We are a cult with a diverse coalition of expert bloggers and filmmakers who have come together under a united passion: a love for our beloved city - Bengalooru
May 9, 2018 • 32 tweets • 9 min read
ನಾವು ಇಂದು ದಿನನಿತ್ಯ ಸೇವಿಸುವ ಪ್ರತಿಯೊಂದು ಅಡುಗೆ/ಆಹಾರಪದಾರ್ಥಕ್ಕೂ ತನ್ನದೇ ಆದ ಚರಿತ್ರೆಯಿದೆ.
ಕಾಲಕಾಲಕ್ಕೆ ಆಯಾ ಅಡುಗೆಗಳನ್ನು ತಯಾರಿಸುವ ವಿಧಾನ, ಅದಕ್ಕೆ ಬಳಸುವ ಪದಾರ್ಥಗಳ ಪಟ್ಟಿ ಬದಲಾಗಿದ್ದಿರಬಹುದು(ಆಗದೆಯೂ ಇರಬಹುದು). ಆದರೆ, ಅವುಗಳ ಪರಿಚಯ, ಅವುಗಳನ್ನು ಕುರಿತ ಜ್ಞಾನ ತಲೆಮಾರಿನಿಂದ ತಲೆಮಾರಿಗೆ ಸಾಗಿಬಂದಿದೆ
#authentic_ಅಡುಗೆ
ಇಂದು ನಮಗೆ ಪ್ರಿಯವೆನಿಸುವ ತಿನಿಸು ಅಂದೆಂದೊ, ಸಾವಿರ ವರ್ಷಗಳ ಹಿಂದೆಯೂ ಬಳಕೆಯಲ್ಲಿತ್ತು, ಅದು ಅಂದಿಗೂ ಅಷ್ಟೆ ಜನಪ್ರಿಯವಾಗಿತ್ತು ಎಂದು ತಿಳಿದರೆ ನಮಗೆ ಅಚ್ಚರಿಯೂ ಆನಂದವೂ ಆಗದಿರದು.