#SaveWesternGhats #ಪಶ್ಚಿಮಘಟ್ಟಉಳಿಸಿ
ಪ್ರಕೃತಿಯೇ ಎಲ್ಲ ನಮಗೆ,
ಪ್ರಕೃತಿಯನ್ನು ರಕ್ಷಿಸುವುದು ನಮ್ಮ ನಿಮ್ಮೆಲ್ಲರ ಹೊಣೆ,
ಮರ ಬೆಳಸಿ, ಪರಿಸರ ಉಳಿಸಿ🌱🏞
Feb 8, 2022 • 7 tweets • 2 min read
ಶಾಲಾ-ಕಾಲೇಜುಗಳಲ್ಲಿ ಹೆಣ್ಣುಮಕ್ಕಳಿಗೆ ಶೌಚಾಲಯ ಇಲ್ಲಾ, ತರಗತಿಗೆ ತಲುಪಲು ಸಾರಿಗೆ ವ್ಯವಸ್ಥೆ, ಸರಿಯಾದ ರಸ್ತೆಗಳಿಲ್ಲಾ, ಪಾಠ ಮಾಡಲು ಸಂಬಂಧಿಸಿದ ವಿಷಯಗಳಿಗೆ ಅಧ್ಯಾಪಕರಿಲ್ಲಾ, ಮಳೆ ಬಂದರೆ ಬಚ್ಚಲಿಗೂ ತರಗತಿಗೂ ವ್ಯತ್ಯಾಸ ಇಲ್ಲಾ. ತಲೆ ಮೇಲೆ ಸೂರಿಲ್ಲದೆ ಬಯಲಿನಲ್ಲಿ, ಫ್ಲೈ ಓವರ್ನಾ ಅಡಿಯಲ್ಲಿ ಕುಳಿತು 1/7
ಶಿಕ್ಷಣ ಪಡೆಯುವ ಕೆಟ್ಟ ವ್ಯವಸ್ಥೆಯ ಬಗ್ಗೆ ಪ್ರಶ್ನೆ ಮಾಡಿ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಎಂದು ವಿಧ್ಯಾರ್ಥಿಗಳು ಹರತಾಳ ಮಾಡಿ,ತಮ್ಮ ಹಕ್ಕನ್ನು ಪಡೆದು ಬದುಕನ್ನು ಉಜ್ವಲವನ್ನಾಗಿ ಮಾಡಿಕೊಳ್ಳುವುದು ಬಿಟ್ಟು ಕೆಲಸಕ್ಕೆ ಬಾರದ ಉದ್ಯೋಗ ಕೊಡಿಸಿದ,ಹೊಟ್ಟೆಗೆ ಹಿಟ್ಟು ಹುಟ್ಟಿಸಿದ ಧರ್ಮವಂತೆ. ಚೆಂದದ ಕಾಲೇಜು ನೆನಪುಗಳನ್ನು ಹಾಳು ಮಾಡಿಕೊಂಡ 2/7
Nov 13, 2021 • 4 tweets • 2 min read
ಕಳೆದ ಶನಿವಾರ ಮತ್ತು ಭಾನುವಾರ ಕುಕ್ಕೆ ಸುಬ್ರಹ್ಮಣ್ಯದಿಂದ ಕುಮಾರಪರ್ವತಕ್ಕೆ ಚಾರಣ ಕೈಗೊಂಡಿದ್ದೆವು.. ಆದರೆ ಚಾರಣದುದ್ದಕ್ಕೂ ನಮಗೆ ಕಂಡಿದ್ದು ಕಾಂಕ್ರೀಟ್ ನಾಡಿನಿಂದ ಕಾಡುಪ್ರವೇಶಿಸುವ ನಾಡಪ್ರಾಣಿಗಳು ತಮ್ಮ ಹಸಿವಿನ ತೀಟೆ ತೀರಿಸಿ ತಿಂದು, ಕುಡಿದು ವನ ದೇವತೆಯ ಮಡಿಲಲ್ಲಿ ಬಿಟ್ಟು ಹೋದ ನೂರಾರು ಬಾಟಲ್, ಸಾವಿರಾರು ಪ್ಲಾಸ್ಟಿಕ್ ಗಳು😡 1/4
ಚಾರಣದಲ್ಲಿ ಗಿರಿಗದ್ದೆ forest camp ನಿಂದ ಕುಮಾರ ಪರ್ವತದ ತುದಿಯ 5km ವರೆಗಿನ ದಾರಿಯಲ್ಲಿ ಅರಣ್ಯ ಇಲಾಖೆಯ ಕಟ್ಟುನಿಟ್ಟಿನ ಕ್ರಮದಿಂದಾಗಿ ಅಲ್ಲೊಂದು ಇಲ್ಲೊಂದು ಹಳೇ ಕಸಗಳು ಸಿಕ್ಕಿದ್ದು ಬಿಟ್ಟರೆ ಹೆಚ್ಚುಕಮ್ಮಿ ಪರ್ವತ ಸ್ವಚ್ಛವಾಗಿತ್ತು.
ಆದರೆ ಯಾವುದೇ forest chekpost ಇಲ್ಲದ ಗಿರಿಗದ್ದೆಯಿಂದ ಸುಬ್ರಹ್ಮಣ್ಯದ ದೇವರಗದ್ದೆ ವರೆಗಿನ 2/4
Oct 4, 2021 • 10 tweets • 2 min read
ಕಬ್ಬೆಕ್ಕುಗಳು - CIVETS
ವಿವೆರಿಡೀ(viverridae) ಕುಟುಂಬದ ಕಬ್ಬೆಕ್ಕುಗಳು ಬೆಕ್ಕುಗಳಿಗೆ ಹೋಲಿಕೆ ಕಂಡು ಬಂದರೂ ಮುಂಗುಸಿಗಳಿಗೆ ಹತ್ತಿರದವು, ಉದ್ದ ಶರೀರ ಗಿಡ್ಡ ಕಾಲು, ಪ್ರತಿ ಕಾಲಿಗೆ ಭಾಗಶಃ ಒಳ ಸೇರುವ ಉಗುರುಳ್ಳ ಐದು ಬೆರಳುಗಳಿವೆ, ನೀಳ ತಲೆ ಚೂಪಾದ ಮುಸುಡಿ ಇದೆ, ಇವು ಮಿಶ್ರಹಾರಿಗಳು.
ನಮ್ಮ ರಾಜ್ಯದಲ್ಲಿ ಮೂರು ಜಾತಿಯ ಕಬ್ಬೆಕ್ಕುಗಳನ್ನು ನೋಡಬಹುದು. ಇಂಗ್ಲೀಷಲ್ಲಿ ಇವಕ್ಕೆ Civet ಎಂದು ಕರೆಯುತ್ತಾರೆ.
1) ಸಾಮಾನ್ಯ ಕಬ್ಬೆಕ್ಕು:Asian palm civet ಇದು ರಾಜ್ಯದೆಲ್ಲೆಡೆ ಕಂಡುಬರುತ್ತದೆ, ಮರ ಹಾಗು ನೆಲ ವಾಸಿ, ಮಿಶ್ರಹಾರಿ, ಸಾಮಾನ್ಯ ಮೈಬಣ್ಣ ಬಿಳಿ ಮಿಶ್ರಿತ ಕಪ್ಪು ರಾತ್ರಿ ಸಂಚರಿಸುವ ಇವು ಪಾಳು ಮನೆ ಮರದ ಪೊಟರೆಯಲ್ಲಿ
Oct 3, 2021 • 7 tweets • 3 min read
ಇಂದು ದೇಶಾದ್ಯಂತ ಹಾಗೂ ನಮ್ಮ ರಾಜ್ಯಾದ್ಯಂತ ಆಚರಿಸುತ್ತಿರೋ “ವನ್ಯಜೀವಿ ಸಪ್ತಾಹ” ಕ್ಕೆ ನಮ್ಮ ತೀವ್ರ ವಿರೋಧವಿದೆ….!
ರಾಜ್ಯಪಾಲರು, ಅರಣ್ಯಮಂತ್ರಿಗಳು, ಅರಣ್ಯ ಪಡೆಯ ಮುಖ್ಯಸ್ಥರು ಇಂದು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೇಳಿದ್ದು: 👇👇👇👇( ದಯವಿಟ್ಟು ಓದಿ )🙏🙏🙏 Retweet ಮಾಡಿ
ನಿಮಗೆ ತಿಳಿದಿರುವಂತೆ ಈ ಎಲ್ಲಾ ಯೋಜನೆಗಳು ನಮ್ಮ ಪಶ್ಚಿಮಘಟ್ಟದೊಳಗಿನ ಅತೀಸೂಕ್ಷ್ಮ ಪರಿಸರ ವಲಯದಲ್ಲಿಯೇ ಬರುತ್ತವೆ. ಹಾವನ್ನು ಕುರಿತಾಗಿ, ಕಪ್ಪೆಗಳ ಅಧ್ಯಯನ ಹೀಗೇ ನಾನಾ ರೀತಿಯ ಸಂಶೋಧನೆ ಮಾಡುತ್ತಿರುವ ನೀವುಗಳು ಯಾಕೆ ಇಂತಹ ಯೋಜನೆಗಳನ್ನು ವಿರೋಧಿಸ್ತಿಲ್ಲ? ಮುಂದೆ ಈ ಯೋಜನೆಗಳೆಲ್ಲಾ ನಡೆದುಹೋದರೆ ನಿಮಗೆ ನಮಗೆ ಕುಡಿಯೋಕೇ ನೀರು ಸಿಗಲ್ಲ…!
Sep 8, 2021 • 13 tweets • 2 min read
ನಂಗೆ ಯಾರಾದ್ರು ತೇಜಸ್ವಿಯವರದ್ದು ನಿನಗಿಷ್ಟವಾದ ಪುಸ್ತಕ ಯಾವ್ದು ಅಂತ ಕೇಳಿದ್ರೆ ನಾ ಹೇಳೋದು ತೇಜಸ್ವಿಯವರ ಬದುಕೇ ಒಂದು ಅಮೋಘ ಕೃತಿ...
ಕಾರಣ,
ತೇಜಸ್ವಿ ಯಾವತ್ತೂ ಜಾತಿ ಹೆಸರನ್ನ ತಮ್ಮ ಹೆಸರಲ್ಲಿ ಸೇರಿಸಿಕೊಳ್ಳಲಿಲ್ಲ. ತೇಜಸ್ವಿ ಯಾವತ್ತೂ ಧರ್ಮದ ಕಲರ್ ಕಲರ್ ಬಾವುಟಗಳನ್ನ ಹಾರಿಸಲಿಲ್ಲ. ಯಾವುದೇ ಆಚರಣೆ ತಮ್ಮ ಮನೆಯಲ್ಲಿರಬೇಕು,
2, ಅದನ್ನ ಸಮಾಜದಲ್ಲಿ ಇನ್ನೊಬ್ಬರ ಮೇಲೆ ಹೇರಕೂಡದು ಅಂತ ಹೇಳ್ದವರು. ತೇಜಸ್ವಿ ಯಾವತ್ತೂ ತಮ್ಮ ತಮ್ಮ ಸಮುದಾಯದವರನ್ನೇ ಬೆಳೆಸಿಕೊಂಡು ಬರಲಿಲ್ಲ..
ತೇಜಸ್ವಿ ಯಾವತ್ತೂ ಯಾರೋ ಒಬ್ಬ ಬಂದು ದೇಶವನ್ನ ನಡೆಸ್ತಾನೆ, ಯಾವುದೋ ದೇವರು ಧರೆಗಿಳಿದು ಬರುವ ಅವನಿಲ್ಲದೆ ಈ ದೇಶ ನಡೆಯೋದೆ ಇಲ್ಲ ಅನ್ನೋ ಆಶಾವಾದಿತನದಿಂದ ಬದುಕಿದವರಲ್ಲ....
ಒಮ್ಮೆ
Sep 7, 2021 • 4 tweets • 2 min read
ಒಳ್ಳೆಯ ಅನ್ನ ಬೇಕು, ಬೇಸಾಯ ಬೇಡ?
ಹಳ್ಳಿ ಮನೆಗೆ ಬಂದವರು ಹಾಲು, ತುಪ್ಪ, ಬೆಲ್ಲ, ಅನ್ನ,ಮೊಸರು,ಮಜ್ಜಿಗೆ,ಉಪ್ಪಿನಕಾಯಿ ಬಗ್ಗೆ ಮೆಚ್ಚಿ ಮಾತಾಡೋದು ಎಲ್ಲರಿಗೂ ಗೊತ್ತಿದೆ.
ನೀವಿನ್ನೂ ಭತ್ತ ಬೇಳಿತೀರಾ?
ಆಕಳು ಸಾಕ್ತೀರ? ಪ್ರಶ್ನೆಯನ್ನು ಕೇಳ್ತಾರೆ.
ಮಾತಿನ ಮಧ್ಯೆ ಎಮ್ಮೆ ಹಾಲು ಚಹಾ ಚೆನ್ನಾಗಿ ಇರ್ತದೆ ಎಂದು ಹೇಳ್ತಾರೆ.
2, ನಿರ್ವಹಣೆ ಕಷ್ಟ , ಕೃಷಿ ನಷ್ಟ ಎಂದು ಗದ್ದೆ, ಕೊಟ್ಟಿಗೆ ನೋಡುವ ರೀತಿಗಳು ಈಗ ಬದಲಾಗಿವೆ. ಆದರೆ ಉಣ್ಣಲು ಒಳ್ಳೆಯದು ಬೇಕೆಂಬ ಹಂಬಲ ಮಾತ್ರ ಹಾಗೇ ಇದೆ😀
'ಮೊದಲು ನನ್ನ ಮನೆಗೆ. ಏನೆಲ್ಲ ಒಳ್ಳೆಯದು ಬೇಕೋ ಅದನ್ನು ನಾನು ಬೇಳಿತಿನಿ....' ಹೆಚ್ಚಿದ್ದರೆ ಮಾರಾಟ ಎಂಬ ನಿಲುವು ಕೆಲ ಕೃಷಿಕರದು. 'ಕೃಷಿಕರಿದ್ದರೆ ಚೆನ್ನ, ದುಡಿಯುವವರಿದ್ದರೆ ಅನ್ನ'
Jun 9, 2021 • 6 tweets • 7 min read
ಪರಿಸರ ದಿನಾಚರಣೆಯೇನೋ ಬರೀ ಪೋಟೋ ಹಾಕಿ ಸಂಭ್ರಮಿಸೋಕಾ!! ಗಿಡ ನೆಟ್ಟಿರಿ ಹೌದು ಒಳ್ಳೆಯದೇ , ಗಿಡ ನೆಡಿ ಪರಿಸರ ಉಳಿಸಿ ಎಂಬಿತ್ಯಾದಿ ವ್ಯಾಖ್ಯಾನದೊಂದಿಗೆ ವಾಟ್ಸಪ್, ಇನಸ್ಟಾಗ್ರಾಂ ಸ್ಟೇಟಸಲ್ಲಿ ರಾರಾಜಿಸಾಯ್ತು. ಆದರೆ ಪ್ರತಿ ದಿನ ನಮ್ಮ ಅತ್ಯಮೂಲ್ಯ ಕಾಡಿನ ಮೇಲೆ ಆಗೋ ದೌರ್ಜನ್ಯಕ್ಕೆ ಯಾಕೆ ದನಿ ಎತ್ತುತ್ತಿಲ್ಲಾ?????
ಬರಿ ಭಾಷೆಗೊಂದೆ ಸಾಕಾ ನಿಮ್ಮ ಅಭಿಮಾನ, ಬದುಕೋಕೆ ಭಾಷೆ ಜೊತೆ ನೆಲ,ಕಾಡು,ನೀರು, ಶುದ್ಧ ಗಾಳಿ ಇವು ಬೇಕು ಸ್ವಾಮಿ! ಯಾರೋ ಏನೋ ಮಾಡ್ತಾರೆ ಇನ್ಯಾರೋ ಹೋರಾಡುತ್ತಾರೆ ಅಂತ ನೀವು ಇವತ ಸುಮ್ಮನೆ ಆದರೆ ಮುಂದಿನ ನಿಮ್ಮ ಮಕ್ಕಳ ಭವಿಷ್ಯ ನೀವೆ ಹಾಳು ಮಾಡಿದಂಗೆ.