ಇವತ್ತು ಬೆಳಿಗ್ಗೆ ಅಪ್ಪ, ಅಮ್ಮ ಅಂಕೋಲೆಯಿಂದ ವಾಪಸ್ ಬರ್ತಾ ಇದ್ರು, ಮೆಜೆಸ್ಟಿಕ್ ರೈಲ್ವೆ ಸ್ಟೇಷನ್ ಗೆ ಕರ್ಕೊಂಡು ಬರೋಕೆ ಹೋದಾಗ, ಫ್ಲ್ಯಾಟ್ ಫಾರಂ ಇಂದ ಲಗೇಜ್ ಎತ್ಕೊಂಡು ಕಾರ್ ತನಕ ಬಂದ ಕೂಲಿ ಇವರು.
ಅವರ ವಯಸ್ಸು ಸುಮಾರು ಅರವತ್ತಾಗಿದೆ ಎನಿಸಿ, ನಾನೇ ಎರಡು ಬ್ಯಾಗ್ ತಗೊಂಡ್ರೂ ಬೇಡ, ಅಪ್ಪ ದುಡ್ಡು ಕೊಟ್ಟಿದಾರೆ 1/7
ಶಕ್ತಿ ಇದೆ, ಇದು ನನ್ನ ಕೆಲಸ ಅಂತ ಬ್ಯಾಗ್ ಕೊಡಲ್ಲಿಲ್ಲ. ಬಲವಂತವಾಗಿ ಎರಡೂ ಬ್ಯಾಗ್ ತಗೊಂಡೆ. ಅಷ್ಟರಲ್ಲಿ ಫ್ಲ್ಯಾಟ್ ಫಾರಂ ಇಂದ ಹೊರಗಿನ ತನಕ ಮಾತಾಡಿ ಅವರನ್ನ ಸಾಕಷ್ಟು ಪರಿಚಯ ಮಾಡ್ಕೊಂಡಿದ್ದ ಅಪ್ಪ ಹೇಳಿದ್ರು, ಅವರು ಮಂಗಳೂರವರು, ಹೆಸ್ರು ಶಂಕರ ಭಟ್, ಮತ್ತೆ ಅವರು ಸಾಮಾನ್ಯ ಅಲ್ಲ, ನೀನೇ ಅವರ ಮಕ್ಕಳ ಬಗ್ಗೆ ಕೇಳು ಅಂದಾಗ
2/7
ಮೊದಲಿಗೆ ತಲೆಗೆ ಬಂದದ್ದು ಬಹುಶಃ ಮಕ್ಕಳು ಅಪ್ಪನ ಸರಿ ಇಟ್ಕೊಂಡಿಲ್ಲ, ಹಾಗಾಗಿ ಕೂಲಿ ಕೆಲಸ ಮಾಡಿ ಬದುಕಬೇಕಾಗಿದೆಯೇನೋ ಅಂತ. ಏನು ವಿಷಯ ಅಂತ ಅವರ ಕಡೆ ನೋಡಿದ್ರೆ, ಮುಖದಲ್ಲಿ ಹೆಮ್ಮೆ ಇತ್ತು. ಖುಷಿಯಿಂದ ಹೇಳಿದ್ರು, "ಇಬ್ರು ಗಂಡು ಮಕ್ಳು ನಂಗೆ, ದೊಡ್ಡವನು ಸೂರತ್ಕಲ್ ಮೆಡಿಕಲ್ ಕಾಲೇಜ್ ಅಲ್ಲಿ MBBS ಮುಗ್ಸಿ MD ಮಾಡ್ತಿದಾನೆ
3/7
ಚಿಕ್ಕವನು ಕೂಡ MBBS ಎರಡನೇ ವರ್ಷ" ಕಣ್ಣಲ್ಲಿ ಹೊಳಪು, ಮಕ್ಕಳ ಬಗೆಗಿನ ಕನಸು ಎದ್ದು ಕಾಣ್ತಾ ಇತ್ತು.
ಮತ್ತೆ ನೀವು ಕೂಲಿ ಕೆಲಸ ಅಂದೆ, ನನಗೆ ವಿದ್ಯೆ ಇಲ್ಲ, ಬೇರೆ ಕೆಲಸ ಗೊತ್ತಿಲ್ಲ, ಬೆಂಗಳೂರು ಅನ್ನ ಕೊಡ್ತು, ಮಕ್ಕಳು ಕಷ್ಟ ಪಟ್ಟು ಸ್ಕಾಲರ್ಷಿಪ್ ಪಡೆದು ಓದಿದ್ರು, ಇನ್ನೆರಡು ವರ್ಷ ಹೀಗೆ ಕಷ್ಟ ಪಟ್ರೆ ಸಾಕು
4/7
ಮುಂದೆ ಎಲ್ಲಾ ಒಳ್ಳೇದಾಗುತ್ತೆ ಅಂದ್ರು. ನಂಗೆ ಮಾತು ಬರಲ್ಲಿಲ್ಲ, ಹೌದು ಒಳ್ಳೇದಾಗುತ್ತೆ ಬಿಡಿ ಅಂದೆ, ಅವರದೊಂದು ಪೋಟೋ ತಗೊಂಡೆ. ಲಗೇಜ್ ಗಳನ್ನ ನ ಕಾರಲ್ಲಿ ಇಟ್ಟು, ಅಪ್ಪ ಮತ್ತೆ ಇನ್ನೊಂದಿಷ್ಟು ದುಡ್ಡು ಕೊಡ್ಲಾ ಅಂದ್ರೆ, ಹೇಯ್ ಮಾತಾಡಿದಷ್ಟು ಕೊಟ್ಟಿದಿರಲ್ಲಾ, ಸಾಕು ಅಂತ ಪಟ ಪಟ ನಡೆದೆ ಬಿಟ್ರು. ಒಂಥರ ಬ್ಲ್ಯಾಂಕ್ ಮನಸ್ಥಿತಿಲಿ ನಾನು
5/7
ಕಾರ್ ಸ್ಟಾರ್ಟ್ ಮಾಡುವಾಗ ಅನಿಸ್ತು, ಛೇ, ಬರೀ ಪೋಟೋ ತಗೊಂಡೆ, ಮೆಡಿಕಲ್ ಓದೋದು ಅಂದ್ರೆ ಖರ್ಚು ಕಡಿಮೆನಾ, ಏನಾದ್ರೂ ಸಹಾಯದ ಅವಶ್ಯಕತೆ ಇದ್ದಾಗ ಕೇಳಿ ಅಂತ ನನ್ನ ನಂ. ಕೊಡಬೇಕಿತ್ತು ಅಂತ ಅಲ್ಲೇ ಕಾರ್ ನಿಲ್ಲಿಸಿ, ಅವರು ಹೋದ ಕಡೆ ಓಡಿದೆ, ಎಲ್ಲೂ ಕಾಣಲೇ ಇಲ್ಲ. ನೋ ಪಾರ್ಕಿಂಗ್ ಜಾಗ, ಈಗಾಗಲ್ಲ ಮತ್ತೊಮ್ಮೆ ಬಿಡುವು ಮಾಡ್ಕೊಂಡು
6/7
ರೈಲ್ವೇ ಸ್ಟೇಷನ್ ಗೆ ಹೋಗಿ ಹುಡುಕಿ ನಂ ತಗೊಂಡು ಬರಬೇಕು ಅಂತ ವಾಪಸ್ ಬಂದೆ. ಮೆಜೆಸ್ಟಿಕ್ ರೈಲ್ವೇ ಸ್ಟೇಷನ್ ಗೆ ಹೋದಾಗ ನಿಮಗ್ಯಾರಿಗಾದ್ರೂ ಸಿಕ್ರೆ ಮಾತಾಡಿಸಿ ಅವರಿಗೆ ಒಳ್ಳೇದಾಗಲಿ ಮುಂದಿನ ಬದುಕು ನೆಮ್ಮದಿಯಿಂದ ಇರುವಂತಾಗಲಿ ಎನ್ನುವ ಎಲ್ಲರ ಶುಭ ಹಾರೈಕೆ ಆ ಅಪ್ಪ ಮಕ್ಕಳ ಕಾಯಲಿ🙏🏽 #Raghavendra_Naik ಅವರ #FB ಇಂದ 🙏🏽
7/7
• • •
Missing some Tweet in this thread? You can try to
force a refresh