#TRIPSwaiver ಎಂದರೆ ಕೋವಿಡ್ ಸಂಬಂಧಿತ ಔಷಧಿ ಮತ್ತು ಚಿಕಿತ್ಸೆಗೆ ಅಗತ್ಯವಿರುವ ಔಷಧಿ ಮತ್ತು ಉಪಕರಣಗಳ ಮೇಲೆ ಸ್ವಾಮ್ಯ ಸನ್ನದು (ಪೇಟೆಂಟ್) ಮತ್ತು ಇತರ ಬೌದ್ಧಿಕ ಆಸ್ತಿ ಹಕ್ಕುಗಳ ಕಾನೂನನ್ನು ಸಡಿಲಗೊಳಿಸಬೇಕೆಂದು ಜಾಗತಿಕ ವೇದಿಕೆಯಲ್ಲಿ ಭಾರತ ಮತ್ತು ಆಫ್ರಿಕಾದಂತಹ ದೇಶಗಳು ಇಟ್ಟಿರುವ ಬೇಡಿಕೆ.
ಬಹುತೇಕ ಮಂದಿ ಲಸಿಕೆ ಪಡೆದಿದ್ದರೂ,
ಹೊಸ ತಳಿಗಳ ಚಿಕಿತ್ಸೆಗೆ ಮತ್ತು ಇನ್ನೂ ಲಸಿಕೆ ಪಡೆಯದಿರುವ ಜನರಿರುವ ದೇಶಗಳಿಗೆ ಇದು ದೊಡ್ಡ ಮಟ್ಟದಲ್ಲಿ ಸಹಾಯ ಮಾಡುತ್ತದೆ. ಆ ಕುರಿತು ಭಾರತ, ಆಫ್ರಿಕಾ, ಯುರೋಪಿಯನ್ ಒಕ್ಕೂಟ ಮತ್ತು ಅಮೆರಿಕಾದ ನಡುವಿನ ಅನೌಪಚಾರಿಕ ಚರ್ಚೆಯಲ್ಲಿ ಹೊರ ಹೊಮ್ಮಿರುವ ಪ್ರಸ್ತಾಪ #TRIPSwaiver ಉದ್ದೇಶವನ್ನೇ ಅರ್ಥಹೀನ ಮಾಡುವಂತದ್ದು.