#TRIPSwaiver ಎಂದರೆ ಕೋವಿಡ್ ಸಂಬಂಧಿತ ಔಷಧಿ ಮತ್ತು ಚಿಕಿತ್ಸೆಗೆ ಅಗತ್ಯವಿರುವ ಔಷಧಿ ಮತ್ತು ಉಪಕರಣಗಳ ಮೇಲೆ ಸ್ವಾಮ್ಯ ಸನ್ನದು (ಪೇಟೆಂಟ್) ಮತ್ತು ಇತರ ಬೌದ್ಧಿಕ ಆಸ್ತಿ ಹಕ್ಕುಗಳ ಕಾನೂನನ್ನು ಸಡಿಲಗೊಳಿಸಬೇಕೆಂದು ಜಾಗತಿಕ ವೇದಿಕೆಯಲ್ಲಿ ಭಾರತ ಮತ್ತು ಆಫ್ರಿಕಾದಂತಹ ದೇಶಗಳು ಇಟ್ಟಿರುವ ಬೇಡಿಕೆ.
ಬಹುತೇಕ ಮಂದಿ ಲಸಿಕೆ ಪಡೆದಿದ್ದರೂ,
ಹೊಸ ತಳಿಗಳ ಚಿಕಿತ್ಸೆಗೆ ಮತ್ತು ಇನ್ನೂ ಲಸಿಕೆ ಪಡೆಯದಿರುವ ಜನರಿರುವ ದೇಶಗಳಿಗೆ ಇದು ದೊಡ್ಡ ಮಟ್ಟದಲ್ಲಿ ಸಹಾಯ ಮಾಡುತ್ತದೆ. ಆ ಕುರಿತು ಭಾರತ, ಆಫ್ರಿಕಾ, ಯುರೋಪಿಯನ್ ಒಕ್ಕೂಟ ಮತ್ತು ಅಮೆರಿಕಾದ ನಡುವಿನ ಅನೌಪಚಾರಿಕ ಚರ್ಚೆಯಲ್ಲಿ ಹೊರ ಹೊಮ್ಮಿರುವ ಪ್ರಸ್ತಾಪ #TRIPSwaiver ಉದ್ದೇಶವನ್ನೇ ಅರ್ಥಹೀನ ಮಾಡುವಂತದ್ದು.
ಹಲವಾರು ತಾಂತ್ರಿಕ ಒಡಕುಗಳನ್ನೊಳಗೊಂಡ ಪ್ರಸ್ತಾಪ, ಭಾರತವೂ ಒಳಗೊಂಡ ಮೂರನೇ ವಿಶ್ವದ ದೇಶಗಳಿಗೆ ಯಾವ ರೀತಿಯ ಉಪಯೋಗವೂ ಇಲ್ಲ. ಇಂತದೊಂದು ಪ್ರಸ್ತಾಪಕ್ಕೆ ಭಾರತ ಹ್ಞೂಗುಟ್ಟುವುದು ನಮ್ಮ ಕಾಲ ಮೇಲೆ ನಾವೇ ಚಪ್ಪಡಿ ಕಲ್ಲು ಹಾಕಿಕೊಂಡಂತೆ. ಇದರ ಕುರಿತು ಪತ್ರಿಕೆಗಳೂ, ಸುದ್ದಿಮನೆಗಳೂ ಅಷ್ಟು ತಲೆ ಕೆಡಿಸಿಕೊಂಡಂತಿಲ್ಲ.
ಜಾಗತಿಕ ಮಟ್ಟದಲ್ಲಿ ನಡೆಯುವ ಈ ಚೌಕಾಶಿಗಳು ಮಾರುಕಟ್ಟೆಯನ್ನು ನಿಯಂತ್ರಣ ಮಾಡುವ ತಾಕತ್ತು ಹಲವರಿಗೆ ತಿಳಿದಿಲ್ಲ. ಅಗತ್ಯ ಔಷಧಿಗಳು ಕೈಗೆಟುಕುವ ದರದಲ್ಲಿ ನಿಲುಕಲು #TRIPSwaiver ಭಾರತದ ಮಟ್ಟಿಗಂತೂ ಅಗತ್ಯ. ವಿದೇಶ ವ್ಯವಹಾರಗಳಲ್ಲಿ ಭಾರೀ ಚಾಣಾಕ್ಷರು ಎಂದು ಪೋಸು ಕೊಡುವ ಸರಕಾರ ಇದರ ಕಡೆ ಗಮನ ಕೊಡಬೇಕು.
• • •
Missing some Tweet in this thread? You can try to
force a refresh