ಸದ್ಯದ ಓದು

ಸಮಗ್ರ ಆಧುನಿಕ ಮೈಸೂರು ಚರಿತ್ರೆ 📖

( ಕ್ರಿ. ಶ. ೧೭೯೯ ರಿಂದ ೧೯೫೬ ರವರೆಗೆ )

✍️ ಎಂ. ಕೃಷ್ಣಯ್ಯ ಅವ್ರು 🙏

#ಕನ್ನಡ 💛❤️ #ಕರುನಾಡು #ಮೈಸೂರು
ಮೈಸೂರಿನ ಪ್ರಾಚೀನತೆ ಮತ್ತು ಯದುವಂಶದ ಸ್ಥಾಪನೆ :

ಅನಾದಿ ಕಾಲದಿಂದಲೂ ಮೈಸೂರು ಎಂಬ ಹೆಸರು ರೂಢಿಯಲ್ಲಿದ್ದಂತೆ ಕಾಣಿಸುತ್ತದೆ. ಆದರೆ ಯಾವಾಗ ಈ ಹೆಸರು ಈ ಸೀಮೆಗೆ ಪ್ರಾಪ್ತವಾಯಿತೆಂದು ಹೇಳಲು ಸಾಧ್ಯವಾಗುತ್ತಿಲ್ಲ.
ಪಾಂಡವರ ಯುಗದಲ್ಲಿ ಈ ಪ್ರಾಂತವನ್ನು ಮಾಹಿಷ್ಮತಿ ಎಂದು ಕರೆಯಲಾಗುತ್ತಿತ್ತೆಂದು ಶಾಸನ ತಜ್ಞ ಬಿ.ಎಲ್. ರೈಸ್‌ರವರು ಹೇಳುತ್ತಾರೆ. ಸಾಮ್ರಾಟ ಅಶೋಕನ ಕಾಲದಲ್ಲಿ ಈ ಸೀಮೆಗೆ ಮಹಿಷ ಮಂಡಲವೆಂದು ಕರೆಯಲಾಗುತ್ತಿತ್ತೆಂದು ಹೇಳಲಾಗಿದೆ. ಅಶೋಕ ಚಕ್ರವರ್ತಿ ಬೌದ್ಧಧರ್ಮ ಪ್ರಚಾರಕ್ಕೆ ಮಹಾದೇವ ಎಂಬುವನನ್ನು ಮಹಿಷ ಮಂಡಲಕ್ಕೆ ಕಳುಹಿಸುತ್ತಾನೆ.
ಆ ಮಹಿಷ ಮಂಡಲವೆ ಇವತ್ತಿನ ಮೈಸೂರು ಎಂದು ಕೆಲವು ವಿದ್ವಾಂಸರು ಹೇಳುತ್ತಾರೆ. ೧೧ ಮತ್ತು ೧೨ನೇ ಶತಮಾನಗಳಲ್ಲಿನ ಕೆಲವು ಶಾಸನಗಳು ಈ ಪ್ರದೇಶವನ್ನು ಮಹಿಷಪುರಿ, ಮಹಿಸೂರು, ಮೈಸೂರು, ಮೈಸುನಾಡು ಎಂದೆಲ್ಲ ಕರೆದಿವೆ.
ದ್ವಾರಕೆಯಿಂದ ವಿಜಯರಾಯರೆಂಬ ನಾಮಾಂಕಿತವುಳ್ಳ ಯದುರಾಯರು ಮತ್ತು ಅವರ ತಮ್ಮಂದಿರಾದ ಕೃಷ್ಣರಾಯರು ಮೊಟ್ಟಮೊದಲು ಬಂದು ನೆಲೆಸಿದ್ದು 'ಹದಿನಾಡು' ಎಂಬ ಸ್ಥಳದಲ್ಲಿ. ಇದು ಮೈಸೂರು ಪಟ್ಟಣಕ್ಕೆ ಹತ್ತಿರದಲ್ಲಿತ್ತು. ಆದರೆ ಕೆಲವು ವಿದ್ವಾಂಸರು ಆ ಸೋದರರು ದ್ವಾರಕೆಯಿಂದ ಬಂದವರೆಂಬ ವಾದವನ್ನು ತಿರಸ್ಕರಿಸುತ್ತಿದ್ದಾರೆ.
ಸೋದರರು ಸ್ಥಳಿಯರೇ ಆಗಿದ್ದರೆಂದು ಅವರು ಹೇಳುತ್ತಾರೆ. ಹದಿನಾಡು ಆಗ ಒಂದು ಚಿಕ್ಕ ಪಾಳೆ ಪಟ್ಟಾಗಿತ್ತು. ಅದನ್ನು ಆಳುತ್ತಿದ್ದ ಚಾಮರಾಜರೆಂಬ ಪಾಳೆಗಾರ ನಿಧನನಾಗಿದ್ದನು. ಆತನಿಗೆ ಏಕಮಾತ್ರ ಪುತ್ರಿಯಿದ್ದಳು. ಆಕೆ ಬಹಳ ಸುಂದರವಾಗಿದ್ದಳು. ಪಕ್ಕದ ಕರುಗಳ್ಳಿ ಪಾಳೆಗಾರ ಮಾರನಾಯಕ ಆಕೆಯನ್ನು ವಿವಾಹವಾಗಲು ಬಯಸುತ್ತಾನೆ.
ಆ ಮೂಲಕ ಆ ಪಾಳೆಪಟ್ಟನ್ನು ಅಪಹರಿಸಲು ಅಪೇಕ್ಷಿಸುತ್ತಾನೆ. ಅದಕ್ಕಾಗಿ ಆತ ಆಕೆಯ ತಾಯಿಯನ್ನು ತನಗೆ ಮಗಳನ್ನು ಕೊಟ್ಟು ಮದುವೆ ಮಾಡಿಸುವಂತೆ ಪಿಡಿಸುತ್ತಿದ್ದನು. ತಾಯಿಗೆ ಮಗಳನ್ನು ಆತನಿಗೆ ವಿವಾಹ ಮಾಡಿಕೊಡಲು ಇಷ್ಟವಿರಲಿಲ್ಲ. ಇಂತಹ ಆಪತ್ಕಾಲದಲ್ಲಿ ಯದುರಾಯ ಮತ್ತು ಕೃಷ್ಣರಾಯರಿಬ್ಬರು ಚಾಮರಾಜರ ವಿಧವಾ ಪತ್ನಿಗೆ ಸಹಾಯ ಮಾಡುತ್ತಾರೆ.
ಅವರು ಕರುಗಳ್ಳಿ ಪಾಳೆಗಾರನನ್ನು ಯುದ್ಧದಲ್ಲಿ ಕೊಂದು ಹಾಕುತ್ತಾರೆ. ಇದರಿಂದ ಹದಿನಾಡಿನ ರಾಣಿ ಸಂತಸ ಪಡುತ್ತಾಳೆ, ಆ ಸಹೋದರ ಸಾಹಸಕ್ಕೆ ಮೆಚ್ಚಿ ತನ್ನ ಮಗಳನ್ನು ಹಿರಿಯನಾದ ಯದುರಾಯ (ವಿಜಯರಾಯ)ನಿಗೆ ಕೊಟ್ಟು ವಿವಾಹ ಮಾಡುತ್ತಾಳೆ.
ಪರಿಣಾಮವಾಗಿ ಯದುರಾಯರು ಹದಿನಾಡಿನ ಉತ್ತರಾಧಿಕಾರಿಯಾಗಿ ಕ್ರಿ.ಶ. ೧೩೯೯ರಲ್ಲಿ ಆ ಪಾಳೆಪಟ್ಟಿನ ಸಿಂಹಾಸನವನ್ನೇರುತ್ತಾರೆ. ಒಡೆಯರ ವಂಶದ ದಾಖಲೆಗಳಲ್ಲಿ ಈ ಮಹಾಕಾರ್ಯದಲ್ಲಿ ಹದಿನಾಡಿನ ಪಾಳೆಗಾರ ಚಾಮರಾಜರ ಕುಲಗುರುಗಳಾದ ಒಡೆಯರು ಎಂಬ ಜಂಗಮ ಸ್ವಾಮಿಗಳು ಯದುರಾಯರಿಗೆ ಸಹಾಯ ಮಾಡಿದ್ದರಂತೆ
ಅದರ ನೆನಪಿಗಾಗಿ ಯದರಾಯರು ತಮ್ಮ ಹೆಸರಿನ ಕೊನೆಯಲ್ಲಿ 'ಒಡೆಯರ್' ಎಂಬ ಪದವನ್ನು ಸೇರಿಸಿಕೊಳ್ಳುತ್ತಾರೆ. ಅದೇ ರೀತಿ ಅವರ ಉತ್ತರಾಧಿಕಾರಿಗಳು ಆ ಹೆಸರನ್ನು ಪರಂಪರಾನುಗತವಾಗಿ ತಮ್ಮ ಹೆಸರಿನ ಕೊನೆಯಲ್ಲಿ ಸೇರಿಸಿಕೊಳ್ಳುತ್ತಾರೆ. ಆದುದರಿಂದ ಯದುವಂಶಕ್ಕೆ ಒಡೆಯರ್ ವಂಶ'ವೆಂದು ಸಹ ಕೆಲವರು ಕರೆಯುತ್ತಾರೆ.
ಒಡೆಯರು ಎಂದರೆ ಯಜಮಾನ ಅಥವ ಧಣಿ ಎಂಬ ಅರ್ಥದಲ್ಲಿ ಬಳಸಲಾಗಿದೆ ಎಂದು ಮತ್ತೆ ಕೆಲವು ಹೇಳುತ್ತಾರೆ. ಈ ಇಬ್ಬರು ಸಹೋದರರು ಶ್ರೀ ಚಾಮುಂಡೇಶ್ವರಿ ದೇವಿಯ ಪರಮ ಭಕ್ತರಾಗಿದ್ದರಿಂದ ಈ ಜಗನ್ಮಾತೆ ಯದುವಂಶದ ಕುಲದೇವತೆಯಾದಳು.
ಹದಿನಾಡಿನ ಸಮೀಪದಲ್ಲಿದ್ದ ಮೈಸೂರು ಹಿಂದಿನಿಂದಲು ಒಂದು ಸಣ್ಣ ಕೋಟೆ ಇತ್ತೆಂದು ದಾಖಲೆಗಳು ತಿಳಿಸುತ್ತವೆ. ಆ ಕೋಟೆಯನ್ನು ಯದುರಾಯರು ಸ್ವಾಧೀನಪಡಿಸಿಕೊಳ್ಳುತ್ತಾರೆ. ಅವರ ಸಂತತಿಯವರು ಆ ಕೋಟೆಯನ್ನು ಆಗಾಗ್ಗೆ ಬಲಪಡಿಸಿಕೊಂಡು ಬರುತ್ತಾರೆ.
ಕಾಲಕ್ರಮೇಣ ಕ್ರಿ.ಶ. ೧೫೨೪ರ ಸುಮಾರಿನಲ್ಲಿ ಮೈಸೂರು ಕೋಟೆಯನ್ನು ಬಲಪಡಿಸಿಕೊಂಡಿರ ಬಹುದೆಂದು ಕರ್ನಲ್ ವಿಲ್ಸ್‌ ರವರು ಹೇಳಿರುತ್ತಾರೆ. ಮೈಸೂರು ಯದುವಂಶದ ರಾಜರ ರಾಜಧಾನಿಯಾಗುತ್ತದೆ.
ಯದುವಂಶದ ಅರಸರು

ಯದುರಾಜ ಒಡೆಯರು ಸೇರಿಕೊಂಡಂತೆ ಮೊದಲ ಏಳು ರಾಜರ ರಾಜ್ಯಭಾರದ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ. ಅವರ ಆಳ್ವಿಕೆಯ ಕಾಲ ಹೀಗಿದೆ.

೧. ಯದುರಾಯ (1399-1423)

೨. ಒಂದನೆ ಹಿರಿಯ ಬೆಟ್ಟದ ಚಾಮರಾಜ ಒಡೆಯರು (1423-1458)

೩. ತಿಮ್ಮರಾಜ ಒಡೆಯರು (1459-1478)

೪. ಎರಡನೆ ಹಿರಿಯ ಚಾಮರಾಜ ಒಡೆಯರು (1478-1513)
೫. ಮೂರನೆ ಹಿರಿಯ ಬೆಟ್ಟದ ಚಾಮರಾಜ ಒಡೆಯರು (1513-1553)

೬. ಎರಡನೆ ತಿಮ್ಮರಾಜ ಒಡೆಯರು (1553-1572)

೭. ನಾಲ್ಕನೆ ಬೋಳ ಚಾಮರಾಜ ಒಡೆಯರು (1572-1576)
೮. 5ನೇ ಬೆಟ್ಟದ ಚಾಮರಾಜ ಒಡೆಯರ್ (1576-1578)

೯. ರಾಜ ಒಡೆಯರು (1578-1617)

ಈತ ಯದುವಂಶದ ಆರಂಭ ದೊರೆಗಳಲ್ಲಿ ಪ್ರಸಿದ್ದ ದೊರೆ, ಇವರು ಬೋಳ ಚಾಮರಾಜರಿಗೆ ಕ್ರಿ.ಶ. 1552ರಲ್ಲಿ ಮಗನಾಗಿ ಜನಿಸುತ್ತಾರೆ. ಸಿಂಧುವಳ್ಳಿ ವೀರಾಜಮ್ಮಣಿ ಇವರ ತಾಯಿ. ಈ ವೇಳೆಗಾಗಲೆ ವಿಜಯನಗರ ತಾಳಿಕೋಟೆ ಕದನದಲ್ಲಿ ಸೋತು ಅದು ಪತನದ ಹಾದಿ ಹಿಡಿದಿತ್ತು.
ಶ್ರೀರಂಗಪಟ್ಟಣ ಆ ಕಾಲದಲ್ಲಿ ದಕ್ಷಿಣ ಕರ್ನಾಟಕದಲ್ಲಿ ವಿಜಯನಗರದ ಪ್ರಾಂತ್ಯಾಡಳಿತ ಕೇಂದ್ರವಾಗಿತ್ತು. ಆ ಕಾಲಘಟ್ಟದಲ್ಲಿ ಚಂದ್ರಗಿರಿ, ವಿಜಯನಗರದ ರಾಜಧಾನಿ ಯಾಗಿತ್ತು. ಶ್ರೀ ರಂಗರಾಯ (=ತಿರುಮಲರಾಯ)ನು ಶ್ರೀರಂಗಪಟ್ಟಣದಲ್ಲಿ ವಿಜಯನಗರದ ರಾಜ್ಯಪಾಲನಾಗಿದ್ದನು.
ವಿಜಯನಗರದ ದೌರ್ಬಲ್ಯವನ್ನು ಬಳಸಿಕೊಂಡು ಮೈಸೂರಿನ ರಾಜ ಒಡೆಯರು ಶ್ರೀರಂಗಪಟ್ಟಣವನ್ನು ಗೆದ್ದುಕೊಳ್ಳಲು 1610ರಲ್ಲಿ ಅದನ್ನು ಮುತ್ತಿಗೆ ಹಾಕುತ್ತಾರೆ. ಕೆಲವು ದಾಖಲೆಗಳ ಪ್ರಕಾರ ರಾಜ ಒಡೆಯರು ಸೈನಿಕಾಚರಣೆ ನಡೆಸಿ ಶ್ರೀರಂಗಪಟ್ಟಣವನ್ನು ಗೆದ್ದುಕೊಂಡರೆಂದು ಹೇಳಲಾಗಿದೆ.
ಮತ್ತೊಂದು ಹೇಳಿಕೆಯ ಪ್ರಕಾರ ಅನಾರೋಗ್ಯಕ್ಕೆ ಬಲಿಯಾಗಿದ್ದ ಶ್ರೀರಂಗರಾಯನೇ ಸ್ವಇಚ್ಛೆಯಿಂದ ಶ್ರೀರಂಗಪಟ್ಟಣವನ್ನು ರಾಜ ಒಡೆಯರಿಗೆ ಒಪ್ಪಿಸಿ ಆತ ತಲಕಾಡಿಗೆ ತೆರಳಿದನೆಂದು ಹೇಳಲಾಗಿದೆ. ಹೀಗೆ ತಲಕಾಡಿಗೆ ತೆರಳಿದ ಶ್ರೀರಂಗರಾಯ ಅಲ್ಲಿಯೇ ಮೃತ್ಯು ಹೊಂದುತ್ತಾನೆ.
ಶ್ರೀರಂಗಪಟ್ಟಣವನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಂಡ ಮೇಲೆ ರಾಜ ಒಡೆಯರು ತನ್ನ ರಾಜಧಾನಿಯನ್ನು ಮೈಸೂರಿನಿಂದ ಶ್ರೀರಂಗಪಟ್ಟಣಕ್ಕೆ 1613ರಲ್ಲಿ ವರ್ಗಾಯಿಸುತ್ತಾರೆ ಎಂದು ದಾಖಲೆಗಳು ಹೇಳುತ್ತವೆ. ಶ್ರೀರಂಗಪಟ್ಟಣದ ರಾಜ್ಯಪಾಲನಾಗಿದ್ದ ಶ್ರೀರಂಗರಾಯನು ಬಳಸುತ್ತಿದ್ದ ವಿಜಯನಗರ ಸಿಂಹಾಸನವನ್ನು ರಾಜ ಒಡೆಯರು ತನ್ನ ಅಧೀನಕ್ಕೆ
ತೆಗೆದುಕೊಂಡು ಅದರ ಮೇಲೆ ಮಂಡಿಸಿ ರಾಜ್ಯಭಾರ ಮಾಡತೊಡಗಿದರು. ಅಷ್ಟೇ ಅಲ್ಲದೆ ವಿಜಯನಗರ ರಾಜಧಾನಿಯಲ್ಲಿ ಆಚರಿಸಲಾಗುತ್ತಿದ್ದ ವಿಜಯದಶಮಿ ಅಥವಾ ದಸರವನ್ನು ರಾಜ ಒಡೆಯರು ಶ್ರೀರಂಗಪಟ್ಟಣದಲ್ಲಿ ಆಚರಿಸಲು ಪ್ರಾರಂಭಿಸುತ್ತಾರೆ.
ರಾಜ ಒಡೆಯರು 1617ರಲ್ಲಿ ಕಾಲವಾಗುತ್ತಾರೆ. ಅವರ ನಂತರ ಅವರ ಮೊಮ್ಮಗ ಆರನೇ ಚಾಮರಾಜ ಒಡೆಯರ್ ಅಧಿಕಾರಕ್ಕೆ ಬರುತ್ತಾರೆ
೧೦. 6ನೇ ಚಾಮರಾಜ ಒಡೆಯರು (1617-1637)

ಅಧಿಕಾರಕ್ಕೆ ಬಂದಾಗ ಇವರಿಗೆ ಕೇವಲ 14 ವರ್ಷ ತುಂಬಿದ್ದವು. ಇವರ ಅಪ್ರಾಪ್ತ ಕಾಲದಲ್ಲಿ ದಳವಾಯಿ ಬೆಟ್ಟದ ಅರಸು ರೀಜೆಂಟ್ ಆಗಿದ್ದರು. ಇವರ ಕಾಲದಲ್ಲಿ ಮೈಸೂರು ರಾಜ್ಯ ಮತ್ತಷ್ಟು ವಿಸ್ತಾರವಾಗುತ್ತದೆ. ಚೆನ್ನಪಟ್ಟಣದ ಜಗದೇವರಾಯನ ಪ್ರದೇಶಗಳಾದ ನಾಗಮಂಗಲ, ಚೆನ್ನಪಟ್ಟಣ, ಮದ್ದೂರುಗಳನ್ನು ಅವರು
ಗೆದ್ದುಕೊಳ್ಳುತ್ತಾರೆ. 1635ರಲ್ಲಿ ಶ್ರೀರಂಗಪಟ್ಟಣದಲ್ಲಿ ಯುದ್ಧದ ಆಯುಧಗಳನ್ನು ತಯಾರಿಸುವ ಕಾರ್ಖಾನೆಯನ್ನು ಸ್ಥಾಪಿಸುತ್ತಾರೆ. ಕ್ರಿ.ಶ. 1637ರಲ್ಲಿ ಇವರು ಕಾಲವಾಗುತ್ತಾರೆ. ಇವರ ಪತ್ನಿ ಸಹಗಮನ ಮಾಡುತ್ತಾಳೆ. 6ನೇ ಚಾಮರಾಜ ಒಡೆಯರ ನಂತರ ಒಂದನೇ ರಾಜ ಒಡೆಯರ ಮತ್ತೊಬ್ಬ ಮೊಮ್ಮಗ ಎರಡನೇ ರಾಜ ಒಡೆಯರು ಸಿಂಹಾಸನವನ್ನೇರುತ್ತಾರೆ.
೧೧. ಎರಡನೇ ರಾಜ ಒಡೆಯರು ( 1637 - 38 )

ಯದುವಂಶದ ಹನ್ನೊಂದನೆ ರಾಜನಾಗಿ ಸಿಂಹಾಸನವನ್ನು ಅಲಂಕರಿಸುವ ಇವರು ಅಸಮರ್ಥ ದೊರೆಯಾಗಿದ್ದರು. ಪರಿಣಾಮವಾಗಿ ರಾಜ್ಯದ ರಾಜ್ಯಭಾರವೆಲ್ಲವು ವಿಗಡ ವಿಕ್ರಮರಾಯನ ಕೈಸೇರುತ್ತದೆ.
ಆತ ಮಹಾ ದುರುಳ, ವಂಚಕ, ಕ್ರೂರಿ 1638ರಲ್ಲಿ ದಳವಾಯಿ ವಿಗಡ ವಿಕ್ರಮರಾಯ ಎರಡನೆ ರಾಜ ಒಡೆಯರಿಗೆ ವಿಷ ಪ್ರಾಶನ ಮಾಡಿಸಿ ಕೊಲೆ ಮಾಡಿಸಿದನು. ಅನಂತರ ಬೆಟ್ಟದ ಅರಸರ ಮಗ ಕಂಠೀರವ ನರಸರಾಜ ಒಡೆಯರು 1638ರಲ್ಲಿ ಸಿಂಹಾಸನವನ್ನೇರುತ್ತಾರೆ.
೧೨. ಒಂದನೇ ಕಂಠೀರವ ನರಸರಾಜ ಒಡೆಯರು (1638-59)

ಇವರು ಅಧಿಕಾರಕ್ಕೆ ಬಂದ ಮೇಲೆ ಮೈಸೂರು ರಾಜ್ಯಕ್ಕೆ ಭದ್ರತೆ ಮೂಡಿಬರುತ್ತದೆ. ಇವರು ದುರುಳ, ದುಷ್ಟ ಹಾಗೂ ಕ್ರೂರಿಯಾಗಿದ್ದ ದಳವಾಯಿ ವಿಗಡ ವಿಕ್ರಮರಾಯನನ್ನು ಕೊಂದು ಹಾಕಿದರು.
ಇವರ ಆಸ್ಥಾನದ ಕವಿ ಗೋವಿಂದ ವೈದ್ಯ ರಚಿಸಿರುವ `ಕಂಠೀರವ ನರಸರಾಜ ವಿಜಯಂ' ಎಂಬ ಕನ್ನಡ ಕೃತಿಯಲ್ಲಿ ಇವರ ಸಾಹಸಗಳ ಬಗ್ಗೆ ಅಪಾರವಾದ ಮಾಹಿತಿ ಲಭ್ಯವಿದೆ. ಮೈಸೂರು ರಾಜ್ಯದಲ್ಲಿ ವಿಜಯನಗರ ನಾಣ್ಯಗಳೇ ಚಲಾವಣೆಯಲ್ಲಿದ್ದವು,
ಆದರೆ ಇವರು ತಮ್ಮದೇ ಆದ ನಾಣ್ಯಗಳನ್ನು ಚಲಾವಣೆಗೆ ತರುತ್ತಾರೆ ಅದಕ್ಕಾಗಿ ಈ ದೊರೆ ಶ್ರೀರಂಗಪಟ್ಟಣದಲ್ಲಿ ಟಂಕಶಾಲೆಯನ್ನು ಸ್ಥಾಪಿಸುತ್ತಾರೆ. 1639ರಲ್ಲಿ ಬಿಜಾಪುರ ಸೇನೆ ರಣದುಲ್ಲಾಖಾನನ ನೇತೃತ್ವದಲ್ಲಿ ಶ್ರೀರಂಗಪಟ್ಟಣವನ್ನು ಮುತ್ತಿಗೆ ಹಾಕುತ್ತವೆ.
ಈ ಮುತ್ತಿಗೆಯಲ್ಲಿ ಶಿವಾಜಿಯ ತಂದೆ ಶಹಾಜಿ ಬೊನ್ಸ್ಲೆ ಬಿಜಾಪುರ ಸೇನೆಯಲ್ಲಿ ದ್ವಿತೀಯ ಮಹಾದಂಡನಾಯಕನಾಗಿದ್ದನು. ಈ ದಾಳಿಯನ್ನು ಕಂಠೀರವ ನರಸರಾಜ ಒಡೆಯರು ಸಮರ್ಥವಾಗಿ ಎದುರಿಸಿ ಬಿಜಾಪುರ ಸೇನೆ ಶಾಂತಿಗೆ ಒಪ್ಪಿಕೊಳ್ಳುವಂತೆ ಮಾಡುತ್ತಾರೆ,
ಯುದ್ಧವನ್ನು ಮುಂದುವರಿಸಲು ಹೆದರಿದ ಬಿಜಾಪುರ ಸೇನೆ ಕಂಠೀರವನರಸ ರಾಜರೊಡನೆ ಸರಳ ಶಾಂತಿ ಒಪ್ಪಂದ ಮಾಡಿಕೊಂಡು ಅಲ್ಲಿಂದ ನಿರ್ಗಮಿಸುತ್ತದೆ. ಈ ವಿಷಯವನ್ನು ಕವಿ ಗೋವಿಂದ ವೈದ್ಯ ತನ್ನ ಕಂಠೀರವ ನರಸರಾಜ ವಿಜಯಂನಲ್ಲಿ "ಮ್ಲೆಚ್ಚರನ್ನು ಕೊಲ್ಲಲು ನರಸಿಂಹನು ಕಂಠೀರವ ನರಸರಾಜರ ರೂಪದಲ್ಲಿ ಜನಿಸಿದ್ದಾನೆ" ಎಂದು ವರ್ಣಿಸಿದ್ದಾನೆ.
ಈ ದೊರೆ 1659ರಲ್ಲಿ ಕಾಲವಾಗುತ್ತಾರೆ. ಕಂಠೀರವ ನರಸರಾಜ ಒಡೆಯರು ರಣಧೀರ ಎಂಬ ಬಿರುದನ್ನು ಧರಿಸಿದ್ದರು. ಇವರು ಚಲಾವಣೆಗೆ ತಂದಿದ್ದ ನಾಣ್ಯಗಳಿಗೆ ಕಂಠೀರಾಯ ಹಣ ಅಥವಾ ಕಂಠೀರಾಯ ಪಗೋಡವೆಂದು ಕರೆಯಲಾಗುತ್ತಿತ್ತು. ಆ ನಾಣ್ಯಗಳು 1856ರವರೆಗೆ ಮೈಸೂರು ಸಂಸ್ಥಾನದಲ್ಲಿ ಚಲಾವಣೆಯಲ್ಲಿದ್ದವು.
೧೩. ದೊಡ್ಡ ದೇವರಾಜ ಒಡೆಯರು (1659-1673)

ಇವರು ಮತ್ತೊಬ್ಬ ಹೆಸರಾಂತ ದೊರೆ. ಕಂಠೀರವ ನರಸರಾಜರ ಮಗ ಈ ಹಿಂದೆಯೇ ತೀರಿಕೊಂಡಿದ್ದರಿಂದ ಅವರ ಸೋದರನ ಮಗ ದೊಡ್ಡ ದೇವರಾಜ ಒಡೆಯರು ಯದುವಂಶದ 13ನೇ ರಾಜನಾಗಿ 1654ರಲ್ಲಿ ಸಿಂಹಾಸನವನ್ನೇರುತ್ತಾರೆ.
ದೊಡ್ಡ ದೇವರಾಜ ಒಡೆಯರು ಕೆಳದಿ ಶಿವಪ್ಪನಾಯಕನ ಆಕ್ರಮಣವನ್ನು ಹಿಮ್ಮೆಟ್ಟಿಸುತ್ತಾರೆ. ಇವರು ಭಕ್ತರ ಅನುಕೂಲಕ್ಕಾಗಿ ಚಾಮುಂಡಿ ಬೆಟ್ಟಕ್ಕೆ ೧೦೦೦ ಮೆಟ್ಟಿಲುಗಳನ್ನು ಹಾಕಿಸಿದರು. ಇದಲ್ಲದೆ ಮಾರ್ಗ ಮಧ್ಯದಲ್ಲಿ ಬೃಹತ್ ಏಕಶಿಲಾ ನಂದಿ ವಿಗ್ರಹವನ್ನು ನಿರ್ಮಿಸಿದರು.🙏🙏
ಕವಿ ಚಾಮಯ್ಯ ಇವರನ್ನು ಕುರಿತು ದೊಡ್ಡ ದೇವರಾಜ ಸಾಂಗತ್ಯವನ್ನು ರಚಿಸಿರುವನು. ದೊಡ್ಡ ದೇವರಾಜ ಒಡೆಯರು 1673 ಫೆಬ್ರವರಿ 11ರಂದು ನಿಧನರಾಗುತ್ತಾರೆ. ಇವರಿಗೆ ಮಕ್ಕಳಿಲ್ಲದ ಕಾರಣ ಇವರ ಸೋದರ ಸಂಬಂಧಿ ಚಿಕ್ಕದೇವರಾಜ ಒಡೆಯರು ಅಧಿಕಾರಕ್ಕೆ ಬರುತ್ತಾರೆ.
೧೪. ಚಿಕ್ಕದೇವರಾಜ ಒಡೆಯರು (1673-1704)

ಯದುವಂಶದ 14ನೇ ದೊರೆಯಾಗಿ ಸಿಂಹಾಸನವನ್ನೇರುತ್ತಾರೆ. ಇವರು ಮೊಗಲ್ ಚಕ್ರವರ್ತಿ ಔರಂಗಜೇಬ್ ಮತ್ತು ಮರಾಠ ಛತ್ರಪತಿ ಶಿವಾಜಿಯ ಸಮಕಾಲೀನರು, ಶಿವಾಜಿಯು ಶ್ರೀರಂಗಪಟ್ಟಣವನ್ನು ಮುತ್ತಿಗೆ ಹಾಕುತ್ತಾನೆ.
ಚಿಕ್ಕದೇವರಾಯರು ಮುತ್ತಿಗೆಯನ್ನು ವಿಫಲಗೊಳಿಸಿ ಶಿವಾಜಿಯನ್ನು ಸೋಲಿಸಿ ಶ್ರೀರಂಗಪಟ್ಟಣದಿಂದ ನಿರ್ಗಮಿಸುವಂತೆ ಮಾಡುತ್ತಾರೆ.🔥 ಅದರ ನೆನಪಿಗಾಗಿ ಅವರು 'ಅಪ್ರತಿಮ ವೀರ' ಎಂಬ ಬಿರುದನ್ನು ಧರಿಸುತ್ತಾರೆ. 1687ರಲ್ಲಿ ಬೆಂಗಳೂರನ್ನು ಮೊಗಲ್ ಸೇನಾಧಿಕಾರಿ ಖಾಸಿಂ ಖಾನ್‌ ನಿಂದ ಮೂರು ಲಕ್ಷ ರೂಪಾಯಿಗಳಿಗೆ ಖರೀದಿಸುತ್ತಾರೆ.😍
ರಾಯಭಾರಿ ಮುತ್ಸದ್ಧಿ ಆದ ಚಿಕ್ಕದೇವರಾಜ ಒಡೆಯರು ಮರಾಠರ ಹಾವಳಿಯಿಂದ ತನ್ನ ರಾಜ್ಯವನ್ನು ರಕ್ಷಿಸಿಕೊಳ್ಳಲು ಮೊಗಲ್ ಚಕ್ರವರ್ತಿ ಔರಂಗಜೇಬನ ಸಖ್ಯ ಬೆಳೆಸುತ್ತಾರೆ. 1699ರಲ್ಲಿ ಕರಣಿಕ ಲಿಂಗಣಯ್ಯ ಎಂಬುವನ ನೇತೃತ್ವದಲ್ಲಿ ರಾಯಭಾರಿ ತಂಡವನ್ನು ಔರಂಗಜೇಬನನ್ನು ಭೇಟಿ ಮಾಡಲು ಅಹಮದಬಾದಿನ ಮೊಗಲ್‌ ಆಸ್ಥಾನಕ್ಕೆ ಕಳುಹಿಸಿದರು.
ಔರಂಗಜೇಬನು ರಾಯಭಾರಿ ತಂಡವನ್ನು ಗೌರವದಿಂದ ಬರಮಾಡಿಕೊಂಡು ಅವರ ಮೂಲಕ ಕೆಲವು ಅಮೂಲ್ಯವಾದ ವಸ್ತುಗಳನ್ನು ಮಹಾರಾಜರಿಗೆ ಕಳುಹಿಸಿದನು. ಹಾಗೂ ಮಹಾರಾಜರಿಗೆ 'ರಾಜ ಜಗದೇವ' ಎಂಬ ಬಿರುದನ್ನು ಸಹ ದಯಪಾಲಿಸಿದನು.
ಚಿಕ್ಕ ದೇವರಾಜ ಒಡೆಯರು ಆಡಳಿತದಲ್ಲಿ 18 ಇಲಾಖೆಗಳನ್ನು ಹೊಂದಿದ್ದರು. ಅವುಗಳಿಗೆ ಅಠಾರ ಕಛೇರಿಗಳೆಂದು ಕರೆಯಲಾಗುತ್ತಿತ್ತು. ಆರ್ಥಿಕ ಮಿತವ್ಯಯವನ್ನು ಅನುಸರಿಸಿ ಖಜಾನೆಯಲ್ಲಿ 9 ಕೋಟಿ ಕಂಠೀರಾಯ (ಒಂದನೇ ಕಂಠೀರವ ನರಸರಾಜ ಒಡೆಯರು (1638-59) ಚಲಾವಣೆಗೆ ತಂದಿದ್ದು) ಪಗೊಡಗಳನ್ನು ಉಳಿಸಿ
'ನವಕೋಟಿ ನಾರಾಯಣ' ಎಂಬ ಬಿರುದನ್ನು ಪಡೆದರು. ಚಿಕ್ಕದೇವರಾಜ ಒಡೆಯರು ಕವಿ ಪೋಷಕರಾಗಿದ್ದರು ಹಾಗೂ ತಾವೇ ಸ್ವತಃ ಕವಿಗಳಾಗಿದ್ದರು. ಚಿಕ್ಕದೇವ ರಾಜ ಬಿನ್ನಪ್ಪ, ಗೀತಗೋಪಾಲ, ಭಾಗವತ, ಶೇಷಧರ್ಮ ಮುಂತಾದ ಕೃತಿಗಳನ್ನು ಬರೆದಿದ್ದಾರೆ. ಸಿಂಗಾರ್ಯನು 'ಮಿತ್ರವಿಂದ ಗೋವಿಂದ' ಎಂಬ ನಾಟಕವನ್ನು ಬರೆದರು.
ಇದು ಕನ್ನಡದಲ್ಲಿ ರಚಿಸಿದ ಪ್ರಥಮ ನಾಟಕ😍, ಶೃಂಗಾರಮ್ಮ ಎಂಬ ಕವಯತ್ರಿ 'ಪದ್ಮಿನಿ ಕಲ್ಯಾಣ' ಎಂಬ ಕೃತಿಯನ್ನು ಪಟ್ಟಮಹಿಷಿ ಯಳಂದೂರು ದೇವಾಜಮ್ಮಣ್ಣಿಯ ಸೇವೆಯಲ್ಲಿದ್ದ ಸಂಚಿ ಹೊನ್ನಮ್ಮಳು 'ಹದಿಬದೆಯ ಧರ್ಮ' ಎಂಬ ಕೃತಿಯನ್ನು ಬರೆದಿದ್ದಾಳೆ. ಚಿಕ್ಕದೇವರಾಯರು 1704ರಲ್ಲಿ ಕಾಲವಾದರು.
ಚಿಕ್ಕದೇವರಾಯರ ಪತ್ನಿಯರಲ್ಲಿ ಇಬ್ಬರಿಗೆ ಮಾತ್ರ ಮಕ್ಕಳಾಗಿದ್ದವು. ಅವುಗಳಲ್ಲಿ ಒಬ್ಬ ಮಗ ಮತ್ತು ಒಬ್ಬಳು ಮಗಳು. ಇದ್ದ ಒಬ್ಬ ಮಗ ಹುಟ್ಟು ಮೂಕನಾಗಿದ್ದನು. ಆತನಿಗೆ ಎರಡನೆ ಕಂಠೀರವ ನರಸರಾಜ ಒಡೆಯ‌ ಎಂದು ನಾಮಕರಣ ಮಾಡಲಾಗಿತ್ತು. ಆತನೇ 1704ರಲ್ಲಿ ಸಿಂಹಾಸನವನ್ನೇರುತ್ತಾನೆ
೧೫. ಎರಡನೇ ಕಂಠೀರವ ನರಸರಾಜ ಒಡೆಯರು (1704-1714)

ಹುಟ್ಟು ಮೂಕರಾಗಿದ್ದರಿಂದ ಇವರು ಕೈಸಹ್ನೆಗಳ ಮೂಲಕ ರಾಜ್ಯಾಡಳಿತವನ್ನು ನಡೆಸಿದರು. ಈ ರಾಜನ ಕಾಲದಲ್ಲಿ ಕಳಲೆ ಮನೆತನದ ದಳವಾಯಿಗಳು ಪ್ರಬಲರಾದರು. ಎರಡನೆ ಕಂಠೀರವ ನರಸರಾಜ ಒಡೆಯರು 1714ರಲ್ಲಿ ಕಾಲವಾದರು, ಅವರ ಮಗ ಒಂದನೆ ದೊಡ್ಡ ಕೃಷ್ಣರಾಜ ಒಡೆಯರು ಸಿಂಹಾಸನವನ್ನೇರಿದರು.
೧೬. ಒಂದನೆ ದೊಡ್ಡ ಕೃಷ್ಣರಾಜ ಒಡೆಯರು (1714-1732)

ಸಿಂಹಾಸನವನ್ನು ಏರುವಾಗ ಅವರು 14 ವರ್ಷಗಳ ಬಾಲಕ. ಕಳಲೆ ವಂಶದ ದೇವರಾಜಯ್ಯ ದಳವಾಯಿಯಾಗಿ ನೇಮಕಗೊಳ್ಳುತ್ತಾನೆ. ದೇವರಾಜಯ್ಯನ ದಾಯಾದಿ ನಂಜರಾಜಯ್ಯ ಸರ್ವಾಧಿಕಾರಿಯಾಗಿ ನೇಮಕಗೊಳ್ಳುತ್ತಾನೆ ಸರ್ವಾಧಿಕಾರಿ ಎಂದರೆ ಹಣಕಾಸು ಮತ್ತು ರೆವಿನ್ಯೂ ಇಲಾಖೆಯ ಮುಖ್ಯಸ್ಥ ಹಾಗೂ ಪ್ರಧಾನ ಮಂತ್ರಿ ಎಂದರ್ಥ.
ಮಹಾರಾಜರು ಅಪ್ರಾಪ್ತರಾಗಿದ್ದರಿಂದ ಈ ಇಬ್ಬರು ರಾಜ್ಯದ ನಿಜವಾದ ಆಡಳಿತಗಾರರಾಗಿದ್ದರು. ಈ ಕಾಲವನ್ನು 'ದಳವಾಯಿ ಯುಗ' ಎಂದು ಬಣ್ಣಿಸಲಾಗಿದೆ. ಈ ಕಾಲಘಟ್ಟದಲ್ಲಿ ದಳವಾಯಿಗಳು ಮಾಗಡಿ ಮುಮ್ಮಡಿ ಕೆಂಪ ವೀರೆಗೌಡನನ್ನು ಸೋಲಿಸಿ ಆತನ ಎರಡು ಪ್ರಸಿದ್ಧ ಕೋಟೆಗಳಾದ ಮಾಗಡಿ ಮತ್ತು ಸಾವನದುರ್ಗವನ್ನು ಗೆದ್ದುಕೊಳ್ಳುತ್ತಾರೆ.
ಗೌಡನನ್ನು ಬಂಧಿಸಿ, ಶ್ರೀರಂಗಪಟ್ಟಣದ ಕಾರಾಗೃಹದಲ್ಲಿರುತ್ತಾರೆ. ಕೆಲ ಕಾಲನಂತರ ಆತ ಕಾರಾಗೃಹದಲ್ಲಿಯೇ ನಿಧನನಾದನು, ದೊಡ್ಡ ಕೃಷ್ಣರಾಜ ಒಡೆಯರ್ 1732ರಲ್ಲಿ ಕಾಲವಾದರು. ಅವರಿಗೆ ಪತ್ರ ಸಂತಾನವಿರಲಿಲ್ಲ.
೧೭: 7ನೇ ಚಾಮರಾಜ ಒಡೆಯರು (1732-34)

ಇವರನ್ನು ಆ ಇಬ್ಬರು ದಳವಾಯಿಗಳು ರಾಜಕುಟುಂಬಕ್ಕೆ ಸಂಬಂಧವಿಲ್ಲದ ಅಂಕನಹಳ್ಳಿ ಅರಸು ಕುಟುಂಬದಿಂದ ಆಯ್ಕೆ ಮಾಡುತ್ತಾರೆ. ಇವರನ್ನು ದತ್ತು ತೆಗೆದುಕೊಳ್ಳುವಂತೆ ದೊಡ್ಡ ಕೃಷ್ಣರಾಜ ಒಡೆಯರ ವಿಧವಾ ಪತ್ನಿ ದೇವಾಜಮ್ಮನವರನ್ನು ಒತ್ತಾಯಿಸುತ್ತಾರೆ. ಒತ್ತಾಯಕ್ಕೆ ಮಣಿದು ಅವರನ್ನು ದತ್ತು ತೆಗೆದುಕೊಳ್ಳುತ್ತಾರೆ.
ಹೀಗೆ ಮಹಾರಾಜರ ಹುದ್ದೆಗೆ ಆಯ್ಕೆಗೊಂಡ ಚಾಮರಾಜರಿಗೆ 28 ವರ್ಷಗಳು, ಅವರು 7ನೇ ಚಾಮರಾಜ ಒಡೆಯರ್ ಎಂಬ ಹೆಸರಿನಲ್ಲಿ ಸಿಂಹಾಸನವನ್ನೇರುತ್ತಾರೆ. ಅವರು ದಳವಾಯಿಗಳು ಮಾಡುತ್ತಿದ್ದ ಭ್ರಷ್ಟಾಚಾರವನ್ನು ತಡೆಯಲು ಪ್ರಯತ್ನಿಸುತ್ತಾರೆ
ಇದರಿಂದ ಸಿಟ್ಟುಗೊಂಡ ದಳವಾಯಿಗಳು ರಾಜನನ್ನು ಸಿಂಹಾಸನದಿಂದ ಪದಚ್ಯುತಿಗೊಳಿಸಿ ಬಂಧಿಸಿ ಅವರನ್ನು ಅವರ ಕುಟುಂಬ ಸಮೇತ ಕನಕಪುರ ಸಮೀಪ ಇರುವ ಕಬ್ಬಾಳ ದುರ್ಗದಲ್ಲಿ ಬಂಧನದಲ್ಲಿಡುತ್ತಾರೆ. ರಾಜ ಅಲ್ಲಿಯೇ ನರಳಿ ಸಾಯುತ್ತಾರೆ.
7ನೇ ಚಾಮರಾಜ ಒಡೆಯರನ್ನು ಪದಚ್ಯುತಿಗೊಳಿಸಿದ ಮೇಲೆ ಮತ್ತೊಂದು ಅರಸು ಕುಟುಂಬದಿಂದ ಚಿಕ್ಕಕೃಷ್ಣರಾಜ ಒಡೆಯರ್ ಎಂಬ ನಾಲ್ಕು ವರ್ಷದ ಬಾಲಕನನ್ನು ದತ್ತು ತೆಗೆದುಕೊಳ್ಳುವಂತೆ ವಿಧವೆ ರಾಣಿ ದೇವಾಜಮ್ಮಣ್ಣಿಯವರನ್ನು ದಳವಾಯಿ ಸಹೋದರರು ಒತ್ತಾಯಿಸುತ್ತಾರೆ.
ಆ ಪ್ರಕಾರ ದತ್ತು ಸ್ವೀಕರವಾಗುತ್ತದೆ. ದತ್ತು ಪತ್ರ ಅಪ್ರಾಪ್ತ ಬಾಲಕರಾಗಿದ್ದರು. ಅವರು ಇಮ್ಮಡಿ ಕೃಷ್ಣರಾಜ ಒಡೆಯರ್ ಎಂಬ ಹೆಸರಿನಲ್ಲಿ 1734ರಲ್ಲಿ ಸಿಂಹಾಸನವನ್ನೇರುತ್ತಾರೆ.
೧೮. ಇಮ್ಮಡಿ ಕೃಷ್ಣರಾಜ ಒಡೆಯರ್ (1734-1766)

ಅವರು ಸಿಂಹಾಸನ ಏರುವಾಗ ಆಪ್ರಾಪ್ತ ಬಾಲಕರಾಗಿದ್ದರು. ಪರಿಣಾಮವಾಗಿ ದಳವಾಯಿಗಳ ದರ್ಪಿಷ್ಟ ಆಡಳಿತ ಈಗ ಪರಾಕಾಷ್ಟತೆಯನ್ನು ಮುಟ್ಟುತ್ತದೆ. ಇಮ್ಮಡಿ ಕೃಷ್ಣರಾಜ ಒಡೆಯರ್ ಅವರ ಪತ್ನಿಯರಲ್ಲಿ ಲಕ್ಷ್ಮಮ್ಮಣ್ಣಿಯವರು ಹೆಸರಾಂತ ವ್ಯಕ್ತಿಯಾಗಿದ್ದರು.
ಅವರು ಕತ್ತಿ ಗೋಪಾಲರಾಜ ಅರಸುರವರ ಮಗಳು. ಅವರು ಬೆಟ್ಟದ ಕೋಟೆ ವಂಶಕ್ಕೆ ಸೇರಿದವರು. ಹಿಮವದ್ಗೋಪಾಲ ಸ್ವಾಮಿ ಅವರ ಮನೆದೇವರು ಮುಂದೆ ಹೈದರ್ ಮತ್ತು ಟಿಪ್ಪು ಸುಲ್ತಾನರ ಕೈಯಿಂದ ಯದುವಂಶವನ್ನು ರಕ್ಷಿಸುವುದರಲ್ಲಿ ಅವರು ದೊಡ್ಡ ಪಾತ್ರವನ್ನೇ ನಿರ್ವಹಿಸುತ್ತಾರೆ.
ಈ ವೇಳೆಗೆ ಸರ್ವಾಧಿಕಾರಿ ನಂಜರಾಜಯ್ಯ ತೀರಿಕೊಂಡಿದ್ದನು. ಆತನ ಜಾಗಕ್ಕೆ ದಳವಾಯಿ ದೇವರಾಜಯ್ಯನ ತಮ್ಮ ಕಲಾಚೂರಿ ನಂಜರಾಜಯ್ಯ ಸರ್ವಾಧಿಕಾರಿಯಾಗಿ ನೇಮಕಗೊಳ್ಳುತ್ತಾನೆ. ಈ ಕಾಲಘಟ್ಟದಲ್ಲಿ ಹೈದರ್ ಅಲಿ ಮೈಸೂರಿನ ಆಸ್ಥಾನದಲ್ಲಿ ಏಳಿಗೆ ಹೊಂದುತ್ತಾನೆ.
ಹೈದರ್ ಆಲಿ

ಈತ 1721ರಲ್ಲಿ ಕೋಲಾರ ಸಮೀಪ ಬೂದಿಕೋಟೆ ಎಂಬಲ್ಲಿ ಜನಿಸುತ್ತಾನೆ. ಈತನ ತಂದೆ ಫತ್ತೆಮಹಮ್ಮದ್. ಆತ ಶಿರಾ ನವಾಬನ ಸೇನೆಯಲ್ಲಿ ಸೈನಿಕನಾಗಿದ್ದನು. ಹೈದರ್ ಅಲಿ ಹುಟ್ಟು ಯೋಧ ಹಾಗೂ ಮಹಾ ಧೈರ್ಯಶಾಲಿ, ಈತ ನಂಜರಾಜಯ್ಯನ ಸೇನೆಯಲ್ಲಿ ಸೈನಿಕನಾಗಿ ಸೇರಿಕೊಳ್ಳುತ್ತಾರೆ.
ನಂಜರಾಜಯ್ಯ 1749ರಲ್ಲಿ ದೇವನಹಳ್ಳಿ ಕೋಟೆಯನ್ನು ಮುತ್ತಿಗೆ ಹಾಕಿದಾಗ ಹೈದರ್ ಅಲಿ ಕೋಟೆಯನ್ನು ಗೆದ್ದುಕೊಳ್ಳುವುದರಲ್ಲಿ ತೋರಿದ ಸಾಹಸವನ್ನು ನಂಜರಾಜಯ್ಯ ಕಣ್ಣಾರೆ ಕಂಡು ಆತನನ್ನು ಬಹುವಾಗಿ ಮೆಚ್ಚಿಕೊಳ್ಳುತ್ತಾನೆ. ಆತನ ಸಾಹಸಕ್ಕೆ ಮೆಚ್ಚಿದ ಸರ್ವಾಧಿಕಾರಿ ನಂಜರಾಜಯ್ಯ ಆತನನ್ನು ಮೈಸೂರು ಸೇನೆಯಲ್ಲಿ
ಕ್ಯಾಪ್ಟನ್‌ ಹುದ್ದೆಗೆ ಮುಂಬಡ್ತಿ ನೀಡುತ್ತಾನೆ. ಎರಡನೆ ಕರ್ನಾಟಿಕ್ ಕದನದಲ್ಲಿ ಹೈದರ್ ಮತ್ತಷ್ಟು ಸಾಹಸಮಯ ಕೃತ್ಯಗಳನ್ನು ಪ್ರದರ್ಶಿಸಿ ನಂಜರಾಜಯ್ಯನ ಕೃಪೆಗೆ ಪಾತ್ರನಾಗುತ್ತಾನೆ. ನಂಜರಾಜಯ್ಯ ಹೈದರನನ್ನು ದಿಂಡಿಗಲ್ಲಿನ ಫೌಜುದಾರನಾಗಿ ನೇಮಕ ಮಾಡುತ್ತಾನೆ. ದಿಂಡಿಗಲ್‌ನಲ್ಲಿ ಪುಂಡರನ್ನು ಸದೆ ಬಡಿದು ಬರಬೇಕಾದ ಕಂದಾಯ
ಬಾಕಿಯನ್ನು ವಸೂಲಿ ಮಾಡಿ ಮೈಸೂರಿನ ಖಜಾನೆಗೆ ಕಳುಹಿಸುತ್ತಾನೆ. ದಿಂಡಿಗಲ್ಲಿನಲ್ಲಿ ಹೈದ‌ರ್ ತನ್ನದೇ ಆದ ಹೊಸ ಸೇನಾಪಡೆಯನ್ನು ಕಟ್ಟುತ್ತಾನೆ. ಇದೇ ಸಮಯದಲ್ಲಿ ಮರಾಠರು ಮೈಸೂರನ್ನು ಮುತ್ತಿಗೆ ಹಾಕುತ್ತಾರೆ. ಹೈದರ್ ಸುದ್ದಿ ತಿಳಿದು ಕೂಡಲೆ ದಿಂಡಿಗಲ್ಲಿನಿಂದ ಸೇನಾ
ಸಮೇತನಾಗಿ ಮೈಸೂರಿಗೆ ಬಂದು ಮರಾಠರನ್ನು ಸೋಲಿಸಿ ಅವರನ್ನು ಹಿಮ್ಮೆಟ್ಟಿಸುತ್ತಾನೆ.ಹೈದರನ ಸಾಹಸಕ್ಕೆ ಮೆಚ್ಚಿದ ಮಹಾರಾಜ ಇಮ್ಮಡಿ ಕೃಷ್ಣರಾಜ ಒಡೆಯರು ವಿಶೇಷ ದರ್ಬಾರಿನಲ್ಲಿ ಹೈದರ್ ಅಲಿಗೆ 'ಫತ್ತಹೈದರ್ ಅಲಿಖಾನ್ ಬಹದ್ದೂರ್' ಎಂಬ ಬಿರುದನ್ನು ನೀಡಿದರು ಹಾಗೂ ಬೆಂಗಳೂರನ್ನು ಆತನಿಗೆ ಜಹಗೀರಿಯಾಗಿ ಬಿಟ್ಟುಕೊಡುತ್ತಾರೆ.
#ಸಮಗ್ರಆಧುನಿಕಮೈಸೂರುಚರಿತ್ರೆ
ಹೈದರ್ ಅಲಿ ಮೈಸೂರಿನ ರಾಜಕಾರಣದಲ್ಲಿ ಪ್ರಬಲ ವ್ಯಕ್ತಿಯಾಗಿ ಬೆಳೆಯುತ್ತಾನೆ, ಈತನ ಏಳಿಗೆಯನ್ನು ಸಹಿಸಿದ ಕೆಲವು ಅಸ್ಥಾನಿಕರು ಹೈದರನನ್ನು ಮುಗಿಸಲು ಒಳಸಂಚು ನಡೆಸುತ್ತಾರೆ, ಒಳಸಂಚು ವಿಫಲವಾಗುತ್ತದೆ, ಹೈದರ್, ತನ್ನ ವಿರೋಧಿಗಳನ್ನು ದಮನ ಮಾಡಿ
ಮೈಸೂರಿನ ನಿಜವಾದ ಸರ್ವಾಧಿಕಾರಿಯಾಗಿ ರೂಪಗೊಳ್ಳುತ್ತಾನೆ. ದಳವಾಯಿಗಳು ದುರ್ಬಲರಾಗಿ ಆಸ್ಥಾನದಿಂದ ದೂರ ಸರಿಯುತ್ತಾರೆ. ಹೈದರ್ ತಾನೇ ನಿಜವಾದ ಸರ್ವಾಧಿಕಾರಿ ಆಗಿದ್ದರೂ ಆತ ಮಹಾರಾಜರೊಂದಿಗೆ ಅತ್ಯಂತ ವಿನಯದಿಂದ ನಡೆದುಕೊಳ್ಳುತ್ತಿದ್ದನು
ಆತ ತನ್ನನ್ನು ಮಹಾರಾಜರ 'ಕಾರ್ಯಕರ್ತ' ಎಂದು ಸಂಬೋಧಿಸಿಕೊಳ್ಳುತ್ತಿದ್ದನು. ಇಮ್ಮಡಿ ಕೃಷ್ಣರಾಜರು 1766ರಲ್ಲಿ ಕಾಲವಾಗುತ್ತಾರೆ, ಅವರ ಹಿರಿಯ ಮಗ ನಂಜರಾಜ ಒಡೆಯರು 19ನೇ ಮಹಾರಾಜರಾಗಿ ಮೈಸೂರಿನ ಸಿಂಹಾಸನವನ್ನು 1766ರಲ್ಲಿ ಬರುತ್ತಾರೆ.
೧೯. ನಂಜರಾಜ ಒಡೆಯರು (1766-1770)

ಇವರ ಆಳ್ವಿಕೆಯ ಕಾಲದಲ್ಲಿ ಹೈದರ್ ಅಲಿ, ಕೆಳದಿ, ಚಿತ್ರದುರ್ಗ, ಹರ್ಪನಳ್ಳಿ, ಮಲಬಾರು ಮುಂತಾದ ಪ್ರದೇಶಗಳನ್ನು ಗೆದ್ದು ಮೈಸೂರು ರಾಜ್ಯದ ಗಡಿಯನ್ನು ಸಕಲ ದಿಕ್ಕುಗಳಲ್ಲಿಯು ವಿಸ್ತರಿಸಿದನು.
ಪರಿಣಾಮವಾಗಿ ದಕ್ಷಿಣದಲ್ಲಿ ಮೈಸೂರು ಗಡಿ ಬ್ರಿಟಿಷರ ಪ್ರದೇಶವಾಗಿದ್ದ ಮದ್ರಾಸ್‌ ಗಡಿಗೆ ಮುಟ್ಟುತ್ತದೆ,😍 ಮಹಾರಾಜ ನಂಜರಾಜ ಒಡೆಯರು 1770ರಲ್ಲಿ ಕಾಲವಾದರು.
೨೦. 8ನೇ ಚಾಮರಾಜ ಒಡೆಯರು (1770-1776)

ಇವರು 20ನೇ ಮಹಾರಾಜರಾಗಿ 1770ರಲ್ಲಿ ಮೈಸೂರು ಸಿಂಹಾಸನವನ್ನೇರುತ್ತಾರೆ. ಈ ಕಾಲಘಟ್ಟದಲ್ಲಿ ಹೈದರ್ ಅಲಿ ಮತ್ತು ಬ್ರಿಟಿಷರ ನಡುವೆ ಮೊದಲನೆ ಆಂಗ್ಲೋ-ಮೈಸೂರು ಯುದ್ಧ (1767-69) ನಡೆಯುತ್ತದೆ. ಯುದ್ಧದಲ್ಲಿ ಹೈದರನು ಇಂಗ್ಲಿಷರನ್ನು ಸೋಲಿಸುತ್ತಾನೆ.
ಸೋತು ಹೋದ ಇಂಗ್ಲಿಷರು ಹೈದರ್‌ನೊಡನೆ ಮದ್ರಾಸ್ ಶಾಂತಿ ಒಪ್ಪಂದ ಮಾಡಿಕೊಳ್ಳುತ್ತಾರೆ.

8ನೇ ಬೆಟ್ಟದ ಚಾಮರಾಜ ಒಡೆಯರು 1776ರಲ್ಲಿ, ಕಾಲವಾಗುತ್ತಾರೆ, ಅವರಿಗೆ ಪುತ್ರ ಸಂತಾನವಿರಲಿಲ್ಲ. ಆದುದರಿಂದ ಹೈದರ್ ಆಲಿ ಮಾತೃಶ್ರೀ ಲಕ್ಷ್ಮಮ್ಮಣ್ಣಿಯವರಿಗೆ ಯೋಗ್ಯ ಮಗುವನ್ನು ದತ್ತು ತೆಗೆದುಕೊಳ್ಳುವಂತೆ ಸಲಹೆ ನೀಡುತ್ತಾನೆ.
ಲಕ್ಷ್ಮಮ್ಮಣ್ಣಿಯವರು ಆಯ್ಕೆ ಮಾಡಲು ಆಲೋಚಿಸಿದ ಮಗುವನ್ನು ಹೈದರ್ ಒಪ್ಪಲಿಲ್ಲ, ಆ ಮಗುವಿಗೆ ಮಚ್ಚೆ ರೋಗವಿತ್ತೆಂದು ಹೇಳಲಾಗಿದೆ. ರಾಜನಾಗುವ ಮಗುವಿಗೆ ಶಾರೀರಿಕವಾಗಿ ಯಾವುದೇ ಊನವಿರಬಾರದೆಂದು ಹೇಳಿ: ಯೋಗ ಮಗುವನ್ನು ಮಾತೃಶ್ರೀಯವರ ಪರವಾಗಿ ಹೈದರನೇ ಆಯ್ಕೆ ಮಾಡಲು ಬಯಸುತ್ತಾರೆ.
ಆತನ ಆಯ್ಕೆಯ ಕ್ರಮ ಹೀಗಿತ್ತು, ಅರಸು ಕುಟುಂಬಸ್ತರ ಎಳೆ ಮಕ್ಕಳನ್ನು ವಿಶಾಲವಾದ ಒಂದು ಕೊಠಡಿಯಲ್ಲಿ ಸೇರಿಸುತ್ತಾನೆ. ಆ ಕೊಠಡಿಯಲ್ಲಿ ವಿವಿಧ ಬಗೆಯ ಆಟಿಕೆಗಳು, ಸಿಹಿತಿಂಡಿಗಳು, ಬಟ್ಟೆ ಒಡವೆಗಳು ಅಯುಧಗಳು ಮುಂತಾದವುಗಳನ್ನು ಹರಡಲಾಗಿತ್ತು. ಆ ಅರಸು ಎಳೆ ಮಕ್ಕಳಿಗೆ ಆ ಕೊಠಡಿಯಲ್ಲಿ ಹರಡಿರುವ ವಸ್ತುಗಳಲ್ಲಿ
ತನಗೆ ಇಷ್ಟವಾದ ವಸ್ತುವನ್ನು ಎತ್ತಿಕೊಳ್ಳುವಂತೆ ಹೇಳುತ್ತಾನೆ, ಒಂದು ಮಗು ಮಾತ್ರ ಪರಡಿರುವ ವಸ್ತುಗಳ ಪೈಕಿ ಒಂದು ಕೈಯಲ್ಲಿ ಕಠಾರಿಯನ್ನು ಇನ್ನೊಂದು ಕೈಯಲ್ಲಿ ಕನ್ನಡಿಯನ್ನು ಆಯ್ಕೆ ಮಾಡಿಕೊಳ್ಳುತ್ತದೆ. ಈ ಮಗುವೆ ಸಿಂಹಾಸನ ಮೇಲೆ ಕೂರಲು ಯೋಗ್ಯವಾದ ಮಗುವೆಂದು ಆ ಮಗುವನ್ನು ಹೈದರ್ ಆಲಿ ಆಯ್ಕೆ
ಮಾಡಿ ಅದನ್ನು ದತ್ತು ತೆಗೆದುಕೊಳ್ಳುವಂತೆ ಮಹಾಮಾತೃಶ್ರೀ ಲಕ್ಷ್ಮಮ್ಮಣ್ಣಿಯವರಿಗೆ ಶಿಫಾರಸ್ಸು ಮಾಡುತ್ತಾನೆ. ಹೀಗೆ ಪರೀಕ್ಷೆಯಲ್ಲಿ ಆಯ್ಕೆಗೊಂಡ ಮಗು ಅರಿಕುಠಾರ ಊರಿನ ದೇವರಾಜ ಅರಸು ಮತ್ತು ಹೊನ್ನಮ್ಮಣ್ಣಿಯವರ ಪುತ್ರನಾಗಿತ್ತು.
ಮಹಾಮಾತೃಶ್ರೀಯವರು ಆ ಮಗುವನ್ನು ದತ್ತು ತೆಗೆದುಕೊಳ್ಳುತ್ತಾರೆ. ಆ ಮಗುವನ್ನು 9ನೇ ಖಾಸಾ ಚಾಮರಾಜ ಒಡೆಯರ್ ಎಂಬ ಅಭಿದಾನದೊಂದಿಗೆ 1776 ಸೆಪ್ಟೆಂಬರ್ 27ರಂದು ಮೈಸೂರಿನ ೨೧ನೇ ಮಹಾರಾಜರಾಗಿ ಸಿಂಹಾಸನದ ಮೇಲೆ ಪ್ರತಿಷ್ಠಾಪನೆ ಮಾಡಲಾಗುತ್ತದೆ ಖಾಸಾ ಎಂದರೆ ನ್ಯಾಯಬದ್ಧ ಎಂದರ್ಥ.
೨೧: 9ನೇ ಖಾಸಾ ಚಾಮರಾಜ ಒಡೆಯರು (1776-1796)

ಶುಕ್ಲಪಕ್ಷದ ಬಿದಿಗೆಯ ಚಂದ್ರನಂತೆ ದಿನದಿನಕ್ಕೆ ಪ್ರವರ್ಧಮಾನರಾಗಿ ಬೆಳೆಯುತ್ತಾ ಇವರು ಶರೀರಿಕ ಬೆಳವಣಿಗೆಯ ಜೊತೆಗೆ ಯೋಗ್ಯ ವಿದ್ಯಾಭ್ಯಾಸವನ್ನು ಪಡೆದುಕೊಳ್ಳುತ್ತಾರೆ. ಅವರು ಪಾಪ್ತ ವಯಸ್ಸಿಗೆ ಬಂದ ಮೇಲೆ ಅವರಿಗೆ ವಿವಾಹ ಮಾಡಲಾಗುತ್ತದೆ.
ಸುಮುಖದ ನಂಜರಾಜಯ್ಯರವರ ಕುಮಾರಿ ಕೆಂಪನಂಜಮ್ಮಣ್ಣಿಯವರ ಜೊತೆ ಅವರ ವಿವಾಹ ನಡೆಯುತ್ತದೆ. ಇವರ ಆಳ್ವಿಕೆಯ ಕಾಲದಲ್ಲಿ ಮೈಸೂರು ರಾಜ್ಯ ದಕ್ಷಿಣ ಭಾರತದಲ್ಲಿಯೇ ಅತಿ ದೊಡ್ಡ ರಾಜ್ಯವಾಗಿ ರೂಪಗೊಳ್ಳುತ್ತದೆ.😍
ಮೈಸೂರು ಪೂರ್ವದಲ್ಲಿ ರಾಮೇಶ್ವರದಿಂದ ಪಶ್ಚಿಮದಲ್ಲಿ ಕಲ್ಲಿಕೋಟೆಯವರೆಗೆ ಹಾಗೂ ಉತ್ತರದಲ್ಲಿ ಪುನಾ ರಾಜ್ಯದ ಗಡಿಯವರೆಗೂ ವಿಸ್ತಾರಗೊಂಡಿತ್ತು. ಸಂಸ್ಥಾನದ ಒಟ್ಟು ಆದಾಯ ವರ್ಷಕ್ಕೆ 2.30 ಕೋಟಿ ವರಹಗಳನ್ನು ತಲುಪಿತ್ತು.🔥
9ನೇ ಖಾಸಾ ಚಾಮರಾಜರ ಆಳ್ವಿಕೆಯ ಕಾಲದಲ್ಲಿ ಎರಡನೆ ಆಂಗ್ಲೋ-ಮೈಸೂರು ಯುದ್ಧ (1780-84 ) ನಡೆಯುತ್ತದೆ. ಈ ಯುದ್ಧದಲ್ಲಿ ಬ್ರಿಟಿಷರು ಹೈವರನನ್ನು ಪೋರ್ಟ್ನವೋ ( Port Nove) ಎಂಬಲ್ಲಿ ಸೋಲಿಸುತ್ತಾರೆ. ಸೋಲಿಗೆ ಹೆದರದ ಹೈದರ್ ಯುದ್ಧವನ್ನು ಮುಂದುವರೆಸುತ್ತಾನೆ.
ಆದರೆ ಅವನಿಗೆ ಬೆನ್ನು ಘಣಿ ರೋಗ ಕಾಣಿಸಿಕೊಳ್ಳುತ್ತದೆ. ಅದು ಉಲ್ಬಣಗೊಂಡು ಆತ 1782 ಡಿಸೆಂಬರ್ 7ರಂದು ಚಿತ್ತೂರ್ ಸಮೀಪ ನರಸಿಂಗರಾಯನ ಪೇಟೆ ಎಂಬಲ್ಲಿ ಕಾಲವಾಗುತ್ತಾರೆ. ಆತನ ಕಳೇಬರವನ್ನು ಪೆಟ್ಟಿಗೆಯಲ್ಲಿಟ್ಟು ಮೊದಲು ಕೋಲಾರಕ್ಕೆ ಸಾಗಿಸಲಾಗುತ್ತದೆ,
ನಂತರ ಶ್ರೀರಂಗಪಟ್ಟಣದ ಸಂಗಂ ಬಳಿ ಅಂತಿಮವಾಗಿ ಸಮಾಧಿ ಮಾಡಲಾಗುತ್ತದೆ. ಅದರ ಮೇಲೆ ಆತನ ಮಗ ಟಿಪ್ಪು ಗೋರಿಯನ್ನು ಕಟ್ಟಿಸುತ್ತಾನೆ. ಆ ಗೋರಿಗೆ ಗಂಬಜ್ ಎಂದು ಕರೆಯುತ್ತಾರೆ. ಎರಡನೆ ಅಂಗ್ಲೋ-ಮೈಸೂರು ಯುದ್ಧವನ್ನು ಹೈದರನ ಮಗ ಟಿಪ್ಪು ಮುಂದುವರಿಸುತ್ತಾನೆ,
ಆದರೆ ಎರಡೂ ಕಡೆಯವರು ಯುದ್ಧದಿಂದ ಆಯಾಸಗೊಂಡಿದ್ದರು. ಆದುದರಿಂದ ಇಬ್ಬರೂ ಶಾಂತಿಯನ್ನು ಬಯಸಿದ ಪರಿಣಾಮವಾಗಿ 1784 ಮಾರ್ಚ್ 11ರಂದು ಮಂಗಳೂರು ಒಪ್ಪಂದ ಏರ್ಪಡುತ್ತದೆ. ಅದರೊಂದಿಗೆ ಎರಡನೆ ಅಂಗೋ-ಮೈಸೂರು ಯುದ್ಧ ಅಂತ್ಯವಾಗುತ್ತದೆ.
ಟಿಪ್ಪು ಸುಲ್ತಾನ್‌ ಅಧಿಕಾರ ಸ್ವೀಕಾರ

ಟಿಪ್ಪುಸುಲ್ತಾನ್ 1750ನೇ ಇಸವಿ ನವೆಂಬರ್ 10ರಂದು ಬೆಂಗಳೂರು ಸಮೀಪ ದೇವನಹಳ್ಳಿಯಲ್ಲಿ ಜನಿಸಿದನು. ಈತನ ತಾಯಿ ಫಕ್ರುನ್ನಿಸ್‌ (=ಫಾತೀಮ) ಬೇಗಂ ಹೈದರ್ ಅಲಿಯ ಎರಡನೆ ಪತ್ನಿ. ಈಕೆ ಅರ್ಕಾಟನಲ್ಲಿರುವ ಟಿಪ್ಪು ಮಸ್ತಾನ ಅವುಲಿಯ ಎಂಬ ಸಂತನ ದರ್ಗಕ್ಕೆ ಗಂಡು ಮಗುವಿಗಾಗಿ ಹರಕೆ ಹೊತ್ತಿದ್ದಳು.
ಆಕೆಯ ಅಪೇಕ್ಷೆಯಂತೆ ಆಕೆಗೆ ಗಂಡು ಮಗು ಜನಿಸುತ್ತದೆ, ಆ ಕಾರಣಕ್ಕಾಗಿ ಮಗುವಿಗೆ 'ಟಿಪ್ಪುಸುಲ್ತಾನ' ಎಂದು ನಾಮಕರಣ ಮಾಡಲಾಗುತ್ತದೆ. ಆದುದರಿಂದ ಟಿಪ್ಪುವಿನ ಹುಟ್ಟು ಹೆಸರೇ ಟಿಪ್ಪುಸುಲ್ತಾನನೆಂಬುದು ಆತ ಸುಲ್ತಾನನಾದ ಬಳಿಕ ಬಂದ ಹೆಸರಲ್ಲ.
ಈತನಿಗೆ ಫತ್‌ ಅಲಿ ಎಂಬ ಮತ್ತೊಂದು ಹೆಸರಿತ್ತು. ಟಿಪ್ಪು ಉತ್ತಮ ಶಿಕ್ಷಣವನ್ನು ಪಡೆದಿದ್ದನು ಹಾಗೂ ಶ್ರೀಮಂತಿಕೆ ಪರಿಸರದಲ್ಲಿ ಬೆಳೆದವನು. ಹೈದರ್ ಅಲಿ ತೀರಿಕೊಂಡ ಬಳಿಕ ಆತನ ಉತ್ತರಾಧಿಕಾರಿಯಾಗಿ ಟಿಪ್ಪು ಅಧಿಕಾರವನ್ನು ಸ್ವಯಂ ಪ್ರೇರಿತನಾಗಿ ಸ್ವೀಕರಿಸಿದನು.
ಆತನ ಸರ್ದಾರರು ಮತ್ತು ಮಂತ್ರಿಗಳು ಟಿಪ್ಪುವಿನ ಉತ್ತರಾಧಿಕಾರತ್ವಕ್ಕೆ ಯಾವುದೇ ಧಕ್ಕೆ ಉಂಟಾಗದಂತೆ ನೋಡಿಕೊಂಡರು. ಪರಿಣಾಮವಾಗಿ ಟಿಪ್ಪುವಿನ ಉತ್ತರಾಧಿಕಾರತ್ವ ಗಲಭೆ ಗದ್ದಲಗಳಿಲ್ಲದೆ ತಾಂತಿಯುಕ್ತವಾಗಿ ನೆರವೇರಿತು. ಟಿಪ್ಪು ತನ್ನ ತಂದೆಯಿಂದ ವಿಶಾಲವಾದ ರಾಜ್ಯ, ತುಂಬಿ ತುಳುಕಾಡುತ್ತಿದ್ದ ಖಜಾನೆ ಮತ್ತು ಬಲಿಷ್ಠ ಸೇನಾಪಡೆಯನ್ನು ಪಡೆದಿದ್ದನು.
ಅವನ ರಾಜ್ಯ ಆಗ ದಕ್ಷಿಣ-ಉತ್ತರವಾಗಿ 400 ಮೈಲಿ ಮತ್ತು ಪೂರ್ವ ಪಶ್ಚಿಮ 300 ಮೈಲಿಗಳಷ್ಟು ವಿಶಾಲವಾಗಿತ್ತು. ಟಿಪ್ಪು, ಮಹಾರಾಜ 4ನೇ ಚಾಮರಾಜರನ್ನು ಶ್ರೀರಂಗಪಟ್ಟಣದಲ್ಲಿ ಭೇಟಿ ಮಾಡಿ ತನ್ನ ತಂದೆಯ ಅಧಿಕಾರವನ್ನು ತಾನು ಪಡೆದಿರುವುದಾಗಿ ತಿಳಿಸಿ ರಾಜರಿಂದ ಬಲವಂತದ ಅನುಮೋದನೆಯನ್ನು ಪಡೆದುಕೊಂಡನು.
ತಂದೆಯಂತೆಯೇ ಟಿಪ್ಪು ಮೊದಮೊದಲು ಮಹಾರಾಜರಿಗೆ ತಲೆಬಾಗಿ ನಡೆಯುತ್ತಾನೆ. ನವರಾತ್ರಿ ಮುಂತಾದ ಆಚರಣೆಗಳಲ್ಲಿ ದೊರೆಗಳ ಸನ್ನಿಧಾನದಲ್ಲಿ ಅತ್ಯಂತ ಭಕ್ತಿಭಾವದಿಂದ ನಡೆದುಕೊಳ್ಳುತ್ತಾನೆ. ಕಾಲಕ್ರಮೇಣ ಆತನ ನಡವಳಿಕೆಯಲ್ಲಿ ಬದಲಾವಣೆ ಕಂಡುಬರುತ್ತದೆ. ತಾನೆ ಸ್ವತಂತ್ರ ದೊರೆ ಎಂಬುದಾಗಿ ವರ್ತಿಸಲು ಆರಂಭಿಸುತ್ತಾನೆ.
ಆಸ್ಥಾನಿಕರಲ್ಲಿ ಕೆಲವರ ಕಣ್ಣಿಗೆ ಟಿಪ್ಪು ಮತಾಂಧನಂತೆ ಕಾಣಿಸಿಕೊಳ್ಳುತ್ತಾನೆ. ಹೈದರ್ ತನಗಾಗಿ ಯಾವುದೇ ಸಿಂಹಾಸನವನ್ನು ಮಾಡಿಸಿಕೊಂಡಿರಲಿಲ್ಲ. ಆದರೆ ಟಿಪ್ಪು ತನಗಾಗಿ ಪ್ರತ್ಯೇಕ ಸಿಂಹಾಸನವನ್ನು ಮಾಡಿಸಿಕೊಳ್ಳುತ್ತಾನೆ. ಆ ಸಿಂಹಾಸನದ ಆಸನವು ಹುಲಿಗಳು ತಮ್ಮ ಬೆನ್ನ ಮೇಲೆ ಹೊತ್ತು ನಿಂತಿರುವಂತೆ ನಿರ್ಮಿಸಲಾಗಿತ್ತು.
ಸಿಂಹಾಸನದ ಆಸನ ಭಾಗವು 8 x 5 ಅಡಿ ವಿನ್ಯಾಸದಿಂದ ಕೂಡಿತ್ತು.ಸಿಂಹಾಸನವನ್ನು ಕಪ್ಪು ಮರದಲ್ಲಿ ಮಾಡಿಸಿ ಅದರ ಮೇಲೆ ಚಿನ್ನದ ತಗಡನ್ನು ಹೊದಿಸಲಾಗಿತ್ತು.ಸಿಂಹಾಸನದ ಆಸನವು ನೆಲದಿಂದ ಸುಮಾರು 11 ಅಡಿಗಳಷ್ಟು ಎತ್ತರದಲ್ಲಿತ್ತು. ಅದನ್ನು ಏರಲು ನಾಲ್ಕು ಕಡೆ ಬೆಳ್ಳಿಯಿಂದ ಮಾಡಿದ ಏಣಿಗಳಿದ್ದವು.ಸಿಂಹಾಸನದ ಮೇಲೆ ಛತ್ರಿಯನ್ನು ಚಿನ್ನದಿಂದ ಮಾಡಲಾಗಿತ್ತು.
ಛತ್ರಿಯ ಮಧ್ಯೆ ಭಾಗದಲ್ಲಿ ಪಾರಿವಾಳ ಗಾತ್ರದ 'ಹುಮ್ಮ' ಎಂಬ ರಾಜಪಕ್ಷಿಯನ್ನು ಗಟ್ಟಿ ಚಿನ್ನದಿಂದ ಮಾಡಿ ಇರಿಸಲಾಗಿತ್ತು. ಆ ಸಿಂಹಾಸನದ ಮೇಲೆ ಕುಳಿತು ಟಿಪ್ಪು ಸ್ವಾತಂತ್ರ್ಯ ಸಾರ್ವಭೌಮನಂತೆ ದರ್ಬಾರ್ ನಡೆಸುತ್ತಿದ್ದನು. ಟಿಪ್ಪು ಪತನದ ನಂತರ ಬಿಟಿಷರು ಆ ಸಿಂಹಾಸನವನ್ನು ತುಂಡರಿಸಿ ಇಂಗ್ಲೆಂಡಿಗೆ ಸಾಗಿಸಿದರು.
ಮೂರನೇ ಆಂಗ್ಲೋ-ಮೈಸೂರು ಯುದ್ಧ (1790-92)

ಟಿಪ್ಪು ತಿರುವನಂತಪುರ ರಾಜನೊಡನೆ ಗಡಿ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಆತನೊಡನೆ ಯುದ್ಧ ಹೂಡುತ್ತಾನೆ.ಆ ಯುದ್ಧ ಮೂರನೆ ಆಂಗ್ಲೋ-ಮೈಸೂರು ಯುದ್ಧಕ್ಕೆ ದಾರಿ ಮಾಡಿಕೊಡುತ್ತದೆ.ಈ ಯುದ್ಧದಲ್ಲಿ ಇಂಗ್ಲಿಷರು ಮರಾಠ ಮತ್ತು ಹೈದರಬಾದಿನ ನಿಜಾಮನೊಡನೆ ಮೈತ್ರಿ ಮಾಡಿಕೊಂಡು ಟಿಪ್ಪುವಿನ ಮೇಲೆ ಯುದ್ಧ ಸಾರುತ್ತಾರೆ.
ಬ್ರಿಟಿಷ್ ಸೇನೆಯ ಮುಂದಾಳತ್ವವನ್ನು ಗೌರ್ನರ್ ಜನರಲ್ ಲಾರ್ಡ್ ಕಾರನ್‌ವಾಲಿಸ್‌ ವಹಿಸಿಕೊಳ್ಳುತ್ತಾನೆ. ಯುದ್ಧದಲ್ಲಿ ಬ್ರಿಟಿಷ್ ಮತ್ತು ಅವರ ಮಿತ್ರ ಪಡೆಗಳು ಟಿಪ್ಪುವಿನ ಸೇನೆಯನ್ನು ಶ್ರೀರಂಗಪಟ್ಟಣದ ಹತ್ತಿರ ಸೋಲಿಸಿ ಕೋಟೆಯನ್ನು ಲಗ್ಗೆ ಹಾಕಲು ಯತ್ನಿಸುತ್ತವೆ. ಇದರಿಂದ ಧೃತಿಗೆಟ್ಟ ಟಿಪ್ಪು ಶಾಂತಿ ಒಪ್ಪಂದಕ್ಕೆ ಮುಂದಾಗುತ್ತಾನೆ.
ಮಾತುಕತೆಗಳ ನಂತರ 1793 ಮಾರ್ಚ್ 18ರಂದು ಶ್ರೀರಂಗಪಟ್ಟಣ ಶಾಂತಿ ಒಪ್ಪಂದ ಏರ್ಪಡುತ್ತದೆ. ಆ ಪ್ರಕಾರ ಟಿಪ್ಪು ತನ್ನ ರಾಜ್ಯದ ಅರ್ಧಭಾಗವನ್ನು ಬ್ರಿಟಿಷ್ ಮತ್ತು ಅವರ ಮಿತ್ರರಿಗೆ ಬಿಟ್ಟುಕೊಡುತ್ತಾನೆ. ಯುದ್ಧ ನಷ್ಟ ಭರ್ತಿಗಾಗಿ ಟಿಪ್ಪು ಮೂರು ಕೋಟಿ ಮೂವತ್ತು ಲಕ್ಷ ರೂಪಾಯಿಗಳನ್ನು ಬ್ರಿಟಿಷರಿಗೆ ಕೊಡಲು ಒಪ್ಪಿಕೊಳ್ಳುತ್ತಾನೆ.
ಆ ಹಣದಲ್ಲಿ ಅರ್ಧಭಾಗವನ್ನು ತಕ್ಷಣವೆ ಸಂದಾಯ ಮಾಡಿ ಉಳಿಕೆ ಹಣವನ್ನು ಮೂರು ಕಂತುಗಳಲ್ಲಿ ಒಂದು ವರ್ಷ ದೊಳಗೆ ತೀರಿಸಲು ಟಿಪ್ಪು ಒಪ್ಪಿಕೊಳ್ಳುತ್ತಾನೆ. ಆ ಬಾಕಿ ಹಣಕ್ಕೆ ನನ್ನ ಇಬ್ಬರು ಮಕ್ಕಳನ್ನು ಬ್ರಿಟಿಷರಿಗೆ ಒತ್ತೆ ಇಡುತ್ತಾನೆ. ಮೂರನೆ ಆಂಗ್ಲೋ-ಮೈಸೂರು ಯುದ್ಧದಿಂದ ಟಿಪ್ಪು ಆರ್ಥಿಕವಾಗಿ ಹಾಗೂ ಸೈನಿಕವಾಗಿ ಬಹಳ ದುರ್ಬಲನಾಗುತ್ತಾನೆ.
ಆದರೆ ಒತ್ತೆಯಿಟ್ಟ ತನ್ನ ಮಕ್ಕಳನ್ನು ಬಿಡಿಸಿಕೊಂಡು ಬರಲು ಹಣ ಸಂಗ್ರಹದಲ್ಲಿ ಟಿಪ್ಪು ತೊಡಗುತ್ತಾನೆ. ನಾನಾ ರೂಪದಲ್ಲಿ ಹಣ ಸಂಗ್ರಹಣೆ ನೆಡೆಯುತ್ತದೆ. ಮಹಾಮಾತೃಶ್ರೀ ಲಕ್ಷ್ಮಮ್ಮಣ್ಣಿಯವರ ಅರಮನೆಯಲ್ಲಿದ್ದ ಒಡವೆ, ನಗದು ಮತ್ತು ಇನ್ನಿತರ ಬೆಲೆ ಬಾಳುವ ವಸ್ತುಗಳನ್ನು ದೋಚಿಕೊಂಡು ಹೋಗುತ್ತಾನೆ ಎಂದು ಹೇಳಲಾಗಿದೆ.
ದೇವಾಲಯಗಳಲ್ಲಿನ ದೇವರ ಒಡವೆ, ಹುಂಡಿಯ ಹಣವನ್ನು ದೋಚುತ್ತಾನೆ ಎಂದು ಹೇಳಲಾಗಿದೆ. ಶ್ರೀಮಂತರನ್ನು ಹೆದರಿಸಿ ಹಣ ಸುಲಿಗೆ ಮಾಡುತ್ತಾನೆ. ಹೀಗೆ ಹಣವನ್ನು ಸಂಗ್ರಹಿಸಿ ಅದನ್ನು ಬ್ರಿಟಿಷರಿಗೆ ಒಪ್ಪಿಸಿ ಒತ್ತೆಯಿಟ್ಟ ತನ್ನ ಮಕ್ಕಳನ್ನು ಬಿಡಿಸಿಕೊಳ್ಳುತ್ತಾನೆ.
ಮುಮ್ಮಡಿ ಕೃಷ್ಣರಾಜ ಒಡೆಯರ ಜನನ

9ನೇ ಚಾಮರಾಜ ಒಡೆಯರು ಪುತ್ರ ಸಂತಾನಕ್ಕಾಗಿ ನಂಜನಗೂಡು ಶ್ರೀಕಂಠೇಶ್ವರ ಸ್ವಾಮಿಯನ್ನು ಕುರಿತು ಕೋಟಿ ಪಂಚಾಕ್ಷರಿ ಜಪ, ಮುಂತಾದವುಗಳನ್ನು ಮಾಡಿಸಿದರು. ಅವರ ಪ್ರಾರ್ಥನೆ ಫಲಪ್ರದವಾಗಿ ಅವರ ಧರ್ಮಪತ್ನಿ ಕೆಂಪನಂಜಮ್ಮಣ್ಣಿಯವರು ಗರ್ಭವತಿಯಾಗುತ್ತಾರೆ.
ಸ್ವಸ್ತಿ ಶ್ರೀ ವಿಜಯಾಭ್ಯುದಯ ಶಾಲಿವಾಹನ ಶಕ ವರ್ಷ೦ಗಳು
1712ನೇ ಆನಂದನಾಮ ಸಂವತ್ಸರ ಆಷಾಢಮಾಸ ಬಹುಳ 2 ಅಂದರೆ ಕ್ರಿ.ಶ. 1794 ಜುಲೈ 14ರಂದು ಶ್ರೀ ಚಾಮರಾಜ ಒಡೆಯರವರ ಧರ್ಮಪತ್ನಿಯವರಾದ ಕೆಂಪನಂಜಮ್ಮಣ್ಣಿಯವರ ಗರ್ಭ ಸುಧಾಂಬುಧಿಯಲ್ಲಿ ಗಂಡು ಮಗು ಜನಿಸುತ್ತದೆ
ಪುತ್ರನ ಜನನದಿಂದ ಮಹಾರಾಜ ಚಾಮರಾಜೇಂದ್ರ ಒಡೆಯರು ಹಾಗೂ ರಾಜಕುಟುಂಬದವರು ಬಹಳ ಸಂತೋಷಪಡುತ್ತಾರೆ. ಉಂಟಾದ ಆನಂದದ ಸೂಚಕವಾಗಿ ಅರಮನೆ ಕೋಟೆ ಬತ್ತೇರಿಯಲ್ಲಿ ಕುಶಾಲ ತೋಪುಗಳನ್ನು ಹಾರಿಸಲಾಯಿತು ಹಾಗೂ ಬಂಡಿಗಳಲ್ಲಿ ಸಕ್ಕರೆಯನ್ನು ತುಂಬಿ ಬೀದಿ ಬೀದಿಯಲ್ಲಿ ಜನರಿಗೆ ಸಿಹಿ ಹಂಚಲಾಯಿತು
ಮಹಾರಾಜರು ಬ್ರಾಹ್ಮಣರಿಗೆ ಗೋದಾನ, ವಸ್ತ್ರದಾನ, ಸಕ್ಕರೆದಾನ ಮುಂತಾದ ದಾನಗಳನ್ನು ಮಾಡಿ ಫಲ ತಾಂಬೂಲಗಳನ್ನು ದಕ್ಷಿಣೆಯಾಗಿ ಕೊಡಿಸಿದರು. ಶ್ರೀರಂಗಪಟ್ಟಣದಲ್ಲಿ ಅವರ ಜನ್ಮ ಸ್ಥಳವನ್ನು ಪತ್ತೆಹಚ್ಚಿ ಆ ಜಾಗದ ಮೇಲೆ ನಾಲ್ವಡಿಯವರು ಚಿಕ್ಕ ಮಂಟಪವನ್ನು ನಿರ್ಮಿಸಿ ಅದನ್ನು 1915 ಜೂಲೈ 6ರಂದು ಉದ್ಘಾಟಿಸಿದರು
ಮಗು ಹುಟ್ಟಿದ 12ನೇ ದಿವಸದಲ್ಲಿ ಶ್ರೀಕಂಠೇಶ್ವರನ ಅನುಗ್ರಹದಿಂದ ಜನಿಸಿದ ಈ ಮಗುವಿಗೆ ಜಾತಕ ಕರ್ಮ ಪೂರ್ವಕವಾಗಿ 'ನಂಜರಾಜ ಒಡೆಯರ್' ಎಂಬುದಾಗಿ ನಾಮಕರಣವನ್ನು ಮಾಡಿ ಮುಗಿಸಿದರು. ದುರ್ದೈವವೆಂದರೆ ಮಗುವಿನ ತಾಯಿ ಕೆಂಪನಂಜಮ್ಮಣ್ಣಿಯವರು ದೇಹ ಅಲಸ್ಯದಿಂದ ಮಗು ಜನಿಸಿದ ಒಂದು ತಿಂಗಳೊಳಗೆ ತೀರಿಕೊಂಡರು.
ಚಾಮರಾಜ ಒಡೆಯರ ಸಹಪತ್ನಿಯರಾದ ಹೊನ್ನಾಜಮ್ಮನವರ ಗರ್ಭದಲ್ಲಿ ಅದೇ ಆಷಾಢ ಮಾಸದಲ್ಲಿ ಹುಟ್ಟಿದ ಗಂಡು ಮಗು ತಕ್ಷಣದಲ್ಲಿಯೇ ತೀರಿ ಹೋಗುತ್ತದೆ. ಅದೇ ರೀತಿ ಮತ್ತೊಬ್ಬ ಸಹಪತ್ನಿಯರಾದ ಚಲುವಾಜಮ್ಮಣ್ಣಿಯವರ ಗರ್ಭದಲ್ಲಿಯು ಸಹ ಗಂಡು ಮಗು ಜನಿಸುತ್ತದೆ. ಆದರೆ ಮಗು ಮೂರು ದಿವಸವಿದ್ದು ತೀರಿಕೊಳ್ಳುತ್ತದೆ.
ಈ ಸಂದರ್ಭದಲ್ಲಿ ಸ್ವೀಕರ್ತೃ ಮಾತೃಶ್ರೀ ಲಕ್ಷ್ಮಮ್ಮಣ್ಣಿಯವರು ಆ ಇಬ್ಬರು ರಾಣಿಯರಿಗೆ ಕೆಂಪನಂಜಮ್ಮಣ್ಣಿಯವರ ಉದರದಲ್ಲಿ ಜನಿಸಿದ ಮಗುವನ್ನು ತಮ್ಮ ಮಗುವೆಂದು ಸ್ವೀಕರಿಸಿ ತಾಯಿ ಇಲ್ಲದ ಆ ತಬ್ಬಲಿ ಮಗುವನ್ನು ಆರೈಕೆ ಮಾಡುವಂತೆ ಹೇಳುತ್ತಾರೆ. ಆ ಪ್ರಕಾರವೆ ಆ ಇಬ್ಬರು ಮಗುವನ್ನು ಬಹಳ ಅಕ್ಕರೆಯಿಂದ ಸಾಕುತ್ತಾರೆ.
ಮಗುವು ಶುಕ್ಲಪಕ್ಷದ ಬಿದಿಗೆಯ ಚಂದ್ರನಂತೆ ವೃದ್ಧಿ ಹೊಂದುತ್ತದೆ.

ಮಹಾರಾಜ 9ನೇ ಚಾಮರಾಜ ಒಡೆಯರು 1796ರಲ್ಲಿ ಸಿಡಿಬು ರೋಗದಿಂದ ನಿಧನರಾಗುತ್ತಾರೆ. ಮಹಾರಾಜನ ಸಾವಿನ ಸುದ್ದಿಯಿಂದ ಟಿಪ್ಪು ಸಂತಸವನ್ನೇ ಪಡುತ್ತಾನೆ. ತಾನು ಈಗ ಸರ್ವ ಸ್ವತಂತ್ರ ದೊರೆಯೆಂದು ಘೋಷಿಸಿಕೊಳ್ಳುತ್ತಾನೆ ಹಾಗೂ ಬಾದ್‌ಶಹಾ ಎಂಬ ಬಿರುದನ್ನು ಪಡೆಯುತ್ತಾನೆ.
ಗತಿಸಿದ ಮಹಾರಾಜರ ಔರಸಪುತ್ರನಿಗೆ ಪಟ್ಟಾಭಿಷೇಕವನ್ನು ಟಿಪ್ಪು ಮಾಡಲಿಲ್ಲ. ಯದುವಂಶವನ್ನು ರಾಜ್ಯಭಾರದಿಂದ ದೂರವಿಡಲು ಪ್ರಯತ್ನಿಸುತ್ತಾನೆ. ಮೈಸೂರು ರತ್ನಸಿಂಹಾಸನವನ್ನು ಕಳಚಿ ಅದನ್ನು ಕತ್ತಲೆ ಕೋಣೆಯಲ್ಲಿಟ್ಟು ಬೀಗ ಮುದ್ರೆ ಹಾಕಿಸುತ್ತಾನೆ, ಅದರೊಂದಿಗೆ ನವರಾತ್ರಿ ಉತ್ಸವಗಳು ನಿಂತುಹೋಗುತ್ತವೆ.
ಟಿಪ್ಪುವಿನ ಮರಣ 1799 ಮೇ 4

1793ರ ಮಾರ್ಚಿನಲ್ಲಿ ಏರ್ಪಟ್ಟ ಶ್ರೀರಂಗಪಟ್ಟಣ ಒಪ್ಪಂದ ಬ್ರಿಟಿಷರು & ಟಿಪ್ಪು ನಡುವೆ ನಿಜವಾದ ಶಾಂತಿ ಸ್ಥಾಪನೆಯಾಗಿರಲಿಲ್ಲ.ಅಪಮಾನಿತನಾಗಿದ್ದ ಟಿಪ್ಪು ಬ್ರಿಟಿಷರ ಮೇಲೆ ಸೇಡು ತೀರಿಸಿಕೊಳ್ಳಲು ಪ್ರಯತ್ನಿಸುತ್ತಾನೆ.ಬ್ರಿಟಿಷರ ವಿರುದ್ಧ ಬಲಾಢ್ಯವಾದ ಸೈನಿಕ ಮೈತ್ರಿ ಕೂಟ ರಚಿಸಲು ಟಿಪ್ಪು ಒಳಸಂಚು ನಡೆಸುತ್ತಿದ್ದನು.
ಫ್ರೆಂಚ್ ಮತ್ತು ಕೆಲವು ಮುಸ್ಲಿಂ ರಾಷ್ಟ್ರಗಳ ನೆರವಿಗೆ ಯತ್ನಿಸಿದರು. ಆದರೆ ಯಾರಿಂದಲೂ ಬ್ರಿಟಿಷ್ ವಿರುದ್ಧದ ಸೈನಿಕ ಮೈತ್ರಿಕೂಟಕ್ಕೆ ಬೆಂಬಲ ಸಿಗಲಿಲ್ಲ. 1798ರಲ್ಲಿ ಭಾರತಕ್ಕೆ ನೂತನ ಗೌರ್ನರ್ ಜನರಲ್ ಆಗಿ ಬಂದ ಲಾರ್ಡ್ ವೆಲ್ಲಸ್ತಿಯು ಟಿಪ್ಪುವಿನ ಸಮರ ಸಿದ್ಧತೆಯನ್ನು ಅರಿತುಕೊಳ್ಳುತ್ತಾನೆ.
ಆತನನ್ನು ಸಂಪೂರ್ಣವಾಗಿ ದಮನ ಮಾಡಲು ವೆಲ್ಲೆಸ್ಲಿ ಆತನ ವಿರುದ್ಧ ಈ ಹಿಂದೆ ರಚನೆಗೊಂಡಿದ್ದ ನಿಜಾಮ & ಮರಾಠರನ್ನೊಳಗೊಂಡ ಮಿಲಿಟರಿ ಮೈತ್ರಿ ಕೂಟವನ್ನು ನವೀಕರಿಸುತ್ತಾನೆ. ಸಮರಕ್ಕೆ ಸರ್ವ ಸಿದ್ಧತೆ ಮಾಡಿಕೊಂಡ ಬಳಿಕ ಲಾರ್ಡ್‌ ವೆಲ್ಲೆಸ್ಲಿ ಟಿಪ್ಪುವಿಗೆ ಪತ್ರ ಬರೆದು ಸಹಾಯಕ ಸೈನ್ಯ ಪದ್ಧತಿಗೆ ಸಹಿ ಹಾಕಿ ಬ್ರಿಟಿಷರ ಸಾಮಂತನಾಗುವಂತೆ ತಿಳಿಸುತ್ತಾನೆ.
ಟಿಪ್ಪು ಅದಕ್ಕೆ ಒಪ್ಪಲಿಲ್ಲ. ಪರಿಣಾಮವಾಗಿ ಟಿಪ್ಪುವನ್ನು ಬ್ರಿಟಿಷರ ಶತ್ರು ಎಂದು ಪರಿಗಣಿಸಿ ಆತನ ವಿರುದ್ಧ ಸಮರ ಸಾರುತ್ತಾನೆ. ಹೀಗೆ ನಾಲ್ಕನೆ ಹಾಗೂ ಕೊನೆಯ ಆಂಗ್ಲೋ - ಮೈಸೂರು ಯುದ್ಧ 1799ರಲ್ಲಿ ಸ್ಫೋಟಗೊಳ್ಳುತ್ತದೆ. ಬ್ರಿಟಿಷ್ ಸೇನೆಯ ನಾಯಕತ್ವವನ್ನು ವಹಿಸಿ ಕೊಂಡು ಜನರಲ್ ಹ್ಯಾರಿಸ್ ಮತ್ತು ಆರ್ಥು‌ರ್ ವೆಲ್ಲೆಸ್ಲಿ
ಶ್ರೀರಂಗಪಟ್ಟಣದ ಕಡೆ ಧಾವಿಸಿ ಬರುತ್ತಾರೆ. ಹೈದ್ರಾಬಾದ್ ನಿಜಾಮನ ಸೇನೆಯ ನಾಯಕತ್ವವನ್ನು ವಹಿಸಿಕೊಂಡಿದ್ದ ಮೀರ್ ಆಲಂನು ಕೂಡ ಒಂದು ಬ್ರಿಟಿಷ್ ಸೇನೆಯನ್ನು ಸೇರುತ್ತಾನೆ. ಆ ಸೇನೆಗಳು ಶ್ರೀರಂಗಪಟ್ಟನದ ಬಳಿ ಫ್ರೆಂಚ್ ರಾಕ್ ಎಂಬಲ್ಲಿ ಬಂದು ನೆಲೆಯೂರಿದ್ದವು.
1799 ಮೇ 4ರಂದು ಮಧ್ಯಾಹ್ನ 1 ಗಂಟೆಗೆ ಸರಿಯಾಗಿ ಬ್ರಿಟಿಷ್ ಸೇನಾ ಪಡೆಗಳು ಶ್ರೀರಂಗಪಟ್ಟಣದ ಕೋಟೆಯನ್ನು ಲಗ್ಗೆ ಹಾಕಲು ಆರಂಭಿಸುತ್ತವೆ. ಟಿಪ್ಪು ಆಗ ತಾನೆ ಮಧ್ಯಾಹ್ನದ ನಮಾಜ್ ಮುಗಿಸಿ ಊಟಕ್ಕೆಂದು ಕುಳಿತುಕೊಂಡಿದ್ದರು. ಆ ಸಮಯಕ್ಕೆ ಸರಿಯಾಗಿ ಬ್ರಿಟಿಷರು ಕೋಟೆಯನ್ನು ಏರಿ ಬರುತ್ತಿದ್ದಾರೆ ಎಂಬ ಸುದ್ದಿ ಬರುತ್ತದೆ.
ಮಾಡಬೇಕಾದ ಊಟವನ್ನು ಬಿಟ್ಟು ಟಿಪ್ಪು ಶಸ್ತ್ರಧಾರಿಯಾಗಿ ಕುದುರೆಯನ್ನೇರಿ ಕೋಟೆಯ ಸಮೀಪಕ್ಕೆ ಬರುತ್ತಾನೆ. ಹೀಗೆ ಅರಮನೆಯಿಂದ ಹೊರಬಂದ ಟಿಪ್ಪು ಮತ್ತೆ ಜೀವಂತವಾಗಿ ಅರಮನೆಗೆ ವಾಪಸ್ಸಾಗಲಿಲ್ಲ. ಟಿಪ್ಪು ಒಬ್ಬ ವೀರ ಯೋಧನಂತೆ ಹೋರಾಡಿ ರಣಭೂಮಿಯಲ್ಲಿ ನಿಧನನಾಗುತ್ತಾನೆ.
ಅಂದು ಸಂಜೆ ವೇಳೆಗೆ ಬ್ರಿಟಿಷರ ಜಯದೊಂದಿಗೆ ಯುದ್ಧ ಮುಕ್ತಾಯವಾಯಿತು. ಕತ್ತಲೆ ಆವರಿಸಿಕೊಂಡಿತು. ಟಿಪ್ಪುವಿನ ಕುಟುಂಬದವರನ್ನು ಬ್ರಿಟಿಷರು ತಮ್ಮ ಅಧೀನಕ್ಕೆ ತೆಗೆದುಕೊಂಡಿದ್ದರು.ಆದರೆ ಟಿಪ್ಪುವಿನ ಬಗ್ಗೆ ಸುಳಿವು ಸಿಗಲಿಲ್ಲ. ಅರಮನೆ ಎಲ್ಲ ಭಾಗವನ್ನು ಬ್ರಿಟಿಷರು ಟಿಪ್ಪುವಿಗಾಗಿ ಶೋಧಿಸಿದರು.
ಟಿಪ್ಪು ಸಿಗಲಿಲ್ಲ. ಟಿಪ್ಪು ಕೋಟೆಯ ಪೂರ್ವಭಾಗದಲ್ಲಿರುವ ವಾಟರ್‌ಗೇಟ್‌ ಸಮೀಪ ಸತ್ತು ಬಿದ್ದಿರುವ ಸುದ್ದಿ ತಿಳಿದುಬರುತ್ತದೆ. ಬ್ರಿಟಿಷ್ ಅಧಿಕಾರಿಗಳು ಅಲ್ಲಿಗೆ ದೌಡಾಯಿಸುತ್ತಾರೆ. ಪಂಜಿನ ಬೆಳಕಿನಲ್ಲಿ ಟಿಪ್ಪುವಿನ ಶವ ಹುಡುಕಾಟ ನಡೆಯುತ್ತದೆ. ಸತ್ತ ಹೆಣಗಳ ರಾಶಿಯ ಮಧ್ಯೆ ಟಿಪ್ಪುವಿನ ಶವ ಪತ್ತೆಯಾಗುತ್ತದೆ. ಶವವನ್ನು ಮಹಜರ್
ಮಾಡಲಾಗಿ ಅದು ಟಿಪ್ಪು ಸುಲ್ತಾನನ ಶವವೆಂದು ಖಚಿತವಾಗುತ್ತದೆ. ನಂತರ ಆತನ ಶವವನ್ನು ಗೌರವದಿಂದ ತಂದು ಅರಮನೆಯಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗುತ್ತದೆ. ಮಾರನೆ ದಿನ ಅಂದರೆ ಮೇ 5ರಂದು ಟಿಪ್ಪುವಿನ ಶವವನ್ನು ಸಕಲ ಮರ್ಯಾದೆಗಳೊಡನೆ ಗುಂಬಜ್‌ನಲ್ಲಿ ಆತನ ತಂದೆ ಸಮಾಧಿಯ ಪಕ್ಕದಲ್ಲಿ ಸಮಾಧಿ ಮಾಡಲಾಯಿತು.
ಬಂಧಿಸಲ್ಪಟ್ಟ ಟಿಪ್ಪುವಿನ ಕುಟುಂಬದವರಿಗೆ ಬ್ರಿಟಿಷರು ಅಭಯವನ್ನಿತ್ತು ಅವರ ಜೀವನ ನಿರ್ವಹಣೆಗೆ ಕಂಪನಿ ಸರ್ಕಾರ ಸೂಕ್ತ ಪಿಂಚಣಿಯನ್ನು ಮಂಜೂರು ಮಾಡಿ ಅವರೆಲ್ಲರನ್ನು ಮದ್ರಾಸ್ ಪ್ರಾಂತ್ಯದಲ್ಲಿನ ವೆಲ್ಲೂರಿಗೆ ವರ್ಗಾಯಿಸುತ್ತಾರೆ. ಮತ್ತೆ ಅವರನ್ನು ಅಲ್ಲಿಂದ 1806ರಲ್ಲಿ ಕಲ್ಕತ್ತಕ್ಕೆ ವರ್ಗಾಯಿಸತ್ತಾರೆ.
ಕಲ್ಕತ್ತದಲ್ಲಿ 1880ನೇ ಇಸವಿ ತನಕ ಟಿಪ್ಪುವಿನ ಒಬ್ಬ ಮಗ ಪ್ರಿನ್ಸ್ ಮೋಹಿಜ್ ಉದ್-ದಿನ್ ಬದುಕಿದ್ದುದನ್ನು ಕೆಲವರು ಕಣ್ಣಾರೆ ನೋಡಿದ್ದರೆಂದು ಇತಿಹಾಸಕಾರ ಫ್ರಾಕ್ಷಿ ಫರ್ನಾಂಡಿಸ್ ಹೇಳುತ್ತಾರೆ.

#ಸಮಗ್ರಆಧುನಿಕಮೈಸೂರುಚರಿತ್ರೆ
ಗೌರ್ನರ್ ಜನರಲ್ ಲಾರ್ಡ್ ವೆಲ್ಲಸ್ಲಿಯ ಮುಂದಿನ ಕ್ರಮ

ಟಿಪ್ಪು 1799 ಮೇ 4ರಂದು ಯುದ್ಧದಲ್ಲಿ ಮಡಿಯುತ್ತಾನೆ. ಟಿಪ್ಪುವಿನ ಕುಟುಂಬ ಸದಸ್ಯರು ಮತ್ತು ಆತನ ಪ್ರಮುಖ ಅಧಿಕಾರಿಗಳು ಬ್ರಿಟಿಷರಿಗೆ ಬೇಷರತ್ತು ಶರಣಾದರು, ಗೌರರ್ ಜನರಲ್ ಲಾರ್ಡ್‌ ಮಾರ್ನಿಂಗಟ್‌ನ್ನನು (ಲಾರ್ಡ್ ವೆಲ್ಲಸ್ಲಿ) ತಾನೆ ಖುದ್ದು ಶ್ರೀರಂಗಪಟ್ಟಣಕ್ಕೆ ತೆರಳಿ ಮೈಸೂರಿನ
ವ್ಯವಹಾರವನ್ನು ಇತ್ಯರ್ಥಗೊಳಿಸಲು ಆಲೋಚಿಸುತ್ತಾನೆ. ಅದರ ಪೂರ್ವ ಸಿದ್ಧತೆಗಾಗಿ ತನ್ನ ಆಪ್ತ ಕಾರ್ಯದರ್ಶಿ ಹೆನ್ರಿವೆಲ್ಲೆಸ್ಲಿ (ಲಾರ್ಡವೆಲ್ಲಸ್ಲಿಯ ಸ್ವಂತ ತಮ್ಮ) ಮತ್ತು ತನ್ನ ಮಿಲಿಟರಿ ಕಾರ್ಯದರ್ಶಿ ಕಿರ್ಕ್ ಪ್ಯಾಟ್ರಿಕ್ (Kirkpatrick) ಅವರನ್ನು ಸಲಹೆ ಮತ್ತು ಸೂಚನೆಗಳೊಂದಿಗೆ ಶ್ರೀರಂಗಪಟ್ಟಣಕ್ಕೆ ಕಳುಹಿಸಿಕೊಡುತ್ತಾನೆ.
ಅವರು ಶ್ರೀರಂಗಪಟ್ಟಣಕ್ಕೆ ಬಂದು ಜನರಲ್ ಹ್ಯಾರಿಸ್‌ಗೆ ಗೌರ್ನರ್ ಜನರೆಲ್ಲರ ಸಲಹೆ ಸೂಚನೆಗಳನ್ನು ತಿಳಿಸುತ್ತಾರೆ. ಈ ವೇಳೆಗಾಗಲೆ ಟಿಪ್ಪುವಿನ ಪ್ರಧಾನ ಸೇನಾಧಿಕಾರಿ ಖಮರುದ್ದಿನ್‌ ಬ್ರಿಟಿಷರಿಗೆ ಶರಣಾಗಿದ್ದನು. ಲಾರ್ಡ್ ಮಾರ್ನಿಂಗ್‌ಟನ್ನನು ಈಗಾಗಲೆ ಅವನಿಗೆ ಖುದ್ದು ಪತ್ರ ಬರೆದು ಆತನ ಬೇಷರತ್ತು ಶರಣಾಗಿರುವುದನ್ನು ಸ್ವಾಗತಿಸಿದ್ದನು.
ಹಾಗೂ ಆತನಿಗೆ ಆತನ ತಂದೆ ಹೊಂದಿದ್ದ ಗರಂಕೊಂಡ ಜಹಗೀರಿಯನ್ನು ಆತನಿಗೆ ನೀಡುವ ಭರವಸೆಯನ್ನು ಕೊಡುತ್ತಾನೆ. ಅಷ್ಟೇ ಅಲ್ಲದೆ ಟಿಪ್ಪುವಿನ ಅಧಿಕಾರಿಗಳಿಗೆಲ್ಲ ರಕ್ಷಣೆಯನ್ನು ನೀಡಿ ಅವರವರ ಅಂತಸ್ತಿಗೆ ತಕ್ಕಂತೆ ಜೀವನಾಂಶವನ್ನು ನೀಡಲಾಗುವುದೆಂದು ವೆಲ್ಲಸ್ಲಿ ಭರವಸೆ ನೀಡಿದ್ದನು.
ವಿಭಜನ ಆಯೋಗ ರಚನೆ

ಮೈಸೂರು ರಾಜ್ಯದ ಭವಿಷ್ಯವನ್ನು ಇತ್ಯರ್ಥಗೊಳಿಸಲು ತಾನೇ ಖುದ್ದು ಶ್ರೀರಂಗಪಟ್ಟಣಕ್ಕೆ ಹೋಗಬೇಕೆಂಬ ಆಲೋಚನೆಯನ್ನು ಲಾರ್ಡ್ ಮಾರ್ನಿಂಗ್‌ಟನ್ನನು ಕೈಬಿಡುತ್ತಾನೆ. ತಾನು ಮದ್ರಾಸಿನಲ್ಲಿದ್ದುಕೊಂಡು ಮುಂದಿನ ಬೆಳವಣಿಗೆಗಳನ್ನು ನಿಯಂತ್ರಿಸಲು ತೀರ್ಮಾನಿಸುತ್ತಾನೆ. ಆದುದರಿಂದ ಮೈಸೂರಿನ ಸಮಸ್ಯೆಗಳ ಇತ್ಯರ್ಥಕ್ಕೆ
ಗೌರ್ನರ್ ಜನರಲ್ ಒಂದು ಆಯೋಗವನ್ನು ರಚಿಸುತ್ತಾನೆ. ಅದರಲ್ಲಿ ಜನರಲ್ ಹ್ಯಾರಿಸ್, ಕರ್ನಲ್ ಆರ್ಥು‌ರ್ ವೆಲ್ಲೆಸ್ಲಿ, ಕರ್ನಲ್ ಕಿರ್ಕ್ ಪ್ಯಾಟ್ರಿಕ್ ಮತ್ತು ಲೇಫ್ಟಿನೆಂಟ್ ಕರ್ನಲ್ ಕ್ಲೋಸ್ ಅವರುಗಳನ್ನು ಸದಸ್ಯರನ್ನಾಗಿ ನೇಮಕ ಮಾಡಿದನು, ಕ್ಯಾಪ್ಟನ್ ಮ್ಯಾಲ್ಕಂ ಮತ್ತು ಥಾಮಸ್ ಮುನ್ರೋ ಅವರುಗಳನ್ನು ಜಂಟಿ ಕಾರ್ಯದರ್ಶಿಗಳನ್ನಾಗಿ ನೇಮಿಸಿದನು.
ಆಯೋಗ ನಿರ್ವಹಿಸಬೇಕಾದ ಜವಾಬ್ದಾರಿ ಕೆಲಸಗಳನ್ನು ಮತ್ತು ಅನುಸರಿಸಬೇಕಾದ ನೀತಿ ತತ್ತ್ವಗಳನ್ನು ಲಾರ್ಡ್ ವೆಲ್ಲೆಸ್ಲಿ ಸ್ಪಷ್ಟವಾಗಿ ತಿಳಿಸಿದ್ದನು. ಆಯೋಗವು 1799 ಜೂನ್ 8ರಂದು ಶ್ರೀರಂಗಪಟ್ಟಣದಲ್ಲಿ ತನ್ನ ಮೊದಲನೆ ಸಭೆಯನ್ನು ನಡೆಸುತ್ತದೆ. ಆಯೋಗದ ಸದಸ್ಯರು ಆಯೋಗದ ಕಲಾಪಗಳನ್ನು ಗುಪ್ತವಾಗಿ ಇಡುವುದಾಗಿ ಪ್ರಮಾಣ ವಚನ ತೆಗೆದುಕೊಳ್ಳುತ್ತಾರೆ.
ಗೌರ್ನರ್ ಜನರಲ್ ಲಾರ್ಡ್ ವೆಲ್ಲೆಸ್ಲಿಯ ಸೂಚನೆಯಂತೆ ಟಿಪ್ಪುವಿನ ಸೇನಾಧಿಕಾರಿಗಳ ಬಗ್ಗೆ ಆಯೋಗ ತೀರ್ಮಾನ ತೆಗೆದುಕೊಳ್ಳುತ್ತದೆ. ಟಿಪ್ಪುವಿನ ಪ್ರಧಾನ ದಂಡನಾಯಕ ಖಮರುದ್ದೀನನಿಗೆ ವರ್ಷಕ್ಕೆ ಸುಮಾರು 70,000 ಪಗೋಡಗಳ ವರಮಾನವಿರುವ ಗರಂಕೊಂಡವನ್ನು ಜಹಗೀರಿಯಾಗಿ ನೀಡುತ್ತದೆ. ಇದರಿಂದ ಸಂತಸಪಟ್ಟ ಖಮ್ರದ್ದೀನ್‌
ಬ್ರಿಟಿಷರಿಗೆ ತನ್ನ ಕೃತಜ್ಞತೆಗಳನ್ನು ತಿಳಿಸಿ 1799 ಜೂನ್ 19ರಂದು ಆತ ಶ್ರೀರಂಗಪಟ್ಟಣವನ್ನು ಬಿಟ್ಟು ಗರಂಕೊಂಡಕ್ಕೆ ನಿರ್ಗಮಿಸುತ್ತಾನೆ. ಟಿಪ್ಪುವಿನ ಇತರೆ ಮುಖ್ಯ ಅಧಿಕಾರಿಗಳಿಗೆ ಅವರು ಈ ಹಿಂದೆ ಟಿಪ್ಪುವಿನಿಂದ ಪಡೆಯುತ್ತಿದ್ದ ಸಂಬಳವನ್ನು ಮುಂದುವರಿಸಲು ಆಯೋಗ ತೀರ್ಮಾನಿಸಿತು.
ಅವರೆಲ್ಲರು ಸಂತೋಷಪಟ್ಟು ಕಂಪನಿ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತಾರೆ. ಹೀಗೆ ಟಿಪ್ಪುವಿನ ಅಧಿಕಾರಿಗಳಿಗೆ ಮಾನವಿ ದೃಷ್ಟಿಯಿಂದ ಪಿಂಚಣಿ ಮಂಜೂರು ಮಾಡಿ ಅವರನ್ನು ಅಯೋಗ ಸಮಧಾನಪಡಿಸುತ್ತದೆ. ಪರಿಣಾಮವಾಗಿ ಅವಾರಾರೂ ಕಂಪನಿ ಸರ್ಕಾರದ ಮೇಲಾಗಲಿ ಅಥವಾ ಮೈಸೂರು ಮಹಾರಾಜರ
ವಿರುದ್ಧವಾಗಲಿ ಬಂಡಾಯ ನಡೆಸಲಿಲ್ಲ. ಟಿಪ್ಪುವಿನ ಪದಾತಿ ಪಡೆಗಳ ಸೈನಿಕರನ್ನು ದಿವಾನ್ ಪೂರ್ಣಯ್ಯನವರು ಬಳಸಿಕೊಂಡು ಕಂದಾಚಾರ ಪೋಲಿಸ್ ಪಡೆಯನ್ನು ಕಟ್ಟುತ್ತಾರೆ. ಅವರೆಲ್ಲರು ಹೊಸ ಆಡಳಿತ ವ್ಯವಸ್ಥೆಯಿಂದ ಸಮಧಾನಗೊಂಡು ಹೊಸ ಸರ್ಕಾರದ ರಕ್ಷಣೆಗೆ ಕಟಿಬದ್ಧರಾಗಿ ನಿಲ್ಲುತ್ತಾರೆ.
ಟಿಪ್ಪುವಿನ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಫ್ರೆಂಚ್ ಸೈನಿಕರನ್ನು ಯುದ್ಧ ಖೈದಿಗಳೆಂದು ಪರಿಗಣಿಸಿ ಅವರನ್ನು ಮದ್ರಾಸ್‌ಗೆ ಕಳುಹಿಸಲಾಯಿತು. ಹೀಗೆ ಟಿಪ್ಪು ಸೈನ್ಯವನ್ನು ವಿಸರ್ಜಿಸಲಾಯಿತು.
ಯದುವಂಶದ ಆಳ್ವಿಕೆ ಪುನರ್ ಸ್ಥಾಪನೆಗೆ ತೀರ್ಮಾನ

ಹೈದರ್ ಅಲಿ ಮೈಸೂರು ರಾಜ್ಯವನ್ನು ಯದುವಂಶದವರಿಂದ ಅಪಹರಿಸಿ ಕೊಂಡಿರುವನೆಂದು ಹೇಳುತ್ತಾ ಆ ವಂಶದ ಅಭಿಮಾನಿಗಳು ರಾಜ್ಯಭಾರವನ್ನು ಆ ವಂಶಕ್ಕೆ ವಾಪಸ್‌ ಕೊಡಿಸಲು ಅವಿರತವಾಗಿ ಪ್ರಯತ್ನ ನಡೆಸುತ್ತಲೆ ಇದ್ದರು.
ಅಷ್ಟೇ ಅಲ್ಲದೆ 9ನೇ ಖಾಸಾ ಚಾಮರಾಜ ಒಡೆಯರು (1776-1796) ಬ್ರಿಟಿಷರಿಗೆ ಗುಪ್ತವಾಗಿ ಪತ್ರ ಬರೆದು ಟಿಪ್ಪು ತಮಗೆ ಅಪಾರವಾದ ಕಿರುಕುಳ ನೀಡುತ್ತಿರುವನೆಂದು ಹೇಳಿ ಆತನನ್ನು ನಿಗ್ರಹಿಸಿ ನಮಗೆ ನಮ್ಮ ರಾಜ್ಯವನ್ನು ವಾಪಸ್‌ ಪಡೆಯಲು ಸಹಾಯ ಮಾಡಬೇಕೆಂದು ಕೇಳಿಕೊಂಡಿದ್ದರು.
ಅದಕ್ಕೆ ಬ್ರಿಟಿಷ್ ಅಧಿಕಾರಿಗಳು ಸಹಾಯ ಮಾಡಲು ತಾತ್ವಿಕ ಒಪ್ಪಿಗೆ ನೀಡಿದ್ದರು. 9ನೇ ಚಾಮರಾಜ ಒಡೆಯರು ತೀರಿಕೊಂಡ ಬಳಿಕ ಮಹಾಮಾತೃ ಶ್ರೀ ಲಕ್ಷ್ಮಮ್ಮಣ್ಣಿಯವರು ಮದ್ರಾಸ್ ಸರ್ಕಾರದವರೊಡನೆ ಗುಪ್ತವಾಗಿ ಪತ್ರ ವ್ಯವಹಾರ ನಡೆಸುತ್ತಿದ್ದರು. ಅದಷ್ಟು ಬೇಗ ತಮ್ಮನ್ನು ಈ ಹಿಂಸಾಕೂಪದಿಂದ
ಬಿಡುಗಡೆಗೊಳಿಸಬೇಕೆಂದು ಅವರನ್ನು ಕೇಳಿಕೊಳ್ಳುತ್ತಿದ್ದರು. ಅದಕ್ಕಾಗಿ ಮಹಾಮಾತೃಶ್ರೀಯವರು ಬ್ರಿಟಿಷರಿಗೆ ಧನ ಸಹಾಯ ಮಾಡಲು ಒಪ್ಪಿಕೊಂಡಿದ್ದರು. ಹಾಗೆ ನಮ್ಮ ರಾಜ್ಯವನ್ನು ನಮಗೆ ಕೊಡಿಸಿದರೆ ನಮ್ಮ ಯದುವಂಶ ಕಂಪನಿ ಸರ್ಕಾರಕ್ಕೆ ಸದಾ ಚಿರಋಣಿಯಾಗಿರುವುದಾಗಿ ಮಹಾ ಮಾತೃಶ್ರೀಯವರು ಮದಾಸ್‌ ಸರ್ಕಾರಕ್ಕೆ ಪತ್ರದಲ್ಲಿ ತಿಳಿಸಿದ್ದರು.
ಗೌರ್ನರ್ ಜನರಲ್ ಲಾರ್ಡ್ ವೆಲ್ಲೆಸ್ಲಿಯು ಯದುವಂಶದವರ ಏಜೆಂಟರನ್ನು ಹಲವು ಸಾರಿ ಗುಪ್ತವಾಗಿ ಭೇಟಿ ಮಾಡಿದ್ದನು. ಯದುವಂಶದ ಪುನರ್ ಸ್ಥಾಪನೆ ಬಗ್ಗೆ ಲಾರ್ಡ್‌ವೆಲ್ಲಸ್ಲಿ 1799ರ ಜನವರಿಯಲ್ಲಿಯೇ ತನ್ನ ಅಧಿಕಾರಿಗಳ ಅಭಿಪ್ರಾಯವನ್ನು ಕೇಳಿ ತಿಳಿದುಕೊಂಡಿದ್ದನು.
ಅವರೆಲ್ಲರು ಹಿಂದೂ ರಾಜಕುಟುಂಬವನ್ನು ಮೈಸೂರಿನಲ್ಲಿ ಪುನರ್ ಸ್ಥಾಪಿಸುವುದು ಸೂಕ್ತವೆಂಬ ಅಭಿಪ್ರಾಯವನ್ನು ನೀಡಿದ್ದರು. ಅವರಲ್ಲಿ ಜೊಸಯ್ಯವೆಬ್ಬ ಎಂಬ ಬ್ರಿಟಿಷ್ ಅಧಿಕಾರಿ ವೆಲ್ಲಸಿಗೆ ಮನವಿ ಪತ್ರವನ್ನು ಬರೆದು ಅದರಲ್ಲಿ ಯದುವಂಶವನ್ನು ಮೈಸೂರು ಸಿಂಹಾಸನದ ಮೇಲೆ ಸ್ಥಾಪನೆ ಮಾಡಿದರೆ ರಾಜ್ಯದಲ್ಲಿ ಶೇ. 90ಕ್ಕೂ ಹೆಚ್ಚು ಜನಸಂಖ್ಯೆ ಇರುವ
ಹಿಂದೂಗಳನ್ನು ತೃಪ್ತಿಪಡಿಸಿದಂತಾಗುತ್ತದೆ. ಅವರೆಲ್ಲರು ಕಂಪನಿ ಸರ್ಕಾರದ ಬೆಂಬಲಿಗರಾಗುತ್ತಾರೆ ಎಂದು ಮನವಿಯಲ್ಲಿ ವಿವರಿಸಿದ್ದನು.

ಪೂರ್ಣಯ್ಯನವರು ಹೈದರ್ ಅಲಿ ಮತ್ತು ಟಿಪ್ಪು ಆಳ್ವಿಕೆಯಲ್ಲಿ ಅವರ ಅರ್ಥ ಸಚಿವರಾಗಿದ್ದರು. ಪೂರ್ಣಯ್ಯ ಮತ್ತು ಕೆಲವು ಧುರೀಣರು ರಾಜ್ಯವನ್ನು ಟಿಪ್ಪು ವಂಶಜರಿಗೆ ಬಿಟ್ಟುಕೊಡಬೇಕೆಂದು ಪ್ರತಿಪಾದಿಸಿದರು.
ಹೀಗೆ ಟಿಪ್ಪು ವಂಶಜರನ್ನು ರಾಜ್ಯದ ಮೇಲೆ ಪ್ರತಿಷ್ಠಾಪಿಸಿದರೆ ರಾಜ್ಯದ ಮುಸ್ಲಿಂರನ್ನು ಹಾಗೂ ಟಿಪ್ಪು ಅಭಿಮಾನಿಗಳನ್ನು ಸಂತಸಪಡಿಸಿದಂತಾಗುತ್ತದೆ ಎಂದು ಅವರು ವಾದಿಸಿದ್ದರು. ಪರಿಣಾಮವಾಗಿ ರಾಜ್ಯದಲ್ಲಿ ಶಾಂತಿ ನೆಲೆಸುವುದೆಂದು ಅವರು ಹೇಳಿದ್ದರು.

#ಸಮಗ್ರಆಧುನಿಕಮೈಸೂರುಚರಿತ್ರೆ 📖
ಗೌರ್ನರ್ ಜನರಲ್ ಲಾರ್ಡ್ ವೆಲ್ಲಸ್ನಿಯು ಎರಡು ವಾದಗಳನ್ನು ಕೇಳಿ ಪುರಾತನ ಹಿಂದೂ ಯದುವಂಶವನ್ನು ಮೈಸೂರು ಸಿಂಹಾಸನದ ಮೇಲೆ ಪ್ರತಿಷ್ಠಾಪಿಸುವುದು ಸೂಕ್ತವೆಂದು ಅಂತಿಮ ನಿರ್ಧಾರಕ್ಕೆ ಬರುತ್ತಾನೆ. ತನ್ನ ನಿರ್ಧಾರವನ್ನು 1799 ಮೇ 27ರಂದು ಆತ ಪ್ರಕಟಿಸುತ್ತಾನೆ.
ಪೂರ್ಣಯ್ಯನವರ ಬಿಚ್ಚು ಮನಸ್ಸಿನ ಮಾತುಗಳಿಗೆ ಮತ್ತು ಅವರ ಸಮಗ್ರತೆಗೆ ಮೆಚ್ಚಿ ಅವರನ್ನು ರಾಜ್ಯದ ಮೊದಲು ದಿವಾನರನ್ನಾಗಿ ನೇಮಕ ಮಾಡಲು ವೆಲ್ಲೆಸ್ಲಿ ತಿರ್ಮಾನಿಸುತ್ತಾನೆ. ಲಾರ್ಡ್ ವೆಲ್ಲಸ್ಲಿ ಯದುವಂಶವನ್ನು ಪುನಶ್ಚೇತನಗೊಳಿಸುವುದಕ್ಕೆ ಈ ಕೆಳಗಿನ ಅಂಶಗಳು ಕಾರಣವಾಗಿದ್ದವು.
ಲಾರ್ಡ್ ವೆಲ್ಲಸ್ಲಿಯು ಟಿಪ್ಪು ವಂಶಜರನ್ನು ಅಧಿಕಾರಕ್ಕೆ ತರಲು ಒಪ್ಪಲಿಲ್ಲ. ಅವನ ಪ್ರಕಾರ ಟಿಪ್ಪು ಬ್ರಿಟಿಷರ ಪರಮ ಶತ್ರುವಾಗಿದ್ದನು, ಅದೇ ಮನೋಭಾವ ಆತನ ಮಕ್ಕಳಲ್ಲಿಯು ಇರಬಹುದೆಂದು ವೆಲ್ಲೆಸ್ಲಿ ಊಹಿಸಿದನು. ಅವರನ್ನು ಅಧಿಕಾರಕ್ಕೆ ತಂದರೆ ನಾವುಗಳು ಶತ್ರುಗಳನ್ನು ಸಂಪೂರ್ಣವಾಗಿ ನಾಶಪಡಿಸಿದಂತಾಗುವುದಿಲ್ಲ.
ಮಿಗಿಲಾಗಿ ಟಿಪ್ಪುವಿನ ಉತ್ತರಾಧಿಕಾರಿಗಳು ಕುಗ್ಗಿದ ರಾಜ್ಯಕ್ಕೆ ಹಾಗೂ ಸಹಾಯಕ ಸೈನ್ಯ ಪದ್ಧತಿಗಳ ತತ್ವಕ್ಕೆ ಹೊಂದಿಕೊಳ್ಳದೆ ಹೋಗಬಹುದು. ನಿರಂಕುಶತ್ವ ರಾಜ್ಯಭಾರವನ್ನು ಅನುಭವಿಸಿದ ಅವರು ಸಾಮಂತಗಿರಿಯನ್ನು ಮುಂದೆ ಧಿಕ್ಕರಿಸಬಹುದೆಂದು ವೆಲ್ಲಸಿ ಭಾವಿಸಿದನು.
ಜೊತೆಗೆ ಅವರ ತಂದೆಯ ಕ್ರೂರ ಸಾವಿಗೆ ಬ್ರಿಟಿಷರೇ ಕಾರಣರೆಂದು ಭಾವಿಸಿ ನಮ್ಮ ಮೇಲೆ ಅವರಿಗೆ ಸೇಡಿನ ಮನೋಭಾವ ಬೆಳೆಯಬಹುದು.ಅದು ಮುಂದೆ ಅನಗತ್ಯ ಸಂಘರ್ಷಗಳಿಗೆ ದಾರಿ ಮಾಡಿಕೊಡಬಹುದೆಂದು ಲಾರ್ಡ್ ವೆಲ್ಲಿಸಿ ಮನಗಂಡನು.ಆದುದರಿಂದ ಟಿಪ್ಪು ವಂಶಜರನ್ನು ಮೈಸೂರು ರಾಜ್ಯಭಾರದ ಮೇಲೆ ಸ್ಥಾಪಿಸುವುದು ಸೂಕ್ತವಲ್ಲ ಎಂಬ ತೀರ್ಮಾನಕ್ಕೆ ವೆಲ್ಲೆಸ್ಲಿ ಬರುತ್ತಾನೆ.
ಟಿಪ್ಪು ವಂಶಸ್ಥರ ಬದಲು ಯದುವಂಶವನ್ನು ಅಧಿಕಾರಕ್ಕೆ ತರುವುದರಿಂದ ಕಂಪನಿ ಸರ್ಕಾರಕ್ಕೆ ಲಾಭವಾಗುತ್ತದೆ ಎಂಬುದು ಲಾರ್ಡ್ ವೆಲ್ಲೆಸ್ಲಿಯ ಅಭಿಪ್ರಾಯವಾಗಿತ್ತು. ಮೈಸೂರು ರಾಜ್ಯದಲ್ಲಿ ಹಿಂದುಗಳು ಬಹುಸಂಖ್ಯಾತರು. ಅವರು ಮೈಸೂರು ಯದುವಂಶದ ಆಳ್ವಿಕೆಯಲ್ಲಿ ಹಲವು ಶತಮಾನಗಳಿಂದ ಅವರ ಪ್ರಜೆಗಳಾಗಿದ್ದರು.
ಆ ವಂಶದ ರಾಜರುಗಳ ಮೇಲೆ ಜನರು ಅನನ್ಯ ಭಕ್ತಿ ಭಾವನೆಗಳನ್ನು ಹೊಂದಿರುವರು. ಮಿಗಿಲಾಗಿ ಹೈದರ್ ಅಲಿ ಮೈಸೂರು ಅರಸರ ಸೇವಕನಾಗಿದ್ದವನು. ಸಂದರ್ಭವನ್ನು ಬಳಸಿಕೊಂಡು ಆತ ಮೈಸೂರು ರಾಜ್ಯಾಧಿಕಾರವನ್ನು ಅಪಹರಿಸಿ ಕೊಂಡವನು. ಆತನ ನಂತರ ಆತನ ಮಗ ಟಿಪ್ಪು ರಾಜಮನೆತನವನ್ನು ಸಂಪೂರ್ಣವಾಗಿ ಕಡೆಗಣಿಸಿದವನು.
ಇದರಿಂದ ಸಮಸ್ತ ಹಿಂದೂ ಪ್ರಜೆಗಳು ರಾಜಮನೆತನದ ಹೀನ ಸ್ಥಿತಿಯನ್ನು ಕಂಡು ಮಮ್ಮಲ ಮರುಗುತ್ತಿರುವರು. ಜೊತೆಗೆ ತಮ್ಮನ್ನು ಈ ಹೀನಸ್ಥಿತಿಯಿಂದ ಬಿಡುಗಡೆಗೊಳಿಸುವಂತೆ ಮಹಾ ಮಾತೃಶ್ರೀ ಲಕ್ಷ್ಮಮ್ಮಣ್ಣಿಯವರು ಮದ್ರಾಸ್ ಸರ್ಕಾರವನ್ನು ಕೋರುತ್ತಲೆ ಇದ್ದರು. ಮದ್ರಾಸ್ ಸರ್ಕಾರದವರು ಅವರ ಕೋರಿಕೆಯನ್ನು ಪರಿಗಣಿಸುವ ಭರವಸೆಯನ್ನು ಕೊಡುತ್ತಿದ್ದರು.
ನಾಲ್ಕನೆ ಆಂಗ್ಲೋ-ಮೈಸೂರು ಯುದ್ಧಕ್ಕೆ ಮುನ್ನಾ ಲಾರ್ಡ್ ವೆಲ್ಲಸ್ಲಿಯು ಮಹಾ ಮಾತೃಶ್ರೀಯವರ ಏಜೆಂಟರನ್ನು ಗುಪ್ತವಾಗಿ ಭೇಟಿ ಮಾಡಿದ್ದನು. ಯುದ್ಧಕ್ಕೆ ಹಣ ಸಹಾಯ ಮಾಡಲು ಲಕ್ಷಮ್ಮಣ್ಣಿಯರು ಪ್ರಸ್ತಾಪಿಸಿದ್ದರು. ಈ ಎಲ್ಲಾ ಹಿನ್ನೆಲೆಗಳಿಂದ ಮೈಸೂರು ಯದುವಂಶವನ್ನು ಅಧಿಕಾರಕ್ಕೆ ತರುವುದು ಸೂಕ್ತವೆಂದು ಲಾರ್ಡ್ ವೆಲ್ಲ ತೀರ್ಮಾನಿಸುತ್ತಾನೆ.
ಆತನ ಪ್ರಧಾನ ಅಧಿಕಾರಿಗಳು ವೆಲ್ಲೆಸ್ಲಿಯ ಅಭಿಪ್ರಾಯ ಸರಿ ಎಂದು ಅನುಮೋದಿಸುತ್ತಾರೆ. ಹೀಗೆ ಮೈಸೂರು ಯದುವಂಶವನ್ನು ಅಧಿಕಾರಕ್ಕೆ ತಂದರೆ ಜೊಸಯ್ಯವೆಬ್ಬ ಹೇಳುವಂತೆ ಬಹುಸಂಖ್ಯಾತ ಹಿಂದುಗಳ ಭಾವನೆಗಳನ್ನು ಗೌರವಿಸಿದಂತಾಗುತ್ತದೆ. ಹಾಗೂ ಬಹುಸಂಖ್ಯಾತ ಹಿಂದುಗಳ ಬೆಂಬಲವನ್ನು ಕಂಪನಿ ಸರ್ಕಾರ ಪಡೆದುಕೊಳ್ಳಬಹುದೆಂದು
ಲಾರ್ಡ್ ವೆಲ್ಲೆಸ್ಲಿ ಮನಗಾಣುತ್ತಾನೆ. ರಾಜ್ಯದಲ್ಲಿ ಶಾಂತಿ ಸ್ಥಾಪನೆ ಸುಲಭವಾಗುತ್ತದೆ. ಎಂಬುದು ಆತನ ಅನಿಸಿಕೆಯಾಗಿತ್ತು. ಮಹಾಮಾತೃಶ್ರೀಯವರು ಹೇಳುವಂತೆ ಯದುವಂಶವು ಕಂಪನಿ ಸರ್ಕಾರಕ್ಕೆ ಚಿರಋಣಿಯಾಗಿ ಇರಬಲ್ಲದೆಂಬ ವಿಶ್ವಾಸಕ್ಕೆ ಗೌರ್ನರ್ ಜನರಲ್ ಲಾರ್ಡ್ ವೆಲ್ಲೆಸ್ಲಿ ಬರುತ್ತಾನೆ.
ಆದುದರಿಂದ ಲಾರ್ಡ್ ವೆಲ್ಲೆಸ್ಲಿ 1799 ಮೇ 27ರಂದು ಮೈಸೂರು ರಾಜ್ಯಭಾರದ ಮೇಲೆ ಯದುವಂಶವನ್ನು ಸ್ಥಾಪಿಸುವಂತೆ ತನ್ನ ಅಧಿಕಾರಿಗಳಿಗೆ ಹಸಿರು ನಿಶಾನೆ ತೋರಿಸುತ್ತಾನೆ.
ಮೈಸೂರು ವಿಭಜನೆ ಒಪ್ಪಂದ 1799 ಜೂನ್ 22

ವಿಭಜನೆ ಆಯೋಗವು ಟಿಪ್ಪು ಸುಲ್ತಾನನ ರಾಜ್ಯವನ್ನು ವಿಭಜಿಸಿ ಆ ಕುರಿತು ಒಂದು ಒಪ್ಪಂದವನ್ನು ಸಿದ್ಧಪಡಿಸುತ್ತದೆ. 1799ರ ಜೂನ್ 22ರಂದು ಏರ್ಪಟ್ಟ ಮೈಸೂರು ವಿಭಜನೆ ಒಪ್ಪಂದವು ತನ್ನದೇ ಆದ ಉದ್ದೇಶವನ್ನು ಹೊಂದಿತ್ತು. ಟಿಪ್ಪುವನ್ನು ಯುದ್ಧದಲ್ಲಿ ಮಣಿಸಿ ಆತನ ರಾಜ್ಯವನ್ನು ವಶಪಡಿಸಿಕೊಳ್ಳಲು ಭರಿಸಿದ
ಯುದ್ಧದ ಖರ್ಚನ್ನು ಈಸ್ಟ್ ಇಂಡಿಯ ಕಂಪನಿ ಮತ್ತು ಅದರ ಸಾಮಂತ ದೊರೆ ಹೈದ್ರಬಾದಿನ ನಿಜಾಂರಿಬ್ಬರು ನ್ಯಾಯಸಮ್ಮತವಾಗಿ ತುಂಬಿಸಿಕೊಳ್ಳುವುದು ಹಾಗೂ ಒಪ್ಪಂದದ ಭಾಗೀದಾರರು ಹೊಂದಿರುವ ಭೂ ಪ್ರದೇಶದ ಮೇಲೆ ಯುದ್ಧದಲ್ಲಿ ಮಣಿಸಿದ ಶತ್ರುಗಳಿಂದ ಮುಂದೆಂದೂ ಅಪಾಯ ಉಂಟಾಗದಂತೆ
ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವುದು ಈ ಒಪ್ಪಂದದ ಮೂಲೋದ್ದೇಶಗಳಾಗಿದ್ದವು. ಈ ಉದ್ದೇಶಗಳನ್ನು ಸಾಕಾರಗೊಳಿಸಿಕೊಳ್ಳಲು ಯುಕ್ತವಾದ ಅಂಶಗಳನ್ನು ಈ ಒಪ್ಪಂದದಲ್ಲಿ ತುಂಬಲಾಗಿತ್ತು. ಈ ವಿಭಜನೆ ಒಪ್ಪಂದವು 10 ಆರ್ಟಿಕಲ್‌ಗಳನ್ನು ಹಾಗೂ ನಾಲ್ಕು ಷೆಡ್ಯೂಲ್‌ಗಳನ್ನು ಹೊಂದಿತ್ತು.
ಆರ್ಟಿಕಲ್ - 1

ಟಿಪ್ಪುವನ್ನು ಮಣಿಸಿ ಆತನ ರಾಜ್ಯದಿಂದ ಗೆದ್ದುಕೊಂಡಿರುವ ಹಾಗೂ ಷೆಡ್ಯೂಲ್ 'ಎ'ನಲ್ಲಿ ನಮೂದಿಸಿರುವ ಜಿಲ್ಲೆಗಳು (=ಮಲಬಾರ್, ಧರ್ಮಪುರಂ, ಕೊಯಮತ್ತೂರು, ಕೆನರ, ವೈನಾಡು ಮತ್ತು ಶ್ರೀರಂಗಪಟ್ಟಣ) ಇನ್ನು ಮುಂದೆ ಈಸ್ಟ್ ಇಂಡಿಯ ಕಂಪನಿ ಸರ್ಕಾರದ ಪ್ರಭುತ್ವಕ್ಕೆ ಒಳಪಟ್ಟಿರುತ್ತವೆ.
ಕಂಪನಿ ಸರ್ಕಾರ ಆ ಜಿಲ್ಲೆಗಳಿಂದ ಅಥವಾ ಪ್ರದೇಶಗಳಿಂದ ಬರುವ ವರಮಾನದಿಂದ ಗತಿಸಿದ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನರ ಕುಟುಂಬ ಮತ್ತು ಅವರ ಸಂಬಂಧಿಕರುಗಳ ಜೀವನ ನಿರ್ವಹಣೆಗೆ ಯುಕ್ತವಾದ ಪಿಂಚಣಿಯನ್ನು ಒದಗಿಸತಕ್ಕದ್ದು, ಆ ಪಿಂಚಣಿ ಕನಿಷ್ಠ ಎರಡು ಲಕ್ಷಕ್ಕೆ ಕಡಿಮೆ ಇರಬಾರದು.
1792ರ ಟಿಪ್ಪು ಸುಲ್ತಾನನ ಲೆಕ್ಕ ಪುಸ್ತಕದ ಪ್ರಕಾರ ಷೆಡ್ಯೂಲ್ 'ಎ'ನಲ್ಲಿ ನಮೂದಿಸಿರುವ ಜಿಲ್ಲೆಗಳ ಒಟ್ಟು ವಾರ್ಷಿಕ ವರಮಾನ 7,77,170 ಕಂಠೀರಾಯ ಪಗೋಡಗಳೆಂದು ಕಂಡುಬಂದಿದೆ. ಆ ಮೊತ್ತದಲ್ಲಿ ಹೈದರ್ ಅಲಿ ಮತ್ತು
ಟಿಪ್ಪು ಸುಲ್ತಾನರ ಕುಟುಂಬ ಸದಸ್ಯರ ಜೀವನ ನಿರ್ವಹಣೆಗೆ 2,40,000 ಕಂಠೀರಾಯ ಪಗೋಡಗಳಿಗೆ ಅವಕಾಶ ಕಲ್ಪಿಸಿದೆ. ಉಳಿದ ಮೊತ್ತ 5,37,170 ಕಂಠೀರಾಯ ಪಗೋಡಗಳು ಕಂಪನಿ ಸರ್ಕಾರಕ್ಕೆ ಸೇರಿಲ್ಪಟ್ಟಿರುತ್ತದೆ ಎಂದು ಮೊದಲನೆ ಆರ್ಟಿಕಲ್ ಸ್ತುತಿಸುತ್ತದೆ. #ಆರ್ಟಿಕಲ್೧
ಆರ್ಟಿಕಲ್ 2

ಈ ಹಿಂದೆ ಟಿಪ್ಪು ಸುಲ್ತಾನ ರಾಜ್ಯಕ್ಕೆ ಸೇರಿದ್ದ ಹಾಗೂ ಷೆಡ್ಯೂಲ್ 'ಬಿ'ನಲ್ಲಿ ನಮೂದಿಸಿರುವ (ಗರಂಗೊಂಡ, ಗುತ್ತಿ ಮತ್ತು ಚಿತ್ರದುರ್ಗದಿಂದ ಕೋಲಾರದವರೆಗಿನ ಮೈಸೂರು ಗಡಿಪ್ರದೇಶಗಳು) ಜಿಲ್ಲೆಗಳು ಇನ್ನು ಮುಂದೆ ಹೈದರಾಬಾದಿನ ನಿಜಾಮನ ರಾಜ್ಯದ ಅವಿಭಾಜ್ಯ ಅಂಗಗಳೆಂದು ಘೋಷಿಸಲಾಗಿದೆ.
ಆದರೆ ನಿಜಾಮನು ಟಿಪ್ಪು ಸುಲ್ತಾನನ ಮುಖ್ಯ ಸೇನಾಧಿಕಾರಿ ಮಿರ್ ಖಮರುದ್ದೀನ್ ಖಾನ್ ಬಹದ್ದೂರನಿಗೆ ಹಾಗೂ ಆತನ ಕುಟುಂಬ ನಿರ್ವಹಣೆಗೆ ಕನಿಷ್ಠ 70,000 ಕಂಠೀರಾಯ ಪಗೋಡ ವರಮಾನ ಬರುವ ಜಹಗೀರಿಯನ್ನು ಗರಂಗೊಂಡ ಜಿಲ್ಲೆಯಲ್ಲಿ ಬಿಟ್ಟುಕೊಡಬೇಕು.
1792ರ ಟಿಪ್ಪು ಸುಲ್ತಾನನ ಕಂದಾಯ ಪುಸ್ತಕದ ಪ್ರಕಾರ ಷೆಡ್ಯೂಲ್ 'ಬಿ'ನಲ್ಲಿ ನಮೂದಿಸಿರುವ ಜಿಲ್ಲೆಗಳ ಒಟ್ಟು ವಾರ್ಷಿಕ ವರಮಾನ 6,07,332 ಕಂಠೀರಾಯ ಪಗೋಡಗಳೆಂದು ಕಂಡುಬಂದಿರುತ್ತದೆ.
ಅದರಲ್ಲಿ ಮಿರ್ ಖಮರುದ್ದೀನ್ ಖಾನನನಿಗೆ ನೀಡಿರುವ ಜಹಗೀರಿಯಲ್ಲಿನ ವರಮಾನ 70,000 ಕಂಠೀರಾಯ ಪಗೋಡಗಳು ಆಗಿದ್ದು ಅದನ್ನು ತೆಗೆದುಹಾಕಿದರೆ ಉಳಿದ ಮೊತ್ತ 5,37,332 ಕಂಠೀರಾಯ ಪಗೋಡಗಳು ನಿಜಾಮನ ಗಳಿಕೆಯಾಗಿರುತ್ತದೆ ಎಂದು ಎರಡನೆ ಆರ್ಟಿಕಲ್ ತಿಳಿಸುತ್ತದೆ. #ಆರ್ಟಿಕಲ್೨
ಆರ್ಟಿಕಲ್ - 3

ಶಾಂತಿ ಮತ್ತು ನೆಮ್ಮದಿಗಾಗಿ ಹಾಗೂ ತಾವು ಈ ಒಪ್ಪಂದದನ್ವಯ ರೂಪಿಸಿರುವ ಹೊಸ ವ್ಯವಸ್ಥೆಯ ಸಂರಕ್ಷಣೆಗಾಗಿ ಒಪ್ಪಂದದ ಭಾಗೀದಾರರು (contracting Parties) ಕಂಪನಿ ಸರ್ಕಾರದ ಸುಬರ್ಧಿಗೆ ಶ್ರೀರಂಗಪಟ್ಟಣ ದ್ವೀಪವನ್ನು
ಹಾಗೂ ಅದರೊಳಗಿರುವ ಕೋಟೆ ಕೊತ್ತಲಗಳನ್ನು ಬಿಟ್ಟುಕೊಟ್ಟಿರುತ್ತಾರೆ. ಅವುಗಳು ಎಂದೆಂದಿಗೂ ಕಂಪನಿ ಸಾರ್ವಭೌಮತ್ವದ ವ್ಯಾಪ್ತಿಗೆ ಒಳಪಟ್ಟಿರುತ್ತದೆ. ಕೋಟಿ ಒಳಗೆ ಬ್ರಿಟಿಷರು ಸಬ್ಸಿಡಿಯಿರಿ ಪಡೆಯನ್ನು ಸ್ಥಾಪಿಸಲು ಸೂಚಿಸಲಾಗಿದೆ. #ಆರ್ಟಿಕಲ್೩
ಆರ್ಟಿಕಲ್ -4

ಮೈಸೂರಿನಲ್ಲಿ ಪ್ರತ್ಯೇಕ ಸರ್ಕಾರವನ್ನು ಸ್ಥಾಪಿಸಬೇಕು. ಆ ಕಾರಣಕ್ಕಾಗಿ ಮೈಸೂರು ರಾಜ ಕುಟುಂಬದ ವಂಶಸ್ಥರಾದ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರನ್ನು ಈ ಮುಂದೆ ತಿಳಿಸಿರುವ ಭೂ ಪ್ರದೇಶದ ಮೇಲೆ ಹಾಗೂ ಈ ಮುಂದೆ ತಿಳಿಸಿರುವ ನಿಬಂಧನೆಗಳೊಂದಿಗೆ ಸ್ಥಾಪಿಸಲು ಒಪ್ಪಿಕೊಳ್ಳಲಾಗಿದೆ. #ಆರ್ಟಿಕಲ್೪
ಆರ್ಟಿಕಲ್ -5

ಈ ಹಿಂದೆ ಆಕ್ರಮಿಸಿದ ಹಾಗೂ ಷೆಡ್ಯೂಲ್ 'ಸಿ'ನಲ್ಲಿ ನಮೂದಿಸಿರುವ (=ಇವತ್ತಿನ ಜಿಲ್ಲೆಗಳಾದ ಶಿವಮೊಗ್ಗ, ಚಿತ್ರದುರ್ಗ, ಚಿಕ್ಕಮಗಳೂರು, ತುಮಕೂರು, ಕೋಲಾರ, ಮೈಸೂರು, ಹಾಸನ ಮತ್ತು ಚಾಮರಾಜನಗರ ಜಿಲ್ಲೆಯ ಪ್ರದೇಶಗಳು)
ಜಿಲ್ಲೆಗಳನ್ನು ಮೈಸೂರು ಮಹಾರಾಜ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರಿಗೆ ಒಪ್ಪಿಸಿ ಪ್ರತ್ಯೇಕ ಸರ್ಕಾರವನ್ನು ಮೈಸೂರಿನಲ್ಲಿ ಈ ಮುಂದೆ ತಿಳಿಸಿರುವ ಷರತ್ತುಗಳನ್ವಯ ಸ್ಥಾಪಿಸಲು ಒಪ್ಪಂದದ ಪಕ್ಷಿಗರು ಒಪ್ಪಿರುತ್ತಾರೆ ಎಂದು ಒಪ್ಪಂದ 5ನೇ ನಿಯಮಾವಳಿ ತಿಳಿಸುತ್ತದೆ. #ಆರ್ಟಿಕಲ್೫
ಆರ್ಟಿಕಲ್ -6

ಮೊದಲನೆ ಆರ್ಟಿಕಲ್‌ನಲ್ಲಿ ತಿಳಿಸಿರುವಂತೆ ಕಂಪನಿ ಸರ್ಕಾರ ಕಾಲಕಾಲಕ್ಕೆ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನರ ಕುಟುಂಬ ಮತ್ತು ಅವರ ಸಂಬಂಧಿಕರುಗಳು ಜೀವನ ನಿರ್ವಹಣೆಗೆ ನಿಗದಿಪಡಿಸಿರುವ ಹಣವನ್ನು ಒದಗಿಸುತ್ತಿರಬೇಕು. ಅವರ ಕುಟುಂಬದ ಸದಸ್ಯರಲ್ಲಿ ಯಾರಾದರು ತೀರಿಕೊಂಡರೆ ಅಥವಾ ಕುಟುಂಬದವರು ಕಂಪನಿ
ಸರ್ಕಾರ ಹೈದರಾಬಾದಿನ ನಿಜಾಮನ ವಿರುದ್ಧ ಬಂಡಾಯ ಅಥವಾ ಅವರ ಶತ್ರುಗಳಾದರೆ ಅಥವಾ ಮೈಸೂರು ರಾಜ್ಯದ ಶಾಂತಿಗೆ ಧಕ್ಕೆ ಉಂಟುಮಾಡುವ ಪ್ರಯತ್ನ ಮಾಡಿದರೆ ಅಂಥಹವರಿಗೆ ತಲಬನ್ನು ಅಮಾನತ್ತುಗೊಳಿಸುವುದು ಇಲ್ಲವೆ ಕಡಿತಗೊಳಿಸುವುದು ಇಲ್ಲವೆ ತಲಬನ್ನು ಸಂಪೂರ್ಣವಾಗಿ ನಿಲ್ಲಿಸುವ ಸ್ವಾತಂತ್ರ್ಯ ಈಸ್ಟ್ ಇಂಡಿಯ ಕಂಪನಿ ಸರ್ಕಾರಕ್ಕೆ ಇರುತ್ತದೆ. #ಆರ್ಟಿಕಲ್೬
ಆರ್ಟಿಕಲ್ -7

ಪೇಶ್ವರಾವ್‌ ಪಂಡಿತ್ ಬಹದ್ದೂರ್ ಅವರು ನಾಲ್ಕನೆ ಮೈಸೂರು ಯುದ್ಧದಲ್ಲಿ ಭಾಗವಹಿಸಿರಲಿಲ್ಲ ಹಾಗೂ ಯುದ್ಧದ ಖರ್ಚಿನಲ್ಲಿ ಒಂದಿಷ್ಟನ್ನು ಸಹ ಆತ ಭರಿಸಿರಲಿಲ್ಲ. ಕಂಪನಿ ಸೇನೆ ಮತ್ತು ಹೈದರಬಾದಿನ ಸೇನೆಗಳೇ ಟಿಪ್ಪುವನ್ನು ಕೊಂದು ಶ್ರೀರಂಗಪಟ್ಟಣವನ್ನು ಗೆದ್ದುಕೊಂಡಿದ್ದವು.
ಆದುದರಿಂದ ಶ್ರೀರಂಗಪಟ್ಟಣದಲ್ಲಿ ಬ್ರಿಟಿಷರಿಗೆ ಸಿಕ್ಕಿದ ಸೂರೆಯಲ್ಲೇ ಆಗಲಿ ಅಥವಾ ವಶಕ್ಕೆ ಪಡೆದುಕೊಂಡ ಟಿಪ್ಪುವಿನ ಭೂಪ್ರದೇಶಗಳಲ್ಲೇ ಆಗಲಿ ಪಾಲು ಕೇಳುವ ನೈತಿಕ ಹಕ್ಕನ್ನು ಪೇಶ್ವೆ ಹೊಂದಿರಲಿಲ್ಲ. ಆದರೂ ಉತ್ತಮ ಸಂಬಂಧ ಮತ್ತು ಸ್ನೇಹವನ್ನು ಮರಾಠರೊಡನೆ ವೃದ್ಧಿಸಿಕೊಳ್ಳಲು
ಮಿತ್ರ ಪಕ್ಷದವರು (ಕಂಪನಿ ಸರ್ಕಾರ, ಹೈದರಬಾದಿನ ನಿಜಾಮ ಮತ್ತು ಮೈಸೂರಿನ ಮಹಾರಾಜ) ಷೆಡ್ಯೂಲ್ 'ಡಿ'ನಲ್ಲಿ ನಮೂದಿಸಿದ್ದ ಕೆಲವು ಜಿಲ್ಲೆಗಳನ್ನು (ಹರಪನಹಳ್ಳಿ, ಸೊಂದ, ಆನೆಗುಂದಿ ಮತ್ತು ಕೆಲವು ಕೋಟೆಗಳು) ಪೇಶ್ವೆಗೆ ಒಪ್ಪಿಸಲು ಮೇಲೆ ಹೇಳಿದ ಪಕ್ಷಿಗರು ಒಪ್ಪಿಕೊಂಡಿರುತ್ತಾರೆ ಎಂದು 7ನೇ ಆರ್ಟಿಕಲ್ ತಿಳಿಸುತ್ತಿತ್ತು.
ಆದರೆ ಹೈದರಬಾದ ಮತ್ತು ಮೈಸೂರು ಸಂಸ್ಥಾನಗಳಂತೆ ಮರಾಠ ಪೇಶ್ವೆಯು ಸಹ ಕಂಪನಿ ಸರ್ಕಾರ ರೂಪಿಸಿರುವ ಸಹಾಯಕ ಸೈನ್ಯ ಪದ್ಧತಿಗೆ ಸಹಿ ಹಾಕಿ ಕಂಪನಿ ಸರ್ಕಾರ ಮತ್ತು ಅದರ ಮಿತ್ರ ಸಂಸ್ಥಾನಗಳ ಮಿತ್ರನಾಗಬೇಕೆಂದು ಷರತ್ತು ಹಾಕಲಾಗಿದೆ. ಈ ಷರತ್ತನ್ನು ಒಪ್ಪಿಕೊಂಡು
ಸಹಾಯಕ ಸೈನ್ಯಪದ್ಧತಿಗೆ ಪೇಶ್ವೆ ಸಹಿ ಹಾಕಿದರೆ ಆತನಿಗಾಗಿ
ಮೀಸಲಿಟ್ಟಿರುವ ಹಾಗೂ 'ಡಿ' ಷೆಡ್ಯೂಲ್‌ನಲ್ಲಿ ನಮೂದಿಸಿರುವ ಪ್ರದೇಶಗಳು ಪೇಳ್ವೆಗೆ ಬಿಟ್ಟು ಕೊಡಲಾಗುವುದೆಂದು ಆರ್ಟಿಕಲ್ ತಿಳಿಸುತ್ತಿತ್ತು. ಈ ಹಿನ್ನೆಲೆಯಲ್ಲಿ ಪೇಶ್ವೆಯನ್ನು ಮೈಸೂರು ವಿಭಜನೆ
ಒಪ್ಪಂದದೊಳಗೆ ಸೇರ್ಪಡೆಯಾಗುವಂತೆ ಈ ಆರ್ಟಿಕಲ್ ಪೇಶ್ವೆಗೆ ಆಹ್ವಾನ ನೀಡಿತ್ತು. ಪೇಶ್ವೆ ಒಪ್ಪಂದಕ್ಕೆ ಸೇರ್ಪಡೆಗೊಳ್ಳಲು ಔಪಚಾರಿಕ ಪತ್ರ ತಲುಪಿದ ಒಂದು ತಿಂಗಳೊಳಗೆ ತೀರ್ಮಾನಿಸಬೇಕೆಂದು ಆರ್ಟಿಕಲ್ 7 ಹೇಳುತ್ತಿತ್ತು.

#ಆರ್ಟಿಕಲ್೭
ಆರ್ಟಿಕಲ್ -8

ಮರಾಠ ಪೇಶ್ವೆ ಆರ್ಟಿಕಲ್ 7ರಲ್ಲಿ ತಿಳಿಸಿರುವ ಒಪ್ಪಂದಕ್ಕೆ ಸೇರಲು ನಿರಾಕರಿಸಿದರೆ ಆತನಿಗಾಗಿ ಮೀಸಲಿಟ್ಟ ಜಿಲ್ಲೆಗಳು ಆತನ ಕೈತಪ್ಪಿ ಹೋಗುತ್ತವೆ. ನಂತರ ಆ ಜಿಲ್ಲೆಗಳನ್ನು ಕಂಪನಿ ಸರ್ಕಾರ ಮತ್ತು ನಿಜಾಮರಿಬ್ಬರ ನಡುವೆ ಹಂಚಿಕೆಯಾಗಬೇಕು ಎಂದು ಆರ್ಟಿಕಲ್ 8 ಹೇಳುತ್ತಿತ್ತು. #ಆರ್ಟಿಕಲ್೮
ಆರ್ಟಿಕಲ್ -9

ಮೈಸೂರಿನಲ್ಲಿ ಮಹಾರಾಜ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಸರ್ಕಾರವನ್ನು ಪರಿಣಾಮಕಾರಿಯಾಗಿ ಸ್ಥಾಪಿಸಲು ಮಹಾರಾಜರ ರಕ್ಷಣೆಗೆ ಬ್ರಿಟಿಷ್ ಸಬ್ಸಿಡಿಯರಿ ಸೇನೆ ಸದಾ ಅವರ ಬೆಂಬಲಕ್ಕೆ ನಿಯೋಜಿಸಬೇಕು. ಆ ಕುರಿತು ಕಂಪನಿ ಸರ್ಕಾರ ಮಹಾರಾಜರೊಡನೆ ಕೂಡಲೆ ಪ್ರತ್ಯೇಕ ಒಪ್ಪಂದವನ್ನು ಏರ್ಪಡಿಸಿಕೊಳ್ಳಬೇಕೆಂದು #ಆರ್ಟಿಕಲ್೯ ಸೂಚಿಸುತ್ತದೆ.
ಆರ್ಟಿಕಲ್ - 10

ಈ ಒಪ್ಪಂದವು 10 ಆರ್ಟಿಕಲ್‌ಗಳನ್ನು ಹೊಂದಿದೆ ಮತ್ತು ಒಪ್ಪಂದವನ್ನು ಉಭಯ ಪಕ್ಷಿಗರು ಈ ದಿನ ಅಂದರೆ 1799 ಜೂನ್ 22ರಂದು ಒಪ್ಪಿ ಸಹಿ ಮಾಡಿರುತ್ತಾರೆ ಎಂದು ಆರ್ಟಿಕಲ್ 10 ತಿಳಿಸುತ್ತದೆ. ಮೇಲಿನ ಒಪ್ಪಂದಕ್ಕೆ ಗೌರ್ನರ್ ಜನರಲ್ ಲಾರ್ಡ್‌ ವೆಲ್ಲೆಸ್ಲಿ ಪರವಾಗಿ 1799 ಜೂನ್‌ 22ರಂದು
ವಿಭಜನ ಆಯೋಗದ ಸದಸ್ಯರು ಸಹಿ ಹಾಕಿದರೆ ನಿಜಾಮನ ಪರವಾಗಿ ಮೀರ್ ಅಲಂ ಸಹಿ ಮಾಡಿದನು. ಒಪ್ಪಂದವನ್ನು ಗೌರ್ನರ್ ಜನರಲ್ ಲಾರ್ಡ್ ವೆಲ್ಲೆಸ್ಲಿ ಅದೇ ತಿಂಗಳು 26ರಂದು ಮದ್ರಾಸ್‌ನಲ್ಲಿ ಅನುಮೋದನೆ ಮಾಡಿದರೆ ನಿಜಾಮನು 1799 ಜುಲೈ 13ರಂದು ಹೈದರಬಾದಿನಲ್ಲಿ ಅನುಮೋದನೆ ಮಾಡಿದನು.
#ಆರ್ಟಿಕಲ್೧೦
ಮೈಸೂರು ವಿಭಜನ ಒಪ್ಪಂದ ಜಾರಿ

ಮೈಸೂರು ವಿಭಜನ ಒಪ್ಪಂದದ ಎಲ್ಲಾ ನಿಯಾಮವಳಿಗಳನ್ನು (ಆರ್ಟಿಕಲ್) ತ್ವರಿತವಾಗಿ ಜಾರಿಗೆ ತರಲಾಗುತ್ತದೆ. ಆರ್ಟಿಕಲ್ 7ರಲ್ಲಿ ಹೇಳಿರುವ ಷರತ್ತನ್ನು ಮರಾಠ ಪೇಶ್ವೆ ಒಪ್ಪಲು ನಿರಾಕರಿಸುತ್ತಾನೆ.
ತತ್ಪರಿಣಾಮವಾಗಿ ಆತನಿಗಾಗಿ ಕಾಯ್ದಿರಿಸಿದ ಜಿಲ್ಲೆಗಳು ಕಂಪನಿ ಸರ್ಕಾರ ಮತ್ತು ಹೈದರಬಾದಿನ ನಿಜಾಮ ಅವರಿಬ್ಬರ ನಡುವೆ ಹಂಚಿಕೆ ಮಾಡಿಕೊಳ್ಳಲಾಗುತ್ತದೆ.
ವಿಭಜನ ಒಪ್ಪಂದದ ಅತಿ ಮುಖ್ಯವಾದ ವಿಷಯವೆಂದರೆ ಪ್ರತ್ಯೇಕ ಮೈಸೂರು ರಾಜ್ಯವನ್ನು ಸ್ಥಾಪಿಸುವುದಾಗಿತ್ತು. ಅದನ್ನು ಸಹ ಅತಿ ಶೀಘ್ರದಲ್ಲಿ ಕಾರ್ಯರೂಪಕ್ಕೆ ತರಲಾಗುತ್ತದೆ. ವಿಭಜನ ಒಪ್ಪಂದದ ಪ್ರಕಾರ ಶ್ರೀರಂಗಪಟ್ಟಣವನ್ನು ಬ್ರಿಟಿಷ್ ಸೇನಾ ನೆಲೆಗೆ ಬಿಟ್ಟುಕೊಟ್ಟಿದ್ದರಿಂದ ರಾಜ್ಯದ ರಾಜಧಾನಿಯನ್ನು ಶ್ರೀರಂಗಪಟ್ಟಣದಿಂದ ಮೈಸೂರಿಗೆ ವರ್ಗಾಯಿಸಲಾಯಿತು.
ಪ್ರತ್ಯೇಕ ಮೈಸೂರು ರಾಜ್ಯ ಸ್ಥಾಪನೆ

ವಿಭಜನ ಒಪ್ಪಂದದ 4ನೇ ಮತ್ತು 5ನೇ ಆರ್ಟಿಕಲ್‌ಗಳ ಪ್ರಕಾರ ಪ್ರತ್ಯೇಕ ಮೈಸೂರು ರಾಜ್ಯ ಪುನರ್ ಸ್ಥಾಪನೆಗೆ ಕ್ರಮ ತೆಗೆದುಕೊಳ್ಳಲಾಗುತ್ತದೆ. ಪಡ್ಯೂಲ್ 'ಸಿ'ನಲ್ಲಿ ನಮೂದಿಸಿದ್ದ ಜಿಲ್ಲೆಗಳನ್ನು ಒಳಗೊಂಡ ಮೈಸೂರು ರಾಜ್ಯ ಸ್ಥಾಪನೆಯಾಗುತ್ತದೆ.
ಅದು ಇಂದಿನ ಜಿಲ್ಲೆಗಳಾದ ಚಿತ್ರದುರ್ಗ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ತುಮಕೂರು, ಕೋಲಾರ, ಮಂಡ್ಯ ಮತ್ತು ಮೈಸೂರು ಜಿಲ್ಲೆಗಳನ್ನು ಒಳಗೊಂಡಿತ್ತು. ಹೀಗೆ ಸೃಜಿಸಿದ ಮೈಸೂರು ರಾಜ್ಯವು ಗೌರ್ನರ್ ಜನರಲ್ ಲಾರ್ಡ್ ವೆಲ್ಲೆಸ್ಲಿ ಸೂಚಿಸಿದಂತೆ ಟಿಪ್ಪು ರಾಜ್ಯದ ತಿರುಳು ಭಾಗವಾಗಿತ್ತು.
ಈ ರಾಜ್ಯವನ್ನು ಬ್ರಿಟಿಷರ ಆಶ್ರಿತ ರಾಜ್ಯವೆಂದು ಕರೆಯಲಾಯಿತು. ನೂತನ ಮೈಸೂರು ರಾಜ್ಯದ ಅಂದಿನ ಒಟ್ಟು ವಾರ್ಷಿಕ ಆದಾಯ ಸುಮಾರು 25 ಲಕ್ಷ ಸ್ಟಾರ್ ಪಗೋಡ ಅಥವಾ 13,74,076 ಕಂಠೀರಾಯ ಪಗೋಡಗಳೆಂದು ಹೇಳಲಾಗಿದೆ. ಈ ರಾಜ್ಯದ ಮೇಲೆ ಯದುವಂಶದ
ವಂಶಜರಾದ ಮುಮ್ಮಡಿ ಕೃಷ್ಣರಾಜ ಒಡೆಯರನ್ನು ಪ್ರತಿಷ್ಠಾಪಿಸಲು ಕಂಪನಿ ಸರ್ಕಾರ ತೀರ್ಮಾನಿಸುತ್ತದೆ. ಕಂಪನಿ ಸರ್ಕಾರದ ತೀರ್ಮಾನವನ್ನು ಅಧಿಕೃತವಾಗಿ ಮಹಾಮಾತೃ ಶ್ರೀ ಲಕ್ಷ್ಮಮ್ಮಣ್ಣಿಯವರಿಗೆ ವಿಭಜನೆ ಆಯೋಗದ ಸದಸ್ಯರು ಖುದ್ದು ಹೋಗಿ ತಿಳಿಸುವಂತೆ ಗೌರರ್ ಜನರಲ್ ಲಾರ್ಡ್ ವೆಲ್ಲೆಸ್ಲಿ ಅಪ್ಪಣೆಯಾಗಿತ್ತು.
ಮಹಾಮಾತೃಶ್ರೀಯರನ್ನು ಭೇಟಿ ಮಾಡಿದ ಆಯೋಗದ ಸದಸ್ಯರು

ಬ್ರಿಟಿಷ್ ಆಶ್ರಿತ ಮೈಸೂರು ಸಂಸ್ಥಾನದ ಮೇಲೆ ಯದುವಂಶದ ವಂಶಜ ಮುಮ್ಮಡಿ ಕೃಷ್ಣರಾಜ ಒಡೆಯರನ್ನು ಸ್ಥಾಪಿಸಲು ತೀರ್ಮಾನಿಸಿದ ಕಂಪನಿ ನಿರ್ಣಯವನ್ನು ಮಹಾಮಾತೃ ಶ್ರೀ ಲಕ್ಷ್ಮಮ್ಮಣ್ಣಿಯವರಿಗೆ ಅಧಿಕೃತವಾಗಿ ತಿಳಿಸಲು ವಿಭಜನ ಆಯೋಗದ ಸದಸ್ಯರು
1799 ಜೂನ್ 6 ರಂದು ಶ್ರೀರಂಗಪಟ್ಟಣದಲ್ಲಿ ಅವರ ವಾಸದ ಮನೆಗೆ ತೆರಳಿದರು. ಬಾಲ ದೊರೆ ನಂಜರಾಜ್ ಒಡೆಯರು (=ಮುಮ್ಮಡಿ ಕೃಷ್ಣರಾಜ ಒಡೆಯರು) ರಾಜ ಯೋಗ್ಯವಾದ ಆಸನದ ಮೇಲೆ ಕುಳಿತಿದ್ದರು. ರಾಜರ ಸೋದರಮಾವಂದಿರಾದ ನಂದಿರಾಜಯ್ಯ ನಿಯೋಗದ ಸದಸ್ಯರನ್ನು ಗೌರವ ಪೂರ್ವಕವಾಗಿ ಬರಮಾಡಿಕೊಂಡರು.
ಮಹಾ ಮಾತೃಶ್ರೀಯವರು ತೆರೆಯ ಮರೆಯಲ್ಲಿ ಇತರೆ ಅರಮನೆ ಸ್ತ್ರೀಯರೊಂದಿಗೆ ಕುಳಿತುಕೊಂಡಿದ್ದರು. ನಿಯೋಗದ ಹಿರಿಯ ಸದಸ್ಯರಾದ ಜನರಲ್ ಹ್ಯಾರಿಸ್ ಅವರು ತೆರೆಯ ಹಿಂದೆ ಕುಳಿತಿದ್ದ ಮಹಾಮಾತೃಶ್ರೀಯವರನ್ನು ಕುರಿತು, ನೀವು ನಿಮ್ಮ ವಂಶ ಪಾರಂಪರ್ಯದಿಂದ ಸಿಂಹಾಸನಾರೂಢರಾಗಿ ದೊರೆತನವನ್ನು ಮಾಡಿಕೊಂಡು ಬಂದವರು.
ನಾವು ನಿಮ್ಮ ವೃತ್ತಾಂತವನ್ನೆಲ್ಲಾ ವಿಸ್ತಾರವಾಗಿ ವಿಚಾರಿಸಿದ್ದೇವೆ. ನಿಮಗೆ ಒದಗಿದ್ದ ಕಷ್ಟ ಕಾರ್ಪಣ್ಯಗಳನ್ನು ಕಂಪನಿ ಸರ್ಕಾರದವರು ತಿಳಿದುಕೊಂಡಿದ್ದಾರೆ. ಇನ್ನು ಮುಂದೆ ಆ ಯೋಚನೆಯನ್ನು ಬಿಟ್ಟು ಸಂತೋಷವಾಗಿ ಇರಬೇಕು. ದೇವರ ಅನುಗ್ರಹದಿಂದ ನಿಮ್ಮ ಮನೋರಥ ಈಡೇರುವ ಕಾಲ ಕೂಡಿ ಬಂದಿದೆ.
ನಿಮ್ಮ ವಂಶದ ಈ ಕುಮಾರರು ಪ್ರಭುವಾಗಿ ರಾಜ್ಯಭಾರ ಮಾಡುವ ಸುಯೋಗವು ಈಗ ಆಗಮಿಸಿದೆ ಎಂದು ಕಂಪನಿ ಸರ್ಕಾರದ ತೀರ್ಮಾನವನ್ನು ಮಹಾಮಾತೃಶ್ರೀ ಲಕ್ಷ್ಮಮ್ಮಣಿಯವರಿಗೆ ಉರ್ದುವಿನಲ್ಲಿ ವಿವರಿಸಿ ಹೇಳಿದರು.
ಜನರಲ್ ಹ್ಯಾರಿಸನ ಮಾತುಗಳನ್ನು ಹಾಗೂ ಕಂಪನಿ ಸರ್ಕಾರದ ತೀರ್ಮಾನವನ್ನು ಸಂತೋಷದಿಂದ ಸ್ವಾಗತಿಸುತ್ತಾ ಮಹಾಮಾತೃಶ್ರೀಯವರು ಹೀಗೆ ಹೇಳಿದರು "ನಮ್ಮನ್ನು ನಮ್ಮ ವಂಶದವರನ್ನು ದುಃಖ ಕೂಪದಿಂದ ಬಿಡುಗಡೆಗೊಳಿಸಿ ಪುನಃ ರಾಜ್ಯದಲ್ಲಿ ನೆಲಗೊಳಿಸಿರುವುದಕ್ಕಾಗಿ ನಾವು ಕಂಪನಿ ಸರ್ಕಾರದವರಿಗೆ ಯಾವಾಗಲೂ ಕೃತಜ್ಞರಾಗಿರುತ್ತೇವೆ"
ಎಂಬುದಾಗಿ ಅರಮನೆಯವರ ಸ್ತ್ರೀಯರ ಮೂಲಕ ಆ ನಿಯೋಗಕ್ಕೆ ಉರ್ದು ಭಾಷೆಯಲ್ಲಿ ತಿಳಿಯಪಡಿಸಿದರು. ಅನಂತರ ಅವರಿಗೆ ಯಥೋಚಿತವಾದ ಮರ್ಯಾದೆಗಳನ್ನು ಮಾಡಿ ಕಳುಹಿಸಿಕೊಟ್ಟರು. ನಿಯೋಗದಲ್ಲಿ ದಿವಾನ್ ಪೂರ್ಣಯ್ಯನವರು ಇದ್ದರು.
ಯದುವಂಶದ ಕುಡಿ ನಂಜರಾಜಯ್ಯ ನವರನ್ನು ಸಿಂಹಾಸನದ ಮೇಲೆ ಪ್ರತಿಷ್ಠಾಪಿಸಲು ಕಂಪನಿ ಸರ್ಕಾರ ತೀರ್ಮಾನಿಸಿರುವುದರಿಂದ ಕುಮಾರರ ಪಟ್ಟಾಭಿಷೇಕಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳುವಂತೆ ನಿಯೋಗವು ಮಹಾ ಮಾತೃಶ್ರೀಯವರಿಗೆ ತಿಳಿಸಿ ಅಲ್ಲಿಂದ ವಿರಮಿಸುತ್ತದೆ.
ಪಟ್ಟಾಭಿಷೇಕಕ್ಕೆ ಸಿದ್ಧತೆ

ಬಾಲಕ ನಂಜರಾಜ ಒಡೆಯರ್ ಅವರಿಗೆ ಪಟ್ಟಾಭಿಷೇಕ ಜೂನ್ 30ರಂದು ನಡೆಯತಕ್ಕದೆಂದು ತೀರ್ಮಾನವಾಗುತ್ತದೆ. ಆದರೆ ಪಟ್ಟಾಭಿಷೇಕ ಯಾವ ಸ್ಥಳದಲ್ಲಿ ನಡೆಸಬೇಕೆಂಬುದರ ಬಗ್ಗೆ ವಿವಾದಗಳು ಉಂಟಾಗುತ್ತವೆ. ಅವರಿಗೆ ಶ್ರೀರಂಗಪಟ್ಟಣ, ಬೆಂಗಳೂರು ಮತ್ತು ಮೈಸೂರು ಮೂರು ಸ್ಥಳಗಳ ಆಯ್ಕೆ ಇದ್ದವು.
ಶ್ರೀರಂಗಪಟ್ಟಣ ಮತ್ತು ಬೆಂಗಳೂರಿನಲ್ಲಿ ಪಟ್ಟಾಭಿಷೇಕ ನಡೆಸಲು ಒಂದಲ್ಲ ಒಂದು ನ್ಯೂನ್ಯತೆಗಳಿದ್ದವು. ಕೊನೆಗೆ ಮೈಸೂರು ಸೂಕ್ತ ಜಾಗವೆಂದು ತೀರ್ಮಾನಿಸಲಾಯಿತು.
ದಿವಾನ್ ಪೂರ್ಣಯ್ಯನವರು ಮೈಸೂರು ಕೋಟೆಯೊಳಗಿನ ಲಕ್ಷ್ಮೀರಮಣ ಸ್ವಾಮಿ ದೇವಾಲಯದ ಮುಂದೆ ಪಟ್ಟಾಭಿಷೇಕ ಮಂಟಪವನ್ನು ನಿರ್ಮಿಸಿದರು. ಪಟ್ಟಾಭಿಷೇಕಕ್ಕೆ ಬೇಕಾದ ಸಕಲ ಸಾಮಗ್ರಿಗಳನ್ನು ಸಜ್ಜುಗೊಳಿಸಿದರು. ಅತಿಥಿಗಳಿಗೆ ಪ್ರೇಕ್ಷಕರಿಗೆ ಆಸನಗಳ ವ್ಯವಸ್ಥೆಯನ್ನು ಮಾಡಲಾಯಿತು.
ಮೈಸೂರು ಕೋಟೆಯೊಳಗೆ ಮಹಾರಾಜರು ತಂಗುವುದಕ್ಕೆ ಯೋಗ್ಯ ಮನೆ ಇರಲಿಲ್ಲ. ಆದುದರಿಂದ ಪಟ್ಟಾಭಿಷೇಕಕ್ಕೆ ನಿಯೋಜಿಸಿದ್ದ ಮಹಾರಾಜರು ಮಹಾಮಾತೃ ಶ್ರೀ ಲಕ್ಷ್ಮಮ್ಮಣ್ಣಿಯವರು ಮತ್ತು ಇತರೆ ರಾಜಕುಟುಂಬದವರು ಮೈಸೂರು ಕೋಟೆಗೆ ಸಮೀಪ ಇರುವ
ನಜರ್‌ಬಾದ್ ಕೋಟೆಯ ಅರಮನೆಯಲ್ಲಿ ಒಂದು ದಿನ ಮುಂಚಿತವಾಗಿ ಬಂದು ಇಳಿದುಕೊಳ್ಳಲು ಸೂಕ್ತ ವ್ಯವಸ್ಥೆ ಮಾಡಲಾಯಿತು. ಇತರೆ ಅಧಿಕಾರಿಗಳು ಹಾಗೂ ಅರಸು ಕುಟುಂಬದವರಿಗೆ ಮೈಸೂರು ಕೋಟೆಯೊಳಗೆ ಬಿಡಾರಗಳನ್ನು ನಿರ್ಮಿಸಲಾಗಿತ್ತು.

#ಸಮಗ್ರಆಧುನಿಕಮೈಸೂರುಚರಿತ್ರೆ

• • •

Missing some Tweet in this thread? You can try to force a refresh
 

Keep Current with ಸುನಿಲ್🌱

ಸುನಿಲ್🌱 Profile picture

Stay in touch and get notified when new unrolls are available from this author!

Read all threads

This Thread may be Removed Anytime!

PDF

Twitter may remove this content at anytime! Save it as PDF for later use!

Try unrolling a thread yourself!

how to unroll video
  1. Follow @ThreadReaderApp to mention us!

  2. From a Twitter thread mention us with a keyword "unroll"
@threadreaderapp unroll

Practice here first or read more on our help page!

More from @KannadigaSunill

Oct 29, 2020
ಬೇಂದ್ರೆ ಅಜ್ಜ ೪ ನೇ ತರಗತಿಯಲ್ಲಿರುವಾಗ ಕನ್ನಡ ಕುಲಪುರೋಹಿತರಾದ ಆಲೂರು ವೆಂಕಟರಾಯರು ಅವ್ರಿಗೆ ಶಿಕ್ಷಕರಾಗಿದ್ರಂತೆ.

ಎಷ್ಟು ಚಂದ.😍🙏
ಬೇಂದ್ರೆ ಅಜ್ಜನ ಕಾಲದ ಮನರಂಜನೆ ಹೇಗಿತ್ತು..?

ಅಜ್ಜ ಹೀಗ್ ಬರೀತಾರೆ...

೧.
ಶಂಕರಾಚಾರ್ಯರ
ಸೌಂದರ್ಯ ಲಹರಿ
ಗಂಗಾ ಲಹರಿ
ಭಾಮಿನಿ ವಿಲಾಸ
ಗೀತಾ ಗೋವಿಂದಗಳನ್ನ ಕೇಳೋದು.

೨.
ಊರಳಗಿನ ವಿಠೋಬ ದೇವರ ಗುಡಿ,
ದತ್ತಾತ್ರೇಯ ಗುಡಿಯ ಕೀರ್ತನ
ಪುರಾಣ ಪ್ರವಚನಗಳು.

೩.
ಶಿರಹಟ್ಟಿ ನಾಟಕ ಕಂಪನಿ ಪ್ರಯೋಗಗಳು
ಮರಾಠಿ ನಾಟಕದ ಪ್ರಭಾವ.
೪.
ಮನೆಯಲ್ಲಿ ತಾಯಿ ಅಂಬಾ ಬಾಯಿಯವರು ಹೇಳ್ತಾ ಇದ್ದ ಉದಯರಾಗದ ಭಕ್ತಿ ಗೀತೆಗಳು , ಪಾರಂಪರಿಕ ಹಾಡುಗಳು, ದಾಸರ ಕೀರ್ತನೆಗಳು ನನ್ನ ಚಿತ್ತವನ್ನ ಬೆಳಗಿದವು ಅಂತ ಬರೀತಾರೆ.

ಮಹನೀಯರ ಮನರಂಜನೆ ಹೀಗಿದ್ವು
ಅದಿಕ್ಕೆ ಅವ್ರು ಮುಗಿಲೆತ್ತರದ ಸಾಧನೆ ಮಾಡುದ್ರು.🙏🙏🙏

#ಬೇಂದ್ರೆಅಜ್ಜ 🙏
Read 181 tweets
Oct 1, 2020
ಶ್ರೀರಾಮಚಂದ್ರ ಪ್ರಭುವಿನ ವಂಶವೃಕ್ಷ

ಮಾಹಿತಿ ಸಂಗ್ರಹ: ಶರತ್ ವಿಶ್ವಕರ್ಮ ಅವ್ರು
ಕೃಪೆ: ಶಿವರಾಜ ಅವ್ರು

• ಬ್ರಹ್ಮನ ಮಗ ಮರೀಚಿ
• ಮರೀಚಿಯ ಮಗ ಕಾಶ್ಯಪ
• ಕಾಶ್ಯಪರ ಮಗ ಸೂರ್ಯ
• ಸೂರ್ಯನ ಮಗ ಮನು
• ಮನುವಿನ ಮಗ ಇಕ್ಷ್ವಾಕು
• ಇಕ್ಷ್ವಾಕುವಿನ ಮಗ ಕುಕ್ಷಿ
• ಕುಕ್ಷಿಯ ಮಗ ವಿಕುಕ್ಷಿ
• ವಿಕುಕ್ಷಿಯ ಮಗ ಬಾಣ
• ಬಾಣನ ಮಗ ಅನರಣ್ಯ
1/n
• ಅನರಣ್ಯನ ಮಗ ಪೃಥು
• ಪೃಥುವಿನ ಮಗ ತ್ರಿಶಂಕು
• ತ್ರಿಶಂಕುವಿನ ಮಗ ದುಂಧುಮಾರ.(ಯುವನಾಶ್ವ)
• ದುಂಧುಮಾರುವಿನ ಮಗ ಮಾಂಧಾತ
• ಮಾಂಧಾತುವಿನ ಮಗ ಸುಸಂಧಿ
• ಸುಸಂಧಿಯ ಮಗ ಧೃವಸಂಧಿ
• ಧೃವಸಂಧಿಯ ಮಗ ಭರತ
• ಭರತನ ಮಗ ಅಶೀತಿ
• అಶೀತಿಯ ಮಗ ಸಗರ
• ಸಗರನ ಮಗ ಅಸಮಂಜಸ*
• ಅಸಮಂಜಸನ ಮಗ ಅಂಶುಮಂತ
• ಅಂಶುಮಂತನ ಮಗ ದಿಲೀಪ
2/n
• ದಿಲೀಪನ ಮಗ ಭಗೀರಥ
• ಭಗೀರಥನ ಮಗ ಕಕುತ್ಸು
• ಕಕುತ್ಸುವಿನ ಮಗ ರಘು
• ರಘುವಿನ ಮಗ ಪ್ರವುರ್ಧ
• ಪ್ರವುರ್ಧನ ಮಗ ಶಂಖನು
• ಶಂಖನುವಿನ ಮಗ ಸುದರ್ಶನ
• ಸುದರ್ಶನನ ಮಗ ಅಗ್ನಿವರ್ಣ
• ಅಗ್ನಿವರ್ಣನ ಮಗ ಶೀಘ್ರವೇದ
• ಶೀಘ್ರವೇದನ ಮಗ ಮರು
• ಮರುವಿನ ಮಗ ಪ್ರಶಿಷ್ಯಕ
• ಪ್ರಶಿಷ್ಯಕನ ಮಗ ಅಂಬರೀಶ
• ಅಂಬರೀಶನ ಮಗ ನಹುಶ
3/n
Read 11 tweets
Sep 19, 2020
ಸಧ್ಯದ ಓದು - ನೃಪತುಂಗ
ಲೇಖಕ : ತರಾಸು ಅವ್ರು ( ತಳಕು ರಾಮಸ್ವಾಮಯ್ಯ ಸುಬ್ಬರಾಯ ಅವ್ರು ) 🙏

"ರಾಷ್ಟ್ರಕೂಟ ಚಕ್ರವರ್ತಿ ಅಮೋಘವರ್ಷ ನೃಪತುಂಗ.
ಕಾವೇರಿಯಿಂದ ಗೋದಾವರಿ ಪರ್ಯಂತದ ನಾಡನ್ನು ಸುಮಾರು ಅರವತ್ತು ವರ್ಷ ಧರ್ಮದಿಂದ ಪಾಲಿಸಿ, ದೇಶ ವಿದೇಶಗಳಲ್ಲೂ ಪ್ರಸಿದ್ಧನಾಗಿದ್ದ ದೊರೆ."
#ನೃಪತುಂಗ #ತರಾಸು ImageImage
"ಸುಖವಾಗಲಿ ದುಃಖವಾಗಲಿ ಒಂಟಿಯಾಗಿ ಬರುವುದಿಲ್ಲ, ಇಲ್ಲದಾಗ ಇಲ್ಲ, ಬರುವಾಗ ಹಿಂಡುಹಿಂಡಾಗಿ ಹುಣ್ಣಿಮೆಯ ಮಧ್ಯರಾತ್ರಿ ಏರಿ ಏರಿ ಬರುವ ಕಡಲ ಅಲೆಗಳಂತೆ ಬರುತ್ತವೆ."
#ನೃಪತುಂಗ #ತರಾಸು
ತಾವಾಗಿ ಯಾರೂ ಯುದ್ಧಕ್ಕೆ ರಕ್ತಪಾತಕ್ಕೆ ಹಾತೊರೆಯಬಾರದು.ಅಂಥ ಅಧರ್ಮ ಯುದ್ಧ ಇಹಪರರ ವೈರಿ.ಆದರೆ ಪ್ರಜಾ ಪಾಲನೆಗೆ ಅಗತ್ಯವಾದ ಯುದ್ಧಕ್ಕೆ ಹಿಂಜರಿಯುವ ಅರಸನನ್ನು ರಾಜ್ಯಲಕ್ಷ್ಮಿ ಹೇಸಿ ದೂರವಾಗುತ್ತಾಳೆ.ನಿಗ್ರಹಯೋಗ್ಯನಾದ ಶತ್ರುವನ್ನಾಗಲಿ,ದುಷ್ಟ ಪುತ್ರನನ್ನಾಗಲಿ ಸಮಾನವಾಗಿ ನಿಗ್ರಹಿಸಿ,ಪ್ರಜಾ ಪರಿಪಾಲನೆ ಮಾಡುವ ದೊರೆಯೇ ಸಮಂಜಸನು. #ನೃಪತುಂಗ
Read 29 tweets
Jul 12, 2020
✍️ ನಾಗಾರ್ಜುನ್ ಶರ್ಮ & ಕಿನ್ನಲ್ ರಾಜ್ ಅವ್ರು 🤗

ಮರಳಿ ಮನಸಾಗಿದೆ
ಸಾಗಿದೆ ನಿನ್ನಾ ಹೃದಯಕೆ
ಪಯಣ ಶುರುವಾಗಿದೆ
ಕೋರಿದೆ ಪ್ರೀತಿ ಕಾಣಿಕೆ

ಮತ್ತೆ ಮತ್ತೆ ಮನಸು ಶರಣಾದ ಹಾಗಿದೆ
ಕಿರು ಬೆರಳು ಬಯಸಿದೆ ಸಲುಗೆ
ಇರಬೇಕು ಜೊತೆಯಾಗಿ ನಿನ್ನಲಿ......ನಾ 🎶🎶🎶
ಮಿಂಚುತ್ತಿದೆ ಮಿಂಚುತ್ತಿದೆ
ನಿನ್ನಿಂದ ಕನಸೆಲ್ಲಾ ಹೆಚ್ಚುತ್ತಿದೆ
ಮಿಂಚುತ್ತಿದೆ.....ಇದು ಮಿಂಚುತ್ತಿದೆ
ಹೃದಯಕೆ ಬಿರುಸಾಗಿ ಬಂತು ಕಣೆ

ಮರಳಿ ಮನಸ್ಸಾಗಿದೆ
ಸಾಗಿದೆ ನಿನ್ನಾ ಹೃದಯಕೆ
ಪಯಣ ಶುರುವಾಗಿದೆ
ಕೋರಿದೆ ಪ್ರೀತಿ ಕಾಣಿಕೆ...🎶🎶🎶
ಸಂಭ್ರಮ ದುಪ್ಪಟ್ಟು ಆದಂತ್ತಿದೆ
ನೀನೊಂಥರಾ ನಯನಾದ್ಭುತ
ಆಗಮ.. ಉಸಿರೊಂದು ಉಸಿರಾಗಿದೆ
ತಪ್ಪಾದರೆ ಬಚ್ಚಾಯಿಸು, ಪ್ರೀತಿಲಿ ಗುರಾಯಿಸು
ಹಗಲೆ ಹಗೆಯಾದ ಈ ಜೀವಕೆ
ಬೆಳಕು ನೀನಾಗಿಯೆ
ಬದುಕು ಕುರುಡಾದ ಈ ಮೋಸಕೆ
ಉಸಿರು ನೀನಾಗಿಯೆ..🎶🎶🎶
Read 4 tweets
Jul 12, 2020
#ಕಾಯ್ಕಿಣಿ_ಸಾಲುಗಳು

ಅರೆರೆ ಶುರುವಾಯಿತು ಹೇಗೆ
ಪದವೇ ಸಿಗದಾಯಿತು ಹೇಗೆ
ಹೃದಯ ಕಳುವಾಯಿತು ಹೇಗೆ
ಒಂದೂ ಮಾತು ಆಡದೆ

ಮೊದಲೇ ಬೆಳಗಾಯಿತು ಹೇಗೆ
ಕನಸೇ ಎದುರಾಯಿತು ಹೇಗೆ
ಋತುವೇ ಬದಲಾಯಿತು ಹೇಗೆ
ಹಿಂದೆ ಮುಂದೆ ನೋಡದೆ..🎶
ಕಣ್ಣಲ್ಲೇ ನೂರು ಮಾತು
ಆಡುತ ಮುಂದೆ ಕೂತು
ಜೀವದಲಿ ಛಾಪು ಹೀಗೆ ಬೀರಿಲ್ಲ ಇನ್ಯಾರು

ಆಗಿದೆ ಜೀವ ಹೂವು
ಆದರೂ ಏನೋ ನೋವು
ಭಾವಗಳ ಕಾಟ ಹೀಗೆ ನೀಡಿಲ್ಲ ಇನ್ಯಾರು..🎶🎶

#ಕಾಯ್ಕಿಣಿ_ಸಾಲುಗಳು
ತಂಗಾಳಿ ಬೀಸೋವಾಗ
ಎಲ್ಲೆಲ್ಲೂ ನಿಂದೇ ಮಾರ್ದನಿ
ಗುಟ್ಟಾಗಿ ಕೂಡಿಸಿಟ್ಟ
ಈ ಪ್ರೀತಿ ಒಂದೇ ಠೇವಣಿ

ನೀನಿಲ್ಲೆ ಇದ್ದರೂ ಅಂತರಂಗದಿ ಚಿತ್ರ ಮೂಡಿದೆ
ಈ ಜೀವ ನಿನ್ನನು ಸಂತೆಯಲ್ಲಿಯೂ ಪತ್ತೆಮಾಡಿದೆ
ನಾ ಹೇಗೆ ಇರಲಿ ಹೇಳು ನೀನು ಮುದ್ದು ಮಾಡದೆ.🎶
Read 4 tweets

Did Thread Reader help you today?

Support us! We are indie developers!


This site is made by just two indie developers on a laptop doing marketing, support and development! Read more about the story.

Become a Premium Member ($3/month or $30/year) and get exclusive features!

Become Premium

Don't want to be a Premium member but still want to support us?

Make a small donation by buying us coffee ($5) or help with server cost ($10)

Donate via Paypal

Or Donate anonymously using crypto!

Ethereum

0xfe58350B80634f60Fa6Dc149a72b4DFbc17D341E copy

Bitcoin

3ATGMxNzCUFzxpMCHL5sWSt4DVtS8UqXpi copy

Thank you for your support!

Follow Us on Twitter!

:(