ನಾಚಿವೆ ನಿನ್ನನು ನೋಡಿ ಹೂವಿನ ಅಂಗಡಿ
ಮೆಲ್ಲಗೆ ಕಣ್ಣಲೆ ಗೀಚು ಮುತ್ತಿನ ಮುನ್ನುಡಿ
ಮಂದಹಾಸವೆ ನನ್ನ ಆಸ್ತಿಯು
ಈಗ ನಿನ್ನ ಪಾಲು
ತಮಾಷೆಗು ಕೈ ಚಾಚು ತಯಾರಾಗುವೆ
ಬಡಪಾಯಿಯ ಮನರಂಜನೆ ಬರೀ ಇಂಥವೇ..
ನಿನ್ನನು ಕಾಣುವ ಜಾಗ ಖಾಸಗಿ ಸ್ಮಾರಕ
ನನ್ನನು ಆಪ್ತನು ಎಂದು ಮಾಡಿಕೊ ನೇಮಕ
ಎಲ್ಲೇ ಎಸೆದರು ನಿನ್ನ ಕಣ್ಣಲೇ
ಬಂದು ಬೀಳುವಾಸೆ..
ನಿನ್ನ ಜೀವದಲ್ಲೀಗ ಜಮಾ ಆಗುವೆ...
ನಡು ಬೀದಿಯ ಜ್ಞಾನೋದಯ ಬರೀ ಇಂಥವೇ.
ಅನಾದಿ ಕಾಲದಿಂದಲೂ ಮೈಸೂರು ಎಂಬ ಹೆಸರು ರೂಢಿಯಲ್ಲಿದ್ದಂತೆ ಕಾಣಿಸುತ್ತದೆ. ಆದರೆ ಯಾವಾಗ ಈ ಹೆಸರು ಈ ಸೀಮೆಗೆ ಪ್ರಾಪ್ತವಾಯಿತೆಂದು ಹೇಳಲು ಸಾಧ್ಯವಾಗುತ್ತಿಲ್ಲ.
ಪಾಂಡವರ ಯುಗದಲ್ಲಿ ಈ ಪ್ರಾಂತವನ್ನು ಮಾಹಿಷ್ಮತಿ ಎಂದು ಕರೆಯಲಾಗುತ್ತಿತ್ತೆಂದು ಶಾಸನ ತಜ್ಞ ಬಿ.ಎಲ್. ರೈಸ್‌ರವರು ಹೇಳುತ್ತಾರೆ. ಸಾಮ್ರಾಟ ಅಶೋಕನ ಕಾಲದಲ್ಲಿ ಈ ಸೀಮೆಗೆ ಮಹಿಷ ಮಂಡಲವೆಂದು ಕರೆಯಲಾಗುತ್ತಿತ್ತೆಂದು ಹೇಳಲಾಗಿದೆ. ಅಶೋಕ ಚಕ್ರವರ್ತಿ ಬೌದ್ಧಧರ್ಮ ಪ್ರಚಾರಕ್ಕೆ ಮಹಾದೇವ ಎಂಬುವನನ್ನು ಮಹಿಷ ಮಂಡಲಕ್ಕೆ ಕಳುಹಿಸುತ್ತಾನೆ.
ಮಾಹಿತಿ ಸಂಗ್ರಹ: ಶರತ್ ವಿಶ್ವಕರ್ಮ ಅವ್ರು
ಕೃಪೆ: ಶಿವರಾಜ ಅವ್ರು
• ಬ್ರಹ್ಮನ ಮಗ ಮರೀಚಿ
• ಮರೀಚಿಯ ಮಗ ಕಾಶ್ಯಪ
• ಕಾಶ್ಯಪರ ಮಗ ಸೂರ್ಯ
• ಸೂರ್ಯನ ಮಗ ಮನು
• ಮನುವಿನ ಮಗ ಇಕ್ಷ್ವಾಕು
• ಇಕ್ಷ್ವಾಕುವಿನ ಮಗ ಕುಕ್ಷಿ
• ಕುಕ್ಷಿಯ ಮಗ ವಿಕುಕ್ಷಿ
• ವಿಕುಕ್ಷಿಯ ಮಗ ಬಾಣ
• ಬಾಣನ ಮಗ ಅನರಣ್ಯ
1/n
• ಅನರಣ್ಯನ ಮಗ ಪೃಥು
• ಪೃಥುವಿನ ಮಗ ತ್ರಿಶಂಕು
• ತ್ರಿಶಂಕುವಿನ ಮಗ ದುಂಧುಮಾರ.(ಯುವನಾಶ್ವ)
• ದುಂಧುಮಾರುವಿನ ಮಗ ಮಾಂಧಾತ
• ಮಾಂಧಾತುವಿನ ಮಗ ಸುಸಂಧಿ
• ಸುಸಂಧಿಯ ಮಗ ಧೃವಸಂಧಿ
• ಧೃವಸಂಧಿಯ ಮಗ ಭರತ
• ಭರತನ ಮಗ ಅಶೀತಿ
• అಶೀತಿಯ ಮಗ ಸಗರ
• ಸಗರನ ಮಗ ಅಸಮಂಜಸ*
• ಅಸಮಂಜಸನ ಮಗ ಅಂಶುಮಂತ
• ಅಂಶುಮಂತನ ಮಗ ದಿಲೀಪ
2/n
• ದಿಲೀಪನ ಮಗ ಭಗೀರಥ
• ಭಗೀರಥನ ಮಗ ಕಕುತ್ಸು
• ಕಕುತ್ಸುವಿನ ಮಗ ರಘು
• ರಘುವಿನ ಮಗ ಪ್ರವುರ್ಧ
• ಪ್ರವುರ್ಧನ ಮಗ ಶಂಖನು
• ಶಂಖನುವಿನ ಮಗ ಸುದರ್ಶನ
• ಸುದರ್ಶನನ ಮಗ ಅಗ್ನಿವರ್ಣ
• ಅಗ್ನಿವರ್ಣನ ಮಗ ಶೀಘ್ರವೇದ
• ಶೀಘ್ರವೇದನ ಮಗ ಮರು
• ಮರುವಿನ ಮಗ ಪ್ರಶಿಷ್ಯಕ
• ಪ್ರಶಿಷ್ಯಕನ ಮಗ ಅಂಬರೀಶ
• ಅಂಬರೀಶನ ಮಗ ನಹುಶ
3/n
"ರಾಷ್ಟ್ರಕೂಟ ಚಕ್ರವರ್ತಿ ಅಮೋಘವರ್ಷ ನೃಪತುಂಗ.
ಕಾವೇರಿಯಿಂದ ಗೋದಾವರಿ ಪರ್ಯಂತದ ನಾಡನ್ನು ಸುಮಾರು ಅರವತ್ತು ವರ್ಷ ಧರ್ಮದಿಂದ ಪಾಲಿಸಿ, ದೇಶ ವಿದೇಶಗಳಲ್ಲೂ ಪ್ರಸಿದ್ಧನಾಗಿದ್ದ ದೊರೆ." #ನೃಪತುಂಗ#ತರಾಸು
"ಸುಖವಾಗಲಿ ದುಃಖವಾಗಲಿ ಒಂಟಿಯಾಗಿ ಬರುವುದಿಲ್ಲ, ಇಲ್ಲದಾಗ ಇಲ್ಲ, ಬರುವಾಗ ಹಿಂಡುಹಿಂಡಾಗಿ ಹುಣ್ಣಿಮೆಯ ಮಧ್ಯರಾತ್ರಿ ಏರಿ ಏರಿ ಬರುವ ಕಡಲ ಅಲೆಗಳಂತೆ ಬರುತ್ತವೆ." #ನೃಪತುಂಗ#ತರಾಸು
ತಾವಾಗಿ ಯಾರೂ ಯುದ್ಧಕ್ಕೆ ರಕ್ತಪಾತಕ್ಕೆ ಹಾತೊರೆಯಬಾರದು.ಅಂಥ ಅಧರ್ಮ ಯುದ್ಧ ಇಹಪರರ ವೈರಿ.ಆದರೆ ಪ್ರಜಾ ಪಾಲನೆಗೆ ಅಗತ್ಯವಾದ ಯುದ್ಧಕ್ಕೆ ಹಿಂಜರಿಯುವ ಅರಸನನ್ನು ರಾಜ್ಯಲಕ್ಷ್ಮಿ ಹೇಸಿ ದೂರವಾಗುತ್ತಾಳೆ.ನಿಗ್ರಹಯೋಗ್ಯನಾದ ಶತ್ರುವನ್ನಾಗಲಿ,ದುಷ್ಟ ಪುತ್ರನನ್ನಾಗಲಿ ಸಮಾನವಾಗಿ ನಿಗ್ರಹಿಸಿ,ಪ್ರಜಾ ಪರಿಪಾಲನೆ ಮಾಡುವ ದೊರೆಯೇ ಸಮಂಜಸನು. #ನೃಪತುಂಗ