Hema Narayan Profile picture
ಯಥಾಗ್ನೆರ್ದಾಹಿಕಾಶಕ್ತೀ ರಾಮಕೃಷ್ಣೇ ಸ್ಥಿತಾ ಹಿ ಯಾ | ಸರ್ವವಿದ್ಯಾಸ್ವರೂಪಂ ತಾಂ ಶಾರದಾಂ ಪ್ರಣಮಾಮ್ಯಹಮ್ ||
Apr 10, 2022 12 tweets 2 min read
*ಇತ್ತೀಚಿನ ಬ್ರಾಹ್ಮಣರ ತುಳಿತಕ್ಕೊಂದು ತಿಳಿಮಾತು*..ಬ್ರಾಹ್ಮಣರು ಅಷ್ಟೊಂದು ಕೆಟ್ಟವರಾ..?
ಯಾವ ಜಾತಿ ಯಾವಾಗ ಹುಟ್ಟಿತೋ.. ಯಾಕಾಗಿ ಹುಟ್ಟಿತೋ...ತನ್ನ ಮೂಲ ಉದ್ದೇಶವನ್ನು ಈಡೇರಿಸಿಯೂ..
ಅನೇಕರಿಗೆಅರ್ಥವಾಗದೆ.ವರ್ಣಸಂಕರದ ಕಾಲಘಟ್ಟದಲ್ಲಿಯೂ ಪ್ರಚಾರದ ವ್ಯಾಧಿಯಾಗಿ ಹಾದಿ ತಪ್ಪಿಸುತ್ತಿದೆ.
ಯಾವ ಬ್ರಾಹ್ಮಣರು ಅಸ್ಪೃಶ್ಯತೆ ಅಚರಿಸಿದರೋ..ಅವರನ್ನು ಆಳುವವರುಕ್ಷತ್ರಿಯರಾಗಿದ್ದರೋ..ಅಬ್ರಾಹ್ಮಣರೋ ಆಗಿದ್ದರೆನ್ನುವುದನ್ನು ಮೂಢರು ಮರೆತಿದ್ದಾರೆ.ರಾಜನ ಆಳ್ವಿಕೆಯಲ್ಲಿ ಬ್ರಾಹ್ಮಣನೊಬ್ಬ ಅಬ್ರಾಹ್ಮಣನಂತೆ ನಡೆದುಕೊಂಡರೆ ಅಂಥ ಬ್ರಾಹ್ಮಣನನ್ನು ಧರ್ಮಕಾರ್ಯ.ಪೂಜೆ ಪುನಸ್ಕಾರಗಳಿಂದ ದೂರವಿಟ್ಟು ಶಿಕ್ಷಿಸಲಾಗುತ್ತಿತ್ತೆಂಬ ಪರಮಸತ್ಯ ಅರಿತರೆ ಅಸ್ಪೃಶ್ಯತೆ ಯಾರ ಒತ್ತಡದ ಕೂಸು ಎನ್ನುವುದು ಅರ್ಥವಾಗುತ್ತದೆ.
Mar 18, 2022 10 tweets 2 min read
18 ಮಾರ್ಚ್ ..ಮಲ್ಲಾಡಿಹಳ್ಳಿಸ್ವಾಮಿಗಳ ಜನುಮ ದಿನ

ಪ್ರಾಥಃಸ್ಮರಣೀಯರು

ಆಗಿನ್ನೂ ಜಗದೀಶರಿಗೆ ಹದಿಮೂರು ವರ್ಷ. ಬೇಸಿಗೆ ರಜಾದಿನಗಳಲ್ಲಿ ಅಜ್ಜನ ಹಳ್ಳಿಯ ಮನೆಗೆ ಹೋಗಿದ್ದರು. ಮನೆ ತುಂಬಾ ಮಕ್ಕಳ ಕಲರವ.ತೋಟದಲ್ಲಿ ಹುಡುಗಿಯರು ಕಣ್ಣಾಮುಚ್ಚಾಲೆ ಆಡುತ್ತಿದ್ದರೆ,ಹುಡುಗರಿಗೆ ತೋಟದ ಬಾವಿಯಲ್ಲಿ ಈಜುವ ಆಸೆ.ಆದರೆ ಸುಮಾರು ಇಪ್ಪತ್ತು ಅಡಿಯ ಕೆಳಗೆ ನೀರು ಮತ್ತು ಎಪ್ಪತ್ತು ಅಡಿ ನೀರಿನ ಆಳ. ಗಂಡೆದೆಯ ಹುಡುಗರಿಗೆ ಮಾತ್ರ ಸಾದ್ಯ, ಏಕೆಂದರೆ ಮೇಲೆ ಹತ್ತಲು ಮೆಟ್ಟಿಲುಗಳಿಲ್ಲ, ಬಂಡೆಯ ಕಿರುಕಲಿನದೇ ಆಸರೆ. ಜಗದೀಶ ಮಾತ್ರ ಸಲೀಸಾಗಿ ಹತ್ತಿ ಬರುತ್ತಿದ್ದರು. ಒಂದು ದಿನ ಅವರ ಮನೆಗೆ ಸುಮಾರು ಎಪ್ಪತ್ತರ ಯಜಮಾನರೊಬ್ಬರು ಅಜ್ಜನನ್ನು ಭೇಟಿ ಮಾಡಲು ಬಂದಿದ್ದರು. ಅವರೂ ಮಕ್ಕಳೊಂದಿಗೆ ಮಾತನಾಡುತ್ತಾ,ಆಟವಾಡುತ್ತಾ
Sep 11, 2021 12 tweets 3 min read
ಹಿಂದೂಗಳ ವಿಗ್ರಹ ಪೂಜೆಯನ್ನು ವಿರೋಧಿಸಿದ ರಾಜನಿಗೆ ಸ್ವಾಮಿ ವಿವೇಕಾನಂದರು ಆ ರಾಜನ ಆಸ್ಥಾನದಲ್ಲೆ ಹೇಗೆ ನೀರಿಳಿಸಿದರು ಅಂತ ನೋಡೋಣ ಬನ್ನಿ ...
ಹೌದು ಹಿಂದೂ ಸಮಾಜವನ್ನು ಅನ್ಯಧರ್ಮಿಯರ ಜೊತೆ ನಮ್ಮ ಹಿಂದೂ ಬುದ್ಧಿ ಜೀವಿಗಳು ಸೇರಿಕೊಂಡು ಹಿಯಾಳಿಸುತ್ತಿರುವುದು ನಾವು ಕಲ್ಲಿನ ವಿಗ್ರಹಗಳಿಗೆ ಮತ್ತು ಭಾವಚಿತ್ರಗಳಿಗೆ ಪೂಜೆ ಮಾಡ್ತೀವಿ ಅಂತ . #ಸ್ವಾಮಿ_ವಿವೇಕಾನಂದರು ಸನ್ಯಾಸಿಯಾಗಿ ದೇಶ ಸಂಚಾರ ಮಾಡುತ್ತಿರುವಾಗ #ಮಂಗಳಸಿಂಗ್ ಎಂಬ ಮಹಾರಾಜ ಸ್ವಾಮೀಜಿಯನ್ನು ತನ್ನ ಆಸ್ಥಾನಕ್ಕೆ ಬರುವಂತೆ ಆಹ್ವಾನಿಸುತ್ತಾನೆ ... ಸ್ವಾಮೀಜಿ ಕೂಡ ಅವನ ಆಹ್ವಾನಕ್ಕೆ ಗೌರವ ಕೊಟ್ಟು ಆಸ್ಥಾನಕ್ಕೆ ಹೋಗುತ್ತಾರೆ ...

ಮಹಾರಾಜ: ಸ್ವಾಮೀಜಿ ನನಗೆ ಈ ಹಿಂದೂಗಳ ವಿಗ್ರಹ ಪೂಜೆ ಮೂರ್ತಿ ಭಜನೆ ದೇವರ ಭಾವಚಿತ್ರಕ್ಕೆ
Jul 9, 2021 7 tweets 2 min read
ಇದು ಅಜ್ಜಿ ಕಥೆಯಲ್ಲ...
ಕ್ರಿಶ್ಚಿಯನ್ ಮಿಷನರಿಗಳಿಗೆ
ಧರ್ಮ ಪ್ರಚಾರ ಅನ್ನುವುದು ಅವರಿಗೆ ಒಪ್ಪಿಸಿದ ಕರ್ತವ್ಯ ಮತ್ತು ಕೆಲವರಿಗೆ ಖಯಾಲಿ. ಒಮ್ಮೆ ಅವರು ಫಾದರ್ ಕ್ರೂಜ್ ಎಂಬೊಬ್ಬಾತನನ್ನು ಅಸ್ಸಾಂಗೆ ಕಳುಹಿಸಿದ್ದರು ಇದೇ ಕೆಲಸಕ್ಕಾಗಿ.
ಅಸ್ಸಾಂನಲ್ಲಿ ಒಂದು ಪ್ರಭಾವಿ ಕುಟುಂಬದ ಬಾಲಕನಿಗೆ ಅವರ ಮನೆಯಲ್ಲಿಯೇಇಂಗ್ಲಿಷ್ ಭಾಷೆ ಕಲಿಸಲು ಫಾದರ್ ಕ್ರೂಜ್ ಪ್ರಥಮ ಅವಕಾಶ ಲಭಿಸಿತು.
ಆತ ನಿಧಾನವಾಗಿ ಮನೆಯ ವಾತಾವರಣದ ಅಧ್ಯಯನ ಆರಂಭಿಸಿದ. ಮನೆಯಲ್ಲಿ ಆತನಿಗೆ ಕಂಡಿದ್ದು ಮಗುವಿನ ಅಜ್ಜಿ. ಆಕೆ ಅತ್ಯಂತ ಪ್ರಭಾವಶಾಲಿ ವ್ಯಕ್ತಿ ಅಂತ ಅವನಿಗೆ ವೇದ್ಯವಾಯಿತು.
ಈ ಅಜ್ಜಿಯ ಮನ ಒಲಿಸಿದರೆ
ಇಡೀ ಕುಟುಂಬವಷ್ಟೇ ಅಲ್ಲ ಮುಂದೆ ಈ ಹಳ್ಳಿಯನ್ನೂ ಕ್ರಿಶ್ಚಿಯನ್ಕರಿಸಬಹುದು ಅನ್ನುವುದನ್ನು ಬೇಗನೆ ತಿಳಿದುಕೊಂಡ ಮುಂದಿನ
Jul 9, 2021 4 tweets 1 min read
*🙏🏻😊 ಬಿಟ್ಟು_ಬಿಡಿ !🙏🏻*

🍁 ಒಂದೆರಡು ಬಾರಿ ವಿವರಿಸಿ, ಅವರು ಯಾರೂ ಅರ್ಥಮಾಡಿಕೊಳ್ಳದಿದ್ದರೆ, ನಂತರ ಆ ವ್ಯಕ್ತಿಗೆ ಹೇಳುವುದನ್ನು .
*ಬಿಟ್ಟು_ಬಿಡಿ* 🍁

🍁ಮಕ್ಕಳು ಬೆಳೆದಾಗ, ಅವರು ತಮ್ಮದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸುತ್ತಾರೆ, ನಂತರ ಅವರನ್ನು ಅನುಸರಿಸಲು
*ಬಿಟ್ಟು_ಬಿಡಿ* 🍁

🍁ಆಯ್ದ ಕೆಲವು ಜನರಿಂದ ನಿಮ್ಮ ಆಲೋಚನೆಗಳನ್ನು ಹಂಚಿಕೊಳ್ಳಿ,
ಅವರು ನಿಮ್ಮಜೊತೆ
ಪರಸ್ಪರ ಸಂಪರ್ಕ ಹೊಂದುವುದಿಲ್ಲವಾದರೆ ಅವರು ಸಹವಾಸ
*ಬಿಟ್ಟು_ಬಿಡಿ* 🍁

🍁ಒಂದು ವಯಸ್ಸಿನ ನಂತರ, ಯಾರೂ ನಿಮ್ಮನ್ನು ಕೇಳದಿದ್ದರೆ ಅಥವಾ ನಿಮ್ಮ ಬೆನ್ನಿನ ಹಿಂದೆ ಯಾರಾದರೂ ನಿಮ್ಮ ಬಗ್ಗೆ ತಪ್ಪಾಗಿ ಹೇಳುತ್ತಿದ್ದರೆ, ಅದನ್ನು ಮನಸ್ಸಿಗೆ ಹಚ್ಚಿಕೊಳ್ಳುವುದನ್ನು
*ಬಿಟ್ಟು_ ಬಿಡಿ* 🍁
Jul 9, 2021 11 tweets 3 min read
|ಸ್ಮರಿಸು ಗುರುಗಳ ಮನವೇ
✍64 ವಿದ್ಯೆಯಲ್ಲಿ ತಮ್ಮ ಜೊತೆಯಲ್ಲಿ ಯಾರಾದರು ಸ್ಪರ್ಧೆಯಲ್ಲಿ ಭಾಗವಹಿಸಬಹುದು ಎಂದು ಶ್ರೀ ವಿಜಯೀಂದ್ರ ತೀರ್ಥ ಗುರುಗಳು ಅಪ್ಪಣೆ ಕೊಡಿಸಿದ್ದು ಕೇಳಿ ಕಾಶೀ ದೇಶದಿಂದ ಒಬ್ಬ ಪಂಡಿತರು ಬರುತ್ತಾರೆ.
ಶ್ರೀಗಳು ತಮ್ಮಶಿಷ್ಯರಿಗೆ ಪಾಠ ಪ್ರವಚನ ಮಾಡುತ್ತಾ ಕುಳಿತಿದ್ದಾರೆ.
ಬಂದಂತಹ ಪಂಡಿತರು ತಮ್ಮ ಪರಿಚಯ ಮಾಡಿಕೊಂಡು ನಮ್ಮ ಹೆಸರು ಗಂಗಾಧರ ಶರ್ಮ ಎಂದು.
ನಾನು ವಿಂಧ್ಯ ದೇಶದಲ್ಲಿ ವಿಷ ವೈದ್ಯಶಾಸ್ತ್ರವನ್ನು, ತರ್ಕ, ವ್ಯಾಕರಣ, ವೇದಾಂತ ಹೀಗೆ ಎಲ್ಲಾ ಶಾಸ್ತ್ರ ಗಳಲ್ಲಿ ನಾನು ಅಭ್ಯಾಸ ಮಾಡಿ ನಿಮ್ಮ ಜೊತೆಗೆ ವಾದ ಮಾಡಲು* ಬಂದಿದ್ದೇನೆ ಅಂತ ಹೇಳುತ್ತಾರೆ ಆ ನಂತರ ಅವರು ತಮ್ಮ ಸಿದ್ದಾಂತ ವನ್ನು ಮಂಡಿಸುತ್ತಾರೆ..
ನಂತರ ಗುರುಗಳು ವಾದದಲ್ಲಿ ಮೊದಲು ಅವರ ಸಿದ್ದಾಂತದದಲ್ಲಿ
Jul 8, 2021 10 tweets 2 min read
ಸರ್ವೋಚ್ಚ ತ್ಯಾಗ..........
ಇಪ್ಪತ್ತು ವರ್ಷಗಳ ಹಿಂದೆ ಹಿಮಾಚಲ ಪ್ರದೇಶದ ಹಳ್ಳಿಯಿಂದ ದೇಶದ ರಕ್ಷಣಾ ಸಚಿವಾಲಯಕ್ಕೆ ಒಂದು ಪತ್ರ ಬಂದಿತ್ತು. ಪತ್ರ ಬರೆದವರು ಶಾಲಾ ಶಿಕ್ಷಕನಾಗಿದ್ದರು
ಸಾಧ್ಯವಾದರೆ, ಕಾರ್ಗಿಲ್ ಯುದ್ಧದಲ್ಲಿ ನಮ್ಮ ಏಕೈಕ ಪುತ್ರ ವೀರ ಮರಣ ಹೊಂದಿದ ಸ್ಥಳವನ್ನು ನೋಡಲು ನನ್ನ ಹೆಂಡತಿಗೆ ನನಗೆ ಅನುಮತಿ ನೀಡಬಹುದೇ?ಅವನ ಮೊದಲ ಸಾವಿನ 07/07/2000
ನನ್ನಕೋರಿಕೆ ರಾಷ್ಟ್ರೀಯ ಭದ್ರತೆಗೆ ವಿರುದ್ಧವಾಗಿದ್ದರೆ ನಾನು ನನ್ನ ಅರ್ಜಿಯನ್ನು ಹಿಂಪಡೆಯುತ್ತೇನೆ ಎಂದಿತ್ತ..ಪತ್ರವನ್ನು ಓದಿದ ಇಲಾಖೆ ಅಧಿಕಾರಿ,ಅವರ ಭೇಟಿಯ ವೆಚ್ಚ ಏನೇ ಇರಲಿ ನನ್ನ ಸಂಬಳದಿಂದ ಅದನ್ನು ಪಾವತಿಸುತ್ತೇನೆಇಲಾಖೆ ಇಷ್ಟವಿಲ್ಲದಿದ್ದರೆ ಮತ್ತು ನಾನು ಶಿಕ್ಷಕ ಮತ್ತು ಅವರ ಹೆಂಡತಿಯನ್ನು ಅವರ ಏಕೈಕ ಮಗ ವೀರಮರಣ ಪಡೆದ
Jul 6, 2021 12 tweets 2 min read
ದಾನವಕುಲದ 'ವಿಭೀಷಣ' ಚಿರಂಜೀವಿಯಾದ ಕಥೆ

ಏಳು ಜನ ಚಿರಂಜೀವಿಗಳಲ್ಲಿ , ರಾಕ್ಷಸಕುಲದ ವಿಭೀಷಣ ಮತ್ತು ಬಲಿ ವಿಶೇಷವಾಗಿ ಎದ್ದು ಕಾಣುತ್ತಾರೆ. 'ವಿಭೀಷಣ'ನು, ಬ್ರಹ್ಮಮಾನಸ ಪುತ್ರರಲ್ಲಿ ಒಬ್ಬರಾದ 'ಪುಲಸ್ತ್ಯ' ಮುನಿಗಳ ಪುತ್ರರಾದ 'ವಿಶ್ವಶ್ರವಸ್ತು' ಮಹಾಮುನಿ ಹಾಗೂ ರಾಕ್ಷಸ ಕನ್ಯೆ 'ಕೈಕಸೆಯ' ಪುತ್ರ. ವಿಭೀಷಣನಿಗೆ ರಾವಣ ಮತ್ತು ಕುಂಭಕರ್ಣರು ಅಣ್ಣಂದಿರು ಶೂರ್ಪಣಕಿ ಅಕ್ಕ ವಿಭೀಷಣನು ರಾಕ್ಷಸ ಕನ್ಯೆಯ ಪುತ್ರನಾದರೂ,ರಾಕ್ಷಸರ ಗುಣಗಳು ಇರಲಿಲ್ಲ.ಧರ್ಮ ಗುಣಗಳೆ ಜಾಗೃತವಾಗಿದ್ದು ನ್ಯಾಯ ಮಾರ್ಗದಲ್ಲಿ ನಡೆಯುತ್ತಿದ್ದನು. ಲಂಕಾಧೀಶ ರಾವಣನ ಆಸ್ಥಾನದಲ್ಲಿ ಪ್ರಧಾನ ಮಂತ್ರಿಯಾಗಿದ್ದನು. ರಾವಣನು ಮಾಡುತ್ತಿದ್ದ ಅಧರ್ಮ ಕಾರ್ಯಗಳನ್ನು ವಿರೋದಿಸುತ್ತಿದ್ದನು. ಮತ್ತು ಅವುಗಳನ್ನು ಮಾಡಬೇಡವೆಂದು