Karnataka Tourism Profile picture
Welcome to the Official account of Karnataka Tourism. Visit #KarnatakaWorld to experience the Diverse cultures, Wildlife, Nature, Heritage and Activities.
Jul 11, 2022 8 tweets 7 min read
📍ಮಾಗೋಡು ಜಲಪಾತ

ಉತ್ತರ ಕನ್ನಡ ಜಿಲ್ಲೆ, ಮಾಗೋಡುನಿಂದ 3 ಕಿ. ಮೀ ದೂರದಲ್ಲಿರುವ ಮಾಗೋಡು ಜಲಪಾತವು ಬೇಡ್ತಿ ನದಿಯಿಂದ ರೂಪುಗೊಂಡು ಎರಡು ಧಾರೆಗಳಾಗಿ ಸುಮಾರು 650 ಅಡಿ ಎತ್ತರದಿಂದ ಧುಮುಕುವ ಜಲಪಾತವು ಅರ್ಧಚಂದ್ರಾಕೃತಿಯಾಗಿ ಹರಿದು ಅರಬಿ ಸಮುದ್ರ ಸೇರುತ್ತದೆ. (1/8) ದಟ್ಟ ಅರಣ್ಯದ ಮಧ್ಯೆ ಬೇಡ್ತಿ ನದಿ ಹೆಬ್ಬಾವಿನ ಹಾಗೆ ಸುತ್ತಿಕೊಂಡು ವೈಯ್ಯಾರದಿಂದ ಹರಿಯುವುದು ಪ್ರವಾಸಿಗರ ಕಣ್ಣಿಗೆ ಮುದ ನೀಡುತ್ತದೆ.

ಈ ಸುಂದರ ಮಾಗೋಡು ಜಲಪಾತದ ಮನಸೂರೆಗೊಳ್ಳುವ ಸೌಂದರ್ಯವನ್ನು ಕಣ್ ತುಂಬಿಕೊಳ್ಳಲು ಹಾಗೂ ಅರಣ್ಯದ ಮಧ್ಯೆ ಗಿಡ, ಮರ, ಬಳ್ಳಿ, ಹೂವುವಿನ ಸುವಾಸನೆಯನ್ನು ಆಸ್ವಾದಿಸುತ್ತ, (2/8)
Jul 10, 2022 4 tweets 6 min read
📍ಬಂಡಾಜೆ ಅರ್ಬಿ ಜಲಪಾತ

ಆಕರ್ಷಕ ಹಚ್ಚ ಹಸಿರಿನ ಪಶ್ಚಿಮ ಘಟ್ಟಗಳ ಕಾಡಿನಲ್ಲಿ ನೇತ್ರಾವತಿ ನದಿಯ ಉಪನದಿಯಿಂದ ರೂಪುಗೊಂಡಿರುವ, ಸುಮಾರು 200 ಅಡಿ ಎತ್ತರದಿಂದ ಹರಿಯುವ ಬಂಡಾಜೆ ಅರ್ಬಿ ಜಲಪಾತವು ಒಂದು ದಿನದ ವಿಹಾರ (ಪಿಕ್ನಿಕ್‌) ಮತ್ತು ಚಾರಣಕ್ಕೆ (ಟ್ರೆಕ್ಕಿಂಗ್) ಹೇಳಿ ಮಾಡಿಸಿದ ಪ್ರವಾಸಿ ತಾಣವಾಗಿದೆ. 📍Bandaje Arbi Waterfall

Formed from a tributary of the Netravathi River in the lush green forests of the Western Ghats, the 200 feet high Bandaje Arbi Waterfall is a popular spot for picnic and trekking.

Location: Belthangady, Karnataka
lnkd.in/gxXkW-ck
Jul 9, 2022 4 tweets 6 min read
📍ಜೋಮ್ಲು ತೀರ್ಥ ಜಲಪಾತ

ನೈಸರ್ಗಿಕ ಸೌಂದರ್ಯದ ಮಧ್ಯೆ ಬಂಡೆಗಳ ಮೇಲಿಂದ ಧುಮ್ಮಿಕ್ಕುವ ಜೋಮ್ಲು ತೀರ್ಥ ಜಲಪಾತವು ಸೀತಾ ನದಿಯಿಂದ ರೂಪುಗೊಂಡ ಸಣ್ಣ ಕ್ಯಾಸ್ಕೇಡಿಂಗ್ ಜಲಪಾತವಾಗಿದೆ. ಕುಟುಂಬದವರೊಂದಿಗೆ ಮತ್ತು ಸ್ನೇಹಿತರೊಂದಿಗೆ ಒಂದು ದಿನದ ಪಿಕ್ನಿಕ್ ಗೆ ಆಕರ್ಷಣೆಯ ಸ್ಥಳವಾಗಿದೆ. Image 📍Jomlu Theertha Falls

The Jomlu Theertha Falls is a small cascading waterfall formed by the river Sita. It is an attraction for a day picnic with family and friends.

Location : goo.gl/maps/jB2kUEP6b…
Jomlu Theertha, Belve, near Hebre.