ಕ್ರುಶಿಕ ಎವಿ/Krushika AV Profile picture
#ರೈತ, #ಕನ್ನಡ, Thinker, Socio-Political activist not affiliated to any political party or organisation #Federalism #Constitution #Freedom #HumanRights #Science
Dec 12, 2022 4 tweets 2 min read
ಗುಜರಾತಿನ ಹಾಲು ಸಹಕಾರ ಮಹಾಮಂಡಲ ಅಮುಲ್ ದೊಡ್ಡ ಮಟ್ಟದಲ್ಲಿ ಮಾರುಕಟ್ಟೆ ವಿಸ್ತರಣೆ ಮಾಡ್ತಿದೆ. ಅಮುಲ್ ಸು.೨೦೦೦ಹೆಚ್ಜು ಹಾಲಿನ ಉತ್ಪನ್ನಗಳನ್ನು ಮಾಡಿ ಮಾರಾಟ ಮಾಡ್ತಿದೆಯಂತೆ. ನಮ್ಮ ಪಕ್ಕದ ಕೇರಳದಲ್ಲಿ ಅಮುಲ್ ಮಳಿಗೆಗಳು ನುರಾರಿವೆ. ಆದ್ರೆ ನಮ್ಮ ನಾಡಿನ ನಂದಿನಿ-ಕರ್ನಾಟಕ ಹಾಲು ಸಹಕಾರ ಮಹಾಮಂಡಲದ ಉತ್ಪನ್ನಗಳ ಎಣಿಕೆ ೧೧೦ಕೂಡ ದಾಟೋಲ್ಲ. ಇನ್ನೂ ನಂದಿನಿ ಮಳಿಗೆಗಳು ಕರ್ನಾಟಕದ ಎಲ್ಲೆಡೆ ಬೇಕಾದಷ್ಟು ಇಲ್ಲ. ಕೆ.ಎಂ.ಎಫ್ ಉಳ್ಕೊಂಡಿರೋದು ರಾಜಕೀಯ ಮಾಡೋಕೆ ಅಂತ ಆಗಿ ಬಿಟ್ಟಿದೆ. ರಾಜಕಾರಾಣಿಗಳನ್ನು ಕೆ.ಎಂ.ಎಫ್ ಇಂದ ಓಡಿಸಿ ಸುಧಾರಣೆ ಮಾಡುವ ಅಗತ್ಯವಿದೆ. ಹೊಸ ಹೊಸ ಉತ್ಪನ್ನಗಳನ್ನು ಮಾಡಿ ಎಲ್ಲಾ ಕಡೆ ಅದನ್ನು ತಲುಪಿಸುವ ಅಗತ್ಯವಿದೆ. ರೈತರು ಈ ಸಂಸ್ಥೆ ಉಳಿಯಬೇಕು ಅಂದ್ರೆ ಕೇವಲ ಹಾಲು
Dec 11, 2022 5 tweets 2 min read

ಮಂಗಳೂರಿನ ಪ್ರತಿಷ್ಠಿತ ಖಾಸಗಿ ಕಾಲೇಜು ಒಂದು ನಾಲ್ಕು ಮುಸ್ಲಿಂ ಹೆಣ್ಮಕ್ಕಳನ್ನು ಕಲಿಕೆಮನೆಯಿಂದ ಅಮಾನತು ಮಾಡಿದೆ.
ಆ ಹೆಣ್ಮಕ್ಕಳ ಅಪರಾಧ ಬುರ್ಕಾ ಹಾಕಿಕೊಂಡು ಹಾಡಿಗೆ ವೇದಿಯಲ್ಲಿ ಕುಣಿದಿರೋದು.
ಅವರ ಕುಣಿತದ ವಿಡಿಯೋ ವೈರಲ್ ಆಗಿ ಮುಸ್ಲಿಂ ಮೂಲಭೂತವಾದಿ ಗಂಡಸರು ಇದು ಇಸ್ಲಾಂಗೆ ಉದ್ದೇಶಪೂರ್ವಕವಾಗಿ ಮಾಡಿದ ಅವಮಾನ ಅಂತ ಹುಯಿಲೆಬ್ಬಿಸಿ, ಆ ಮಕ್ಕಳನ್ನು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಿ ಬಯ್ದು ಕೊನೆಗೆ ಕಾಲೇಜು ಅವರನ್ನು ತೆಗೆದು ಹಾಕಿದೆ. ಇನ್ನು ಆ ಹೆಣ್ಮಕ್ಕಳಿಗೆ ಕಲಿಕೆ ಇಲ್ಲ.

ಅಲ್ರಯ್ಯ ಮುಸ್ಲಿಂ ಗಂಡಸರೇ ಬುರ್ಕಾ/ಹಿಜಾಬ್ ಆಯ್ಕೆ ಅಂತೀರಾ ಅದನ್ನು ಆ ಹೆಣ್ಮಕ್ಕಳು ಹಾಕಿಕೊಂಡಿದ್ದಾರೆ. ಈಗೇನು ಕುಣಿತ ಇಸ್ಲಾಂ ಅಲ್ಲಿ ನಿಷಿದ್ಧವೇ?
Dec 10, 2022 4 tweets 2 min read
Came across this Civil servant VedveerArya 1997 batch IDAS at present Joint Secretary and additional FA (R&D), ministry of defence.
He is also mentor of ITHIHASA,Eternal Hindu NGO started by RSS ideologue KN Govindacharya.
Like him there are many directly& indirectly associated ImageImage with the RSS/Hindutva, at different level and capacities. Politicians getting associated directly with RSS works is one thing but serving civil servant's association is strange, disturbing. That too working in ministry of defence. Civil service code of conduct allows this?
Dec 10, 2022 4 tweets 2 min read
@cpronammametro ಬೆಂಗಳೂರಿನ ನಮ್ಮ ಮೆಟ್ರೋ ಕಟ್ಟುವ ಕೆಲಸದಲ್ಲಿ ಸುಮಾರು ೧೦,೦೦೦ಜನ ಕಾರ್ಮಿಕರು ಇದಾರೆ ಅಂತ ಅಂದಾಜು ಮಾಡಲಾಗಿದೆ. ಕರ್ನಾಟಕದ ಬೇರೆ ಬೇರೆ ಕಡೆಯ ಕಾರ್ಮಿಕರು ಜೊತೆಗೆ ಬಂಗಾಳ,ಅಸ್ಸಾಂ,ಒರಿಸ್ಸಾ,ಬಿಹಾರ್,ಝಾರ್ಕಂಡ್ ನಾಡಿನಿಂದ ವಲಸೆ ಕಾರ್ಮಿಕರನ್ನು ಮುಖ್ಯವಾಗಿ ಕಂಪನಿ ಗುತ್ತಿಗೆದಾರರು ಕರೆತಂದಿದ್ದಾರೆ. ನಮ್ಮ ಮೆಟ್ರೋ ಹಿಂದಿ ಬೇಡ Image ಅಂತ ಮಾಡಿದ ಹೋರಾಟದ ಪರಿಣಾಮ ಬಹುತೇಕ ಕಡೆ ಹಿಂದಿ ತೆಗೆದಿದ್ರೂ, ರೇಲಿನ ಒಳಗೆ, ನಿಲ್ದಾಣದಲ್ಲಿ ಇರುವ ಅಂಟುಚೀಟಿಗಳಲ್ಲಿ ಇನ್ನೂ ಹಿಂದಿ ಇದೆ. ಹಳೆಯ ರೇಲು ಮಾತ್ರವಲ್ಲ ಹೊಸ ರೇಲಿಗೂ ಮಾಡುವ ಹೊಸ ಅಂಟುಚೀಟಿಯನ್ನು ಮೂರು ನುಡಿಯಲ್ಲಿ ಅಚ್ಚು ಹಾಕಿಸ್ತಾ ಇದಾರೆ. ಹಾಗೆಯೇ ಮೇಲೆ ಚಿತ್ರದಲ್ಲಿ ತೋರಿಸಿದಂತೆ ಹಿಂದಿ ಬಳಕೆ ಮಾಡಲಾಗ್ತಿದೆ.
Nov 13, 2022 22 tweets 8 min read
ಅಡಿಕೆ ಬೆಳೆ-ಮಲೆನಾಡಿನ ಶಾಪ.

ಅಡಿಕೆಗೆ ಸುಮಾರು ೪೫೦೦-೫೦೦೦ ಏಡುಗಳ ಇತಿಹಾಸವಿದೆ. ಪಿಲಿಪೈನ್ಸ್ ನಾಡಿನಲ್ಲಿ ಇದರ ಬಳಕೆಯ ಮೊದಲ ಕುರುಹುಗಳು ನಮಗೆ ಸಿಗುತ್ತವೆ. ಆ ಹೊತ್ತಿನಿಂದ ಈ ಹೊತ್ತಿನವರೆಗೆ ಆ ನಾಡಿನಿಂದ ನಮ್ಮ ನಾಡಿನವರೆಗೆ ಅಡಿಕೆಯ ಬಳಕೆ ಹಾಗೂ ಪ್ರಾಮುಖ್ಯತೆ ಬಹುತೇಕ ಒಂದೇ ತೆರನಾಗಿದೆ.
ಅಡಿಕೆ ವೀಳ್ಯದ ಎಲೆ ಇದಕ್ಕೆ ರಾಜ ಮರ್ಯಾದೆ ಇದೆ ಪೂಜನೀಯ ಜಾಗವನ್ನು ಕೊಡಲಾಗಿದೆ.
ಅಂತಹ ಅಡಿಕೆ ಹತ್ತಿಪ್ಪತ್ತು ಏಡುಗಳವರೆಗೆ ಕರ್ನಾಟಕದ ಮಲೆನಾಡು ಹಾಗೂ ಕರಾವಳಿಯಲ್ಲಿ ಮಾತ್ರ ಮುಕ್ಯ ವಾಣಿಜ್ಯ ಬೆಳೆ ಆಗಿತ್ತು. ಇದರ ಬಳಕೆ ಸೀಮಿತವಾಗಿದ್ದು ಗುಟುಕಾ ಬರುವವರೆಗೂ ಅಂತಹ ದೊಡ್ಡ ಮಾರುಕಟ್ಟೆಯೇ ಇರ್ಲಿಲ್ಲ ಅಂತ ಹೇಳಿದ್ರೂ ತಪ್ಪಾಗಲಾರದು.
ಈಗಲೂ ಬಳಕೆಯಲ್ಲಿರೋ ಬಹುತೇಕ ಅಡಿಕೆ ಗುಟುಕಾ ಮಾರುಕಟ್ಟೆ
Aug 22, 2022 9 tweets 3 min read
ಶೂದ್ರರಿಗೆ, ಬಹುಜನರಿಗೆ ಅವರ ಹುಟ್ಟಿನ ಜಾತಿಯ ಬಗ್ಗೆ, ಅವರ ಸಾಮಾಜಿಕ ಅಂತಸ್ತಿನ ಬಗ್ಗೆ, ಊಟದ ಪದ್ದತಿ ಬಗ್ಗೆ,ಆಚರಣೆ ನಂಬಿಕೆಗಳ ಬಗ್ಗೆ ಸಣ್ಣ ವಯಸ್ಸಿನಿಂದಲೇ ಕೀಳರಿಮೆ ತುಂಬಲಾಗುತ್ತದೆ
ಬಾಡೂಟ ಅಂದ್ರೆ ಅಶುದ್ದ,ಅಪವಿತ್ರ ಅದು 'ಶುಭ'ಕಾರ್ಯಗಳಿಗೆ ಸಲ್ಲದು,ದೇಗುಲಗಳ ಪಾವಿತ್ರ್ಯಕ್ಕೆ ಹೊಂದದು ಅಂತ ನಂಬಿಸಲಾಗುತ್ತದೆ
#ಬಾಡೂಟ_ವಿರೋಧಿ_ಮನುವಾದಿಗಳು ಇದಕ್ಕೆ ತರಕಾರಿ ಅಂಗಡಿ/ಸಂತೆ ಊರ ಮಧ್ಯದಲ್ಲಿ ಎಲ್ಲರ ಸಂಗಡ ಇದ್ದಾರೆ ಬಾಡು ಅಂಗಡಿ ಊರ ಹೊರಗೆ. ತರಕಾರಿ ಯಾವುದೇ ಮುಜುಗರವಿಲ್ಲದೆ ಕೊಂಡು ಎಲ್ಲೆಡೆ ಒಯ್ಯಬಹುದು ಆದ್ರೆ ಬಾಡು ಹಾಗಲ್ಲ ಕಪ್ಪು ಪ್ಲಾಸ್ಟಿಟ್ ತೊಟ್ಟೆಯಲ್ಲಿ ಮುಚ್ಚಿಟ್ಟು. ಯಾರಾದ್ರೂ ಅಪ್ಪಿತಪ್ಪಿ ಗಿಡದೂಟ ಉಣ್ಣುವವರು ಏನದು ಅಂತ ಕೇಳಿದ್ರೂ ಹೇಳಲಾಗದ ಮುಜುಗರ
#ಬಾಡೂಟ_ವಿರೋಧಿ_ಬಿಜೆಪಿ
Aug 22, 2022 4 tweets 2 min read
@siddaramaiah ಅವ್ರೇ, ನೀವು ವೇದಿಕೆಯಲ್ಲಿ ಮಾತಾಡ್ತಾ 'ನಾವೇನು ಕಯ್ಗೆ ಬಳೆ ಹಾಕ್ಕೊಂಡಿದಿವಾ' ಅಂತೇಳಿ, ತಾವು ಕಯ್ಲ್ಯಾಗದವರು ಅಲ್ಲ 'ಗಂಡಸರು' ಅನ್ನೋ ಅರ್ತದಲ್ಲಿ ಹೇಳಿದ್ದೀರಿ. ಅದು ತಪ್ಪು.
ಸಿಟ್ಟಲ್ಲಿ ಸಾಮಾನ್ಯವಾಗಿ ಗಂಡಸರು ಪ್ರಚಲಿತದಲ್ಲಿರೋ ಈ ಹೇಳಿಕೆ ಕೊಟ್ಟುಬಿಡುತ್ತೇವೆ. ಅದು ಹೆಣ್ಣು ಕಯ್ಲ್ಯಾಗದವಳು ಗಂಡಸರು ಮಾತ್ರ ಸಶಕ್ತ/ಶ್ರೇಷ್ಠ ಅನ್ನೋ ಲಿಂಗತ್ವ ಭೇದ, ಮೇಲರಿಮೆ ಹೇಳುತ್ತದೆ.
ಸಾಮಾಜಿಕ ನ್ಯಾಯದ ಅರಿವಿರುವ ತಾವು ಲಿಂಗತ್ವ ಸಮಾನತೆ ಬಗ್ಗೆಯೂ ಕೆಲಸ ಮಾಡಿದ್ದೀರಿ ಹಾಗಿರುವಾಗ ಇಂತಹ ಗಂಡಸು ಪ್ರಧಾನ ವ್ಯವಸ್ತೆ ಪ್ರತಿಪಾದಿಸುವ ಹೇಳಿಕೆಗಳು ಮಾಡಿರುವ ಕೆಲಸ ಬೋಧಿಸುವ ಅರಿವಿಗೆ ವಿರುದ್ದವಾಗುತ್ತದೆ. ಮಾತಾಡುವಾಗ ಜಾಗೃತೆವಹಿಸಿ.
ಇಂತಹ ಗಂಡಸ್ತನದ ಮನಸ್ಥಿತಿ ಬಹುತೇಕರಲ್ಲಿ ಇದೆ.
Aug 22, 2022 4 tweets 4 min read
ವೈದಿಕರಿಗೆ ಮೇಲರಿಮೆ ಇದೆ, ಶ್ರೇಷ್ಠತೆಯ ಅಮಲು ಇದೆ. ಅದು ಅವರ ಸನಾತನ ಧರ್ಮ, ಸಂಸ್ಕೃತಿಯ ಪ್ರಭಾವ. ಅದಕ್ಕೆ ಅವರು #ಬಾಡೂಟ ದ ಬಗ್ಗೆ ಬಾಡೂಟ ಉಣ್ಣೋ ಶೂದ್ರರು ಬಹುಜನರ ಬಗ್ಗೆ ಕೀಳಾಗಿ ಕಾಣುವುದು
ಆದ್ರೆ ಅವರ ತಾಳಕ್ಕೆ ಕುಣಿಯೋ ಶೂದ್ರ ಬಹುಜನ ಕಾರ್ಯಕರ್ತರಿಗೆ ತಲೆಯ ಮೆದುಳು ಕೆಲಸ ಮಾಡ್ತಿಲ್ಲವೇಕೆ?
ಗಿಡದೂಟ ತಿಂದು ದೇಗುಲ ಹೋಗಬಹುದು ಬಾಡೂಟ ತಿಂದು ಹೋಗೋ ಹಾಗಿಲ್ಲ ಅಂತ ಭೇದ ಮಾಡುತ್ತಿರುವಾಗ ಗಿಡದೂಟ ಶ್ರೇಷ್ಟ ಬಾಡೂಟ ಕನಿಷ್ಠ, ಗಿಡದೂಟ ಮಾಡೋರು ಶ್ರೇಷ್ಠ ಬಾಡೂಟ ಮಾಡೋರು ಕನಿಷ್ಠ ಅಂತ ನೇರ ನೇರ ಅವಮಾನ ಮಾಡ್ತಾ ಇದ್ರೂ ಅವರ ಜೊತೆಗೆ ಸೇರಿಕೊಂಡು ಬಾಡೂಟ ಉಣ್ಣೋರ ಮೇಲೆ ದಬ್ಬಾಳಿಕೆ ಮಾಡುತ್ತಾರಲ್ಲ!
ಮಿತಿಮೀರಿದ ಸಂಘಿ ಗುಲಾಮಗಿರಿ ಈ ಅವಿವೇಕತನಕ್ಕೆ ಕಾರಣ ಇರಬೇಕು
#ಬಾಡೂಟ_ವಿರೋಧಿ_ಬಿಜೆಪಿ
Aug 6, 2022 17 tweets 3 min read
ಮಳೆನಾಡಿನ ಜನರ ಮೇಲೆ ಹೇರಲಾಗುತ್ತಿರುವ ಗಾಡಗಿಲ್/ಕಸ್ತೂರಿ ರಂಗನ್ ವರದಿಯ ಬಗ್ಗೆ ಅಭಿಪ್ರಾಯ,
ಜಾಗತಿಕ ತಾಪಮಾನ ಹೆಚ್ಚಳದಿಂದ ಪ್ರಪಂಚದಲ್ಲಿ ಆಗ್ತಾ ಇರೋ ಸಮಸ್ಯೆಗಳಿಗೆ ಕಾರಣ ಸ್ಥಳೀಯವಲ್ಲ ಅದು ಕೂಡ ಜಾಗತಿಕ ಮಟ್ಟದಲ್ಲಿ ನಡೆಯುತ್ತಿದೆ. ಜಾಗತಿಕ ಮಟ್ಟದಲ್ಲಿ ಪರಿಸರ ಸಂರಕ್ಷಣೆಗೆ ಕೂಟ,ಒಪ್ಪಂದ,ನಿರ್ಬಂಧ ಇತ್ಯಾದಿ
1/n
ಸರ್ಕಾರಗಳು ತಮ್ಮಾನುಕೂಲಕ್ಕೆ ಮಾಡಿಕೊಂಡು ಅದನ್ನು ಸರಿಯಾಗಿ ಅನುಷ್ಠಾನ ಮಾಡಲಾಗದೆ ಮುಖ ಉಳಿಸಿಕೊಳ್ಳಲು ಪಡುವಣಘಟ್ಟದ ಮಳೆನಾಡಿನ ಮೇಲೆ ಹೇರಿಕೆ ಮಾಡುತ್ತಿದ್ದಾರೆ
ಎಲ್ಲಿ ಜನರ ಒತ್ತಡ,ಆರ್ಥಿಕ ಚಟುವಟಿಕೆ ಹೆಚ್ಚಿದ್ಯೋ ಅಲ್ಲಿ ಸರ್ಕಾರದ ಪರಿಸರ ಸಂರಕ್ಷಣೆ ಕೆಲಸಕ್ಕೆ ಕೊನೆಯ ಪ್ರಾಶಸ್ತ್ಯ ಕೊಟ್ಟು ಅಭಿವೃದ್ಧಿ ಕೆಲಸಕ್ಕೆ ಮೊದಲ ಆದ್ಯತೆ ಕೊಡಲಾಗುತ್ತದೆ
Apr 2, 2020 6 tweets 2 min read
Decades ago when healthcare workers used to go to door to door to immunize people against #Smallpox people used to run away, attack healthcare workers, deny getting immunised
When immunisation started for children parents were scared&had lot of questions
Same repeated now! 1/n People are scared, they lack information they are not educated
When people lack information and education they will be scared or suffering 4m phobia
When people have insecurities they will be dependent on faith/babas r false prestige r some community/leader to boost their ego 2/n