My Authors
Read all threads
ಕನ್ನಡದ ಅಂಶಗಣಗಳ ಛಂದಸ್ಸ ಬಗೆಗೆ ನಾನು ಈವತ್ತು ಝೂಂನಲ್ಲಿ ಮಾತನಾಡಿದೆ. ನೀವು ೩೦-೪೦ ಜನ ಬಂದು ಪಾಲ್ಗೊಂಡು ಸಾರ್ಥಕ ಮಾಡಿದಿರಿ 🙏

ಛಂದಸ್ಸ ವಿಷಯವ ತಂದು ನಾ ಹೇಳಿದೆ
ಚಂದದಿ ಕೇಳಿ ತಿಳಿಯಲು-
ಚಂದದಿ ಕೇಳಿ ತಿಳಿಯಲು ತಾವೆಲ್ಲ
ಬಂದಿರಿ ಇಂದು ಭರದಿಂದ
(ತ್ರಿಪದಿ)

ಅದರ ತಿರುಳನು ಈ ಟುವ್ವಿ ಸರಣಿಯಲಿ ಹಂಚಿಕೊಳ್ಳುತ್ತೇನೆ

1/n
I gave a talk on Zoom about amSagaNa chandassu in kannaDa today. 30-40 of you joined & made it meaningful🙏

chandassa viShayava tandu nA hELide
candadi kELi tiLiyalu-
candadi kELi tiLiyalu tAvella
bandiri indu bharadinda
(tripadi)

I’m sharing the gist of it in this tweet series
ಕನ್ನಡದಲಿ ಪದ್ಯಗಳ ಬಂಧ ೩ ಪ್ರಕಾರ- ಅಂಶಬಂಧ, ಮಾತ್ರಾಬಂಧ, ಅಕ್ಷರಬಂಧ

ಅಕ್ಷರಬಂಧಗಳು ವೃತ್ತಗಳು- ಎಲ್ಲಿ ಲಘು ಗುರುಗಳು ಬರಬೇಕು ಎಂದು ನಿಗದಿತವಾಗಿರುತ್ತೆ. ಹೆಚ್ಚಿನಂಶ ಒಂದು ಪದ್ಯದ ಎಲ್ಲ ಪಾದಗಳೂ (ಅಡಿ/ಸಾಲು) ಏಕರೀತಿಯಲ್ಲಿ ಇರುತ್ತವೆ
ಉದಾ-ಚಂಪಕಮಾಲೆ, ಮತ್ತೇಭವಿಕ್ರೀಡಿತ, ಮಹಾಸ್ರಗ್ಧರೆ ವೃತ್ತಗಳು

3/n
kannaDa classical verse forms/meters fall in 3 categories- amSha, mAtrA & akShara bandhas

akSharabandha vRttas- the positions of short & long syllable is preset. Majority verses have same pattern in all feet/lines

E.g. campakamAle, mattEbhavikrIDita, mahAsragdhare vRttas

4/n
ಇಲ್ಲಿ ಚಂಪಕಮಾಲೆಯ ನನ್ನ ಪದ್ಯವನು ನೋಡಿ. ಇದರ ಓಟಕೆ ನನ್ನ ಸುಲಭ ಸೂತ್ರ

ಮನೆಯಲಿ ಕಂಪು ಸೊಂಪು ಬಲು ತಂಪನು ಚಂಪಕಮಾಲೆ ತುಂಬಿತುಽ

Here’s my #campakamAla verse.
And an easy mnemonic I made to remember its movement

maneyali kampu sompu balu tampanu campakamAle tumbituಽ



5/n
ಮಾತ್ರಾಬಂಧಗಳಲಿ ಪದ್ಯದ ಸಾಲುಗಳನು ಘಟಕಗಳಾಗಿ ಬಿಡಿಸಿ, ಒಂದೊಂದು ಘಟಕದಲಿ ಇಷ್ಟಿಷ್ಟು ಮಾತ್ರೆಗಳು ಬರಬಹುದು ಅಂತ ನಿಗದಿತವಾಗಿರುತ್ತೆ. ಆ ಮಾತ್ರೆಗಳು ಹೇಗೆ ಬರಬಹುದು ಅನ್ನೋದಕ್ಕೆ ಹೆಚ್ಚು ಸ್ವಾತಂತ್ರ್ಯ ಉಂಟು.

ಉದಾ- ಪಂಚಮಾತ್ರೆಯ ಚೌಪದಿ (ಕಗ್ಗ), ಕಂದಪದ್ಯ, ಷಟ್ಪದಿಗಳು, ರಗಳೆ.

6/n
In mAtrAbandha, feet of each verse are split into blocks, with set number of morae (mAtre) assigned to each block. There is more flexibility for poet to choose how to fill up those morae.

E.g. pancamAtrA caupadi (kagga), kandapadya, ShaTpadi, ragaLe

7/n
ಚೌಪದಿ (೫)
caupadi-5

ಹುಲ್ಲಾಗು ಬೆಟ್ಟದಡಿ ಮನೆಗೆಮಲ್ಲಿಗೆಯಾಗು
ಕಲ್ಲಾಗು ಕಷ್ಟಗಳ ಮಳೆಯವಿಧಿ ಸುರಿಯೆ
ಬೆಲ್ಲಸಕ್ಕರೆಯಾಗು ದೀನದುರ್ಬಲರಿಂಗೆ
ಎಲ್ಲರೊಳಗೊಂದಾಗು ಮಂಕುತಿಮ್ಮ

hullAgu beTTadaDi manegemalligeyAgu
kallAgu kaAhTagaLa maLeyavidhi suriye
bellasakkareyAgu dInadurbalaringe
ellaroLagondAgu mankutimma
ಅಂಶಗಣ ದ್ರಾವಿಡ ಭಾಷೆಗಳ ವೈಶಿಷ್ಟ್ಯ.
ಇವನ್ನು ಕಟ್ಟುವ ಇಟ್ಟಿಗೆ ಅಕ್ಷರ, ವಿಶೇಷವಾಗಿ ಗುರು(—). ಗುರುವಿಗೆ ಪರ್ಯಾಯ ಲಘು(U) ಬರಬಹುದು (ಅಪವಾದಗಳ ಹೊರತು)

amSagaNas are typical of Dravidian langs. Building blocks for gaNas are syllables, especially guru(—). Barring exceptions laghu(U) may replace guru
9/n
ಕನ್ನಡದಲಿ ಅಂಶಗಣಗಳು ೩ ತೆರ (ತೆಲುಗು ತಮಿಳಲ್ಲೂ)
೨ ಅಂಶ- ಬ್ರಹ್ಮ ಗಣ
೩ ಅಂಶ- ವಿಷ್ಣು
೪ ಅಂಶ- ರುದ್ರ

kannaDa has 3 types of amSha gaNa (telugu, tamiZ too)
2 amSha-brahma gaNa
3 amSa- viShNu
4 amSa- rudra

ಬ್ರಹ್ಮಗಣ ಮೂಲತಃ brahmagaNa prototype is —.—
ವಿಷ್ಣು viShNu —.—.—
ರುದ್ರ rudra —.—.—.—

10/n
ಈಗ ಬ್ರಹ್ಮಗಣವನು ನೋಡೋಣ. ಉಳಿದ ಎರಡು ಗಣಗಳಿಗೂ ಹೀಗೇ ಅನ್ವಯಿಸಿಕೊಳ್ಳಿ

ಗಣದ ಮೊದಲ ಅಂಶ “—“ (ಗುರು) ಬದಲು “UU” (ಎರಡು ಲಘು) ಬರಬಹುದು. ಎರಡನೇ ಅಂಶದಲಿ ೧ ಗುರುವಿಗೆ ಬದಲು, ಒಂದೇ ಲಘು ಬರಬಹುದು (೨ ಅಲ್ಲ).
ಅಂದರೆ “—.—“, “UU—“, “UUU”, “—U” ಇವೆಲ್ಲ ಬ್ರಹ್ಮಗಣ.
ಉದಾ, ನಾನಾ, ನನಗೂ, ನನಗೆ, ನಾನು

UUUU ❌ (ಬ್ರಹ್ಮಗಣ ಅಲ್ಲ

11/n
Now let’s look at brahma. You may extend this to the other gaNas

First amSa of the gaNa “—“ (guru) can be replaced by “UU” (2 laghu). In 2nd amSa, 1 laghu (Not 2) can come for 1 guru

So “—.—“ “UU—“ “UUU” “—U” are all brahma

E.g. nAnA, nanagU, nanage, nAnu

UUUU ❌ (Not brahma)
ಈ ನಿಯಮ ನೆನಪಿರಲಿ
ಯಾವುದೇ ಗಣದ ಮೊದಲ ಅಂಶ, ೧ ಗುರು ಅಥವಾ ಪರ್ಯಾಯ ೨ ಲಘು ಬರಬಹುದು

ಮೊಡಲಲ್ಲದ ಅಂಶ (೨,೩,೪)- ಒಂದೇ ಅಕ್ಷರ ಬರುತ್ತೆ ೧ ಗುರು/ಲಘು

Rule of thumb
1st amSa of any gaNa may have 1 guru or 2 laghu instead

Any amSa in non-initial position will have only one syllable- 1 guru OR 1 laghu

13/n
ಅಂಶಗಣ ಕನ್ನಡ/ದ್ರಾವಿಡದ ಹಾಸುಹೊಕ್ಕಾದ ಲಯ. ಇದಿರುವ ಪದ್ಯಗಳನು “ಹಾಡುಗಬ್ಬ” ಅಂತೀವಿ. ಜಾನಪದ ಸಾಹಿತ್ಸದಲೂ ಇದು ಹುಲುಸಾಗಿ ಸಿಗುತ್ತೆ

amSagaNa is a rhythm woven into warp & weft of kannaDa/Dravidian. Poems with amSagaNa are called hADugabba (song-poetry). It is found in plenty in folk literature too
ದ್ರಾವಿಡ ಪದ್ಯಗಳಿಗೆ ಮೀಸಲಾದುದು
ಆದಿಪ್ರಾಸ-ದ್ವಿತೀಯಾಕ್ಷರ ಪ್ರಾಸ

ಪ್ರತಿ ಪಾದದ ಎರಡನೇ ಅಕ್ಷರದ ವ್ಯಂಜನ ಒಂದೇ ಆಗಿರಬೇಕು (ವ್ಯಂಜನದ ಮೇಲಿನ ಸ್ವರ ಬೇರೆಬೇರೆ ಇರಬಹುದು)

ಈ ವ್ಯಂಜನದ ಹಿಂದಿನ ಅಕ್ಷರದ ಉದ್ದ ಒಂದೇ ಆಗಿರಬೇಕು (ಇಲ್ಲ ಹ್ರಸ್ವ, ಇಲ್ಲ ದೀರ್ಘ. ಎರಡನ್ನು ಬೆರೆಸ ಬಾರದು)

ಉದಾ- ಬೇಡ, ಕೋಡಿ, ನೀಡು, ಕಾಡೆ, ನೋಡಾ, ಮಾಡೌ ಕೇಡೈ
15/n
A sine qua non of Dravidian poetry is rhyme called AdiprAsa=dvitIyAkSharaprAsa

2nd syllable of each foot has to be same consonant (vowel on it may vary)

AND length of vowel BEFORE it (on 1st syllable) is constant (short or long but not a mix)

E.g. bEDa kODi nIDu nODAi mADau
ಕೆಲವು ಬಂಧಗಳ ನೋಡೋಣ

#ತ್ರಿಪದಿ
ಕನ್ನಡದ ಗಾಯತ್ರಿ ಎಂಬ ಹಿರಿಮೆ. ಇದಕೆ ಕಡಿಮೆಯೆಂದರೆ ೧೩೦೦ ವರ್ಷ ಇತಿಹಾಸ

ಬಾದಾಮಿಯ ಕಪ್ಪೆ ಆರಭಟ ಶಾಸನದಲಿನ (ಶಕ ೭೦೦) ಈ ಪದ್ಯ ನೋಡಿ

ಕಟ್ಟಿದ ಸಿಂಘಮನ್ ಕೆಟ್ಟೊಡೇನ್ ಎಮಗೆಂದು
ಬಿಟ್ಟವೊಲ್ ಕಲಿಗೆ ವಿಪರೀತಂ-ಗಹಿತರ್ಕಳ್
ಕೆಟ್ಟರ್-ಮೇಣ್ ಸತ್ತರ್-ಅವಿಚಾರಂ

ಗಣಗಳು ತಿಳಿಯುವ ಹಾಗೆ ವಿಂಗಡಣೆ ಮಾಡಿದ್ದೇನೆ

17/n
#ತ್ರಿಪದಿ ಗಣ ಹೀಗೆ ವಿಂಗಡಿಸಿ ಕೊಳ್ಳಿ

ಬ್ರ-ಬ್ರಹ್ಮ, ವಿ-ವಿಷ್ಣು, ರು-ರುದ್ರ

೨ ವಿ, ೨ ವಿ
೧ ವಿ, ೧ ಬ್ರ ೧ ವಿ- ೧ ವಿ
೧ ವಿ, ೧ ಬ್ರ ೧ ವಿ

ಇದಕೆ ನಾನು ಕಟ್ಟಿದ ಸೂತ್ರ

*ಹರಿಹರಿ ಮತ್ತೊಮ್ಮೆ *ಹರಿಹರಿ ಆಮೇಲೆ
*ಹರಿ ಬೊಮ್ಮ ಹರಿಗೆ ನಿಲುಗಡೆ- ಹರಿ ಮತ್ತೆ
*ಹರಿಬೊಮ್ಮ ಹರಿಯೆ ತ್ರಿಪದಿಯು

*ಈ ಎಡೆಗಳಲಿ ಪ್ರಾಸ ಬರಬೇಕು
(ಹರಿ=ವಿಷ್ಣು)

18/n
Let’s look at specific verse forms

#tripadi

Acclaimed as kannaDa’s gAyitri
history of at least 1300yrs

See verse from bAdAmi inscription (700CE). I’ve parsed it to show gaNas

kATTida singhaman keTToDEn emagendu
biTTavol kalige viparItan-gahitarkaL
keTTar-mEN sattar-avicAram
#tripadi gaNas are parsed thus

Br-brahma, Vi-viShNu, Ru-rudra

*2Vi, *2Vi
*Vi Br Vi- Vi
*Vi Br Vi

Here’s my mnemonic

*hari hari mattomme *hari hari AmEle
*hari bomma harige nilugaDe- hari matte
*hari bomma hariye tripadiyu

*prAsa, rhyme has to occur
(hari=viShNu gaNa)

20/n
ಓದುವಾಗ ಗಣದ ಮೊದಲಂಶವನು ಬಿಟ್ಟು ಬೇರೆ ಕಡೆ ಬರುವ ಲಘುವನು ಗುರುವಾಗಿ ಓದುವುದು ವಾಡಿಕೆ.
ಅಂಶಬಂಧಗಳ ಎಲ್ಲ ಪದ್ಯಗಳಿಗೂ ಇದು ಅನ್ವಯ.

*ಉದ್ದಽರಿ ಕೊಟ್ಟಣ್ಣ, *ಹದ್ದಾದಽ ಹಾವಾದಽ
*ಎದ್ದೆದ್ದುಽ ಹರಿವಽ ನಾಯಾದಽ—
*ಎದ್ದೆದ್ದುಽ ಹರಿವಽ ನಾಯಾದಽ ಹುತ್ತಽದಽ
*ಗೊದ್ದಽದಂ-ತಾದಽ ಸರ್ವಜ್ಞಽ

ಽ-ಕರ್ಷಣ, ಎಳೆತ
*- ಪ್ರಾಸವನು ಗಮನಿಸಿ

21/n
When reading, laghu in non-initial amSa of gaNa is lengthened to a schwa/long vowel. This is followed in all amShabandha verse.

Here’s another tripadi

uddaಽriಽ koTTaNNaಽ haddAdaಽ hAvAdaಽ
eddedduಽ harivaಽ nAyAdaಽ huttadaಽ
goddaಽdan-tAdaಽ sarvJnaಽ

ಽ- schwa, lengthening
*- rhyme
#ಏಳೆ ಅಂಶಬಂಧಗಳಲಿ ಎಲ್ಲಕ್ಕಿಂತ ಚಿಕ್ಕದು. ಇದರ ಆಕಾರ ತುಂಡರಿಸಿದ ತ್ರಿಪದಿಯಂತೆ

*೨ವಿ, *೨ವಿ
*೧ವಿ ೧ಬ್ರ ೧ವಿ

*ಪ್ರಾಸ

#ELe is the shortest verse on this category. It’s a two-line poem and its form is essentially a truncated tripadi

*2Vi, *2Vi
*Vi Br Vi

*rhyme

23/n
ಜನಪದ ಸಾಹಿತ್ಯದಿಂದ ಒಂದು #ಏಳೆ
ಸುಬ್ಬಿ ಎನುವ ಹುಡುಗಿ ಮೈನೆರೆದ ಸಡಗರ.

*ಸುಬ್ಬಿ ಮೈ ನೆರೆದಾಳ *ಸುಬ್ಬಿಗೇ ನೊಯ್ಯಾಲೆ
*ಕೊಬ್ಬರಿ ಕಾರ ತಿಳಿದುಪ್ಪ

An #ELe from folk literature celebrating a girl subbi’s coming of age

*subbi mai neredALa *subbigE noyyAle
*kobbari kAra tiLiduppa

24/n
#ಸಾಂಗತ್ಯ
ಹಳೆಯಬಂಧ
ಸೊಬಗಿನ ಸೋನೆ ಬಿಟ್ಟರೆ, ರಕ್ನಾಕರವರ್ಣಿ ನಡುಗನ್ನಡದಲಿ ತುಂಬ ಬಳಸಿದ

*೪ವಿ
*೨ವಿ ೧ಬ್ರ
*೪ವಿ
*೨ವಿ ೧ಬ್ರ

ನನ್ನ ಸೂತ್ರ

ಎಸೆವುದು ಸಾಂಗತ್ಯ ಇಳೆಯಲಿ ಪ್ರಾಸದಿ
ಬೆಸ ಸಾಲಿನಲಿ ನಾಲ್ಕು ವಿಷ್ಣು
ಹಸನಾಗಿ ಹರಿಹರಿ ಆಮೇಲೆ ಬೊಮ್ಮನ
ಹೊಸೆ ಸರಿಸಾಲಲಿ ನೀನು

ಸೊಬಗಿನ ಸೋನೆಯಲಿ ಮಾತ್ರ ಎಲ್ಲ ವಿಷ್ಣುಗಣ
*೪ವಿ, *೩ವಿ, *೪ವಿ, *೩ವಿ
#sAngatya
Old form
After sobagina sOne (14thC) ratnAkaravarNi used it in naDugannaDa

*4Vi
*2Vi 1Br
*4Vi
*2Vi 1Br

My mnemonic
esevudu sAngatya iLeyali prAsadi
besa sAlinali nAlku viShNu
hasanAgi harihari AmEle bommana
hose sarisAlali nInu

Only in sobagina sOne, verse has all Vi
ಭರತೇಶ ವೈಭವ

ಗಣನೆಯಿಲ್ಲದ ರಾಜ್ಯಸುಖದೊಳೋಲಾಡಿ ಧಾ
ರಿಣಿ ಮೆಚ್ಚೆ ಜಿನಯೋಗಿಆಗಿ
ಕ್ಷಣಕೆ ಕರ್ಮವಸುಟ್ಟು ಜಿನನಾದ ಭೂಭುಜಾ
ಗ್ರಣಿಯ ವೈಭವವ ಲಾಲಿಸಿರೋ

Verse from bharatEsa vaibhava

gaNaneyillada rAjyasukhadoLOlADi dhA
riNi mecce jinayOgi Agi
kShaNake karmava suTTu jinanAda bhUbhujA
graNiya vaibhava lAlisirO
#ಅಕ್ಕರ ಪ್ರಾಚೀನ ಬಂಧಗಳು. ಹೆಚ್ಚು ಪ್ರಚುರ #ಪಿರಿಯಕ್ಕರ

ಬ್ರ ೫ವಿ ರು-೪ ಪಾದ

ಬ್ರಹ್ಮ ಮತ್ತೈದು ವಿಷ್ಣುಗಳಾಮೇಲೆ ರುದ್ರನು ಬಂದರೆ ಪಿರಿಯಕ್ಕರ

Types of #akkara are ancient forms. Of these #piriyakkara is commonest

4 feet- Br 5Vi Ru

brahma mattaidu viShNuga-LAmEle rudranu bandare piriyakkara
28/n
ನನ್ನದೊಂದು ಪಿರಿಯಕ್ಕರದ ಪದ್ಯ

ನಟ್ಟಡವಿಯೊಳಗೈತಂದ ಋಷಿಗಣಕೌತಣವಿಡಲನ್ನವಿಲ್ಲದ ಬಿ-
ಕ್ಕಟ್ಟನೆಣಿಸುತ ಕೈಕೈಯ ಹಿಸುಕುತ್ತ ದ್ರೌಪದಿ ಕೃಷ್ಣನ ಎಣಿಸುತಶ್ರು
ಇಟ್ಟು ಕರೆದಾಗ ಅವ ಬಂದು ಉಳಿದಿದ್ದ ಅಗುಳುಂಡ ಕ್ಷಣದಲ್ಲೆ ಜಗಕೆಲ್ಲ ಆಹ್ !
ಹೊಟ್ಟೆಯೊಡೆವಂತೆ ತುಂಬಿದುದಚ್ಚರಿಯೇನಿಲ್ಲ ಆತನೇ ವಿಶ್ವಂಭರ

29/n
#ದೊರೆಯಕ್ಕರ
೨ವಿ ೧ಬ್ರ ೨ವಿ ೧ಬ್ರ- ೪ ಪಾದ

ಸೂತ್ರ
ದೊರೆಯಕ್ಕರದಿ ವಿಷ್ಣು ವಿಷ್ಣ ತುದಿ ಬೊಮ್ಮ ಎಲ್ಲವಿಮ್ಮಡಿಸು

#doreyakkara
2Vi 1Br 2Vi 1Br- 4 feet

mnemonic
doreyakkaradi viShNu viShNu tudi bomma ellavimmaDisu

30/n
#ನಡುವಣಕ್ಕರ
೧ಬ್ರ ೩ವಿ ೧ರು

ಪಿರಿಯಕ್ಕರದ ಸಣ್ಣರೂಪು ಎನಬಹುದು (೫ರ ಬದಲು ೩ವಿ)

ಸೂತ್ರ
ನಡುವಣಕ್ಕರದಲಿ ಬೊಮ್ಮ ಹರಿ ಮೂರು ಕೊನೆಗೆ ರುದ್ರ

#naDuvaNakkara
1Br 3Vi 1Ru

This could be said to be shortened version of piriyakkara (3Vi in place of 5)

mnemonic
naDuvaNakkaradali bomma hari mUru konege rudra
#ಎಡೆಯಕ್ಕರ
೧ಬ್ರ ೨ವಿ ೧ರು

ನಡುವಣಕ್ಕರಕೆ ೧ವಿ ಕಡಿಮೆ

ಬ್ರಹ್ಮ ಹರಿಹರಿ ಶಿವನಿರೆ ಎಡೆಯಕ್ಕರ

#eDeyakkara
1Br 2Vi 1Ru

1Vi < naDuvaNakkara

Brahma harihari Sivanire eDeyakkara

ಬೀದಿ ತಿರುಗದೆ ಮನಯಲ್ಲೇ ಬಿದ್ದಿದ್ದರೆ
ಕಾದಿ ಮನೆಯಾಕೆ ನಲುಗಿಸಿ ಕಾಡುವಳು
ಹಾದಿಗಿಳಿದರೆ ಪೋಲೀಸು ಹಾಕಿಯೆಲ್ಲ
ಊದಿಸುವರೇನು ಮಾಡಲಿ ಒಂದೂಕಾಣೆ
#ಕಿರಿಯಕ್ಕರ
೨ವಿ ೧ರು

ಸೂತ್ರ
ಹರಿಹರಿ ಶಿವನಿರೆ ಕಿರಿಯಕ್ಕರ

#kiriyakkara
2Vi 1Ru

mnemonic
harihari Sivanire kiriyakkara

ನೋಡಿ ತರುಣನ ನಕ್ಕಾ ಕ್ಷಣ
ಕಾಡ ಹರಟೆಯ ಹೆಂಗಸರು
ಕೂಡಿ ಹುಟ್ಟಿಸಿದರು ಮಗುವ
ಗಾಡಿಕಾರ್ತಿಗೆ ವಾರದಲ್ಲೇ

33/n
#ಚೌಪದಿ
೧ವಿ ೧ರು

ನನ್ನ ಸೂತ್ರ
ಚೌಪದಿ ವಿಷ್ಣು ರುದ್ರ

#caupadi
1Vi 1Ru

Mnemonic
caupadi viShNurudra

34/n
#ಷಟ್ಪದಿ
೨ ವಿ
೨ ವಿ
೨ ವಿ ೧ರು
೨ ವಿ
೨ ವಿ
೨ ವಿ ೧ರು

೬ ಸಾಲ ಈ ಮೂಲ ಷಟ್ಪದಿ ಅಂಶಬಂಧವಾಗಿದ್ದು ಮುಂದೆ ಮಾತ್ರಾಬಂಧಕ್ಕೆ ತಿರುಗಿ ಪ್ರಚಲಿತ ಹಲವು ಷಟ್ಪದಿಗಳಾಗಿದೆ

#ShaTpadi
2Vi
2Vi
2Vi 1Ru
2Vi
2Vi
2Vi 1Ru

This original ShaTpadi of 6 feet is an amSabandha, later turned to mAtrA(morae) bandha of many types
#ಸೀಸಪದ್ಯ
ಹಾಡ ರೂಪದ ಪುರಾಣಕತೆ, ಯಕ್ಷಗಾನದಲಿ ವಿಪುಲ. ೩೦೦-೪೦೦ ವರ್ಷದಿಂದ ಕಾಣುತ್ತೆ. ಮೂಲತಃ ಪ್ರಾಕೃತದ ಶೀರ್ಷಕ ಪದ್ಯದಿಂದ, ಕನ್ನಡಕ್ಕೆ ತೆಲುಗಿಂದ ಬಂದಿರಬಹುದು

*೪ವಿ /*೨ವಿ ೨ಬ್ರ- ೪ ಪಾದ

ಪಿರಿಯಕ್ಕರಕ್ಕೆ ಹತ್ತಿರ. ಒಳಪ್ರಾಸವಿರುವುದರಿಂದ ೪ ಪಾದ ಎಂಟಾಗಿ ಒಡೆಯುತ್ತೆ

ಸಾಮಾನ್ಯ ಇದರ ಬಳಿಕ ತೇಟಗೀತಿ/ಆಟವೆಲದಿ ಪದ್ಯ ಬಂದೇಬರುತ್ತೆ
36/n
#sIsapadya
Seen aplenty in songs of purANa stories & yakShagNa. Evidence in last 3-400 yrs. Originally from prAkRta meter SIrShaka, may have come thru telugu

*4Vi/ *2Vi 2Br- 4 feet

Like piriyakkara. Due to rhyme 4 feet split into 8.

Usually followed by tETagIti/ATaveladi verse
#ತೇಟಗೀತಿ
೧ಬ್ರ ೨ವಿ/ ೨ಬ್ರ

ತೆಲುಗಿಂದ ಬಂದಿರಬೇಕು. ತೇಟಗೀತಿ ಎಂದರೆ ತಿಳಿಯಾದ ಹಾಡು. ಎಡೆಯಕ್ಕರಕೆ ತುಂಬ ಹತ್ತಿರ (ಕೊನೆ ರುದ್ರದ ಬದಲು ಇಲ್ಲಿ ೨ಬ್ರಹ್ಮ)

#tETagIti
Likely from telugu. tETagIti means clear song. Very close to eDeyakkara (rudra is replaced here by 2 brahma)



38/n
#ಆಟವೆಲದಿ
೩ಬ್ರ ೨ವಿ (ವಿಷಮಪಾದ)
೫ಬ್ರ (ಸಮ)

ತೆಲುಗಿಂದ ಬಂದಿರಬೇಕು. ಆಟವೆಲದಿ ಎಂದರೆ ಪಾತರದವಳು

#ATaveladi
3Br 2Vi (odd feet)
5Br (even)

ATaveladi is dancing girl in telugu

ತಾನು ಮಾಡಿದೆಷ್ಟೋ ತಪ್ಪುಗಳಿರುವಾಗ
ಹೆರರ ತಪ್ಪ ನೋಡಿ ಎಣಿಸುವೋದು
ಚಕ್ಲಿಯನ್ನು ಕಂಡು ಸಂಡಿಗೆ ನಕ್ಕಂತೆ
ಕ್ಷಿತಿಜಾತ್ಮಾಭಿರಾಮ ಕೇಳ ವೇಮ

39/n
ಕ್ಲಿಷ್ಟ ಹಾಗೂ ಇನ್ನೂ ಕೆಲ ಗೊಂದಲಗಳಿರುವ ಗೀತಿಕೆ, ಮತ್ತೆ ತುಂಬ ಹಿಂದೆಯೇ ಅಂಶಬಂಧವಾಗಿದ್ದೂ ಮಾತ್ರಾಬಂಧಕೆ ಹೊಂದಿದ್ದ ಮದನವತಿ, ಛಂದೋವತಂಸದ ಬಗೆಗೆ ನಾ ಹೇಳಲಿಲ್ಲ

I didn’t discuss gItike.
Also didn’t discuss madanavati & ChandOvatamsa which, though amSabandhas, also keep count of morae

40/40
@threadreaderapp unroll please
Missing some Tweet in this thread? You can try to force a refresh.

Enjoying this thread?

Keep Current with Shrikaanth K Murthy

Profile picture

Stay in touch and get notified when new unrolls are available from this author!

Read all threads

This Thread may be Removed Anytime!

Twitter may remove this content at anytime, convert it as a PDF, save and print for later use!

Try unrolling a thread yourself!

how to unroll video

1) Follow Thread Reader App on Twitter so you can easily mention us!

2) Go to a Twitter thread (series of Tweets by the same owner) and mention us with a keyword "unroll" @threadreaderapp unroll

You can practice here first or read more on our help page!

Follow Us on Twitter!

Did Thread Reader help you today?

Support us! We are indie developers!


This site is made by just two indie developers on a laptop doing marketing, support and development! Read more about the story.

Become a Premium Member ($3.00/month or $30.00/year) and get exclusive features!

Become Premium

Too expensive? Make a small donation by buying us coffee ($5) or help with server cost ($10)

Donate via Paypal Become our Patreon

Thank you for your support!