಯಾವುದರ ವಿರೋಧವನ್ನು, ಯಾಕಾಗಿ ಮಾಡಲಾಗುತ್ತಿದೆ ಎನ್ನುವುದೇ ಸ್ಪಷ್ಟವಾಗಿಲ್ಲ!
300 ಕೋಟಿ, ನೂರಾರು ಎಕರೆ ನೆಲ ಕೊಟ್ಟು ಸಂಸ್ಕೃತ ವಿ.ವಿ ಮಾಡುವುದರ ವಿರುದ್ಧ ಧ್ವನಿ ಎತ್ತಿದರೆ ಅದು ಸಂಸ್ಕೃತ ದ್ವೇಷವೇ?
Jan 14, 2022 • 16 tweets • 2 min read
1/n ಕನ್ನಡ ಮಕ್ಕಳ ಕಲಿಕೆಯಲ್ಲಿ ಬೆರೆಸಿರುವ ಸಂಸ್ಕೃತ ಪದಗಳು ಗೊತ್ತಿಲ್ಲದೆ ಆಗಿರುವ ತಪ್ಪಲ್ಲ.. ಇಡೀ ದೇಶಕ್ಕೆ ಒಂದೇ ಪಾರಿಭಾಷಿಕ ಪದಗಳು ಇರಬೇಕೆನ್ನುವ ಮರುಳುತನ/ ಅದು ತಂದ ದುರುಳತನ ಇದರ ಹಿಂದಿನ ಕಾರಣ.. ಇಂಥಾ ಮರುಳು ಹುಸಿ ರಾಷ್ಟ್ರೀಯತೆಯ ಮತ್ತೊಂದು ಕವಲು..
2/n ನಮ್ಮತನ ಉಳಿಯಬೇಕು ಅದೇ ರಾಷ್ಟ್ರೀಯತೆ ಅನ್ನುವ ದಿಟ ಇವರಿಗೆ ಅರ್ಥವಾಗೋಲ್ಲ.. ಕಡೆಗೆ ನಮ್ಮ ಮಕ್ಕಳ ಓದು ಕಬ್ಬಿಣದ ಕಡಲೆ ಆಗಬಾರದು ಎನ್ನುವ ಕಾಳಜಿಯೂ ಇವರಿಗೆ ಇಲ್ಲವಾದದ್ದು ದುರಂತ!
Dec 4, 2021 • 12 tweets • 2 min read
1/n ಕನ್ನಡ ಕೇಂದ್ರಿತವಾಗಿ ಕನ್ನಡಿಗರಲ್ಲಿ ಎಚ್ಚರ ಮೂಡುವುದು, ಕನ್ನಡಿಗರ ಹಿರಿಮೆಯನ್ನು ಗುರುತಿಸಿ ಕೊಂಡಾಡುವುದು, ಮರೆತ ಕನ್ನಡ ದೊರೆಗಳನ್ನು ನೆನೆದು ಮೆರೆಸುವುದು... ಹುಸಿ ರಾಷ್ಟ್ರವಾದಿ ಮಂದಿಯ ಹೊಟ್ಟೆಯಲ್ಲಿ ಕಿಚ್ಚು ಹುಟ್ಟಿಸಿರುವ ಹಾಗಿದೆ..
2/n ಇತಿಹಾಸದಲ್ಲಿ ಆಗಿ ಹೋದ ಕನ್ನಡ ಸಾಮ್ರಾಜ್ಯಗಳು ಭಾಷಾ ಆಧಾರಿತ ಆಗಿರಲಿಲ್ಲ ಎನ್ನುವ ವಾದವನ್ನು ಮೈಗೆಲ್ಲಾ ಎಣ್ಣೆ ಹಚ್ಚಿಕೊಂಡು ಗಾಳಿಯಲ್ಲಿ ತೇಲಿಬಿಟ್ಟ ವಿತಂಡ ವಾದಿಗಳು... ಹಿಂದಿನ ಕಾಲದ ಯಾವ ಸಾಮ್ರಾಜ್ಯವು ಕೂಡಾ ಒಂದು ಅಂಶದ ಆಧಾರದ ಮೇಲೆ ಮಾತ್ರಾ ರೂಪುಗೊಂಡಿಲ್ಲ ಎನ್ನುವುದನ್ನು ಮರೆಯುತ್ತಾರೆ..
Oct 29, 2021 • 6 tweets • 1 min read
1/ n
ಎಲ್ಲಾ ಕನ್ನಡಿಗರೂ ಒಟ್ಟಾಗಿ ನಾಡುನುಡಿ ಹಿರಿಮೆಯ ಕನ್ನಡದ ಹಾಡುಗಳನ್ನು ಹಾಡುವುದು, ಕನ್ನಡದಲ್ಲೇ ವ್ಯವಹರಿಸುವ ಆಣೆ ಮಾಡುವುದು ನಿಜಕ್ಕೂ ಒಳ್ಳೆಯ ಕೆಲಸವೇ... ಇದಕ್ಕೆ ಅಭಿನಂದನೆಗಳು! ಸಮಸ್ಯೆ ಏನೆಂದರೆ ಇವೆಲ್ಲಾ ಕನ್ನಡಕ್ಕೆ ಸಾಹಿತ್ಯಿಕ, ಸಾಂಸ್ಕೃತಿಕ ಸ್ಥಾನಮಾನಕ್ಕೆ ಕನ್ನಡವನ್ನು ಸೀಮಿತ ಮಾಡುವ ಪ್ರಯತ್ನಗಳು ಮಾತ್ರಾ ಆಗಿರುವುದು.
2/n ಏಕೆಂದರೆ ಕಡ್ಡಾಯವಾಗಿ ಕನ್ನಡ ಕಲಿಸಬೇಕು ಎನ್ನುವ ಸರ್ಕಾರಿ ಆದೇಶವನ್ನು ಹೊರಡಿಸಿದ್ದು ಇವರೇ..(ಬಿಜೆಪಿ ಎನ್ನುವ ಸಂಘದ ಅಂಗ ಸಂಸ್ಥೆ) ಇದನ್ನು ನ್ಯಾಯಾಲಯದಲ್ಲಿ ಪ್ರಶ್ನೆಮಾಡಿ ತಗಾದೆ ತೆಗೆದಿರುವುದೂ ಕೂಡಾ ಇವರೇ.. (ಸಂಸ್ಕೃತ ಭಾರತಿ ಎನ್ನುವ ಸಂಘದ ಅಂಗಸಂಸ್ಥೆ).
May 7, 2021 • 4 tweets • 1 min read
1/n 2/n As per the increased medical oxygen production capacities in Karnataka after the second wave hit hard, 14 industries produce a total of 1,767 tons of oxygen per day of which 865 tons is allocated to Karnataka.
ಇದು ಸುದ್ದಿ
Feb 10, 2021 • 17 tweets • 9 min read
1/n ಭಾರತೀಯ ಭಾಷೆಗಳ ಸಬಲೀಕರಣ ಎನ್ನುವ ಘೋಷವಾಕ್ಯದೊಂದಿಗೆ ಬೆಂಗಳೂರಿನಲ್ಲಿ ಎರಡು ದಿನಗಳ ಅವಧಿಯ ದುಂಡುಮೇಜಿನ ಸಭೆಯೊಂದನ್ನು, ಕನ್ನಡ ಅಭಿವೃದ್ಧಿ ಪ್ರಾಧಿಕಾರ ನಡೆಸಿತು. ಸಂವಿಧಾನದ 8ನೇ ಅನುಸೂಚಿಯಲ್ಲಿ ಹೆಸರಿಸಿದ ಎಲ್ಲಾ 22 ಭಾಷೆಗಳ ಪ್ರತಿನಿಧಿಗಳನ್ನು ಆಹ್ವಾನಿಸಲಾಗಿತ್ತು. #ಭಾಷಾ_ಭಾರತ_ಬಲಿಷ್ಠ_ಭಾರತ #empoweringindianlanguages2/n ಕರ್ನಾಟಕದಲ್ಲಿ ಹೆಜ್ಜೆ ಹೆಜ್ಜೆಗೆ ಕನ್ನಡಕ್ಕೆ ನ್ಯಾಯಯುತವಾಗಿ ಸಿಗಬೇಕಾದ ಸ್ಥಾನಮಾನದ ಬಗ್ಗೆ ಹೋರಾಡಬೇಕಾದ ದುಃಸ್ಥಿತಿ ಇಂದು ಇರುವುದು ಬಲ್ಲೆವು. ಇದಕ್ಕೊಂದು ಉದಾಹರಣೆಯಾಗಿ ಇತ್ತೀಚಿಗೆ ಕೇಂದ್ರಸರ್ಕಾರ ಶಿವಮೊಗ್ಗದಲ್ಲಿ ನಡೆಸಿದ ಕಾರ್ಯಕ್ರಮದಲ್ಲಿ ಕನ್ನಡ ಇಲ್ಲದ್ದನ್ನು ಗಮನಿಸಿ. #ಭಾಷಾ_ಭಾರತ_ಬಲಿಷ್ಠ_ಭಾರತ #empoweringindianlanguages
Feb 1, 2021 • 11 tweets • 4 min read
1/n ಕನ್ನಡದಲ್ಲಿ ಕಲಿಕೆಯನ್ನು ಸರಳಗೊಳಿಸುವ ನಿಲುವು ಕಲಿಯುವ ಕನ್ನಡಿಗರ ಕಲಿಕೆ ಪರಿಣಾಮಕಾರಿ ಆಗಬೇಕು ಎನ್ನುವ ಒಂದೇ ಕಾರಣದಿಂದ ಹುಟ್ಟಿರುವುದು. ಕನ್ನಡಿಗರೆಲ್ಲಾ ಸುಲಭವಾಗಿ ಇಂಗ್ಲೀಶ್ ಅನ್ನೋ, ಸಂಸ್ಕೃತವನ್ನೋ ಅರಗಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎನ್ನುವುದನ್ನು ಸಹಾನುಭೂತಿಯಿಂದ ಅರ್ಥ ಮಾಡಿಕೊಳ್ಳಬೇಕು. #ತಾಯ್ನುಡಿ_ಕಲಿಕೆ2/n ಹೇಳಿಕೊಟ್ಟು, ನಾಲಗೆ ತಿಕ್ಕಿ ಉಚ್ಚಾರಣೆ ಸರಿ ಮಾಡ್ತೀವಿ, ಪರಭಾಷೆಯ ಪದಗಳನ್ನು ಅರ್ಥ ತಿಳಿಸಿ ಕಲಿಸಿಕೊಡ್ತೀವಿ ಅನ್ನೋದು ಅಮಾನವೀಯ ನಿಲುವು. ಅಂತಹ ತಿಕ್ಕಿ ತಿದ್ದುವಿಕೆ ಅನ್ನೋದು ಕಲಿಕೆಯ ಅಂಗವಾಗಬೇಕೆ ಹೊರತು ಅದೇ ಕಲಿಕೆಯಾಗಬಾರದು. #ತಾಯ್ನುಡಿ_ಕಲಿಕೆ
Jan 29, 2021 • 10 tweets • 2 min read
1/n ಕನ್ನಡ ಮಾಧ್ಯಮ ಕಲಿಕೆ ಎನ್ನುವುದೇ ಕನ್ನಡಿಗರಿಗೆ ಕಬ್ಬಿಣದ ಕಡಲೆ ಆಗಿರುವುದು, ನಾಡಿನ ಏಳಿಗೆಗೆ ಇರುವ ಅತಿದೊಡ್ಡ ತೊಡಕುಗಳಲ್ಲಿ ಒಂದು.. ಕಲಿಕೆ ಎನ್ನುವುದು "ತಿಳಿದಿರುವುದರಿಂದ ತಿಳಿಯದಿರುವ ವಿಷಯದ ಕಲಿಕೆ". ಆದರೆ ಕನ್ನಡ ಮಾಧ್ಯಮದ ತುಂಬೆಲ್ಲ ಅರಿಯದ ಪದಗಳ ಮೆರವಣಿಗೆ.. ಇದಕ್ಕೊಂದು ಅಧ್ಯಯನ ಮಾಡಲಾಗಿತ್ತು.
2/n 5ನೆಯ ತರಗತಿಯಿಂದ 10ನೆಯ ತರಗತಿವರೆಗಿನ ವಿಜ್ಞಾನ ಪಠ್ಯವನ್ನು ಪಾರಿಭಾಷಿಕ ಪದಗಳ ಸ್ವರೂಪದ ಮೇಲೆ ಅಧ್ಯಯನ ಮಾಡಿದ್ದೆವು. ಪಾರಿಭಾಷಿಕ ಪದಗಳನ್ನು ನಾಲ್ಕು ಗುಂಪಲ್ಲಿ ಇಡುವುದು ಸಾಧ್ಯವಾಯಿತು.. 1. ಕನ್ನಡದ ತಿಳಿದಿರುವ ಪದಗಳು, 2. ಕನ್ನಡದ ತಿಳಿಯದ ಪದಗಳು 3. ಬೇರೆ ನುಡಿಯ ತಿಳಿದಿರುವ ಪದಗಳು 4. ಬೇರೆ ನುಡಿಯ ತಿಳಿಯದ ಪದಗಳು