ಸಂಕೇತ್ ಕರಾವಳಿ Profile picture
💛ಮನುಜ ಮತ ವಿಶ್ವ ಪಥ❤ EDUCATE AGITATE ORGANISE- Ambedkarism 🇮🇳 Visual 🎨 lover
Dec 30, 2021 6 tweets 2 min read
ಕರ್ನಾಟಕದಲ್ಲಿ ಪ್ರಪಥಮ ಬಾರಿಗೆ LED ಪರದೆಯ ಮೇಲೆ #JaiBhim ಉಚಿತ ಸಾರ್ವಜನಿಕ ಚಲನಚಿತ್ರ ಪ್ರದರ್ಶನ 🙏
ಶಿರ್ತಾಡಿ, ಮೂಡಬಿದಿರೆ, ದಕ್ಷಿಣ ಕನ್ನಡ.
ನಮ್ಮ ಈ ಪ್ರಯತ್ನ ಯಶಸ್ವಿಯಾಗಲಿ ನಿಮ್ಮೆಲ್ಲರ ಆಶೀರ್ವಾದದಿಂದ.
#educate_agitate_organise *ಭಾರತ ದೇಶದೊಳಗೆ ಅದೆಷ್ಟೋ ಯುದ್ಧ ರಾಜ-ರಾಜನ ನಡುವೆ ರಾಜ್ಯ- ರಾಜ್ಯಗಳ ನಡುವೆ ಪ್ರತಿಷ್ಠೆ, ಸ್ವಾರ್ಥಕ್ಕಾಗಿ ಯುದ್ಧಗಳು ನಡೆದಿವೆ ಆದರೆ ಈ ದೇಶದಲ್ಲಿ ಶಿಕ್ಷಣ, ಸಾಮಾಜಿಕ ಸಮಾನತೆ, ಸ್ವಾತಂತ್ರ್ಯಕ್ಕಾಗಿ ನಡೆದ ಮೊಟ್ಟ ಮೊದಲ ದಲಿತ ಸ್ವಾಭಿಮಾನದ ಯುದ್ಧವೇ ಭೀಮಾ ಕೋರೆಂಗಾವ್ 1818 ಜನವರಿ 1.*
*ಭೀಮಾ ಕೋರೆಂಗಾವ್ ಯುದ್ಧದಲ್ಲಿ ಶೋಷಿತ ದಲಿತ
Nov 1, 2021 4 tweets 3 min read
ಜಯ ಭಾರತ ಜನನಿಯ ತನುಜಾತೆ
ಜಯ ಹೇ ಕರ್ನಾಟಕ ಮಾತೆ’
– ಕುವೆಂಪು

#ಕನ್ನಡ_ಕರುನಾಡು #ಕನ್ನಡರಾಜ್ಯೋತ್ಸವ #ಕನ್ನಡಕ್ಕಾಗಿ_ನಾವು ಏಕಲಿಪಿ, ಏಕಭಾಷೆ ಮತ್ತು ಏಕಮತ ಇವು ಯಾವುವೂ ಭಾವೈಕ್ಯವನ್ನು ಸಾಧಿಸಲಾರದೆ ಸೋತಿರುವುದಕ್ಕೆ ಇತಿಹಾಸದ ಉದ್ದಕ್ಕೂ ಸಾಕ್ಷ್ಯಗಳು ಚೆಲ್ಲಿಬಿದ್ದಿವೆಯಲ್ಲಾ!?
– ಕುವೆಂಪು, ವಿಚಾರ ಕ್ರಾಂತಿಗೆ ಆಹ್ವಾನ

#ಕನ್ನಡರಾಜ್ಯೋತ್ಸವ #ಕನ್ನಡಕ್ಕಾಗಿ_ನಾವು #ಕರ್ನಾಟಕರಾಜ್ಯೋತ್ಸವ
Nov 1, 2021 5 tweets 2 min read
ಒಂದು ಭಾಷೆಯಲ್ಲಿ ಎಂತೆಂಥ ಮೇಧಾವಿಗಳಿದ್ದರು, ಎಷ್ಟು ಜ್ಞಾನಪೀಠ ಪ್ರಶಸ್ತಿಗಳು ಬಂದಿದ್ದವು, ಎಷ್ಟು ಅದ್ದೂರಿಯಾಗಿ ಸಾಹಿತ್ಯ ಸಮ್ಮೇಳನಗಳು ನಡೆದುವು ಇತ್ಯಾದಿಗಳೆಲ್ಲಾ ಒಂದು ಭಾಷೆಯ ಅಭಿವೃದ್ಧಿಗೆ ಪರೋಕ್ಷವಾಗಿ ಸಹಾಯ ಮಾಡುತ್ತವಾದರೂ ಇವುಗಳಿಗಿಂತ ಅತ್ಯಂತ ಮುಖ್ಯವಾದುದು ಮತ್ತು ಒಂದು ಭಾಷೆಯ ಅಳಿವು ಉಳಿವನ್ನು ನೇರವಾಗಿ ನಿರ್ಧರಿಸುವುದು ಅದರ ಜನಬಳಕೆ. ಜನ ಬಳಸುವುದು ಕಡಿಮೆಯಾಗುತ್ತಾ ಬಂದಂತೆ ಆ ಭಾಷೆ ಅವಸಾನಕ್ಕೆ ಹತ್ತಿರವಾಗುತ್ತದೆ. ಯಾವ ಪ್ರಶಸ್ತಿ, ಸರ್ಕಾರದ ಅನುದಾನಗಳು, ಆ ಭಾಷೆಯ ಸಾಹಿತ್ಯ ಸಮ್ಮೇಳನಗಳು, ಭಾವನಾತ್ಮಕ ಭಾಷಾಭಿಮಾನ ಚಳುವಳಿ ಇತ್ಯಾದಿಗಳು ಯಾವುವೂ ಆ ಭಾಷೆಯನ್ನು ಉಳಿಸಲಾರವು.
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ತೇಜಸ್ವಿಯನ್ನು ಹುಡುಕುತ್ತಾ, ಪುಟ ೧೦೯