ಬೇಂದ್ರೆ ಅಜ್ಜ ೪ ನೇ ತರಗತಿಯಲ್ಲಿರುವಾಗ ಕನ್ನಡ ಕುಲಪುರೋಹಿತರಾದ ಆಲೂರು ವೆಂಕಟರಾಯರು ಅವ್ರಿಗೆ ಶಿಕ್ಷಕರಾಗಿದ್ರಂತೆ.

ಎಷ್ಟು ಚಂದ.😍🙏
ಬೇಂದ್ರೆ ಅಜ್ಜನ ಕಾಲದ ಮನರಂಜನೆ ಹೇಗಿತ್ತು..?

ಅಜ್ಜ ಹೀಗ್ ಬರೀತಾರೆ...

೧.
ಶಂಕರಾಚಾರ್ಯರ
ಸೌಂದರ್ಯ ಲಹರಿ
ಗಂಗಾ ಲಹರಿ
ಭಾಮಿನಿ ವಿಲಾಸ
ಗೀತಾ ಗೋವಿಂದಗಳನ್ನ ಕೇಳೋದು.

೨.
ಊರಳಗಿನ ವಿಠೋಬ ದೇವರ ಗುಡಿ,
ದತ್ತಾತ್ರೇಯ ಗುಡಿಯ ಕೀರ್ತನ
ಪುರಾಣ ಪ್ರವಚನಗಳು.

೩.
ಶಿರಹಟ್ಟಿ ನಾಟಕ ಕಂಪನಿ ಪ್ರಯೋಗಗಳು
ಮರಾಠಿ ನಾಟಕದ ಪ್ರಭಾವ.
೪.
ಮನೆಯಲ್ಲಿ ತಾಯಿ ಅಂಬಾ ಬಾಯಿಯವರು ಹೇಳ್ತಾ ಇದ್ದ ಉದಯರಾಗದ ಭಕ್ತಿ ಗೀತೆಗಳು , ಪಾರಂಪರಿಕ ಹಾಡುಗಳು, ದಾಸರ ಕೀರ್ತನೆಗಳು ನನ್ನ ಚಿತ್ತವನ್ನ ಬೆಳಗಿದವು ಅಂತ ಬರೀತಾರೆ.

ಮಹನೀಯರ ಮನರಂಜನೆ ಹೀಗಿದ್ವು
ಅದಿಕ್ಕೆ ಅವ್ರು ಮುಗಿಲೆತ್ತರದ ಸಾಧನೆ ಮಾಡುದ್ರು.🙏🙏🙏

#ಬೇಂದ್ರೆಅಜ್ಜ 🙏
"ಭಾವ ಇದ್ದಂಗ ದೇವ."

ಬೇಂದ್ರೆ ಅಜ್ಜ.🙏
ಬೇಂದ್ರೆ ಅಜ್ಜ🙏 ಅಂಬಾ ಬಾಯಿ🙏 Image
ಬೇಂದ್ರೆ ಅವ್ರು ೨೨ ವರ್ಷ ವಯಸ್ಸಲ್ಲಿರುವಾಗ 'ನಿಂಗೆ ಜಾಸ್ತಿ ವಯಸ್ಸಾಯ್ತು' ಅಂತ ತಾಯಿ ಅಂಬಾ ಬಾಯಿ ಬೇಂದ್ರೆಯವರಿಗೆ ಮಾಡುವೆ ಮಾಡುದ್ರಂತೆ. ಬೇಂದ್ರೆಯವರು ಮದುವೆ ಆದದ್ದು ೧೩ ವರ್ಷದ ರಂಗು ಬಾಯಿಯವರನ್ನ, ಮದುವೆಯಾದ ಮೇಲೆ ಅವರ ಹೆಸರನ್ನ ಲಕ್ಷ್ಮಿ ದೇವಿ/ಲಕ್ಷ್ಮಿ ಬಾಯಿ ಅಂತ ಹೆಸರು ಬದಲಾಯಿಸಿದರಂತೆ.

ಮದುವೆಯಾದ ಸ್ಥಳ ಹುಬ್ಬಳ್ಳಿ
ವರ್ಷ : ೧೯೧೯
೧೯೩೧ ನೇ ಇಸವಿಯಲ್ಲಿ ಬರೀತಾರೆ

ಹಳ್ಳದ ದಂಡ್ಯಾಗ
ಮೊದಲಿಗೆ ಕಂಡಾಗ
ಏನೊಂದು ನಗಿ ಇತ್ತ
ಏನೊಂದು ನಗಿ ಇತ್ತ
ಏಸೊಂದು ನಗಿ ಇತ್ತ
ಏರಿಕಿ ನಗಿ ಇತ್ತ
ನಕ್ಕೊಮ್ಮೆ ಹೇಳ ಚೆನ್ನಿ
ಆ ನಗಿ ಇತ್ತಿತ್ತ ಹೋಗೇತಿ ಎತ್ತೆತ್ತ

ಕಣ್ಣಾನ ಬೆಳಕೇನ
ಮರ್ಯಾಗಿನ ತುಳುಕೇನ
ತುಟಿಯಾಗಿನ ಝುಳುಕೇನ
ಹುಡುಗಿಯ ಮಾತೇನ
ನಡಗಿಯ ತಾಟೇನ
ಹುಡುಗಿ ಹುಡುಗಾಟೇನ
ಕಂಡಾಂಗ ಕಾಣ್ಲಿಲ್ಲ
ಅಂದಾಗ ಅನಲಿಲ್ಲ
ಬಂದಾಂಗ ಬರಲಿಲ್ಲಾ
ಚಂದಾನ ಒಂದೊಂದು ಅಂದೀನಿ
ಬೇರೊಂದ ಅರಿವನ ಇರಲಿಲ್ಲ

ಬಡತನದ ಬಲಿಯಾಗ
ಕರುಳಿನ ಕೊಲಿಯಾಗ
ಬಾಳ್ವಿಯ ಒಲಿಮ್ಯಾಗ
ಸುಟ್ಟು ಹಪ್ಪಳದಾಂಗ
ಸೊರಗಿದಿ ಸೊಪ್-ಹಾಂಗ
ಬಂತಂತ ಮುಪ್ಪು ಬ್ಯಾಗ
ಕಣಕಣ್ಣ ನೆನಸೇನ
ಮನಸಲ್ಲಿ ಬಣಿಸೇನ
ಕಂಡೀತೆಂತೆಣಿಸೇನ
ಬಿಸಿಲುಗುದುರಿ ಏರಿ
ನಿನ ನಗೆಯ ಸವ್ವಾರಿ
ಹೊರಟಿತ್ತು ಕನಸೇನ ?

ನಕ್ಕೊಮ್ಮೆ ಹೇಳ ಚೆನ್ನಿ
ಆ ನಗಿ ಇತ್ತಿತ್ತ
ಹೋಗೇತಿ ಎತ್ತೆತ್ತ.

✍️ಬೇಂದ್ರೆ ಅಜ್ಜ🙏
ಗೋಕಾಕರು ಬೇಂದ್ರೆಯವರನ್ನ ಭೇಟಿಯಾದ ಕುರಿತು ತಮ್ಮ ಡೈರಿಯಲ್ಲಿ ಬರೀತಾರೆ.

"ಬೇಂದ್ರೆಯವರ ಮನೆಯಿಂದ ಎದ್ದೆ
ಆಗ ನಾನು ಬೇರೆ ವ್ಯಕ್ತಿಯಾಗಿದ್ದೆ..."😍🙏 Image
ಗೆಳೆಯರ ಗುಂಪು ಒಡೆದಾಗ ಹುಟ್ಟಿದ್ದು "ಭೃಂಗದ ಬೆನ್ನೇರಿ ಬಂತು" ಹಾಡು.

✍️ ಬೇಂದ್ರೆ ಅಜ್ಜ

ಭೃಂಗದ ಬೆನ್ನೇರಿ ಬಂತು ಕಲ್ಪನಾವಿಲಾಸ
ಮಸೆದ ಗಾಳಿ ಪಕ್ಕ ಪಡೆಯುತಿತ್ತು ಸಹಜ ಪ್ರಾಸ
ಮಿಂಚಿ ಮಾಯವಾಗುತಿತ್ತು ಒಂದು ಮಂದಹಾಸ.
ಬ್ರಿಟಿಷರ ವಿರುದ್ಧ ಬೇಂದ್ರೆ ಅಜ್ಜ ಬರೆದ ಹಾಡು " #ನರಬಲಿ"
ಕೆಲವರು ಆಂಗ್ಲಕ್ಕೆ ಅನುವಾದ ಮಾಡಿ ಬ್ರಿಟಿಷರಿಗೆ ತೋರ್ಸಿದ್ರಂತೆ. ಬ್ರಿಟಿಷರು ಇದನ್ನ ದೇಶದ್ರೋಹದ ಕೆಲಸ ಅಂತ ತೀರ್ಮಾನ ಮಾಡಿ ನೌಕರಿ ಇಂದ ತೆಗೆದಾಕಿ, ಕೋರ್ಟಲ್ಲಿ ಬೇಂದ್ರೆ ಅಜ್ಜರಿಗೆ ಕಠಿಣ ಶಿಕ್ಷೆ ಆಗ್ಬೇಕು ಅಂತ ತೀರ್ಮಾನ ಮಾಡುದ್ರಂತೆ & ಬೆಳಗಾವಿಯ ಇಂಡಲಗಾ ಜೈಲಲ್ಲಿ ಹಾಕಿದ್ರಂತೆ. ImageImageImageImage
ಜೈಲಿಗೆ ಹಾಕಿದ ಮೂರೂ ತಿಂಗಳಿಗೆ ಆರೋಗ್ಯ ಹದಗೆಡ್ತು.ಇಲ್ಲೇ ಇದ್ರೆ ಅನಾಹುತ ಆಗ್ಬಿಡತ್ತೆ ಅಂತ ಕರ್ಕೊಂಡ್ ಬಂದು ಧಾರವಾಡದ ಮುಗುದ ಅನ್ನೋ ಊರಲ್ಲಿ ಗೃಹಬಂಧನದಲ್ಲಿ ಇಟ್ಟಿದ್ರಂತೆ. ಶಿಕ್ಷೆಯ ಅವಧಿಯಲ್ಲೇ ಭೃಂಗದ ಬೆನ್ನೇರಿ, ನಾನು ಬಡವಿ ಹಾಡುಗಳು ಹುಟ್ಟಿದ್ದು. #ಬೇಂದ್ರೆಅಜ್ಜ 🙏🙏🙏
#ಬೇಂದ್ರೆಯವರ ವರ್ಷ ಶಿಕ್ಷೆ ಮುಗೀತು ಆದ್ರೆ ಬ್ರಿಟಿಷ್ ಮಂದಿಗೆ ತೃಪ್ತಿ ಆಗ್ಲಿಲ್ಲ, ಈತ ಶಿಕ್ಷಕ ಇದ್ದಾನೆ ದೇಶ ದ್ರೋಹದ ಕೆಲಸ ಮಾಡಿರೋದ್ರಿಂದ ಇನ್ನು ೧೦ ವರ್ಷ ಇವ್ರಿಗೆ ಯಾವುದೇ ಖಾಸಗಿ ಶಾಲೆಯಲ್ಲೂ ಕೆಲಸ ಕೊಡಬಾರ್ದು ಅಂತ ಆದೇಶ ಮಾಡುದ್ರಂತೆ.

#ನರಬಲಿ ಹಾಡು, ೧ ವರ್ಷ ಶಿಕ್ಷೆ, ೧೦ ವರ್ಷ ಶಿಕ್ಷಕ ಕೆಲಸ ಮಾಡದಂತೆ ಮಾಡಿಬಿಡ್ತು.
ಕ್ಷಮಾಪಣಾ ಪಾತ್ರ ಬರೆದು ಕೊಟ್ಬಿಡಿ ಶಿಕ್ಷೆ ಕಮ್ಮಿ ಮಾಡ್ತಾರೆ, ಆಮೇಲೆ ಕೆಲ್ಸಕ್ಕೆ ಹೋಗ್ಬಹುದು ಅಂತ ಹಲವರು ಸಲಹೆ ಕೊಟ್ರಂತೆ, ಅದಿಕ್ಕೆ ಬೇಂದ್ರೆ ಅಜ್ಜ" ಕ್ಷಮಾಪಣಾ ಪಾತ್ರ ಬರೆದು ಕೊಟ್ರೆ ನಾ ಬರೆದದ್ದು ತಪ್ಪು ಅಂತ ಆಗತ್ತಲ್ಲ, ನಾ ಬರೆದದ್ದು ಸರಿ ಇದೆ ೧೦ ವರ್ಷ ಉಪವಾಸ ಇದ್ದರು ಅಡ್ಡಿಯಿಲ್ಲ ನಾ ಕ್ಷಮಾಪಣಾ ಪತ್ರ ಬರೆಯಲ್ಲ" ಅಂದ್ರಂತೆ. 🙏🙏
ಎನ್ ಕೆ ಕುಲಕರ್ಣಿ ಅವ್ರು ಬರೀತಾರೆ,

ಬೇಂದ್ರೆ ಅವರ ಶಿಷ್ಯರಾದ ಗೋಕಾಕರೇ ಬೇಂದ್ರೆ ಅವ್ರು MA ಮಾಡುವಾಗ ಶಿಕ್ಷಕರಾಗಿ ದೊರೆತದ್ದು ಒಂದು ದೈವಿ ಚಮತ್ಕಾರ. ಬೇಂದ್ರೆ ಅವರನ್ನ ನನ್ನ ಗುರುಗಳು ಅಂತ ಗೋಕಾಕರು ಒಪ್ಪಿಕೊಂಡಿದ್ದರು.
ಗೋಕಾಕರು BA & MA ಪರೀಕ್ಷೆಗಳಲ್ಲಿ ಮುಂಬೈ ವಿಶ್ವವಿದ್ಯಾಲಯದಲ್ಲಿ ಪ್ರಥಮ ಸ್ಥಾನ ಗಳಿಸಿ ವಿಕ್ರಮ ಸಾಧಿಸಿದ್ದರು. ಅವರು ಐಚ್ಚಿಕವಾಗಿ ಎರಡು ಕನ್ನಡ ಪೇಪರ್ ಆಯ್ದುಕೊಂಡದ್ದರಿಂದ ಸ್ನಾತಕೋತ್ತರ ಕನ್ನಡ ಪ್ರಾದ್ಯಾಪಕರೆಂದು ವಿಶ್ವವಿದ್ಯಾಲಯದ ಮನ್ನಣೆ ಪಡೆದಿದ್ದರು.
ಇದರ ಕುರಿತಾಗಿ ಗೋಕಾಕರು ಹೇಳ್ತಾರೆ " ಕ್ಲಾಸ್ ರೂಮಿಗೆ ಹೋಗೋವರೆಗೂ ನಾ ಶಿಕ್ಷಕ ಬೇಂದ್ರೆ ವಿದ್ಯಾರ್ಥಿ, ಆದರೆ ಒಳಗೆ ಹೋದ ಮೇಲೆ ಅವ್ರು ಗುರುಸ್ಥಾನದಲ್ಲಿ ಕೂರುತ್ತಿದ್ದರು ನಾನು ಶಿಷ್ಯನ ಸ್ಥಾನದಲ್ಲಿ ಕುಳಿಕೊಳ್ಳುತಿದ್ದೆ"
ಬೇಂದ್ರೆ ಅವರೇ ಸಾಹಿತ್ಯದ ವಿಚಾರವಾಗಿ ಭಾಷಣ ಮಾಡ್ತಾ ಇದ್ರು ಇದ್ರಿಂದ ಬಹಳಷ್ಟು ಉಪಯೋಗವಾಯ್ತು ಅಂತಾರೆ ಗೋಕಾಕರು.

ಸಾಮಾನ್ಯವಾಗಿ ಕೇಳೋದು ಕ್ಲಾಸಿನ ಹೊರಗೆ ಸ್ನೇಹಿತರು ಕ್ಲಾಸಿನಲ್ಲಿ ಗುರು ಶಿಷ್ಯರು ಅಂತ ಆದ್ರೆ ಇಲ್ಲಿ ಉಲ್ಟಾ.😊

#ಮಹನೀಯರುಗಳು ಬೇಂದ್ರೆ ಅಜ್ಜ 🙏, ಗೋಕಾಕರು🙏
ಬೇಂದ್ರೆಯವರು MA ಪರೀಕ್ಷೆಗೆ ಕೂತಾಗ ಬೇಂದ್ರೆಯವರ ಕವನವನ್ನೇ ವಿಮರ್ಶೆ ಮಾಡೋಕೆ ಕೊಟ್ಟಿದ್ರಂತೆ , ಇವ್ರು ವಿಮರ್ಶೆ ಮಾಡಿದ್ರಂತೆ, ಇವ್ರ ವಿಮರ್ಶೆ ಚೆನ್ನಾಗಿಲ್ಲ ಅಂತ ಮಾರ್ಕ್ಸ್ ಕಮ್ಮಿ ಕೊಟ್ಟಿದ್ರಂತೆ..🤣🤣🤣 ಅವ್ರಿಗೆ ಗೊತ್ತಿದ್ದಿಲ್ಲ ಕವನ ವಿಮರ್ಶೆ ಮಾಡಿದ ಹುಡುಗಾನೆ ಆ ಕವಿತೆ ಬರೆದದ್ದು ಅಂತ..🤦‍♂️😂😂
#ಬೇಂದ್ರೆ ಅಜ್ಜ 🙏🏼
ಇದಕ್ಕೆ ಬೇಂದ್ರೆ ಅಜ್ಜ ಹೇಳೋರಂತೆ,
ನನ್ನ ಕವಿತೆಗೆ ನಾನೇ ವಿಮರ್ಶೆ ಬರೆದು 3rd ಕ್ಲಾಸ್ ಬಂದೆ ಅಂತ..😁😁😁
#ಬೇಂದ್ರೆ ಅಜ್ಜ 🙏🏼
ಬ್ರಿಟಿಷರು ಕೊಟ್ಟ ಅದೇಶದಿಂದ ಶಿಕ್ಷಕ ಕೆಲ್ಸ ಯಾರು ಕೊಡ್ತಾ ಇಲ್ಲ, ಆ ಶಿಕ್ಷೆ ಅವಧಿಯಲೇ MA ಮುಗಿಸಲು ಸಹಾಯ ಮಾಡಿದ್ದ ಕಾಕ ಬಂಡೋಪಂಥ್ ಅವ್ರು ಇಲ್ಲ,

35 ವರ್ಷಕ್ಕೆ ಬೇಂದ್ರೆಯವರ MA ಮುಗೀತು.

ನಿರುದ್ಯೋಗ ಮತ್ತೆ ಶುರು, ಆಗ ಬೇಂದ್ರೆ ಅವರ ಕೈ ಹಿಡಿದದ್ದು ಕನ್ನಡದ ಆಸ್ತಿ "ಮಾಸ್ತಿ ವೆಂಕಟೇಶ ಅಯ್ಯಂಗಾರ್" ಅವ್ರು 🙏🏼
1929 ರಲ್ಲಿ ಬೆಳಗಾವಿಯಲ್ಲಿ ಸಾಹಿತ್ಯ ಸಮ್ಮೇಳನ,ಬೇಂದ್ರೆಯವರು ಹಕ್ಕಿ ಹಾರುತಿದೆ ನೋಡಿದಿರಾ ಹಾಡನ್ನ ಹಾಡಿದ್ರಂತೆ.ಇದು ಸಮ್ಮೇಳನದ ಹೈಲೈಟ್ ಆಯ್ತು.ಮಾಸ್ತಿ ಅವ್ರು ಬೇಂದ್ರೆ ಅವ್ರಿಗೆ ಬೆಂಗಳೂರಿಗೆ ಬಂದ್ಬಿಡಿ ಅಂದ್ರಂತೆ,ಅವ್ರು ಜೀವನ ಪತ್ರಿಕೆ ನೆಡುಸ್ತಾ ಇದ್ರು,ಅದಕ್ಕೆ ಬೇಂದ್ರೆಯವರನ್ನ ಸಂಪಾದಕರನ್ನಾಗಿ ಮಾಡಿ 5 ವರ್ಷಗಳ ಕಾಲ ಕಾಪಾಡಿದ್ರಂತೆ.🙏🏼
ಇದನ್ನೇ ನೆನೆದು ಬೇಂದ್ರೆ ಅವ್ರು ಬರೀತಾರೆ "ಮಾಸ್ತಿ ಹಿರಿಯಣ್ಣ ಕೈ ಹಿಡಿಯದೆ ಹೋಗಿದಿದ್ರೆ ನಾನ್ ಯಾವ್ ಗಿಡದ ತೊಪ್ಪಲಾಗ್ತಿದ್ನೋ ಏನೋ " ಅಂತ.🙏🏼

1941 ಕ್ಕೆ 9 ವರ್ಷ ಶಿಕ್ಷೆ ಮುಗೀತು, ಯಾವ್ದೋ ಕಾಯ್ದೆ ಬಂದು 1 ವರ್ಷ ಶಿಕ್ಷೆ ಬಿಟ್ಬಿಟ್ರಂತೆ.ಕೆಲ್ಸ ಹುಡುಕೋಕೆ ಶುರು ಮಾಡಿದ್ರು ಆಗ ಗದಗದ 'ಸಮಿತಿ' ಶಾಲೆಯವರು ಹೆಡ್ ಮಾಸ್ಟರ್ ಕೆಲ್ಸ ಕೊಟ್ರು.
ಹೆಡ್ ಮಾಸ್ಟರ್ ಕೆಲ್ಸಕ್ಕೆ ಸೇರಿ 8 ರಿಂದ 9 ತಿಂಗಳು ಕಳೆದವು ಅದೇ ಸಮಯದಲ್ಲಿ ಬೆಳವಡಿ ಊರಲ್ಲಿ ಒಂದು ಸಾಹಿತ್ಯದ ಕಾರ್ಯಕ್ರಮ ಅದಕ್ಕೆ ಬಿ ಎಂ ಶ್ರೀಕಂಠಯ್ಯ ಅವ್ರು ಅಧ್ಯಕ್ಷರು, ಬೇಂದ್ರೆ ಅವ್ರು ಮುಖ್ಯ ಅತಿಥಿ.
ಬೇಂದ್ರೆ ಅವ್ರು ಬಂದ್ರು ಅಂತ 21 ಜೋಡಿ ಎತ್ತಿನ ಮೆರವಣಿಗೆ ಮಾಡಿದ್ರಂತೆ. 😍😍 ಹಾರ ತುರಾಯಿ ಅದ್ದೂರಿ ಕಾರ್ಯಕ್ರಮದ ಖುಷಿಯಲ್ಲಿ...
ಮನೆಗೆ ಬಂದ್ರು, ಅವ್ರು ಮನೆ ತಲುಪುವ ಸಮಯಕ್ಕೆ ಮೊದಲೇ ಮನೆಗೆ ಶಾಲಾ ಆಡಳಿತ ಮಂಡಳಿಯ ಒಂದು ಕಾಗದ ಬಂದು ತಲುಪಿತ್ತು...
ಸಾಹಿತ್ಯ ಕಾರ್ಯಕ್ರಮದ ಸಂಭ್ರಮ ಇನ್ನು ಮಾಸಿರಲಿಲ್ಲ, ಅವ್ರ ಕೆಲ್ಸ ಹೋಗಿತ್ತು, ಆಡಳಿತ ಮಂಡಳಿಯವರು ಚರ್ಚೆ ಮಾಡಿ ತೀರ್ಮಾನ ಮಾಡಿದ್ರಂತೆ "ಇವ್ರಿಗೆ ಕವನ ಬರಿಲಿಕ್ಕೆ ಬರತ್ತೆ ಶಾಲೆ ನಡೆಸೋಕೆ ಬರಲ್ಲ ಅಂತ"
ಹೆಡ್ ಮಾಸ್ಟರ್ ಕೆಲ್ಸ ಸಿಕ್ಕಾಗ ಧಾರವಾಡ ಬಿಟ್ಟು ಗದಗಿಗೆ ಹೊರಟಾಗ ಒಂದ್ ಪದ್ಯ ಬರೆದ್ರು..

"ಧಾರವಾಡದ್ದ್ ತಾಯಿ ನಮ್ಮ ನಮಸ್ಕಾರ ನಿಮ್ಗ
ನನಗ ಹೋದಾಗ ಜೋಲಿ
ನೀವ್ ಆದಿರಿ ತೋಲಿ
ತಿರುಗಾಡಿ ಬಂದೆ ಜಗತ್ತೆಲ್ಲ..."

ಅಂತ,
ಆದ್ರೆ ಗದಗದಲ್ಲಿ ಸಿಕ್ಕ ಕೆಲ್ಸ ಹೋಯ್ತು. ಈಗ ಮತ್ತದೇ ಧಾರವಾಡಕ್ಕೆ ಮರಳಿ ಬಂದ್ರು...

ಆಗ ಮತ್ತೊಂದ್ ಹಾಡು ಬರೀತಾರೆ...
ಬಾರೋ ಸಾಧನ ಕೇರಿಗೆ
ಮರಳಿ ನಿನ್ನಿ ಊರಿಗೆ

ಮಳೆಯು ಎಳೆಯುವ ತೇರಿಗೆ
ಹಸಿರು ಏರಿದೆ ಏರಿಗೆ
ಹಸಿರು ಸೇರಿದೆ ಊರಿಗೆ
ಹಸಿರು ಚಾಚಿದೆ ದಾರಿಗೆ
ನಂದನದ ತುಣುಕೊಂದು ಬಿದ್ದಿದೆ
ನೋಟ ಸೇರದು ಯಾರಿಗೆ..

ಬಾರೋ ಸಾಧನ ಕೇರಿಗೆ.....
ಮಳೆಯ ಮೊಗವೇ ಅರಲಿದೆ
ಕೋಕಿಲಕೆ ಸವಿ ಕೊರಳಿದೆ
ಬೇಲಿಗೂ ಹೂ ಬೆರಳಿದೆ
ನೆಲಕೆ ಹರೆಯವು ಮರಳಿದೆ
ಭೂಮಿತಾಯಿ ಒಡಮುರಿದು ಎದ್ದಳೋ
ಶ್ರಾವಣದ ಸಿರಿ ಬರಲಿದೆ.

ಬಾರೋ ಸಾಧನ ಕೇರಿಗೆ..

✍️ ಬೇಂದ್ರೆ ಅಜ್ಜ 🙏🏼
ಮರವು ಮುಗಿಲಿಗೆ ನೀಡಿದೆ
ಗಿಡದ ಹೊದರೊಳು ಹಾಡಿದೆ
ಗಾಳಿ ಎಲ್ಲೂ ಆಡಿದೆ
ದುಗುಡ ಇಲ್ಲಿಂದೋಡಿದೆ
ಹೇಳು ಗೆಳೆಯಾ ಬೇರೆ ಎಲ್ಲಿ
ಈ ತರದ ನೋಟವ ನೋಡಿದೆ?

ಬಾರೋ ಸಾಧನ ಕೇರಿಗೆ..

✍️ ಬೇಂದ್ರೆ ಅಜ್ಜ 🙏🏼
22 ರಿಂದ 44 ರ ವಯಸ್ಸಿನ ನಡುವೆ ಬೇಂದ್ರೆ ಅವ್ರಿಗೆ 9 ಜನ ಮಕ್ಕಳು ( 6 ಗಂಡು 3 ಹೆಣ್ಣು ) ಹುಟ್ಟಿದ್ರು ಅದ್ರಲ್ಲಿ ಉಳಿದಿದ್ದು 3 ( ಪಾಂಡುರಂಗ, ವಾಮನ, ಮಂಗಳ) ಮಾತ್ರ.

ಇದರ ಬಗ್ಗೆ ಬೇಂದ್ರೆಯವ್ರು ಬರೀತಾರೆ...

ನನಗೆ ಒಂಬತ್ತು ಜನ ಮಕ್ಕಳು
ಆರು ಗಂಡು ಮೂರು ಹೆಣ್ಣು
ನನ್ನ ಸಾಂಸಾರಿಕ ಜೀವನದ ನವರತ್ನಗಳು ಇವು...
ಮಕ್ಕಳು ಮಾಣಿಕದ ಕಣಿ
ಸಿಕ್ಕಿ ನೀ ಚೊಕ್ಕ ಚಿಂತಾಮಣಿ
ಮುಂಗೈಯ ಮ್ಯಾಲೆ ಮುದ್ದುಂಡು ಬಿರುತಾವ
ಮುದ್ದು ಮಾತಿನ ಗಿಣಿ ಇದು ಫಲ.

ದಕ್ಕಿದ ಸಂತಾನ ಮೂರೇ
ಪಾಂಡುರಂಗ, ವಾಮನ, ಮಂಗಳ
ಆರು ಸಂತಾನಗಳ ಅರ್ಪಣ ತರ್ಪಣವು
ಸಾಂಸಾರಿಕ ಯಜ್ಞದ ದೈವ
ಇದನ್ನು ಶಿವಕರುಣೆ ಎಂದು ಸ್ವೀಕರಿಸಿ...
ಬೇರೊಬ್ಬರ ಮಕ್ಕಳನ್ನು ನನ್ನ ಮಕ್ಕಳಾಗಿ ಒಪ್ಪಿ
ಅವರ ದುಃಖದಲ್ಲಿ ಕಣ್ಣೀರು ಸುರಿಸಿ
ಸಹಜೀವನ ಸುಖ ಅನುಭವಿಸಿದೆ.

ಕರುಳಿನ ವಚನದ ಹಿಂದಿರುವ
ಮಾತೃ ಹೃದಯದ ಸ್ಪಂದನದಲ್ಲಿ
ನನ್ನ ತಾಯಿ ಅಂಬಿಕೆಯ ಸ್ಮರಣೆ ಒಡಮೂಡಿದೆ.
ಸುಖ ದುಃಖದ ವಿಕಾಸ ವಿಲಾಸ ಹೀಗಿದೆ.

✍️ ಬೇಂದ್ರೆ ಅಜ್ಜ 🙏🏼🙏🏼🙏🏼
ಮೊದಲ ಮಗು ( ಗಂಡು ಮಗು ) ಹುಟ್ಟಿದ್ದು 1923 ರಲ್ಲಿ
ಕ್ಷೇಮೆಂದ್ರ ಅಂತ ಹೆಸರು.

ಆದ್ರೆ ಆರೇಳು ತಿಂಗಳಿಗೆ ಮಗು ಎಲ್ಲರನ್ನು ಬಿಟ್ಟು ಹೋಯ್ತು.

ಆಗ ಬೇಂದ್ರೆಯವ್ರು ಬರೀತಾರೆ..

( ಅರ್ಪಣ - ತರ್ಪಣ )
ಕೊಳಲಾಗಬಹುದಿತ್ತು
ಕಳಿಲಿದ್ದಾಗಲೆ ಕಡಿದ ಕಾಳ
ದೇವ ಮಗುವೆಂದು ತಿಳಿದಿದ್ದೆ
ಅದಾಯಿತು ನಿರ್ಗುಳ್ಳಿ
ಮನೆಯವನೆಂದು ತಿಳಿದಿದ್ದೆ
ಅವನಾದ ಅತಿಥಿ
ಕಣ್ತುಂಬ ಕಾಣಲಿಲ್ಲ
ಬಾಯ್ತುಂಬ ಮುದ್ದಿಡಲಿಲ್ಲ
ಮನೆಯ ಮಮತೆಯ ಮೂರ್ತಿ ಆದಿತೆಂದಿದ್ದ
ಆದರೆ
ಎಂಜಲು ಮಾಡಿದ್ದಿಲ್ಲ
ಆಯ್ತು ಮಸಣದ ಮಹದೇವನ
ಮುಡಿಯೊಳಗಿನ ಮೀಸಲ ಮಧುವಣಿಕೆ
"ಹುಳ ಉಪ್ಪಡಿಯ ತಿನಿಸಾಯಿತು ಮೋಹದ ಮುದ್ದೆ"
ಅದರ ತೀರಾ ನಿವಾಸಿಯಾದ ಈ ವಾಣಿ ಹಾಡುವುದು ಕ್ಷೇಮೆಂದ್ರ ನಿನ್ನ ನಾಮಾಂಕಿತದ ನಾಮದ ಸನ್ಮಾನಕ್ಕಾಗಿ
ಅಜ್ಜಿ ಅಮ್ಮಂದಿರ ಸಮಾಧಾನಕ್ಕಾಗಿ
ನನ್ನ ಮನದ ಸುಮ್ಮಾನಕ್ಕಾಗಿ
ಈ ಕಾವ್ಯ ತಂದೆ ಕೊಟ್ಟ ಮುದ್ದು ಅದು.

✍️ ಬೇಂದ್ರೆ ಅಜ್ಜ 🙏🏼
ಎರಡನೇ ಮಗ ರಾಮ 1924 ನೆ ಇಸವಿಯಲ್ಲಿ ಹುಟ್ತಾರೆ, ಅವ್ರು ಸುಮಾರು 20 ವರ್ಷ ಬದುಕಿದ್ರು.

ಮೂರನೆಯ ಭಾಸ್ಕರ

1927 ರ ಸುಮಾರಿಗೆ ಆತನೂ ತೀರಿ ಹೋದ.

ಆತ ತೀರಿ ಹೋದಾಗ ಬೇಂದ್ರೆ ಅವ್ರು
"ಗಿಳಿಯು ಪಂಜರದೊಳಿಲ್ಲ" ಅನ್ನೋ ಹಾಡ್ ಬರೀತಾರೆ...
"ಬೇನೆಯಿಂದ ಬಳಲಿದ ಮಗುವನ್ನು
ಮಗ್ಗುಲಲ್ಲಿರಿಸಿ ಒಬ್ಬ ತಾಯಿ ನಿದ್ದೆ ಹೋದಳು
ನಿದ್ದೆ ತಿಳಿದೆದ್ದು ನೋಡುತಾಳೆ
ಗಿಳಿಯು ಪಂಜರದೊಳಿಲ್ಲ..."

✍️ ಬೇಂದ್ರೆ ಅಜ್ಜ 🙏🏼
1934 ನೆ ಇಸವಿಗೆ ಹೆಣ್ಣುಮಗಳು ಹುಟ್ಟಿದಳು.

ಲಲಿತ ಅನ್ನೋ ಹೆಸರು.

ಆಗ ಬೇಂದ್ರೆ ಪುಣೆಯಲ್ಲಿದ್ರು.

ಪುಣೆಯಿಂದ - ರಾಣಿಬೆನ್ನೂರು ತಲುಪುವ ಮಾರ್ಗದಲ್ಲೇ"ಮಗು ಸತ್ತ ದೃಶ್ಯ ಕಂಡು"ಬರೆದ ಶೋಕ ಗೀತ. ಭವಿಷ್ಯ ದರ್ಶನದ ಕವಿತೆ ಅದು.(ಅಂದ್ರೆ ಮಗುವಿಗೆ Serious ಆಗಿದೆ ಅನ್ನೋ ವಿಷ್ಯ ಮಾತ್ರ ಟೆಲಿಗ್ರಾಮ್ ಮೂಲಕ ತಿಳಿದಿತ್ತು.)
ತನ್ನ ಹೆಂಡತಿ ಮರಣದವರೆಗೂ ಈ ವಿಷಯವನ್ನ ಯಾರ ಮುಂದೆಯೂ ಹೇಳಿರಲಿಲ್ಲವಂತೆ. ಬರೆದದ್ದು 1934 ರಲ್ಲಿ ಆದ್ರೆ ಆ ಕವಿತೆಯನ್ನ ಯಾವ ಕಲ್ಪನೆಯಲ್ಲಿ ಬರೆದದ್ದು ಅಂತ ಮಗ ವಾಮನ ಬೇಂದ್ರೆಗೆ ಹೇಳಿದ್ದು 1966ರಲ್ಲಿ.🙏🏼

ಆ ಹಾಡೆ...

"ನೀ ಹಿಂಗ ನೋಡಬ್ಯಾಡ ನನ್ನ
ನೀ ಹಿಂಗ ನೋಡಿದರೆ
ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ..."
ಸಂಸಾರ ಸಾಗರದಾಗ
ಲೆಕ್ಕವಿರದಷ್ಟು ದುಃಖದ ಬಂಡಿ
ನಾ ಬಲ್ಲೆ ನನಗೆ
ಗೊತ್ತಿಲ್ಲದಿದ್ದರೂ ಎಲ್ಲಿ ಆಚೆಯ ದಂಡಿ
ಮಲಗಿರುವ ಕೂಸು ಮಲಗಿರಲಿ ಅಲ್ಲಿ
ಮುಂದಿನದು ದೇವರ ಚಿತ್ತ
ನಾ ತಡಿಲಾರೆ ಅದು
ಯಾಕ ನೋಡತಿ ಮತ್ತ ಮತ್ತ ನೀ ಇತ್ತ.."

✍️ ಬೇಂದ್ರೆ ಅಜ್ಜ 🙏🏼
"ಇಬ್ಬನಿ ತೊಳೆದರು
ಹಾಲು ಮೆತ್ತಿದ ಕವಳಿ ಕಂಟಿಯ ಹಣ್ಣು
ಹೊಳೆ ಹೊಳೆವ ಹಾಂಗಿರುವ ಹೆಣ್ಣ
ಹೇಳು ನಿನ್ನವೇನ ಕಣ್ಣ..."

✍️ ಬೇಂದ್ರೆ ಅಜ್ಜ 🙏🏼

ಎನ್ ಸಾಲುಗಳು ಮಾರಾಯ್ರೆ, ಅಜ್ಜನ ಪಾದಗಳಿಗೆ ದೀರ್ಘದಂಡ ನಮಸ್ಕಾರ. 🙏🏼🙏🏼🙏🏼
ದಿಗಿಲಾಗಿ ಅನ್ನತದ ಜೀವ
ನಿನ್ನ ಕಣ್ಣಾರೆ ಕಂಡು ಒಮ್ಮಿಗಿಲ
ಹುಣ್ಣಿಮೆಯ ಚಂದಿರನ ಹೆಣ ಬಂತು
ಮುಗಿಲಾಗ ತೇಲುತ ಹಗಲ.

ನಿನ್ನ ಕಣ್ಣಿನಾಗ ಕಾಲೂರಿ ಮಳೆಯು
ನಡ ನಡಕ ಹುಚ್ಚ ನಗೆಯಾಕ
ಹನಿ ಒಡೆಯಲಿಕ್ಕೆ ಬಂದಂತ ಮೋಡ
ತಡೆದಾಂಗ ಗಾಳಿಯ ನೆವಕ
ಅತ್ತಾರೆ ಅತ್ತು ಬಿಡು ಹೊನಲು ಬರಲಿ
ನಕ್ಯಾಕ ಮರೆಸುತಿ ದುಃಖ
ಎವೆ ಬಡಿಸಿ ಕೆಡವು
ಬಿರಿಗಣ್ಣು ಬ್ಯಾಡ
ತುಟಿ ಕಚ್ಚಿ ಹಿಡಿಯದಿರು ದುಃಖ.

ನೀ ಹಿಂಗ ನೋಡಬ್ಯಾಡ ನನ್ನ.

✍️ ಬೇಂದ್ರೆ ಅಜ್ಜ 🙏🏼
ಕಡೆಯ ಮಗು ಪ್ರೇಮ, ಆಕೆ ಹುಟ್ಟಿ 15 ರಿಂದ 20 ದಿನದೊಳಗೆ ಆ ಮಗುವು ಹೋಯ್ತು.

ಆಗ ಬೇಂದ್ರೆ ಅವ್ರು ಬರೀತಾರೆ...

"ಆ ಕೂಸು ನರಳಿದ್ದು
ಆ ಕೂಸು ಅತ್ತಿದ್ದು
ಎಂದೇನೋ ನಕ್ಕಿದ್ದು ನೆನಪು ನಮಗೆ
ಕೊನೆಗೆ ಕಣ್ಮುಚ್ಚಿ ಕಣ್ಮರೆಯಾಗಿ ಹೋದದ್ದು
ಕಣ್ಣೀರು ಬಿಟ್ಟು ಹೋದದ್ದು ನಮಗೆ...."
ಸೊಲಾಪುರದಲ್ಲಿ ಪುರುಷೋತ್ತಮ್ ಲಾಡ್ ಅನ್ನೋರು ಡೆಪ್ಯುಟಿ ಕಮಿಷನರ್ ಆಗಿದ್ರಂತೆ, ಗೋಕಾಕ್ ಅವರ ಬಗ್ಗೆ ತುಂಬಾ ಗೌರವ ಇಟ್ಟುಕೊಂಡವರು.ಗೋಕಾಕ್ ಅವರ ಮೂಲಕ ಬೇಂದ್ರೆ ಅವರ ಬಗ್ಗೆ ತಿಳ್ಕೊಂಡ ಲಾಡ್ ಅವ್ರು ಸೊಲಾಪುರದ ಒಂದು ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರ ಕೆಲ್ಸ ಖಾಲಿ ಇತ್ತು,ಮೊದಲ ಬಾರಿ ಖಾಯಂ ನೌಕರಿ ಬೇಂದ್ರೆಯವರಿಗೆ ಸಿಕ್ತು. #ಬೇಂದ್ರೆಅಜ್ಜ
1944 ರಿಂದ 1956 ರವರೆಗೂ ಸುಮಾರು 12 ವರ್ಷಗಳ ಕಾಲ ಸೋಲಾಪುರದಲ್ಲಿ ಡಿ.ಐ.ವಿ ಕಾಲೇಜಿನಲ್ಲಿ ಅಧ್ಯಾಪಕರ ಕೆಲ್ಸ ಮಾಡಿದ್ರು.

ಆಗೆಲ್ಲ ಆಡಳಿತ ಮಂಡಳಿಯೇ ಸಂಬಳ ಕೊಡೋದಂತೆ.
ಪ್ರತಿ ತಿಂಗಳು ಸಂಬಳ ಸಿಕ್ತಾ ಇರ್ಲಿಲ್ಲ, ಎರಡು ತಿಂಗಳಿಗೊಮ್ಮೆ ಮೂರು ತಿಂಗಳಿಗೊಮ್ಮೆ ಸಂಬಳ ಸಿಗೋದಂತೆ.
ಊಟದ ಕಷ್ಟವಾದಾಗ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳು ತಮ್ಮ ಊಟವನ್ನ ಭಾಗ ಮಾಡ್ಕೊಂಡು ಒಂದಷ್ಟು ಊಟವನ್ನ ಡಬ್ಬಿಯಲ್ಲಿ ಹಾಕ್ಕೊಂಡ್ ಹೋಗಿ ಮೇಷ್ಟ್ರು ಮನೆಗೆ ಪಾಳಿ ಪ್ರಕಾರ ಊಟ ಕೊಟ್ಟು ಬರೋರಂತೆ.🙏🏼 ಅವ್ರಿಗೆಲ್ಲ ಅನ್ನದಾನಿಗಳು ಅಂತ ಬೇಂದ್ರೆ ಅವ್ರು ಕರೆಯೋರಂತೆ.🙏🏼🙏🏼 #ಬೇಂದ್ರೆಅಜ್ಜ
ಕಷ್ಟವೋ ಸುಖವೋ ಜೀವನ ನಡೀತಾ ಇತ್ತು.

1944 ನೇ ಇಸವಿ 20ನೇ October ಬೇಂದ್ರೆಯವರ ಆರೇಳು ತಿಂಗಳಿನ ಆನಂದ ಅನ್ನೋ ಪುಟ್ಟ ಕಂದ ಟೈಫಾಯ್ಡ್ ಗೆ ಬಲಿಯಾಯ್ತು.

ಆ ಆಘಾತದಲ್ಲೇ ಒಂದು ಕವನ ಬರೀತಾರೆ..

ನಿನೊಂದೆ ಬಂದೆ
ಬಂದಂತೆ ನಿಂದೆ
ಒಂದೊಂದು ಚಂದ ಬಿಸವಂದ ( ಆಶ್ಚರ್ಯ)
ನಿನ್ನೊಡನೆ ಭೋಗ
ನಿನ್ನೊಡನೆ ರೋಗ
ನಿನ್ನೊಡನೆ ಯೋಗ
ಎಲೆ ಕಂದ ಆನಂದ..
ಮುಂದುವರೆದು ಬರೀತಾರೆ..

ಮನೆಗಾದ ಗತಿಯ ಬಣ್ಣಿಸಲೇ
ಕಣ್ಣು ಕೆಂಗಟ್ಟಿತಯ್ಯೋ ದಗೆಯಿಂದ
ಮನದುರಿಯೇ ಆಗ ಜ್ವರದುರಿಯು ಆಗಿ
ಹೊತ್ತಿತ್ತು ಜೀವ ಉರಿಯಿಂದ

ಮಾತಾಯಿ ಮಾಯೆ
ಹಿರಿಗುರುವಿನರಿವು
ಪೊರೆದಿಹುದು ಹೃದಯದರವಿಂದ

ಈ ಸಾವು ಒಂದು
ಹೊಸ ಭಾವಾಗಿ
ತೆರೆದಿಹುದು ಲೋಕ ಬೇರೊಂದ.

#ಬೇಂದ್ರೆಅಜ್ಜ
ಮಗ ರಾಮನಿಗೆ ಬರೆದ ಪತ್ರ ಹೀಗಿತ್ತು.

ದಿನಾಂಕ : 7/12/1943 ಸ್ಥಳ : ಪುಣೆ

ಚಿ ರಾಮನಿಗೆ

ನಿನ್ನ ಕಾಗದ ಇದೀಗ ಬಂತು,ಹಾದಿ ನೋಡುತ್ತಿದ್ದೆ.ತಿ ಸ್ವರೂಪ ಕಾಕರವರು ಕೇಳುತ್ತಿದ್ದರು.ಮನೆಯ ಕ್ಷೇಮ ಸಮಾಚಾರದ ಸುದ್ದಿ ವಿಶೇಷ ಏನಿಲ್ಲ.ಎಲ್ಲರ ಬಗ್ಗೆಯೂ ಕಾಗದದಲ್ಲಿ ಒಂದೆರಡು ವಾಕ್ಯಗಳಿರಲಿ.ಈಕೆಯ ಪ್ರಕೃತಿ ಹೇಗಿದೆ.?
ನಾನು ಬರೆದ ಪತ್ರಕ್ಕೆ ನಿನ್ನ ತಾಯಿಯ ಉತ್ತರ ಏನಾದರೂ ಬರಲಿ. ಉಳಿದ ಮಟ್ಟಿಗೆ ನಿನ್ನ ಕಾಗದ ಸುವ್ಯವಸ್ಥಿತವಾಗಿದೆ ಆದರೆ ನಿನ್ನ ಅಕ್ಷರ ಸುಧಾರಿಸಲೇಬೇಕು. ಬೇಕಾದರೆ ನಿಬ್ ಬದಲು ಮಾಡು. ಅಕ್ಷರ ಕಣ್ಣಿಗೂ ಅಂದವಾಗಿರಬೇಕು ಅಲ್ಲವೇ..?
ಚೆಕ್ ಇದರ ಜೊತೆಗೆ ಇಟ್ಟಿದ್ದೇನೆ. ನಿನ್ನ ಅಭ್ಯಾಸದ ಬಗ್ಗೆ ಹುಟ್ಟಿದ ಎಚ್ಚರ ಸ್ಥಿರವಾಗಿ ಉಳಿಯಲಿ ಎಂದು ಆಶಿಸುತ್ತೇನೆ. ನಿನ್ನ ಪದ್ಯಗಳು ಸರಿಯಾಗಿವೆ ರೂಪ ಬರುತ್ತಿದೆ.ಗದ್ಯವನ್ನು ಪ್ರಬಂಧ ರೂಪದಲ್ಲೇ ಬರೆಯೋಕೆ ಪ್ರಯತ್ನ ಮಾಡು. ನಿನ್ನ ಇಂಗ್ಲಿಷ್ ಕಂಪೋಸಿಷನ್ ಸ್ವಲ್ಪ ನೋಡಿಕೊಳ್ಳಬೇಕು.
ಮನೆಯಲ್ಲಿ ಬೇಕಾದಷ್ಟು ಪುಸ್ತಕಗಳಿವೆ. ಪದ್ಯದಲ್ಲಿ ಶುದ್ಧ ಲೇಖನದ ತಪ್ಪುಗಳಿವೆ ಉಳಿದ ಒಂದೆರಡನ್ನ ಬಂದಾಗ ತಿದ್ದುತ್ತೇನೆ. ನಿನ್ನ ತಾಯಿಗೆ ಓದಿ ತೋರಿಸಿದೆಯ..? ಆಕೆ ಒಳ್ಳೆ ವಿಮರ್ಶಕಳು.

✍️ ಬೇಂದ್ರೆ ಅಜ್ಜ 🙏🏼
20/10/1944 ರಂದು ಆರೇಳು ತಿಂಗಳ ಹಸುಗೂಸು ಆನಂದ ಟೈಫಾಯ್ಡ್ನಿಂದ ತಿರ್ಕೊಂಡ್ತು.

27/10/1944 ರಂದು ಅಷ್ಟೊಂದು ಪ್ರೀತಿಸುತ್ತಿದ್ದ ರಾಮ ( 20 ವರ್ಷದ ಮಗ)ಕೂಡ ಟೈಫಾಯ್ಡ್ ಗೆ ಹಸುನೀಗಿದ್ರು.

ಒಂದೇ ತಿಂಗಳಲ್ಲೇ ಬೇಂದ್ರೆಯವರ ಇಬ್ಬರು ಮಕ್ಕಳು ತೀರಿಹೋದರು.

ಹೆತ್ತವರ ಕರುಳು ಹೇಗ್ ಸಹಿಸಿಕೊಂಡಿರಬೇಕು.😔
#ಬೇಂದ್ರೆಅಜ್ಜ
ಈ ಘೋರ ದುಃಖಕ್ಕೆ ಅಕ್ಷರ ರೂಪ ಕೊಟ್ಟು #ಪಾಡು ಅನ್ನೋ ಒಂದು ಖಂಡ ಕಾವ್ಯ ಬರೀತಾರೆ ಬೇಂದ್ರೆ ಅಜ್ಜ.

ಅದರ ಒಂದೆರಡು ಸಾಲು.....

ರಾಮ ರಾಮ
ಏನು ಆಯಿತೋ
ಆಯಿತಾಯಿತು ಹೋಯಿತು
ಹೌದೆ.....ಹೋಯಿತೆ
ಅಲ್ಲವೆನ್ನಲೇ ಇಲ್ಲ ಆದದ್ದಾಯಿತು
ಸೂರ್ಯ ಚಂದ್ರರ ಕಳೆದುಕೊಂಡು
ಈ ಕಣ್ಣು ತಾರಿಗೆ ನೋಡುತ್ತ
ಕತ್ತಲೆಗೆ ಬೆಳಕೆಂದು ನಂಬುತ
ಕಾದ ಹಾಗಿದೆ ಪಾಡುತ....
ತಂದೆ
ಎಲ್ಲಿಗೆ ತಂದೆ
ಏತಕೆ ತಂದೆ ಎನ್ನುತ್ತಿರುವಾಗಲೆ
ಕಂದ ನೀನು ಬಂದೆ
ಬಂದೆಯ...
ಏನು ಹೊರಟ್ಯೋ ಈಗಲೇ
ಬರಲು ಅವಸರ
ಹೊರಡಲವಸರ
ಯಾವ ಸೊಗಸಿನ ನಡೆಯಿದು
ಯಾವ ತವಕದ ಭವಕೆ ಬಂದೆಯೋ
ಯಾರ ಎದೆಯು ತಡೆಯದು..
ನಿನ್ನ ತಾಯಿಯ ಕಣ್ಣ ನೋಡಲೇ
ಅಳಲು ಆಳಕ್ಕಿಳಿದಿದೆ...
ತಮ್ಮದಿರ ಎದೆ ತಬ್ಬಿ ನೋಡಲೇ
ಮಿಡುಕ ನಡುಕಕ್ಕಿಳಿದಿದೆ

ತಂಗಿ ಮಂಗಲೆ ನಗಲು
ನುಡಿಯಲು ಬಂದ ದುಃಖವ ನುಂಗಲೆ
ಅಭಯ ಸಾರಲು ಬರುವ
ಹಲವರ ಹರಕೆ ನೆರಳಿಗೆ ತಂಗಲೆ

ಸಿಡಿಲು ಎರಗಿದ ಮರದ ತೆರದಲಿ
ಮನೆಯು ರಣರಣಗುಟ್ಟಿತು
ಕಂಡ ಜನರಿಗೆ ಕೇಳಿದವರಿಗೆ
ಏನೋ ಭಯ ಲಯ ಹುಟ್ಟಿತು.
ಯಾವ ಕಾಳನ ಕೂಳ ರಕ್ಕಸರು
ಯಾರು ಬಂದರೋ ನುಗ್ಗುತ
ಚಿಗುರ ಕೊಯ್ದರು
ಮಿಡಿಯ ಕಡಿದರು
ಹೂವ ಹಿಡಿದರು ಹಿಗ್ಗುತ

ಸತ್ತ ದಶರಥ ಇದ್ದ ರಾಮನಿಗಾಗಿ ಅತ್ತನು ಅಂದಿಗೆ
ಸತ್ತ ರಾಮಗೆ ಅತ್ತೆ ಅಳುವನು ಇರುವ ದತ್ತನು ಇಂದಿಗೆ

ಜೀವ ಜೀವವು ಅಗಲದಂದದ
ಅರಿವು ಬೆಳೆವುದು ಎಂದಿಗೆ
ಅಂದೆ ಸಾಕೆನಿಸಿತು ಶೋಕವು
ಹುಟ್ಟಿ ಸಾಯುವ ಮಂದಿಗೆ...
ಮಕ್ಕಳನ ಕಳಕೊಂಡ
ಜನರಲ್ಲಿ ಮೊದಲಿನವ ನಾನಲ್ಲವು
ಕೊನೆಯವನು ನಾನಲ್ಲ
ಅರೆರೆ ಒಂದೇ ದುಃಖವು ಎಲ್ಲವೂ

ಶೋಕಕೇತಕೆ ಬೇಕು ಎರೆವರ ನೋವು
ಸಾಕಿದೆ ನನ್ನದು
ದುಃಖದಲಿ ಪಾಲಿಲ್ಲ
ಹೃದಯಕೆ ಸಕಲ ದುಃಖವು ನನ್ನದು...
ಬಿಗಿದು ಸೆರೆಗಳ ಇಳಿದು ಕರುಳನು
ಕಿವಿಚಿ ಬರುವುದು ಯಾವುದೋ
ಹೇಳಿಕೊಂಡರು ಹೇಳದಿದ್ದರೂ
ಸೂಲೆಯಂದದಿ ಯಾವುದೋ
ನುಂಗಿಕೊಂಡರು ಕಾರಿಕೊಂಡರು
ಮರ್ಮಗಳ ಕಿತ್ತುತ್ತಿದೆ

ಎಣ್ಣೆಗೈಯಲಿ ಕೆಂಡ
ಹಿಡಿದರೂ ಬಗ್ಗನೆ ಹೊತ್ತುತ್ತಿದೆ
ನನ್ನ ಚರಿತದ ಒಂದು
ಮಗ್ಗಲು ನಿನ್ನೊಡನೆ ಕುಸಿ ಬಿದ್ದಿತು
ನನ್ನ ಜೀವನ ವಿಭವ ವಿಲಸವ
ಮರವೇ ಗಡಲೊಳಗದ್ದಿತು...
ಎಂದಿಗೋ ಇನ್ನೆಂದಿಗೋ
ನಿನ್ನಂದ ಎಳೆ ನಗೆಯೆಂಬುದು
ನನ್ನ ಕವನವನಿದಿರುಗೊಂಬುದು
ಅಮಲ ಸ್ವಾಗತಕಾಂಬುದು
ತಮ್ಮದಿರ ನಾ ಕಳೆದುಕೊಂಡಿಯೇ
ಕಳೆದುಕೊಂಡಿಯೇ ತಾಯಿಯ
ಎಳೆಯ ಗೆಳೆಯರ ಕಳವಿನಲಿ
ನಾ ಕಳೆದೆ ಜೀವನ ಮಾಯೆಯ

ಎಲ್ಲಿಯೋ ಅಡಗಿತ್ತು
ಕಾಲನ ಹೊಟ್ಟೆಯಲ್ಲಿ ಈ ಲೆಕ್ಕವು
ನಿನ್ನ ಮರಣದ ನೆವಕೆ
ಮರುಕಳಿಸಿಹುದು ಮುಂಚಿನ ದುಃಖವು.

✍️ ಬೇಂದ್ರೆಅಜ್ಜ 🙏🏼🙏🏼🙏🏼
ಬೇಂದ್ರೆ ಅಜ್ಜ ಸರಳ ವ್ಯಕ್ತಿತ್ವದ ವ್ಯಕ್ತಿ.
ಮೇಷ್ಟ್ರು ಕೆಲ್ಸ ಅದ್ರು ವೇಷ ಭೂಷಣಗಳ ಬಗ್ಗೆ ಜಾಸ್ತಿ ತಲೆ ಕೆಡುಸ್ಕೊತಾ ಇರ್ಲಿಲ್ಲ.

ಯಾವ್ದೋ ಕೋಟು
ಯಾವ್ದೋ ಶರ್ಟು
ಟೋಪಿ ಹಾಕೊಂಡ್ರೆ ಆಯ್ತು ಇಲ್ಲ ಅಂದ್ರೆ ಇಲ್ಲ
ಆದ್ರೆ ಕೈಯಲ್ಲಿ ಛತ್ರಿ ಚೀಲ ಮಾತ್ರ ಖಾಯಂ ಸದಸ್ಯರು.

ಜಾಸ್ತಿ ಶೇವ್ ಎಲ್ಲ ಮಾಡ್ತಾ ಇರ್ಲಿಲ್ಲ.
ಕುರುಚಲು ಗಡ್ಡ ತೀರಾ ಸಹಜ.
Annual Day ಅಂತ ಒಂದು ದಿನ ಅವತ್ತು ಮೇಷ್ಟ್ರಗಳನ್ನ ಕರೆದು ತಮಾಷೆ ಹೆಸರು / ಕಾಣಿಕೆ ಕೊಡೋ ಅಭ್ಯಾಸ ರೂಢಿಯಲ್ಲಿತ್ತು.ಅದೇ ಸಲುವಾಗಿ ಒಬ್ಬ ಹುಡುಗ ಬೇಂದ್ರೆ ಅವ್ರಿಗೆ ಕೀಟಲೆ ಮಾಡೋಕೆ ಅಂತ ಒಂದು ರೇಜರ್ ಬ್ಲೇಡು,ಬ್ರಶ್,ಶೇವಿಂಗ್ ಸೋಪು ಇದೆಲ್ಲ ಒಂದ್ ಬ್ಯಾಗಲ್ಲಿ ಹಾಕಿ ಕೊಟ್ರಂತೆ,ಅಂದ್ರೆ Indirect ಆಗ್ ಶೇವ್ ಮಾಡ್ಕೊಂಡ್ ಬರ್ಲಿ ಅಂತ ಹೇಳೋಕೆ.😊
ಎಲ್ರೂ ಅಂದ್ಕೊಂಡ್ರು ಬೇಂದ್ರೆ ಅವ್ರು ಬೇಜಾರ್ ಮಾಡ್ಕೋತಾರೆ ಅಂತ...ಆದ್ರೆ ಅವ್ರು ಆ ಪೈಕಿ ಅಲ್ಲ..ಇಸ್ಕೊಂಡ್ ಮೇಲೆ ಚೀಲ್ದಲ್ಲಿ ಏನೈತಿ ಅಂದ್ರಂತೆ, ತೆಗೆದ್ ನೋಡ್ರಿ ಸರ್ ಅಂದ್ರಂತೆ ವಿದ್ಯಾರ್ಥಿಗಳು. ಬಿಚ್ಚಿ ಆ ಬ್ರಶ್, ಸೋಪು, ಬ್ಲೇಡು ನೋಡಿ ಕ್ಷಣ ಕೂಡ ತಡ ಮಾಡದೆ ಇವೆಲ್ಲ ಬಂದ್ವು ಮಾಡವ್ ಎಲ್ಲಿದ್ದಾನೆ ಅಂತ ಕೇಳಿದ್ರಂತೆ..😂😂
& ಯಾವ್ ಕೊಟ್ಟಾನ ವಾರಕ್ಕೆರಡು ಸಲ ನೀನೇ ಬಂದ್ ಮಾಡಿ ಹೋಗಪ್ಪ ಅಂದ್ರಂತೆ. ಅವ್ರ್ದೆ ಜವಾಬ್ದಾರಿ ಅಂತ.

ಬೇಂದ್ರೆ ಅಜ್ಜ 😂😂🙏🏼

ಬೇಂದ್ರೆ ಅವ್ರ ಕ್ಲಾಸ್ ಅಂದ್ರೆ ಅದು ಸಂಭ್ರಮವಾಗಿತ್ತಂತೆ.😍 ಬೇಂದ್ರೆ ಅಜ್ಜ ಅಂದ್ರೆ ಕೇಳ್ಬೇಕ....🤗🤗 ಅದಿಕ್ಕೆ ಅವರ ಮೇಲೆ ವಿದ್ಯಾರ್ಥಿಗಳಿಗೆ ಇದದ್ದು ಗೌರವ ಅಭಿಮಾನದ ಸಲುಗೆ.🙏🏼
12 ವರ್ಷ ಕೆಲ್ಸ ಮಾಡಿ ತಮ್ಮ 60 ನೇ ವಯಸ್ಸಿನಲ್ಲಿ ನಿವೃತ್ತಿ ಹೊಂದಿ ಮೂರು ಮಕ್ಕಳು ( ಪಾಂಡುರಂಗ, ವಾಮನ ಬೇಂದ್ರೆ & ಮಂಗಲ) ಹೆಂಡತಿ ಕರ್ಕೊಂಡು ಸೋಲಾಪುರದಿಂದ ವಾಪಸ್ ಧಾರವಾಡದ ಸಾಧನ ಕೇರಿಗೆ ವಾಪಸ್ಸಾದ್ರು. ಆಗ ಅವರ ಕೈಯಲ್ಲಿ ಇದ್ದದ್ದು ಬರೀ 700 ರೂಪಾಯಿ ದುಡ್ಡು.

ಪಿಂಚಣಿ ಇಲ್ಲ ಕಾರಣ ಕೆಲ್ಸ ಮಾಡಿದ್ದು ಬರೀ 12 ವರ್ಷ.
ಆದ್ರೆ ಅವರ ಪಾಲಿಗೆ ದೇವರಿದ್ದ.🙏🏼

ಸೋಲಾಪುರದಲ್ಲಿ ಕೆಲ್ಸ ಸಿಗೋಕೆ ಕಾರಣವಾಗಿದ್ದ ಪುರುಷೋತ್ತಮ ಲಾಡ್ ಅವ್ರಿಗೆ ಪ್ರಮೋಷನ್ ಆಗಿ Director General Of All India Radio ಆಗಿದ್ರು,
& ಗೋಕಾಕ್ ಅವ್ರು ಕೂಡ ಸಲಹಾ ಸಮಿತಿ ಸದಸ್ಯರಾಗಿದ್ರು. ಇಬ್ರು ಸೇರಿ ಮತ್ತೆ ಬೇಂದ್ರೆ ಅವರ ಕೈ ಹಿಡಿದ್ರು.🙏🏼
ಬೇಂದ್ರೆ ಅಜ್ಜ ಅವ್ರನ್ನ ಧಾರವಾಡ ಆಕಾಶವಾಣಿ ಕೇಂದ್ರಕ್ಕೆ ಸಲಹಾ ಸಮಿತಿಗೆ ಹಾಕಿದ್ರು. ಅಲ್ಲಿ ಸೋಲಾಪುರದ ಕಾಲೇಜ್ ಅಲ್ಲಿ ಬರ್ತಾ ಇದ್ದ ಎರಡು ಪಟ್ಟು ಜಾಸ್ತಿ ಮಾಸಿಕ ಆದಾಯ ಬರೋಕೆ ಶುರು ಆಯ್ತು.

ಅಜ್ಜ ಹೇಳ್ತಾರಂತೆ " ನನ್ನ ಜೀವನದ ಸಂತೋಷ ಕಾಲ ಅದು" ಅಂತ....

ಮೊದಲ ಬಾರಿಗೆ ಆರ್ಥಿಕವಾಗಿ ಯಾವುದೇ ಚಿಂತೆ ಇರ್ಲಿಲ್ಲ.

#ಬೇಂದ್ರೆಅಜ್ಜ
ಅಲ್ಲಿ ಅವ್ರಿಗೆ ಆತ್ಮೀಯರಾದವರು ರಂಗತಜ್ಞ, ರಂಗ ಕಲೆಯಲ್ಲಿ ಪಿ.ಎಚ್.ಡಿ ಮಾಡಿದ್ದ ಡಾ . ಎಚ್.ಕೆ ರಂಗನಾಥ್ ಅನ್ನೋರು.

ಅವ್ರು"ನೆನೆದವರು ಮನದಲ್ಲಿ" ಅನ್ನೋ ಪುಸ್ತಕ ಕೂಡ ಬರೆದಿದ್ದಾರೆ.
ಇವ್ರು ಪಿ.ಎಚ್.ಡಿ ಮಾಡಿದ್ದು ಮಾಳ್ವಾಡ್ ಅವರ ಕಡೆ.
ಇವ್ರ ಬರೆದ Thesis ಇಬ್ಬರ ಬಳಿ ಅಭಿಪ್ರಾಯಕ್ಕೆ / ರೆಫ್ರಿ ಹೋಗತ್ತೆ,ಅದ್ರಲ್ಲಿ ಒಬ್ರು ಬೇಂದ್ರೆ ಅವ್ರು.
ಇನ್ನೊಬ್ಬರು ಕುಂದಣಗಾರ್ ಅವ್ರು..

ರಂಗನಾಥ್ ಅವ್ರು ಆಗಿನ್ನೂ ಯುವಕ..
ಇವ್ರ Report ಬೇಂದ್ರೆ ಅವರ ಕಡೆಯಿಂದ ವಾಪಸ್ ಬರಲೇ ಇಲ್ಲ...4 ತಿಂಗಳು ಆಯ್ತು..6 ತಿಂಗಳು ಆಯ್ತು...ಕೊನೆಗೆ ಮಾಳ್ವಾಡ್ ಅವ್ರಿಗೆ ಇವ್ರು ವಿನಂತಿ ಮಾಡುದ್ರಂತೆ ಬೇಂದ್ರೆ ಅವ್ರಿಗೆ ಒಂದ್ ಪತ್ರ ಹಾಕಿ ಸರ್ ರಿಪೋರ್ಟ್ ಬಂದಿಲ್ಲ ಅಂತ....
ಆದ್ರೆ ಬೇಂದ್ರೆ ಅಜ್ಜನಿಗೆ ಪತ್ರ ಬರೆಯೋಕೆ ಮಾಳ್ವಾಡ್ ಅವ್ರಿಗೆ ಭಯ...ಸಿಟ್ಟು ಗಿಟ್ಟು ಮಾಡ್ಕೊಂಡ್ಬಿಟ್ಟಾರು ಅಂತ...ಬರೆಯೋಕಾಗಲ್ಲ ಅಂದ್ರು..

ಕೊನೆಗ್ ಒಂದಿನ ಯಾವುದೋ ಕೆಲ್ಸದ ಮೇಲೆ ಸೋಲಾಪುರಕ್ಕೆ ರಂಗನಾಥ್ ಅವ್ರು ಹೊರಟರು ಹಾಗೆ ಬೇಂದ್ರೆ ಅವ್ರನ್ನ ಭೇಟಿಯಾಗಿ Report ವಿಚಾರವಾಗಿ ಕೇಳೋಣ ಅನಿಸಿ ಮಾಳ್ವಾಡ್ ಅವರ ಅನಿಸಿಕೆ ಕೇಳಿದ್ರು...
ಅದಕ್ಕೆ ಮಾಳ್ವಾಡ್ ಹೇಳಿದ್ರು ಬೆಂದ್ರೆ ಅವ್ರನ್ನ ಭೇಟಿಯಾಗು ಆದ್ರೆ ಪಿ.ಎಚ್.ಡಿ ವಿಷ್ಯ ಕೇಳ್ಬೇಡ ಅವ್ರಿಗೆ ಕೋಪ ಬಂದಾತು ಅಂದ್ರಂತೆ....ಆಯ್ತು ನೋಡೋಣ ಅಂತ ರಂಗನಾಥ್ ಅವ್ರು ಸೋಲಾಪುರಕ್ಕೆ ಹೋದ್ರು..

ಅದನ್ನ ಹೀಗ್ ಬರೀತಾರೆ....

ಮನಸ್ಸನ್ನ ಅಳೆದು ಸುರಿದು
ಕಡೆಗೆ ಮನಸ್ಸನ್ನ ಗಟ್ಟಿಮಾಡಿ
ಬೇಂದ್ರೆಯವರ ಮನೆಯನ್ನು ಹುಡುಕಿಕೊಂಡು ಹೊರಟೆ..
ಸಂಜೆಯ ಸಮಯ
ಅವರ ಹೊಸ್ತಿಲ ಮುಂದೆ ನಿಂತಿದ್ದೆ
ತಲೆ ತುಂಬ ಡಂಗೂರ
ಎದೆ ತುಂಬ ಮದ್ದಳೆ
ಕೈ ಕಾಲುಗಳಲ್ಲಿ ನಡುಕ
ತಡೆ ತಡೆದು ಬಾಗಿಲು ತಟ್ಟಿದೆ
ಎರಡು ನಿಮಿಷ ಎರಡು ಯುಗವಾಯಿತು 😁
ಬೇಂದ್ರೆ ಅವ್ರು ಬಾಗಿಲು ತೆಗೆದರು
ಅವರ ಪರಿಚಯ ಯಾರಿಗಿಲ್ಲ
ಅವ್ರು ನನ್ನನ್ನ ಅಕಾಶವಣಿಯಲ್ಲಿ
ಆಗೊಮ್ಮೆ ಈಗೊಮ್ಮೆ
ಕಂಡಿದ್ದರು ನೋಡಿರಲಿಲ್ಲ.
ಕೈ ಮುಗಿದು ತಡವರಿಸುತ್ತ..
ಧಾರವಾಡದಿಂದ ಬಂದಿದ್ದೇನೆ ಎಂದೆ
ಊರಿನ ಹೆಸರು ಕೇಳಿದೊಡನೆ ಅವರ ಮುಖ ಹಿಗ್ಗಿತು
ಆದರದ ಸ್ವಾಗತ
ಕರೆದು ಕೋಣೆಯಲ್ಲಿ ಕುಳ್ಳಿರಿಸಿದರು
ಹೆಸರು ವೃತ್ತಿ ಕೇಳಿದರು
ಆಕಾಶವಾಣಿ ಎಂದೊಡನೆ
ಆತ್ಮೀಯತೆ ಇನ್ನೂ ಹೆಚ್ಚಾಯಿತು
ಚಹಾ ಬೇಡ ಅಂದೆ
ಕೈಗೆ ಕಲ್ಲುಸಕ್ಕರೆ ಬಂತು
ವಾಕ್ನೀಸ್ ಅವ್ರ್ ಬಗ್ಗೆ ಕೇಳಿದ್ರು
[ವಾಕ್ನೀಸ್ ಅವ್ರು(ಧಾರವಾಡ ಆಕಾಶವಾಣಿ ಡೈರೆಕ್ಟರ್)]
ಪ್ರಬಂಧದ ಕೇಳಿಯೇಬಿಡಬೇಕೆನ್ನುವ
ಉತ್ಕಟವನ್ನ ಹತ್ತಿಕ್ಕಲು ಹರಸಾಹಸ ಮಾಡಿದೆ
ಕಡೆಗೆ ಏನನ್ನು ಕೇಳದೆ ಹೊರಟು ನಿಂತೆ.
ಬಾಗಿಲವರೆಗೂ ಬೀಳ್ಕೊಡಲು ಬಂದ ಬೇಂದ್ರೆಯವರು
ಕೈಮುಗಿದು ಇನ್ನೇನು ಬಾಗಿಲು ಮುಚ್ಚಬೇಕು
ಅನ್ನುವಷ್ಟರಲ್ಲಿ ಸಾಹಸ ಧೈರ್ಯ ಮಾಡಿದ
ನನ್ನಿಂದ ಸರ್ ನಿಮ್ಮನ್ನ ಇನ್ನೊಂದು ಮಾತು ಕೇಳಬೇಕಿತ್ತು ಅನ್ನೋ ನುಡಿ ಹೊರಟೆಬಿಟ್ಟಿತು..
ಮುಚ್ಚತಿದ್ದ ಬಾಗಿಲನ್ನು
ಅರೆ ತೆರೆದು ಏನದು..!? ಅಂದ್ರು
ಆ ಒಂದು ಮಾತಿನಲ್ಲಿ ಎಷ್ಟೆಷ್ಟು ಧ್ವನಿಗಳು ಅಡಗಿವೆಯೋ ಎಂದೆನಿಸಿ ಕೈಕಾಲುಗಳು ತಣ್ಣಗಾದವು.
ಮುಂದೆ ನಮ್ಮ ಸಂಭಾಷಣೆ ಹೀಗೆ ನಡೆಯಿತು..

ಆದ್ರೆ ಬೇಂದ್ರೆಯವರು ಮಾತಿನ ಮೋಡಿ
ದಾಟಿಯನ್ನ ಬರಹದಲ್ಲಿ ಇಳಿಸಲು ಬಾರದು
ಅವರ ಮಾತುಗೀತೆಯೇ ಅದರ ಏರಿಳಿತ
ಮಾಧುರ್ಯ ಸವಿಗಾರಿಕೆ ಅದರದೇ ಸರಿ..
ಏನದು..!? ಬೇಂದ್ರೆ ಮತ್ತೆ ಕೇಳಿದರು...
ಕನ್ನಡದ ರಂಗಭೂಮಿಯನ್ನ ಕುರಿತು ನಾನು ರಚಿಸಿದ ಪ್ರಬಂಧವನ್ನ ಕರ್ನಾಟಕ ವಿಶ್ವವಿದ್ಯಾಲಯ ತಮಗೆ ಕಳುಹಿಸಿದ್ಯಂತೆ ತಪ್ಪಾಗದಿದ್ರೆ ಅದರ ವಿಷಯ ಕೇಳಬೇಕೆಂದು ಮನಸಾಗಿದೆ.....

ಕನ್ನಡ ರಂಗಭೂಮಿ ಅಂದ್ರೆ 'ಕರ್ನಾಟಕ ಥಿಯೇಟರ್' ಅಲ..!? ಇಂಗ್ಲಿಷ್ನಾಗ್ ಬರೆದಿದ್ದಲ..? ನೀವೇ ಎನ್ ಬರೆದಿದ್ದ್ ಅದನ್ನ...?.....
ಅಂತ ಬೇಂದ್ರೆಯವ್ರು ಕೇಳಿದ್ರು..

ಇವ್ರಿಗ್ ಗಾಬರಿ
ಈ ಪ್ರಶ್ನೆಯನ್ನ ಕೇಳಿ
ಮಹಾಪರಾಧ ಮಾಡಿದಂತೆ ಭಾಸವಾಯಿತು...

ನಾನು ತಡವರಿಸುತ್ತ ಹೌದು ಸರ್ ನಾನೇ ಬರೆದದ್ದು
ಆ ವಿಶ್ವವಿದ್ಯಾಲಯ ತಮ್ಮ ನಿರ್ಣಯಕ್ಕೆ ಅದನ್ನ ಕಳುಹಿಸಿದ್ಯಂತೆ...

ಹ ಹ ಆ ಪ್ರಬಂಧ ಡಾಕ್ಟರೇಟ್ ಗಲ್ಲ...!!?

ಮಾತ್ತಾವಾಗಾನೆ ನೋಡಿ ಕಳುಹಿಸಿಬಿಟ್ಟಿನಲ್ಲ....
ತಮ್ಮ ಅಭಿಪ್ರಾಯ ವಿಶ್ವವಿದ್ಯಾಲಯಕ್ಕೆ ಇನ್ನು ಬಂದಿಲ್ವಂತೆ ಸರ್ ಅಂದೆ..
ಬಂದಿಲ್ಲ....!?
ನಾಲ್ಕು ತಿಂಗಳು ಹಿಂದೆ ಕಳಿಸಿನಿ.
ಯಾರ್ನ ಕೇಳಿದ್ರಿ...?
ಎಂದ್ ಕೇಳಿದ್ರಿ...?
ಅಂತ ಬೇಂದ್ರೆ ಕೇಳಿದ್ರು...

ಈ ಪ್ರಶ್ನೆಗೆ ಉತ್ತರ ಕೊಡಬಹುದೋ
ಬೇಡ್ವೋ ಅಂತ ತಬ್ಬಿಬ್ಬಾದೆ....

ಮೊನ್ನೆ ತಾನೆ ಸಂಬಂಧಪಟ್ಟ ವಿಭಾಗದಲ್ಲಿ ವಿಚಾರಿಸಿದೆ...
ಬಂದಿಲ್ಲ ನೆನಪೋಲೆ ಬರೆಯುತ್ತೇವೆಂದರು...

ಬೇಂದ್ರೆ ಅವ್ರು : ಅದೆಂಗ್ ಅದು....?
ಕಳಿಸೇನಲ್ಲ...
ಬಂದಿಲ್ಲ ಅಂದ್ರೆ ಹೆಂಗ..
ತಾಳ್ರಿ ಎಂದು ಬೇಂದ್ರೆ ಸರಕ್ಕನೆ ಒಳನಡೆದು
ವಿದ್ಯಾರಣ್ಯವಾಗಿದ್ದ ತಮ್ಮ ಓದುಕೋಣೆಯಲ್ಲಿ
ಕಪಾಟುಗಳನ್ನು ಹತ್ತಾರು ನಿಮಿಷ ಹುಡುಕಾಡಿದರು....
ಕಡೆಗೆ ಅದೊಂದು ಮೂಲೆಯಲ್ಲಿ
ಬಟ್ಟೆಯಲಿ ಕಟ್ಟಿದ್ದ ಪುಸ್ತಕಗಳ ಗಂಟಿನ ಅಡಿಯಲ್ಲಿದ್ದ ನಾಲ್ಕಾರು ಗ್ರಂಥಗಳನ್ನು ಹೊರಗೆಳೆದರು..
ಅಬ್ಬ.. ನನ್ನ ಕರ್ನಾಟಕ ಥಿಯೇಟರ್ ಕೆಂಪು ಬೈಂಡಿನ ದಪ್ಪ ಪುಸ್ತಕ ಅಲ್ಲೇ ಇದೆ..

ಇಲ್ಲೇ ಅದ ಅಲ್ರಿ..😁
( ಕಳ್ಸಿದ್ದೀನಿ ಆಂದೋರು ಅವ್ರೇ🙊)

ನಿಮ್ದೆ ಏನಿದು...?
ಛೇ ನಾ ಕಳುಸ್ಲೆ ಇಲ್ಲೇನೋ ನಾ ಅದನ್ನ ಹಂಗಂದ್ರೆ..
ಮತ್ತೆ ಮೊದಲೇ ಹೇಳಬಾರದೇನ ನನಗ ಅಂದ್ರು ಬೇಂದ್ರೆ..

ನೋಡ್ರಿ ರಿಪೋರ್ಟ್ ಸಹಿತ ಬರೆದು ಇದ್ರಲ್ಲೇ ಇಟ್ಟಿನಿ..

'ಯಾಕ್ ಕಳುಸ್ಲಿಲ್ಲ ನಾನು' ಅಂತ ನನ್ನನ್ನೇ ಕೇಳಿದರು...😁😁

ನಾ ಎನ್ ಹೇಳಲಿ...
ರಿಪೋರ್ಟಿನಲ್ಲಿ ಎನ್
ಬರೆದಿದ್ದರೋ ಅನ್ನೋ ಕುತೂಹಲ..

ಸಂಕಟಪಟ್ಟುಕೊಂಡು ಕೇಳಿದೆ..
ಪ್ರಬಂಧ ಹೇಗಿದೆ ಸರ್....?
ಪರವಾಗಿಲ್ವೇ..?
ಡಾಕ್ಟರೇಟ್ ಸಿಕ್ಕಬಹುದೇ..?

ಬೇಂದ್ರೆ ಅಜ್ಜ : ಹಾಂಗ್ ಕೆದುಕ್ತ ಹೋದ್ರೆ ಬರೇ ತಪ್ಪ ಸಿಕ್ತವ..😂😂
ಬೇಕಾದಷ್ಟ್ ಮಾಹಿತಿ ಕೊಟ್ಟಿರಿ..
ಇಂಗ್ಲಿಷ್ನಾಗ್ ಬರೆದೀರಿ
ಈ ತನಕ ಯಾರು ಮಾಡೆ ಇಲ್ಲ ಈ ಕೆಲಸ..
ಇದುಕಲ್ದೆ ಇನ್ಯಾವ್ದುಕ್ ಕೊಡ್ಬೇಕಂತ ಡಾಕ್ಟರೇಟು..
ಅದನ್ನೇ ಬರೆದಿನಿ ರಿಪೋರ್ಟ್ನಾಗ...
ಅದಾತು...
ಇನ್ನ ಇದನ್ನ ಯಾಕ್ ಕಳ್ಸಿರ್ಲಿಲ್ಲ ನಾನು..

(ಮತ್ತೆ ಬೇಂದ್ರೆ ಅಜ್ಜನ ಪ್ರಶ್ನೆ....)😁😁
ಅಂದ್ಬಿಟ್ಟು...
ನೀವ್ ಬಂದಿದ್ದ್ ಬಾಳ್
ಚಲೋ ಆತ್ ನೋಡ್ರಿ
ಇಲ್ದಿದ್ರೆ ಕಣ್ ತಪ್ಸಿ ಇಲ್ಲೇ
ಪರ್ಮನೆಂಟ್ ಬಿದ್ದಿರ್ತಿತ್ತು ಇದು...

ಇದನ್ನ ನೀವೇ ತಗೊಂಡ್ ಹೋಗಿ ವಿಶ್ವವಿದ್ಯಾಲಯದವ್ರಿಗೆ ಕೊಟ್ಬಿಡ್ರಿ..
ಅಂದ್ರಂತೆ...

ಬೇಡ ಸರ್, ಇದು ತಮ್ಮಿಂದಾನೆ ನೇರವಾಗಿ ಹೋಗ್ಬೇಕು..ನಾನು ತಗೊಂಡ್ ಹೋದ್ರೆ ತಪ್ಪಾಗತ್ತೆ..ಇದನ್ನ ಪ್ಯಾಕ್ ಮಾಡ್ಸಿ ಸ್ಟ್ಯಾಂಪ್ ಅಂಟಿಸಿ ತಂದುಕೊಡ್ತೇನೆ..ತಾವೇ ವಿಳಾಸ ಬರೆದು ಸಹಿ ಮಾಡಿ ಕೊಟ್ರೆ ಪೋಸ್ಟ್ ಆಫೀಸ್ ಗೆ ಕೊಡ್ತೇನೆ ಅಂದ್ರು ರಂಗನಾಥ್ ಅವ್ರು.....
ಬೇಂದ್ರೆ ಅಜ್ಜ : ಆತು ಹಂಗ ಮಾಡ್ರಿ.

ಅಲ್ಲ ಇದನ್ನ ಬಂದ ಕೂಡಲೇ ಹೇಳ್ಬಾರ್ದಿತ್ತ..?😊

ಅಂತ ಬೆನ್ನ ಮುಟ್ಟಿ ಹಾಲು ಕುಡಿಸಿ ಕಳುಹಿಸಿದರು...

#ಬೇಂದ್ರೆಅಜ್ಜ 🙏🏼
ಇಷ್ಟೆಲ್ಲ ಆಯ್ತು, ರಂಗನಾಥ್ ಅವ್ರ್ದು PhD ಕೂಡ ಆಯ್ತು...ಕೊನೆಗೆ ಆಕಾಶವಾಣಿ ಸಲಹಾ ಸಮಿತಿಗೆ ಅವ್ರು ಬಂದ್ರು...

#ಬೇಂದ್ರೆ ಅವ್ರು ಹ್ಯಾಗಿದ್ರು ಅಂತ #ರಂಗನಾಥ್ ಅವ್ರು ಬರೀತಾರೆ....

ವಾಸ್ತವ್ಯ ಸಾಧನಕೇರಿ ಶ್ರೀಮಾತ
ಸ್ವಂತ ಮನೆಯಲ್ಲಿ
ದಿಬ್ಬ ಹತ್ತಿ ಬಲಗಡೆಗೆ ತಿರುಗಿ
ಒಂದು ಪರ್ಲಾಂಗ್ ನಡೆದರೆ
ಆಕಾಶವಾಣಿ...
ಅಂದಿನಿಂದ ನನಗೆ ಬೇಂದ್ರೆಯವರ..
ನಿಕಟ ಪರಿಚಯ
ಬಟ್ಟೆ ಬರೆಗಳ ಮೇಲೆ ಅವ್ರಿಗೆ ಏನೇನು ನಿಗವಿಲ್ಲ
ನಾಲ್ಕಾರು ದಿನ ಗಡ್ಡ ಮಾಡಿಕೊಂಡರು ಬಿಟ್ಟರು ಒಂದೇ
ಕೈಚೀಲ ಕೊಡೆಗಳು ಮಾತ್ರ ಗಟ್ಟಿ
ಚಪ್ಪಲಿಗಳನ್ನ ಎಲ್ಲೆಂದರಲ್ಲಿ ಮರೆಯಬೇಕು
ಅವು ಇಲ್ಲದ ಕಡೆ ಹುಡುಕಾಡಬೇಕು,
ಧೋ ಎಂದು ಸುರಿಯುತ್ತಿದ್ದ ಮಳೆಯಲ್ಲಿ
ಅವ್ರು ಕೊಡೆಯನ್ನು ಬಿಚ್ಚದೆಯೇ
ಕೈಯಲ್ಲಿ ಹಿಡಿದು ಬಂದದ್ದನ್ನು ಕಂಡಿದ್ದೇನೆ...
ಬಿರು ಬಿಸಿಲಿನಲ್ಲಿ ಬೊಕ್ಕ
ತಲೆಯನ್ನು ಉರಿ ಸೂರ್ಯನಿಗೆ ಈಡು ಮಾಡಿ..
ತಾಸುಗಟ್ಟಲೇ ಗುಣಗುಣಿಸಿ
ಯೋಚಿಸುತ್ತ ನಿಂತಿದ್ದನ್ನು ಕಂಡಿದ್ದೇನೆ..
ಬೇಂದ್ರೆಯವರಂತೆ ಇನ್ನೊಬ್ಬ ಮೋಡಿ ಮಾತುಗಾರರೆಂದರೆ ನನಗೆ ತಿಳಿದಿದ್ದ ಕೈಲಾಸಂ..🙏🏼
ಬೇಂದ್ರೆ ಬಾಯಿ ತೆರೆದರೆ ಸಾಕು
ಮುತ್ತು, ಹವಳ, ವಜ್ರ, ವೈಡೂರ್ಯ...
ಧ್ವನಿ ಎತ್ತರಿಸಿ ಮಾತನಾಡಿದಾಗ.....
ಆಡಿದ್ದೆಲ್ಲ ಹಾಡು..
ಕೈ ತಿರುಗಿಸಿ ಉಂಗುರಗಳ
ಬೆರಳುಗಳನ್ನ ಕುಣಿಸಿ ಮಣಿಸಿ
ಅಭಿನಯ ತೊಡಿಸಿದಾಗ ಮಾತೆಲ್ಲ ಜ್ಯೋತಿ..😍

(ಬೇಂದ್ರೆಯವರಿಗೆ ಮಾತಾಡೋ ಹವ್ಯಾಸ, ಯಾರಾದ್ರೂ ಒಬ್ರು ಜೊತೆ ಇರ್ಬೇಕು,ಕಡೆಗೆ ಸಣ್ಣ ಮಕ್ಕಳಾದರು ಇರ್ಬೇಕು ಮಾತಾಡೋಕೆ, ಇವ್ರ್ ಮಾತ್ ಕೇಳೋಕೆ..😊)
ಬೇಂದ್ರೆಯವರಿಗೆ ಪ್ರತ್ಯೇಕ ಕೊಠಡಿ ಇತ್ತು, ಸಲಹಾ ಸಮಿತಿಯಲ್ಲಿದ್ದವರು ಜೊತೆಗೆ Producer ಬೇರೆ..
ಮಾತಾಡೋಕೆ ಯಾರ್ ಸಿಗ್ಬೇಕು...

ಅದಿಕ್ಕೆ ರಂಗನಾಥ್ ಮುಂದುವರೆದು ಹೇಳ್ತಾರೆ...

ಯಾರನ್ನೋ ಒಬ್ರುನ ಇಡ್ಕೊಂಡ್ ಬರ್ಬೇಕು..😁

ಅಲ್ಲಿ ವಾಕ್ನೀಸ್ ಅನ್ನೋರು ಆಕಾಶವಾಣಿಗೆ ಡೈರೆಕ್ಟರ್ ಆಗಿದ್ರು...ಅವ್ರಿಗೆ ನಡೆಯೋದು ಅಂದ್ರೆ ಇಷ್ಟ..
ಅವ್ರು ಬಾಳ ಅಡ್ಡಾಡ್ತಾರೆ ಅಂತ ಅವ್ರ್ ಹೆಸ್ರು ವಾಕ್ನೀಸ್ ಆಗಿದೆ ಅನ್ನೋದು ತಮಾಷೆ...

ವಾಕ್ ವಾಕ್ ವಾಕ್ ಅಷ್ಟೇ...

ಅದಿಕ್ಕೆ ಹೇಳ್ತಾರೆ..

'ವಾಕ್ನೀಸ್' ಜೊತೆ ಒಬ್ಬ 'ಟಾಕ್ನೀಸ್' ಸೇರ್ಕೊಂಡ ಅಂತ..😂😂

ಅವ್ರು ವಾಕ್ ವಾಕ್ ವಾಕ್ 😁
ಇವ್ರು ಟಾಕ್ ಟಾಕ್ ಟಾಕ್...😁
ಮುಂದುವರೆದು ರಂಗನಾಥ್ ಬರೀತಾರೆ..

ಕೇಳುವ ಅಸಾಮಿಗೆ ಆಸ್ಥೆ ಇದ್ದರೆ
ಮಾತಿನ ಮಳೆಯನ್ನು ಸುರಿಸುತ್ತಿದ್ದರು,

ಕೇಳುವ ಅಸಾಮಿಗೆ ಆಸ್ಥೆ ಇಲ್ಲ ಎನಿಸಿದರೆ
ಬಿಟ್ಟು ಬಿಟ್ಟು ಸೋನೆ ಮಳೆ...😁

ಶಂಕರನಂತವರು ಸಿಕ್ಕಿದರೆ
ಧೋ ಎನ್ನುವ ಜಡಿ ಮಳೆ

ನನ್ನಂತ ಸೌಮ್ಯ ಕೇಳುಗ ಸಿಕ್ಕಿದರೆ
ಒಂದೆರಡು ತಾಸುಗಳ ಹದವಾದ ಮಳೆ..😁
ಅವ್ರು ಹೋದ ಮೇಲೆ ನನ್ನ ಕೆಲಸ...

ಆ ಕೆಲಸ ಗುಡ್ಡೆಯಾಗಿ
ಹೆಗಲ ಮೇಲೆ ಹೇರಿಕೊಂಡಾಗ
ಉಬ್ಬಳಿಸಿದ್ದೇನೆ ನಾನು...

ರೇಡಿಯೋ ರಾಕ್ಷಸನ
ಹೊಟ್ಟೆ ಕಾಯಿಸುವಂತಿಲ್ಲ...

ಬೇಂದ್ರೆ ಕೈಯಿಂದ ತಪ್ಪಿಸಿಕೊಳ್ಳೋದು ಹೇಗೆ..

ಅದಕ್ಕೆ ಒಂದ್ ಉಪಾಯ ಮಾಡ್ತಾರೆ..
ಅಟೆಂಡರ್ ಗೆ ಹೇಳ್ತಾರೆ...

ಬೇಂದ್ರೆ ನನ್ನ ಕರಿತಾರಪ್ಪ
ಒಳಗ್ ಹೋಗಿರ್ತೀನಿ
ಮುದುಕ್ರು ಬಿಡಲ್ಲ ಮಾತಾಡ್ತಾರೆ
10 ನಿಮಿಷ ಅದ ಮೇಲೆ ಒಳಗ್ ಬಾ
ಬಂದು ಡೈರೆಕ್ಟರ್ ಕರೀತಾರೆ ಅಂತ ಹೇಳ್ ನಂಗೆ..
ನಾ ಬಂದ್ಬಿಡ್ತೀನಿ...

ಹಿಂಗೆ ಐದಾರು ದಿನ ಕೆಲ್ಸ ನಡೀತು
ಏಳನೇ ದಿವಸ ಮಾತ್ ನಡೀತಾ ಇತ್ತು
ರಂಗನಾಥ್ ಅವ್ರು ಬಾಗಿಲು ಕಡೆ
ನೋಡೋದೇ ಆಯ್ತು ಬರ್ಲೆ ಇಲ್ಲ ಅಟೆಂಡ್ರು..😂
ಆಗ ಬೇಂದ್ರೆ ಅವ್ರು
ಥಟ್ಟನೆ ಮಾತು ನಿಲ್ಲಿಸಿ
ಬಾಗಿಲ ಕಡೆ ವಾರೆಗಣ್ಣಿನಿಂದ ನೋಡುತ್ತ
ಸಣ್ಣದಾಗಿ ಕಣ್ಣು ಮಿಟುಕಿಸಿ
ಇವತ್ತ್ ಯಾಕ್
ನಿಮ್ಮ್ ಸಾಹೇಬ್ರು ಕರಿಲೇ ಇಲ್ಲ🤣🤣
ಎಂದು ಕೇಳಿದಾಗ ನನ್ನ ಬಾಯಿ ಒಣಗಿ
ಕಣ್ಣು ಬೆಳ್ಳಗಾಯಿತು..

(ರಂಗನಾಥ್ & ಅಟೆಂಡರ್ ನಡುವಿನ ಒಪ್ಪಂದ ಬೇಂದ್ರೆ ಅಜ್ಜರಿಗೆ ಗೊತ್ತಾಗಿರತ್ತೆ..😂😂 ಇನ್ಮೇಲ್ ಡೈರೆಕರ್..
ಕರೆದ್ರು ಬಂದ್ ಹೇಳ್ಬೇಡ ಅಂತ ಅಟೆಂಡರ್ ಗೆ ಅಜ್ಜ ಹೇಳಿರ್ತಾರೆ, ಇನ್ ಕರೆಯೋಕೆ ಎಲ್ಲಿಂದ ಬರ್ತಾರೆ..😁😁)

1956 ರಲ್ಲಿ ಶ್ರೀ ಅರವಿಂದರ ಅತಿಮಾನುಷ ಸಾಕ್ಷಾತ್ಕಾರ ಅನುಭವ(ಪಾಂಡಿಚರಿಯ ಅರವಿಂದ ಗುರುಗಳು ಆಗ ಪ್ರಯೋಗ ಮಾಡಿದ್ರು) ಪಾಂಡಿಚರಿಯ ಹೊರಗಿದ್ದ ಮೂರು ಜನರಿಗೆ ಮಾತ್ರ ಆ ಸಾಕ್ಷಾತ್ಕಾರದ ಅನುಭವ ಆಗಿತ್ತು ಅದ್ರಲ್ಲಿ ಬೇಂದ್ರೆಯವರು ಒಬ್ರು.
1956 ನೇ ಫೆಬ್ರುವರಿ 29 ರಂದು ಈ ಅತಿಮಾನುಷ ಪ್ರಜ್ಞೆ ಅವತರಣವಾಗಿ ಪೂಜ್ಯ ಪಾಂಡಿಚರಿ ತಾಯಿಯವರು ಅದನ್ನ ಪ್ರಕಟಪಡಿಸಿದ್ದರು...

ಆಶ್ರಮದ ಹೊರಗಿನ ಮೂರು ಸಾಧಕರಿಗೂ ಈ ಸ್ಪರ್ಶ ಉಂಟಾಗಿದ್ದು ಅದ್ರಲ್ಲಿ ಕವಿ ಬೇಂದ್ರೆ ಒಬ್ಬರಾಗಿದ್ದರು ಎಂದು 1982 ರ ಮದರ್ ಇಂಡಿಯಾದ ಒಂದು ಸಂಚಿಕೆಯಲ್ಲಿ ಉಲ್ಲೇಖಿಸಿದ್ದರು..
ಈ ಸಾಕ್ಷಾತ್ಕಾರದ ಸ್ಪರ್ಶದ ಬಗ್ಗೆ ಬೇಂದ್ರೆ ಅಜ್ಜರವರು ಒಂದ್ ಕಡೆ ಹೇಳ್ತಾರೆ .

ಆ ಸಮಯದಲ್ಲಿ ಬೇಂದ್ರೆ ರೈಲಿನಲ್ಲಿ ಪ್ರಯಾಣ ಮಾಡ್ತಾ ಇದ್ರಂತೆ...

1st ಕ್ಲಾಸ್ ಬೋಗಿಯ ಮೇಲೆ ಮಲಗುವ ತಾಣ
ಸೂರ್ಯ ಮುಳುಗೋ ಹೊತ್ತು
ರೈಲು ನಿಲ್ದಾಣದಲ್ಲಿ ನಿಂತಿತ್ತು
ಪ್ರವಾಸಿಗರೆಲ್ಲ ಇಳಿದಿದ್ದರು
ಸೆಕೆ ಎಂದು ಫ್ಯಾನ್ ಚಾಲು ಮಾಡಿದೆ..
ಗಿಮ್ಮ್ ಎಂದು ತಿರುಗುತ್ತಿದ್ದ
ಫ್ಯಾನಿನಿದ ಬೇಂದ್ರೆಯವರಿಗೆ
ವೇದ ಘೋಷ ಕೇಳಿಸಿದಂತಾಯಿತು..
ಅಲ್ಲದೆ ಅದೇ ಫ್ಯಾನಿನಿಂದ
ಚಿನ್ನದ ಹುಡಿ ಬಿದ್ದಂತಾಯಿತು..

ಈ ಅನುಭವದ ಕುರಿತು ಬೇಂದ್ರೆಯವರು ಹಾಡು ಕೂಡ ಬರೆದಿದ್ದಾರೆ..." ಸಹಸ್ರ ತಂತಿ ಸ್ವರದಂತೆ..."

#ಬೇಂದ್ರೆಅಜ್ಜ #ಅಧ್ಯಾತ್ಮ
ಇದೆಲ್ಲ ಅದ ಮೇಲೆ ಮುಂದೆ ಒಳ್ಳೆ ದಿವಸಗಳು ಬೇಂದ್ರೆ ಅವ್ರಿಗೆ ಎದುರಾದ್ವು..

1958 ಕ್ಕೆ 'ಅರಳು-ಮರಳು' ಸಂಗ್ರಹಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 1968 ರಲ್ಲಿ ಮರಾಠಿ ಗದ್ಯ ಸಂಕಲನ 'ಸಂವಾದ' ಕ್ಕೆ ಮಹಾರಾಷ್ಟ್ರದ ಕೇಳ್ಕರ್ ಪ್ರಶಸ್ತಿ ಬಂತು.
1966ನೇ ಆಗಸ್ಟ್ 17 ರಂದು
'ಸಖಿಗೀತ'ದ ನಾಯಕಿ ಬೇಂದ್ರೆಯವರ ಧರ್ಮಪತ್ನಿ ಲಕ್ಷ್ಮೀಬಾಯಿ ಸ್ವರ್ಗಸ್ತರಾದರು.

ಬೇಂದ್ರೆ ಹೇಳ್ತಾರೆ ಆಕೆ ಮನಸಲ್ಲಿ ಯಾವುದೇ ಕೊರಗಿರಲಿಲ್ಲ ಅಂತ,ಯಾಕಂದ್ರೆ ಎಲ್ಲ ಆಸೆಗಳನ್ನ ಆಕೆ ಬಿಟ್ಟುಬಿಟ್ಟಿದ್ರು,ಅಪೇಕ್ಷೆಗಳು ಯಾವುದು ಇರಲಿಲ್ಲ
ಮಕ್ಕಳಿಗೆ ಮದುವೆ ಆಗಿತ್ತು,ಅವರ ಬದುಕು ಅವ್ರು ಕಟ್ಕೊಂಡಿದ್ರು ಅನ್ನೋ ನೆಮ್ಮದಿ.
ಆಕೆ ಹೋಗೋದಕ್ಕಿಂತ ಕೆಲವು ದಿನಗಳ ಮೊದಲು ಬೇಂದ್ರೆಯವರು 70 ನೇ ಹುಟ್ಟುಹಬ್ಬವನ್ನ ಶಿರಹಟ್ಟಿಯಲ್ಲಿ ಆಚರಣೆ ಮಾಡಿದ್ರು. ಆಗಿನ ಮುಖ್ಯಮಂತ್ರಿ ನಿಜಲಿಂಗಪ್ಪ ಅವ್ರು ಹೋಗಿದ್ರು...ಅದ್ದೂರಿ ಕಾರ್ಯಕ್ರಮ, ಸನ್ಮಾನ ಎಲ್ಲ ಆಯ್ತು..ಅದನ್ನ ಆಕೆ ನೋಡಿದ್ರು...
ತಮ್ಮ ಧರ್ಮಪತ್ನಿ ಸ್ವರ್ಗಸ್ತರಾದ ಮೇಲೆ ಹೀಗ್ ಬರೀತಾರೆ...

"ಹೋದ್ ಬುಧುವಾರ ಬರವಲ್ತು..."

ನೀ ಬುದ್ದಿ
ನಾ ಗುರು
ಶುಕ್ರವಾರ ಲಕ್ಷ್ಮೀ ಸುದ್ದಿ
ಶನಿಗೇನ್ ಗೊತ್ತು
ಅವ್ನಿಗೆಲ್ ಶುದ್ಧಿ
ರವಿ ಬೆಳಕಿನಾಗೆ ಸೋಮ
ನಿನ ಇದ್ದಿ ಮಂಗಳವಾರ
ಕೂಡಿತ್ತು ಸಂತಿ
ಹರಿತು ಸಂತಿ
ರಾತ್ರಿ ಆತು ಬೆಳಕ ಆಗ್ಲಿಲ್ಲ...
ಒಬ್ಬರ ಹೆಗಲ ಮೇಲೆ ಒಬ್ರು
ಶುಕ್ರ, ಗುರು,ಬುಧ, ಮಂಗಳ ಎಕ್ಕೆಕ್ಕಿ ನಿಂತಿದ್ರು
ತಿಂಗಳ ಮೊಗ ನೇಸರಗ ಕಂಡಿತ್ತು
ಮೂಡಲ ಕೆಂಪ ಸೆರಗಿಗೆ
ಮೂಡೋ ಮಾರಿ ಅಡಗಿತ್ತು
ನೀ ಹೊರಗ ಬಿದ್ದಿ ಅಂತ ಪುಕಾರ ಆಯ್ತು
ನೀ ಒಳಗ ಇದ್ದಿ ಅಂತ ಪಿಸು ಮಾತು...
ತವರುಮನೆಗೆ ಹೊರಡುವ ಸಡಗರವೇ ಸಡಗರ
ಮಲ್ಲಿಗೆ ಮಾಲೆ ತುರುಬಿಗೆ
ಅರಿಶಿನ ಕುಂಕುಮ ಗಲ್ಲ ಹಣಿ
ಹೊಸ ಸೀರಿ ತುಂಬಿದ ಉಡಿ
ಉರಿಯೋ ಹಸೆಮಣೆಗೆ ಹೊರಟಿತ್ತು ಸವಾರಿ
ಶ್ರಾವಣಕ್ಕ ಹೊಸ ಹರಯ ಬಂದಂಗಿತ್ತು
ಬಿಲ್ವ ಪತ್ರ ಮಲಮಲ ಅಂತಿತ್ತು
ಡೇರೆ ಗುಲಾಬಿ ಘಮ ಘಮ
ಘಮಾಡುಸ್ತಾವ ಮಲ್ಲಿಗಿ
ನೀ ಹೊರಟಿದಿ ಈಗ ಎಲ್ಲಿಗಿ
ನೆನಪಿನ ಕಲ್ಲಿಗೆ ಕವಣಿ ಬೀಸಿದ್ರು...
ಎದ್ದಿತು
ಏಳ್ನಾಲಿಗಿ ಉರಿ
ಹೊಗಿ ಸುಳಿದಾಡಿತು ತನ್ನ ಪರಿ

ಬೆಂಕಿ ಕೆಂಡ ಬೂದಿ
ಬೂದಿ ಕೆದರಿದ ಸಿಗೋದೇನು
ಬಳಿ ಬಳಿ ಬಳಿ
ಯಾರ ಬಳಿ
ಹೋದ್ ಬುಧುವಾರ ಹೋತು
ಬರೋ ಬುಧವಾರ ಬರವಲ್ತು..

✍️ ಬೇಂದ್ರೆ ಅಜ್ಜ 🙏🏼🙏🏼🙏🏼
ಆಕಾಶವಾಣಿ ಕೆಲಸ 1966 ಕ್ಕೆ ಮುಗಿದೋಯ್ತು..
ಆದರೆ ಕರ್ನಾಟಕ ಸರ್ಕಾರ ಬೇಂದ್ರೆಯವರನ್ನ ಮೆಚ್ಚ್ಕೊಂಡು ಜೀವಾವಧಿ ಮಾಸಾಶನ ಕೊಡ್ಬೇಕು ಅಂತ ತೀರ್ಮಾನ ಮಾಡುದ್ರಂತೆ...🙏🏼🙏🏼

1968 ರಲ್ಲಿ ಪದ್ಮಶ್ರೀ ಪ್ರಶಸ್ತಿ ಬಂತು.

ಅಂದ್ಕೊಳ್ಳೋರಂತೆ ಲಕ್ಷ್ಮೀಬಾಯಿ ಇನ್ನೊಂದೆರಡ್ ವರ್ಷ ಇದ್ದು ಹೋಗ್ಬೇಕಿತ್ತು ಅಂತ....
1972 ರಲ್ಲಿ ಕರ್ನಾಟಕ ಸರ್ಕಾರ ಬೇಂದ್ರೆಯವರು ಜೀವನಾಧಾರಿತ ಸಾಕ್ಷಿ ಚಿತ್ರ ನಿರ್ಮಾಣ ಮಾಡುದ್ರಂತೆ.

1974 ರಲ್ಲಿ 'ನಾಕುತಂತಿ' ಕವನ ಸಂಗ್ರಹಕೆ ಜ್ಞಾನಪೀಠ ಪ್ರಶಸ್ತಿ ಬಂತು.

ಕರ್ನಾಟಕಕ್ಕೆ ಅದು ಎರಡನೇ ಜ್ಞಾನಪೀಠ.🙏🏼
ಬಹಳಷ್ಟು ಜನ ಮೂಗು ಮುರುದ್ರಂತೆ
ಎನ್ ನಾಕುತಂತಿ ಇದು ಯಾರಿಗೂ ಅರ್ಥ ಆಗೋದಿಲ್ಲ
ಬಿಡೋದಿಲ್ಲ...ಸುಮ್ನೆ ಪ್ರಶಸ್ತಿ ಕೊಡ್ತಾರ ಅಷ್ಟೇ.
ಬಹಳಷ್ಟು ಜನ ಮಾತಾಡಿದ್ರು ವಾರ್ತಾ ಪತ್ರಿಕೆಯಲ್ಲೂ ಬಂತು.
ಒಬ್ರು ದೊಡ್ಡ ಕವಿಗಳು " ಬೇಂದ್ರೆ ಅವ್ರು ಬರೆದದ್ದು ಅರ್ಥ ಆಗೋದಿಲ್ಲ.." ಅಂತ ಬರೆದಾಗ..

ರಾಜರತ್ನಂ ಅವ್ರು ಆ ಪ್ರಶ್ನೆಗೆ ಉತ್ತರ ಬರೆದಿದ್ರಂತೆ..
"ನೋಡ್ರಿ ...ಕೆಲವರು ಶಕ್ತಿ ಇದ್ದೋರು, ಭುಜದಲ್ಲಿ ಪರಾಕ್ರಮ ಇದ್ದೋರು ಸಮುದ್ರದಲ್ಲಿ ಈಜ್ತಾರೆ, ಇನ್ ಕೆಲವರು ದೊಡ್ದ್ ದೊಡ್ದ್ ಕಾಲುವೆಯಲ್ಲಿ ಈಜ್ತಾರೆ, ಇನ್ ಕೆಲವರು ನದಿಯಲ್ಲಿ ಈಜ್ತಾರೆ ಅದಕ್ಕಿಂತ ಕಮ್ಮಿ ಶಕ್ತಿ ಇರೋರು ಕೆರೆಯಲ್ಲಿ ಈಜ್ತಾರೆ ಅದಕ್ಕಿಂತ ಕಮ್ಮಿ ಶಕ್ತಿ ಇರೋರು ಬಾಯಿಯಲ್ಲಿ ಈಜ್ತಾರೆ, ಅದಕ್ಕಿಂತ ಕಮ್ಮಿ ಶಕ್ತಿ....
ಇರೋರು ಟಬ್ನಲ್ಲಿ ಕೈ ಕಾಲ್ ಬಡ್ಕೊಂಡು ಬಿದ್ದಿರ್ತಾರೆ,ಟಬ್ನಲ್ಲಿ ಕೈ ಕಾಲ್ ಬಡ್ಕೊಂಡ್ ಬಿದ್ದೋರಿಗೆ ಸಮುದ್ರದಲ್ಲ್ ಈಜೋರ್ ಚಿಂತೆ ಯಾಕೆ.!!?

ನಿಮ್ಗೆ ಅರ್ಥ ಆಗ್ಲಿಲ್ಲ ಅಂದ್ರೆ ಅರ್ಥ ಇಲ್ಲ ಅಂತ ಅಲ್ಲ ನಿಮಗ ಆಗಿಲ್ಲ ಅಂತ ಅಷ್ಟೇನೆ." ಅಂತ ಆ "ದೊಡ್ಡ ಕವಿ"ಮುಖಕ್ಕೆ ಹೊಡೆದಂಗ ಬರೀತಾರೆ 'ರಾಜರತ್ನಂ' ಅವ್ರು.
'ದೊಡ್ದ್ ಕವಿ' ಹೆಸ್ರು ಗೊತ್ತಿಲ್ಲ.🙊
ತರುಣರಾಗಿದ್ದ "ಬನ್ನಂಜೆ ಗೋವಿಂದಾಚಾರ್ಯ ಅವ್ರು" ನಾಕುತಂತಿ ಕವನ ಸಂಗ್ರಹ ಇಟ್ಕೊಂಡು ತಮಗೆ ಗೊತ್ತಿದ್ದ ವೇದಶಾಸ್ತ್ರದ ಹಿನ್ನೆಲೆಯೊಳಗೆ ಊರೂರುಗಳಿಗೆ ಹೋಗಿ ಕವನದ ಅರ್ಥ ಹೇಳಿ ಬಂದಿದ್ರಂತೆ. ಒಂದ್ ಸಲ ಬೇಂದ್ರೆಯವರಿಗೆ ಕೇಳುದ್ರಂತೆ " ಬಹಳ ಮಂದಿ ಕೇಳ್ತಾರೆ ನಿಮ್ಮ ಕವನ ಅರ್ಥ ಅಗೊದಿಲ್ಲಂತ, ಏನ್ ಮಾಡ್ಬೇಕು.." ಅಂತ.
ಅದಕ್ಕೆ ಬೇಂದ್ರೆ ಅವ್ರು ಹೇಳ್ತಾರೆ...

ಈ ಬೇಂದ್ರೆ ಚಿಕ್ಕ ವಯಸ್ಸಿನಲ್ಲಿ ಕವಿತೆ ಬರೆಯಲು ಪ್ರಾರಂಭ ಮಾಡ್ದಾಗ ಜನ ಕೇಳಿದ್ರು ನಿನಗ ಬ್ಯಾರೆ ಕೆಲಸ ಇಲ್ಲೆನಪ್ಪ..? ಯಾಕ್ ಬರೀತಿ ಇಂತಾದ್ದು..? ಕವಿತೆ ತಪ್ಪ್ ಗಿಪ್ಪ್ ಬರೆದ್ರೆ ವಂಶಕ್ಕೆ ಹಾನಿ ಆಗ್ತದೆ ಅಂತ ಹೆದರಿಸಿದ್ರು.
ನಾನು ಕೆಲವು ಕವಿತೆ ಬರೆದು ಪ್ರಕಟಿಸಿದ ಮೇಲೆ " ಓ ಹ್ಯಾಂಗ್ ಇದನ್ನ ಹೇಳೋದು..? ಅರ್ಥ ಏನಪ್ಪ ಇದ್ರುದು..? ಹೊಸ್ ಹೊಸದ್ ಏನೋ ಬರೀತಿ ಅಂದ್ರು.
ದೊಡ್ಡ್ ಸಾಹಿತಿಗಳೊಬ್ಬರು ( ಹೆಸರು ಪ್ರಸ್ತಾಪಿಸಿಲ್ಲ) ಬಂದು ಸರ್ ನಾಕುತಂತಿ ಗೆ ನಿವ್ಯಾಕ್ ಒಂದು ವಿಮರ್ಶಾ ಲೇಖನ ಬರೀಬಾರ್ದು, ಯಾಕಂದ್ರೆ ಬಹಳ ಮಂದಿಗೆ ಅರ್ಥ ಆಗ್ತಿಲ್ಲ" ಅಂತ ಬೇಂದ್ರೆಯವರಿಗೆ ಕೇಳುದ್ರಂತೆ.
ಅದಕ್ಕೆ ಬೇಂದ್ರೆ ಕೇಳಿದ್ರು " ನೀ MA ಆಗಿಯೇನು.!!?"
ಆ ಸಾಹಿತಿಗಳು ಅಂದ್ರು " ಆಗಿನ್ರಿ"
ಪಿ.ಎಚ್.ಡಿ ನು ಅಗೆದ ಅಂದ್ರಂತೆ.

"ಮತ್ತ್ ನಾ ಯಾಕ್ ಅರ್ಥ ಬರೀಬೇಕು ನೀನ ಹುಡುಕು" ಅಂತ ಅಂದು ಹೇಳಿದ್ರಂತೆ " ನಾನೇ ಆಕಳು ಚಿತ್ರ ಬರೆದು ಇದು ಆಕಳು ಅಂತ ಬರೀಬೇಕೇನ ಬುಡಕ..?" ನಿನಗೆಂಗ್ ಕಾಣುಸ್ತದ ಹಂಗ್ ಕಾಣುಸ್ತದ.
ಕವಿತೆ ಬರಿಯೋದಲ್ದೆ ಅದರ ಅರ್ಥ ಬ್ಯಾರೆ ಹೇಳುದ್ರ ನೀವೇನಂತೀರಿ ಮಂದಿ 'ಕವಿತೆ ಬೇರೆ ಕೇಳ್ಬೇಕು ಅದರ ಅರ್ಥ ಬೇರೆ ಕೇಳ್ಬೇಕು,ಇದೇನ್ ಬೆನ್ನತ್ತಿರಿ ಅಂದ್ರು'. ಆಮೇಲೆ ಹೇಳಿದ್ರೆ ಏನ್ ತಿಳಿತದ ಬರೀರಿ ಅಂದ್ರು, ಬರ್ದೇ...
ಕವಿತೆ ಅಂತ ಬರೀಬೇಕು ಅದರ ಸ್ವಾರಸ್ಯ ಅಂತ ಬರೀಬೇಕು ಹಾಗೇನಂತಾರೆ ಜನ ಬರೆದ್ ಮೇಲೆ ನಿಮ್ಮ್ ಕವಿತೆಗಿಂತ ನಿಮ್ಮ್ ಸ್ವಾರಸ್ಯನೇ ತಿಳಿವಲ್ತು ನನಗ ಅಂತಾರೆ...ಆಗ ನಾ ಹೇಳಬೇಕಾಯ್ತು..ಹಾಗಾದ್ರ ಸ್ವಾರಸ್ಯ ಮುಂಚೆ ಓದಿ ಕವಿತೆ ಆಮೇಲ್ ಓದ್ರಿ,
ಯಾವುದು ನಿಮಿಗ್ ತಿಳಿತದ ಅದನ್ನ ಆಮ್ಯಾಲ್ ಓದ್ರಿ ಯಾವುದು ತಿಳಿದಿಲ್ಲ ಅದನ್ನ ಮುಂಚೆ ಓದ್ರಿ ಹ್ಯಾಂಗೋ ಮಾಡ್ರಿ ನಿಮಿಗ್ ತಿಳಿದಂತೆ ಅರ್ಥ ಅಂದೆ.

ಬೇಂದ್ರೆ ಅಜ್ಜ 🙏🙏🙏
ಬೇಂದ್ರೆ ಅಜ್ಜನ ಜೀವನ ದೃಷ್ಟಿ ೬೬ ರ ನಂತರ ಬೇರೆ ಆಯ್ತು.
ಉತ್ತರ ಸಖಿಗೀತ ಅಂತ ವಾಮನ ಬೇಂದ್ರೆ ಅವ್ರು ( ಬೇಂದ್ರೆ ಅಜ್ಜನ ಮಗ ) ತಂದ್ರು.
ಆಗ ಮಕ್ಕಳು ದೊಡ್ಡವರಾಗಿದ್ರು ಜೀವನ ಚೆನ್ನಾಗಿತ್ತು..ಮನಸು ಹೆಚ್ಚಾಗಿ ಆದ್ಯಾತ್ಮ ಅದಕ್ಕಿಂತ ಹೆಚ್ಚಾಗಿ ಸಂಖ್ಯಾ ಶಾಸ್ತ್ರದ ಕಡೆ ವಾಲಿತ್ತಂತೆ.
ಈ ರಸಾಯನಶಾಸ್ತ್ರದಲ್ಲಿ ಬರೋ ಪಿರಿಯಾಡಿಕ್ ಟೇಬಲ್ ನ ಅವ್ರೆ ಒಂದ್ ಸಿದ್ದ ಮಾಡಿದ್ರಂತೆ. ಮೆಟಲ್ಸ್ ದು ಪ್ರಾಪರ್ಟಿಸ್ ಹೇಳ್ತಿನಿ ಅನ್ನೋರಂತೆ..ಆದ್ರೆ ಅದನ್ನ ತಪ್ಪು ಅಂತ ಹೇಳೋ ಧೈರ್ಯ ಯಾರಿಗೂ ಇರ್ಲಿಲ್ಲ...

ಸಂಖ್ಯಾಶಾಸ್ತ್ರದಲ್ಲಿ ಬೇಂದ್ರೆ ಅಜ್ಜನ ಮನಸ್ಸು ಬೆರೆತಿತ್ತು.
ಹೀಗೆ ಅರೋಗ್ಯ ಹದಗೆಟ್ಟು ಧಾರವಾಡದ ಆಸ್ಪತ್ರೆಯೊಂದರಲ್ಲಿ(ತಾವರಗೆರೆ) ದಾಖಲು ಮಾಡಿದ್ರು.
ECG ಸುದರ್ಶನ್ ಅನ್ನೋ ಬಹು ದೊಡ್ಡ ತತ್ವಜ್ಞಾನಿ ( ಭೌತಶಾಸ್ತ್ರ & ಗಣಿತ ) ನೋಬಲ್ ಪ್ರಶಸ್ತಿ ಬರತ್ತೆ ಅನ್ನುವಷ್ಟರ ಮಟ್ಟಿಗೆ ಹೆಸರು ಮಾಡಿದ್ದವರು.
ಅವ್ರು ಬೆಂಗಳೂರಿಗೆ ಬಂದಾಗ ಬೇಂದ್ರೆಯವರು ಸಂಖ್ಯೆಗಳ ಬಗ್ಗೆ , ವಿಜ್ಞಾನದ ಬಗ್ಗೆ ಸಾಕಷ್ಟು ಮಾತಾಡ್ತಾರೆ ಅಂತ ಬೇಂದ್ರೆ ಅಜ್ಜ ಇದ್ದ ಆಸ್ಪತ್ರೆಗೆ ಕರ್ಕೊಂಡು ಬಂದ್ರು.
ಅವ್ರ್ ಹತ್ತಿರ ಬರೋಬ್ಬರಿ ಏಳು ತಾಸು ( ಒಂದೇ ದಿವ್ಸ) ಮಾತಾಡಿದ್ರಂತೆ ಬೇಂದ್ರೆ ಅಜ್ಜ. ( ಆಸ್ಪತ್ರೆ, ಚಿಕಿತ್ಸೆ ಆದ್ರೂ ಅಷ್ಟೊಂದು ಎನರ್ಜಿ ಇದ್ದವ್ರು ಬೇಂದ್ರೆ ಅವ್ರು)
ಆಗಾಗ ಸುದರ್ಶನ್ ಅವ್ರಿಗೆ ಸುಸ್ತ್ ಆಯ್ತು ಬಿಡುವು ಕೊಡೋರಂತೆ..😁
ಊಟಕ್ಕೆ ಹೋದ್ರೆ ಆವ್ರ್ದ್ ಆತಿಲ್ಲ ಊಟ ಕರ್ಕೊಂಡ್ ಬಾ ಅನ್ನೋರಂತೆ...😁
ಎಲ್ಲ ಮಾತ್ ಆದ್ಮೇಲೆ ಸುದರ್ಶನ್ ಅವ್ರಿಗೆ ಆಶ್ಚರ್ಯ ಖುಷಿ ಒಟ್ಟೊಟಿಗೆ , ಹೇಳುದ್ರಂತೆ ಇದನ್ನ ದಾಖಲು ಮಾಡ್ಬೇಕು ನೀವು ಅಂತ. ಇದನ್ನ ಬರೆದಿಡಿ ಇದರ ಮೇಲೆ ಸಂಶೋಧನೆ ಆಗ್ಬೇಕು ಅಂತ ಸುದರ್ಶನ್ ಹೇಳುದ್ರಂತೆ. ಇದು ನಡೆದದ್ದು( 27 / July /1981) ಬೇಂದ್ರೆ ಅಜ್ಜ ತೀರಿಕೊಳ್ಳುವ ಮೂರೂ ತಿಂಗಳ ಮೊದಲು.
ಅರೋಗ್ಯ ತೀರಾ ಹದಗೆಟ್ಟಾಗ ಮುಂಬೈ ಗೆ ಕರ್ಕೊಂಡ್ ಹೋದ್ರು, ಡಾ . ನಾಥು ಅಂತ ವೈದ್ಯರು. ಬೇಂದ್ರೆಯವರ ಚಿಕ್ಕಮ್ಮನ ಮಗ. ಅವ್ರ್ ಮನೆಯಲ್ಲಿ ಇರ್ತಿದ್ರು.

ಇದರ ಬಗ್ಗೆ ಜಿ ವಿ ಕುಲಕರ್ಣಿ ಅವ್ರು ಬರೀತಾರೆ.
ಬೇಂದ್ರೆಯವರು ಕೊನೆಯ ದಿನಗಳನ್ನ ಮುಂಬೈಯಲ್ಲಿ ಕಳೆದರು.

ಅವರ ಪುತ್ರನಂತಿದ್ದ ಡಾ ಎಂ ವಿ ನಾಥು ಅವರು ಬೇಂದ್ರೆಯವರನ್ನ ಚಿಕಿತ್ಸೆಗಾಗಿ ಮುಂಬೈಗೆ ಕರೆತಂದರು 1/Oct/1981 ಕ್ಕೆ Harkishandas ಆಸ್ಪತ್ರೆಯಲ್ಲಿ ದಾಖಲು ಮಾಡಿದ್ರಂತೆ. 10th Oct ಗಾಲ್ ಬ್ಲಾಡರ್ ಸಲುವಾಗಿ ಶಸ್ತ್ರಚಿಕಿತ್ಸೆ ಆಯ್ತು.
ಅವರು ತಮ್ಮ ಪಾರ್ಥಿವ ದೇಹವನ್ನ ನರಕ ಚತುರ್ದಶಿಯಂದು ಅಂದ್ರೆ 26 /10/1981 ಮಧ್ಯಾಹ್ನ 1 ಗಂಟೆ 18 ನಿಮಿಷಕ್ಕೆ ಬಿಟ್ರು.

ಬೇಂದ್ರೆ ಯುಗ ಸಮಾಪ್ತವಾದಂತಾಯಿತು.🙏

ಅಸಂಖ್ಯ ಕನ್ನಡ & ಮರಾಠಿ ಲೇಖಕರು ಅವರ ದೇಹದ ಅಂತಿಮ ದರ್ಶನ ಪಡೆದರು.
ಕರ್ನಾಟಕ ಮಹಾರಾಷ್ಟ್ರದ ನಡುವೆ

ಸುವರ್ಣ ಕೊಂಡಿಯಂತಿದ್ದ ಬೇಂದ್ರೆಯವರು....

ತಮ್ಮ ಜೀವನವನ್ನ ಕನ್ನಡ ನಾಡಿಗಾಗಿ ತೇಯ್ದರು.

ತಮ್ಮ ದೇಹವನ್ನು ಮಹಾರಾಷ್ಟ್ರದಲ್ಲಿ ಬಿಟ್ಟರು.

#ಬೇಂದ್ರೆಅಜ್ಜ 🙏🙏🙏
ಕೃಷ್ಣಕುಮಾರ್ ಕಲ್ಲೂರ್ ಅಂತ ಬೇಂದ್ರೆ ಅಜ್ಜನ ಗೆಳೆಯರ ಗುಂಪಲ್ಲಿ ಇದ್ದವರು.

ಬೇಂದ್ರೆ ಅಜ್ಜನ ಅಂತ್ಯಕ್ರಿಯೆಯ ದಿನ ಭಾವುಕರಾಗಿ ಗೆಳೆಯರ ಗುಂಪು ಶುರುವಾದಾಗ ಹಂಚಿಕೊಂಡ ಶಾಲನ್ನ ಅವರ ದೇಹದ ಮೇಲೆ ಹೊದಿಸಿದರಂತೆ.

ಮಹಾರಾಷ್ಟ್ರದಲ್ಲಿ ಅಂತ್ಯಕ್ರಿಯೆ ಆದ್ರೆ ಕರ್ನಾಟಕದ ಶಾಲು ಅವರ ಮೇಲೆ ಇರಲಿ ಅಂತ. 🙏🏼🙏🏼🙏🏼

ಗೆಳೆಯರ ಗುಂಪಿನ ಕೊನೆಯ ಕಾಣಿಕೆ.🙏🏼
ಅಗಾಧವಾದ ಜೀವನ,

ಕಷ್ಟದ ಕುಲುಮೆಯಲ್ಲಿ ಬೆಂದಂತ ಜೀವನ,

ಕಷ್ಟದ ಕುಲುಮೆಯಲ್ಲಿ ಬೆಂದರೂ ಜನಕ್ಕೆ ಸಂತೋಷವನ್ನೇ ಹಂಚಿದ ಜೀವನ ಬೇಂದ್ರೆ ಅವರದ್ದು.🙏🏼
ಬೇಂದ್ರೆ ಅವರು ಬರೆದದ್ದು
35 ಕವನ ಸಂಗ್ರಹಗಳು.
14 ನಾಟಕಗಳು
9 ವಿಮರ್ಶಾತ್ಮಕ ಕೃತಿಗಳು
1 ಕಥೆ ಹರಟೆ ಸಂಕಲನ
5 ಸಂಪಾದನಾ ಗ್ರಂಥಗಳು
2 ಇಂಗ್ಲಿಷ್ ಗ್ರಂಥಗಳು
4 ಮರಾಠಿ ಗ್ರಂಥಗಳು
7 ಅನುವಾದಿತ ಗ್ರಂಥಗಳು.
ಇದಲ್ಲದೆ ಹಲವು ಲೇಖನಗಳು, ಭಾಷಣಗಳು.🙏🏼

ಮಾತು ತುಸು ಒರಟು
ಹೃದಯ ಮಾತ್ರ ಸಿಹಿ ಹೂರಣ

ಬೇಂದ್ರೆ ಅಜ್ಜ.🙏🏼🙏🏼🙏🏼
ಸಂದ ಗೌರವ & ಪ್ರಶಸ್ತಿಗಳು

೧. 1943 ರಲ್ಲಿ ಶಿವಮೊಗ್ಗೆಯಲ್ಲಿ 27 ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ.
೨. 1959 ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂತು ( ಅರಳು-ಮರಳು ಕವನ ಸಂಗ್ರಹ)
೩. 1966 ಮೈಸೂರು ವಿಶ್ವವಿದ್ಯಾಲಯದ ಡಾಕ್ಟರೇಟ್ ಕೊಡ್ತು.
೪. 1968 ಪದ್ಮಶ್ರೀ & ಅದೇ ವರ್ಷ ಕರ್ನಾಟಕ ವಿಶ್ವವಿದ್ಯಾಲಯದ ಡಾಕ್ಟರೇಟ್.
೫. 1969 ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಫೆಲೋಶಿಪ್ ಸಿಕ್ತು
೬. 1974 ರಲ್ಲಿ ಜ್ಞಾನಪೀಠ ಬಂತು
೭. 1976 ಕ್ಕೆ ವಾರಾಣಸಿಯ ಕಾಶಿ ವಿದ್ಯಾ ಪೀಠದ ಗೌರವ ಡಾಕ್ಟರೇಟ್ ಕೂಡ ಬಂತು.

#ಬೇಂದ್ರೆಅಜ್ಜ 🙏🏼🙏🏼🙏🏼
ಕರಿಮರಿನಾಯಿ

ಕರಿಮರಿನಾಯಿ ಕುಂಯಿಗುಡುತಿತ್ತು
ಭಟ್ಟರ ಬಾಯಿ ಒಟಗುಡುತಿತ್ತು.

ಸರಭರ ಮಳೆಯು ಸುರಿಯುತಲಿತ್ತು
ಕಾಲುವೆ ನೀರದು ಹರಿಯುತಲಿತ್ತು.

ಭೋರನೆ ಗಾಳಿಯು ಬೀಸುತಲಿತ್ತು
ತಬ್ಬಲಿ ಕುನ್ನಿಯು ಈಸುತಲಿತ್ತು.

ಬೆಚ್ಚನ ಮನೆಯಾ ಹೊಚ್ಚಲದೊಳಗೆ
ನಿಂತರು ಭಟ್ಟರು ಹಣಕುತ ಹೊರಗೆ.
ಮೆಟ್ಟಲನೇರಲು ಕುನ್ನಿಯು ಅತ್ತ
ಹವಣಿಸೆ, ಬಾಗಿಲು ಮುಚ್ಚಿತು ಇತ್ತ.

ಭಪ್ಪರೆ ಭಪ್ಪರೆ ಭಲರೆ ! ಭಟ್ಟರೋ
ಕಾಯ್ದರು ಮನೆಯನು ಏನು ದಿಟ್ಟರೋ !

ಕುನ್ನಿಯು ಒಳಗೇ ಬಂದೇನೆಂದಿತು;
ಭಟ್ಟರು, ಬಂದರೆ ಕೊಂದೇನೆಂದರು.

✍️ ಬೇಂದ್ರೆ ಅಜ್ಜ 🙏
ಇನ್ನೊಂದು ಹಾಡು & ಅದರ ಮುನ್ನುಡಿ ಹೀಗಿದೆ.

ಇದನ್ನ ಬೇಂದ್ರೆ ಅಜ್ಜ ಬರೆದಾಗ
ಭಾರತದ ಜನಸಂಖ್ಯೆ ಮೂವತ್ತಮೂರು ಕೋಟಿ ಇತ್ತು.

ಓದಿ ಬಹಳ ಚಂದ ಇದೆ.

ಭಾವ ತುಂಬಿ ಬರೆದಿದ್ದಾರೆ.🙏
#ಮುನ್ನುಡಿ

ಕಡೆಯಿಲ್ಲದ ಕಡಲ ನಡುವೆ
ಸ್ಥಿರಾಸನದಲ್ಲಿ ಭೂಮಿ ತಾಯಿಯು
ಧ್ಯಾನಮುದ್ರೆಯಲ್ಲಿ ಕುಳಿತಿದ್ದಾಳೆ
ಅವಳ ಎಡ ತೊಡೆಯ ಮೇಲೆ
ಭಾರತಿಯು ತನ್ನ ಮೊಗವನ್ನು
ಬಲಗೈಯಿಂದ ಒರಗಿಸಿ
ಎಡಗೈಯ್ಯನೆತ್ತಿ
ಹಾಡಿ ಹಾಡಿ ತನ್ನ
ಪಾಡನ್ನು ತೋಡಿಕೊಳ್ಳುತ್ತಿದ್ದಾಳೆ.
ಅವಳ ಸುತ್ತಲೂ ವಿವಿಧ ಆಕಾರದ
ಕೋಟ್ಯಾವದಿ ಪ್ರಾಣಿಗಳು
ಅಸ್ತವ್ಯಸ್ತವಾಗಿ ಬಿದ್ದುಕೊಂಡಿವೆ.
ಹಾಡು ಹೀಗಿದೆ....

ಮಕ್ಕಳಿವರೇನಮ್ಮ
ಮಕ್ಕಳಿವರೇನಮ್ಮ
ಮೂವತ್ತಮೂರು ಕೋಟಿ

ಮೂವತ್ತಮೂರು ಕೋಟಿ
ಮೂವತ್ತಮೂರು ಕೋಟಿ
ಮಕ್ಕಳಿವರೇನಮ್ಮ
ನಾ ಹಡೆದ ಮೂವತ್ತಮೂರು ಕೋಟಿ
ಮೂವತ್ತಮೂರು ಕೋಟಿ
ಮೂವತ್ತಮೂರು ಕೋಟಿ
ಬಯಕೆಗಳು ಬಸಿರುಗಳು
ಹಡೆದೆದ್ದು ಹಿಂಗಿದ್ದು
ಮೂವತ್ತಮೂರು ಕೋಟಿ
ಸೂಲಗಳು ಮೂವತ್ತಮೂರು ಕೋಟಿ...
ಹಲಕೆಲವು ಹುಳುಗಳೆನ್ನಿ
ಹಲಕೆಲವು ಕುರುಡು ಕುನ್ನಿ
ಕೆಲ ಕೆಲವು ಹುಚ್ಚು ಕುರಿ
ಕೆಲವು ಹೊಸ ಹೊಚ್ಚ ಮರಿ
ಗಂಡುತನಕೆಸೊ ಸೊನ್ನೆ
ಲೆಕ್ಕಕ್ಕೆ ಮೂವತ್ತಮೂರು ಕೋಟಿ...
ಅತ್ತೊಂದು ಹತ್ತು ಕೋಟಿ
ಇತ್ತೊಂದು ಹತ್ತು ಕೋಟಿ
ಸೋದರರು ಇದ್ದರು ಆದರದ ನುಡಿ ಇಲ್ಲ
ಅತ್ತಿತ್ತ ಹತ್ತು ಕೋಟಿ
ಹೆಸರಿಗೆ ಮೂವತ್ತಮೂರು ಕೋಟಿ...
ಭೀತ ನರಪೇತುಗಳಿರ
ಬಾತಂತ ಪ್ರೇತಗಳಿರ
ಮಣ್ಣನ್ನ ಮುಕ್ಕುವಿರಿ
ಮಸಣದಲ್ಲಿ ಬಿಕ್ಕುವಿರಿ
ಹಾರಿರೋ ಜೊಳ್ಳುಗಳಿರಾ
ಉಸಿರಿಡುವೆ ಮೂವತ್ತಮೂರು ಕೋಟಿ...
ಸುಣ್ಣವನು ಸುರಿದ ಮೇಲೆ
ಕಣ್ಣೀರ ನೆರೆಯ ಹಾಲೆ
ಬಣ್ಣ ಬಣ್ಣದ ಜೀವ
ಕತಕತನೆ ಕುದಿಯುವುವು
ಮನೆಯಾಯ್ತು ಮಲ್ಲ ಶಾಲೆ
ಇದು ಬದುಕೇ
ಮೂವತ್ತಮೂರು ಕೋಟಿ....
ಹಂಗಿನರಮನೆಯ ನರಕ
ತಂಗಿರರಿಗಿಹುದೆ ಮರುಕ
ಹಿಡಿ ಬೆರೆಳ ಹಿಡಿಯಲ್ಲಿ
ಅಡಿಯರಡರಡಿಯಲ್ಲಿ
ಹೊರಳಿ ಹೊರಲುವಿರಿ ಅಕಟಕಟಾ
ಮೂವತ್ತಮೂರು ಕೋಟಿ....
ಹಾಳರ್ಧ
ಒಲೆಯರೆಂದು
ಬೀಳರ್ಧ
ಹೆಣ್ಣು ಎಂದು
ಹೋಳು ಹೋಳಾಗಿಹುದು
ಹಾಳು ಬಾಳಾಗಿಹುದು
ಏಳಿರೋ ಅಳಿರೆಂಬೆ
ಬಾಳಿರೋ ಮೂವತ್ತಮೂರು ಕೋಟಿ...
ಹಡೆದೊಡಲು ಬಂಜೆಯಾಯ್ತೆ
ಬಾಳ್ಮೊದಲೇ ಸಂಜೆಯಾಯ್ತೆ
ಭಾರತಿಗೆ ತಲೆ ಭಾರ
ಇರುವಳೆಂಬ ವಿಚಾರ
ಬಾಳ್ವಣ್ಣುಗಿಂಜು ಅಯ್ತೆ
ಬರೀ ಶೂನ್ಯ ಮೂವತ್ತಮೂರು ಕೋಟಿ...
ನನ್ನೆದೆಯ ಹಾಲನೆರಸಿ
ನನ್ನೊಳಿಹ ಬೆಳಕ ಬೆರೆಸಿ
ವಜ್ರದೇಹಿಗಳೆಂಬೆ
ಗೊನೆಮಿಂಚು ಎನೆ ಕಂಡೆ
ವಿಜಯವಿರಲೆಂದು ಹರಸಿ
ಕಳುಹಿದೆನು ಮೂವತ್ತಮೂರು ಕೋಟಿ...
ಬಸುರಿನಲಿ ಪಡೆದುದೇನು
ಹೊರಗಿಲ್ಲಿ ಹಡೆದುದೇನು
ಅರೆರೆ ಬಡವಡಲುಗಳು
ಸೆರೆಮನೆಗಳಾದವು
ನನ್ನಳಲು ಕೇಳದೇನೋ
ಎಲೆಲೆ ಮೂವತ್ತಮೂರು ಕೋಟಿ...
ಡಿಂಬಗಳನೊಡೆದು ಬನ್ನಿ
ಕಂಬಗಳನೊಡೆದು ಬನ್ನಿ
ಮೈಯಲ್ಲಿ ಮಡಗದಿರಿ ಮನದಲ್ಲಿ ಅಡಗದಿರಿ
ತಾಯಿ ಇದೋ ಬಂದೆವೆನ್ನಿ
ನಾ ಪಡೆದ ಮೂವತ್ತಮೂರು ಕೋಟಿ.

ಮಕ್ಕಳಿವರೇನಮ್ಮ
ಮಕ್ಕಳಿವರೇನಮ್ಮ
ಮೂವತ್ತಮೂರು ಕೋಟಿ.

✍️ಬೇಂದ್ರೆ ಅಜ್ಜ 🙏🙏🙏
ಬಾಳು
ಸುಲಿದವರಿಗೆ
ಬಾಳೆ ಹಣ್ಣು

ಬದುಕ
ಸುಲಿದವರಿಗೆ
ಬಂಗಾರ ರುಂಡ
ಹಿರಣ್ಯ ಗರ್ಭ.

✍️ ಬೇಂದ್ರೆ ಅಜ್ಜ 🙏🏼
ಶುದ್ಧಿ ಅಂಬೋದು
ಇದು ಬುದ್ದಿ ಬಯಲಾಟಲ್ಲ
ಭಾವದ ಒದ್ದಾಟಲ್ಲ.

✍️ ಬೇಂದ್ರೆ ಅಜ್ಜ 🙏🏼
ಸಣ್ಣ ಕಣ್ಣಿಗೆ
ದೊಡ್ಡ ಸೂರ್ಯ ಕಂಡಾನು
ಆದರೆ,
ಸಣ್ಣ ಮನಸ್ಸಿಗೆ
ಮಹಾತ್ಮೆ ಒಪ್ಪಿಗೆಯಾಗೋದಿಲ್ಲ.

✍️ ಬೇಂದ್ರೆ ಅಜ್ಜ 🙏🏼🙏🏼🙏🏼
೧೯೭೮ ರಲ್ಲಿ ನಡೆದ ಒಂದು ಹಾಸ್ಯ ಘಟನೆ.ಅದಾಗಲೇ ಬೇಂದ್ರೆ ಅವ್ರಿಗೆ ಜ್ಞಾನಪೀಠ ಪ್ರಶಸ್ತಿ ಬಂದಿತ್ತು.

ಮಹಾರಾಣಿ ಕಾಲೇಜಿನಲ್ಲಿ ನಡೆದ ವಾರ್ಷಿಕ ದಿನಕ್ಕೆ ಬೇಂದ್ರೆ ಅವ್ರು ಮುಖ್ಯ ಅತಿಥಿಗಳು ಜೊತೆಗೆ ಗುರುರಾಜ ಕರಜಗಿ ಅವ್ರು ಇದ್ರು.ಬೇಂದ್ರೆ ಅವ್ರಿಗೆ ಮಂಕಿ ಕ್ಯಾಪ್ ಹಾಕಿಕೊಳ್ಳುವ ಅಭ್ಯಾಸ,ಚಳಿ ಇದ್ರು ಇರದಿದ್ರೂ ಮಂಕಿ ಕ್ಯಾಪ್ ಹಾಕ್ಕೊತ್ತಿದ್ರು.
ಕಾಲೇಜು ತಲುಪಿದ್ರು ಅದಾಗಲೇ ಕೆಲವು ಹಿರಿಯರು ಅತಿಥಿಗಳು, ಪ್ರಾಂಶುಪಾಲರು ವೇದಿಕೆಯ ಮೇಲೆ ಆಸೀನರಾಗಿದ್ರು, ವೇದಿಕೆಯ ಮುಂದೆ ಹೆಣ್ಮಕ್ಳು ಕೂತಿದ್ರು ಬೇಂದ್ರೆಯವರಿಗೆ ಕಾಯ್ತಾ ಇದ್ರು.

ಬೇಂದ್ರೆ ಅವ್ರು ಬಂದ್ರು & ವೇದಿಕೆ ಮೇಲೆ ಹೋಗಿ ಕೂತ್ಕೊಂಡ್ರು (ಮಂಕಿ ಕ್ಯಾಪ್ ತೆಗೆದಿರಲಿಲ್ಲಿ)
ಅದನ್ನ ನೋಡಿದ ಕೆಲವು ಹೆಣ್ಣು ಮಕ್ಕಳು ನಗೋಕೆ ಶುರು ಮಾಡುದ್ರಂತೆ & ವೇದಿಕೆಯ ಮೇಲೆ ಕೂತ ಮೇಲೆ ಬೇಂದ್ರೆಯವರಿಗೆ ಅನ್ನಿಸ್ತು ಮಂಕಿ ಕ್ಯಾಪ್ ಹಾಗೆ ಇದೆ ಅಂತ & ನಾಜೂಕಾಗಿ ತೆಗಿಯದೆ ಮಂಕಿ ಕ್ಯಾಪ್ ತುದಿ ಹಿಡಿದವರು ಒಂದೇ ಬಾರಿಗೆ ಎಳೆದರು....
ಎಳೆದ ರಭಸಕ್ಕೆ ತಲೆಯ ಕೂದಲು ಹೆಂಗೆಂಗೋ ಹರಡಿಕೊಂಡ್ತು ಇದನ್ನ ಕಂಡಾಗ ಭಾಗಶಃ ಹೆಣ್ಣುಮಕ್ಕಳು ಓ ಅಂತ ನಗಲಿಕ್ಕೆ ಶುರು ಮಾಡುದ್ರಂತೆ ಪ್ರಾಂಶುಪಾರಿಗೆ ಮುಖಭಂಗ ಅಯ್ತು & ಕೈ ಸನ್ನೆ ಮಾಡ್ತಾ ಕಂಟ್ರೋಲ್ ಮಾಡ್ಲಿಕ್ಕೆ ಪ್ರಯತ್ನ ಮಾಡುದ್ರು...
ಆಗಿನ್ನೂ ಸ್ವಾಗತ ಭಾಷಣ ಕೂಡ ಆಗಿರ್ಲಿಲ್ಲ.....ಬೇಂದ್ರೆ ಅಜ್ಜ ಮೈಕ್ ಹಿಡ್ಕೊಂಡ್ ನಿಂತ್ಕೊಂಡ್ ಬಿಟ್ರಂತೆ " ನಗ್ರಿ ಚಲೋ ಹೊತ್ತು ನಗ್ರಿ, ನಕ್ಕು ನಕ್ಕು ಜೀವ ಹಗುರ ಮಾಡ್ಕೊಳ್ಳಿ, ಆಮೇಲ್ ಹೇಳುದ್ರಂತೆ ಯಾರಿಗ್ ಗೊತ್ತವ್ವ ಮಕ್ಕಳ ನಾಳೆ ಎಂಥ ಗಂಡ ಸಿಗ್ತಾನೋ ನಿಮ್ಗ 😁😁..
ಚಲೋ ಗಂಡ ಸಿಕ್ಕ ಹಿಂಗೆ ನಗಿ ಉಳಿತದ ಇಲ್ಲ ಅಂದ್ರೆ ಕಷ್ಟ ಆಗ್ತದ. ಅವಕಾಶ ಸಿಕ್ಕದ ನಗ್ರಿ ಅಂತ ಮಾತು ಶುರು ಮಾಡ್ದೋರು ಒಂದೂವರೆ ಗಂಟೆ ನಿರರ್ಗಳ ಭಾಷಣ ಮಾಡಿ ಕೂತ ಮೇಲೆ ಅಲ್ಲಿದ್ದವರೆಲ್ಲ ಎದ್ದು ನಿಂತು ಚಪ್ಪಾಳೆ ತಟ್ಟುದ್ರಂತೆ.👏👏

ಮಾಹಿತಿ ಕೃಪೆ : ಡಾ.ಗುರುರಾಜ ಕರ್ಜಗಿ ಸರ್ 🙏🏼 ( ಆ ಕಾರ್ಯಕ್ರಮದಲ್ಲೇ ಜೊತೆಯಿದ್ದವರು)
ಹಲವು ಹಿರಿಯರು ಹೇಳಿದಂತೆ..

ನಮ್ಮ ಬೇಂದ್ರೆ ಅಜ್ಜ....🙏🏼

ಜಗದ ಕವಿ
ಯುಗದ ಕವಿ
& ಜನಮನದ ಕವಿ.🙏🏼

#ಬೇಂದ್ರೆಅಜ್ಜ 🙏🏼

ಬೇಂದ್ರೆಯವರಿಗೆ,
ಅವರ ಅದ್ದೂರಿ ಬರವಣಿಗೆಗೆ,
ಅವರ ಬದುಕಿಗೆ ದೀರ್ಘದಂಡ ನಮಸ್ಕಾರ.🙏🏼🙏🏼🙏🏼

ಈ Thread ಅಲ್ಲಿರೋ ಅಷ್ಟೂ ಮಾಹಿತಿಯ ಶ್ರೇಯಸ್ಸು ಡಾ . ಗುರುರಾಜ ಕರಜಗಿ ಸರ್ ಗೆ ಸಲ್ಲಬೇಕು..🙏🏼🙏🏼🙏🏼
'ವಿಚಿತ್ರ ಪ್ರಪಂಚ' ( 1955 ) ಅನ್ನೋ ಚಲನಚಿತ್ರಕ್ಕೆ ಬೇಂದ್ರೆ ಅಜ್ಜ ಸಾಹಿತ್ಯ (ಏಳು ಹಾಡುಗಳನ್ನ ರಚಿಸಿದ್ದರು), ಸಂಭಾಷಣೆ ಬರೆದಿದ್ದರು & ಸೊರಟ್ ಅಶ್ವಥ್ ಎನ್ನುವವರು ಸಂಭಾಷಣೆ ರಚಿಸುವಲ್ಲಿ ನೆರವು ನೀಡಿದ್ದರು.ಎಸ್ ಪುರುಷೋತ್ತಮ ಎನ್ನುವವರು ಸಂಗೀತ ನೀಡಿದ್ದರು.

ಮಾಹಿತಿ ಕೃಪೆ : Bendrepedia yt Channel Image
1957 ರಲ್ಲಿ ತೆರೆಕಂಡ ಭಕ್ತ ಮಾರ್ಕಂಡೇಯ ಚಲಚಿತ್ರಕ್ಕೆ ಬೇಂದ್ರೆ ಅಜ್ಜ ಎರಡು ಗೀತೆಗಳನ್ನ ರಚಿಸಿದ್ದರು.

ಇದಾದ ನಂತರ ಮತ್ತೆಂದು ಚಲಚಿತ್ರಕ್ಕಾಗಿ ಹಾಡುಗಳನ್ನ ಬರೆಯಲಿಲ್ಲ...ಆದರೆ ಅವರು ಬರೆದಿದ್ದ ಹಲವು ಹಾಡುಗಳು ಸಿನಿಮಾದಲ್ಲಿ ಬಳಕೆಯಾದವು.
1963 ರಲ್ಲಿ ಕೃಷ್ಣಮೂರ್ತಿ ಪುರಾಣಿಕ್ ಅವರ ಕಾದಂಬರಿ ಆಧಾರಿತ 'ಕುಲವಧು' ಸಿನಿಮಾದಲ್ಲಿ 'ಯುಗ ಯುಗಾದಿ ಕಳೆದರೂ ' ಗೀತೆಯನ್ನ ಬಳಸಿಕೊಳ್ಳಲಾಯಿತು.
ಜಿ.ಕೆ ವೆಂಕಟೇಶ್ ಅವರ ಸಂಗೀತ ಸಂಯೋಜನೆ & ಎಸ್ . ಜಾನಕಿಯವರ ಗಾಯನದಲ್ಲಿ ಮೂಡಿಬಂತು.
#ಬೇಂದ್ರೆಅಜ್ಜ 🙏🏼
1967 ರಲ್ಲಿ ತ್ರಿವೇಣಿಯವರ ಕಾದಂಬರಿ ಆಧಾರಿತ 'ಬೆಳ್ಳಿಮೋಡ' ಚಲನಚಿತ್ರದಲ್ಲಿ #ಬೇಂದ್ರೆ ಅಜ್ಜನ ಬೆಳಗು ಪದ್ಯ ಬಳಸಲಾಯಿತು."ಮೂಡಲ ಮನೆಯ ಮುತ್ತಿನ ನೀರಿನ"

ವಿಜಯ್ ಭಾಸ್ಕರ್ ಅವರ ಸಂಗೀತ , ಎಸ್ . ಜಾನಕಿಯವರ ಗಾಯನದಲ್ಲಿ ಮೂಡಿಬಂದಿತ್ತು.

ಪುಟ್ಟಣ್ಣ ಕಣಗಾಲ್ ಅವರ ಮೊದಲ ನಿರ್ದೇಶನದ ಸಿನ್ಮಾ.
1967 ರಲ್ಲಿ ನಿರ್ಮಾಣವಾದ ತರಾಸು ಅವರ ಕಾದಂಬರಿ ಆಧಾರಿತ "ಚಕ್ರತೀರ್ಥ" ಚಲನಚಿತ್ರದಲ್ಲಿ ಬೇಂದ್ರೆ ಅಜ್ಜನ ಒಂದು ಹಾಡು ( "ಕುಣಿಯೋಣು ಬಾರ" ) ಬಳಕೆಯಾಯ್ತು.

ಟಿ ಜಿ ಲಿಂಗಪ್ಪ ಅವರ ಸಂಗೀತ ನಿರ್ದೇಶನ,
ಎಲ್ . ಆರ್ ಈಶ್ವರಿ ಅವರ ಗಾಯನದಲ್ಲಿ ಮೂಡಿಬಂದಿತ್ತು.

#ಬೇಂದ್ರೆಅಜ್ಜ
1970 ರಲ್ಲಿ ಬಂದ 'ಅರಿಶಿನ ಕುಂಕುಮ' ಸಿನಿಮಾದಲ್ಲಿ ನಿರ್ದೇಶಕ K.S.L ಸ್ವಾಮಿ ಅವ್ರು #ಬೇಂದ್ರೆ ಅಜ್ಜನ "ಇಳಿದು ಬಾ ತಾಯೆ" ಹಾಡನ್ನ ಬಳಸಿಕೊಂಡರು.

ವಿಜಯ್ ಭಾಸ್ಕರ್ ಅವರ ಸಂಗೀತ ನಿರ್ದೇಶನ,
P.B ಶ್ರೀನಿವಾಸ್ ಸರ್ ಅವರ ಗಾಯನದಲ್ಲಿ ಹಾಡು ಮೂಡಿಬಂದಿತ್ತು.

( ಬೇಂದ್ರೆ ಅಜ್ಜ & ಕನ್ನಡ ಸಿನಿಮಾ)
1971 ರಲ್ಲಿ ಬಂದ ಪುಟ್ಟಣ ಕಣಗಾಲ್ ಅವ್ರ ನಿರ್ದೇಶನದ 'ಶರಪಂಜರ' ಸಿನಿಮಾದಲ್ಲಿ ಬೇಂದ್ರೆ ಅಜ್ಜನ 'ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ ಚುಂಬಕ ಗಾಳಿಯು ಬೀಸುತಿದೆ' ಹಾಡನ್ನ ಬಳಸಿಕೊಳ್ಳಲಾಯಿತು.

ವಿಜಯ ಭಾಸ್ಕರ್ ಅವರ ಸಂಗೀತ ಸಂಜೋಜನೆ,
P . B ಶ್ರೀನಿವಾಸ್ ಅವ್ರು , P . ಸುಶೀಲಾ ಅವ್ರು ಧ್ವನಿ ನೀಡಿದ್ದರು.

(ಬೇಂದ್ರೆ ಅಜ್ಜ & ಕನ್ನಡ ಸಿನಿಮಾ)
1984 ರಲ್ಲಿ ಪಟ್ಟಾಭಿರಾಮರೆಡ್ಡಿ ಅವ್ರ ನಿರ್ದೇಶನದಲ್ಲಿ ತೆರೆಕಂಡ 'ಶೃಂಗಾರಮಾಸ' ಚಲಚಿತ್ರಕ್ಕೆ ಬೇಂದ್ರೆ ಅಜ್ಜನ "ಬಂತಿದೋ ಶೃಂಗಾರಮಾಸ" ಹಾಡನ್ನ ಬಳಸಿಕೊಳ್ಳಲಾಯಿತು.

ಸಂಗೀತ : ಪಂಡಿತ್ ರಾಜೀವ್ ತಾರನಾಥ್ ಅವ್ರು
ಗಾಯನ : ವಾಣಿ ಜಯರಾಂ ಅವ್ರು

( ಬೇಂದ್ರೆ ಅಜ್ಜ & ಕನ್ನಡ ಸಿನಿಮಾ)
#ಬೇಂದ್ರೆ ಅಜ್ಜನ ಇದೆ "ಬಂತಿದೋ ಶೃಂಗಾರಮಾಸ" ಹಾಡು 1995 ರಲ್ಲಿ ಸುರೇಶ್ ಹೆಬ್ಳಿಕರ್ ನಿರ್ದೇಶನದಲ್ಲಿ ಬಂದ "ಆಘಾತ" ಚಲನಚಿತ್ರದಲ್ಲಿಯೂ ಮರುಬಳಕೆಯಾಯ್ತು.

ಸಂಗೀತ : ವಿಜಯ ಭಾಸ್ಕರ್ ಅವ್ರು
ಗಾಯನ : ಕುಸುಮಾ ಅವ್ರು

( ಬೇಂದ್ರೆ ಅಜ್ಜ & ಕನ್ನಡ ಸಿನಿಮಾ )
1989 ರಲ್ಲಿ ತೆರೆಕಂಡ ಚಂದ್ರಹಾಸ್ ಆಳ್ವ ಅವ್ರ ನಿರ್ದೇಶನದಲ್ಲಿ ಬಂದ "ಸಿಂಗಾರಿ ಬಂಗಾರಿ" ಚಿತ್ರದಲ್ಲಿ #ಬೇಂದ್ರೆ ಅಜ್ಜನ "ಶುಭನುಡಿಯೇ ಶಕುನದ ಹಕ್ಕಿ" ಹಾಡನ್ನ ಬಳಸಿಕೊಳ್ಳಲಾಯಿತು.

ಸಂಗೀತ : ವಿ.ಮನೋಹರ್ ಅವ್ರು

( ಬೇಂದ್ರೆ ಅಜ್ಜ & ಕನ್ನಡ ಸಿನಿಮಾ)
1990 ರಲ್ಲಿ ಬಿ . ಪಿ ರಾಜಶೇಖರ್ ನಿರ್ದೇಶನದಲ್ಲಿ ತೆರೆಕಂಡ 'ಪ್ರೇಮತರಂಗ' ಸಿನಿಮಾದಲ್ಲಿ ಬೇಂದ್ರೆ ಅಜ್ಜ ಅವರ ಪ್ರಸಿದ್ಧ ಬರಹ "ನೀ ಹಿಂಗ ನೋಡಬ್ಯಾಡ ನನ್ನ " ಹಾಡನ್ನ ಬಳಸಿಕೊಳ್ಳಲಾಯಿತು.

ಸಂಗೀತ : ಎಂ . ರಂಗಾರಾವ್ ಅವ್ರು
ಗಾಯನ : ರಾಜಕುಮಾರ್ ಭಾರ್ತಿ ಅವ್ರು

( ಬೇಂದ್ರೆ ಅಜ್ಜ & ಕನ್ನಡ ಸಿನಿಮಾ)
1994 ರಲ್ಲಿ ಸುಂದರ ಕೃಷ್ಣ ಅರಸ್ ಅವರ ನಿರ್ದೇಶನದಲ್ಲಿ ಬಂದ 'Super Nova 459' ಸಿನಿಮಾದಲ್ಲಿ ನಮ್ಮ ಬೇಂದ್ರೆ ಅಜ್ಜನ "ಪಾತರಗಿತ್ತಿ ಪಕ್ಕ.." ಹಾಡನ್ನ ಬಳಸಿಕೊಳ್ಳಲಾಯಿತು.

ಸಂಗೀತ : ವಿಜಯ್ ಭಾಸ್ಕರ್ ಅವ್ರು

( ಬೇಂದ್ರೆ ಅಜ್ಜ & ಕನ್ನಡ ಸಿನಿಮಾ )
1998 ರಲ್ಲಿ ರಾಜೇಂದ್ರ ಸಿಂಗ್ ಬಾಬು ಅವರ ನಿರ್ದೇಶನದಲ್ಲಿ ಬಂದ " ಭೂಮಿ ತಾಯಿಯ ಚೊಚ್ಚಲ ಮಗ" ಸಿನಿಮಾದಲ್ಲಿ #ಬೇಂದ್ರೆ ಅಜ್ಜನ " ಭೂಮಿ ತಾಯಿಯ ಚೊಚ್ಚಲ ಮಗನ ಕಣ್ತೆರೆದೊಮ್ಮೆ ನೋಡಿದಿರೇನು..." ಹಾಡನ್ನ ಬಳಸಿಕೊಳ್ಳಲಾಯಿತು.

ಸಂಗೀತ : ವಿ.ಮನೋಹರ್ ಅವ್ರು
ಗಾಯನ : ಅಣ್ಣಾವ್ರು

( ಬೇಂದ್ರೆ ಅಜ್ಜ & ಕನ್ನಡ ಸಿನಿಮಾ )
1991 ರಲ್ಲಿ ಮೋಹನ್ ಗಜೇಂದ್ರ ಅವ್ರ ನಿರ್ದೇಶನದಲ್ಲಿ ಮೂಡಿಬಂದ "ಅಂತರಂಗದ ಮೃದಂಗ" ಸಿನಿಮಾದಲ್ಲಿ #ಬೇಂದ್ರೆ ಅಜ್ಜನ "ಅಂತದಂಗದ ಮೃದಂಗ"ಹಾಡನ್ನ ಬಳಸಿಕೊಳ್ಳಲಾಯಿತು.

ಸಂಗೀತ : ಎಂ ರಂಗಾರಾವ್ ಅವ್ರು
ಗಾಯನ : SPB ಅವ್ರು

( ಬೇಂದ್ರೆ ಅಜ್ಜ & ಕನ್ನಡ ಸಿನಿಮಾ)
2001 ರಲ್ಲಿ ದಿನೇಶ್ ಬಾಬು ಅವ್ರ ನಿರ್ದೇಶನದಲ್ಲಿ ತೆರೆಕಂಡ 'ಚಿಟ್ಟೆ' ಸಿನಿಮಾದಲ್ಲಿ ಬೇಂದ್ರೆ ಅಜ್ಜ ಅವರ " ಯಾರಿಗೂ ಹೇಳೋಣು ಬ್ಯಾಡ.." ಹಾಡನ್ನ ಬಳಸಿಕೊಳ್ಳಲಾಯಿತು.

ಸಂಗೀತ : ವಿ.ಮನೋಹರ್ ಅವ್ರು
ಗಾಯನ : ಅಶ್ವಥ್ ಅವ್ರು

( ಬೇಂದ್ರೆ ಅಜ್ಜ & ಕನ್ನಡ ಸಿನಿಮಾ)
2008 ರಲ್ಲಿ ಎಂ . ಎಸ್ ನಿರ್ದೇಶನದಲ್ಲಿ ತೆರೆಕಂಡ 'ಬೆಳದಿಂಗಳಾಗಿ ಬಾ' ಸಿನಿಮಾದಲ್ಲಿ ಬೇಂದ್ರೆ ಅಜ್ಜ ಅವರ "ಸಚ್ಚಿದಾನಂದ" ಹಾಡನ್ನ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ್ ಕಂಬಾರ ಅವ್ರು ಹಾಡಿದ್ದರು.

ಸಂಗೀತ : ಗುರುಕಿರಣ್ ಅವ್ರು

( ಬೇಂದ್ರೆ ಅಜ್ಜ & ಕನ್ನಡ ಸಿನಿಮಾ )
2019 ರಲ್ಲಿ ಬಿಡುಗಡೆಯಾದ 'ಆ ಒಂದು ನೋಟು' ಸಿನಿಮಾದಲ್ಲಿ ಬೇಂದ್ರೆ ಅಜ್ಜನ "ಕುರುಡು ಕಾಂಚಣ ಕುಣಿಯುತಲಿತ್ತು.." ಬಳಸಿಕೊಳ್ಳಲಾಯಿತು.

( ಬೇಂದ್ರೆ ಅಜ್ಜ & ಕನ್ನಡ ಸಿನಿಮಾ )
ಬಿ ಸುರೇಶ್ ನಿರ್ದೇಶನದ ಕಿರುತೆರೆ ಧಾರಾವಾಹಿ 'ನಾಕುತಂತಿ' ಯಲ್ಲಿ ಬೇಂದ್ರೆ ಅಜ್ಜನ "ನಾಕುತಂತಿ" ಯ ಸಾಲುಗಳನ್ನ ಬಳಸಿಕೊಳ್ಳಲಾಯಿತು.

( ಬೇಂದ್ರೆ ಅಜ್ಜ & ಕನ್ನಡ ಧಾರವಾಹಿ)
ಗಿರೀಶ್ ಕಾರ್ನಾಡ್ ಅವ್ರು 1972 ರಲ್ಲಿ 'ಮೈಸೂರು ರಾಜ್ಯದ ವಾರ್ತಾ ಮತ್ತು ಪ್ರವಾಸೋದ್ಯಮ ಇಲಾಖೆ'ಗಾಗಿ ಬೇಂದ್ರೆ ಅಜ್ಜನ ಕುರಿತು ಸಾಕ್ಷ್ಯ ಚಿತ್ರ ನಿರ್ದೇಶಿಸಿದ್ದರು.ಕೀರ್ತಿನಾಥ್ ಕುರ್ತ್ಕೋಟಿ ಅವರ ಚಿತ್ರಕಥೆ,ಗೋವಿಂದ್ ನಿಹಲಾನಿ ಅವರ ಛಾಯಾಗ್ರಹಣ,
ಭಾಸ್ಕರ್ ಚಂದವಾರ್ಕರ್ ಅವರ 🎶 ಇತ್ತು.ಸ್ವತಃ ಬೇಂದ್ರೆ ಅಜ್ಜ ತೆರೆಯ ಮೇಲೆ ಕಾಣಿಸಿಕೊಂಡಿದ್ರು.

• • •

Missing some Tweet in this thread? You can try to force a refresh
 

Keep Current with RCB Official In ಬಯಲುಸೀಮೆ

RCB Official In ಬಯಲುಸೀಮೆ Profile picture

Stay in touch and get notified when new unrolls are available from this author!

Read all threads

This Thread may be Removed Anytime!

PDF

Twitter may remove this content at anytime! Save it as PDF for later use!

Try unrolling a thread yourself!

how to unroll video
  1. Follow @ThreadReaderApp to mention us!

  2. From a Twitter thread mention us with a keyword "unroll"
@threadreaderapp unroll

Practice here first or read more on our help page!

More from @KannadigaSunill

Jul 1
೨೧ ರೂಪಾಯಿಯೊಂದಿಗೆ ಮನೆ ಬಿಟ್ಟಿದ್ದ ಹುಡುಗ ಇಂದು ಭಾರತದ ವಿಶ್ವಕಪ್ ವಿಕ್ರಮದ ರೂವಾರಿಗಳಲ್ಲಿ ಒಬ್ಬನಾಗಿ ಬಿಟ್ಟ.

ಆ ಹುಡುಗ ಕ್ರಿಕೆಟ್ ಆಟಗಾರನಾಗಬೇಕೆಂಬ ಕನಸು ಕಂಡವ. ಕೈ ಮುರಿಯಿತು, ಕ್ರಿಕೆಟ್ ಕನಸು ಕಮರಿತು.


Image
Image
Image
Image
ಅಲ್ಲಿ ಕಳೆದುಕೊಂಡದ್ದನ್ನು ಮತ್ತೆಲ್ಲೋ ಹುಡುಕಲು ಹೊರಟವನು ಇಂದು ಭಾರತದ ಟಿ೨೦ ವಿಶ್ವಕಪ್ ವಿಕ್ರಮದ ರೂವಾರಿಗಳಲ್ಲೊಬ್ಬನಾಗಿ ನಿಂತಿದ್ದಾನೆ.
ಸುಮಾರು ೨೪ ವರ್ಷಗಳ ಹಿಂದೆ.. ಕ್ರಿಕೆಟ್ ಆಡಲೆಂದು ಕೇವಲ ೨೧ ರೂಪಾಯಿಗಳೊಂದಿಗೆ ಮನೆ ಬಿಟ್ಟಿದ್ದ ಹುಡುಗ…

ಆ ಪ್ರಯಾಣ ಭಾರತದ ವಿಶ್ವಕಪ್ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸುವವರೆಗೆ ಬಂದು ತಲುಪಿದೆ ಎಂದರೆ ಇದು ಅದ್ಭುತವಲ್ಲದೆ ಮತ್ತಿನ್ನೇನು..!
Read 24 tweets
Aug 15, 2022
ಸದ್ಯದ ಓದು

ಸಮಗ್ರ ಆಧುನಿಕ ಮೈಸೂರು ಚರಿತ್ರೆ 📖

( ಕ್ರಿ. ಶ. ೧೭೯೯ ರಿಂದ ೧೯೫೬ ರವರೆಗೆ )

✍️ ಎಂ. ಕೃಷ್ಣಯ್ಯ ಅವ್ರು 🙏

#ಕನ್ನಡ 💛❤️ #ಕರುನಾಡು #ಮೈಸೂರು
ಮೈಸೂರಿನ ಪ್ರಾಚೀನತೆ ಮತ್ತು ಯದುವಂಶದ ಸ್ಥಾಪನೆ :

ಅನಾದಿ ಕಾಲದಿಂದಲೂ ಮೈಸೂರು ಎಂಬ ಹೆಸರು ರೂಢಿಯಲ್ಲಿದ್ದಂತೆ ಕಾಣಿಸುತ್ತದೆ. ಆದರೆ ಯಾವಾಗ ಈ ಹೆಸರು ಈ ಸೀಮೆಗೆ ಪ್ರಾಪ್ತವಾಯಿತೆಂದು ಹೇಳಲು ಸಾಧ್ಯವಾಗುತ್ತಿಲ್ಲ.
ಪಾಂಡವರ ಯುಗದಲ್ಲಿ ಈ ಪ್ರಾಂತವನ್ನು ಮಾಹಿಷ್ಮತಿ ಎಂದು ಕರೆಯಲಾಗುತ್ತಿತ್ತೆಂದು ಶಾಸನ ತಜ್ಞ ಬಿ.ಎಲ್. ರೈಸ್‌ರವರು ಹೇಳುತ್ತಾರೆ. ಸಾಮ್ರಾಟ ಅಶೋಕನ ಕಾಲದಲ್ಲಿ ಈ ಸೀಮೆಗೆ ಮಹಿಷ ಮಂಡಲವೆಂದು ಕರೆಯಲಾಗುತ್ತಿತ್ತೆಂದು ಹೇಳಲಾಗಿದೆ. ಅಶೋಕ ಚಕ್ರವರ್ತಿ ಬೌದ್ಧಧರ್ಮ ಪ್ರಚಾರಕ್ಕೆ ಮಹಾದೇವ ಎಂಬುವನನ್ನು ಮಹಿಷ ಮಂಡಲಕ್ಕೆ ಕಳುಹಿಸುತ್ತಾನೆ.
Read 195 tweets
Oct 1, 2020
ಶ್ರೀರಾಮಚಂದ್ರ ಪ್ರಭುವಿನ ವಂಶವೃಕ್ಷ

ಮಾಹಿತಿ ಸಂಗ್ರಹ: ಶರತ್ ವಿಶ್ವಕರ್ಮ ಅವ್ರು
ಕೃಪೆ: ಶಿವರಾಜ ಅವ್ರು

• ಬ್ರಹ್ಮನ ಮಗ ಮರೀಚಿ
• ಮರೀಚಿಯ ಮಗ ಕಾಶ್ಯಪ
• ಕಾಶ್ಯಪರ ಮಗ ಸೂರ್ಯ
• ಸೂರ್ಯನ ಮಗ ಮನು
• ಮನುವಿನ ಮಗ ಇಕ್ಷ್ವಾಕು
• ಇಕ್ಷ್ವಾಕುವಿನ ಮಗ ಕುಕ್ಷಿ
• ಕುಕ್ಷಿಯ ಮಗ ವಿಕುಕ್ಷಿ
• ವಿಕುಕ್ಷಿಯ ಮಗ ಬಾಣ
• ಬಾಣನ ಮಗ ಅನರಣ್ಯ
1/n
• ಅನರಣ್ಯನ ಮಗ ಪೃಥು
• ಪೃಥುವಿನ ಮಗ ತ್ರಿಶಂಕು
• ತ್ರಿಶಂಕುವಿನ ಮಗ ದುಂಧುಮಾರ.(ಯುವನಾಶ್ವ)
• ದುಂಧುಮಾರುವಿನ ಮಗ ಮಾಂಧಾತ
• ಮಾಂಧಾತುವಿನ ಮಗ ಸುಸಂಧಿ
• ಸುಸಂಧಿಯ ಮಗ ಧೃವಸಂಧಿ
• ಧೃವಸಂಧಿಯ ಮಗ ಭರತ
• ಭರತನ ಮಗ ಅಶೀತಿ
• అಶೀತಿಯ ಮಗ ಸಗರ
• ಸಗರನ ಮಗ ಅಸಮಂಜಸ*
• ಅಸಮಂಜಸನ ಮಗ ಅಂಶುಮಂತ
• ಅಂಶುಮಂತನ ಮಗ ದಿಲೀಪ
2/n
• ದಿಲೀಪನ ಮಗ ಭಗೀರಥ
• ಭಗೀರಥನ ಮಗ ಕಕುತ್ಸು
• ಕಕುತ್ಸುವಿನ ಮಗ ರಘು
• ರಘುವಿನ ಮಗ ಪ್ರವುರ್ಧ
• ಪ್ರವುರ್ಧನ ಮಗ ಶಂಖನು
• ಶಂಖನುವಿನ ಮಗ ಸುದರ್ಶನ
• ಸುದರ್ಶನನ ಮಗ ಅಗ್ನಿವರ್ಣ
• ಅಗ್ನಿವರ್ಣನ ಮಗ ಶೀಘ್ರವೇದ
• ಶೀಘ್ರವೇದನ ಮಗ ಮರು
• ಮರುವಿನ ಮಗ ಪ್ರಶಿಷ್ಯಕ
• ಪ್ರಶಿಷ್ಯಕನ ಮಗ ಅಂಬರೀಶ
• ಅಂಬರೀಶನ ಮಗ ನಹುಶ
3/n
Read 11 tweets
Sep 19, 2020
ಸಧ್ಯದ ಓದು - ನೃಪತುಂಗ
ಲೇಖಕ : ತರಾಸು ಅವ್ರು ( ತಳಕು ರಾಮಸ್ವಾಮಯ್ಯ ಸುಬ್ಬರಾಯ ಅವ್ರು ) 🙏

"ರಾಷ್ಟ್ರಕೂಟ ಚಕ್ರವರ್ತಿ ಅಮೋಘವರ್ಷ ನೃಪತುಂಗ.
ಕಾವೇರಿಯಿಂದ ಗೋದಾವರಿ ಪರ್ಯಂತದ ನಾಡನ್ನು ಸುಮಾರು ಅರವತ್ತು ವರ್ಷ ಧರ್ಮದಿಂದ ಪಾಲಿಸಿ, ದೇಶ ವಿದೇಶಗಳಲ್ಲೂ ಪ್ರಸಿದ್ಧನಾಗಿದ್ದ ದೊರೆ."
#ನೃಪತುಂಗ #ತರಾಸು ImageImage
"ಸುಖವಾಗಲಿ ದುಃಖವಾಗಲಿ ಒಂಟಿಯಾಗಿ ಬರುವುದಿಲ್ಲ, ಇಲ್ಲದಾಗ ಇಲ್ಲ, ಬರುವಾಗ ಹಿಂಡುಹಿಂಡಾಗಿ ಹುಣ್ಣಿಮೆಯ ಮಧ್ಯರಾತ್ರಿ ಏರಿ ಏರಿ ಬರುವ ಕಡಲ ಅಲೆಗಳಂತೆ ಬರುತ್ತವೆ."
#ನೃಪತುಂಗ #ತರಾಸು
ತಾವಾಗಿ ಯಾರೂ ಯುದ್ಧಕ್ಕೆ ರಕ್ತಪಾತಕ್ಕೆ ಹಾತೊರೆಯಬಾರದು.ಅಂಥ ಅಧರ್ಮ ಯುದ್ಧ ಇಹಪರರ ವೈರಿ.ಆದರೆ ಪ್ರಜಾ ಪಾಲನೆಗೆ ಅಗತ್ಯವಾದ ಯುದ್ಧಕ್ಕೆ ಹಿಂಜರಿಯುವ ಅರಸನನ್ನು ರಾಜ್ಯಲಕ್ಷ್ಮಿ ಹೇಸಿ ದೂರವಾಗುತ್ತಾಳೆ.ನಿಗ್ರಹಯೋಗ್ಯನಾದ ಶತ್ರುವನ್ನಾಗಲಿ,ದುಷ್ಟ ಪುತ್ರನನ್ನಾಗಲಿ ಸಮಾನವಾಗಿ ನಿಗ್ರಹಿಸಿ,ಪ್ರಜಾ ಪರಿಪಾಲನೆ ಮಾಡುವ ದೊರೆಯೇ ಸಮಂಜಸನು. #ನೃಪತುಂಗ
Read 29 tweets
Jul 12, 2020
✍️ ನಾಗಾರ್ಜುನ್ ಶರ್ಮ & ಕಿನ್ನಲ್ ರಾಜ್ ಅವ್ರು 🤗

ಮರಳಿ ಮನಸಾಗಿದೆ
ಸಾಗಿದೆ ನಿನ್ನಾ ಹೃದಯಕೆ
ಪಯಣ ಶುರುವಾಗಿದೆ
ಕೋರಿದೆ ಪ್ರೀತಿ ಕಾಣಿಕೆ

ಮತ್ತೆ ಮತ್ತೆ ಮನಸು ಶರಣಾದ ಹಾಗಿದೆ
ಕಿರು ಬೆರಳು ಬಯಸಿದೆ ಸಲುಗೆ
ಇರಬೇಕು ಜೊತೆಯಾಗಿ ನಿನ್ನಲಿ......ನಾ 🎶🎶🎶
ಮಿಂಚುತ್ತಿದೆ ಮಿಂಚುತ್ತಿದೆ
ನಿನ್ನಿಂದ ಕನಸೆಲ್ಲಾ ಹೆಚ್ಚುತ್ತಿದೆ
ಮಿಂಚುತ್ತಿದೆ.....ಇದು ಮಿಂಚುತ್ತಿದೆ
ಹೃದಯಕೆ ಬಿರುಸಾಗಿ ಬಂತು ಕಣೆ

ಮರಳಿ ಮನಸ್ಸಾಗಿದೆ
ಸಾಗಿದೆ ನಿನ್ನಾ ಹೃದಯಕೆ
ಪಯಣ ಶುರುವಾಗಿದೆ
ಕೋರಿದೆ ಪ್ರೀತಿ ಕಾಣಿಕೆ...🎶🎶🎶
ಸಂಭ್ರಮ ದುಪ್ಪಟ್ಟು ಆದಂತ್ತಿದೆ
ನೀನೊಂಥರಾ ನಯನಾದ್ಭುತ
ಆಗಮ.. ಉಸಿರೊಂದು ಉಸಿರಾಗಿದೆ
ತಪ್ಪಾದರೆ ಬಚ್ಚಾಯಿಸು, ಪ್ರೀತಿಲಿ ಗುರಾಯಿಸು
ಹಗಲೆ ಹಗೆಯಾದ ಈ ಜೀವಕೆ
ಬೆಳಕು ನೀನಾಗಿಯೆ
ಬದುಕು ಕುರುಡಾದ ಈ ಮೋಸಕೆ
ಉಸಿರು ನೀನಾಗಿಯೆ..🎶🎶🎶
Read 4 tweets
Jul 12, 2020
#ಕಾಯ್ಕಿಣಿ_ಸಾಲುಗಳು

ಅರೆರೆ ಶುರುವಾಯಿತು ಹೇಗೆ
ಪದವೇ ಸಿಗದಾಯಿತು ಹೇಗೆ
ಹೃದಯ ಕಳುವಾಯಿತು ಹೇಗೆ
ಒಂದೂ ಮಾತು ಆಡದೆ

ಮೊದಲೇ ಬೆಳಗಾಯಿತು ಹೇಗೆ
ಕನಸೇ ಎದುರಾಯಿತು ಹೇಗೆ
ಋತುವೇ ಬದಲಾಯಿತು ಹೇಗೆ
ಹಿಂದೆ ಮುಂದೆ ನೋಡದೆ..🎶
ಕಣ್ಣಲ್ಲೇ ನೂರು ಮಾತು
ಆಡುತ ಮುಂದೆ ಕೂತು
ಜೀವದಲಿ ಛಾಪು ಹೀಗೆ ಬೀರಿಲ್ಲ ಇನ್ಯಾರು

ಆಗಿದೆ ಜೀವ ಹೂವು
ಆದರೂ ಏನೋ ನೋವು
ಭಾವಗಳ ಕಾಟ ಹೀಗೆ ನೀಡಿಲ್ಲ ಇನ್ಯಾರು..🎶🎶

#ಕಾಯ್ಕಿಣಿ_ಸಾಲುಗಳು
ತಂಗಾಳಿ ಬೀಸೋವಾಗ
ಎಲ್ಲೆಲ್ಲೂ ನಿಂದೇ ಮಾರ್ದನಿ
ಗುಟ್ಟಾಗಿ ಕೂಡಿಸಿಟ್ಟ
ಈ ಪ್ರೀತಿ ಒಂದೇ ಠೇವಣಿ

ನೀನಿಲ್ಲೆ ಇದ್ದರೂ ಅಂತರಂಗದಿ ಚಿತ್ರ ಮೂಡಿದೆ
ಈ ಜೀವ ನಿನ್ನನು ಸಂತೆಯಲ್ಲಿಯೂ ಪತ್ತೆಮಾಡಿದೆ
ನಾ ಹೇಗೆ ಇರಲಿ ಹೇಳು ನೀನು ಮುದ್ದು ಮಾಡದೆ.🎶
Read 4 tweets

Did Thread Reader help you today?

Support us! We are indie developers!


This site is made by just two indie developers on a laptop doing marketing, support and development! Read more about the story.

Become a Premium Member ($3/month or $30/year) and get exclusive features!

Become Premium

Don't want to be a Premium member but still want to support us?

Make a small donation by buying us coffee ($5) or help with server cost ($10)

Donate via Paypal

Or Donate anonymously using crypto!

Ethereum

0xfe58350B80634f60Fa6Dc149a72b4DFbc17D341E copy

Bitcoin

3ATGMxNzCUFzxpMCHL5sWSt4DVtS8UqXpi copy

Thank you for your support!

Follow Us!

:(