#ಕರುನಾಡಿನಹುಲಿ
#ಮೈಲಾರಮಹಾದೇವಪ್ಪ
#ಜಯಂತಿ

ಗಾಂಧಿಯನ್ನು ಮತ್ತು ಆತನ ಅಹಿಂಸಾ ಮಾರ್ಗವನ್ನು ನಂಬಿ ಬಂದವರು ಅದೆಷ್ಟು ಲಕ್ಷವೋ...

ಬ್ರಿಟಿಷರಿಂದ ಗಾಂಧಿ ಮತ್ತು ಆತನ ಹತ್ತಿರದ ಸಂಗಡಿಗರಿಗೆ ಕೂದಲು ಕೂಡ ಸೊಂಕದಿದ್ದರೂ ಗಾಂಧಿಯೇ ದೇವರು ಎಂದು ನಂಬಿದ್ದ ಎಷ್ಟೋ ಅಮಾಯಕ ಜೀವಗಳು ದೇಶಕ್ಕಾಗಿ ಪ್ರಾಣವನ್ನೇ ತೆತ್ತರು.

ಗಾಂಧಿಯ ಪ್ರಸಿದ್ಧ ImageImage
ದಂಡಿ ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿದ ಕರ್ನಾಟಕದ ಏಕೈಕ ಪ್ರತಿನಿಧಿ, ಆಗ ಹತ್ತೊಂಬತ್ತರ ಹರೆಯದ ಮೈಲಾರ ಮಹದೇವ.

ಒಬ್ಬ ಪ್ರೌಢಶಾಲಾ ವಿದ್ಯಾರ್ಥಿಯನ್ನು ಕೇಳಿ,
ಕರ್ನಾಟಕದಿಂದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಹೋರಾಡಿದ ಕನ್ನಡದವರು ಎಷ್ಟೆಂದು, ಅವರಿಗೆ ಟಿಪ್ಪು ಬಿಟ್ಟರೆ ಬೇರೆ ಹೆಸರು ಹೇಳಲು ತಡಕಾಡುತ್ತಾರೆ...
ಇದನ್ನು ವಿಪರ್ಯಾಸ ಎನ್ನದೆ
ಬೇರೇನು ಕರೆಯಬೇಕು?

ಸ್ವಾತಂತ್ರ ಚಳವಳಿಯಲ್ಲಿ ಕರ್ನಾಟಕದಿಂದ ಗಾಂಧಿ ಯುಗದಲ್ಲಿ ಬಲಿದಾನ ಮಾಡಿದ ವೀರಯೋಧರಲ್ಲಿ ಮಹಾದೇವ ಕೂಡ ಒಬ್ಬರು.

ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭೂಗತರಾಗಿ ಮಹಾದೇವ ಮಾಡಿದ ಸಾಹಸ, ಪಟ್ಟ ಕಷ್ಟ- ಕೋಟಲೆ, ತೋರಿದ ಧಾಡಸಿತನ ಅಸಾಧಾರಣ.

ಮಾಡು ಇಲ್ಲವೆ ಮಡಿ ಎಂಬ ಗಾಂಧಿಯ ಕರೆಯಂತೆ ಮಾಡಿ ಮಡಿದ ಧೀರ, ಎದೆಗಾರ.
ಒಂದು ಅನುಕೂಲವಂತ ರೈತ ಕುಟುಂಬದಲ್ಲಿ ಮೋಟೆಬೆನ್ನೂರು ಎಂಬ ಹಳ್ಳಿಯಲ್ಲಿ 1911ರ ಜೂನ್ 8ರಂದು ಮಹಾದೇವಪ್ಪ ಹುಟ್ಟಿದರು. ತಂದೆ ಮಾರ್ತಾಂಡಪ್ಪ, ತಾಯಿ ಬಸಮ್ಮ

ಗಳಗನಾಥರ ಕಾದಂಬರಿ, ಸದ್ಬೋಧ ಚಂದ್ರಿಕೆ ಪತ್ರಿಕೆ ಹಾಗೂ ಇತರ ದೇಶಭಕ್ತಿ ಪರ ಸಾಹಿತ್ಯ
ಓದಿ, ಹಿತ ಬೋಧ ಎಂಬ ಗೆಳೆಯರ ಗುಂಪು ಕಟ್ಟಿ, ಗರಡಿಮನೆಗೆ ಹೋಗಿ, ಕುಸ್ತಿಮಾಡಿ, ಮಲ್ಲಕಂಬದ
ಸಾಧನೆ ಮಾಡಿ ಗಟ್ಟಿ ಮುಟ್ಟಾದ ದೇಹ ಪಡೆದ.

1930ರ ಮಾರ್ಚ್ 12 ರಂದು ಗಾಂಧಿ ಸ್ವಯಂ ಆರಿಸಿಕೊಂಡ 78 ಸೇನಾನಿಗಳೊಂದಿಗೆ ಸಾಬರಮತಿಯಿಂದ ಉಪ್ಪಿನ ಸತ್ಯಾಗ್ರಹಕ್ಕಾಗಿ ದಂಡಿ ಯಾತ್ರೆ ಆರಂಭಿಸಿದರು.

ಇದಕ್ಕಾಗಿ ಗಾಂಧಿಯೊಂದಿಗೆ ಮೈಲಾರ ಮಹಾದೇವರಿಗೂ 6 ತಿಂಗಳ ಶಿಕ್ಷೆಯಾಯಿತು.

ಮೈಲಾರರು ಜೈಲಿನಿಂದ ಬಿಡುಗಡೆಗೊಂಡು ಮರಳಿ ಬಂದಾಗ ಅವರಿಗೆ ಧಾರವಾಡ,
ಹುಟ್ಟೂರಾದ ಮೋಟೆಬೆನ್ನೂರುಗಳಲ್ಲಿ ಸಂಭ್ರಮದಿಂದ ಸ್ವಾಗತಿಸಲಾಯಿತು.

1932-33ರಲ್ಲಿ ಅಸಹಕಾರ ಹಾಗೂ ಕಾಯ್ದೆಭಂಗ ಚಳುವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ ಮಹಾದೇವರ ಪತ್ನಿ ಸಿದ್ದಮ್ಮನಿಗೂ 6 ತಿಂಗಳ ಜೈಲು ಶಿಕ್ಷೆಯಾಗಿ ಅಹಮದಾಬಾದಿಗೆ ಕಳಿಸಲ್ಪಟ್ಟರು.

ಕರ್ನಾಟಕಕ್ಕೆ ಮರಳಿ ಬಂದು ಚಳುವಳಿ ನಡೆಸಿದ್ದರಿಂದ ಮಹಾದೇವರಿಗೂ ಶಿಕ್ಷೆಯಾಗಿ ಹಿಂಡಲಗಾ
ಜೈಲಿಗೆ ತಳ್ಳಲ್ಪಟ್ಟರು.

ಸ್ವಾತಂತ್ರ್ಯಕ್ಕಾಗಿ ಒಂದೇ ಕುಟುಂಬದ ತಾಯಿ ಮಗ ಸೊಸೆ ಎಲ್ಲರೂ ಜೈಲುವಾಸ ಅನುಭವಿಸಿದ್ದು ಆ ದೇಶಭಕ್ತ ಕುಟುಂಬದ ಹಿರಿಮೆಯನ್ನು ಸಾರುತ್ತದೆ.

ನಾಲ್ಕಾರು ಬಾರಿ ಕಾರಾಗೃಹಕ್ಕೆ ಹೋಗಿ ಬಂದರೂ ಮಹಾದೇವರು ಹೊರಗಿದ್ದಾಗಲೆಲ್ಲ ಖಾದಿ ಪ್ರಚಾರ, ದಲಿತೋದ್ದಾರ ಮುಂತಾದ ಕಾರ್ಯಕ್ರಮಗಳನ್ನು ಮುಂದುವರೆಸುತ್ತಿದ್ದರು.
ಇದಕ್ಕಾಗಿ ಇಂದಿನ ಹಾವೇರಿ ಜಿಲ್ಲೆಯ ಕೊರಡೂರಿನಲ್ಲಿ ತಮ್ಮದೇ ಆದ ಒಂದು ಗ್ರಾಮ ಸೇವಾಶ್ರಮವನ್ನು (1937) ಪ್ರಾರಂಭಿಸಿದರು.

ಧಾರವಾಡ ಜಿಲ್ಲೆಯ ದಕ್ಷಿಣ ಭಾಗದಲ್ಲಿ ಕ್ವಿಟ್ ಇಂಡಿಯಾ ಚಳವಳಿಯ ನೇತೃತ್ವ ಮೈಲಾರ ಮಹಾದೇವರದ್ದಾಗಿತ್ತು.

ಅದೇ ಸಂದರ್ಭದಲ್ಲಿ ಬ್ರಿಟಿಷ್ ಸರ್ಕಾರ ರೈತರಿಂದ ಬಲವಂತವಾಗಿ ಕಂದಾಯ ಸಂಗ್ರಹಿಸುವ, ಕಂದಾಯ ಕೊಡದದವರ
ಮೇಲೆ ದೌರ್ಜನ್ಯ ಎಸಗುವ ಕಾರ್ಯದಲ್ಲಿ ನಿರತವಾಗಿತ್ತು.

ಬಡಜನರ ಶೋಷಣೆ ಸಹಿಸದ ಮೈಲಾರರು, ರೈತರಿಂದ ಸರ್ಕಾರ ಕಂದಾಯವನ್ನು ಬಲಾತ್ಕಾರವಾಗಿ ವಸೂಲಿಮಾಡಿ ಸಂಗ್ರಹಿಸಿಟ್ಟಿದ್ದನ್ನು ರೈತರಿಗೆ ಹಿಂದಿರುಗಿಸಲು ಸರ್ಕಾರಕ್ಕೆ ತೊಂದರೆ ಕೊಡುವ ಕಾರ್ಯದಲ್ಲಿ ಸಂಗಡಿಗರೊಂದಿಗೆ ಅನಿವಾರ್ಯವಾಗಿ ತೊಡಗಿದರು.

ಇದಕ್ಕಾಗಿ ಹಲವಾರು ವಿಧ್ವಂಸಕ ಕೃತ್ಯಗಳನ್ನು
ಕೈಗೊಂಡು ಬ್ರಿಟಿಷರ ಆಡಳಿತಯಂತ್ರ ನಿಷ್ಕ್ರಿಯವಾಗುವಂತೆ ಮಾಡಲು ಪ್ರಯತ್ನಿಸಿದರು. 1943ರ ಎಪ್ರಿಲ್ ಒಂದರಂದು ಮೈಲಾರರು ಹೊಸರಿತ್ತಿ ಕಂದಾಯ ವಸೂಲಿ ಕಚೇರಿಯ ಮೇಲೆ ದಾಳಿ ನಡೆಸುವ ಯೋಜನೆ ಹಾಕಿಕೊಂಡರು.

ಅಲ್ಲಿ ನಡೆದ ಬ್ರಿಟಿಷ್ ಅಧಿಕಾರಿಗಳ ಜತೆಗಿನ
ಕಾಳಗದಲ್ಲಿ ಕೇವಲ 32ರ ಹರೆಯದ ಧೀಮಂತ ವೀರ ದೇಶಭಕ್ತ ಮೈಲಾರ ಮಹಾದೇವರು ಬ್ರಿಟಿಷರ ಗುಂಡಿಗೆ
ಎದೆಯೊಡ್ಡಿ ಬಲಿದಾನಗೈದರು.

ಅಂದು ಮಹದೇವರ ಜತೆಗೆ ತಿರುಕಪ್ಪ ಮಡಿವಾಳರ ಹಾಗೂ ವೀರಯ್ಯ ಹಿರೇಮಠ ಎಂಬ ದೇಶಭಕ್ತರು ಕೂಡಾ ಬಲಿದಾನ ಮಾಡಿದರು.

ಹೀಗೆ ಕನ್ನಡ ನಾಡಿನ ವೀರ ದೇಶಭಕ್ತನೊಬ್ಬ ಜೀವನಪೂರ್ತಿ ದೇಶಕ್ಕಾಗಿ ತನ್ನನ್ನು ಅರ್ಪಿಸಿಕೊಂಡು
ಕೇವಲ 32 ನೇ ವಯಸ್ಸಿಗೆ ಮಾತೃಭೂಮಿಯ ರಕ್ಷಣೆಗಾಗಿ ಜೀವ ನೀಡಿದ್ದು ಸ್ಮರಣಾರ್ಹ.
ಇಂತಹ ಮಹನೀಯರ ಚರಿತ್ರೆ ನಮ್ಮ ಪಠ್ಯ ಪುಸ್ತಕದಲ್ಲಿ ಇಲ್ಲದಿರುವುದೇ ಒಂದು ದುರಂತ.

#ಮರೆತಮಾಣಿಕ್ಯ
#ಮೈಲಾರಮಹದೇವಪ್ಪಜಯಂತಿ
#ವಂದೇಮಾತರಂ

• • •

Missing some Tweet in this thread? You can try to force a refresh
 

Keep Current with Sheshapatangi1 ಪ್ರಭಾ ಮಗ ಈ ಅಲೆಮಾರಿ ಅಯ್ಯಂಗಾರಿ🇮🇳

Sheshapatangi1 ಪ್ರಭಾ ಮಗ ಈ ಅಲೆಮಾರಿ ಅಯ್ಯಂಗಾರಿ🇮🇳 Profile picture

Stay in touch and get notified when new unrolls are available from this author!

Read all threads

This Thread may be Removed Anytime!

PDF

Twitter may remove this content at anytime! Save it as PDF for later use!

Try unrolling a thread yourself!

how to unroll video
  1. Follow @ThreadReaderApp to mention us!

  2. From a Twitter thread mention us with a keyword "unroll"
@threadreaderapp unroll

Practice here first or read more on our help page!

More from @sheshapatangi1

Jun 10
We all have heard this in our childhood

GANDHI LEKKA
GANDHI KANUKKU
GANDHI'S ACCOUNT

It meant, the money which will never be returned.

Do you know it's origin?

This is the story of Gandhi cheating V.O.Chidambaram Pillai famously known by the epithet - Kappalottiya Tamizhan Image
VOC launched Swadeshi Steamship Co. in 1906 to compete & break monopoly of British India Navigation Co.

But British got him under sedition charges and he lost all the money fighting court cases and the steamship company was liquidated.

South Indians in South Africa
collected money for VOC and handed it over to Gandhi.

VOC, then under dire poverty, corresponded with Gandhi for more than 5 years but never got the money from Gandhi.

Between the middle of 1915 and early 1916, Gandhi exchanged a series of letters with VOC whose name does
Read 8 tweets
Jun 9
Was there a Satya Harischandra in Politics?

Yes, there was One.
On this day in 1964, he took charge as Prime Minister of Bharath.
In this thread 🧵, we will visit the timeline of the last nationalist PM Congress produced.

In his first broadcast as PM on June 11, 1964,
Adaraneeya Lal Bahadur Shastri said..

“There comes a time in the life of every nation when it stands at the crossroads of history and must choose which way to go. But for us, there need be no difficulty or hesitation, no looking to right or left. Our way is straight and clear— ImageImage
the building up of a secular mixed-economy democracy at home with freedom and prosperity, and the maintenance of world peace and friendship with select nations.”

His tenure was brief, but eventful.
Whatever he achieved & tried to achieve gave effective results and helped in
Read 25 tweets
Jun 9
1 Near to Kateel, there is Polali, abode of Rajarajeshwari.
2 At Bangalore, there is Gali Anjaneya Devasthana, established by Kanva Maharshi
3 There is Basavanagudi Ganesha Devasthana at Bangalore which is centuries old.
4 Bhadrakali Mandir at Mulki between Mangalore & Udupi
5 Shri Krishna at Udupi
6 Ambalapadi Janardhana & Bhadrakali at Udupi
7 Marikamba Devasthana at Kapu, near Udupi
8 Janardhana near Uchchila, near Udupi
9 Kolaramma Devasthana at Kolar
10 Nava-Narasimha devasthana at Shantigrama near Hassan
11 Nagamangala Soumya Keshava,
Do not miss the Nagamandala carved there.
12 Kalasheshavara Devasthana, Kalasa near Horanadu
13 Vaidyanatheshwara Devalaya at Maddur
14 Narasimha & Subramanya at Ghati near Doddaballapura
15 Bhogha Nandeeshawara Devasthana at the foot of Nandi Hills
16 Kurudumalai Ganesha & Avani
Read 5 tweets
Jun 9
For the integration of states, Sardar Vallabhbhai Patel had to travel across the country.

Much to his surprise , a young girl in her early 20s from Bangalore was often one of the pilots for his flights and soon became his close friend.

She would go into history as the first ImageImageImage
Indian lady pilot of independent India.

The life story of #UshaSundaram is divided into 2...
One as an expert Pilot & another as a compassionate mother for animals.

Will briefly explore both in this thread 🧵.

The year was 1946 when couple Usha Sundaram and V Sundaram
arrived in Bangalore and began their married life in the Garden city. They lived in a small bungalow on St Marks Road. A qualified pilot, Sundaram joined as the Director of Civil Aviation for the princely State of Mysore and in a few years, also became the principal of the
Read 18 tweets
Jun 8
ಇಂದು #ಕಯ್ಯಾರಕಿಞ್ಞಣ್ಣರೈ ಅವರ ಜನ್ಮದಿನದ ಸಲುವಾಗಿ ಓಲಾಟಗಾರರು ಅವರಿಗೆ ಶುಭ ಕೋರಿದ ಸಂಧರ್ಭದಲ್ಲಿ ಅವರಿಗಾಗಿ ಕಿಞ್ಞಣ್ಣ ರೈಗಳ #ಐಕ್ಯಗಾನ

ಐಕ್ಯವೊಂದೇ ಮಂತ್ರ,
ಐಕ್ಯದಿಂದೆ ಸ್ವತಂತ್ರ,
ಐಕ್ಯಗಾನದಿ ರಾಷ್ಟ್ರ ತೇಲುತಿರಲಿ!

‘ಭಾರತದಿ ಮಮ ಜನ್ಮ
ಸ್ವಾತಂತ್ರ್ಯವೇ ಧರ್ಮ’
ಒಕ್ಕೊರಲಿನುದ್ಘೋಷ ಕೇಳುತಿರಲಿ!

1
ಹೊಲೆಯರೇ ಬ್ರಾಹ್ಮಣರೆ,
ಮುಸ್ಲಿಮರೆ ಕ್ರಿಶ್ಚನರೆ,
ಎಲ್ಲರೂ ನಮ್ಮವರೆ ಎದೆಯರಳಲಿ!

‘ರಾಷ್ಟ್ರವೊಂದೇ ಜೀವ’
ಎಂದು ಸಾರಿರಿ, ಯಾವ
ರಕ್ಕಸರು ಇದಿರಿಲ್ಲ ನಾವ್ ಕಡುಗಲಿ!

ಅರೆಹೊಟ್ಟೆಯುಂಡ ನಾವ್,
ಬರಿ ಚಿಂದಿ ತೊಟ್ಟ ನಾವ್,
ಸುಲಿಗೆಗೊಳಗಾದ ನಾವ್ ಎಲ್ಲರೊಂದೇ!

ಆಳು ಹೋಳಾಗಿರಲು,
ಬಾಳು ಗೋಳಾಗಿರಲು,
ಮೇಳು ಕೀಳೇನುಂಟು? ಎಲ್ಲರೊಂದೇ!

2
ಭಾರತಿಯ ಬಸುರಿಂದ
ಜಾರಿ ಬಿದ್ದೆವೆ? ಬಂದ
ಭೂರಿ ಬವಣೆಗಳನ್ನು ನೆನೆಯಿರೊಮ್ಮೆ!

ನೆನೆನೆನೆದು ದಿನದಿನವು,
ದುಡಿದುಡಿದು ಜನಜನವು,
ಭಾರತದ ಸ್ವಾತಂತ್ರ್ಯ ಮೆರೆಸಿ, ಹೆಮ್ಮೆ!

ಅಜ್ಞಾನ ಪಂಕದಲಿ
ಅದ್ದಿರುವ ಜನರಲ್ಲಿ
ಮತಭೇದ ಬರಲುಂಟೆ? ಎಲ್ಲರೊಂದೇ!

ಪಕ್ಷವೇ? ಪಂಥವೇ?
ಜಾತಿಯೇ? ನೀತಿಯೇ?
ಮೌಢ್ಯ ಮುರಿಯುವ ಬನ್ನಿ; ಎಲ್ಲರೊಂದೇ!

3
Read 9 tweets
Jun 8
ಇವರು ಯಾರು ಎಂದರೆ, ವರ್ಣಿಸಲು ನಿಮಿಷಗಳೇ ಬೇಕಾಗುತ್ತೆ.

ಹಿರಿಯ ಸಾಹಿತಿ, ಬಹುಭಾಷಾ ವಿದ್ವಾಂಸ, ಸ್ವಾತಂತ್ರ್ಯ ಹೋರಾಟಗಾರ, ಕರ್ನಾಟಕ ಏಕೀಕರಣ ಚಳುವಳಿಯ ಮುಂಚೂಣಿಯ ನಾಯಕ, ಕಾಸರಗೋಡು ವಿಲೀನೀಕರಣ ಕ್ರಿಯಾಸಮಿತಿಯ ಪ್ರಧಾನ ಸಂಚಾಲಕ..

ವೃತ್ತಿಯಲ್ಲಿ ಅಧ್ಯಾಪಕ, ಪ್ರವೃತ್ತಿಯಲ್ಲಿ ಸಂಪಾದಕ ದೇಶಕ್ಕಾಗಿ, ಕನ್ನಡಕ್ಕಾಗಿ, ಕರ್ನಾಟಕಕ್ಕಾಗಿ ImageImageImage
ನಿರಂತರವಾಗಿ ದುಡಿದ
ಶತಾಯುಷಿ ನಾಡೋಜ ಡಾ.ಕಯ್ಯಾರ ಕಿಞ್ಞಣ್ಣ ರೈರವರು.

ಅವರು ಐಕ್ಯಗಾನದ ಕವಿ ಎಂದೇ ಪ್ರಖ್ಯಾತರು. ‘ಐಕ್ಯವೊಂದೆ ಮಂತ್ರ/ ಐಕ್ಯದಿಂದೆ ಸ್ವತಂತ್ರ/ ಐಕ್ಯಗಾನದಿ ರಾಷ್ಟ್ರ ತೇಲುತಿರಲಿ..’ ಎಂದು ಹಾಡಿದ ಕವಿ ಕಯ್ಯಾರರು ಅದೇ ಹೊತ್ತಿಗೆ, ‘ಬೆಂಕಿ ಬಿದ್ದಿದೆ ಮನೆಗೆ ಓ ಬೇಗ ಬನ್ನಿ’ ಎಂದು ಗಡಿನಾಡಿನ ಕನ್ನಡಿಗರನ್ನು ಎಚ್ಚರಿಸಿದ್ದರು.
1915ರ ಜೂ. 8ರಂದು ಪೆರಡಾಲದಲ್ಲಿ ಜನಿಸಿದ ಕಯ್ಯಾರರು ಸಂಸ್ಕೃತ ಮತ್ತು ಕನ್ನಡ ಭಾಷೆಗಳಲ್ಲಿ ವಿದ್ವಾನ್ ಪದವಿ ಪಡೆದ ಬಳಿಕ ಬಿ.ಎ.ಪದವಿಯನ್ನು ಪಡೆದು ಅಧ್ಯಾಪಕ ತರಬೇತಿಯನ್ನು ಪೂರೈಸಿದರು.

ಆನಂತರ ಎಂ.ಎ. ಸ್ನಾತಕೋತ್ತರ ಪದವೀಧರರೂ ಆದ ಕಯ್ಯಾರರು ಪೆರಡಾಲದ ನವಜೀವನ ಹೈಸ್ಕೂಲ್‌ನಲ್ಲಿ ಕನ್ನಡ ಪಂಡಿತರಾಗಿ ಬಹುಕಾಲ ಸೇವೆ ಸಲ್ಲಿಸಿದರು.
Read 10 tweets

Did Thread Reader help you today?

Support us! We are indie developers!


This site is made by just two indie developers on a laptop doing marketing, support and development! Read more about the story.

Become a Premium Member ($3/month or $30/year) and get exclusive features!

Become Premium

Don't want to be a Premium member but still want to support us?

Make a small donation by buying us coffee ($5) or help with server cost ($10)

Donate via Paypal

Or Donate anonymously using crypto!

Ethereum

0xfe58350B80634f60Fa6Dc149a72b4DFbc17D341E copy

Bitcoin

3ATGMxNzCUFzxpMCHL5sWSt4DVtS8UqXpi copy

Thank you for your support!

Follow Us on Twitter!

:(