ಕಾಲಕಾಲಕ್ಕೆ ಆಯಾ ಅಡುಗೆಗಳನ್ನು ತಯಾರಿಸುವ ವಿಧಾನ, ಅದಕ್ಕೆ ಬಳಸುವ ಪದಾರ್ಥಗಳ ಪಟ್ಟಿ ಬದಲಾಗಿದ್ದಿರಬಹುದು(ಆಗದೆಯೂ ಇರಬಹುದು). ಆದರೆ, ಅವುಗಳ ಪರಿಚಯ, ಅವುಗಳನ್ನು ಕುರಿತ ಜ್ಞಾನ ತಲೆಮಾರಿನಿಂದ ತಲೆಮಾರಿಗೆ ಸಾಗಿಬಂದಿದೆ
#authentic_ಅಡುಗೆ
#Authentic_ಅಡುಗೆ
#Authentic_ಅಡುಗೆ
ಅದಷ್ಟೆ ಅಲ್ಲದೆ, ನಮ್ಮ ನಾಡಿನ ಬೇರೆಬೇರೆ ಪ್ರಾಂತಗಳಲ್ಲಿ, ನಿಮ್ಮ ಊರಿನ ಕಡೆ ಹೆಚ್ಚು ಬಳಕೆಯಲ್ಲಿರುವ ವಿಶೇಷ ಅಡುಗೆ/ ತಿಂಡಿಗಳ ಬಗ್ಗೆಯೂ ಚರ್ಚಿಸೋಣವಾಗಲಿ.
#Authentic_ಅಡುಗೆ
*ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ, ಡಾ||ಎಂ.ಚಿದಾನಂದ ಮೂರ್ತಿ
#Authentic_ಅಡುಗೆ

ಕೂಳ್ ಎಂಬುದು 'ಅನ್ನ'ವನ್ನು ನಿರ್ದೇಶಿಸುವ, ದೇಸೀ ಮೂಲದ ಪದ.
ಪಂಪನ ಕಾವ್ಯಗಳಲ್ಲಿಯೇ ಈ ಪದದ ಉಲ್ಲೇಖವಿದೆ.
ಕಾಲಾಂತರದಲ್ಲಿ 'ಕೂಳು' ಎಂಬುದು ತನ್ನ ಮೂಲ ಅರ್ಥವನ್ನು ಕಳೆದುಕೊಂಡಂತೆ ತೋರುತ್ತದೆ.
ಈಗ ಕೂಳು ಎಂಬ ಪದವನ್ನು ಒಂದರ್ಥದಲ್ಲಿ ಕಡಿಮೆ ಮೌಲ್ಯದ ಊಟ ಅಥವಾ ಹಳಸಿದ ಅನ್ನ ಎಂಬಂತೆ ಬಳಸುತ್ತಾರೆ.
ಮೂಲತಃ ಇದು ತಣ್ ಕೂಳು --> ತಣ್ಗೂಳು ಎಂದಿದ್ದುದು ಮುಂದೆ 'ತಂಗುಳು' ಎಂಬ ರೂಪವನ್ನು ಪಡೆದುಕೊಂಡಿತು. ಕಾಲಾಂತರದಲ್ಲಿ ಅದು ಮತ್ತೂ ಬದಲಾಗಿ, ಈಗ ಆ ಪದವು 'ತಂಗಳು' ಎಂದಾಗಿದೆ.
JFYI.
ಅಂತೆಯೇ ತುಯ್ಯಲ್ (ಪಾಯಸ) ಕೂಡ ಇದೆ.
FYI: ಬಾಡು ಎಂದರೆ ಮಾಂಸ ಎಂಬ ಅರ್ಥವೂ ಇದೆ, ತರಕಾರಿ ಎಂಬ ಅರ್ಥವೂ ಇದೆ. ಇಲ್ಲಿ 'ಬಾಡು' ಎಂದರೆ ತರಕಾರಿ ಎಂದೇ ತಿಳಿಯಬೇಕು.
#Authentic_ಅಡುಗೆ

ಈ ಇಡ್ಡಲಿಗೆಯೇ ಮುಂದೆ 'ಇಡ್ಡಲಿ' ಎಂದಾಗಿ, ಈಗ ನಮ್ಮೆಲ್ಲರಿಗೂ ಪ್ರಿಯವಾದ 'ಇಡ್ಲಿ' ಎಂಬ ಹೆಸರನ್ನು ಪಡೆದುಕೊಂಡಿದೆ.
ಕನ್ನಡ ಕೃತಿಗಳ ದಾಖಲೆಯನ್ನು ಆಧರಿಸಿ ಹೇಳುವುದಾದರೆ, ಮೊದಲ ಬಾರಿಗೆ 'ಇಡ್ಡಲಿಗೆ'ಯ ಹೆಸರು ಉಲ್ಲೇಖಗೊಂಡಿರುವುದು ಈ ಕೃತಿಯಲ್ಲಿಯೇ
ಹಪ್ಪಳ, ಪಲ್ಯ ಪಳಿದ್ಯಗಳಂತಹ ವ್ಯಂಜನಗಳ ಹೆಸರನ್ನೂ ಕಾಣಬಹುದು.


ಅಂತೆಯೇ, ಅನ್ನ ತಯಾರಿಸಲು ಬೇರೆಬೇರೆ ತೆರದ/ ಗಾತ್ರದ ಅಕ್ಕಿಗಳನ್ನು ಬಳಸಲಾಗುತ್ತಿತ್ತೆಂದು ತಿಳಿಯಬಹುದು
ಈಗ ಸೋನಾಮಸೂರಿ, ಬಾಸ್ಮತಿ, ದೇವಮಲ್ಲಿಗೆ ಅಕ್ಕಿಗಳನ್ನು ಬಳಸುವ ಹಾಗೆ…
ಜೊತೆಗೆ ಬಗೆಬಗೆಯ ಪಾಯಸ, ಸೇವಗೆ, ಕಜ್ಜಾಯ, ಕರಜಿಕಾಯಿ, ಉಂಡೆಗಳ ಉಲ್ಲೇಖವಿದೆ.
ಈತ ಅಡುಗೆಯ ವಿಚಾರವಾಗಿ 'ಸೂಪಶಾಸ್ತ್ರ'ವೆಂಬ ಪ್ರತ್ಯೇಕ ಶಾಸ್ತ್ರಗ್ರಂಥವನ್ನೇ ರಚಿಸಿದ್ದಾನೆ. ಹಾಗಾಗಿ ಈ ಕಾವ್ಯದಲ್ಲಿ ಅಡುಗೆಗಳ ದೊಡ್ಡ ಪಟ್ಟಿಯೇ ಇದೆ


ಅದರಲ್ಲಿ ಕರಜಿಕಾಯಿ, ಕಜ್ಜಾಯ (ಅತಿರಸ), ಉದ್ದಿನ ವಡೆ, ಇಡ್ಲಿ, ಎಳ್ಳುಂಡೆ, ಒಬ್ಬಟ್ಟು, ಗಾರಿಗೆ, ಚಕ್ಕಲಿ, ಶಾವಿಗೆ, ಫೇಣಿ… ಮುಂತಾದ ಖಾದ್ಯಗಳ ಹೆಸರು ಕಾಣಸಿಗುತ್ತದೆ
ಜಿಲ್ಲೇಬಿಯ ಉಲ್ಲೇಖವೂ ಇರುವುದು ಗಮನಾರ್ಹ!

ಇವಲ್ಲದೆ, ಇತರೆ ಶಾಸ್ತ್ರಗ್ರಂಥ ಲಕ್ಷಣಗ್ರಂಥಗಳಲ್ಲಿಯೂ -ಪ್ರಾಸಂಗಿಕವಾಗಿ- ಒಂದೆರಡು ಅಡುಗೆಗಳ ಉಲ್ಲೇಖಗಳು ದೊರೆಯುತ್ತವೆ.
ಗೞವೆಯ ಕೂೞ್ ತಿವುಡುಗಳೆದ ತೊವರಿಯ ಕಾ
ಯ್ದಿೞಿಪಿದ ತುಪ್ಪಂ ಕೋಡುವ
ಕೞಲಲ್ಲದೆ ದಿವ್ಯಭೋಜನಂ ಪೆಱತುಂಟೇ?"
೨ನೇ ನಾಗವರ್ಮನ 'ಕಾವ್ಯಾವಲೋಕನ'
ಯಾವುದೊ ಸೂತ್ರವೊಂದಕ್ಕೆ ಲಕ್ಷ್ಯವನ್ನು ಕೊಡಲೆಂದು ಈ ಪದ್ಯವನ್ನು ಉಲ್ಲೇಖಿಸುತ್ತಾನೆ, ನಾಗವರ್ಮ.
'ರುಚಿಯಿರದ/ ಹಳಸಿಹೋದ ಅಡುಗೆಯ ಬಗ್ಗೆ ಮಾತಾಡಿ ಪ್ರಯೋಜನವೇನು ಬಿಡಿ.
ಹಳೆಯ ಅಕ್ಕಿಯಿಂದ ತಯಾರಿಸಿದ ಅನ್ನ, ಸಿಪ್ಪೆಯಿರದ ತೊಗರಿಯಿಂದ (ತೊಗರಿಬೇಳೆ) ಮಾಡಿದ ತೊವ್ವೆ, ಆಗಷ್ಟೆ ಕಾಯಿಸಿ ಇಳಿಸಿದ ತುಪ್ಪ, ತಂಪಾದ ಮಜ್ಜಿಗೆ - ದಿವ್ಯವಾದ ಭೋಜನವೆಂದರೆ ಇವುಗಳಲ್ಲದೆ ಮತ್ತೆ ಬೇರುಂಟೆ?
ಪುೞ್ಗಿ (ಹುಗ್ಗಿ/ ಪೊಂಗಲ್) - ಉದ್ದಿನಬೇಳೆ, ತೊಗರಿ, ಹೆಸರುಬೇಳೆ ಮುಂತಾದವುಗಳ ಜೊತೆ ಬೇಯಿಸಿದ ಅನ್ನ
ಸಾಱು - ಬೇಳೆ ಸಾರು/ ರಸ
ಬಾೞುಕ - ಬಾಳಕ; ಸೀಳಿ (ಉಪ್ಪು ಖಾರ ಹಚ್ಚಿ) ಒಣಗಿಸಿದ ತರಕಾರಿ.
ಉದಾ: ಬಾಳಕದ ಮೆಣಸಿನಕಾಯಿ



೧) ಲೋಕೋಪಕಾರಂ, ಚಾವುಂಡರಾಯ (ಕಾಲ ೧೨ನೇ ಶತಮಾನ)
೨) ಸೂಪಶಾಸ್ತ್ರ, ೩ನೇ ಮಂಗರಸ (ಕಾಲ ೧೬ನೇ ಶತಮಾನ)
ಸೂಪಶಾಸ್ತ್ರವಾದರೆ ಪ್ರತ್ಯೇಕವಾಗಿ ಅಡುಗೆಯ ವಿಚಾರವಾಗಿಯೇ ಇರುವ ಕೃತಿ. ಇದರಲ್ಲಿ ಬಗೆಬಗೆಯ ರಸಾಯನ, ಪಾನಕ, ಮೇಲೋಗರ, ರೊಟ್ಟಿಗಳನ್ನು ತಯಾರಿಸುವ ಬಗ್ಗೆ ವಿವರವಿದೆ.
ಜೊತೆಗೆ, ಸಕ್ಕರೆ, ಸುವಾಸನಾಯುಕ್ತ ಹಾಲು, ಗಟ್ಟಿಮೊಸರು, ತುಪ್ಪ, ಶ್ರೀಖಂಡ, ಮಜ್ಜಿಗೆ ಮುಂತಾದ ಪದಾರ್ಥಗಳನ್ನು ತಯಾರಿಸುವ ಬಗೆಯನ್ನು ತಿಳಿಸಿದ್ದಾನೆ
ಕ್ರಮಮಱಿದಕ್ಕಿಯನಿಂಬಾ
ಗಿ ಮೂರುಸೂೞ್ ಕರ್ಚಿ ಪೊಯ್ದೊಡೆಸಱೊಳು
ತ್ತಮಮಕ್ಕುಂ ಪದದೊಪ್ಪಲ್
ಸಮರಸನಾಗಿರ್ಕು ಕೞಿಯನೆಱೆಯಲ್ಕನ್ನಂ
ಅಕ್ಕಿಯನ್ನು ಮೂರುಸಾರಿ ತೊಳೆದು, ಕುದಿಯುವ ಎಸರಿಗೆ ಹಾಕಿ ಬೇಯಿಸಿ, ಗಂಜಿಯನ್ನು ಬಸಿದು ಅನ್ನವನ್ನು ತಯಾರಿಸಿದರೆ ಉತ್ತಮವಾಗಿರುತ್ತದೆ.
ಇದು ಇಂದಿಗೂ ರೂಢಿಯಲ್ಲಿರುವ ವಿಧಾನ.
ಸಿದ ಪಾಲೊಳಗಿಕ್ಕಿ ತೆಗೆದು ಕೊಂಡವನರೆದಾ
ಜ್ಯದೊಳಡುವುದು ಘೃತಪೂರಿತ
ಮದಲ್ತೆ ಸಂಸಾರಸಾರಮಮೃತಾಹಾರಂ
#ಲೋಕೋಪಕಾರಂ
#ಚಾವುಂಡರಾಯ
ಜವೆಯನ್ನು ತೊಳೆದು, ಅದನ್ನು ಕಾಯ್ದ ಹಾಲಿನಲ್ಲಿ ನೆನೆಸಿ, ಆನಂತರ ಅದನ್ನು ನುಣ್ಣಗೆ ರುಬ್ಬಿಕೊಂಡು… ಅದನ್ನು ತುಪ್ಪದಲ್ಲಿ ಹಾಕಿ ಕರಿದರೆ ಘೃತಪೂರಿತವು ತಯಾರಾಗುತ್ತದೆ.
ರದ ಪಣ್ಣಂ ನಾರಿಕೇಳಮಂ ಶರ್ಕರೆಯಂ
ಪುದಿದಡುಗೆ ಕಣಿಕದೊಳ್ ತು
ಪ್ಪದೊಳದು ರಸಭರಿತಮಪ್ಪ ಪೂರಿಗೆಯಕ್ಕುಂ
#ಲೋಕೋಪಕಾರಂ
ಖರ್ಜೂರದ ಹಣ್ಣು, ತೆಂಗಿನ ತುರಿ, ಸಕ್ಕರೆ ಇವನ್ನು ಚೆನ್ನಾಗಿ ಬೆರೆಸಿ, ಮಿದಿದು, ಅದನ್ನು ಕಣಕದ ನಡುವಿಟ್ಟು ತುಪ್ಪದಲ್ಲಿ ಬೇಯಿಸಿದರೆ ರಸಭರಿತ ಪೂರಿಗೆ ತಯಾರಾಗುವುದು.
ದಿರೆ ಮೊಸರಧಿ ನೀರೊಳಿಂಗು ಜೀರಗೆ ಕೊತ್ತುಂ
ಬರಿ ಮೆಣಸಲ್ಲಮಿವಿನಿತಂ
ಬೆರಸಿಡ್ಡಲಿಗೆಯನಡಲ್ಕೆ ಕಂಪಂ ಕುಡುಗುಂ
#ಲೋಕೋಪಕಾರಂ
ಉದ್ದಿನಬೇಳೆಯನ್ನು ತೊಳೆದು ರುಬ್ಬಿಕೊಂಡು, ಮೊಸರಿನ ತಿಳಿನೀರಿನಲ್ಲಿ ಕಲಸಿ -ಅದಕ್ಕೆ ಇಂಗು, ಜೀರಿಗೆ, ಕೊತ್ತಂಬರಿ, ಮೆಣಸು, ಶುಂಠಿ ಹಾಕಿ ಇಡ್ಡಲಿಯನ್ನು ತಯಾರಿಸಿದರೆ ಒಳ್ಳೆಯ ಕಂಪಿರುತ್ತದೆ

#ಲೋಕೋಪಕಾರಂ
ಹುರಿದ ಬಟ್ಟಗಡಲೆಯ ಹಿಟ್ಟಿನ್ನಾಗಲಿ ಅಥವಾ ರುಬ್ಬಿದ ಉದ್ದಿನಹಿಟ್ಟಿನ್ನಾಗಲಿ ಕಲೆಸಿಕೊಂಡು, ಮೀನಿನ ಆಕೃತಿಯಂತೆ ಮಾಡಿ - ಅದನ್ನು ಸಾಸಿವೆಯೆಣ್ಣೆಯಲ್ಲಿ ಕರಿದರೆ ಅದು ಮತ್ಸ್ಯಗುಣವನ್ನೆ ಕೊಡುವುದು
ಈ 'ಎರವುರಿ'ಯ ಸೊಪ್ಪೆಂದರೆ ಯಾವುದೊ ನನಗೆ ತಿಳಿಯದು!

ರಸದೊಳ್ ಮೇಣ್ ಮಧುವಿನೊಳಗೆ ತನಿವಣ್ಣಂ ನೋಯಿಸದೆ ತಿರಿದಿರಿಸೆ ಚೂತಾದಿ ಸಮಸ್ತ ಫಲಂಗಳೆನಿತುಕಾಲಮುಮಿರ್ಕುಂ
#ಲೋಕೋಪಕಾರಂ
ಮಾವು ಮುಂತಾದ ಹಣ್ಣು/ಕಾಯಿಗಳನ್ನು ಹಲವು ದಿನಗಳವರೆಗೆ ಕೆಡದ ಹಾಗೆ ಇಡಲು:
ಕಸುಗಾಯಿಗಳನ್ನು ತುಪ್ಪದಲ್ಲಿಯೂ, ಹಣ್ಣುಗಳನ್ನು ಬೆಲ್ಲದ ರಸದಲ್ಲಿ ಅಥವಾ ಜೇನಿನಲ್ಲಿ ನೆನೆಹಾಕಿ ಇಡಬೇಕು.

