#ಕರುನಾಡಿನಹುಲಿ
#ಮೈಲಾರಮಹಾದೇವಪ್ಪ

ಗಾಂಧಿಯ ಪ್ರಸಿದ್ಧ ದಾಂಡಿ ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿದ ಕರ್ನಾಟಕದ ಏಕೈಕ ಪ್ರತಿನಿಧಿ, ಆಗ ಹತ್ತೊಂಬತ್ತರ ಹರೆಯದ ಮೈಲಾರ ಮಹದೇವ.

ಒಬ್ಬ ಪ್ರೌಢಶಾಲಾ ವಿದ್ಯಾರ್ಥಿಯನ್ನು ಕೇಳಿ,
ಕರ್ನಾಟಕದಿಂದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಹೋರಾಡಿದ ಕನ್ನಡದವರು ಎಷ್ಟೆಂದು, ಅವರಿಗೆ ಟಿಪ್ಪು ಬಿಟ್ಟರೆ ಬೇರೆ
ಹೆಸರು ಹೇಳಲು ತದಕಾಡುತ್ತಾರೆ...
ಇದನ್ನು ವಿಪರ್ಯಾಸ ಎನ್ನದೆ ಬೇರೇನು ಕರೆಯಬೇಕು?

ಸ್ವಾತಂತ್ರ ಚಳವಳಿಯಲ್ಲಿ ಕರ್ನಾಟಕದಿಂದ ಗಾಂಧಿ ಯುಗದಲ್ಲಿ ಬಲಿದಾನ ಮಾಡಿದ ವೀರಯೋಧರಲ್ಲಿ ಅಗ್ರಗಣ್ಯರು ಮೈಲಾರ ಮಹಾದೇವ ಕೂಡ ಒಬ್ಬರು. ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭೂಗತರಾಗಿ ಏಳು ತಿಂಗಳಿಗೂ ದೀರ್ಘಕಾಲ ಮಹಾದೇವ ಮಾಡಿದ ಸಾಹಸ, ಪಟ್ಟ ಕಷ್ಟ- ಕೋಟಲೆ, ತೋರಿದ
ಧಾಡಸಿತನ ಅಸಾಧಾರಣ. ಮಾಡು ಇಲ್ಲವೆ ಮಡಿ ಎಂಬ ಗಾಂಧೀಜಿಯ ಕರೆಯಂತೆ ಮಾಡಿ ಮಡಿದ ಧೀರ. ಎದೆಗಾರ.

ಒಂದು ಅನುಕೂಲವಂತ ರೈತ ಕುಟುಂಬದಲ್ಲಿ ಮೋಟೆಬೆನ್ನೂರು ಎಂಬ ಹಳ್ಳಿಯಲ್ಲಿ 1911ರ ಜೂನ್ 8ರಂದು ಮಹಾದೇವಪ್ಪ ಹುಟ್ಟಿದರು. ತಂದೆ ಮಾರ್ತಾಂಡಪ್ಪ, ತಾಯಿ ಬಸಮ್ಮ

ಗಳಗನಾಥರ ಕಾದಂಬರಿ, ಸದ್ಬೋಧ ಚಂದ್ರಿಕೆ ಪತ್ರಿಕೆ ಹಾಗೂ ಇತರ ದೇಶಭಕ್ತಿ ಪರ ಸಾಹಿತ್ಯ
ಓದಿ, ಹಿತ ಬೋಧ ಎಂಬ ಗೆಳೆಯರ ಗುಂಪು ಕಟ್ಟಿದ. ಗರಡಿಮನೆಗೆ ಹೋಗಿ, ಕುಸ್ತಿಮಾಡಿ, ಮಲ್ಲಕಂಬದ ಸಾಧನೆ ಮಾಡಿ ಗಟ್ಟಿ ಮುಟ್ಟಾದ ದೇಹ ಪಡೆದ.

1930ರ ಮಾರ್ಚ್ 12 ರಂದು ದಿನ ಗಾಂಧಿ ಸ್ವಯಂ ಆರಿಸಿಕೊಂಡ 78 ಸೇನಾನಿಗಳೊಂದಿಗೆ ಸಾಬರಮತಿಯಿಂದ ಉಪ್ಪಿನ ಸತ್ಯಾಗ್ರಹಕ್ಕಾಗಿ ದಾಂಡೀ ಯಾತ್ರೆ ಆರಂಭಿಸಿದರು.
ಇದಕ್ಕಾಗಿ ಗಾಂಧಿಯೊಂದಿಗೆ ಮೈಲಾರ ಮಹಾದೇವರಿಗೂ
6 ತಿಂಗಳ ಶಿಕ್ಷೆಯಾಯಿತು. ಮೈಲಾರರು ಜೈಲಿನಿಂದ ಬಿಡುಗಡೆಗೊಂಡು ಮರಳಿ ತಾಯ್ನಾಡಿಗೆ ಬಂದಾಗ ಅವರಿಗೆ ಧಾರವಾಡ, ಮೋಟೆಬೆನ್ನೂರುಗಳಲ್ಲಿ ಸಂಭ್ರಮದಿಂದ ಸ್ವಾಗತಿಸಲಾಯಿತು. 1932-33ರಲ್ಲಿ ಅಸಹಕಾರ ಹಾಗೂ ಕಾಯ್ದೆಭಂಗ ಚಳುವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ ಮಹಾದೇವರ ಪತ್ನಿ ಸಿದ್ದಮ್ಮನಿಗೂ 6 ತಿಂಗಳ ಜೈಲು ಶಿಕ್ಷೆಯಾಗಿ ಅಹಮದಾಬಾದಿಗೆ ಕಳಿಸಲ್ಪಟ್ಟರು.
ಕರ್ನಾಟಕಕ್ಕೆ ಮರಳಿ ಬಂದು ಚಳುವಳಿ ನಡೆಸಿದ್ದರಿಂದ ಮಹಾದೇವರಿಗೂ ಶಿಕ್ಷೆಯಾಗಿ ಹಿಂಡಲಗಾ ಜೈಲಿಗೆ ತಳ್ಳಲ್ಪಟ್ಟರು. ಹೀಗೆ ಸ್ವಾತಂತ್ರ್ಯಂದೋಲನದಲ್ಲಿ ಭಾಗವಹಿಸಿದ್ದಕ್ಕಾಗಿ ಒಂದೇ ಕುಟುಂಬದ ತಾಯಿ ಮಗ ಸೊಸೆ ಎಲ್ಲರೂ ಜೈಲುವಾಸ ಅನುಭವಿಸಿದ್ದು ಆ ದೇಶಭಕ್ತ ಕುಟುಂಬದ ಹಿರಿಮೆಯನ್ನು ಸಾರುತ್ತದೆ.

ನಾಲ್ಕಾರು ಬಾರಿ ಕಾರಾಗೃಹಕ್ಕೆ ಹೋಗಿ ಬಂದರೂ ಮಹಾದೇವರು
ಹೊರಗಿದ್ದಾಗಲೆಲ್ಲ ಖಾದಿ ಪ್ರಚಾರ, ದಲಿತೋದ್ದಾರ ಮುಂತಾದ ಕಾರ್ಯಕ್ರಮಗಳನ್ನು ಮುಂದುವರೆಸುತ್ತಿದ್ದರು. ಇದಕ್ಕಾಗಿ ಇಂದಿನ ಹಾವೇರಿ ಜಿಲ್ಲೆಯ ಕೊರಡೂರಿನಲ್ಲಿ ತಮ್ಮದೇ ಆದ ಒಂದು ಗ್ರಾಮ ಸೇವಾಶ್ರಮವನ್ನು (1937) ಪ್ರಾರಂಭಿಸಿದರು. ಧಾರವಾಡ ಜಿಲ್ಲೆಯ ದಕ್ಷಿಣ ಭಾಗದಲ್ಲಿ ಕ್ವಿಟ್ ಇಂಡಿಯಾ ಚಳವಳಿಯ ನೇತೃತ್ವ ಮೈಲಾರ ಮಹಾದೇವರದ್ದಾಗಿತ್ತು.
ಅದೇ ಸಂದರ್ಭದಲ್ಲಿ ಬ್ರಿಟಿಷ್ ಸರ್ಕಾರ ರೈತರಿಂದ ಬಲವಂತವಾಗಿ ಕಂದಾಯ ಸಂಗ್ರಹಿಸುವ, ಕಂದಾಯ ಕೊಡದದವರ ಮೇಲೆ ದೌರ್ಜನ್ಯ ಎಸಗುವ ಕಾರ್ಯದಲ್ಲಿ ನಿರತವಾಗಿತ್ತು. ಬಡಜನರ ಶೋಷಣೆ ಸಹಿಸದ ಮೈಲಾರರು, ರೈತರಿಂದ ಸರ್ಕಾರ ಕಂದಾಯವನ್ನು ಬಲಾತ್ಕಾರವಾಗಿ ವಸೂಲಿಮಾಡಿ ಸಂಗ್ರಹಿಸಿಟ್ಟಿದ್ದನ್ನು ರೈತರಿಗೆ ಹಿಂದಿರುಗಿಸಲು ಸರ್ಕಾರಕ್ಕೆ ತೊಂದರೆ ಕೊಡುವ ಕಾರ್ಯದಲ್ಲಿ
ಸಂಗಡಿಗರೊಂದಿಗೆ ಅನಿವಾರ್ಯವಾಗಿ ತೊಡಗಿದರು. ಇದಕ್ಕಾಗಿ ಹಲವಾರು ವಿಧ್ವಂಸಕ ಕೃತ್ಯಗಳನ್ನು ಕೈಕೊಂಡು ಬ್ರಿಟಿಷರ ಆಡಳಿತಯಂತ್ರ ನಿಷ್ಕ್ರಿಯವಾಗುವಂತೆ ಮಾಡಲು ಪ್ರಯತ್ನಿಸಿದರು. 1943ರ ಎಪ್ರಿಲ್ ಒಂದರಂದು ಮೈಲಾರರು ಹೊಸರಿತ್ತಿ ಕಂದಾಯ ವಸೂಲಿ ಕಚೇರಿಯ ಮೇಲೆ ದಾಳಿ ನಡೆಸುವ ಯೋಜನೆ ಹಾಕಿಕೊಂಡರು.

ಅಲ್ಲಿ ನಡೆದ ಬ್ರಿಟಿಷ್ ಅಧಿಕಾರಿಗಳ ಜತೆಗಿನ
ಕಾಳಗದಲ್ಲಿ ಕೇವಲ ೩೨ರ ಹರೆಯದ ಧೀಮಂತ ವೀರ ದೇಶಭಕ್ತ ಮೈಲಾರ ಮಹಾದೇವರು (1911-1943) ಬ್ರಿಟಿಷರ ಗುಂಡಿಗೆ ಎದೆಯೊಡ್ಡಿ ಬಲಿದಾನಗೈದರು. ಅಂದು ಮಹದೇವರ ಜತೆಗೆ ತಿರುಕಪ್ಪ ಮಡಿವಾಳರ ಹಾಗೂ ವೀರಯ್ಯ ಹಿರೇಮಠ ಎಂಬ ದೇಶಭಕ್ತರು ಕೂಡಾ ಬಲಿದಾನ ಮಾಡಿದರು. ಹೀಗೆ ಕನ್ನಡ ನಾಡಿನ ವೀರ ದೇಶಭಕ್ತನೊಬ್ಬ ಜೀವನಪೂರ್ತಿ ದೇಶಕ್ಕಾಗಿ ತನ್ನನ್ನು ಅರ್ಪಿಸಿಕೊಂಡು
ಕೇವಲ 32 ನೇ ವಯಸ್ಸಿಗೆ ಮಾತೃಭೂಮಿಯ ರಕ್ಷಣೆಗಾಗಿ ಜೀವ ನೀಡಿದ್ದು ಸ್ಮರಣಾರ್ಹ

ಗಾಂಧಿಯನ್ನು ಮತ್ತು ಆತನ ಅಹಿಂಸಾ ಮಾರ್ಗವನ್ನು ನಂಬಿ ಬಂದವರು ಅದೆಷ್ಟು ಲಕ್ಷವೋ!

ಬ್ರಿಟಿಷರಿಂದ ಗಾಂಧಿ ಮತ್ತು ಆತನ ಹತ್ತಿರದ ಸಂಗಡಿಗರಿಗೆ ಕೂದಲು ಕೂಡ ಸೊಂಕದಿದ್ದರೂ ಗಾಂಧಿಯೇ ದೇವರು ಎಂದು ನಂಬಿದ್ದ ಎಷ್ಟೋ ಅಮಾಯಕ ಜೀವಗಳು ದೇಶಕ್ಕಾಗಿ ಪ್ರಾಣವನ್ನೇ ತೆತ್ತರು.

• • •

Missing some Tweet in this thread? You can try to force a refresh
 

Keep Current with Sheshapatangi1 ಪ್ರಭಾ ಮಗ ಈ ಅಲೆಮಾರಿ ಅಯ್ಯಂಗಾರಿ🇮🇳

Sheshapatangi1 ಪ್ರಭಾ ಮಗ ಈ ಅಲೆಮಾರಿ ಅಯ್ಯಂಗಾರಿ🇮🇳 Profile picture

Stay in touch and get notified when new unrolls are available from this author!

Read all threads

This Thread may be Removed Anytime!

PDF

Twitter may remove this content at anytime! Save it as PDF for later use!

Try unrolling a thread yourself!

how to unroll video
  1. Follow @ThreadReaderApp to mention us!

  2. From a Twitter thread mention us with a keyword "unroll"
@threadreaderapp unroll

Practice here first or read more on our help page!

More from @sheshapatangi1

Jun 10
How Gandhi Ruined A SWADESHI Freedom Fighter?
Was Gandhi’s Great Granddaughter was the only one to commit fraud? Let’s Learn About The Cheater.
This is the story of Gandhi cheating freedom fighter V.O.Chidambaram Pillai famously known by the epithet - Kappalottiya Tamizhan. ImageImageImage
VOC launched Swadeshi Steamship company in 1906 to compete and break the monopoly of British India Navigation company as he felt that British make money through trade. But British got him under sedition charges and he lost all the money fighting court cases and the steamship
company was liquidated.
South Indians in South Africa collected money for VOC and handed it over to Gandhi. VOC, then under dire poverty, corresponded with Gandhi for more than 5 years but never got the money from Gandhi.
Between the middle of 1915 and early 1916,
Read 8 tweets
Jun 6
It took Vajpayee govt to recognise and award Bharataratna for the 1st Congress CM of Assam.

Remembering #GopinathBordoloi, the savior of Assam and arguably entire NorthEast from falling into the hands of East Pakistan, on his janmadivas.

For a pre-Independence Congressman,
it was unimaginable to go against party icons such as Jawaharlal Nehru and Maulana Abul Kalam Azad. But Lokpriya Gopinath Bordoloi, the undisputed leader of Assam, did an act of insubordination to save his own state from the Grouping system of the Cabinet Mission.
Acceptance of
the plan would have meant Assam’s merger with East Pakistan after Partition. Bordoloi forcefully protested, though he got little support except from two Bengal leaders—Congressman Sarat Chandra Bose & Jana Sangh founder S P Mookerjee. It was eventually at Subhash Chandra Bose's
Read 19 tweets
Jun 6
ಅಪರೂಪದಲ್ಲಿ ಅಪರೂಪ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಜೀವನ.

ಹುಟ್ಟು ಸಾವು ಎರಡೂ ಒಂದೇ ದಿನಾಂಕ ಈ ಜ್ಞಾನಪೀಠ ವಿಜೇತನದು.
ಈ ಅಪರೂಪದ "ಕನ್ನಡದ ಆಸ್ತಿ" ಯ ಬಗ್ಗೆ ಮತ್ತಷ್ಟು ತಿಳಿಯೋಣ ಬನ್ನಿ.
"ಸಣ್ಣ ಕಥೆಗಳ ಬ್ರಹ್ಮ" ಎಂದೇ ಪರಿಗಣಿತರಾದ, "ಶ್ರೀನಿವಾಸ" ಕಾವ್ಯನಾಮದ ಮಾಸ್ತಿ ಅವರು ಕೋಲಾರದ ಮಾಲೂರಿನ ಮಾಸ್ತಿ ಗ್ರಾಮದಲ್ಲಿ
ರಾಮಸ್ವಾಮಿ ಅಯ್ಯಂಗಾರ್ – ತಿರುಮಲ್ಲಮ್ಮ ದಂಪತಿಗಳಿಗೆ 08-06-1891ರಲ್ಲಿ ಜನಿಸಿದರು. ಪ್ರೌಢವಿದ್ಯಾಭ್ಯಾಸವನ್ನು ಮೈಸೂರಿನ ವೆಸ್ಲಿಯನ್ ಹೈಸ್ಕೂಲಿನಲ್ಲೂ, ಎಫ್.ಎ. ಅನ್ನು ಮಹಾರಾಜ ಕಾಲೇಜಿನಲ್ಲೂ ಮುಗಿಸಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ ಮುಗಿಸಿ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಎಂಎ ಪದವಿಯನ್ನು 1914ರಲ್ಲಿ ಪಡೆದರು.
ತಮ್ಮ ವಿದ್ಯಾಭ್ಯಾಸ ಕಾಲದಲ್ಲಿ ಮಾಸ್ತಿ ಯಾವ ಪರೀಕ್ಷೆಯಲ್ಲೂ ಪ್ರಥಮ ಸ್ಥಾನ ವನ್ನು ಬೇರೆಯವರಿಗೆ ಬಿಟ್ಟುಕೊಡಲಿಲ್ಲ.
ಮದ್ರಾಸಿನಲ್ಲಿ ಇಂಗ್ಲೀಷ್ ಎಂ.ಎ ಮಾಡಿಕೊಂಡು ಚಿನ್ನದಪದಕ ಗಳಿಸಿದ ಮಾಸ್ತಿ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಸುಮಾರು ಒಂದೂವರೆ ತಿಂಗಳು ಉಪಾಧ್ಯಾಯರಾಗಿದ್ದು ಬೆಂಗಳೂರಿಗೆ ಬಂದು ಸಿವಿಲ್ ಪರೀಕ್ಷೆಗೆ ಕುಳಿತು ಅಲ್ಲಿಯೂ ಪ್ರಥಮರಾಗಿ
Read 17 tweets
Jun 5
#TheKashmirFiles

7 characters play a large part for Kashmir’s & Bharat’s sufferings.

Patriot Kak, Dumb Gandhi, Blind Sardar, Wicked Abdullah, Traitor Nehru, Cunning Mountbatten, Confused Hari Singh.

We forget that Jammu was Jambu, that gave its name to Jambudvipa, that became ImageImageImage
the name of our entire land.
What began as Kasyapa-pur and Jambu, and is today a truncated Jammu and Kashmir, is thus at the very core of our civilisational identity.

#PanditRamchandraKak is long long forgotten hero, but it is time to recollect and also question Nehruvian
Kashmir history.

On his Jayanti, let us learn little more about the Prime Minister of J&K during 1945 to 1947 who was also an archaeologist and brought out many books including Ancient Monuments Of Kashmir in 1933.

Ramachandra Kak, being a Kashmiri Pandit knew well how SUFI's
Read 20 tweets
Jun 4
By the end of this thread, one will wonder, how 1 Maharaja can do so much for his subjects, that too being under British Rule.
#NalvadiKrishnaRajaWodeyar.
#Jayanti

Today, Bangalore is known as the Silicon Valley of India, and it is the result of a foundation laid down by
the erstwhile Maharaja of Mysore, Maharaja Sri Krishnaraja Wadiyar-IV or Sri Sir Krishnaraja Wodeyar- IV or Nalvadi Krishnaraja Wodeyar.
He was the 24th king of the Mysore Kingdom.
At the time of his death, the Maharaja had a personal fortune of approximately US$400 million
making him one of the world’s richest men. Under his reign, Mysore was renowned as the best-administered state in the world.
No On June 6th, 1900, he married Maharani Pratapa Kumari Ammani of Kathiawar.
He ruled over the state for 39 years which were often described as the
Read 22 tweets
Jun 3
#AbaniMukherjeeJayanti
In their quest to destroy the land of Sanatana & to appease 1 particular dynasty, Communists of India Forgot their own founder who died fighting for Bharat's Freedom.
This is History of Abaninath Mukherjee, an Anushilan Samithi freedom fighter & 1 of the
7 people who established Communist Party of India.
The Tragedy is HIS DEATH.
He was Executed By Joseph Stalin on 28 October 1937 and his death was acknowledged only after 20 Years.
Along with him there was another victim, Virendranath Chattopadhaya, the younger brother of
Sarojini Naidu.
For a set of freedom fighters, the lure of Marx & Russia proved fatal. They were drawn to Bolshevism by Lenin and met their end at the hands of Joseph Stalin.
Abani was born at Jabalpur on 3 June 1891, learnt weaving & was employed at a cotton mill.
In 1914,
Read 17 tweets

Did Thread Reader help you today?

Support us! We are indie developers!


This site is made by just two indie developers on a laptop doing marketing, support and development! Read more about the story.

Become a Premium Member ($3/month or $30/year) and get exclusive features!

Become Premium

Don't want to be a Premium member but still want to support us?

Make a small donation by buying us coffee ($5) or help with server cost ($10)

Donate via Paypal

Or Donate anonymously using crypto!

Ethereum

0xfe58350B80634f60Fa6Dc149a72b4DFbc17D341E copy

Bitcoin

3ATGMxNzCUFzxpMCHL5sWSt4DVtS8UqXpi copy

Thank you for your support!

Follow Us on Twitter!

:(